24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕೊಲೆಯಾಗದ ಪ್ರೀತಿ

June 23, 2009 - 1:31am
subbusullia
ನಿಂತಿದ್ದೇನೆ ಕೈಯಲ್ಲಿ ಕೊಳ್ಳಿ ಹಿಡಿದು , ಮಾಡಿ ನನ್ನ ಪ್ರೀತಿಯ ಅಂತ್ಯ ಸಂಸ್ಕಾರ ಹೊತ್ತಿ ಉರಿಯುತ್ತಿದೆ ಪ್ರೀತಿ ಕಣ್ಣೆದುರಲ್ಲೇ ಸತ್ತು ಹೋಗುತ್ತಿದೆ ಹೃದಯ ನನ್ನೆದೆಯೊಳಗೆ ವಿಲಗುಡುತ್ತಿದೆ ಪ್ರೀತಿ ಅಗ್ನಿ ಕೆನ್ನಾಲಿಗೆಯಲಿ ಮರುಗುತ್ತಿದೆ ಕೊಳ್ಳಿ ಹಿಡಿದು ಹೃದಯ ನನ್ನೆದೆಯಲ್ಲಿ ಹೇಗೆ ತೆಗೆಯಲಿ ಹೊರಗೆ , ಪ್ರೀತಿ ಅವಳಿಗೆ ಬೇಕಾಗಿಲ್ಲ ಆದರು ಪ್ರೀತಿ ನೀ ಯಾಕೆ ಸಾಯುತ್ತಿಲ್ಲ..? ಅವಳೊಂದಿಗೆ ಕಳೆದ ಮಧುರ ಕ್ಷಣ ಓಡಾಡಿದ ನಲಿದಾಡಿದ ದಿನ ಕಟ್ಟಿಕೊಂಡಿದ್ದ ಕಲ್ಪನೆಯ ಮೂಟೆ ಹರಿದು ಹೋಗಿದೆ ಈಗ ಎಲ್ಲಾ ನನಸಾಗದ ಕನಸು ಕುಳಿತು ನನ್ನ ಪ್ರೀತಿಯ ಚಿತೆಯ ಅವಶೇಷದ ಮುಂದೆ ಕೆದಕ್ಕುತಿದ್ದೇನೆ , ಬರೀ ಬೂದಿ ಇನ್ನೇನು ಉಳಿದಿಲ್ಲ ಇಲ್ಲ !! ಅಲ್ಲೇನೋ ಮಿಸುಕಾಟ !!!! ಅಯ್ಯೋ . . ಇನ್ನೂ ಉಸಿರಾಡುತಿದೆ ಪ್ರೀತಿ ಬೆಂದು ಹೋಗಿ. ಕ್ಷಮಿಸು ಹುಡುಗಿ , ಸೋತು ಹೋಗಿರುವೆ ನಾ ಬಸವಳಿದು ಕುಳಿತಿರುವೆ ನಾ ಸಾಧ್ಯವಾಗುತ್ತಿಲ್ಲ ನನಗೀ ಪ್ರೀತಿಯ ಕೊಲೆ ... -ಸುಬ್ಬು http://selaku.blogsp...
ಲೇಖನ ವರ್ಗ (Category): 
No votes yet
To prevent automated spam submissions leave this field empty.