ಈಗಿನಂತೆ 3 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ದಸರಾ: ಅಂದು ‍‍‍‍ಇಂದು...
shashikannada's picture
ಶಶಿಕುಮಾರ್
05
Oct
2011
ಬ್ಲಾಗ್ ಬರಹ

ಅಕ್ಟೋಬರ್ ತಿಂಗಳು ಬರುತ್ತಿದ್ದ ಹಾಗೆಯೇ, ಕರ್ನಾಟಕದಲ್ಲಿ ಅದರಲ್ಲೂ ಮುಖ್ಯವಾಗಿ ಮೈಸೂರಿನಲ್ಲಿ ದಸರಾ ಕಳೆಕಟ್ಟತ್ತದೆ. ಇಡೀ ಮೈಸೂರು ನಗರ ಮದುವಣಗಿತ್ತಿಯಂತೆ...

ಪ್ರತಿಕ್ರಿಯೆಗಳು: 7
ಹಿಟ್ಸ್ : 254
ಅಚ್ಚಳಿಯದ ಪ್ರಭಾವ ಬೀರಿದ ಅಧ್ಯಾಪಕರು
Shivashankar Rao's picture
Addoor Shivashankar Rao
12
Mar
2012
ಲೇಖನ

...

ಪ್ರತಿಕ್ರಿಯೆಗಳು: 13
ಹಿಟ್ಸ್ : 370
ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-
ramvani's picture
ವಾಣಿ
23
Jan
2012
ಲೇಖನ

ಇಂದು ೨೦೧೨, ೨೩ ಽ ೨೪ ವಿಶ್ವದಾದ್ಯಂತ ಚೀನಿಯರಿಗೆ ಹೊಸ ವರುಷ. ಹೊಸ ಹರುಷ. ಈ ವರುಷದ ಪ್ರಾಣಿಯ ಸಂಕೇತ ಡ್ರಾಗನ್.

ಚೀನಿಯರು ಕೂಡ ಚಾಂದ್ರಮಾನ ಪರಿಪಾಲಕರು. ನಮ್ಮಲ್ಲಿ...

ಪ್ರತಿಕ್ರಿಯೆಗಳು: 6
ಹಿಟ್ಸ್ : 213
ಭೀಮೇಶ್ವರ ದೇವಾಲಯ - ನೀಲಗುಂದ
rajeshnaik111's picture
20
Nov
2009
ಪುಟ

ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,075
"ಆರೋಗ್ಯ ವರ್ಧಕ ನೇರಳೆ"
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
08
Jul
2011
ಲೇಖನ

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.

ತೊಗಟೆಯ ಕಷಾಯದಿಂದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 620
ಕಾಡಿನ ಜ್ವಾಲೆ ಮುತ್ತುಗದ ಹೂ
siddharam's picture
ಸಿದ್ಧರಾಮ ಹಿರೇಮಠ
20
Apr
2012
ಲೇಖನ

 ಗಿಡಕ್ಕೇ ಬೆಂಕಿ ಹತ್ತಿದೆಯೇನೋ ಎಂಬ ಭ್ರಮೆ ಮೂಡಿಸುವಷ್ಟು ಬೆಂಕಿಯ ಕೆನ್ನಾಲಗೆಯಂತೆ ಹೂಗಳನ್ನರಳಿಸಿಕೊಳ್ಳುವ ಗಿಡ ಮುತ್ತುಗದ ಗಿಡ. ಜನೆವರಿಯಿಂದ ಮಾರ್ಚ್ ತಿಂಗಳವರೆಗೆ...

ಪ್ರತಿಕ್ರಿಯೆಗಳು: 3
ಹಿಟ್ಸ್ : 193
ಬೆಳಕಿನ ವೇಗವೂ ಮಿತಿಯಲ್ಲ!
uniquesupri's picture
ಸುಪ್ರೀತ್.ಕೆ.ಎಸ್
27
Sep
2011
ಲೇಖನ

ವಸ್ತುವೊಂದರ ಚಲನೆಯ ವೇಗವು ಅಳತೆ ಮಾಡುತ್ತಿರುವ ವಸ್ತು ಅಥವಾ ವೇದಿಕೆಯ ಚಲನೆಯ ವೇಗವನ್ನು ಅವಲಂಬಿಸಿರುತ್ತದೆ. ಚಲನೆಯ ವೇಗ ಎನ್ನುವುದು ಸಾಪೇಕ್ಷ ಎಂದು ಸಾಬೀತು ಪಡಿಸಿದ್ದು ಐಸಾಕ್...

ಪ್ರತಿಕ್ರಿಯೆಗಳು: 9
ಹಿಟ್ಸ್ : 322
ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫
anilkumar's picture
ಎಚ್.ಎ. ಅನಿಲ್ ಕುಮಾರ್
18
Nov
2010
ಲೇಖನ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)...

ಪ್ರತಿಕ್ರಿಯೆಗಳು: 0
ಹಿಟ್ಸ್ : 389
ಬೆತ್ತಲೆ ಲೋಕದಲ್ಲಿ ....
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Oct
2011
ಬ್ಲಾಗ್ ಬರಹ

ಮೊನ್ನೆಯ ದಿನ ಕಚೇರಿಯಲ್ಲಿ  ನಾಲ್ಕೈದು ಘಟನೆಗಳು ಸಾಲಾಗಿ ನಡೆದವು.

ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 445
ಅರಮನೆ ಮೈದಾನದಲ್ಲಿ- ಆರೋಗ್ಯ ವಸ್ತು ಪ್ರದರ್ಶನ-ಚೆನ್ನಾಗಿದೆ.
ಗಣೇಶ's picture
ಗಣೇಶ
09
Dec
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 1
ಹಿಟ್ಸ್ : 593

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಅಪ್ಪನ ನೆನಪು

ಅಪ್ಪನ ನೆನಪು


ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.

ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,
ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.
ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!
ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ.

ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳ
ಮುಚ್ಚಿಟ್ಟಿದ್ದು ಸರಿಯೆ ನಿಮ್ಮ ಯಾತನೆ-ತಳಮಳ?
ವಾಸಿಯಾಗದ ಖಾಯಿಲೆಯಿಂದ ನರಳುತ್ತಿದ್ದರೂ ನೀವು,
ನನ್ನೊಂದು ಸಾಧನೆ ಮರೆಸುತ್ತಿತ್ತು ನಿಮ್ಮೆಲ್ಲ ನೋವು.

ನನ್ನ ಪ್ರಗತಿಯನು ಕಂಡು ಹಿರಿ-ಹಿರಿ ಹಿಗ್ಗಿದ್ದು ನೀವೇ,
ನನಗಿಂತ ಹೆಚ್ಚು ಭವಿಷ್ಯದ ಕನಸು ಕಂಡಿದ್ದೂ ನೀವೇ;
ಬೀಜ ಬಿತ್ತಿ, ನೀರು-ಗೊಬ್ಬರವೆರೆದು ಪೋಷಿಸಿದ ನೀವೇ
ಮರವಾಗುವ ತನಕ ಕಾಯದೇ ಹೋದದ್ದು ನ್ಯಾಯವೇ? 

ಇಂದು, ನಾನು ಅಪ್ಪ ಆಗುತ್ತಿರುವ ಸಮಯದಲ್ಲಿ,
ಬರಿಯ ನಿಮ್ಮ ನೆನಪೇ ತುಂಬಿದೆ ನನ್ನ ಮನದಲ್ಲಿ.
ಏಕಿರಬೇಕು ನೀವು ಎಲ್ಲೋ ದೂರದಲ್ಲಿ ದೇವರ ಬಳಿ?
ಬಂದುಬಿಡಿ ಅಪ್ಪ, ನಮ್ಮ ಕಂದನ ರೂಪ ತಾಳಿ!

No votes yet
2916 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
benaka's picture
11
Sep
2006
10:34
ಕಿವಿಯ ನಾಡಿನ ಕವಿಗೆ ಸ್ವಾಗತ! ಚೆನ್ನಿಹುದು ಚೆನ್ನಿಹುದು ಕವನ ಅಕ್ಕರೆಯ ತಂದೆಗಿದು ನಮನ ಮಗನಲಾಗಲವನ ಮರುಜನನ! ಮನೆಯಾಗಲಿ ಸುಖದ ಸದನ ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

kaaloo's picture
12
Sep
2006
8:41

ಎಲ್ಲಾ ಕಡೆಗೆ 'ಅಪ್ಪನ ಕುರಿತು ಪದ್ಯಗಳನ್ನ ಯಾರೂ ಬರೆದೇ ಇಲ್ಲ' ಅಂತ ಆಡಿಕೊಳ್ಳುತ್ತಿರೋ ಹೊತ್ತಿಗೆ ನಿಮ್ಮ ಕವನ ಅದ್ಭುತವಾಗಿದೆ.  ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ ನಮ್ಮೆಲ್ಲರ ನೋವನ್ನ ಈ ಪದ್ಯದಲ್ಲಿ ಹಿಡಿದು ಹಾಕಿದ್ದೀರಿ.

ನೀವು 'ಅಪ್ಪ' ಆಗುತ್ತಿರುವುದಕ್ಕೆ ಅಭಿನಂದನೆಗಳು!

kaaloo

http://kaalachakra.blogspot.com/