ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಲೇಖಕರು

IsmailMKShivamogga's picture

ಪೂರ್ಣ ಹೆಸರು
Ismail MK Shivamogga (UAE)

ಪರಿಚಯ

ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು - ಅಬುಧಾಬಿ - ಯು ಎ ಇ ( ನನ್ನ ಮನಸ್ಸು ಮಾತ್ರ ಅಲ್ಲೇ ಶಿವಮೊಗ್ಗದಲ್ಲೇ ಇದೆ )

Ismail MK Shivamogga
Abu Dhabi
UAE

ಆತ್ಮೀಯ ಸ್ನೇಹಿತರೆ ನನ್ನ ಬಗ್ಗೆ ಹೆಚ್ಹಾಗಿ ತಿಳಿದು ಕೊಳ್ಳಲು ಬೇಟಿ ಕೊಡಿ
visit : www.ismailmkshivamog...

ಸುಂದರವಾದ ಪೇಂಟಿಂಗ್ ಗಳನ್ನೂ ನೋಡಬೇಕಾದಲ್ಲಿ ಬೇಟಿ ಕೊಡಿ
visit: www.picasaweb.google...

ಅದೇ ರೀ ಆ ಎದುರು ಮನೆ ಹುಡುಗಿ

ಅದೇ ರೀ ಆ ಎದುರು ಮನೆ ಹುಡುಗಿ
ಅದೇರೀ ಆ ಎದುರು ಮನೆ ಹುಡುಗಿ ಅವಳೀಗ ಮುಂಜಾನೆ ಎದ್ದು ರಂಗೋಲಿ ಹಾಕುವುದಿಲ್ಲ , ಅವಳೀಗ ಮನೆಯ ಕಂಪೊಂಡಿನಲ್ಲಿ ರಾಶಿ ರಾಶಿ ಬಟ್ಟೆ ಒಗೆಯುವುದು ಇಲ್ಲ , ಅದನ್ನು ಒಣ ಹಾಕುವುದುಇಲ್ಲ . ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ಕುಳಿತು ರಾಶಿ ರಾಶಿ ಪಾತ್ರೆ ತೊಳೆಯುವುದಿಲ್ಲ,
ಅದೇ ರೀ ಆ ಎದುರು ಮನೆ ಹುಡುಗಿ ಈಗ ಅಲ್ಲಿ ನಿಂತು ನನ್ನನ್ನೂ ಬಾಲ್ಕನಿಯಲ್ಲಿ ನೋಡಿ ಕಣ್ಣು ಮಿಟುಕಿಸ್ವುದಿಲ್ಲ ಅವಳೀಗ ನನ್ನನ್ನೂ ವೈಯಾರದಿಂದ ನೋಡುವುದಿಲ್ಲ, ಪ್ರತಿದಿನ ಬಗೆ ಬಗೆ ಯಾದ ತಿಂಡಿ ಮಾಡಿ ನನಗೆ ಮೊದಲಿನಂತೆ ಕೊಡುವುದಿಲ್ಲ , ಪ್ರತಿ ಭಾನುವಾರ ವಿಶೇಷ ತಿಂಡಿ ಮಾಡುತ್ತಿದ್ದಳಲ್ಲ ಅದು ಈಗ ಸಿಗುತ್ತಿಲ್ಲ , ಕದ್ದು ಮುಚ್ಚಿ ನನ್ನ ಒಟ್ಟಿಗೆ ಸಿನಿಮಾ ನೋಡಲು ಈಗ ಬರುತ್ತಿಲ್ಲ ,
ಭಾನುವಾರದ ಆ ಬೆಣ್ಣೆ ದೋಸೆ ಚಟ್ತ್ನಿ ನೆನಪಾಗುತ್ತಿದೆ , ಸೋಮವಾರದ ಆ ಚಿತ್ರಾನ್ನ ನೆನಪಾಗುತ್ತಿದೆ , ಮಂಗಳವಾರದ ಪೂರಿ ಸಾಗು ನೆನಪಾಗುತ್ತಿದೆ , ಬುಧವಾರದ ರುಚಿಯಾದ ಇಡ್ಲಿ ಸಾಂಬಾರ್ ನೆನಪಾಗುತ್ತಿದೆ , ಗುರುವಾರದ ಪುಳಿಯೋಗರೆ ಅಹಾ ಬಹಳ ನೆನಪಾಗುತ್ತಿದೆ , ಶುಕ್ರವಾರದ ಬಹು ಬೇಡಿಕೆಯ ಘೀ ರೈಸ್ , ಶನಿವಾರದ ತಟ್ಟೆ ಇಡ್ಲಿ ಮತ್ತು ಬೆಣ್ಣೆ , ಒಂದೋ ಎರಡೋ ಏನು ಹೇಳಲಿ ಏನೆಲ್ಲಾ ನನಗಾಗಿ ಮಾಡಿ ಕೊಡುತ್ತಿದ್ದಳು ,ಈಗ ಆ ಒಂದೂ ಕಾರ್ಯಕ್ರಮಗಳು ಕಾಣುತ್ತಿಲ್ಲ ,
ಅದೇ ಆ ಎದುರು ಮನೆ ಹುಡುಗಿ ಈಗ
ಗಿಡಗಳಿಗೆ ನೀರು ಹಾಕುವುದು ಕಾಣುತ್ತಿಲ್ಲ , ಜೋರಾಗಿ ಹಾಡುವುದು ಕೇಳಿಸುತ್ತಿಲ್ಲ , ಏನಾಯಿತು ಅವಳಿಗೆ ಎಲ್ಲರು ಟಿ ವಿ ನೋಡುವಾಗ ಕತ್ತಲೆಯಲ್ಲಿ ಬಂದು ನನಗೊಂದು ಮುತ್ತು ಕೊಟ್ಟು ಹೆದರಿಸುತ್ತಿದ್ದ , ಅವಳೀಗ ಎಲ್ಲವನ್ನು ಮರೆತಿದ್ದಾಳೆ , ಅವಳೀಗ ನಾನು ಕೂರುತ್ತಿದ್ದ ಬಾಲ್ಕನಿಯನ್ನು ನೋಡುವುದಿಲ್ಲ ,
ಅದೇ ರೀ ಆ ಎದುರು ಮನೆ ಹುಡುಗಿ
ಅವಳು ಮಾಡುತಿದ್ದ ಎಲ್ಲ ಕೆಲಸವನ್ನು ಈಗ ನಾನೇ ಮಾಡುತ್ತಿದ್ದೇನೆ ,.,. ,.,.,. ಕಾರಣವಿಷ್ಟೇ
ನಾನೀಗ ಮದುವೆ ಯಾಗಿರುವುದು ಅವಳನ್ನೇ ,.,. ಅವಳು ಬಾಲ್ಕನಿಯಲ್ಲಿ ಕೂರುತ್ತಾಳೆ ,.ನಾ ಮಾಡುವ ಎಲ್ಲ ಕೆಲಸವನ್ನು ನೋಡುತ್ತಾ ,.,.,.,.,.
ನಾನು ಕಣ್ಣು ಮಿಟುಕಿಸಿದರೆ ,.,.,. ಅವಳು ಕಣ್ಣು ಬಿಟ್ಟು ಹೆದರಿಸುತ್ತಾಳೆ ,.,.,.!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
bhalle's picture

:-)

Santhu's picture

:)

srinivasps's picture

:) ಚೆನ್ನಾಗಿದೆ!
ಅನುಭವ ಕಥನ ಅಂತ ಹಾಕಿದ್ದೀರಲ್ರೀ?!
ಸಾರ್, ಸ್ವಲ್ಪ ಹುಷಾರಾಗಿರಿ. ನಿಮ್ಮೀ ಬರಹ ನಿಮ್ಮಾಕೆ ನೋಡಿದ್ರೆ???

ಒಂದು ಕಿವಿಮಾತು:
ವಿರಾಮ, ಅಲ್ಪವಿರಾಮಗಳನ್ನು ಸರಿಯಾದ ಕಡೆ ಬಳಸಿದರೆ ಓದಲು ಸುಲಭವಾಗುತ್ತದೆ.
ಒಮ್ಮೆ ಇತ್ತ ಗಮನ ಕೊಡಿ...ನಾನು ಇವುಗಳಲ್ಲಿ ನಿಪುಣ ಅಂತ ಈ ಟಿಪ್ಪಣಿ ಕೊಡ್ತಿಲ್ಲ.
ನಿಮ್ಮ ಬರಹಗಳನ್ನು ಓದುವುದಿಕ್ಕೆ ಸ್ವಲ್ಪ ಕಷ್ಟ ಆಗುತ್ತೆ, ಆದ್ದರಿಂದ ಹೇಳ್ತಿದ್ದೀನಿ. ಬೇಜಾರಿಲ್ಲ ತಾನೆ?

--ಶ್ರೀ

IsmailMKShivamogga's picture

ಬಹಳ ನಗು ಬಂತು ನಿಮ್ಮ ಮಾತು ನೋಡಿ -- ಧನ್ಯವಾದಗಳು.
ಮತ್ತೆ ಭಾಷೆ ವಿಷ್ಯ ಅಂದ್ರೆ ಇದು ಒಂಥರಾ ಎಸ್ ಎಂ ಎಸ್ ಬರವಣಿಗೆ ರೀ ಸ್ವಲ್ಪ ಅಡ್ಜಸ್ಟ್ ಮಾಡ್ಕೊಲ್ರಿ ನಾವು ಕರ್ನಾಟಕದವರು ಅಲ್ವೇನ್ರೀ ನಮಗೆ ಎಲ್ಲ ಜೀರ್ಣ ಆಗುತ್ತೆ ಅಲ್ವಾ.
(ಮುಂದೆ ಸರಿಯಾಗಿ ಬರೆಯುತ್ತೇನೆ ತಪ್ಪು ಗಳಿಗೆ ಕ್ಷಮೆ ಇರಲಿ)

IsmailMKShivamogga's picture

ಬಹಳ ನಗು ಬಂತು ನಿಮ್ಮ ಮಾತು ನೋಡಿ -- ಧನ್ಯವಾದಗಳು.
ಮತ್ತೆ ಭಾಷೆ ವಿಷ್ಯ ಅಂದ್ರೆ ಇದು ಒಂಥರಾ ಎಸ್ ಎಂ ಎಸ್ ಬರವಣಿಗೆ ರೀ ಸ್ವಲ್ಪ ಅಡ್ಜಸ್ಟ್ ಮಾಡ್ಕೊಲ್ರಿ ನಾವು ಕರ್ನಾಟಕದವರು ಅಲ್ವೇನ್ರೀ ನಮಗೆ ಎಲ್ಲ ಜೀರ್ಣ ಆಗುತ್ತೆ ಅಲ್ವಾ.
(ಮುಂದೆ ಸರಿಯಾಗಿ ಬರೆಯುತ್ತೇನೆ ತಪ್ಪು ಗಳಿಗೆ ಕ್ಷಮೆ ಇರಲಿ)

ಅರವಿಂದ್'s picture

ಇಸ್ಮಾಯಿಲ್,

ಹೇಗಿದ್ರಿ....................... ಹೇಗಾದ್ರೀ....................... ಪಾಪ ;)

ಅನುಭವ ಸಕ್ಕತ್ತ್ ಸಾರ್ :)

ಅರವಿಂದ್

IsmailMKShivamogga's picture

ರೀ ಅರವಿಂದ್ ಇದು ನನ್ನ ಅನುಭವ ಕಥನ ಅಲ್ಲಾರೀ
ನಾನು ಕಂಡ ರಿಯಲ್ ಸ್ಟೋರಿ ,.
ಮತ್ತೊಬ್ಬರ ಅನುಭವ ನಮಗೆ ಕಥನ ಅಗ್ಗುತ್ತೆ ಅಲ್ವಾ .
ಅಂದ ಹಾಗೆ ನೀವು ತುಂಬಾ ಸಾಲ ಮಾಡಿದ್ದೀರ ಅಥವಾ (ನೋ ಎಂಟ್ರಿ ಫಿಲಂ ಥರ) ಕಥೆ ಏನಾದ್ರೂ ಇದೆಯಾ ಅಂತ ನಂಗೆ ಸಂಶಯ ಕಾರಣ ನಿಮ್ಮ ಫೋಟೋ ?

ಅರವಿಂದ್'s picture

ಇಸ್ಮಾಯಿಲ್
>>ರೀ ಅರವಿಂದ್ ಇದು ನನ್ನ ಅನುಭವ ಕಥನ ಅಲ್ಲಾರೀ<<

ಹಾಗಂತಾ ಎಲ್ಲೂ ಹಾಕಿರಲಿಲ್ಲ, ನಾನು ನಿಮ್ಮದೇನೋ ಅನ್ಕೊಂಡೆ ;)

>>ನೀವು ತುಂಬಾ ಸಾಲ ಮಾಡಿದ್ದೀರ ಅಥವಾ (ನೋ ಎಂಟ್ರಿ ಫಿಲಂ ಥರ) ಕಥೆ ಏನಾದ್ರೂ ಇದೆಯಾ ಅಂತ ನಂಗೆ ಸಂಶಯ ಕಾರಣ ನಿಮ್ಮ ಫೋಟೋ ?<<
ಸಾಲ ಮಾಡಿ ಹಾಕ್ಕೋಂಡಿದ್ದಲ್ಲ, ಸಾಲ ಕೇಳೋವಾಗ್ಲೇ ಹಾಕೊಂಡಿರೋದು ;)

ಸಾಲ ಯಾರಿಗೆ ಕೊಟ್ಟಿದ್ದು ಅಂತಾನೂ ಗೊತ್ತಾಗಬಾರ್ದು ನೋಡೀ ;)

ಅರವಿಂದ್

malathi shimoga's picture

ಅಂತು ಎದರು ಮನೆ ಹುಡ್ಗಿ ನಿಮ್ಮನೆ ಹುಡ್ಗಿ ಆದ್ಲು......
ಅನುಭವಿಸಬೇಕಾದ್ದೆ.

IsmailMKShivamogga's picture

ಇದು ನನ್ನ ಅನುಭವ ಕಥನ ಅಲ್ಲಾರೀ
ಮತ್ತೊಬ್ಬರ ಅನುಭವ ನಮಗೆ ಕಥನ ಅಗ್ಗುತ್ತೆ ಅಲ್ವಾ .
ಅಬ್ಬ ಈ ಶಿವಮೊಗ್ಗದ ಹುಡುಗಿಯರೇ ಕಷ್ಟ ಬಾಳಾ ಜೋರು

bhu's picture

he he he ..................................lol......:-)

vijay's picture

ಬಹಳ ಚೆನ್ನಾಗಿದೆ, ಯಾಕೆ ಬೇಕಿತ್ತು ಗ್ರಹಚಾರ..!! ಅದ್ಯಾವುದೊ ಸಿನಿಮಾದಲ್ಲಿ ಉಪೇಂದ್ರ ಹಾಡ್ತಾನಲ್ಲ...." ಎಲ್ಲಾ ಓಕೆ ಮದುವೆ ಯಾಕೆ...." ಅಂತಾ !! :) :) :) :)

acchhu's picture

ಇದು ಬೇಕಿತ್ತಾ?? ಇರ್ಲಿ ಈಗ ಪಾಲಿಗೆ ಬಂದದ್ದು ಪಂಚಾಮ್ರುತ. . . .ಏನಂತೀರಿ????

IsmailMKShivamogga's picture

Ree Gauthami
ಇದು ನನ್ನ ಅನುಭವ ಕಥನ ಅಲ್ಲಾರೀ
ಮತ್ತೊಬ್ಬರ ಅನುಭವ ನಮಗೆ ಕಥನ ಅಗ್ಗುತ್ತೆ ಅಲ್ವಾ .
ಅಬ್ಬ ಈ ಹುಡುಗಿಯರೇ ಕಷ್ಟ ಬಾಳಾ ಜೋರು