ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !

August 13, 2006 - 6:00pm — venkatesh

ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ ಸ್ವಾಧೀನತಾ ದಿನ ! ಬನ್ನಿ ಮೊದಲು ನಾವು ಇದರ ಮಹತ್ವವನ್ನು ಸರಿಯಾಗಿ ತಿಳಿದುಕೊಂಡು ನಮ್ಮ ಮಕ್ಕಳೊಡನೆ ನಮ್ಮ ಅನುಭವಗಳನ್ನು ಹಂಚಿಕೊಳ್ಳೋಣ. ಈ 'ಸುದಿನ' ದಂದು ನಾವು ಅವರ ಹೃದಯದಲ್ಲಿ ದೇಶಪ್ರೇಮ ಬಿತ್ತಿ, ನೀರೆರದು ಬೆಳೆಸಲು ಪ್ರತಿಜ್ಞೆ ಮಾಡಬೇಕು. ಅದಕ್ಕಾಗಿ ನಾಳಿದ್ದು ಬರುವ ೧೫ ನೆಯ ತಾರೀಖಿನ 'ರಾಷ್ಟ್ರವ್ಯಾಪಿ ಹಬ್ಬ'ಕ್ಕೆ ಮಾನಸಿಕವಾಗಿ ಪೂರ್ತಿಯಾಗಿ ಸಿದ್ಧರಾಗಬೇಕಾಗಿದೆ.

ಅಲೆಗ್ಝಾಂಡರನ ದಾಳಿಯಿಂದ ಹಿಡಿದು ೧೯೪೭ ರ ವರೆಗೆ ಅನೇಕ 'ವಿದೇಶಿ ಶಕ್ತಿಗಳು' ನಮ್ಮದೇಶದಮೇಲೆ ಮುತ್ತಿಗೆ ಹಾಕಿ, ಕೊಳ್ಳೆ ಹೊಡೆದು, ಸುಲಿಗೆ ಮಾಡಿ, ಸಂಪತ್ತನ್ನೆಲ್ಲಾ ದೋಚಿಕೊಂಡು ಪಲಾಯಮಾಡಿದ್ದರು. ಇನ್ನು ಹಲವರು ಈ ದೇಶದಲ್ಲೇ ತಳವೂರಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ನಮ್ಮ ಅಸ್ತಿತ್ವವೇ ಇಲ್ಲವೆನ್ನಿಸುವಂತೆ ಮಾಡಿದರು. ಹೀಗೆ ನಾವು ಶತಮಾನಗಳ ದಾಸ್ಯದ ಹೊರೆಯಿಂದ ನರಳಿ ಬೆಂಡಾಗಿದ್ದೆವು. ಕೊನೆಯ ೨೦೦ ವರ್ಷಗಳು ಬ್ರಿಟಿಷರ ಲೆಖ್ಖಕ್ಕೆ ಸೇರಿವೆ.

೧೫೦ ವರ್ಷಗಳ ಹಿಂದೆಯೇ ನಮ್ಮ ಸೇನೆಯ 'ಸಿಪಾಯಿ'ಗಳು ಇಂಗ್ಲಿಷ್ ಪ್ರಭುತ್ವವನ್ನು ಪ್ರತಿಭಟಿಸಿ ಹೋರಾಡಿದ್ದರು. ಆದರೆ ದೇಶದಲ್ಲಿ ಸಾಕಷ್ಟು ಬೆಂಬಲ ಸಿಗದೆ ಪ್ರತಿಭಟನೆಯ ಜ್ವಾಲೆ ಆಗಲೇ ನಂದಿತು !
ಮುಂದೆ ತಿಲಕರು, ದೇಶದ ಯುವಕರನ್ನು ಹೋರಾಡಲು ಮಾನಸಿಕವಾಗಿ ತಯಾರುಮಾಡಲು ಶ್ರಮಿಸಿದ್ದರು. ಆದರೆ ಅದು ಕೇವಲ ಮಹಾರಾಷ್ಟ್ರದಲ್ಲಿ ಮಾತ್ರ ಫಲಕಾರಿಯಾಗಿದ್ದು ರಾಷ್ಟ್ರದಾದ್ಯಂತ ಹಬ್ಬಲಿಲ್ಲ. ೧೯೨೦ ರ ಹೊತ್ತಿಗೆ ದಕ್ಷಿಣ ಆಫ್ರಿಕದಿಂದ ಒಬ್ಬ ಮಹಾನ್ ಆದರ್ಶವಾದಿ, ಪ್ರಭಾವಿ ಸಂಘಟಕ ಭಾರತಕ್ಕೆ ಬಂದರು. ಸುಮಾರು ೪೭ ವರ್ಷವಯಸ್ಸಿನ, ಬಡಕಲು ಶರೀರದ ಈ ವ್ಯಕ್ತಿ ದೇಶದ 'ಹೋರಾಟದನೀಲನಕ್ಷೆ' ಯನ್ನು ಜೊತೆಗೆ ತಂದಿದ್ದರೇನೋ ಅನ್ನಿಸುತ್ತಿತ್ತು. ಕೊನೆಯವರೆವಿಗೂ ಎಲ್ಲಾ ಸಂಘರ್ಷಗಳಲ್ಲೂ ತಮ್ಮ ಇಳಿಯ ವಯಸ್ಸಿನಲ್ಲೂ ಮುಂದುವರೆಸಿ ದೇಶಕ್ಕಿ ಸ್ವಾತಂತ್ರ್ಯ ತಂದು ಕೊಟ್ಟರು. ಅವರೇ ಗುಜರಾತಿನ 'ಮೋಹನದಾಸ್ ಕರಮಚಂದ್ ಗಾಂಧಿ' ! ಅವರು ಒಬ್ಬ ಸುಶಿಕ್ಷಿತ ವಕೀಲರು.ದಕ್ಷಿಣ ಆಫ್ರಿಕ ದಲ್ಲಿ ಕೆಲಸ ಮಾಡಿ ಬಂದ ಅವರಿಗೆ ಬಿಳಿಯರ ದೌರ್ಜನ್ಯ, ದಬ್ಬಾಳಿಕೆಗಳ ಕಟು ಅನುಭವವಾಗಿತ್ತು. ಶುದ್ಧ ಚಾರಿತ್ರ್ಯದ, ವಿಶಾಲ ಹೃದಯದ, ಸಮರ್ಥ ಸಂಘಟಕರಾದ ಗಾಂಧಿಯವರು ದೇಶದಾದ್ಯಂತ ಸುತ್ತಿ ತಮ್ಮ ಪ್ರಭಾವದಿಂದ ಎಲ್ಲಾ ವರ್ಗದ ಭಾರತೀಯರನ್ನೂ ಆಕರ್ಶಿಸಿದರು. ಅವರು ಆಂದೋಳನವನ್ನು ನಡೆಸಿಕೊಂದು ಹೋದ ರೀತಿ ಅನನ್ಯ !ಅವರ ಅಸಂಖ್ಯ ಬೆಂಬಲಿಗರು, ದಿನ ದಿನ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಬೆಳೆಯುತ್ತಲೆ ಹೋದರು. ಇಂತಹ ಹೋರಾಟ ದಶಕಗಟ್ಟಲೆ ಸಮಯದಲ್ಲಿ ನಡೆದು ಅವರ 'ಸತ್ಯಾಗ್ರಹ'ದಿಂದ ಬ್ರಿಟಿಷ್ ಸರ್ಕಾರ ನಡುಗಿಹೋಯಿತು. ಕೊನೆಗೆ ಯಾವ ಉಪಾಯವೂ ಕಾಣದೆ ಸಂದರ್ಭದ ಒತ್ತಡಕ್ಕಿ ಮಣಿದು ತೆಪ್ಪಗೆ ದೇಶ ಬಿಟ್ಟು ಕೊಟ್ಟು ಹೋಗಬೇಕಾಗಿ ಬಂತು. 'ಜಲಿಯನ್ ವಾಲಾ ಹತ್ಯಾಕಾಂಡ'ದ ರಕ್ತ ಪಾತ ವನ್ನು ಮರೆಯಲು ಸಾಧ್ಯವೇ ? ನಮ್ಮಲ್ಲಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಗಳಿರಲಿಲ್ಲ. ಹೀಗೆ ಶಾಂತಿಯ ಮಾರ್ಗದಿಂದ ಸಿಕ್ಕ 'ವಿಜಯಯ ಘಟನೆ' ಭಾರತದ ಇತಿಹಾಸದಲ್ಲೇ ಹುಡುಕಿದರು ಸಿಗುವುದು ಕಷ್ಟ !

ಸಾಮಾನ್ಯವಾಗಿ ವಿಜಯಿಯಾದ ರಾಷ್ಟ್ರದಿಂದ ಸೋತ ದೇಶದ ಮೇಲೆ ಆಗುವ ಅಸಂಖ್ಯ ಸೈನಿಕರ ಮರಣ, ಹೆಣ್ಣುಮಕ್ಕಳ ಮೆಲೆ ದೌರ್ಜನ್ಯ,ಅತ್ಯಾಚಾರ, ಯುದ್ಧ ಕೈದಿಗಳ ಮೆಲೆ ಆಗುವ ಹಿಂಸಾಚಾರ ಇವೆಲ್ಲಾ ಯಾವುದೂ ನಡೆಯಲಿಲ್ಲ.ಭಾರತದಿಂದ ಯಾವ ಅಹಿತ ಕರ ಪ್ರಸಂಗವೂ ಆಗಲಿಲ್ಲ ! ಈಗಲೂ ಬ್ರಿಟನ್ ಮತ್ತು ಭಾರತದ ಸಂಬಂಧಗಳು ಚೆನ್ನಾಗಿಯೆ ಇವೆ ! ಇಂತಹ ಪ್ರಸಂಗ ಯಾವ ದೇಶದ ಚರಿತ್ರೆಯಲ್ಲೂ ದಾಖಲಾಗಿಲ್ಲ !

ಭಾರತದ ಕೊನೆಯ ವೈಸ್ ರಾಯ್, ಮೌಂಟ್ ಬ್ಯಾಟನ್ ನಮ್ಮ ಪ್ರಥಮ ಪ್ರಧಾನಿ ಪಂ.ನೆಹರೂ ರವರಿಗೆ
ದೇಶದ 'ಚುಕ್ಕಾಣಿ'ಯನ್ನು ಒಪ್ಪಿಸಿ 'ಹಸ್ತಲಾಘ' ವನ್ನು ಕೊಟ್ಟು ತಮ್ಮ ದೇಶಕ್ಕೆ ನಿರ್ಗಮಿಸಿದ ದೃಷ್ಯ ಬಹುಶಃ ಯಾವ ದೇಷದಲ್ಲೂ ಕಂಡರಿಯದ, ಕೇಳರಿಯದ ಸಂಗತಿಯಾಗಿದೆ ! ಇದನ್ನು 'ಸುವರ್ಣಾಕ್ಷರಗಳಲ್ಲಿ' ಬರೆಯಬಹುದೇನೋ !

ಆ ಸಮಯದಲ್ಲಿ ನಮ್ಮ 'ರಾಷ್ಟ್ರಪಿತ, ಮಹಾತ್ಮಾ ಗಾಂಧಿ'ಯವರು ಉಪಸ್ಥಿತರಾಗಲು ಸಾಧ್ಯವಾಗಲಿಲ್ಲ ! ಅವರು ಬಂಗಾಳದ ಕೊಮುವಾರು ಸಂಘರ್ಷದಲ್ಲಿ, ಉಭಯತ್ರರಿಗೂ ಮನಒಲಿಸಲು 'ಸತ್ಯಾಗ್ರಹ' ಕೈಗೊಂಡಿದ್ದರು !

ಈ ತರಹದ 'ಶಕ್ತಿ' ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಲಭವಾಗಿ 'ಹಸ್ತಾಂತರ' ವಾಗಲು ಕಾರಣ, ಮಹಾತ್ಮ ಗಾಂಧಿಯವರ 'ಅಮೋಘವ್ಯಕ್ತಿತ್ವ' ಮುಂದಾಳುತನ, ಮತ್ತು ಅವರು ನಂಬಿದ ಅದರ್ಶಗಳು, ನಡೆಸಿಕೊಂಡು ಬಂದ ರೀತಿ, ಮತ್ತು ಅವರ 'ಕಾರ್ಯ ವೈಖರಿಗಳೆ' ಕಾರಣ !ಅವರ ಹಿಂಬಾಲಕರುಗಳು ಗಾಧಿಯವರ ತತ್ವಗಳನ್ನು ಮೈಗೂಡಿಸಿಕೊಂಡಿದ್ದರು.ಅವರಿಗೆ ವಿರುದ್ಧವಾಗಿ ಎಂದೂ ಹೊಗಲಿಲ್ಲ !

ಈ ದಿನ, ಅಂತಹ ಮಹಾನುಭಾವರುಗಳ ದೇಶಪ್ರೇಮ,ತ್ಯಾಗಗಳನ್ನು ಸ್ಮರಿಸಿಕೊಂಡು ಅದರಂತೆ ನಡೆದು ನಮ್ಮದೇಶವನ್ನು ಮುಂದೆ ತರಬೇಕಾಗಿದೆ ! ಇಂದಿನ ಆತಂಕವಾದ, ದೇಶದಲ್ಲಿನ ಆದರ್ಶಗಳ ಕೊರತೆ, ಲಂಚಕೋರತನ, ಅಸಮಾನತೆಗಳನ್ನು ನಿರ್ಮೂಲಮಾಡಲು ಪ್ರತಿಜ್ಞೆ ಮಾಡಬೇಕಾಗಿದೆ ! ಇವೆಲ್ಲಾ ಯಶಸ್ವಿಯಾಗಿ ನಡೆಯಬೇಕಾದರೆ 'ನಮ್ಮ ಯುವ ಪೀಡಿ' ಮತ್ತು 'ಮಕ್ಕಳನ್ನು' ಸರಿಯಾದ ದಾರಿಯಲ್ಲಿ ನಡೆಸಿಕೊಂಡು ಹೋಗುವುದು ಅತಿಮುಖ್ಯ. ಅವರ ಮುಂದಿನ ಬಾಳನ್ನು ಹಸನಾಗಿಸಲು 'ಸದೃಢ' ಗೊಳಿಸಲು 'ಪಂಚತಂತ್ರ', 'ದಶತಂತ್ರ', 'ಶತತಂತ್ರಗಳ' ನ್ನು ಬೋಧಿಸ ಬೇಕಾಗಿದೆ. ಈಗಿನ 'ಸ್ಪರ್ಧಾತ್ಮಕ' ಜೀವನದಲ್ಲಿ ಎಷ್ಟು ಕಲಿತರೂ ಕಡಿಮೆಯೇ ! ಹಿರಿಯರಾದ ನಾವು, ನಮ್ಮ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆ ಕಳೆಯಬೇಕು. ಜಾಗರೂಕತೆಯಿಂದ, ಮೊದಲು "ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು" ಬಹಳ ಮುಖ್ಯ ! ನಂತರ, ಅವರ ಜೀವನದ ಮಾರ್ಗದಲ್ಲಿ 'ಕೈಮರ'ವಾಗಿ ನಿಲ್ಲಬಹುದಲ್ಲವೇ ?

ಕೆಳಗೆ ಕಾಣಿಸಿದಂತೆ ನಮ್ಮನ್ನು ನಾವು ತಯಾರು ಮಾಡಿಕೊಳ್ಳುವ ಅಗತ್ಯ ಬಂದಿದೆ :

೧. ಪ್ರತಿವರ್ಷದ ಆಗಸ್ಟ್ ೧೫ ರಂದು ಮನೆಯಲ್ಲಿ, ನಮ್ಮ ಯುಗಾದಿ, ದೀಪಾವಳಿಯ ತರಹ
ಸ್ವಾತಂತ್ರ್ಯದ ದಿನವನ್ನೂ ಹಬ್ಬದಂತೆ ಆಚರಿಸಬೇಕು.

೨. ಆ ದಿನ ತಪ್ಪದೆ ಮಕ್ಕಳ ಜೊತೆ, 'ಗಾಂಧಿಯವರ ಸ್ವಾತಂತ್ರ್ಯ ಸಂಗ್ರಾಮದ ಚಿತ್ರ'ವನ್ನು
ಖಡ್ಡಾಯವಾಗಿ ನೋಡಬೇಕು. ನಂತರ, ಚಿತ್ರದ ಬಗ್ಗೆ ಅವರು ಕೇಳುವ ಪ್ರಶ್ನೆ ಗಳಿಗೆ
ಸಮರ್ಪಕವಾಗಿ ಉತ್ತರಿಸ ಬೇಕು.ಆಮೆಲೆ ಅವರ ತಿಳುವಳಿಕೆಯ ಮಟ್ಟಕ್ಕೆ ಸರಿಯಾಗಿ
ಸಾಂದರ್ಭಿಕ ಸನ್ನಿವೇಷಗಳನ್ನು 'ಕಥೆ'ಯ ರೂಪದಲ್ಲಿ ಅವರಿಗೆ ತಿಳಿಯಹೇಳ ಬೇಕು.

೩. ನಾವು ವೀಕ್ಷಿಸುವ 'ಟೀವಿ' ಕಾರ್ಯಕ್ರಮಗಳ ಮೇಲೆ ಹಿಡಿತ ಅತಿ ಮುಖ್ಯ !ಇಲ್ಲಿ ನಮ್ಮನ್ನು
ನಾವೇ ನಿಯಂತ್ರಿಸಿಕೊಳ್ಳುವುದು ಅತಿ ಮುಖ್ಯ ! ತಂದೆ ತಾಯಿಗಳು ಸಮಾಲೊಚಿಸಿ ಮಕ್ಕಳಿಗೆ
ಏನು ತೊರಿಸ ಬೇಕು,ಎಷ್ಟು, ಎನ್ನುವುದನ್ನು ನಿರ್ಧರಿಸಬೇಕು. ಮಕ್ಕಳಿಲ್ಲದಿದ್ದಾಗ ಬೇರೆ
ಕಾರ್ಯಕ್ರಮಗಳನ್ನು ನೋಡಬಹುದು !

೪. ಮನೆಯಲ್ಲಿ ಅವರ ಜೊತೆ ಖಡ್ಡಾಯವಾಗಿ ಕನ್ನಡದಲ್ಲೇ (ಮಾತೃಭಾಷೆ)ಮಾತನಾಡಬೇಕು.
ಅವರಿಗೆ ಅದರಲ್ಲಿ ಓದಲು,ಬರೆಯಲು ಕಲಿಸಬೇಕು. ಸ್ವಲ್ಪ ದೇಹಕ್ಕೆ ಪೆಟ್ಟಾದರು 'ಅಮ್ಮಾ'
ಎಂದು ಚೀರುವಷ್ಟು ಭಾಷೆ ಬೇಕು. 'ಮಾತೃಭಾಷೆ'ಯಲ್ಲಿ ಯೊಚಿಸುವುದನ್ನು ಕಲಿಸಲೇ
ಬೇಕು.

೫. ನಮ್ಮ ದೇಶದ ಸಂಸ್ಕೃತಿಯ ಪರಿಚಯ ಅವರಿಗೆ ಬೇಕು. ಸಂಗೀತ,ನೃತ್ಯ,ಕಲೆಯ ಪರಿಚಯ
ವಿರಬೇಕು.

೬. ನಮ್ಮ ಮಕ್ಕಳು 'ಅತ್ಯಾಧುನಿಕ ಉಡುಪು' ಧರಿಸಲಿ, ಅತ್ಯಾಧುನಿಕ 'ತಂತ್ರಜ್ಞಾನ'
ಪಡೆಯಲಿ.ಆದರೆ ಹೃದಯದಲ್ಲಿ ಭಾರತೀಯತೆ ತುಂಬಿರಲಿ !

೭. ಬೇರೆ ಭಾಷೆ, ನಡವಳಿಕೆ, 'ಸಹಬಾಳ್ವೆ' ಯಿಂದ ಬಂದೇಬರುತ್ತೆ. ಯೋಚಿಸುವುದು ಬೇಡ.

೮. ನಾವು ನಮ್ಮ ಮಕ್ಕಳ ಬಗ್ಗೆ "ಹೆಚ್ಚು ಹೆಚ್ಚು ಆಶೆಬುರುಕರಾಗೋಣ" ! ಮೇಲೆ ತಿಳಿಸಿದ ಎಲ್ಲಾ
'ವಿಶೇಷ ಗುಣಗಳು' ನಮ್ಮ ಮಕ್ಕಳಲ್ಲಿ ಮೇಳವಿಸಲಿ !

ಜೈ ಭಾರತ ಮಾತೆ !!

  • ಪ್ರಚಲಿತ
~.~
  • Login or register to post comments
  • 947 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 15, 2006 - 10:51pm — hpn

ಹಬ್ಬ (!?)

hpn's picture

ಎಂಥ ಹಬ್ಬ ಸ್ವಾಮಿ? ಪ್ರಧಾನಿಗಳು ಸ್ವಾತಂತ್ರ್ಯದಿನಾಚರಣೆಯ ಭಾಷಣವನ್ನು ಶಾಲೆಯಲ್ಲಿ ಪುಸ್ತಕ ಓದುವವರಂತೆ ಬರೆದಿಟ್ಟುಕೊಂಡು ಬಂದು ನೀರಸವಾಗಿ ಓದುತ್ತಾರೆ.

ಕೆಲವರಿಗೆ ಈ ದಿನದಂದು ಮಾತ್ರ "ನಾವು ಭಾರತದಲ್ಲಿದ್ದೇವೆ" ಎಂಬ ಜ್ಞಾನೋದಯವಾಗುತ್ತದೆ. (ನಮ್ಮಲ್ಲಿ ಹಲವರಿಗೆ ನವೆಂಬರ್ ೧ರಂದು 'ನಾವು ಕನ್ನಡಿಗರು' ಎಂದು ಒಡನೆಯೇ ಜ್ಞಾನೋದಯವಾಗುವಂತೆ)

ಸ್ವಾತಂತ್ರ್ಯ ದಿನಾಚರಣೆ ಬಹುಶಃ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 8:50am — venkatesh

'ಸ್ವಾತಂತ್ರ್ಯ ದಿನೊತ್ಸವ' ಅದರ ಮೌಲ್ಯಗಳನ್ನು ಕಳೆದು ಕೊಳ್ಳುತ್ತಿದೆಯೆ ?

venkatesh's picture

ನಮಸ್ಕಾರ. ಸದ್ಯ ನೀವೊಬ್ಬರು 'ನನ್ನ ಪ್ರಲಾಪ' ಓದಿದ್ದೀರಿ. ಸುಂದರವಾಗಿ ಪ್ರತಿಕ್ರಿಯಿಸಿದ್ದಿರಿ. ಧನ್ಯವಾದಗಳು. ನಿಮ್ಮ ಹೇಳಿಕೆ ಖಂಡಿತ ನಿಜ.ಮತ್ತು ಅದನ್ನು ನಿಜವಾಗಿಯೂ ನಾವು ವಿಚಾರಮಾಡುವಂತಹದು. ಮೌಲ್ಯಗಳು ಗೊತ್ತಾದಾಗ ಮಾತ್ರ ಅದನ್ನು ಕಳೆದುಕೊಳ್ಳುವ ಪ್ರಶ್ನೆ ಅಲ್ಲವೆ !ಅದನ್ನು ಮಕ್ಕಳ ಮೇಲೆ ಒಮ್ಮೊಮ್ಮೆ ಹೇರಬೇಕಾಗುತ್ತದೆ.

ನನ್ನ ಅಳಿಯ, ಚಿಕ್ಕವನಾಗಿದ್ದಾಗ ತುಪ್ಪ ತಿನ್ತಿರಲಿಲ್ಲ. ಪಲ್ಯ ಬೇಡ, ಹುಳಿಬೇಡ, ಗೊಜ್ಜು ಬೇಡ, ಮಜ್ಜಿಗೆಹುಳಿ ಬೇಡ. ಸಾರು ಸಾಕು ! ಹೀಗೆ ಅವನ ಪಟ್ಟಿ ದೊಡ್ಡದು. ನಾನು 'ಶತಾಯ ಗತಾಯ' ಎಂದು ಅವನಿಗೆ ನನ್ನ ಹೆಂಡತಿ ಸಹಕಾರ ಪಡೆದು, ಮೇಲೆ ಹೇಳಿದ ಎಲ್ಲಾ ಪಲ್ಯ ಇತ್ಯಾದಿಗಳನ್ನು ತಿನ್ನಿಸಿ, ಅದಕ್ಕೆ ತಕ್ಕ ಕಥೆ 'ಸೃಷ್ಟಿಸಿ' ಹೇಳಿ ಮನ ಒಲಿಸಿದ ಮೇಲೆ, ಈಗ ಅವನು ಎಲ್ಲಾ ತಿಂತಾನೆ. ತಿನ್ನದವರಿಗೂ ತಿನ್ನಿಸ್ತಾನೆ ! ಇದು ಹೇಗಾಯಿತು ಗೊತ್ತ ? ಅವರಮ್ಮನ ರುಚಿ (ನನ್ನ ತಂಗಿಯ )ಇಲ್ಲದ ಅಡುಗೆ -'ಪೊರ'ನಿಗೆ ಇಂತಹ ಮನೊಭಾವ ತಂದಿತ್ತು ! ಇದೊಂದು ಚಿಕ್ಕ ದೃಷ್ಟಾಂತ !

ಇದನ್ನು ಹೇಳಲು ನಮ್ಮೆಲ್ಲರಿಗು ಮುಜುಜುರವಾಗುತ್ತಿದೆ ! ನೆನ್ನೆ ನಾನು ಕಂಡಂತೆ ಯಾವ ಚಾನಲ್ ನಲ್ಲು ಗಾಂಧೀಜಿ, ಸತ್ಯಾಗ್ರಹ, ಹೋರಾಟ, ಅನ್ನುವುದು ತೊರಿಬರಲಿಲ್ಲ. 'ಸರ್ಕಾರಿ ಚಾನಲ್' ನ್ನು ಮಕ್ಕಳು, ವೃದ್ಧ ರೂ ನೊಡಲ್ಲ. ಮನೆಯ ಯಜಮಾನನ ಜವಾಬ್ದಾರಿ ಬಹಳ ಮುಖ್ಯ. ಅವನೇ ತನ್ನ ಪರಿವಾರಕ್ಕೆ ಏನು ಬೇಕು; ತನ್ನ ಮಕ್ಕಳು ಮುಂದೆ 'ಸುಸಂಸ್ಕೃತರಾಗಿ' ತನ್ನ 'ಕನಸನ್ನು ಹೇಗೆ ನನಸು' ಮಾಡಬಹುದು, ಅನ್ನುವುದರ ಬಗ್ಗೆ ತಲೆಕೆಡಸಿಕೊಳ್ಳದಿದ್ದರೆ, ಈ ತರಹ ನೀವು ಹೇಳಿದಂತೆ 'ಮೌಲ್ಯ'ಕಳೆದು ಕೊಂಡಂತೆ ಭಾಸವಾಗುವುದು ಸಹಜ ! ಮೌಲ್ಯಗಳು ಬೇಕೆಂದು ಹುಡುಕಿದರೆ ನಿಜವಾಗಿಯೂ ಅವು ಸಿಕ್ಕುತ್ತವೆ. ಮೊದಲು ನಾವು ಅದನ್ನು ಪಡೆದು, ಎಲ್ಲರಿಗೂ ಕೊಡುವ ಧಾರ್ಷ್ಟ್ಯವಂತರಾಗಬೇಕು. ! ನಿಮ್ಮ 'ಸಂಪದ'ದ ಮಾಧ್ಯಮ ನಿಜವಾಗಿಯೂ ಎಲ್ಲರಿಗೂ 'ಆದರ್ಶಪ್ರಾಯವಾಗಿದೆ' ಎಂದರೆ ತಪ್ಪಲ್ಲ !

ಬಹುಶಃ ನಾನು ಕಂಡ ಕೆಲವು ಹಳ್ಳಿಗಳಲ್ಲಿ ಇನ್ನೂ ಈತರಹದ 'ಮೌಲ್ಯ'ಗಳು ಉಳಿದಂತಿದೆ. ಆದರು ಒಮ್ಮೆ 'ನಗರದ ಮುಖ್ಯ ವಾಹಿನಿಯಲ್ಲಿ' ಧುಮಿಕಿದರೊ, ಅವರು ಎಲ್ಲರಂತೆ ಕೊಚ್ಚಿಹೋಗುತ್ತಾರೆ. !ನಾನು ಬರೆದ 'ಸ್ವಾತಂತ್ರ್ಯದಿನದ ಲೇಖನ' ಓದಿದವರ ಸಂಖ್ಯೆ ಎಷ್ಟು ? ಅದೂ, ಒಂದೇ ಪ್ರತಿಕ್ರಿಯೆ ! ಬಹುಶಃ 'ಶ್ರೀಕಾಂತ ಮಿಶ್ರಿಕೊಟಿ'ಯವರು ಇಲ್ಲಾ ಅಂತ ಕಾಣುತ್ತೆ. ಅವರೊಬ್ಬರು ತುಂಬಾ ಚೆನ್ನಾಗಿ ಪ್ರತಿಕ್ರಿಯಿಸುತ್ತಾರೆ. ಸಲಹೆ ಮಾರ್ಗದರ್ಶನ ನೀಡುತ್ತಾರೆ ಕೂಡ !

ಕ್ಷಮಿಸಿ ನಿಮಗೆ ಪುರುಸೊತ್ತು ಸಿಗುವುದೇ ಕಷ್ಟ. ಅದರಲ್ಲೇ ನನ್ನ ಬಹಳ ಮುಖ್ಯ ಲೇಖನ ಓದಿದ್ದೀರಿ. ಇದು ನನ್ನ ಲೇಖನ ಅದಕ್ಕೆ ಮುಖ್ಯ ಎಂದು ನಾನು ಖಂಡಿತ ಹೇಳುತ್ತಿಲ್ಲ. ಇವತ್ತು ನಾವು ಇದರ ಬಗ್ಗೆ ತಲೆ ಕೆಡಸಿಕೊಳ್ಳದಿದ್ದರೆ ಎಂದೊ, ಮುಂದೆ ನಮ್ಮ ಮಕ್ಕಳು, ನಮ್ಮ ಅನಿಸಿಕೆ ಗಳಿಗೆ ಸ್ಪಂದಿಸದಿದ್ದಾಗ ಬೇಸರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಸಹಜ !

ಪ್ರಧಾನಿಗಳ ಭಾಷಣ ತುಂಬಾ ನೀರಸವಾಗಿತ್ತು. ನಿಜ. 'ಹಿಂದಿ' ಅವರಿಗ ಬರಲ್ಲ ಅಂತ ಕಾಣುತ್ತೆ ! ಇಂದಿನ ಪರಿಸ್ಥಿತಿಯಲ್ಲಿ ಎಲ್ಲರಿಗೆ ಹೋಲಿಸಿದರೆ, ಸದ್ಯಕ್ಕೆ ಅವರೇ ನಮ್ಮ ದೇಶದ ಆಡಳಿತದ 'ಜುಕ್ಕಾಣಿ' ಹಿಡಿಯಲು ಇರುವುದರಲ್ಲಿ ಉತ್ತಮ ವ್ಯಕ್ತಿ !! ಇದು ನನ್ನ ಅನಿಸಿಕೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 9:48am — Gopinath Rao

ನಮ್ಮ ಯುವಕರ ಸ್ವಾತಂತ್ರ್ಯ ದಿನ ಆಚರಣೆ ಹೀಗೆ...

Gopinath Rao's picture

ನಮ್ಮ ಯುವಕರ ಸ್ವಾತಂತ್ರ್ಯ ದಿನ ಆಚರಣೆ ಹೀಗೆ...
(ಇಬ್ಬರು ಮಿತ್ರರ ಟೆಲಿಫೋನ್ ಸಂಭಾಷಣೆ.)

"ಸ್ವಾತಂತ್ರ್ಯೋತ್ಸವ ಆಚರಿಸಲಿಕ್ಕಿಲ್ಲವಾ?"
"ಮತ್ತೆ! ಹದಿನಾಲ್ಕಕ್ಕಿಟ್ಟುಕೊಳ್ಳೋಣವಾ? ಹದಿನೈದು ರಾತ್ರಿ ಇಟ್ಟುಕೊಳ್ಳೋಣವಾ?"
"ಹದಿನಾಲ್ಕು ರಾತ್ರಿಯೇ ಆಗಬಹುದು. ಯಾರ್ಯಾರೆಲ್ಲ?"
"ನಾವೇ ನಾಲ್ಕು ಮಂದಿ ಸಾಕು.. ನಾನು, ನೀನು, ಶೀನ ಮತ್ತು ರಾಜ"
"ಎಲ್ಲಿ ಮಾಡೋಣ? ಏನು ಎರೇಂಜ್‌ಮೆಂಟ್?"
"ಶೀನನಿಗೆ ಫೋನ್ ಮಾಡಿ ಡಿಸೈಡ್ ಮಾಡಿ ಇ ವಿಲ್ ಕಾಲ್ ಬ್ಯಾಕ್"
***
"ಶೀನನ ಮನೆಯಲ್ಲಿ. ಅವನ ಪೇರೆಂಟ್ಸ್ ಊರಿಗೆ ಹೋಗಿದ್ದಾರೆ. ಡ್ರಿಂಕ್ಸ್ ರಾಜ ತರ್ತಾನೆ. ಸ್ನಾಕ್ಸ್ ನೀನು ತರಬೇಕು, ಸಿಗರೇಟು, ನೀಲಿ ಸಿ ಡಿ ನಾನು ತರುತ್ತೇನೆ. ಖರ್ಚು ಎಲ್ಲರಿಗೂ ಸರಿಯಾಗಿ ಪಾಲು ಗುರು.. ಒಂದು ದೊಡ್ಡ ಗಾಂಧಿ ಕಿಸೆಯಲ್ಲಿಟ್ಟುಕೋ"
"ಸರಿ.. ನಾಳೆ ಸಿಗೋಣ"

ಮೇರಾ ಭಾರತ್ ಮಹಾನ್

- ಗೋಪೀನಾಥ ರಾವ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 12:09pm — hpn

ಸ್ವಲ್ಪ ಹಳೆಯ ಜೆನರೇಶನ್ ಆಯ್ತು ;-)

hpn's picture

ಸ್ವಲ್ಪ ಹಳೆಯ ಜೆನರೇಶನ್ ಆಯ್ತು Eye-wink

ಈಗಿನವರದ್ದು ಟ್ರೆಕಿಂಗ್, ಡಿಸ್ಕ್, ಎಮ್ ಜಿ ರೋಡು ಸುತ್ತಮುತ್ತಲಿನ ಯಾವುದಾದರೂ ಪಬ್ಬು (ಸ್ವಾತಂತ್ರ್ಯ ದಿನದಂದು ತೆಗೆದಿದ್ದರೆ) ಇತ್ಯಾದಿ Smiling

ಹೀಗೆ ನಡೆದ ಸಂಭ್ರಮಾಚರಣೆ ಯಾವುದಾದರೂ ಪ್ರಸಿದ್ಧ ಪಬ್ಬಿನಲ್ಲಿ ನಡೆದ್ರೆ (ಹಿಂದಿನ ದಿನ, ಮುಂದಿನ ದಿನ ನಡೆದ್ರೂ) NDTV, CNN-IBN ನವರು "ಜಶ್ನ್ ಕಾ ಮಾಹೋಲ್" ಎಂದು ಕವರ್ ಮಾಡ್ತಾರೆ!

ಈಗಿನ ಜೆನರೇಶನ್ನಿನಲ್ಲಿ ಸಿಗರೇಟು ಸೇದುವವರು ಸ್ವಲ್ಪ ಕಡಿಮೆ ಅನ್ಸತ್ತೆ. ಮನೆಯಲ್ಲಿ ಪಾರ್ಟಿ ಕೂಡ ಕಡಿಮೇನೆ.
"ಬ್ಲೂ ಸಿ ಡಿ" ಮುಂಚಿನಂತಲ್ಲ, ಇಂಟರ್ನೆಟ್ ಇರೋದ್ರಿಂದ ಎಲ್ಲರಿಗೂ ಸುಲಭವಾಗಿ ಸಿಕ್ಕುಹೋಗತ್ತೆ.

--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 2:01pm — venkatesh

ಹೊಸ ಚಿಗುರು, ಹಳೆಯ ಬೇರು !

venkatesh's picture

ಇದನ್ನು ಎಷ್ಟು ಸೊಗಸಾಗಿ 'coin' ಮಾಡಿದ್ದಾರೆ ನೋಡಿ. ಅದನ್ನು ನಿಜವಾಗಿ ನಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು, ನಮ್ಮ ಕಿರಿಯರಿಗೆ ಚಿಕ್ಕವಯಸ್ಸಿನಲ್ಲೇ ಚೆನ್ನಾಗಿ ಅರೆದು ಕುಡಿಸಿದರೇನಾದರು ಪ್ರಯೋಜನವಾಗಬಹುದೇನೊ. ದೊಡ್ದವರಾದ ಮೇಲೆ ಅವರೆಲ್ಲಿ ಬಗ್ಗುತ್ತಾರೆ ಹೇಳಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 2:59pm — hpn

ಆಗಬಹುದು

hpn's picture

ಆಗಬಹುದು. ಆದರೆ ಹಳೆಯ ಬೇರು ಕೂಡ ದೃಢವಾಗಿರುವುದು ಮುಖ್ಯ Eye-wink
--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 4:10pm — hpn

ಕಗ್ಗದಲ್ಲಿ

hpn's picture

ಕಗ್ಗದಲ್ಲಿ ಆ ವಾಕ್ಯ ಹೀಗಿದೆ ನೋಡಿ:

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು |
ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ ||
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ |
ಜಸವು ಜನಜೀವನಕೆ -- ಮಂಕುತಿಮ್ಮ ||

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 16, 2006 - 11:13pm — venkatesh

ಕಗ್ಗದಲ್ಲಿ....

venkatesh's picture

ನನ್ನ ಬಳಿ ಇದರ 'ಪ್ರತಿ' ಇದೆ. ಅದರಲ್ಲಿ ಬರೆದಿರುವುದು ಅಕ್ಷರಶಃ ಸತ್ಯ. ಯಾವಾಗಲೂ ಹಿರಿಯ ಬೇರುಗಳು ಗಟ್ಟಿ ಮುಟ್ಟಾಗಿರುವುದು ಬಹಳ ಮುಖ್ಯ. ಅದನ್ನು ಯಾರೂ ತೆಗೆದು ಹಾಕುವಂತಿಲ್ಲ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 17, 2006 - 10:05am — Gopinath Rao

ಜನರೇಶನ್

Gopinath Rao's picture

ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ, ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಹೀಗಿತ್ತು.
ಈಗಲೂ ಸಣ್ಣ ಸಣ್ಣ ಪಟ್ಟಣಗಳಲ್ಲಿ ಇದೇ ಕತೆ. ಕಾರ್ಯಕ್ರಮ ಬದಲಾಗಿರಬಹುದು, ಅಲಕ್ಷ್ಯ ಅದೇ. ಈ ಅಲಕ್ಷ್ಯಕ್ಕೆ ಕಾರಣ ನಮ್ಮನ್ನು ನಾವು ಆಳಿಕೊಂಡು ಬಂದ ರೀತಿ. ಸರಕಾರಗಳಲ್ಲಿ ಕಂಡು ಬಂದ ನ್ಯೂನತೆಗಳು. ಸ್ವಾತಂತ್ರ್ಯ ಪಡೆದು ಅದೇನು ದೊಡ್ಡಕೆಲಸ ಮಾಡಿದ್ದಾರೆ ಎಂದು ಅರಿವಾಗದ ಕಟು ವಾಸ್ತವ.
ನಮ್ಮ ಹುಡುಗರು ಭಾರತದಿಂದ ಹೊರ ಬಂದು ನೋಡಿದರೆ ಮಾತ್ರ ಸ್ವಾತಂತ್ರ್ಯದ ನಿಜವಾದ ಪರಿಚಯವಾಗುತ್ತದೆ. ಅದರೊಂದಿಗೆ ಅದನ್ನು ಹೇಗೆ ಹಾಳು ಮಾಡಿಕೊಂಡಿದ್ದೇವೆ ಅನ್ನುವುದೂ ಸ್ಪಷ್ಟವಾಗುತ್ತದೆ!

-ಗೋಪೀನಾಥ ರಾವ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 22, 2006 - 10:35am — venkatesh

ಮೌಲ್ಯಗಳು ಎಂದರೆ......

venkatesh's picture

ಮೌಲ್ಯಗಳು ಸಾರ್ವಕಾಲಿಕವಾದವುಗಳು.ಕಾಲ ಕಾಲಕ್ಕೆ ಅದರ 'ಅಕ್ಕ-ಪಕ್ಕಗಳು' ಸ್ವಲ್ಪ ಬದಲಾಗಿರುವಂತೆ ಕಾಣಿಸುತ್ತವೆ. ಅವು ಒಂದು ತೊರೆಯ ತರಹ.ಅದು ಹರಿಯುವಾಗ ತನ್ನ ಪಾತ್ರವನ್ನು ಬದಲಾಯಿಸಿಕೊಳ್ಳುತ್ತಾ ಸಾಗುತ್ತದೆ. ಆದರೆ ಆ ಹಳ್ಳ ಅದರದೇ ಆದ ತನ್ನ ಪ್ರವೃತ್ತಿಯನ್ನು ಕಾಯ್ದಿಟ್ಟುಕೊಳ್ಳುತ್ತದೆ. ಈ ಗುಣವನ್ನು ನಾವು ಅದರ ಮೌಲ್ಯ ಎನ್ನಬಹುದು. ನಮ್ಮ ಹಿರಿಯರು ಪದೇ ಪದೇ ಹೇಳಿ, ಹೀಗೆ ಮಾಡಿದರೆ ಒಳ್ಳೆಯದು ಎಂದು ತಿಳಿಹೇಳಿದ್ದರು. ಏಕೆಂದರೆ ನಾವೇನೂ ಅದೇ ತಪ್ಪುಗಳನ್ನು ಮಾಡಿಯೇ ಕಲಿಯಬೇಕಾಗಿಲ್ಲ. ಈಗ, ವಿದ್ಯುತ್ ತಂತಿಯನ್ನು ಮುಟ್ಟಬೇಡ. ಅದು 'ಪ್ರಾಣಾಪಾಯಕಾರಿ' ಎಂದು ಅನುಭವಿಯೊಬ್ಬರು ಹೇಳಿದ ಮಾತು ನಮಗೆ ಸಾಕು. ಮುಟ್ಟಿ, ಆಸ್ಪತ್ರೆ ಸೇರಿ ಅದರ ಅನುಭವ ಪಡೆಯಬೇಕಿಲ್ಲ. ಅದರಂತೆಯ ಮಿಲಿಯಗಟ್ಟಲೆ ವರ್ಷಗಳ ಈ 'ಜೀವನವಾಹಿನಿ' ನಮಗೆ ಬೇಕಾದಷ್ಟು ವಿಚಾರಗಳನ್ನು ತಿಳಿಹೇಳಿದೆ. ಅವು ಮೌಲ್ಯಗಳಾಗಿರ ಬಹುದು. ಅದನ್ನು ಮೊದಲು ನಾವು ಪಾಲಿಸುವುದನ್ನು ಕಲಿಯಬೇಕು. ನಮಗೆ ಬುದ್ಧಿ ಬಂದ ಮೇಲೆ ಪರಿಶೀಲಿಸಿ ಅದರಬಗ್ಗೆ ನಿರ್ಣಯ ತೆಗೆದು ಕೊಳ್ಳುವುದು- ನಂತರ, ಸಾಕಷ್ಟು ಜ್ಞಾನಾರ್ಜನೆಯ ಬಳಿಕ !

ಕೆಲವು ನಾನು ಉದಾಹರಿಸಿದಂತೆ, "ಸ್ವಾತಂತ್ರ್ಯದಿನದ ಹಬ್ಬದ ದಿನ" -ನಮ್ಮ ಭಾರತಕ್ಕೆ ಪ್ರಾಣತ್ಯಾಗ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರುಗಳನ್ನು ನೆನೆಸಿಕೊಳ್ಳುವ ದಿನ- ಅದನ್ನೆ ಮರೆತಿದ್ದೇವೆ. ಅದನ್ನು ಮತ್ತೆ ಸ್ಥಾಪಿಸುವ ಕೆಲಸ ಹಿರಿಯರದು. ಹಿರಿಯರು ಸರಿ. ಕಿರಿಯರು ತಪ್ಪು ಎನ್ನುವ ಮಾತು ಬೇರೆ. ಕೆಲವು ಹಿರಿಯರು ಇನ್ನೂ ತಾವು, ಯುವಕರೆಂದು ನಕಲಿ ವೇಷ ಭೂಷಣ ಧರಿಸಿ 'ಕ್ಲಬ್' ಗಳಿಗೆ ಹೋಗುತ್ತಾರೆ. ಹದಿ ಹರೆಯ ಯುವತಿಯರ ಜೊತೆಗೆ 'ಮೊಜು ಮಸ್ತಿ' ಮಾಡುವುದನ್ನು ನಾನು ನೋಡಿದ್ದೇನೆ. ಇದು ತಪ್ಪು. "ಯಾರು ನೊಡ್ಲಿ ಎಂಜಾಯ್ ಮಾಡಿ ಸಾರ್ . ಹಳೆದೆಲ್ಲ ಮರಿರಿ", ಎಂದು ಹೇಳುವವರೆ. ಇವರ ಸಂಖ್ಯೆ ಜಾಸ್ತಿಯಾಗಿದೆ. ಅದು, ಈ ತರಹೆಯ 'ಮಾನಸಿಕ ವಿಕಾರ'ಗಳಿಗೆ ಕಾರಣ.

ಅಮೆರಿಕ, ಒಂದು ಜಾತ್ಯಾತೀತ, ವಲಸೆಗಾರರ ದೇಶ. ಬ್ರಿಟಿಷರ ಆಡಳಿತವನ್ನು ವಿರೊಧಿಸಿ ನಿರ್ಮಾಣಗೊಂಡ ಇನ್ನೊಂದು ಬಿಳಿಯರ ದೇಶ ವಾಗಿತ್ತು. ನಂತರ ಬಣ್ಣದ ಹುಚ್ಚು ಬಿಟ್ಟು ಈಗ ಹೊಸ ದಿಕ್ಕಿನಲ್ಲಿ ನಡೆಯುತ್ತಿದೆ. ಅಮೆರಿಕೆಯ ವಿಜ್ಞಾನದಲ್ಲಿನ ಅನುಸಂಧಾನ ಪರಂಪರೆ, ವಿಶ್ವಕ್ಕೆ ಮಾದರಿ. . ಅವರ ಕರ್ತವ್ಯ ಪರಾಯಣತೆ, ಸಮಯ ಪ್ರಜ್ಞೆ, ಕಷ್ಟಪಟ್ಟು ದುಡಿಯುವ ಮನೊಭಾವ, ವೈಚಾರಿಕತೆ,ಗಳನ್ನು ಕಲಿಯೊಣ.

ಅವರ ಸ್ವಚ್ಛಂದ ಪ್ರವೃತ್ತಿ, ಲೈಂಗಿಕತೆ, ಅತಿಯಾದ ಸ್ವಾತಂತ್ರ್ಯ ಚಿಕ್ಕಮಕ್ಕಳ ಸ್ತರದಲ್ಲೆ. ಇದು ಒಳ್ಳೆಯದಲ್ಲ. ಮಕ್ಕಳನ್ನು ಲಾಲನೆ ಪಾಲನೆಮಾಡಿ ಬೆಳೆಸಬೇಕು, ಹಿರಿಯರನ್ನು, ಬಲಹೀನರನ್ನು, ಸ್ತ್ರೀಯರನ್ನು, ಪ್ರೀತಿ, ಕರುಣೆಯಿಂದ ನೊಡಬೇಕು. ಮದುವೆ ಒಂದು ದೊಡ್ದ 'ಜೀವನ ಸ್ಥರದ ಸಂಸ್ಥೆ'. ಇದನ್ನು 'ನಿಭಾಯಿಸ' ಬೇಕು. ಈ ಪದ ಅತಿ ಮುಖ್ಯ ! ಇವೆಲ್ಲಾ 'ಮೌಲ್ಯದ ಚೌಕಟ್ಟಿ'ನಲ್ಲಿಯೆ ಬರುವಂತಹವು !

ಇದನ್ನು ನಾವು ತಿಳಿದು, ನಮ್ಮ ಜೀವನಕ್ಕೆ ತಕ್ಕಂತೆ ಅಳವಡಿಸಿಕೊಳ್ಳಬೇಕು. ವಿದೇಶಕ್ಕೆ ಹೋಗಬೇಡಿ ಎಂದು ಯಾರು ಹೇಳುತ್ತಾರೆ ? ಕಲಿತುಬನ್ನಿ. ಹಾಳಾಗಿ ಬರಬೇಡಿ. ನಮ್ಮ ದೇಶ, "ಭಾರತೀಯ ಸಂಸ್ಕೃತಿ"ಗೆ ಹೆಸರುವಾಸಿಯಾಗಿದೆ. ಅದನ್ನು ಅವರಿಗು ಕಲಿಸಿ ಬನ್ನಿ. ಅವರುಗಳು ಇಲ್ಲೆಗೆ ಏಕೆ ಬರುತ್ತಾರೆ ? ಸ್ವಲ್ಪ ಯೋಚಿಸಿ !!

ನನ್ನ ಮಗ 'ಇನ್ಫೊಸಿಸ್' ಕಂಪನಿಯ ವತಿಯಿಂದ ಅಮೆರಿಕಕ್ಕೆ, ಹೋದ ತಿಂಗಳು ಹೊಗಿದ್ದಾನೆ. ಇದೇ ಪಾಠವನ್ನು ನಾನು ಮತ್ತು ಅವನ 'ತಾಯಿ' ಹೇಳಿ ಕಳಿಸಿದ್ದೇವೆ. "ಅವನು ನಮ್ಮನ್ನು ನಿರಾಶೆ ಮಾಡಲ್ಲ " ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಏಕೆ ಹೇಳಿ- ಆ 'ಮೌಲ್ಯ'ಗಳು ಅವನನ್ನು ಸುಮ್ಮನೆ ಬಿಟ್ಟಾವೆ ?
ಅದೂ ಅವನು ಕೆಲಸ ಮಾಡ್ತಾ ಇರೊದು ಯಾರ ಕೈಕೆಳಗೆ ? ಭಾರತದ ಮಹಾನ್ 'ಸಾಫ್ಟ್ವೇರ್ ಇಂಜಿನಿಯರ್ ' ಡಾ.ನಾರಾಯಣ ಮುರ್ತಿಯವರ ಹತ್ತಿರ ! ಅದೊಂದು ಸುಯೊಗ ಹಾಗೂ ಸನ್ಮಾನ ಅಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2007 - 7:02pm — thewiseant

ಉ: ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !

thewiseant's picture

ಪ್ರೀತಿಯ ಸರ್,
ನಿಮ್ಮ ಬರಹ ಓದಿದೆ. ಈಗಿನ ಸಮಯದಲ್ಲಿ ಯುವಜನತೆ ಹಾಗೂ ಮಕ್ಕಳು ಸ್ವಾತಂತ್ರ ಹೋರಾಟಗಾರರ ಬಗ್ಗೆ ತುಂಬಾ ತಿಳಿದುಕೊಂಡಿಲ್ಲ. ಆ ಮಹಾನ್ ನಾಯಕರ ಬಗ್ಗೆ ಹೇಳಬೇಕಾದವರೂ ಸಹ ತಮ್ಮ ಕರ್ತವ್ಯವನ್ನು ಪಾಲಿಸುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಅವರಲ್ಲಿ ಇದ್ದಿರಬಹುದಾದ ನ್ಯೂನತೆಗಳಿಗೆ ಪ್ರಚಾರ ಕೊಟ್ಟು ತಾವು ದೊಡ್ಡ ಮನುಷ್ಯರೆನಿಸಿಕೊಳ್ಳ ಬಯಸುತ್ತಾರೆ. ಗಾಂಧಿ, ನೆಹರು,ಪಟೇಲ್ ಮುಂತಾದ ನಾಯಕರು ಹಾಗು ನಾವು ಅಹಿಂಸಾ ಮಾರ್ಗದಲ್ಲಿ ಪಡೆದ ಸ್ವಾತಂತ್ರ್ಯ ಯಾವುದೇ ವ್ಯಕ್ತಿ ಹೆಮ್ಮೆ ಪಡುವಂತಹುದು. ಆ ಮಹಾನ್ ಚೇತನಗಳು ತೋರಿಸಿಕೊಟ್ಟ ಹಾದಿಯಲ್ಲಿ ಮುಂದುವರೆದು ದೇಶದ ಪ್ರಗತಿಯಲ್ಲಿ ಭಾಗಿಯಾಗೋಣ. ಈ ದಿಕ್ಕಿನಲ್ಲಿ ನಿಮ್ಮ ಈ ಬರಹ ತುಂಬಾ ಪ್ರಯೋಜನಕಾರಿ. ವಂದನೆಗಳು

ಎನ್. ಅಂಜನ್ ಕುಮಾರ್
thewiseant@yahoo.co.in

yahoo messenger ನಲ್ಲೂ ಲಭ್ಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 25, 2007 - 5:30am — venkatesh

ಉ: ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !

venkatesh's picture

ಕುಮಾರ್,

ಒಟ್ಟಿನಲ್ಲಿ ನಮ್ಮ ಯುವಜನರಿಗೆ ಏನೋ ಹೇಳಲೇಬೇಕೆಂದು ನನಗೆ, ಆಸೆಯಗಿತ್ತು. ನಿಮ್ಮಂತಹ ಒಬ್ಬ ನಿಷ್ಠ ವ್ಯಕ್ತಿ ಸಿಕ್ಕಿದ್ದು, ಸಂತೋಷಕರ ! ನೋಡಿ ಸರ್. ಜುಲೈ ೪, ಬಂತೆಂದರೆ, ಅಮರಿಕನ್ನರಿಗೆ ಎಂಥ ಹೆಮ್ಮೆ !
ಅದು ನಮಗೆ ಯಾಕ್ಬರ್ತಿಲ್ಲ ?

ಯುದ್ಧವಿಲ್ಲದೆ, ಬಲಿಷ್ಠರನ್ನು ಓಡಿಸಿದ್ದು ಸಾಮಾನ್ಯವೇ ? ಮೇಲಾಗಿ ನಮ್ಮದೇಶ ಆಫ್ರಿಕಾದಂತೆ ಹರಿದು ಹಂಚಿಹೋಗದೆ, ಸುಸ್ಥಿತಿಯಲ್ಲಿದೆ.

ಉದಾ : ಮಹರಾಷ್ಟ್ರದೇಶ, ತಮಿಳುನಾಡುದೇಶ, ಬಂಗಾಳದೇಶ ಈ ತರಹ. ಈ ಮಹತ್ತರ ಬದಲಾವಣೆಯನ್ನು ನಾವು, ನಮ್ಮಮಕ್ಕಳು ಗುರುತಿಸಿ ಮೆಚ್ಚುವುದು ಎಂದು. ಆಗಸ್ಟ, ನಲ್ಲಾದರೂ ಬೇಡವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !
  • ಗಾಂಧಿ ನೆನಪು -೧
  • ೧೯೪೨ ರ ಆಗಸ್ಟ್ ೮ ರಂದೇ 'ಕ್ವಿಟ್ ಇಂಡಿಯ ಆಂದೋಳನ' ಬೊಂಬಾಯಿನ ಗೊವಾಲಿಯ ಟ್ಯಾಂಕ್ ಬಳಿ ಶುರುವಾಗಿದ್ದು !
  • ನೆನೆಮನ, ನೆನೆ, ಆ ಸುದಿನವ !
  • ರಾಷ್ಟ್ರೀಯತೆ ಎಂಬುದು ಪ್ರಧಾನವಾಗಿ ಸಂಸ್ಕೃತಿ ಆಧಾರಿತವಾದುದು
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 11 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator