POST content binary ಅಂತ ಹೇಗೆ ಕಂಡುಹಿಡಿಯುವ ಬಗೆ
ಈಗ GET ಮತ್ತು POST ಸಾಮಾನ್ಯವಾಗಿ ಬಳಕೆಯಾಗುವ HTTP REQUEST METHODಗಳು. http Request methodಉ POST ಆಗಿದ್ದಾಗ ಕೆಲವೊಂದು ಅಗತ್ಯ ರಿಕ್ವೆಸ್ಟ್ ಹೆಡರುಗಳು ಮತ್ತು POST BODY ಸರ್ವರ್ರಿಗೆ ಹೋಗುತ್ತದೆ. ಈ POST BODY ಬಂದ್ಬಿಟ್ಟು, BINARY ಅತ್ವಾ ಕ್ಲಿಯರ್ ಟೆಕ್ಸ್ಟ್ ASCII ರೂಪದಲ್ಲಿ ಹೋಗಬಹುದು.
ನಮ್ಮದು ಒಂದು ಫೈರ್ಫಾಕ್ಸ್ ಪ್ಲಗಿನ್ ಇದೆ, ಅದು ನೆಟ್ವರ್ಕಿನ ಮೂಲಕ ಆಗುತ್ತಿರುವ ರಿಕ್ವೆಸ್ಟ್ ರೆಸ್ಪಾನ್ಸುಗಳನ್ನು ಹಿಡಿದಿಟ್ಟುಕೊಳ್ತಾ ಇರತ್ತೆ. ಈ POST BODYಯನ್ನು ಕೂಡ ನಾವು ಹಿಡಿದಿಟ್ಟುಕೊಳ್ತಾ ಇರ್ತೀವಿ. ನಾವು ಸುಮಾರು ದಿನಗಳಿಂದ ಜಾವಾಸ್ಕ್ರಿಪ್ಟಿನ ಮೂಲಕ POST BODYಯ CONTENTಉ BINARYನ ಅಲ್ವಾ ಅಂತ ಹೇಗೆ ಕಂಡುಹಿಡಿಯೋದು ಅಂತ ತುಂಬಾ ದಿನಗಳಿಂದ ತಲೆಚಚ್ಚೋತಾ ಇದ್ವಿ. ಆಮೇಲೆ ತಿಳಿಯಿತು.
೧. nsIMimeInputStream ಅಂತ ಇದೆ. MIME ಎಂದರೇನು ಎಂಬುದನ್ನು ತಿಳಿಯಲು ಇಲ್ಲಿಗೆ ಎಡತಾಕಿ. http://www.hunnysoft...
ಒಂದು ವೇಳೆ ಒಂದು stream ಅನ್ನು nsiMimeInputStream ಆಗಿ ಪರಿವರ್ತಿಸಲು ಸಾಧ್ಯವಾಗುವುದಾದರೆ ಅದು ascii ಅಂತ ತಿಳಿಯಬಹುದು. ಏಕೆಂದರೆ mimeInputStreamನಲ್ಲಿ ಕೇವಲ text ಮಾತ್ರವೇ ಇರಬೇಕು ಎಂಬುದಾಗಿ specs ತಿಳಿಸುತ್ತದೆ.
೨. ಕೆಲವೊಂದು ವೇಳೆ, imageಅನ್ನು upload ಮಾಡುವಾಗ ಏನಾಗುತ್ತದೆ ಎಂದರೆ, multipart POST body, ಮೂಲತಃ binary ಆಗಿಯೇ ಇದ್ದರೂ, ೧ನೇ ವಿಧಾನ ಫೇಯ್ಲ್ ಆಗುತ್ತದೆ. ಆಗ ಒಂದು DOMParser ಬಳಸಿ POST data binary ಹೌದಾ ಅಲ್ವಾ ಪರೀಕ್ಷಿಸಬಹುದು.
ಇನ್ನೂ ಅನೇಕ ವಿಧಾನಗಳುಂಟು, ಪ್ರತಿಯೊಂದು ಬೈಟಿನ int value < 127 ಇದೆಯಾ ಅಂತೆಲ್ಲ ನೋಡಬಹುದು. ಆದರೆ ನನಗೆ ಈ ಮೇಲಿನ ಎರಡು ವಿಧಾನಗಳು ಪರ್ಫೆಕ್ಟ್ ಚಾಯ್ಸ್ ಆಗಿವೆ.
- Login or register to post comments
- 208 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಇಷ್ಟೊತ್ತು.. ಇದೆ GET, POST ಮಧ್ಯೆ ಒದ್ದಾಡಿ.. ಸಂಪದ ತೆಗೆದರೆ ಮತ್ತೆ ಇದೆ ನಾ?????
ದೇವರೇ.. ಕಾಪಾಡಪ್ಪಾ......
ಬರಹದ ಮಾಹಿತಿ ಚನ್ನಾಗಿದೆ.... :-)
ಉತ್ತಮ ಮಾಹಿತಿ. ಆದರೆ ಸುಮಾರು ಓದುಗರಿಗೆ ಇದು ತಲೆಯ ಮೇಲೆ ಹಾರಿ ಹೋಗುವ ಮಾಹಿತಿಯಾಗಲಿಕ್ಕೂ ಸಾಕು :-)
MIME ಕುರಿತು ವಿಕಿಪೀಡಿಯ ಪುಟ ಕೂಡ ನೋಡಬಹುದು:
http://en.wikipedia....
ಪಾಂಡಿತ್ಯಪೂರ್ಣ ಆಗಿದೆ ( ನನಗೆ ತಿಳಿಯಲಿಲ್ಲ !)
ಶುರುವಿನಿಂದ ಸರಳವಾಗಿ ಹೇಳಿಕೊಡ್ರಿ . ಇದೆಲ್ಲ ಏನು ? ಏತಕ್ಕೆ ಎಲ್ಲಿ ಉಪಯೋಗ ? ಅಂತ !.