26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಮ್ಗೇನ್ ಗೊತ್ರಿ ; ಅವ್ರ್ ಎಲ್ ನಿಂತೄ ನಾವ್ ಅವ್ರಿಗೆ ಓಠಾಕೋರೆ ! ಈ ಎಲೆಕ್ಷನ್ ನಲ್ಲೂ ಅದೇ-ಮನಮೋಹನ್ ಸಿಂಗ್ ಇದಾರಲ್ರಿ ; ಸರಿಮತೆ, ಅವ್ರೆಗೇ ಹಾಕ್ರಿ, !

May 31, 2009 - 10:16am
venkatesh
ಆಗ : ನಮ್ಗೇನ್ ಗೊತ್ರಿ ; ಅವ್ರ್ ಎಲ್ ನಿಂತೄ ನಾವ್ ಅವ್ರಿಗೆ ಓಠಾಕೋರೆ ! ಈಗ : ಈ ಎಲೆಕ್ಷನ್ ನಲ್ಲೂ ಅದೇ-ಮನಮೋಹನ್ ಸಿಂಗ್ ಇದಾರಲ್ರಿ ; ಸರಿಮತೆ, ಅವ್ರೆಗೇ ಹಾಕ್ರಿ, ! ಆಗಿದ್ದಿದ್ದೂ ಅದೇ ಅಭ್ಯಾಸ. ನೆಹೄ, ಇದಾರೆ, ಅವರ ನಂತರ, ಇಂದಿರಮ್ಮ ಇದಾರೆ, ಆಮೇಲೆ, ನಮ್ಮ ರಾಜೀವ್ ಇದಾರಲ್ಲ ; ಸರಿಮತ್ತೆ. ಇದೇ ತರಹದ ಜನಾದೇಶ ಸುಮಾರು ೬೦ ವರ್ಷಗಳಿಂದ ನಡೆದುಕೊಂಡು ಬಂದಿದೆ. ಆ ತರಹದ ಜನಾಭಿಪ್ರಾಯಕ್ಕೆ ಕಾರಣವಿಲ್ಲದಿಲ್ಲ. ಗಾಂಧಿ ನೆಹರು ಪರಿವಾರಗಳು, ದೇಶಕ್ಕೆ ಮಾಡಿದ ತ್ಯಾಗ, ಬಲಿದಾನಗಳು, ಸರ್ವರಿಗೂ ಚೆನ್ನಾಗಿ ಮನದಟ್ಟಾಗಿವೆ. ನೆಹೄರವರನ್ನು ಟೀಕಿಸುವ ಜನರೂ, ಅವರು ಮಾಡಿದ ಮೊದಲ ಕೆಲವು ಕಾರ್ಯಗಳು, ನಮ್ಮದೇಶದ ಪ್ರಜಾಪ್ರಭುತ್ವವನ್ನು ಬಲವಾದ ಬುನಾದಿಯಮೇಲೆ ನಿಲ್ಲಿಸಲು ಅನುಕೂಲವಾಯಿತು, ಎನ್ನುವ ಮಾತನ್ನು ಒಪ್ಪುತ್ತಾರೆ. ನೆಹೄರವರ ದೂರದರ್ಶಿತ್ವ, ವಿದ್ಯಾಸಂಸ್ಥೆಗಳ ಸಂರಚನೆ, ಅನುಸಂಧಾನ ಸಂಸ್ಥೆಗಳ ನಿರ್ಮಾಣ ಹಾಗೂ ಬೃಹತ್-ಜಲಾಶಯಗಳ ನಿರ್ಮಾಣಕಾರ್ಯಗಳು, ಮುಂದಿನ ಪೀಳಿಗೆಯ ಯುವಜನಾಂಗ ಸದಾಕಾಲವೂ, ನೆನೆಸಿಕೊಳ್ಳುವಂತಾಗಿದೆ. ಆಹಾರಧಾನ್ಯಗಳನ್ನು ನಮಗೆ ಅಮೆರಿಕದಂತಹ ರಾಷ್ಟ್ರಗಳು ಒದಗಿಸುತ್ತಿದ್ದವು. ಸಾಕಾದಷ್ಟು ಆಹಾರಸಾಮಗ್ರಿಗಳನ್ನು ದಾಸ್ತಾನುಮಾಡಲಾಗಿರಲಿಲ್ಲ. ಪ್ರಜಾಪ್ರಭುತ್ವದ ಪ್ರಾರಂಭಿಕದಿನಗಳಲ್ಲಿ ಎಲ್ಲವೂ ಅಸ್ಪಷ್ಟವಾಗಿದ್ದವು ! ಆಗಿನ ಕಷ್ಟದ ಕಾಲದಲ್ಲಿ ಇವನ್ನು ಮಾಡುವುದು ಸುಲಭವಾಗಿರಲಿಲ್ಲ. ಸಂಪನ್ಮೂಲಗಳಕೊರತೆ, ಹೊಸ ಪ್ರಜಾಪ್ರಭುತ್ವ, ಹಾಗೂ ಅಗಾಧಜನಸಂಖ್ಯೆ, ನಿರಕ್ಷರ ಜನ, ಇವರನ್ನು ಜೊತೆಗೂಡಿಸಿಕೊಂಡು ಮುನ್ನಡೆಯುವ ಕೆಲಸ ಹೇಳಿದಷ್ಟು ಸುಲಭದಲ್ಲ. ಇಂದಿನ ೧೫ ನೇ ಲೋಕಸಭಾಚುನಾವಣೆಯ ಹೊತ್ತಿಗೆ, ನಮ್ಮ ಪ್ರಜ್ಞಾವಂತ ನಾಗರಿಕರು, ತಮ್ಮ ಜನಾದೇಶವನ್ನು ಎಷ್ಟು ಸಮಂಜಸವಾಗಿ ಕೊಟ್ಟಿದ್ದಾರೆ, ಎನ್ನುವ ಮಾತನ್ನು ನಾವು ಜನಾದೇಶದ ವಿವರಗಳನ್ನು ಕುಲಂಕುಶವಾಗಿ ಅಭ್ಯಾಸಮಾಡಿದಾಗ ವಿದಿತವಾಗುತ್ತದೆ. ನಾಗರಿಕರು ಎಚ್ಚೆತ್ತಿದ್ದಾರೆ. ಯಾರು ಸಮರ್ಥರು, ಯಾರು ಗಟ್ಟಿಗರು, ಎನ್ನುವುದನ್ನು ರಾಜಕೀಯ ಧುರೀಣರು ಹೇಳಬೇಕಾಗಿಲ್ಲ. ಅದನ್ನು ಹೇಳುವವರು, ನಮ್ಮ ಜವಾಬ್ದಾರಿಯುತ ಮತದಾರರು, ಎನ್ನುವಮಾತನ್ನು ಲಾಲ್ ಕೃಷ್ಣ ಅಡವಾನಿಯವರೂ ಒಪ್ಪುವಂತೆ, ತಮ್ಮ ಜನಾದೇಶವನ್ನು ಈ ಸಲದ ಎಲೆಕ್ಷನ್ ನಲ್ಲಿ ಅಚ್ಚುಕಟ್ಟಾಗಿ ಮಂಡಿಸಿದ್ದಾರೆ. ಯಾರು ತಲೆಹೋಕರೋ, ಸದಾ ತಮ್ಮ ಮಕ್ಕಳು, ಅವರಿಗೆ ಸಿಕ್ಕಬೇಕಾದ ಪದವಿಗಳು, ಇವನ್ನೇ ಮುದ್ದವಾಗಿಟ್ಟುಕೊಂಡು, ರಾಜಕೀಯನಡೆಸುತ್ತಿರುವ ಅಧಿಕಾರದ-ಆಸೆಬುರುಕ, ಹಳೆ-ಗೂಳಿಗಳನ್ನು ಉರುಳಿಸಿದ್ದಾರೆ. ಮಕ್ಕಳ ಹಿತಾಸಕ್ತಿಯೇ ತಮ್ಮ ಜೀವನದ ಧ್ಯೇಯವೆಂದು ಪಾರ್ಟಿಗಳನ್ನು ಬದಲಾಯಿಸುವ ರಾಜಕೀಯಪಟುಗಳು ೫ ವರ್ಷ ಕೈಕಟ್ಟಿಕೊಂಡು, ಇಲ್ಲವೇ, ಕೈ- ಕೈ ಹಿಸಿದುಕೊಳ್ಳುವಂತೆ ಮಾಡಿದ್ದಾರೆ. ಯಾರು ಸಕ್ರಿಯವಾಗಿ ವರ್ತಿಸುತ್ತಿಲ್ಲವೋ ಅವರನ್ನು ಮನೆಯಲ್ಲೇ ಕೂಡೃವಂತೆ ಮಾಡಿದ್ದಾರೆ. ಸುಮ್ಮ ನೆ ಭಾಷಣಬಿಗಿದು, ಯಾವ ಕೆಲಸಗಳನ್ನೂ ಜವಾಬ್ದಾರಿಯಿಂದ ಮಾಡದ ಬೊಗಳೆ ಜನರಿಗೆ ಬುದ್ಧಿಹೇಳಿದ್ದಾರೆ. ಯಾವಾಗಲೂ ಸವಾಲುಗಳನ್ನು ಒಡ್ಡಿ ಆತಂಕನ್ನು ಸೃಷ್ಟಿಸುತ್ತಿರುವ ಎಡಪಕ್ಷದ ನಾಯಕರನ್ನು ಜನ ಚೆನ್ನಾಗಿ ಥಳಿಸಿದ್ದಾರೆ. ಇದೇ ತರಹ ಎಡಪಕ್ಷಿಗರು, ತಮ್ಮ ಧೋರಣೆಗಳನ್ನು ಇಟ್ಟುಕೊಂಡು ಮುಂದುವರೆದರೆ, ಮುಂದಿನ ಚುನಾವಣೆಯಲ್ಲಿ ಮಣ್ಣುಮುಕ್ಕಬೇಕಾಗಬಹುದು. ಇನ್ನೂ ಯಾವ ಹೆಚ್ಚಿನ ರಾಜಕೀಯ ಅನುಭವವಗಳನ್ನು ಕಾಣದ ’ಮಮತಾ ’ ರವರ ಮುಂದೆ ಪ. ಬಂಗಾಳದ ರಾಜಕೀಯಜ್ಞರು, ತಮ್ಮ ಶಸ್ತ್ರಾಸ್ತ್ರಗಳನ್ನು ಒಡ್ಡಿ, ಕ್ಷಮೆಕೇಳಬೇಕಾಗಿ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ! -(ಚಿತ್ರ. ಆರ್. ಕೆ. ಲಕ್ಷ್ಮಣ್, ಟೈಮ್ಸ್ ಆಫ್ ಇಂಡಿಯ, ೩೧- ೦೫-೨೦೦೯, ರವಿವಾರ)
ಲೇಖನ ವರ್ಗ (Category): 
Average: 1.8 (4 votes)
To prevent automated spam submissions leave this field empty.