20
June
2013

ಸದಸ್ಯರ ಗಮನಕ್ಕೆ: ತಾಂತ್ರಿಕ ತೊಂದರೆಗಳ ಬಗ್ಗೆ ಮಾಹಿತಿ

June 21, 2009 - 6:03am
ನಿರ್ವಹಣೆ
ಟ್ರಾಫಿಕ್ ಹೆಚ್ಚಿರುವ ಕಾರಣ 'ಸಂಪದ'ದಲ್ಲಿ ಶನಿವಾರ ಸಾಯಂಕಾಲದಿಂದ ಕೆಲವು ಅಷ್ಟೇನೂ ಗಂಭೀರವಲ್ಲದ ತಾಂತ್ರಿಕ ತೊಂದರೆಗಳು ಕಂಡುಬಂದಿದ್ದು ಅದನ್ನು ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪುಟಗಳನ್ನು ಲೋಡ್ ಮಾಡುವಾಗ ತೊಂದರೆಗಳು ಕಂಡುಬಂದಲ್ಲಿ ದಯವಿಟ್ಟು moderation@sampada.net ವಿಳಾಸಕ್ಕೆ ಒಂದು ಇ-ಮೇಯ್ಲ್ ಕಳುಹಿಸಿ. ನಿಮಗೆ ಕಾಣಿಸುತ್ತಿರುವ ಎರರ್ ಮೆಸೇಜ್ ಕೂಡ ಸಾಧ್ಯವಾದಲ್ಲಿ ಕಳುಹಿಸಿಕೊಡಿ. ಈ ತಾಂತ್ರಿಕ ತೊಂದರೆಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ ಎನ್ನುವುದನ್ನು ಬಿಟ್ಟರೆ ಮತ್ತೇನೂ ಭಯವಿಲ್ಲ. ಸಂಪದದ ಸಂಪೂರ್ಣ data ಬ್ಯಾಕಪ್ ಮೂಲಕ ಸುರಕ್ಷಿತವಾಗಿದೆ. ಆದರೆ ಇಂದು ಭಾನುವಾರದಂದು ಕೂಡ ಮತ್ತೆ ಟ್ರಾಫಿಕ್ ಹೆಚ್ಚಾದಲ್ಲಿ ಈ ರೀತಿಯ ತೊಂದರೆಗಳು ಮತ್ತೆ ಕಾಣಿಸಿಕೊಳ್ಳಬಹುದು. ಹಾಗೆ ಆದಲ್ಲಿ ಅದನ್ನು ಸರಿಪಡಿಸಲಾಗುವುದು. 'ಸಂಪದ' ಬಳಸುವಲ್ಲಿ ಓದುಗರಿಗೆ ಇದರಿಂದಾಗುತ್ತಿರುವ ತೊಂದರೆಗಾಗಿ ಕ್ಷಮೆಯಿರಲಿ.
ಲೇಖನ ವರ್ಗ (Category): 
Average: 4.5 (6 votes)
To prevent automated spam submissions leave this field empty.