ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನೆನಪಿನ ಮಾಲೆ....

"ಸವಿ ಸವಿ ನೆನಪು ಸಾವಿರ ನೆನಪು

ಸಾವಿರ ಕಾಲಕು ಸವೆಯದ ನೆನಪು

ಎದೆಯಾಳದಲಿ ಬಚ್ಚಿಕೊಂಡಿರುವ ಅಚ್ಚಳಿಯದ ನೊರೊಂದು ನೆನಪು

ಏನೋ ಒಂದು ತೊರೆದ ಹಾಗೆ, ಯಾವುದೊ ಒಂದು ಪಡೆದ ಹಾಗೆ,

ಅಮ್ಮನ ಮಡಿಲ ಅಪ್ಪಿದ ಹಾಗೆ, ಕಣ್ಣಂಚಲ್ಲಿ ಕಣ್ಣೀರ ನೆನಪು...."

ಚಿತ್ರ: ಮೈ ಅಟೋಗ್ರಾಫ್, ಭರಧ್ವಜ್ ರವರು ಸಂಗೀತ ಕೊಟ್ಟು, ಕಲ್ಯಾಣ್ ಬರೆದ ಈ ಇಂಪಾದ ಸಾಲುಗಳು.... ನೆನಪಿನ ಅ ವರ್ಣನೆಯನ್ನು ಮಧುರವಾಗಿ ನಮ್ಮ ಮನಸ್ಸಿನ ಆಳದಿಂದ ಕಣ್ಗಳ ಮುಂದಿಳಿಸುವ ಪರಿ... ಅಹಾ! ಎಂತಾ ಮಧುರ ಅನುಭವ ಅಲ್ಲವೇ? ಯಾರಿದ್ದಾರೆ ಹೇಳಿ ನೆನಪಿನ ದೋಣಿಯಲ್ಲಿ ತಮ್ಮ ಜೀವನವನ್ನ ತೇಲದೆ ಸಾಗಿಸದವರು? ನೆನಪು ನಾವು ಆಡುತಿರುವ ಉಸಿರಿನಷ್ಟೇ ಸತ್ಯ... ಅದು ಸೂರ್ಯನ ಬೆಳಕಿನಷ್ಟೆ ನಿಜವಲ್ಲವೇ?

.......................................................

"ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಅನಂದದಿಂದ....."

ನೆನಪು ಅ ದಿನ, ಅ ಗಳಿಗೆ, ಅ ಕ್ಷಣದ್ದು.... ನಾವು ಹೊರಟ ಅ ಜೀವನದ ಪಯನದೆಡೆಗೆ..... ನೆನಪು ನಾವ್ ಕಂಡ ಅ ಹುಡುಗ/ ಅ ಹುಡುಗಿಯದು... ಅವರ ಕಣ್ಣೋಟಕ್ಕೆ ನಾವ್ ಸೆರೆಯಾದದ್ದು...! ಕಾಲೇಜ್ ನಲ್ಲಿ ಓದುವಾಗ ಮೊದಲ ಪ್ರೀತಿಯ ನೆನಪು... ನಮ್ಮ ಸುಖ-ದುಖ:ವ ಹಂಚಿಕೊಂಡ ಅ ಮಿತ್ರರ ನೆನಪು... ಕೊನೆಗೆ ಮರೆಯಾಗಿ ಮತ್ತೆ ಸಿಕ್ಕಿದವರು, ಮತ್ತೆ-ಮತ್ತೆ ಗಲಾಟೆ ಮಾಡಿಕೊಂಡು, ಈ ಜನುಮದಲ್ಲಿ ಮುಖವನ್ನು ಕಾಣಲು ಇಷ್ಟಪಡದೆ ಮುಂದೆಂದೋ ಸಿಕ್ಕಾಗ ಮಾತಾಡಿಸಿ, ಎಲ್ಲಾ ಮರೆತು ಜೀವದ ಗೆಳೆಯರಾದ ಮಧುರ ನೆನಪು..? ಹು: ಹೇಳಿ, ಓಂದೇ, ಎರಡೇ.....!

ದೂರದ ಊರಿನಲ್ಲಿ ಓದುತ್ತಿದ್ದಾಗ, ಇಲ್ಲಾ ಕೆಲಸ ಮಾಡುತ್ತಿದ್ದಾಗ ಮನೆಗೆ ಅದಷ್ಟು ಬೇಗ ತಲಪುವ ಹಂಬಲ... ಕಣ್ಣಾಲಿಗಳಲ್ಲಿ ನೀರು ತುಂಬಿ, ಹೊರಬರಿಸಲು ಇಷ್ಟಪಡದೆ/ಆಗದೆ ಚಡಪಡಿಸಿದ ಆ ನೆನಪು, ಮಿತ್ರರ ಹಿಂದೆ ಸುತ್ತಲೂ ಹೋದ, ಅವರ ಜೊತೆ ಕಾಲ ಕಳೆದ ಅ ಒಂದೊಂದು ಮಧುರ ಕ್ಷಣ... ಅ ಮಧುರ ದಿನದ ಕ್ಷಣ, ನಾವು ಒಬ್ಬ ಅಪರಿಚಿತ ಜೀವದೊಂದಿಗೆ ಬಂಧಿಯಾದದ್ದು, ಮತ್ತು ಅವರೇ ನಮ್ಮ ಜೀವನದ ಎಂದೂ ಬಿಡಿಸದ ಬಾಳಿನ ಬಂಧನವಾದದ್ದು....ಎಲ್ಲಾ ಮಧುರ ನೆನೆಪೇ ಅಲ್ಲವೆ..?

ತಂದೆ-ತಾಯಿಯ ಮಾತು ಕೇಳದೆ ಹಟಮಾಡಿ, ದೂರದೂರಿಗೆ ಹೋಗಿ..., ನಂತರ ಅವರಿಬ್ಬರು ನೆನಪಾಗಿ ಕಾಡಿದಾಗ ಕುಟುಂಬದೊಡನೆ ಇದ್ದ ಅ ಕ್ಷಣ... ನಮ್ಮ ಮನದ ಮಾತೆಲ್ಲವ ನಾವು ನಂಬಿದ ಮಿತ್ರನಿಗೆ ಹೇಳಿದ್ದು, ಅವನು ಇನ್ನ್ಯಾರಿಗೋ ಹೇಳಿ ನಾವು ಪೇಚಾಡುವಂತೆ ಮಾಡಿದ್ದು... ಕಾಲೇಜಿನ ಆ ಹೊಸ್ಟೆಲ್ ರೂಮ್, ಅಲ್ಲಿ ಮಾಡಿದ ಚಿತ್ರ-ವಿಚಿತ್ರ ಕಿಟಲೆ... ಜೂನಿಯರ್ಸ್ ನ ಹುಡುಕಿದ ಪರಿ, ಅವರಿಗೆ ಬಿಡದೆ ಕೊಟ್ಟ "ಸ್ಪೆಷಲ್. ಟ್ರೀಟ್ಮೆಂಟ್"...! ಪ್ರೀತಿಗಾಗಿ ನಾವ್ ಹುಡುಕಿದ ಆ ಹುಡುಗ/ಹುಡುಗಿ..., ಅವರಿಗೆ ತನ್ನ ಮನದ ಭಾವವ ಹೇಳಿ ಅವರು ನೀಡಿದ ಮಾತು/ಪ್ರತಿಕ್ರಿಯೆ ಜೀವನದ ದಿಕ್ಕನ್ನು ಬದಲಾಯಿಸಿದ್ದು... ಯಾರು ನಮಗೆ ತುಂಬ ಬೇಕಾಗಿದ್ದರೋ ಅವರೇ ಮುಂದೊಂದು ದಿನ ಎಲ್ಲದಕ್ಕೂ ಕಡೆಯವರಾಗಿ ಹೋದದ್ದು.... ನೆನಪಿನ ವಿಸ್ಮಯವೇ ಅದು....!

"ನಿನದೇ ನೆನಪು ದಿನವು ಮನದಲ್ಲಿ...,ನೋಡುವ ಅಸೆಯು ತುಂಬಿದೆ ನನ್ನಲಿ...,ನನ್ನಲಿ...."

ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಅದರೂ ಕೆಲವೊಂದು ಸಲ ಅ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ ಎಂದದರೂ ಉಹಿಸಿದ್ದೀರಾ...! ಉಹು:, ಬೇಡ ಬಿಡಿ... ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಅಪ್ತರು ನಮ್ಮ ಪ್ರಥ:ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮ್ರದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...!

"ಜೀವನ ಉಲ್ಲಾಸ ಪಯಣ, ಜೀವನ ಸಂಗೀತ ಕವನ..."

- "ಮಿಥಿಲೆಯ ಸೀತೆಯರು" ಚಿತ್ರದ ಹಾಡಿನ ಸಾಲಿನಂತೆ ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂತಾ ಕಷ್ಟಗಳು ಬಂದರೂ ಸಹ... ಎಕೆಂದರೆ ಜೀವನ ಮರುಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ...! ನೀವೇ ಹೇಳಿ...

ಈ ಜೀವನವೇ ಅಷ್ಟೇ... ನಿಮ್ಮನ್ನು ಮನಸಾರೆ ಪ್ರೀತಿಸಿದವರ ಮನ ನೊಯಿಸದೆ ಇನ್ನು ಹೆಚ್ಚು ಪ್ರೀತಿಸಿ... ಕಾಲ ಯಾರಿಗೂ ಕಾಯುವುದಿಲ್ಲ.. ನಿಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಿಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಿಮ್ಮ ಧ್ಯೇಯ ಅದಷ್ಟು ನಗುವ ಹಂಚುವುದು... ನಂಬಿ ನನ್ನನ್ನ....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ನೀವು ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಅದರ್ಶವಾಗಿ ಮುಂದುವರಿಸುವುದು...:)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
vivekkulkarni's picture

ವಿನಯ ನೀವು ಹೇಳುತ್ತಿರುವುದು ನಿಜ. ಇದನ್ನು ಓದಿದ ಮೇಲೆ ನನಗು ನನ್ನ ಆ ದಿನಗಳು ನೆನಪಾಗುತ್ತಿವೆ. ಸೊಗಸಾಗಿದೆ.
ಧನ್ಯವಾದಗಳು.

vinay_2009's picture

ವಂದನೆಗಳು ವಿವೇಕ್.... :)