24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬಣ್ಣ ಕಳೆದುಕೊಂಡ ಬದುಕು

May 28, 2009 - 12:58am
subbusullia
ಕಪ್ಪು ಕಪ್ಪಾಗಿಹ ಎಸಳು ಉದುರಿ ಹೋಗಿಹ ಎಲೆಯು ಮುರುಟಿ ಹೋಗಿಹ ದಂಟು ಕೈಯಲ್ಲಿದೆ ಮುದುರಿ ಹೋಗಿಹ ಹೂವು ಕೋಟುಗಳ ನಡುವೆ ನರಳಿ ಸಭಾಂಗಣದ ನೆಲದಲ್ಲಿ ಹೊರಳಿ ಅಲ್ಲಲ್ಲಿ ಚೆಲ್ಲಾಡಲ್ಪಟ್ಟಿಹ ಸುಮವು ನರಳುತಿಲ್ಲವೇನು? ಮುಂಜಾವ ಹೊತ್ತಿನಲ್ಲಿ ಮಂಜಿನ ಮಳೆಯಲ್ಲಿ ನಳ ನಳಿಸುತ್ತಿರಲಿಲ್ಲವೇನು ? ತಂಗಾಳಿಗೆ ಮುಖವೊಡ್ಡಿ ನಗುತ್ತಿರಲಿಲ್ಲವೇನು? ಕತ್ತರಿಯ ಏಟಿಗೆ ನಲುಗಿ ವಿಕಲಾಂಗನಾಗಿರುತ ಜನರ ಕೈಗೆ ಸಿಲುಕಿ ಬದುಕಿನ ಬಣ್ಣ ಕಳೆದುಕೊಳ್ಳುತಿಲ್ಲವೇನು? -ಸುಬ್ಬು ೦೭-೦೩-೨೦೦೩
ಸರಣಿ: 
ಲೇಖನ ವರ್ಗ (Category): 
No votes yet
To prevent automated spam submissions leave this field empty.