ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಒಬಾಮಾ-ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಪ್ರಪ್ರಥಮ ಅಧ್ಯಕ್ಷ !

 

ಇದಕ್ಕೆ ಮೊದಲು ಹಿಂದಿನ ಅಧ್ಯಕ್ಷ ’ಜಾರ್ಜ್ ಬುಷ್’ ರವರು, ದೀಪವಳಿಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದ್ದರು. ಆದರೆ, ಅವರ ಸಂಗಡಿಗರೊಡನೆ ಹಬ್ಬವನ್ನು ಆಚರಿಸಲಾಗಲಿಲ್ಲ. ಈ ಬಾರಿ ’ಅಧ್ಯಕ್ಷ ಒಬಾಮಾ’ ರವರು, ’ವೈಟ್ ಹೌಸ್ ನ ಸಿಬ್ಬಂದಿವರ್ಗ ಹಾಗೂ ಭಾರತೀಯ ಸಮುದಾಯದವರೊಂದಿಗೆ, ಸೇರಿಕೊಂಡು ದೀಪಾವಳಿಯನ್ನು ಆಚರಿಸಿದ ಪ್ರಪ್ರಥಮ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾದರು. ಪಂ. ನಾರಾಯಣಾಚಾರ್ ದಿಗಲ್ ಕೋಟೆಯವರು ಮಂತ್ರ ಪಠಿಸುತ್ತಿದ್ದಂತೆಯೇ ವಿಶ್ವಶಾಂತಿಯ ಪ್ರಾರ್ಥನೆಗೈದು, ದೀಪ ಬೆಳಗಿ ದೀಪಾವಳಿಯ ಶುಭಾಶಗಳನ್ನು ಎಲ್ಲರೊಡನೆ ಹಂಚಿಕೊಂಡರು. ಐತಿಹಾಸಿಕ, ’ಈಸ್ಟ್ ರೂಂ,’ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಒಬಾಮಾರವರು, "ಬೆಳಕಿನ ಹಬ್ಬ ದೀಪಾವಳಿಯು ಕೆಟ್ಟದರ ವಿರುದ್ಧ ಒಳಿತಿನ ವಿಜಯವಾಗಿದೆ. ಮನುಷ್ಯನಲ್ಲಿನ ಅಜ್ಞಾನವನ್ನು ತೊಲಗಿಸುವ ಪರ್ವದಿನವಾಗಿದೆ," ಯೆಂದು ನುಡಿದರು. 

 

Your rating: None Average: 3 (1 vote)