ಕನಕದಾಸರು
ಕನಕದಾಸರು (ಕ್ರಿ. ಶ. ೧೪೮೬-೧೫೮೦)
ವ್ಯಾಸರಾಯರ ಶಿಷ್ಯರಾಗಿ, ಪುರಂದರದಾಸರ ಸಮಕಾಲೀನರಾಗಿದ್ದವರು ಶ್ರೀ ಕನಕದಾಸರು. ಆಧ್ಯಾತ್ಮಿಕ ತತ್ವಗಳನ್ನು, ಆಡುಭಾಷೆಯಲ್ಲಿ, ಒಗಟುಗಳ ರೂಪದಲ್ಲಿ, ಸಾಮಾನ್ಯ ಜನರಿಗೆ ನಿಡಿದರು. ಭಗವಂತನ ಧ್ಯಾನವನ್ನು ಎಲ್ಲರೂ ಮಾಡಿ, ದೈವವನ್ನು ಒಲಿಕೊಳ್ಳಬಹುದೆಂಬ ವಿಷಯವನ್ನು ಮಾಡಿ ತೋರಿಸಿ, ಹಾಡಿ ಕೇಳಿಸಿದರು. ಹೀಗೆ ಸಮಾಜ ಸುಧಾರಕರಾಗಿ, ಮೇಲು ಕೀಳೆಂಬ ಭಾವವನ್ನು ಮೆಟ್ಟಿ, ಭಾವಕ್ಯತೆಯನ್ನು ಐನೂರು ವರುಷಗಳ ಹಿಂದೆಯೇ ಸಾಧಿಸಿದವರು ಕನಕದಾಸರು.
ಕನಕದಾಸರು ಬೀರೇಗೌಡ ಮತ್ತು ಬಚ್ಚಮ್ಮ ದಂಪತಿಗಳಿಗೆ ಜನಿಸಿದರು. ಇವರ ಸ್ಥಳ ಧಾರವಾಡ ಜಿಲ್ಲೆಯ 'ಬಾಡ' ಎಂಬ ಗ್ರಾಮ. ಇವರು ತಿರುಪತಿಯ ತಿಮ್ಮಪ್ಪನ ಒಕ್ಕಲಿನವರಾದ್ದರಿಂದ ತಿಮ್ಮಪ್ಪನೆಂದೇ ಇವರಿಗೆ ನಾಮಕರಣವಾಯಿತು. ತಂದೆಯಂತೆಯೇ ಆ ಗ್ರಾಮದ ನಾಯಕರಾದರು. ಒಮ್ಮೆ ಕಾಗಿನೆಲೆಯಲ್ಲಿದ್ದಾಗ ಇವರಿಗೆ ಅಪಾರವಾದ ಚಿನ್ನದ ನಾಣ್ಯಗಳು ದೊರಕಿದವು. ಆ ಹಣವನ್ನು ಆ ಗ್ರಾಮದ ಕೇಶವನ ದೇವಾಲಯದ ಜೀರ್ಣೋದ್ಧಾರಕ್ಕೆ ವಿನಿಯೋಗಿಸಿದರು. ಹೀಗೆ ದ್ರವ್ಯವು ದೊರಕಿದ್ದರಿಂದ ತಿಮ್ಮಪ್ಪನನ್ನು ಕನಕನೆಂದು ಕರೆದರು. ಈತನೇ ಕನಕನಾಯಕನಾಗಿ ಮುಂದೆ ಕನಕದಾಸರಾದರು. ವ್ಯಾಸರಾಯ ಸ್ವಾಮಿಗಳಿಂದ ದೀಕ್ಷೆಯನ್ನು ಪಡೆದರು.
ವಾಗ್ಗೇಯಕಾರರಾಗಿ ಆದಿಕೇಶವ, ಬಾಡವಾದಿ ಕೇಶವ, ಕಾಗಿನೆಲೆಯಾದಿ ಕೇಶವನೆಂಬ ಅಂಕಿತದೊಡನೆ ಅನೇಕ ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿದ್ದಾರೆ. ಮುಂಡಿಗೆಗಳನ್ನು ರಚಿಸಿದ್ದಾರೆ. ಮುಂಡಿಗೆಗಳು ದ್ವಂದ್ವಾರ್ಥವನ್ನುಳ್ಳ ಕನ್ನಡ ಕೀರ್ತನೆಗಳು. ಉತ್ತಮ ಕಾವ್ಯಗಳನ್ನು ರಚಿಸಿದ್ದಾರೆ. ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧ್ಯಾನಚರಿತೆ, ನಳ ಚರಿತ್ರೆ ಮುಂತಾದ ಕಾವ್ಯಗಳನ್ನು ಷಟ್ಪದಿಯಲ್ಲಿ ರಚಿಸಿದ್ದಾರೆ.
ಸಮಾಜೋದ್ಧಾರಕರಾಗಿ ಜನ ಸಾಮಾನ್ಯರಲ್ಲಿ ಸೌಹಾರ್ದವನ್ನು ಬೆಳೆಸಿ, ಸಮಾನತೆಯನ್ನು ಹೊಂದಲು ಶ್ರಮಿಸಿದ್ದಾರೆ. ತಮ್ಮ ಕೀರ್ತನೆಗಳ ಮೂಲಕ ತತ್ವ ಪ್ರಚಾರ ಮಾಡಿ, ಎಲ್ಲರನ್ನೂ ಭಗವದ್ಭಕ್ತರಾಗುವಂತೆ ಮಾಡಿ, ಲೋಕಕಲ್ಯಾಣವೆಸಗಿದ್ದಾರೆ. ಇವರ ಕೀರ್ತನೆಗಳು ಇಂದಿಗೂ ಜನಮನದಲ್ಲಿ ಮೊಳಗುತ್ತಿವೆ.
___________________________________________________________
ಮಾಹಿತಿ ಕೃಪೆ: 'ಕರ್ನಾಟಕ ಸಂಗೀತ-ಪ್ರಾಥಮಿಕ ಹಂತ (ಜೂನಿಯರ್ ಗ್ರೇಡ್)' ಪುಸ್ತಕ
ಚಿತ್ರ ಕೃಪೆ: ವಿಕಿಪೀಡಿಯಾ
- Login or register to post comments
- 494 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಅನಿಲ್,
ಕನಕದಾಸ ಜಯಂತಿಯ ಪ್ರಯುಕ್ತ ಕನಕದಾಸರ ಕಿರು ಪರಿಚಯ. ಮಾಹಿತಿಗೆ ಧನ್ಯವಾದಗಳು.
>>"ಕನಕದಾಸರು (ಕ್ರಿ. ಶ. ೧೪೮೬-೧೫೮೦)" -
ಅನಿಲ್, ಗೂಗಲ್ನಲ್ಲಿ ಹುಡುಕಿದಾಗ ಸಿಕ್ಕ ಮಾಹಿತಿಯ ಪ್ರಕಾರ "ಶ್ರೀ ಕನಕದಾಸರು (೧೫೦೯-೧೬೦೯) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು."
http://kn.wikipedia....
ಈ ಕೆಳಗಿನ ಕೊಂಡಿಯ ಪ್ರಕಾರ ಕ್ರಿ.ಶ. 1508-1606 (ಸುಮಾರು)
http://www.classical...
ಯಾವುದು ಸರಿ?
ಇದರ ಜೊತೆಗೆ ಅವರು ರಚಿಸಿದ ಕೆಲವು ಕೀರ್ತನೆಗಳನ್ನು ಈ ಕೊಂಡಿಯಲ್ಲಿ ನೋಡಬಹುದು.
http://www.carnaticm...
ಕಮಲ
ಕಮಲ,
>>"ಕನಕದಾಸರು (ಕ್ರಿ. ಶ. ೧೪೮೬-೧೫೮೦)"
ಈ ಮಾಹಿತಿ ನನಗೆ ದೊರಕಿದ್ದು 'ಕರ್ನಾಟಕ ಸಂಗೀತ-ಪ್ರಾಥಮಿಕ ಹಂತ (ಜೂನಿಯರ್ ಗ್ರೇಡ್)' ಪುಸ್ತಕದಿಂದ..
ನೀವು ಕೊಟ್ಟಿರುವ ಕೊಂಡಿಗಳಲ್ಲಿ ಮತ್ತು ಇನ್ನು ಹಲವು ಕೊಂಡಿಗಳಲ್ಲಿ ನೀವು ಕೊಟ್ಟಿರುವ ಮಾಹಿತಿಯೇ ಇವೆ..
ಯಾವುದು ಸರಿಯೋ ನಾನರಿಯೆ..
ಬಲ್ಲವರು ತಿಳಿಸಿ..
-ಅನಿಲ್
ಜನ್ಮ ದಿನ ಎಂದೆಂದು ಹೊಡೆದಾಡದಿರಿ
ಆತ್ಮಾದಾ ಜನ್ಮ ದಿನವಾ ಬಲ್ಲಿರಾ ಬಲ್ಲಿರಾ...?
:)
ಅನಿಲ್,
ನಿಮ್ಮ ಪರಿಶ್ರಮ ಪ್ರಶಂಸನೀಯ.
ಅಭಿವಂದನೆಗಳು.
ಕನಕದಾಸರು ಅಂದ ಕೂಡಲೇ ನನಗೆ ನೆನಪಾಗುವುದು ದೇವರು ಸರ್ವಂತರ್ಯಾಮಿ ಅನ್ನುವುದಕ್ಕೆ ಅವರ ಬಾಲ್ಯದಲ್ಲಿ ನೀಡಿದ ನಿದರ್ಶನ.
ಗುರುಗಳು, ಯಾರೂ ಇರದ ಸ್ಥಳದಲ್ಲಿ ಎಲ್ಲರಿಗೂ ಮರೆಯಾಗಿ ಹಣ್ಣನ್ನು ತಿನ್ನಿ ಅಂದಾಗ, ಎಲ್ಲಾ ಶಿಷ್ಯರು ತಿಂದಿದ್ದರೂ, ಕನಕದಾಸರೊಬ್ಬರೇ ಯಾರೂ ಇಲ್ಲದ ಸ್ಥಳವೇ ಇಲ್ಲ, ಎಲ್ಲಾ ಕಡೆಯೂ ದೇವರಿದ್ದಾರೆ ಎಂದು ಆ ಹಣ್ನನ್ನು ತಿನ್ನದೇ ಉಳಿದಿದ್ದರಂತೆ.
ಆ ಕತೆ ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಬಿಟ್ಟಿದೆ.
ಸುರೇಶ್,
ಕನಕದಾಸರು ಅಂದರೆ ನನಗೆ ನೆನಪಾಗುವುದು 'ನಾನು ಹೋದರೆ ಹೋದೇನು' ಎಂಬ ವಾಕ್ಯ..
ವ್ಯಾಸರಾಯರು ತಮ್ಮ ಶಿಷ್ಯರನ್ನು ಕುರಿತು "ಯಾರಿಗೆ ಮೋಕ್ಷ ಸಿಗುವುದು" ಎಂಬ ಪ್ರಶ್ನೆಯನ್ನು ಕೇಳುತ್ತಾರೆ..
ಕನಕದಾಸರು ಈ ಉತ್ತರವನ್ನು ನೀಡಿ ಎಲ್ಲರನ್ನೂ ಚಕಿತಗೊಳಿಸುತ್ತಾರೆ..
ಅಂದಹಾಗೆ,
ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
-ಅನಿಲ್
ಕನಕದಾಸರ "ರಾಮಧಾನ್ಯ ಚರಿತೆ" ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ. ಎಂಥಾ ವಿಚಾರಧಾರೆ!
ಒಂಭತ್ತನೆಯ ತರಗತಿಯಲ್ಲಿ ಓದಿದ ಒಂದು ಪದ್ಯ "ನಳ ಚರಿತ್ರೆ" ಯದ್ದು ಭಾಷಾ ಸೌಂದರ್ಯದಿಂದಾಗಿ ಇನ್ನೂ ನನ್ನ ನೆನಪಿನಲ್ಲಿದೆ. ದೃಶ್ಯ: ನಳ ಮಹಾರಾಜ ದಮಯಂತಿಯನ್ನು ಬಿಟ್ಟು ಹೋದಾಗ,
ಹಾ! ರಮಣ ನಳನೃಪತಿ
ಹಾ ರಣಧೀರ ರಿಪುಸಂಹಾರ
ನಿತ್ಯೋದಾರ ನಿರ್ಮಳ ಸತ್ಯ ಸಂಚಾರ
ಘೊರಕಾನನದೊಳಗೆ ನಂಬಿದ ನಾರಿಯನು
ಬಿಸುಡುವರೆ ತನಗಿನ್ನಾರು ಗತಿ ಮುಖ
ದೋರೆನುತ ಹಲುಬಿದಳು ಹಲವಂದದಲಿ ಪತಿಯ!
ಕಾಣಿರೇ ಅರಸಂಚೆಗಳೆ ನೀವ್
ಕಾಣಿರೇ ಪತಿಯ ಶುಕಪಿಕ
.
.
.
ಎಂದೇಣಲೋಚನೆಯು ಹುಡುಕಿದಳು ಪತಿಯ!
ಶ್ರೀಹರ್ಷ,
ನಳಚರಿತ್ರೆಯ ಸಾಲುಗಳಿಗೆ ನನ್ನಿ..
-ಅನಿಲ್