ಕ್ಯಾಮೆರದಲ್ಲಿ ರಾಮನಗರ
ರಾಮನಗರ ಪ್ರಕೃತಿ, ಇತಿಹಾಸ ಇವೆರಡರಲ್ಲೂ ವಿಸ್ಮಯ ಹುಟ್ಟಿಸುವ ಊರು. ಅದಕ್ಕೇ ಇರಬಹುದು ಬಹುಶಃ ಹಿಂದಿಯ "ಶೋಲೇ", ಇಂಗ್ಲೀಷಿನ "A passage to India" ಹಾಗು ಇನ್ನೂ ಹಲವು ಸಿನಿಮಾಗಳಲ್ಲಿ ವಿಶ್ವದಾದ್ಯಂತ ವೀಕ್ಷಿಸಲ್ಪಟ್ಟ ಕೆಲವು ದೃಶ್ಯಗಳಿಗೆ ಹಿನ್ನೆಲೆ ಇದೇ ಊರಿನ ಬೆಟ್ಟಗಳು! ಅಲ್ಲಿ ತೆಗೆದ ಕೆಲವು ಫೋಟೋಗಳು ಇಲ್ಲಿವೆ:
- Login or register to post comments
- 476 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಎರಡನೆಯ ಫೋಟೋ, ಮುದಿ ಸಿ೦ಹವೊ೦ದು ಮರಕ್ಕೆ ಮುತ್ತಿಡುತ್ತಿರುವ೦ತಿದೆ :)
ವಿನುತ,
ನಿಮ್ಮ ಕಲ್ಪನೆ ಚೆನ್ನಾಗಿದೆ.
ನೀವು ಬರೆದ ಪ್ರತಿಕ್ರಿಯೆ ನೋಡಿ, ಚಿತ್ರದಲ್ಲಿ ಸಿಂಹವನ್ನು ಹುಡುಕುತ್ತಿದ್ದೆ. :)
-ಅನಿಲ್
ಛಾಯಾಚಿತ್ರಗಳು ತು೦ಬಾ ಚೆನ್ನಾಗಿವೆ. ಬ೦ಡೆಸಾಲುಗಳ ನಡುವೆ ನೀರಿನ ಹರಿವು, ಹಸಿರು ಹೊದ್ದ ಗುಡ್ಡಗಳು ಮನಸೂರೆ ಗೊಳ್ಳುತ್ತವೆ, ಎ೦ತಹ ಅರಸಿಕನನ್ನು ಸೆಳೆಯುವ೦ತಿವೆ. ಕವನ ಬರೆಯಲು ಪ್ರೇರೇಪಿಸುವ೦ತಿವೆ, ನಿಮ್ಮ ಫೋಟೋಗಳು.
ಕವನ ಬರೀರಿ ಮತ್ತೆ! :)
ಅನಿಲ್,
ಸಿ೦ಹ ಸಿಕ್ಕಿತಾ? :) (ಬ೦ಡೆಯ ತುದಿ ನನಗೆ ಈಗಲೂ ಹಾಗೇ ಕಾಣಿಸುತ್ತಿದೆ :( )
ಹಾ ಸಿಂಹ ಕಾಣಿಸ್ತು :)
-ಅನಿಲ್
ಒಳ್ಳೆಯ ಕಲ್ಪನೆ :-)
ಯಾರ ಕಣ್ಣಿಗೂ ಕಾಣದ್ದು capture ಮಾಡಲು ಪ್ರಯತ್ನಿಸುವುದು, ಹಾಗೆ ನಡೆಸಿದ ಪ್ರಯತ್ನ ಅಲ್ಲಿ ಕ್ಯಾಮೆರಾ ಹಿಡಿದವಗೆ ಕಂಡದ್ದಕ್ಕಿಂತ ಹೆಚ್ಚಿನದನ್ನು ದೃಶ್ಯದಲ್ಲೆಳೆಯುವುದು ಬಹಳ ಖುಷಿ ಕೊಡುವ ಸಂಗತಿ. ಅದಕ್ಕೆ ಕಲಾತ್ಮಕ ರೂಪ ತಂದುಕೊಟ್ಟುಬಿಡುತ್ತದೆ :-)
ದೇವಸ್ಥಾನದ ಹಿಂದುಗಡೆಯಿಂದ ಹೋದ್ರೆ, ದೊಡ್ಡದಾದ ಬಂಡೆ ಏರ್ಬೊದು .... ಬಂಡೆಲೇ ಕೊರೆದು ಸ್ಟೆಪ್ಸ್ ತರ ಮಾಡಿದಾರೆ ... ಒಂಥರ ಥ್ರಿಲ್ ಬರುತ್ತೆ ಆ ಬಂಡೆ ಏರ್ಬೆಕಾದ್ರೆ ...... ಫೊಟೊಗಳು ಚೆನ್ನಾಗಿವೆ :)
ಹೌದು.
ದೇವಾಲಯದ ಹಿಂಬದಿಯಲ್ಲಿರುವ ಬಂಡೆಯನ್ನು ಏರಿದೆವು.
>>ಬಂಡೆಲೇ ಕೊರೆದು ಸ್ಟೆಪ್ಸ್ ತರ ಮಾಡಿದಾರೆ
ಅವು ಮೆಟ್ಟಿಲುಗಳು.
>>ಒಂಥರ ಥ್ರಿಲ್ ಬರುತ್ತೆ ಆ ಬಂಡೆ ಏರ್ಬೆಕಾದ್ರೆ
ನಿಜ. ಥ್ರಿಲ್ ಅಂತೂ ಆಯ್ತು. :)
-ಅನಿಲ್
ಆ ಬಂಡೆ ಹತ್ತಿದ್ವು. ದೇವಸ್ಥಾನದ ಬಲ ಬದಿ... ಹಿಂಬದಿಯಿರಲಿಕ್ಕಿಲ್ಲ.