ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

' ಕದ್ದೂ ಹೋದ, ಮೆದ್ದೂ ಹೋದ- ಅಂತಾರಲ್ಲ ಹಂಗಾಯ್ತಿದು !

ಮುಂಬೈ ನಲ್ಲಿ ಕನ್ನಡ ಎಮ್. ಎ. ಮಾಡ್ತಿರೋ ನಮ್ಮ ೨೩ ವರ್ಷ ಪ್ರಾಯದ ಕೊಟ್ಯಾನ್ ರಿಗೆ ಆದ ಕೆಟ್ಟ ಅನುಭವ ಇದು. ಇದು ಪೇಪರ್ನಲ್ಲಿ ಬಂದಿತ್ತು. ಓದಿರ್ಲಿಲ್ಲಾ ಅಂದ್ರೆ ಒಂದ್ಸಲ ಕಣ್ಣಾಡಿಸ್ರಿ. ಕೊಟ್ಯಾನ್ ಮಾಟುಂಗದ ’ಖಲ್ಸಾ ಕಾಲೇಜ್ಗೆ” ಹೋಗ್ತಾ ಇದ್ರು. ಅಲ್ಲೇ ಹತ್ತಿರದ ’ಸಿವ್ರೀ ಉಪನಗರ ’ ದಲ್ಲಿ ಅವರ ಅಪ್ಪ ಅಮ್ಮರೊಂದಿಗೆ ವಾಸವಾಗಿದ್ದಾರೆ. ಅವ್ರಿಗೆ ಅಲ್ಲೇ ಉಪನಗರದಲ್ಲಿ ’ಶಹೀನ್ ಮ್ಯಾನ್ಶನ್,” ನಲ್ಲಿ , ಒಂದು ಕೋಣೆ ಇತ್ತು. ಅಲ್ಲಿಗೆ ಅವ್ರು ಹೋಗ್ತಾ ಇದ್ದದ್ದು, ಯಾವಾಗ್ಲಾದೄ ಅಭ್ಯಾಸಮಾಡಕ್ಕೆ ಮಾತ್ರ. ರಾತ್ರಿ ಮಲ್ಗಿರೋರು, ಮತ್ತೆ ಬಳಿಗ್ಯೆ ಎದ್ದು ಬರೋರು. ಕೆಲವುಸಾರಿ ಒಂದೊಂದು ವಾರ ಅಲ್ಲಿಗೆ ಹೋಗಕ್ಕೆ ಆಗ್ತಿರಲಿಲ್ಲ. ವೆಂಕಟೇಶ್ ಶಶಿತಲ್ ಅನ್ನೋ ಅವ್ರ ಸಂಬಂಧದೋರು, ಮನೆನಾ ನೋಡ್ಕೊಳ್ಳೋರು.

ಒಮ್ಮೆ, ವೆಂಕಟೇಶ್ ಶಿರ್ಡಿ ಗೆ ಸಾಯಿಬಾರವರ ದರ್ಶನ ಮಾಡಲು, ತಮ್ಮ ಫ್ಯಾಮಿಲಿ ಸಹಿತ ಹೋದೃ. ಅದೇ ದಿನ ಆ ದಿನ ಕೋಟ್ಯಾನ್ ತಮ್ಮ ಕೋಣೆಗಬಂದ್ರೆ, ಹಾಕಿದ್ದ ಬೀಗ ಅವ್ರದಲ್ಲ. ಮತ್ತೆ ಮನೆ ನೇಮ್ ಪ್ಲೇಟ್ ನಲ್ಲಿ ’ಆರೀಫ್ ಖಾನ್,’ ಅಂತ ಬರ್ದಿತ್ತು. ಕೋಟ್ಯಾನ್ ರಿಗೆ ಶಾಕ್ ಆಯ್ತು. ಇದೇನಪ್ಪ ನಮ್ಮ ರೂಮೇ ಕಳ್ವಾಯ್ತಾ ಹ್ಯಾಗೆ ಅಂತ. ವಿಚಾರ್ಸಕ್ಕೆ ವೆಂಕಟೇಶ್ ಇಲ್ಲ. ಅಲ್ಲಿನ ವಾಚ್ಮನ್ ನ ಕೇಳಿದೃ. ಅಕ್ಕ -ಪಕ್ಕ ಯಾರ್ಗೂ ಅದ್ರ ಸುಳಿವೇ ಇಲ್ಲ. ವೆಂಕಟೇಶ್ ಗೆ ಫೋನಾಯಿಸಿ ಕೇಳಿದೃ. ಅವ್ರಿಗೂ ಗೊತ್ತಿಲ್ಲ. ೨ ದಿನ ಆಗಾಗ ಬಂದು ನೋಡ್ತಿದೃ. ೩ ನೇದಿನ, ಇಬ್ಬರು ಕೆಲಸಗಾರ್ರು, ರೂಮಿಗೆ ಮರುಬಣ್ಣ ಬಳ್ಯೋ ಕೆಲ್ಸದಲ್ಲಿ ತೊಡಗಿದ್ದರು. ಕೊಟ್ಯಾನ್ ರೂಂ ಒಳಗೆ ಕಾಲಿಟ್ರೆ, " ಹೋಗಿ, ಒಳಿಗ್ ಬರ್ಬೇಡಿ. ನಮ್ಮ ಮಾಲೀಕೃ ನಮ್ಗೆ ಹೇಳಿದಾರೆ. ಯಾರೋಗೊತ್ತಿಲ್ಲ್ದೋರ್ನೆಲ್ಲಾ ಒಳ್ಗೆ ಬಿಡ್ಬ್ಯಾಡಿ ಅಂತ " ಅಂದಿದ್ದು ಕೇಳಿ ಕೊಟ್ಯಾನ್ ತಲೆ ಬಿಸಿ ಆಯ್ತು. ಎಮ್ .ಆರ್ ಮಾರ್ಗದ ಪೋಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದರ್ಜ್ ಮಾಡಿದೃ. ತನಿಖೆಗಾಗಿ ಇನ್ಸ್ಪೆಕ್ಟರ್ ಬಂದಾಗ ಆರೀಫ್ ಖಾನ್ ಹೇಳಿದ್ದು, ’ ಪೂರ್ತಿ ಬಿಲ್ಡಿಂಗೇ ಅವ್ನ್ದು. ಕೊಟ್ಯಾನ್ ರೂಮ್ ನ ಅವನೇ ಖರೀದ್ಸಿದಾನೆ” ಅಂತ. ಸೀನಿಯ ಇನ್ಸ್ಪೆಕ್ಟರ್ ಸಂಜೀವ್ ಖೋಲಿ, ಆರೀಫ್ ನ ಸೆಕ್ಶನ್ ೪೪೮, ೪೫೪, ೪೫೭, ೩೮೦ ರ ಐ. ಪಿ. ಸಿ. ಕಾನೂನಿನ ಮೇರೆಗೆ, ಜೂನ್ ೧೮ ನೇ ತಾರೀಖು, ಜೈಲಿಗೆ ಹಾಕಿದೃ. ಯಾಕೆ ಅಂದ್ರೆ, ಅರೀಫ್ ತನ್ನ ಮಾತ್ನ ಪ್ರೂವ್ ಮಾಡಕ್ಕಾಗ್ಲಿಲ್ಲ. ಆರೀಫ್ ಇಂಥಾ ಕೆಲ್ಸಗಳ್ನ ಮಾದೋದ್ರಲ್ಲಿ ನಿಸ್ಸೀಮ. ದಕ್ಷಿಣ ಆಫ್ರಿಕದಲ್ಲೂ ಹೀಗೆ ಜನರಿಗೆ ಮೋಸಮಾಡಿ ಸಿಕ್ಕಾಕಿಕೊಂಡಿದ್ದ. ಡ್ರಗ್ ಸ್ಮಗ್ಲಿಂಗ್ ಮತ್ತೆ, ಇನ್ನೂ ಏನೇನೋ ಅಪರಾಧಗಳಲ್ಲಿ ಕೈದಿಯಾಗಿರುವ ವಿಚಾರ ತಿಳೀತು. ಪೋಲೀಸ್ನೋರು ವಿಚಾರ್ಸ್ತಿದಾರೆ.

ಬೆಂಗ್ಳೂರ್ನಲ್ಲೂ ಇದೇನ್ ಹೊಸ್ದೇ ? ಈಗಿದು ತಾಜಾ ಸುದ್ದಿ. ಮತ್ತೆ ಹಳೇದಾಗೋವರ್ಗೆ. ಮತ್ತೊಂದು ಹೊಸ್ದದನ್ನು ಓದೋದು, ಬೇಸ್ತು ಬೀಳೋದೆ ನಮ್ಮಂಥವ್ರ ಕರ್ಮ, ಅಲ್ವೇ ?? !!

-ಸೌಜನ್ಯ-ಮುಂಬೈ ಮಿರರ್ ನ ವರದಿ. ಹೋದವಾರದ ವಿಶಯ.

No votes yet