ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಸಂಪದ ಆರ್ಕೈವಿನಿಂದ

ಲೇಖಕರು

acchhu's picture

ಪೂರ್ಣ ಹೆಸರು
gowthami manjunath

ಪರಿಚಯ

ನಾನು ಗೌತಮಿ.ಹುಟ್ಟಿದ್ದು ಪುಟ್ಟ ಗೂಡೊಂದರಲ್ಲಿ.ತಂದೆ ತಾಯಿಯರಿಗೆ ಜೀಶ್ಟ ಪುತ್ರಿ.ಬೆಳೆದಿದ್ದು ಹಾಗು ಸಧ್ಯ ಬೇರೂರಿರೋದು ಬೆಂಗಳೂರಿನಲ್ಲಿ.ಕನ್ನಡ ಅಂದ್ರೆ ಪ್ರಾಣ. ಮಾತಾಡೋದು ಅಂದ್ರೆ ತುಂಬ ಖುಶಿ.ಹಾಡೋದು,ಬರಿಯೋದು ಅಪ್ಪ ಚಿಕ್ಕಪ್ಪ ಇಬ್ಬರಿಂದ ನಾನೆ ಕಸಿದುಕೊಂಡ ಆಸ್ತಿ.ವೈದ್ಯೆ ಆಗಬೇಕೆಂದು ಕನಸು.ಈಗ ಅಭಿನೇತ್ರಿ ಅಗಲು ಹೆಜ್ಜೆ ಇಡುತಿದ್ದೀನಿ.ಸಮಯ ಸಿಕ್ಕಾಗಲೆಲ್ಲ ನಿಮ್ಮೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ.

ಹೀಗೊಂದು ಕನಸು . . . . . .

ನನ್ನ ಕನಸಿನ ಹುಡುಗ. . . . .

ಹೀಗಿರಬೇಕು ನನ್ನವನು;
ಚೆಲ್ಲುತಿರಬೇಕು ಸದಾ ನಗುವೊಂದನ್ನು:
ಪ್ರತಿಭಾರಿ ಹೊತ್ತು ಬರಬೇಕು ಮುತ್ತಿನ ಮೊಟೆಯೊಂದನು;
ನನಗಾಗಿ ಕಟ್ಟಿರಬೇಕು ಸುಭದ್ರ ಕೋಟೆಯೊಂದನು:

ಗಂಟೆಗೊಮ್ಮೆ ಪಿಸುಗುಡಬೇಕು ಮುದ್ದಿನ ಮಾತೊಂದನು
ಘಳಿಗೆಗೊಮ್ಮೆ ಕಳಿಸಬೇಕು ಹುಚ್ಚು ಸಂದೇಶವೊಂದನು.
ಪ್ರತಿ ಸಂದೇಶದಲ್ಲಿ ತುಂಬಿರಬೇಕು ಹೊಸತನವನು
ವಾಸ್ತವದಿಂದ ದೂರ ಕೊಂಡೊಯ್ಯಬೇಕು ನನ್ನವನು [ನನ್ನನ್ನು ಅವನು]

ಹುಸಿ ನುಡಿಯಬೇಕು ಒಮ್ಮೊಮ್ಮೆ ತಡವಾದಾಗ
ಸುಳಿಯುತ್ತಿರಬೇಕು ಕನಸಲಿ ಅಪರಿಚಿತನಂತೆ ಆಗಾಗ!
ತಬ್ಬಿ ಮುದ್ದಿಸಬೇಕು ಖುಶಿಯಾದಾಗ;
ಮಡಿಲಲ್ಲಿ ತಲೆಯಿಟ್ಟು ಮರುಗಬೇಕು, ಮನನೊಂದಾಗ.

ಆಸರೆಯಾಗಬೇಕು ನಾ ಒಂಟಿಯಾದಾಗ
ಜೊತೆಯಾಗಬೇಕು ಮಳೆಯಲ್ಲಿ ನಾ ನಡೆಯುವಾಗ
ಕನವರಿಸಬೇಕು ಕನಸಿನಲ್ಲಿ "ಕ್ಷಮಿಸು" ಎಂದು ತಿಳಿಯದೆ ತಪ್ಪಾದಾಗ,
ಮರಳಿ ಮರುಕಳಿಸಬೇಕು ಕಣ್ಣಂಚಿನಲಿ,, ಸಪ್ತಸಾಗರದಾಚೆ ನಾನಿದ್ದಾಗ:

ಒಂದಾಗಬೇಕು ನಾವಿಬ್ಬರು ನಮ್ಮ ಗುರಿ ಮುಟ್ಟಿದಾಗ;
ನನಗಿಂತ ಹೆಚ್ಚು ಬೇರಾವುದೊ ಇಲ್ಲವೆಂದೆನಬೇಕು ನನ್ನ ಕೈ ಹಿಡಿದಾಗ!!!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
IsmailMKShivamogga's picture

ತಥಾಸ್ತು ,.!
ನಿಮ್ಮ ಆಸೆ ಈಡೇರಲಿ.