ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಸಿಂಗಪುರದ ಬಗ್ಗೆ ಒಂದು ಸಿಲ್ಲಿ ಲೇಖನ

September 5, 2006 - 3:02pm — shas3n

ನನಗೆ ಇದ್ದಕ್ಕೆ ಇದ್ದಹಾಗೆ, ಸಿಂಗಪುರದ ಬಗ್ಗೆ ಮತ್ತೊಮ್ಮೆ ಬರೆಯೋಣ ಅಂತ ಅನ್ನಿಸಿತು. ಮತ್ತೊಮ್ಮೆ ಅಂದರೆ ಈಗಾಗಲೇ ನಾನು ಸಿಂಗಪುರದ ಬಗ್ಗೆ ಬರೆದಿದ್ದೇನೆ ಅಂತ ಖಂಡಿತ ಅಲ್ಲ. ಈಗಾಗಲೇ ಇಂಟರ್-ನೆಟ್, ಟಿ.ವಿ., ಪೇಪರ್-ಗಳಲ್ಲಿ ಸಿಂಗಪುರದ ಬಗ್ಗೆ ಬಂದಿರೋ ನೂರಾರು ಲೇಖನಗಳಲ್ಲಿ ನೀವು ಒಂದೆರಡನ್ನಾದರೂ ಓದಿರುತ್ತೀರಿ ಅಂತ ನನಗೆ ಗೊತ್ತು. ಆದರೆ ಅವೆಲ್ಲ ಲೇಖನಗಳು ಅಲ್ಲಿಗೆ ೧-೨ ವಾರಗಳ ಮಟ್ಟಿಗೆ ಹೋಗಿಬಂದ ಪ್ರವಾಸಿಗಳದ್ದೋ ಅಥವ ಅಲ್ಲಿಯ ಪ್ರವಾಸೋದ್ಯಮ ಇಲಾಖೆಯವರು sponsor ಮಾಡಿ ಬರೆಸಿದ ಲೇಖನಗಳೋ ಆಗಿರುವುದರಿಂದ ಅಲ್ಲಿನ ನಿಜ ಜೀವನದ ಪರಿಚಯ ಮಾಡಿ ಕೊಡುವುದರಲ್ಲಿ ಅವು ಸೋಲುತ್ತವೆ. ಈ ಲೇಖನಗಳು, ಭಾರತಕ್ಕೆ ಬಂದು ಇಲ್ಲಿನ ಹಾವಾಡಿಗರ, ಮಾವುತರ, ಕೊಳೆಗೇರಿಗಳ ಬಗ್ಗೆ ವಿದೇಶಿಯರು ತೆಗೆಯುವ ಸಾಕ್ಷ್ಯಚಿತ್ರಗಳು ಎಷ್ಟು authentic ಆಗಿರುತ್ತವೆಯೋ, ಅಷ್ಟೆ authentic ಆಗಿರುತ್ತವೆ. ಹಲವಾರು ತಿಂಗಳು/ವರ್ಷಗಳ ಕಾಲ ಯಾವುದೇ ದೇಶದಲ್ಲಿದ್ದು ಅಲ್ಲಿನ ಜೀವನವನ್ನು ಹತ್ತಿರದಿಂದ ನೋಡುವ ಅನುಭವವೇ ಬೇರೆ. ನಾನು ಸಿಂಗಪುರದಲ್ಲಿ ೧ ವರ್ಷ ಇದ್ದೆ. ಆ ಸಮಯದಲ್ಲಿ ನಾನು ಅಲ್ಲಿ ಗಮನಿಸಿದ ಕೆಲವು 'ಅಸಾಮಾನ್ಯ' ಅಂಶಗಳ ಬಗ್ಗೆ ಈ ಲೇಖನ.

ಈ ಬರಹದಲ್ಲಿ ಕೆಲವು ಹಾಸ್ಯಮಯವಾದ, ವಿಚಿತ್ರವಾದ ವಿಶಯಗಳನ್ನು ಮಾತ್ರ ಬರೆದಿದ್ದೇನೆ. ಹಾಗಂದ ಮಾತ್ರಕ್ಕೆ ಸಿಂಗಪುರ ಇದಿಷ್ಟಕ್ಕೇ ಸೀಮಿತ ಎಂದಾಗಲಿ, ನನಗೆ ಸಿಂಗಪುರ ಹಾಗು ಅಲ್ಲಿನ ಜನರ ಮೇಲೆ ಗೌರವವಿಲ್ಲವೆಂದಾಗಲೀ ಭಾವಿಸಬೇಡಿ.
ಸಿಂಗಾಪುರಕ್ಕೆ ಹೋಗಿ ಇಳಿದ ತಕ್ಷಣ ನಿಮ್ಮ ಎರಡು ಇಂದ್ರಿಯಗಳು ಅತ್ಯಂತ ಚಕಿತವಾಗುತ್ತವೆ. ಕಣ್ಣು ಮತ್ತು ಮೂಗು! ಸ್ವಚ್ಛ ಥಳಥಳಿಸುವ ರಸ್ತೆಗಳು, ಮತ್ತು ಸುತ್ತಲಿನ ಹಸಿರು ಕಣ್ಗಳಿಗೆ ಆಶ್ಚರ್ಯ ಮತ್ತು ಸಂತೋಷ ತಂದರೆ, ಅದೇ ಕ್ಷಣದಲ್ಲೆ ನಿಮ್ಮ ಮೂಗಿಗೆ ಅಡರುವುದು seafoodನ ಮತ್ಸ್ಯಗಂಧ. ನೀವು ಮೀನು ಮಾರ್ಕೆಟ್ ಹತ್ತಿರ ಮನೆ ಇದ್ದು, ಅಲ್ಲೇ ಹುಟ್ಟಿ ಬೆಳೆದವರಾಗಿದ್ದರೆ ಪರವಾಗಿಲ್ಲ . ನಿಮಗೆ ಏನೂ ವ್ಯತ್ಯಾಸ ಗೊತ್ತಾಗದೆ ಇರಬಹುದೇನೊ. ಇನ್ನು ಅಥವ ಮೀನು ಪ್ರಿಯರೋ ಆಗಿದ್ದರಂತೂ ಬಿಡಿ. Full ಮಜ. ಇಳಿದ ತಕ್ಷಣ ಬಾಯಲ್ಲಿ ನೀರು (ಅಥವ ಹೊಟ್ಟೆ ತೊಳೆಸುವಿಕೆ). ಸಮುದ್ರದ ಮಧ್ಯದ ದ್ವೀಪವಾಗಿರುವುದರಿಂದ ಮೀನು, ಸೀಗಡಿ, ಅಕ್ಟೋಪಸ್, ಸ್ಕ್ವಿಡ್ ಮುಂತಾದ ಸಮುದ್ರದ ಚರಾಚರ ಜೀವಿಗಳೂ ಇಲ್ಲಿ ಸುಲಭ ಲಭ್ಯ. ಇದರ ಮೇಲೆ, (ಕೆಳಗ ವಿವರಿಸಿದಂತೆ) ನೀವು ಎಲ್ಲೇ ಹೋದರೂ food courtಗಳು. ಒಟ್ಟಿನಲ್ಲಿ ರಸ್ತೆಯಲ್ಲಿ, ಮನೆಯಲ್ಲಿ, ಬಸ್ಸಿನಲ್ಲಿ, ಮಾರ್ಕೆಟ್‍ನಲ್ಲಿ ಮತ್ತು of course ಹೋಟೆಲ್‍ನಲ್ಲಿ 'ಪ್ರಾಣ-ನಾತ' ! "ಎಲ್ಲೆಲ್ಲೇ ನೋಡಲಿ, ನಿನ್ನನ್ನೇ ಕಾಣುವೆ". ನೀವು ಮೀನಿನ ವಾಸನೆಗೆ ಕಟ್ಟಾ ವಿರೋಧಿಗಳಆಗಿದ್ದರೂ ಚಿಂತೆ ಬೇಡ. ಕೆಲವೇ ದಿನಗಳಲ್ಲಿ ನೀವೂ ಆ ವಾಸನೆಗೆ ಹೊಂದಿಕೊಂಡು 'ಎಲ್ಲರೋಳೊಂದಾಗು ಮಂಕುತಿಮ್ಮ' ಅಂತ ಮನಸಿನಲ್ಲೇ ಡಿ.ವೀ.ಜಿ. ಯವರನ್ನು ನಮಿಸಿ ಸುಮ್ಮನೆ ಇರುತ್ತೀರ ಅಷ್ಟೆ!!
ಊರೆಲ್ಲಾ ನಾತ ಯಾಕಪ್ಪಾ ಅಂದ್ರೆ, ಸಿಂಗಪುರದಲ್ಲಿ ಮನೆಯಲ್ಲಿ ಅಡಿಗೆ ಮಾಡುವ ಪದ್ಧತಿಯೇ ಇಲ್ಲ. ಎಲ್ಲರೂ ದಿನವೂ ಬೆಳಗ್ಗೆ, ಮಧ್ಯಾಹ್ನ ಹಾಗು ಸಂಜೆ food court ಗಳಲ್ಲಿ ನೆರೆದಿರುವುದನ್ನು ನೋಡಬಹುದು. ಹೆಚ್ಚಿನ ಎಲ್ಲ apartmentಗಳ ನೆಲ ಮಹಡಿಗಳಲ್ಲಿ food court ಇರುತ್ತದೆ. ಬಹಳ ದೂರ ಹೋಗುವ ಕೆಲಸವೂ ಇಲ್ಲ. ನಮ್ಮ ನೆರೆಯ apartmentನ ಇಡೀ ಕುಟುಂಬದ ಕಾರವಾನ್, ಅಜ್ಜ, ಅಜ್ಜಿ, ಅಪ್ಪ, ಅಮ್ಮ, ಮಗ, ಮಗಳು ಎಲ್ಲರೂ ಸೇರಿ ದಿನಕ್ಕೆ ೩ ಸಲ ಮೆರವಣಿಗೆಯಂತೆ ೮ ಮಹಡಿಗಳನ್ನು ಹತ್ತಿ ಇಳಿಯುತ್ತಿದ್ದುದು (of course lift ನಲ್ಲಿ) ನನಗೆ ಇನ್ನೂ ನೆನೆಪಿದೆ.
ಊಟ ಮಾಡುವುದು ಸಿಂಗಪೂರಿಯನ್ನರ ಅತಿ ಮೆಚ್ಚಿನ ಹವ್ಯಾಸ. ಹಾಗಂತ ನಾನು ಮಾತ್ರ ಹೇಳುತ್ತಿಲ್ಲ, ಅವರೇ ಹೇಳಿಕೊಳ್ಲುತ್ತಾರೆ. ಮಲೆಯ್ ಭಾಷೆಯ 'ಮಾಕಾನ್' (ಊಟ/ಆಹಾರ) ಶಬ್ಧ ಉಚ್ಛರಿಸಿದ ತಕ್ಷಣ ಸಿಂಗಪೂರಿಯನ್ನರ ಮುಖದಲ್ಲಿ ಚಂದಿರ ಅರಳುತ್ತಾನೆ. ಸಿಂಗಪೂರದ demographyಯಂತೆಯೇ ಅಲ್ಲಿನ ಆಹಾರ ವೈಶಿಷ್ಟ್ಯಗಳೂ ಅಗಾಧ ವಿಸ್ತಾರ ಉಳ್ಳವು. ಚೈನೀಸ್, ಮಲಯ್, ತಮಿಳ್ ಮತ್ತು continental ಎಂಬ ಮುಖ್ಯ ಪ್ರಜಾತಿಗಳಲ್ಲದೇ ಜಪಾನ್, ಇಂಡೊನೆಷಿಯ, ಐರೋಪ್ಯ, ದೇಶಗಳ ಆಹಾರ ಕೂಡ ಎಲ್ಲ ಕಡೆಯೂ ಲಭ್ಯ. ಎಲ್ಲ ಒಕೆ ಅದೆನೋ ಯಾಕೆ ಅಂದಹಾಗೆ, ಅವರು ಏನು ಬೇಕಾದರೂ ತಿಂದುಕೊಳ್ಳಲಿ. ಆದರೆ ಆ ಬಾಯಿ ವಾಸನೆಯನ್ನು ತಡೆದುಕೊಳ್ಳುವ ಕರ್ಮ ನಮಗ್ಯಾಕೆ? ಚೀನೀ ಅಡುಗೆಗಳಲ್ಲಿ ನಾನಾ ತರಹದ sauceಗಲನು ಬಳಸುತ್ತಾರೆ. ಒಂದಕ್ಕಿಂತ ಒಂದು ದುರ್ನಾತ ಉಳ್ಳವು. ನಮಗೆ ವಾಂತಿ ಬರುವಂತೆ ಮಾಡುವ ಆ ವಸ್ತುಗಳನ್ನು ಆಹಾರ ಎಂದು ಹೇಗೆ ಒಪ್ಪಿಕೊಂಡು ತಿನ್ನುತ್ತಾರೋ ಎನೋ. ಸರಿ, ತಿನ್ನಲಿ ಬಿಡಿ, ಅವರ ಹಣೆ ಬರಹ ಅಂದುಕೊಂಡು ಸುಮ್ಮನೆ ಇರಬಹುದು. ಆದರೆ ಹಲ್ಲು ಉಜ್ಜಲು ಏನು ಧಾಡಿ ಅವರಿಗೆ? ದಂತದ ಮೈಯುಳ್ಳ, ರೇಶ್ಮೆಯ ಕೂದಲಿನ ಚೀನೀ ಲಲನೆಯೊಬ್ಬಳು ಹತ್ತಿರ ಬಂದು ಮಾತನಾಡಿಸುವುದು ಬಹಳ ಹಿತವಾದ ಅನುಭವ ಎಂದು ನೀವು ಅಂದುಕೊಂಡಿದ್ದರೆ, sorry, ನಿಮ್ಮ ವಿಚಾರ ತಪ್ಪು ಎಂದು ಹೇಳಲು ಬಹಳ ವಿಷಾದಿಸುತ್ತೇನೆ. ಅದರ ಕಷ್ಟ ಅನುಭವಿಸಿದವರಿಗೆ ಗೊತ್ತು. ನಾನು ಸಿಂಗಪುರದಿಂದ ಹಿಂತಿರುಗಿ ಬಂದಾಗ ಬಹಳ ಜನ ಅಲ್ಲೇ ಒಂದು ಸುಂದರ ಚೀನೀ ಹುಡುಗಿಯನ್ನು ನೋಡಿ ಮದುವೆಯಾಗಬಾರದಿತ್ತೇ ಎಂದು ಮಮ್ಮಲ ಮರುಗಿದವರಿದ್ದಾರೆ. ಅವರಿಗೆಲ್ಲ ನನ್ನ limitations ಈಗ ಅರ್ಥವಾಗುತ್ತವೆ ಎಂದು ಅಂದುಕೊಳ್ಳುತ್ತೇನೆ.
ಒಂದು ರೀತಿಯಲ್ಲಿ ನೋಡಿದರೆ, at least, unofficial ಆಗಿ, ಸಿಂಗಾಪುರದ ರಾಷ್ಟ್ರೀಯ ಉಡುಪು ಚಡ್ಡಿ ಎಂದು ನಿಸ್ಸಂಶಯವಾಗಿ ಹೇಳಬಹುದು. ಹುಡುಗ - ಹುಡುಗಿ, ಮುದುಕ-ಮುದುಕಿ, ಗಂಡಸು-ಹೆಂಗಸು ಎಂಬ ಬೇಧಭಾವವಿಲ್ಲದೆ ಎಲ್ಲರೂ ಚಡ್ಡಿ ಧರಿಸುತ್ತಾರೆ. (ತೀರಾ formal ಸಂದರ್ಭಗಳನ್ನು ಬಿಟ್ಟು). ಇನ್ನೇನಿಲ್ಲದಿದ್ದರೂ ಈ ವಿಷಯದಲ್ಲಿ ಸಿಂಗಪುರಿಯನ್ನರು ರಾಷ್ಟ್ರೀಯ ಏಕೀಕರಣ ಸಾಧಿಸಿದ್ದಾರೆಂದು ಹೇಳಬಹುದು. ಚಡ್ಡಿಗಳೇ ಮುಖ್ಯ ಉಡುಪು ಆಗಿರುವಾಗ, ಅದರಲ್ಲೇ ಸಾವಿರಾರು ವಿಧಗಳಿರುವುದು ಏನೂ ವಿಶೇಷವಲ್ಲ ತಾನೆ? ಬಿಗಿಯಾದ, ದೊಗಳೆಯಾದ, ಬಣ್ಣ-ಬಣ್ಣದ, ಎಡವಿ ಬೀಳುವಷ್ಟು ಉದ್ದನೆಯ, ಒಳ ಉಡುಪು ಕಾಣುವಷ್ಟು ಗಿಡ್ಡವಾದ, ವಿವಿಧ ವಿನ್ಯಾಸಗಳ, strategic locationಗಳಲ್ಲಿ ಕೊಯ್ಯಲ್ಪಟ್ಟ, ಹರಿದ, ಎಂದಿಗೂ ಹರಿಯದ, ಒದ್ದೆಯಾದಂತೆ ಕಾಣುವ, ವಾಟರ್ ಪ್ರೂಫ್ ಆದ.. ಒಂದೇ ಎರಡೇ, ನೂರಾರು ವಿಧಗಳಲ್ಲಿ ಚಡ್ಡಿಗಳು. ಮತ್ತೋಂದು ವಿಶೇಷವೆಂದರೆ, ಮಹಿಳೆಯರು ಧರಿಸುವ ಚಡ್ಡಿಗಳ ಉದ್ದದ ಆಧಾರದಿಂದ ಅವರ ವಯಸ್ಸನ್ನು ಅಂದಾಜು ಮಾಡಬಹುದು. ಹಣ್ಣು ಹಣ್ಣು ಮುದುಕಿಯರು ಮೊಳಕಾಲಿನಿಂದ ಕೊಂಚ ಕೆಳಗಿನವರೆಗೂ ಬರುವ ಚಡ್ಡಿ ಧರಿಸಿದರೆ, ಇದೀಗ ತಾನೆ ಹುಟ್ಟಿರುವ ಮಗು ಏನನ್ನೂ ಧರಿಸಿರಿವುದಿಲ್ಲ. ಮಧ್ಯದ ವಯಸ್ಸುಗಳಿಗೆಲ್ಲ linear intrapolation ಮಾಡಿಕೊಳ್ಳಿ.
ಏನೇನೋ ನೋಡಿ ವಯಸ್ಸು ನಿರ್ಧರಿಸುವ ಗತಿ ನನಗೆ ಏಕೆ ಬಂತು ಅಂತ ತಿಳಿಯೋ ಕುತೂಹಲ ನಿಮಗೆ ಇದೆ ಅಂತ ನನಗೆ ಗೊತ್ತು. ವಿಷಯ ಏನಪ್ಪಾ ಎಂದರೆ, ಚೀನೀ ಮೂಲದ ಮಹಿಳೆಯರ ವಯಸ್ಸನ್ನು ಅವರ ಮುಖ ನೋಡಿ ಗೊತ್ತು ಮಾಡಿಕೊಳ್ಳಲು ನನಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಸುಮಾರು ೪೫ ವರ್ಷಗಳ ವರೆಗೂ ಯುವತಿಯರಂತೆ ಕಾಣುವ ಅವರು ಏಕಾಏಕಿ ಮುದುಕಿಯರಂತೆ ಕಾಣಲು ಪ್ರಾರಂಭಿಸುತ್ತಾರೆ. ನನಗೆ ಒಳಒಳಗೇ ಇರುವ ಅನುಮಾನದ ಪ್ರಕಾರ ೪೪ನೆ ವರ್ಷದ ಕೊನೆಯ ದಿನ ಯುವತಿಯ ರೂಪದಲ್ಲಿ ಮಲಗಲು ಹೋದ ಚೀನಿ ಮಹಿಳೆ ತನ್ನ ೪೫ನೇ ಹುಟ್ಟಿದ ಹಬ್ಬದ ದಿನ ಬೆಳಗ್ಗೆ ಎದ್ದು, ಕನ್ನಡಿಯಲ್ಲಿ ತನ್ನ ಗುರುತು ಹಿಡಿಯಲು ಬಹಳ ಕಷ್ಟ ಪಡಬೆಕಾಗುತ್ತದೆ. ಇನ್ನು ಆಕೆಯ ಗಂಡ ಮಕ್ಕಳಿಗಂತೂ ಬಾಲಾಜಿ ಟೆಲಿಫಿಲ್ಮ್ ಧಾರಾವಾಹಿಗಳಲ್ಲಿ ಆದಂತೆ ಒಂದು ಪಾತ್ರದ ನಟಿ ಬದಲಾದಂತೆ ಅನ್ನಿಸಬಹುದು. (ಸ್ವಲ್ಪ ಉತ್ಪ್ರೇಕ್ಷೆ ಅಂತ ನಾನು ಒಪ್ಪಿಕೊಳ್ಳುತ್ತೇನೆ, ಆದರೆ ಚೀನೀ ಮಹಿಳೆಯರು ಅಚಾನಕ್ ಆಗಿ ವಯಸ್ಸಾದಂತೆ ಕಾಣುವುದಂತೂ ನಿಜ.)
ಸರಿ, ಒಂದು ಕೊನೆಯ ವಿಷಯ ಹೇಳಿ ಈ postನ್ನ ಮುಗಿಸ್ತಿನಿ. ಸಿಂಗಪುರದ ರಾಷ್ಟ್ರೀಯ ಹಣ್ಣು ಡ್ಯುರಿಯನ್ ಅಂತ. ನಮ್ಮ ಹಲಸಿನ ಹಣ್ಣು ಇರುತ್ತಲ್ಲ, ಅದೇ ತರಹ, ಸ್ವಲ್ಪ ಚಿಕ್ಕದು ಅಷ್ಟೆ. ಆದರೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋಹಾಗೆ, 3 ಇಂಚಿನ ಹಣ್ಣನ್ನು ಕೋಯ್ದರೆ, 3 ಮೈಲು ವಾಸನೆ. ಕೆಲವರು ಅದನ್ನು ಸುಗಂಧ ಎನ್ನುತ್ತಾರೆ, ಕೆಲವರು ದುರ್ಗಂಧ ಎನ್ನುತ್ತಾರೆ. ಆದರೆ, 2ನೆಯ ಗುಂಪಿಗೆ ಬಹುಮತ ಇರುವುದರಿಂದ, ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಈ ಹಣ್ಣನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ 500 $ ದಂಡ. ನಾನಂತೂ ಅದನ್ನು ತಿಂದು ನೋಡುವ ಧೈರ್ಯ ಮಾಡಲಿಲ್ಲ. ಹಾಗಾಗಿ ರುಚಿಯ ಬಗ್ಗೆ ಏನನ್ನೂ ಹೆಳಲಾರೆ. ಆದರೆ ನನ್ನ ಇಂಡೋನೇಶಿಯಾದ ಗೆಳೆಯ ಅದನ್ನು ವಾಚಾಮಗೋಚರವಾಗಿ ಹೊಗಳಿದ್ದನ್ನು ನೋಡಿ, ನೀವು ಬೇಕಾದರೆ ಒಮ್ಮೆ ತಿಂದು ನೋಡಿ ಎಂದು ಕುಮ್ಮಕ್ಕು ಕೊಟ್ಟೇನು.

 

ಅನಿಲ್ ರವರ ಫಿನ್ಲೆಂಡ್ ಲೇಖನ ಮಾಲಿಕೆಯ ಸ್ಪೂರ್ತಿಯಿಂದ ಬರದದ್ದು. (ಇಲ್ಲಿ ಕೂಡ ಲಭ್ಯ)

(ಬರಹIME ಬಳಸಿ ಬರೆದಿದ್ದು)

  • ಪ್ರವಾಸ ಕಥನ
~.~
  • Login or register to post comments
  • 665 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 5, 2006 - 8:03pm — benaka

'ಹಣ್ಣಿನ ರಾಜ' !

benaka's picture

ನರಸಿಂಹ ಶಾಸ್ತ್ರಿಗಳೇ,

ಅದ್ಭುತವಾಗಿದೆ ನಿಮ್ಮ ಲೇಖನ! ನನ್ನ ಅನುಭವಗಳೇ ನಿಮಗೂ ಆಗಿರುವುದನ್ನು ನೋಡಿ ನಗು ಬಂತು. ನೀವೆನ್ನುವಂತೆ ಯಾವುದೇ ದೇಶದ ಬಗ್ಗೆ 'ಸರಿಯಾಗಿ' ಮಾಹಿತಿ ನೀಡಲು ಅಲ್ಲಿ ಕೆಲಕಾಲ ಅಲ್ಲಿಯವರೊಡನೆ ಜೀವಿಸಿ ನೋಡುವುದೊಂದೇ ಸರಿಯಾದ ಮಾರ್ಗ. ಇಲ್ಲದಿದ್ದರೆ ಹೇಗೆ ತಪ್ಪು ಕಲ್ಪನೆ ಇರುತ್ತದೆಂದು ನಾನು ಜಪಾನಿಗೆ ಬಂದ ಮೇಲೆ ಅರಿತೆ. ಇದರ ಬಗ್ಗೆ ಪ್ರವಾಸ ಕಥನದಲ್ಲಿ ಮುಂದೆ ಬರೆಯುತ್ತೇನೆ.

ಜಪಾನೀಯರೂ ಚೀನೀಯರೂ ಅಣ್ಣ-ತಮ್ಮಂದಿರಲ್ಲವೇ? ಇವರಿಗೂ ಹಲ್ಲುಜ್ಜುವ ಅಭ್ಯಾಸವಿಲ್ಲ; ಮೀನಿಗಿಂತ ಇವರ ಬಾಯಿಯ ನಾತ ತಡೆಯುವುದೇ ಕಷ್ಟ! ಚೆಲುವೆಯರ ವಯಸ್ಸು ಇಲ್ಲಿ ಸ್ವಲ್ಪ ಅನಂತರ ಅಂದರೆ ೫೦ ರ ವರೆಗೂ ಹೇಳಲು ಅಸಾಧ್ಯ; ಅವಳೇನು ಅಜ್ಜಿಯೋ, ಅಕ್ಕನೋ, ಅಮ್ಮನೋ, ತಂಗಿಯೋ ಏನೂ ಗೊತ್ತಾಗದೆ ಹೆಣ್ಣೆಂದು ತಿಳಿಯಬಹುದು! ಇಲ್ಲಿಯೂ ಚಡ್ಡಿಧಾರಿಗಳಿದ್ದಾರೆ; ಆಗ 'ಅದು' ಅವಳೋ ಅವನೋ ತಿಳಿಯಲೂ ಅಸಾಧ್ಯ! ಸಿಂಗಪುರದಲ್ಲಿ ಕೆಲವು ಕಾಲ ಕಳೆದಿದ್ದೇನಾದ್ದರಿಂದ ಇವರ 'ದೊರಿಯನ್' ಹಣ್ಣಿನ ನಾತ ಚೆನ್ನಾಗಿ ಗೊತ್ತು! ಇಷ್ಟಾಗಿಯೂ ಅದನ್ನು 'ಹಣ್ಣಿನ ರಾಜ' ಎನ್ನುತ್ತಾರಲ್ಲ - ಅದು ಜಗತ್ತಿನ ಅದ್ಭುತ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 6, 2006 - 9:10am — shas3n

ಕೋಶ ಓದುವುದಕ್ಕಿಂತ ದೇಶ ತಿರುಗುವುದು ಉತ್ತಮ

shas3n's picture

ಬೆನಕರವರೆ,
ಜಪಾನೀಯರೂ ಸಹ ಹಲ್ಲು ಉಜ್ಜುವುದಿಲ್ಲ ಎಂದು ತಿಳಿದು ಆಶ್ಚರ್ಯವಾಯಿತು. ನಾನೇನೋ ಅವರು ಈಗಾಗಲೇ ನಿದ್ರೆಯಲ್ಲಿರುವಾಗಲೇ ಹಲ್ಲು ಉಜ್ಜಿ ಮುಗಿಸುವ ಯಂತ್ರವನ್ನು ಕಂಡು ಹಿಡಿದಿರುತ್ತಾರೆ ಅಂದುಕೊಂಡಿದ್ದೆ Smiling
ನಾವಿಬ್ಬರೂ ಈಗಾಗಲೇ ಒಪ್ಪಿರುವಂತೆ, ಎಲ್ಲ ದೇಶಗಳ ಮೇಲೂ ನಮಗೆ ಒಂದು ಪೂರ್ವಾಗೃಹ (ಪೂರ್ವಗ್ರಹ?) ಇರುತ್ತದೆ.ಅವರೊಳಗೊಬ್ಬನಾಗಿ ಬಾಳಿ ಮಾತ್ರ ಅಲ್ಲಿನ ಜನರ ಸಂಸ್ಕೃತಿಯನ್ನು ತಿಳಿಯಲು ಸಾಧ್ಯ.
-ಶಾಸ್ತ್ರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
  • ಮರೆತ ಹಣ್ಣುಗಳು
  • ಅವಿಭಕ್ತ ಕುಟುಂಬ -ಒಂದು ಜಿಜ್ನಾಸೆ
  • ಹೊಸ ವರ್ಷಕ್ಕೆ ನನ್ನ ರಿಸಲ್ಯೂಷನ್
  • ಕೊನೆಯ ಲಿಫ಼್ಟ್ ( The last Lift )
Syndicate content

ಲೇಖಕರು

shas3n's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
  • ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
  • ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:33pm
  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 1:32pm
  • ASHOKKUMAR
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 12:57pm
  • harshab
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 7, 2008 - 12:52pm
  • Shivakumar.Revadi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 7, 2008 - 12:44pm
  • anil.ramesh
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:44pm
  • savithasr
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:30pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • Chetan.Jeeral
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:29pm
  • ASHOKKUMAR
    ಉ: ಡೈರಿಯ ಕೆಲವು ಹಾಳೆಗಳು - ಭಾಗ ೭
    October 7, 2008 - 12:25pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 186 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator