"ನ ಸ್ತ್ರೀ ಮೀಸಲಾತಿ ಅರ್ಹತಿ" ಆರ್ಯ ಕೇಸರಿ ಎನ್ನುವ ಮನುವಾದಿ
ಇವತ್ತು ಬೆಳಗ್ಗೆ ಟಿವಿ ೯ ನಲ್ಲಿ ಪುರುಷರ ಹಕ್ಕು ರಕ್ಷಣೆ ವೇದಿಕೆಯವರು ಮೇಲಿನ ಘ್ಹೋಷಣೆಗಳೊಂದಿಗೆ ಹೋಮ ಹವನ ಮಾಡಿದರೆಂದು ವರದಿ ನೀಡಿ ಚರ್ಚೆ ನಡೆಸುತ್ತಿದ್ದರು. ಅಬ್ಬಾ ಆ ಆರ್ಯ ಕೇಸರಿ ಎಂಬ ವ್ಯಕ್ತಿಯ ದಾರ್ಷ್ಟವೆಷ್ಟೆಂದರೆ
ಹೆಣ್ಣು ಮನೆಯಲ್ಲಿಯೇ ಇರಲಿ
ಅವಳು ಉನ್ನತ ಅಧಿಕಾರಕ್ಕೆ ಬಂದರೆ ನಡತೆಗೆಟ್ಟವಳಾಗುತ್ತ್ತಾಳೆ.
ಹೆಣ್ಣು ಎಲ್ಲಕ್ಕೂ ಸರಿ ಸಮ ಎಂದು ಹೇಳುತ್ತಾ ಅವಳಿಗೇಕೆ ಮೀಸಲಾತಿ ಎಂದು ಬೊಬ್ಬೆ ಹೊಡೆಯುತ್ತಿದ್ದರು
ಅದಕ್ಕೆ ತಕ್ಕ ಹಾಗೆ ಮಾನವ ಹಕ್ಕುಗಳ ಪ್ರಮೀಳ ಹಾಗು ಮತ್ತೊಬ್ಬರು ಹೆಸರ ನೆನಪಿಲ್ಲ ಚೆನ್ನಾಗಿ ಜಾಡಿಸುತ್ತಿದ್ದರು.
ಅಷ್ಟೆಲ್ಲಾ ಮಾತಾದ ಮೇಲೂ ಆಸಾಮಿ ತಮ್ಮ ಧೋರಣೆ ಒಂದಿನಿತೂ ಬದಲಾಗಿಲ್ಲ ಎಂದರು
ನಿಮ್ಮ ಅಭಿಪ್ರಾಯವೇನು
ವಿವರಗಳಿಗೆ
- Login or register to post comments
- 272 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಆತ್ಮೀಯ
ಯಾವುದಕ್ಕೇ ಆಗಲಿ ಮೀಸಲಾತಿ ಬೇಕೇ? ಜಾತಿಯಿ೦ದ ಮೀಸಲಾತಿ,ಲಿ೦ಗದಿ೦ದ ಮೀಸಲಾತಿ.ಇವೆಲ್ಲಾ ಹೋಗಿ ಕೊನೆಗೆ.ಪ೦ಚೆ ಉಟ್ಟವರಿಗೆಒ೦ದು ಮೀಸಲಾತಿ,ಕೂದಲಿದ್ದವರಿಗೊ೦ದು ಮೀಸಲಾತಿ,ಹಲ್ಲಿಲ್ಲದವರಿಗೊ೦ದು ಮೀಸಲಾತಿ ಎ೦ದೆಲ್ಲಾ ಬರಬಹುದೇನೋ!
ಅರ್ಹತೆಯಿದ್ದವರಿಗೆ ಕೆಲಸ ಇದು ಸಾಕಿತ್ತಲ್ಲವೇ? ಯಾಕೆ ಈ ’ಮೀಸೆ’ಲಾತಿ .ಆದರೆ ಅದ್ಯಾರೋ ವ್ಯಕ್ತಿ ಮನುವನ್ನು ಅಧಾರವಾಗಿಟ್ಟು ಮಾತನಾಡಿದ್ದು ಸರಿಯಿಲ್ಲ ಎ೦ದು ಮಾತ್ರ ಹೇಳಬಲ್ಲೆ.
ಹರಿಶ್ ಆತ್ರೇಯ
ಚಾನಲ್ ಬದಲಿಸುವಾಗ ಒಮ್ಮೆ ಈ ಕಾರ್ಯಕ್ರಮ ಸುಳಿದು ಹೋಗಿತ್ತು.
ವಿಷಯದ ಬಗ್ಗೆ ತವಡು ಕುಟ್ಟಲಿಕ್ಕೆ ನನ್ನ ಬಳಿ ಹೊಸತೇನಿಲ್ಲ. ಆದರೆ ಈ ಟಿವಿ ಡಿಬೇಟುಗಳ ಬಗ್ಗೆ ಒಂದು ಮಾತು ಆಡಬೇಕು.
ಟಿವಿಗಳಲ್ಲಿ `ಡೆವಿಲ್' `ಏಂಜಲ್' ಎನ್ನುವಂತೆ ಬ್ಲಾಕ್ ಅಂಡ್ ವೈಟಿನಲ್ಲಿ ಒಂದು ವಿಷಯವನ್ನು ಪ್ರೆಸೆಂಟ್ ಮಾಡುವ ಅನಿವಾರ್ಯತೆ ಇರುತ್ತದೆ. ಹೀಗಾಗಿ ಪ್ರತಿ ವಿಷಯದ ಬಗ್ಗೆ ಚರ್ಚೆಗೆ ಫಂಡಾಮೆಂಟಲಿಸ್ಟುಗಳನ್ನು, ಅತಿರೇಕಿಗಳನ್ನು ಕರೆಸುತ್ತಾರೆ. ಮಾಡರೇಟ್ ಆದ, ಮಧ್ಯಮ ಮಾರ್ಗದ ಅಭಿಪ್ರಾಯಗಳು ಟಿಆರ್.ಪಿ ತಂದುಕೊಡುವುದಿಲ್ಲ. ಕಾಮನ್ ಸೆನ್ಸ್ ಇದ್ದವರಿಗೆಲ್ಲ ಅರ್ಥವಾಗುವ ಸಂಗತಿ, ಯಾವುದೇ ವಿಷಯದಲ್ಲಿ ಮೂಲಭೂತವಾದಿಗಳು, ಮತಾಂಧರು(ಮತ= ಅಭಿಪ್ರಾಯ) ತಮ್ಮ ಅಭಿಪ್ರಾಯವನ್ನು ಯಾವ ಕಾರಣಕ್ಕೂ ಬದಲಿಸುಕೊಳ್ಳುವುದಿಲ್ಲ. ಅಂತಹ ಇಬ್ಬರ ನಡುವೆ ಚರ್ಚೆ ಸಂವಾದ ಸಾಧ್ಯವಿಲ್ಲ. ಚಕಮಕಿ, ಹೊಡೆದಾಟವಷ್ಟೇ ಸಾಧ್ಯ. ನಮ್ಮ ಹಿಂಸಾವಿನೋದಿ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಇಂತಹ ಹೊಡೆದಾಟವನ್ನೇ ಚರ್ಚೆ, ಸಂವಾದ ಎಂದು ಬಿತ್ತರಿಸುತ್ತವೆ.
ನಾನೂ ಒಮ್ಮೆ ಚರ್ಚೆಯಲ್ಲಿ ಕೇಳಿದ್ದೆ. "ನಾವು ಗಂಡಸರಿಗೆ ಸಮಾನರು ಎಂದು ಬೊಬ್ಬೆ ಹೊಡೀತೀರಿ, ಮೀಸಲಾತಿ ಯಾಕೆ ಕೇಳತೀರಿ" ಅಂತ
ಆವಾಗ ದನಿ ಬದಲಾಯಿತು"ಮೀಸಲಾತಿ ಬೇಡ, ಅವಕಾಶ ಬೇಕು!"
ಅವಕಾಶ ಕೊಡೋಣಂತೆ ತೊಂದರೆ ಇಲ್ಲ!