ಸಮುದಾಯ ಚಿತ್ರೋತ್ಸವ - ೨೦೦೯
ಎಪ್ಪತ್ತರ ದಶಕದಲ್ಲಿ ಸಾಹಿತಿಗಳು, ರಂಗಕಲಾವಿದರು, ಚಿತ್ರ ಕಲಾವಿದರು ಒಂದೆಡೆ ಸೇರಿ ಹುಟ್ಟಿಕೊಂಡ ಸಂಸ್ಥೆಯೇ ಸಮುದಾಯ. ಕಳೆದ ಮೂವತ್ನಾಲ್ಕು ವರ್ಷಗಳಿಂದ ನಾದಿನಾದ್ಯಂತ ಬೀದಿ ನಾಟಕ ಮತ್ತಿ ರಂಗಚಳುವಳಿಯ ಮೂಲಕ ಮನೆ ಮಾತಾಗಿರುವ ಸಮುದಾಯ ಸಮಾಜಮುಖಿ ಚಿತ್ರಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಚಿತ್ರ ಸಮುದಾಯ ಎಂಬ ಉಪ ಸಮಿತಿಯ ಮೂಲಕ ಜನರಿಗೆ ಸದಭಿರುಚಿಯ ಚಿತ್ರಗಳನ್ನು ನೋಡುವ ಹವ್ಯಾಸ ಬೆಳೆಸುವ ದಿಕ್ಕಿನಲ್ಲಿ ಈ ಪ್ರಯತ್ನ ಸಾಗಿದೆ.
ಈ ನಿಟ್ಟಿನಲ್ಲಿ, ನಾಲ್ಕು ಚಿತ್ರಗಳ ನಿರ್ಮಾಪಕರನ್ನು ಸಂಪರ್ಕಿಸಿ ಅವರ ಸಹಕಾರದಿಂದ ಪ್ರಥಮ ಬಾರಿಗೆ ನಗರದ ಕೈಲಾಷ್ ಚಿತ್ರಮಂದಿರದಲ್ಲಿ ಅಕ್ಟೋಬರ್ ೩೦ ರಿಂದ ೭ ದಿನಗಳ 'ಸಮುದಾಯ ಚಿತ್ರೋತ್ಸವ ೨೦೦೯' ಆಯೋಜಿಸಲಾಗಿದೆ.
ಆ ನಾಲ್ಕು ಚಿತ್ರಗಳು:
೧. ಕೆ. ಶಿವರುದ್ರಯ್ಯ ಅವರ ನಿರ್ದೇಶನದ 'ದಾಟು'
೨. ಅಭಯಸಿಂಹ ಅವರ ನಿರ್ದೇಶನದ 'ಗುಬ್ಬಚ್ಚಿಗಳು'
೩. ಉಮಾಶಂಕರಸ್ವಾಮಿ ಅವರ ನಿರ್ದೇಶನದ 'ಬನದ ನೆರಳು'
೪. ಬಿ. ಸುರೇಶ ಅವರ ನಿರ್ದೇಶನದ 'ಅರ್ಥ'
- Login or register to post comments
- 201 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS: