ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

"ವಂದೇ ಮಾತರಂ" ನಮ್ಮ ರಾಷ್ಟ್ರಗೀತೆಯಾಗಬೇಕಿತ್ತೆ...? - ೧

ಹೀಗೆ ಕೆಲವು ದಿನಗಳ ಹಿಂದೆ ನಮ್ಮ ರಾಷ್ಟ್ರಗೀತೆ "ಜನ ಗಣ ಮನ..." ದ ಪೂರ್ಣ ಸಾರಾಂಶದ ಕುರಿತು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಸಿಕ್ಕ ಕೆಲವು ಮಾಹಿತಿಗಳು ನನಗೆ ನಿಜಕ್ಕೂ ಅಶ್ಚರ್ಯ ತರಿಸಿದವು... ನಾವು ಹಾಡುತಿರುವ ರಾಷ್ಟ್ರಗೀತೆ ನಮ್ಮ ಭಾರತಮಾತೆಯ ಕುರಿತೋ ಅಥವಾ ಒಬ್ಬ ಅಂಗ್ಲ ರಾಜನ ಕುರಿತೋ ಎಂಬ ಪ್ರಶ್ನೆ ಮಾಹಿತಿ ಹುಡುಕುತ್ತ ಹೋದ ನನಗೆ ಕಾಡತೊಡಗಿತು. ನಾ ಕಂಡ ಮಾಹಿತಿಗಳ ಚಿಕ್ಕ ಸಂಗ್ರಹ ಈ ಲೇಖನ...


ರವೀಂದ್ರನಾಥ ಟಾಗೋರರಿಂದ ರಚಿತ "ಜನ ಗಣ ಮನ.." ಗೀತೆ ೧೯೧೧ ರಲ್ಲಿ ಭಾರತಕ್ಕೆ ಭೇಟಿಯಿತ್ತ ರಾಜ ಜೋರ್ಜ್-೫ ಮತ್ತು ಇಂಗ್ಲಂಡ್ ರಾಣಿ ಯ ಮನ್ನಣೆಗಾಗಿ ಬರೆಯಲಾಗಿತ್ತು. ಅವರ ಭೇಟಿಯನ್ನು ಸ್ಮರಣೀಯಗೊಳಿಸಲು ಪಂಡಿತ್ ಮೋತಿಲಾಲ್ ನೆಹರು ರವರು ಪೂರ್ಣ ಗೀತೆಯಲ್ಲಿ ೫ ಸಾಲುಗಳನ್ನು ಮಾತ್ರ ಉಳಿಸಿಕೊಂಡಿದ್ದರು...! (ಮುಂಬೈಯಿಯ ಗೇಟ್ ವೇ ಅಫ್ ಇಂಡಿಯ ಕೂಡ ಇವರಿಬ್ಬರ ಆಗಮನದ ನೆನಪಲ್ಲೇ ಕಟ್ಟಿದ್ದು ಬಿಡಿ...!). ಗೀತೆಯ ಸಾಲುಗಳು ರಾಜನನ್ನೇ ಹೊಗಳುತ್ತಿದ್ದವೋ ಎನೋ.., ಅಂತೂ ಅದರ ಕುರುಹುಗಳು ನಮಗೆ ಅಲ್ಲಲ್ಲಿ ಕಾಣದೇ ಇರುವುದಿಲ್ಲಾ...


ಮೂಲತ: ಬೆಂಗಾಳಿಯಲ್ಲಿ ರಚಿತವಾದ ಈ ಗೀತೆ ಅಂದು ಅಂಗ್ಲರ ಹಿಡಿತದಲ್ಲಿ ಇದ್ದ "ಬಂಗಾಳ" "ಸಿಂಧ್" "ಗುಜರಾತ್" "ಮರಾಟ" ಜಾಗಗಳ ಹೆಸರಿದ್ದವೇ ಹೊರತು ದಕ್ಷಿಣ ರಾಜ್ಯಗಳ ಹೆಸರು ಮತ್ತು ಇತರ ರಾಜ್ಯಗಳ ಬಗ್ಗೆ ಬರೆದ ಕುರುಹು ಇಲ್ಲ (ಕೆಲವು ಪೋರ್ಚುಗೀಸರ ಹಿಡಿತದಲ್ಲಿ ಇದ್ದವು...!).. ರಾಜ ಜೋರ್ಜ್-೫ ರವರೇ ನಮ್ಮ "ಮಂಗಳದಾಯಕ" ಮತ್ತು "ಭಾರತ ಭಾಗ್ಯ ವಿಧಾತ"(ಮಂಗಳದಾಯಕ - ವಿಧಾತ -- "ಪುಲ್ಲಿಂಗ" ಪದ ಅಲ್ಲವೇ?)...!?


ಹೀಗೆ ಸಾಗುತ್ತದೆ ಗೀತೆಯ ಒಂದು ಸಾಲು....


"ತವ ಶುಭ ನಾಮೇ ಜಾಗೇ; ತವ ಶುಭ ಅಶಿಶ್ ಮಾಗೆ, ಗಾಯೇ ತವ ಜಯ ಗಾಥ..."


--ಜನ (ಭಾರತೀಯ ಪ್ರಜೆಗಳು...) ಮುಂಜಾನೆ ಎದ್ದು ನಿಮ್ಮ ಶುಭ ನಾಮವಾ ಜಪಿಸುವರು...,(!) ನಿಮ್ಮ ಅಶಿರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬೇಡುವರು ಮತ್ತು ನಿಮ್ಮ ಗುಣಗಾನ ಮಾಡುವರು...!


ಈ ಗೀತೆಯ ಬಗ್ಗೆ ಅಂದು ಭಾರತೀಯ ಪತ್ರಿಕೆಗಳು ಬಹಳ ಖಾರವಾಗಿಯೇ ಪ್ರತಿಕ್ರಿಯಸಿದವು. ಡಿಸೆಂಬರ್ ೨೮ ಮತ್ತು ೨೯, ೧೯೧೧ ರಂದು ಬಂದ ಸುದ್ದಿ ಸಾರಂಶ ಹೀಗಿದ್ದವು:


" ದಿನದ ಕಾರ್ಯಕ್ರಮ ಬಾಬು ರವೀಂದ್ರನಾಥ ಟಾಗೋರರು ರಚಿಸಿದ, ಚಕ್ರವರ್ತಿಯ ಭಾರತದ ಅಗಮನದ ಶುಭಸಂದರ್ಭಕ್ಕಾಗಿ ಬರೆದ ಗೀತೆಯಿಂದ ಪ್ರರಂಭವಾಯಿತು... ಇಂಗ್ಲಿಶ್ಮನ್, ಡಿಸೆಂ. ೨೮, ೧೯೧೧..) ( ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕಿಸಿ...)


ಮೇಲಿನ ಸಾಲುಗಳ ಮೇಲೆ ಇತರರು ಬೇರೆ-ಬೇರೆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರೂ (ಖುದ್ದು ರವೀಂದ್ರರೇ ಫುಲಿನ್ ಬೆಹಾರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ ಇದರ ಬಗ್ಗೆ ಪ್ರತಿಕ್ರಿಯಸಿದರೂ ಸಹ... ಮಾಹಿತಿ) ಅ ಕಾಲದಲ್ಲಿ ಈ ಗೀತೆ ಇಂಗ್ಲಂಡ್ ರಾಜ/ರಾಣಿ (ಕೆಲವರು ಚಕ್ರವರ್ತಿ ಅಂತಲೂ ಬಣ್ಣಿಸಿದ್ದಾರೆ...!) ಭಾರತಕ್ಕೆ ಅಗಮಿಸಿದ ಶುಭಸಂದರ್ಭಕೋಸ್ಕರವೇ ಬರೆದಿದ್ದು ಎಂಬ ಮಾತು ಪ್ರಸಿದ್ಧಿಯಾಗಿತ್ತು.


ಈ ಎಲ್ಲಾ ಹಿನ್ನಲೆಯನ್ನು ಗಮನಿಸಿದರೆ "ವಂದೇ ಮಾತರಂ" ನಮ್ಮ ರಾಷ್ಟ್ರ ಗೀತೆಯಾಗುವ ಎಲ್ಲಾ ಅರ್ಹತೆ ಪಡೆದಿತ್ತು. ಅದರೂ "ಜನ ಗಣ ಮನ" ದ ಜೊತೆಗಿನ ಓಟದಲ್ಲಿ ನೈಪತ್ಯಕ್ಕೆ ಸರಿಯಿತು... ಬೇರೆ ಇತರ ಕಾರಣಗಳು ಈ ಗೀತೆ ನಮ್ಮ ರಾಷ್ಟ್ರ ಗೀತೆಯನ್ನಾಗಲು ತಡೆಯಾದವು. ಇದನ್ನ ನಾ ಮುಂದಿನ ಭಾಗದಲ್ಲಿ ಬರೆಯುತ್ತೇನೆ...


ಮುಂದುವರಿಯುವುದು... ಭಾಗ - 2

Your rating: None Average: 4 (3 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
thesalimath's picture

ಮುಂದುವರಿಯುವುದಕ್ಕೆ ಮುಂಚೆ ಸಲ್ಪ ಓದಿ.


http://vimarshaki.wordpress.com/2009/09/03/ameen-sayani-humbly-proposes-an-anthem-to-cure-the-communications-crisis/

vinay_2009's picture

ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀಹರ್ಷ ರವರೆ,


ಹೌದು, ನನ್ನ ಲೇಖನದಲ್ಲೇ ಹೇಳಿದಂತೆ ಖುದ್ದು ರವೀಂದ್ರರೇ ಫುಲಿನ್ ಬೆಹಾರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ ರವೀಂದ್ರರು ಗೀತೆಯ ಸಾಲಿನಲ್ಲಿ ಬ್ರಿಟಿಷರ ಕುರಿತಾಗಿ ಯಾವುದೇ ವರ್ಣನೆ ಇರಲಿಲ್ಲವೆಂದು, ಭಾಗ್ಯವಿದಾತ ದೇವರಿಗೆ ಹೋಲಿಸಿದ್ದೆಂದು ಸ್ವತಃ ಹೇಳಿದ್ದರು. ಅದರೆ ಅಂದಿನ "Communication Problem" ( ನಿಮ್ಮ URL link ಸಹ ಅದೇ ಹೇಳುತ್ತದೆ) ಇಂದ ಏನೋ, ಬಹುತೇಕ ಜನರು ಒಪ್ಪಿಕೊಳ್ಳಲಿಲ್ಲ....


ನನ್ನ ಅನಿಸಿಕೆಯಂತೆ ಸ್ವಾತಂತ್ರ ಹೋರಾಟದ ಅಷ್ಟು ವರ್ಷಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಮ್ಮ "ವಂದೇ ಮಾತರಂ" ನಮ್ಮ ರಾಷ್ಟ್ರಗೀತೆಯಾಗಿದ್ದರೆ ಚೆನ್ನಾಗಿತ್ತೇನೋ... ನಾನು ಅದರ ಬಗ್ಗೆಯೇ ನನ್ನ ಲೇಖನದ ಎರಡನೆ ಭಾಗದಲ್ಲಿ ಬರೆದಿರುವೆ... ತಾವು ಅದನ್ನು ಓದುವರೆಂಬ ವಿಶ್ವಾಸದೊಂದಿಗೆ... :)


ನಿಮ್ಮ ವಿನಯ.