ಈಗಿನಂತೆ 3 ಸದಸ್ಯರು ಮತ್ತು 71 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕೃಷಿ ಸಂಪದ ಆರನೇ ಸಂಚಿಕೆ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
28
Mar
2010
ಪುಟ

ಈ ಸಂಚಿಕೆಯಲ್ಲಿ:

...

ಪ್ರತಿಕ್ರಿಯೆಗಳು: 0
ಹಿಟ್ಸ್ : 967
ಬೀchi ಜೋಕುಗಳು (೧೦): ಹಾಸ್ಯ ಬ್ರಹ್ಮರ ಇನ್ನೂ ಕೆಲವು ಜೋಕುಗಳು
makara's picture
ಶ್ರೀಧರ್ ಬಂಡ್ರಿ
07
Nov
2011
ಲೇಖನ

                        ...

ಪ್ರತಿಕ್ರಿಯೆಗಳು: 16
ಹಿಟ್ಸ್ : 472
’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!
anilkumar's picture
ಎಚ್.ಎ. ಅನಿಲ್ ಕುಮಾರ್
21
Jun
2010
ಬ್ಲಾಗ್ ಬರಹ

(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 933
ಮನಸ್ಸು
deepak dhananjaya's picture
08
May
2006
ಪುಟ
... ಇದು ನನಗೆ ತಿಳಿಯದು.. ತಿಳಿಯುವ ಕುತೂಹಲವಿದೆ.. ನಮ್ಮ ದೇಹವನ್ನು ಸಂಪೂರ್ಣ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿ ಅದಕ್ಕಿದೆ... "ಹೇಗಿರುತ್ತದೆ ಮನಸ್ಸು?" ಇದು ನನ್ನ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,571
ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ
Narayana's picture
Narayana
02
Mar
2011
ಬ್ಲಾಗ್ ಬರಹ

 

ಪಾಚಿ ಕಟ್ಟಿದ ಪಾಗಾರ: ...
ಪ್ರತಿಕ್ರಿಯೆಗಳು: 6
ಹಿಟ್ಸ್ : 651
ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)
srikanth's picture
22
May
2006
ಪುಟ
ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ...
ಪ್ರತಿಕ್ರಿಯೆಗಳು: 8
ಹಿಟ್ಸ್ : 2,830
‘ಬಿಳಿ ಹುಬ್ಬಿನ ಬೀಸಣಿಗೆ ಬಾಲದ ಕೀಟ ಭಕ್ಷಕ’ ಭಾಗವತರಿಗೆ `ಸಾಯೋಣಾರಾ' ಹೇಳಿದಾಗ..!
harshavardhan v.sheelavant's picture
harshavardhan v. sheelavant
23
Jun
2010
ಪುಟ

...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,108
ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
13
Aug
2006
ಪುಟ
ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ...
ಪ್ರತಿಕ್ರಿಯೆಗಳು: 12
ಹಿಟ್ಸ್ : 1,844
ಬದುಕಿದ್ದರೆ ಎಂಭತ್ತು ವಸಂತಗಳನ್ನು ಪೂರೈಸಲಿದ್ದ ಶಮ್ಮಿ
H A Patil's picture
ಹನುಮಂತ ಪಾಟೀಲ
22
Oct
2011
ಲೇಖನ

    ಅಕ್ಟೋಬರ್ ೨೧ ಅನೇಕ ಐತಿಹಾಸಿಕ ಘಟನೆಗಳನ್ನು ತನ್ನ ಒಡಲಾಳದಲ್ಲಿ ಇರಿಸಿ ಕೊಂಡಿದೆ. ಈ ದಿನದಂದು ೧೭೭೨ ರಂದು ಇಂಗ್ಲೀಷ್ ಕವಿ ಸ್ಯಾಮೆವೆಲ್...

ಪ್ರತಿಕ್ರಿಯೆಗಳು: 10
ಹಿಟ್ಸ್ : 122
ಬೇಕಾಗಿದ್ದಾರೆ-ಸೋಮಾರಿಗಳು : ಸುಮ್ಮನೆ ಮಲಗುವುದೇ ಕೆಲಸ
arshad's picture
Arshad
24
Jan
2010
ಬ್ಲಾಗ್ ಬರಹ
ಈಗ ಸೋಮಾರಿಗಳಾಗಿ ಮಲಗುವುದೇ ಒಂದು ಉದ್ಯೋಗವಾಗಿ ಮಾರ್ಪಟ್ಟಿದೆ. ಏನು? ಸುಮ್ಮನೇ ಮಲಗುವುದೂ ಒಂದು ಉದ್ಯೋಗವೇ? ಹೌದು, ಹಾಲಿಡೇ ಇನ್ ಸಹಿತ ವಿಶ್ವದ ಹಲವು ಪ್ರತಿಷ್ಠಿತ ಹೋಟೆಲುಗಳು ಈ...
ಪ್ರತಿಕ್ರಿಯೆಗಳು: 4
ಹಿಟ್ಸ್ : 1,272

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಜಪಾನಿನ ಚಕ್ರವರ್ತಿ ನಾಳೆ ಹುಟ್ಟುವನೇ?

ಜಪಾನಿನ ಚಕ್ರವರ್ತಿ ನಾಳೆ ಹುಟ್ಟುವನೇ?

ಗೆಳೆಯರೇ, ಜಪಾನಿನಲ್ಲಿ ಈಗಿನ ರಾಜಕಾರಣ ರಂಗೇರುತ್ತಿದೆ. ಈಗಿನ ಪ್ರಧಾನ ಮಂತ್ರಿ ಜುನ್‍ಇಚಿರೊ ಕೊಇಜುಮಿ ನಂತರದ ಪ್ರಧಾನಿ ಅಭ್ಯರ್ಥಿಯನ್ನು ಆರಿಸಲು ಆಡಳಿತಾರೂಢ ಜಿಮಿಂತೋ [ಸ್ವತಂತ್ರ ಪ್ರಜಾಪ್ರಭುತ್ವವಾದೀ ಪಕ್ಷ] ಇನ್ನಿಲ್ಲದ ಹರಸಾಹಸ ಮಾಡುತ್ತಿದ್ದರೂ, ಹಿರಿಯ ತಲೆಗಳಾದ ಮೂವರಲ್ಲಿ ಯಾರು ಕುರ್ಚಿ ಹಿಡಿಯುವರೆಂಬ ಜಿಜ್ಞಾಸೆ ಎಲ್ಲರಲ್ಲಿ ಮೂಡತೊಡಗಿದೆ. ಆ ತ್ರಿಮೂರ್ತಿಗಳೇ - ಶಿಂಜೋ ಅಬೆ(ಮುಖ್ಯ ಕಾರ್ಯದರ್ಶಿ), ಸದಕಜು ತನಿಗಕಿ(ಅರ್ಥ ಮಂತ್ರಿ), ತರೊ ಅಸೊ(ವಿದೇಶಾಂಗ ಮಂತ್ರಿ). ಈ ಮುನ್ನ ಇವರೆಲ್ಲರಿಗಿಂತ ಹಿರಿಯರಾಗಿದ್ದು ಜಪಾನಿನ ಇತಿಹಾಸದಲ್ಲೇ ದಾಖಲೆ ಅವಧಿಯ ಮುಖ್ಯ ಕಾರ್ಯದರ್ಶಿಯಾಗಿದ್ದ ಯಾಸುಓ ಫುಕುದ ಕೂಡ ಸ್ಪರ್ಧೆಯಲ್ಲಿದ್ದರೂ, ಜುಲೈ ೩೧ ರಂದು ತಾವಾಗಿಯೇ ಹಿಂದೆ ಸರಿದರು. ಆರೋಗ್ಯ ಹಾಗೂ ವಯಸ್ಸಿನ ಕಾರಣ ನೀಡಿದರೂ, ಅವರ ಮುಖದಲ್ಲಿ ಅತೃಪ್ತಿ ಎಲ್ಲರಿಗೂ ಕಾಣದಿರಲಿಲ್ಲ! ಎಲ್ಲರ ಕಣ್ಣೂ 'ಅಬೆ'ಯವರ ಮೇಲೆಯೇ ಇದ್ದು, ಅವರೇ ಮುನ್ನುಗ್ಗುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ೨೦೦೬ದಲ್ಲಿ ನಿವೃತ್ತಿ ಹೊಂದುವ ಆಸೆ ವ್ಯಕ್ತಪಡಿಸಿದ ಕೊಇಜುಮಿಯವರು ಮುಂದಿನ ಪ್ರಧಾನಿಗೆ ಕುರ್ಚಿಯ ಜೊತೆಗೆ ಸಂಕಟಗಳನ್ನೂ ಸಂದಿಗ್ಧಗಳನ್ನೂ ಬಳುವಳಿಯಾಗಿ ನೀಡಲಿದ್ದಾರೆ: ಯಾಸುಕುನಿ ಮಂದಿರದ ವಿವಾದ, ಉತ್ತರ ಕೊರಿಯಾದಿಂದ ಅಪಹೃತರ ಸಮಸ್ಯೆ, ಅಂಚೆಯ ಖಾಸಗೀಕರಣದ ತಲೆನೋವು, ಹಿರಿಯ ನಾಗರಿಕರ ವಾರ್ಷಿಕ ನಿಧಿಯ ಫಜೀತಿ, ಸಮುದ್ರದೊಳಗಿಂದ ತನ್ನ ತೈಲವನ್ನೆಲ್ಲಾ ಹೀರುತ್ತಿರುವ ಚೀನಾದ ಸಮಸ್ಯೆ, ದಕ್ಷಿಣ ಕೊರಿಯಾದ ಗಡಿದ್ವೀಪ ಸಮಸ್ಯೆ, ರಷಿಯಾದಿಂದ ಹಿಡಿಯಲ್ಪಟ್ಟ ಬೆಸ್ತರ ಬಿಡುಗಡೆಯ ಜವಾಬ್ದಾರಿ, ನಡುನೀರಿನಲ್ಲಿ ಕೈಬಿಡುವಂತೆ ಕಾಣುವ ಅಮೆರಿಕದ ಬಿಗಿಹಿಡಿತ!......ಒಂದೇ ಎರಡೇ.. ಇನ್ನೂ ಇವೆ! ಹೀಗಿರುವಾಗ ಮತ್ತೊಂದು ತಲೆನೋವು ಹುಟ್ಟಿಕೊಂಡಿದೆ : ಹುಟ್ಟಲಿರುವ ಎರಡನೇ ಯುವರಾಜನ ಮೂರನೆಯ ಮಗು! ಸತತ ಐವತ್ತು ವರ್ಷಗಳಿಂದ ರಾಜವಂಶದಲ್ಲಿ ಗಂಡು ಸಂತಾನವೇ ಇಲ್ಲದೆ, ಈಗಿನ ಯುವರಾಜ ಚಕ್ರವರ್ತಿಯಾದರೆ, ಮುಂದೆ ಯುವರಾಜನಾರು? ಸಿಂಹಾಸನಕ್ಕೆ ವಾರಸುದಾರರಾರು? ಎಂಬುದು ರಾಜಕೀಯ ವಲಯದಲ್ಲಷ್ಟೇ ಅಲ್ಲ, ಜನರಲ್ಲೂ ಆತಂಕ ಮೂಡಿಸಿದೆ. ಇದುವರೆಗೂ ಜಪಾನ್ ಸಿಂಹಾಸನ ರಾಜರ ಆಳ್ವಿಕೆಯಲ್ಲೇ ಇತ್ತು; ಮುಂದೆ ರಾಣಿಗೆ ಪಟ್ಟ ಕಟ್ಟಬೇಕೆಂದೂ, ರಾಜಕುವರಿಗೆ ಪಟ್ಟಕಟ್ಟಬೇಕೆಂದೂ ಬಹಳ ಬಿರುಸಿನ ಚರ್ಚೆ ನಡೆಯುತ್ತಿದೆ. ರಾಜಪುತ್ರಿಯ ಸಂತಾನ ಗಂಡಾದರೂ ಅದಕ್ಕೆ ರಾಜನಾಗುವ ಅರ್ಹತೆ ಇಲ್ಲವೆಂದೂ, ಪುತ್ರನೇನು ಪುತ್ರಿಯೇನು ಒಟ್ಟಿನಲ್ಲಿ ರಾಜನ ರಕ್ತವೆಂದೂ, ಅದರಲ್ಲಿ ಎಕ್ಸ್-ವೈ ವಂಶವಾಹಿಗಳು ಬೇರೆಯೆಂದೂ ಇನ್ನೂ ಬೇರೆ ಬೇರೆ ಚರ್ಚೆ ನಡೆಯುತ್ತಿರುವಾಗ, ಎರಡನೆಯ ಯುವರಾಜನ ಪತ್ನಿ - ಯುವರಾಣಿ ಮೂರನೆಯ ಮಗುವಿನ ಗರ್ಭಿಣಿ ಎಂಬ ಸುದ್ದಿ ತಿಳಿದು ಜನ ಹರ್ಷೋದ್ಗಾರ ಮಾಡತೊಡಗಿದರು. ರಾಜನಿರಲಿ, ಕಸ ಗುಡಿಸುವವನೂ ಈ ಸಂತಾನ ಗಂಡಾಗಲೆಂದು ಸಿಕ್ಕ ಸಿಕ್ಕ ದೇವರಿಗೆಲ್ಲ ಹರಕೆ ಹೊತ್ತಿದ್ದಾರೆ! ಈಗಾಗಲೇ ರಾಜವಂಶಕ್ಕೆ ಭ್ರೂಣದ ಲಿಂಗ ತಿಳಿದಿದೆಯಾದರೂ(ಜಪಾನಿನಲ್ಲಿದು ಕಾನೂನು ಬದ್ಧವಾಗಿದೆ) ಯಾರೂ ತುಟಿಬಿಚ್ಚಿಲ್ಲ! ಆ ಯುವರಾಣಿಗೆ ಹೆಣ್ಣಾದರೆ, ಕಾನೂನು ಬದಲಿಸಲು ಸಿದ್ಧತೆಯೂ ನಡೆದಿದೆ! ಗಂಡಾದರೆ...... ವಿಜಯೋತ್ಸವದ ಸಿದ್ಧತೆಯೂ ನಡೆದಿದೆ! ಆ ಯುವರಾಣಿಗೆ ನಾಳೆಯೇ ಪ್ರಸವ.......! ಜಪಾನಿನ ಈಗಿನ ಚಕ್ರವರ್ತಿ ಅಕಿಹಿತೊ, ಚಕ್ರವರ್ತಿನಿ ಮಿಚಿಕೊ; ಇವರಿಬ್ಬರಿಗೆ ನರುಹಿತೊ, ಫುಮಿಹಿತೊ ಎಂಬ ಇಬ್ಬರು ರಾಜಕುಮಾರರು ಹಾಗೂ ಸಯಕೊ ಎಂಬ ಒಬ್ಬಳು ರಾಜಕುಮಾರಿ. ಯುವರಾಜ ನರುಹಿತೊ ಹಾಗೂ ಪತ್ನಿ ಯುವರಾಣಿ ಮಸಕೊ ದಂಪತಿಗೆ ಮದುವೆಯಾಗಿ ಎಂಟು ವರ್ಷಗಳ ನಂತರ ಹುಟ್ಟಿದ ರಾಜಪುತ್ರಿಯೇ ಐಕೊ! ಇಷ್ಟರಲ್ಲಿ ಎರಡನೆಯ ರಾಜಕುಮಾರ ಫುಮಿಹಿತೊ ಹಾಗೂ ಪತ್ನಿ ಕಿಕೊ ದಂಪತಿಗಳಿಗೆ ಇಬ್ಬರು ಮಕ್ಕಳಾಗಿದ್ದರು; ಈರ್ವರೂ ಕುವರಿಯರೇ - ಕಕೊ ಮತ್ತು ಮಕೊ! ಮೊನ್ನೆ ಮೊನ್ನೆ ಚಕ್ರವರ್ತಿಯ ಕುಮಾರಿ ಸಯಕೊ, ತನ್ನ ಸಾರಥಿಯನ್ನೇ ಮದುವೆಯಾಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದಳು. ಈಗಿನ ಚಕ್ರವರ್ತಿಯ ದಾಯಾದಿಗಳಿಗೂ ಗಂಡು ಸಂತಾನವಿಲ್ಲ! ಹೀಗಾಗಿ, ಮುಂದಿನ 'ಯುವರಾಜ' ಹಾಗೂ 'ಚಕ್ರವರ್ತಿ' ಯಾಗುವ ಮಗು ಕಳೆದ ಐವತ್ತು ವರ್ಷಗಳಲ್ಲಿ ರಾಜಕುಟುಂಬದಲ್ಲಿ ಹುಟ್ಟೇ ಇಲ್ಲ! ಇಂತಹ ಸಂದಿಗ್ಧದಲ್ಲಿ ಎರಡನೆಯ ಯುವರಾಣಿ ಕಿಕೊ ಗರ್ಭಧರಿಸಿ ಕದನಕುತೂಹಲವಾಗಿತ್ತು; ನಾಳೆ ಆಕೆಗೆ ಶಸ್ತ್ರಪ್ರಸವದ ಮುಹೂರ್ತವಿಡಲಾಗಿದೆ....... ಮುಂದಿನ ಚಕ್ರವರ್ತಿ ನಾಳೆ ಹುಟ್ಟುವನೇ.......?? ನಿಮ್ಮವ ಬೆನಕ
No votes yet
1614 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
benaka's picture
06
Sep
2006
6:45
ಉಘೇ! ಹುಟ್ಟಿದ ಹುಟ್ಟಿದ ಚಕ್ರವರ್ತಿ! ಜಪಾನಿನ ಚಕ್ರವರ್ತಿಯ ಎರಡನೇ ಕುಮಾರನ ರಾಣಿ ಕಿಕೊ ಇಂದು (೨೦೦೬/೦೯/೦೬) ಬೆಳಿಗ್ಗೆ ೮:೨೭ ರ ಹೊತ್ತಿಗೆ ಆರೋಗ್ಯವಂತ ಗಂಡು ಮಗುವನ್ನು ಹೆತ್ತಳು. ಇದರೊಂದಿಗೆ ಜಪಾನಿನ ಚಕ್ರವರ್ತಿಯ ವಂಶೋದ್ಧಾರಕನ ಉದಯವಾಗಿ ಎಲ್ಲೆಲ್ಲೂ ಸಂತಸ ತುಂಬಿ ತುಳುಕುತ್ತಿದೆ! ಒಂದು ವಾರದಿಂದಲೇ ಏರುತ್ತಿದ್ದ ಶಿಶುಸಂಬಂಧೀ ಶೇರುಗಳು ಇಂದು 'ಬೇಬೀ ಬೂಮ್' ಅನ್ನು ಬೆಂಬತ್ತಿ ೬ ವರ್ಷಗಳ ನಂತರ ೨.೨% ಏರಿವೆ! ಶುಭ ಕನ್ಯಾಲಗ್ನ, ಧನಿಷ್ಠಾ ನಕ್ಷತ್ರ - ಮಕರ ರಾಶಿಯಲ್ಲಿ ಜನಿಸಿದ ರಾಜಪುತ್ರ ೨೫೫೮ ಗ್ರಾಂ ತೂಗಿದನೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 'ತೇಯ್‍ಓ ಸೆಕ್ಕಾಯ್'[=ಚಕ್ರವರ್ತಿ ಛೇದಸವನ ಅಂದರೆ ಸಿಝೇರಿಯನ್ ಸೆಕ್ಷನ್] ಶಸ್ತ್ರಕ್ರಿಯೆಗೆ ಒಳಗಾದ ತಾಯಿಯೂ ಆರೋಗ್ಯವಾಗಿರುವಳೆಂದು ವೈದ್ಯರು ತಿಳಿಸಿದ್ದಾರೆ. ಛೇದಸವನ ಚಕ್ರವರ್ತಿಯ ಕುಟುಂಬದಲ್ಲೇ ತೀರಾ ಹೊಸದೆಂದು ಬಲ್ಲವರು ಹೇಳುತ್ತಾರೆ. ಈ ಬಾರಿ ಈ ಶಸ್ತ್ರಕ್ರಿಯೆಗೆ 'ಚಕ್ರವರ್ತಿ ಛೇದಸವನ' ಎಂಬುದು ಅನ್ವರ್ಥವಾಗಿರುವುದೂ ಒಂದು ಅಚ್ಚರಿ! ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

benaka's picture
15
Sep
2006
10:35
ಜಪಾನಿನಲ್ಲಿ ರಾಜಕುಮಾರನ ಜನನದ ಸಂತಸ ಎಷ್ಟು ಹಬ್ಬಿದೆಯೆಂದರೆ, ಪ್ರತಿದಿನ ಎಲ್ಲೆಲ್ಲಿಯೂ ಅದೇ ಸುದ್ದಿ. ರಾಜಪುತ್ರನ ಮುಖ ನೋಡಲು ಎಲ್ಲರಿಗೂ ಆಸೆ; ಯಾವಾಗ ನೋಡುವೆವೋ ಎಂದೆಲ್ಲ ಕಾದಿದ್ದಾರೆ! ಹೀಗಿರುವಾಗ ನಾನು ಹತ್ತಡಿ ದೂರದಲ್ಲಿ ರಾಜದರ್ಶನ ಮಾಡಿಬಿಟ್ಟೆ! ಇಂದು ಮಧ್ಯಾಹ್ನದ ಊಟ ಮುಗಿಸಿ ಎಂದಿನಂತೆ ಉದ್ಯಾನದಲ್ಲಿ ನಡೆದು ಹಿಂದಿರುಗುತ್ತೇನೆ... ರಸ್ತೆಯ ಇಕ್ಕೆಲಗಳಲ್ಲೂ ಜನವೋ ಜನ! ಪೋಲೀಸರು ದಾಟು ಪಟ್ಟೆಯ ಮುಂದೆ ನಿಂತು ತಡೆಹಾಕಿದ್ದಾರೆ; ಯಾರನ್ನೂ ದಾಟಲು ಬಿಡುತ್ತಿಲ್ಲ! ಸಾಲದ್ದಕ್ಕೆ ಕೈಯಲ್ಲಿ ಎಲ್ಲ ಜಪಾನಿನ ಬಾವುಟ ಹಿಡಿದಿದ್ದಾರೆ; ಕೂಡುರಸ್ತೆಯ ನಾಲ್ಕೂ ಮೂಲೆಯಲ್ಲಿ ದೂರದರ್ಶನದ ಕ್ಯಾಮರಾಗಳು..... ಮೇಲೆ ಹೆಲಿಕಾಪ್ಟರ್ ಸುತ್ತುತ್ತಿದೆ! ಓಹೋ ನವಜಾತ ರಾಜಕುಮಾರ ಆಸ್ಪತ್ರೆಯಿಂದ ಮನೆಗೆ ಬರುತ್ತಾನೆಂದು ತಿಳಿದುಹೋಯಿತು. ನಮ್ಮಲ್ಲಿ ಅಗವ್ಯ ಗಳು ಬಂದಾಗ ಊರಿನ ರಸ್ತೆಗಳಲ್ಲೆಲ್ಲಾ ಸಂಚಾರ ಅಸ್ತವ್ಯಸ್ತವಾಗುವಂತೆ ಇಲ್ಲಿ ಯಾವ ತೊಂದರೆಯೂ ಆಗಲಿಲ್ಲ; ನೋಡ ನೋಡುತ್ತಿರುವಂತೆಯೇ ಸಂಚಾರೀ ಪಾದಚಾರಿಗಳನ್ನೆಲ್ಲಾ ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದರು; ರಾಜಕುವರನ ರಥ ಬರುವ ದಾರಿಯಲ್ಲಿ ೩೦ ಸೆಕೆಂಡಿನ ಅಂತರದಲ್ಲಿ ಎಲ್ಲ ಕೆಂಪುದೀಪಗಳನ್ನೂ ಬೆಳಗಿಸುತ್ತಾ ಬಂದರು; ರಥ ಸಾಗಿದ ಒಂದು ನಿಮಿಷದ ಅಂತರದಲ್ಲಿ ಒಂದೊಂದನ್ನೇ ಹಸಿರಾಗಿಸಿದರು! ಎಲ್ಲಿಯೂ ಯಾವ ವಾಹನಕ್ಕೂ ೨ನಿಮಿಷಕ್ಕಿಂತ ಹೆಚ್ಚು ತಡೆಯಾಗಲಿಲ್ಲ! ಸಂಚಾರಿ ಸನ್ನೆಯ ದೀಪಗಳನ್ನು ಮೆಲ್ಲನೆ ವಿರಾಮ ಹೆಚ್ಚಿಸಿ, ರಥ ಸಾಗಿದ ನಂತರ ವಿರಾಮ ಕಡಿಮೆಗೊಳಿಸುತ್ತಾ ಸಂಚಾರ ನಿಯಂತ್ರಿಸಿದ ರೀತಿ ಅದ್ಭುತವಾಗಿತ್ತು! ಇಷ್ಟರಲ್ಲಿ ಎರಡನೆಯ ಯುವರಾಜ, ಪತ್ನಿ ಹಾಗೂ ನವಜಾತ ಕುವರನೊಂದಿಗೆ ಸಾಗಿಬಂದು ನಮ್ಮೆಡೆಗೆ ಕೈಬೀಸುತ್ತಾ, ಅರಮನೆಗೆ ಮುನ್ನಡೆದರು. ಅಷ್ಟರಲ್ಲಿ ನಾಲ್ಕು ವಾಹಿನಿಗಳ ದೂ.ದ. ಪರದೆಯಲ್ಲಿ ನಾನೂ ಕಂಡಿರಬಹುದು. ನನ್ನ ಹಿಂದೆ ನಿಂತ ಚಿಟ್ಟೆ ಹಿಡಿವ ಯುವಕರು(ನಿಜವಾಗಿಯೂ ಚಿಟ್ಟೆಯೇ ಸ್ವಾಮಿ, ದ್ವಂದ್ವಾರ್ಥವಿಲ್ಲ) ಚಿಟ್ಟೆಬಲೆ ಹಿಡಿದೆತ್ತಿ 'ಆ! ಕಂಡಿತು ಕಂಡಿತು'(ಮಿಯೆತ! ಮಿಯೆತ ಯೊ!) ಎಂದು ಸಂಭ್ರಮಿಸುತ್ತಿದ್ದುದು ತಮಾಷೆಯಾಗಿತ್ತು! ಅಂತೂ ಅರಮನೆಯ ಹತ್ತಿರ ಕೆಲಸವಿದ್ದುದರಿಂದ ನಾನೂ ರಾಜಕುವರ, ಯುವರಾಜ-ರಾಣಿಯರ ದರುಶನ ಮಾಡಿದಂತಾಯಿತು. ಅದೇಕೋ ಗೊತ್ತಿಲ್ಲ ರಾಜನನ್ನು ಕಂಡರೆ 'ಗುರು-ಶಿಷ್ಯರು' ಚಿತ್ರದಲ್ಲಿ ನಂದಿಕೇಶ್ವರ ಎನ್ನುವಂತೆ ಕೈಯೆತ್ತಿ "ಮಹಾರಾಜ, ನೀನು ಮಹಾರಾಣಿಯನ್ನು ಮದುವೆಯಾಗು!" ಎನ್ನೋಣವೆನಿಸಿ, ದ್ವಾರಕೀಶರನ್ನು ನೆನೆದು ನಕ್ಕು ಸುಮ್ಮನಾದೆ! (ಹಾಂಜೋಮೊನ್ ಮಹಾದ್ವಾರದ ಬಳಿಯಿಂದ) ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.