ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ನನ್ನವಳು

September 19, 2006 - 10:35am — shreenidhi

ನನ್ನವಳ ಮೊಗದಲ್ಲಿ ಸಣ್ಣನೆಯ ಕಿರುನಗೆಯು,
ಕಾರಣವದೇನೆಂದು ಕೇಳಬಹುದೆ?
ತುಟಿಯಂಚ ನಗು ಹಿಂದೆ ಏನದೋ ತುಂಟತನ
ಮನದೊಳಗೆ ಏನಿದೆಯೋ ಅರಿಯಬಹುದೆ..

ಅನುನಯದ ನಡೆ ನುಡಿಯು, ತಣ್ಣನೆಯ ಮಾತುಗಳು
ಹೊಸದೇನೋ ಹುನ್ನಾರ ನಡೆಯುತಿಹುದು
ನಿತ್ಯವೂ ಇಲ್ಲದಿಹ ಬೇರೆಯದೆ ನೋಟವಿದು
ನನಗೇತಕೋ ಶಂಕೆ ಮೊಡುತಿಹುದು

ಹೊಸದು ಸೀರೆಯು ಬೇಕೆ, ಹಬ್ಬ ಸನಿಹದೊಳಿಲ್ಲ
ಅಮ್ಮ ಬರುವಳೆ ತವರು ಮನೆಯಿಂದ
ಚಿನ್ನ್ನದಾ ಸರಕಿನ್ನು ತಿಂಗಳೂ ಕಳೆದಿಲ್ಲ
ವಿಷಯವೇನೆಂದೊಮ್ಮೆ ಹೇಳಿದೊಡೆ ಚೆಂದ.

ಒಳಮನೆಯ ಗೋಡೆಯಲಿ ಕಂದನಾ ಚಿತ್ರಪಟ
ಮೊಗದಳಗದೇನದೋ ಹೊಸಬಗೆಯ ಲಜ್ಜೆ,
ಹೊಸ ಜೀವ ಬರುತಿಹುದೆ ನಮ್ಮ ಈ ಬಾಳೊಳಗೆ
ನಾಲ್ಕಿದ್ದ ಎಡೆಗೆ ಆರಾಗುವುದೆ ಹೆಜ್ಜೆ!

ಓ ಜೀವ ಸಖಿ ನನಗೆ ಮಾತೆ ಹೊರಡುತಲಿಲ್ಲ,
ಆನಂದ, ಆಶ್ಚರ್ಯ ಎದೆ ತುಂಬಿದೆ.
ನಿನ್ನೊಳಗ ಬಾಳ ಕುಡಿ ಚೈತನ್ಯ ತಂದಿಹುದು
ಜೀವನಕೆ ಹೊಸ ಅರ್ಥ ತಾ ಮೊಡಿದೆ.

  • ಕಾವ್ಯ ಮತ್ತು ಕವನ
~.~
  • Login or register to post comments
  • 502 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 19, 2006 - 11:01am — benaka

ಅಭಿನಂದನೆಗಳು!

benaka's picture

ಕವಿಮಿತ್ರ,

ಅಭಿನಂದನೆಗಳು! ಇತ್ತೀಚೆಗೆ ಇಂತಹ ಉತ್ತಮ ಕವನಗಳು ಬರಲಿಲ್ಲವಲ್ಲ ಎಂದು ಕಾಯುತ್ತಿದ್ದೆ! ಭಾವನೆಗಳ ಎಳೆಗಳನ್ನು ಚೆನ್ನಾಗಿ ಹೆಣೆದಿದ್ದೀರಿ; ಮುಂದುವರೆಸಿ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2006 - 11:05am — shreenidhi

ಧನ್ಯವಾದಗಳು.

shreenidhi's picture

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ಪ್ರಯತ್ನ ಮುಂದುವರೆಸುತ್ತೇನೆ, ಪ್ರೀತಿ ಇರಲಿ.
ಶ್ರೀನಿಧಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 19, 2006 - 12:31pm — Sunil Jayaprakash

ರಸಭಂಗವೇಕೆ

Sunil Jayaprakash's picture

ನಾವೂ ಕಾಯುತಿರುವೆವು, ನಿಮ್ಮ ನವರಸಗಳ ಕವನಗಳಿಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2006 - 10:06am — venkatesh

ನನ್ನವಳು....

venkatesh's picture

ಶ್ರಿನಿಧಿ ಯವರೆ,

ಅದೇನೊ ಹೇಳ್ತಿದ್ರಲ್ಲ. ನಾನು ಹೀಚು, ಪೀಚು ಅಂತ... ಬಲ್ ಚೆನ್ನಾಗ್ ಬರಿತೀರ್ರಿ ! ಚಲೊ ಅದ.
ಗೀಚ್ ರಿ, ಕಾಳ್ಜಿ ಮಾಡ್ಬ್ಯಾಡ್ರಿ ಯಪ್ಪ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 20, 2006 - 10:10am — shreenidhi

ನಾನು

shreenidhi's picture

ನಾನು ನಾಲ್ಕಾರು ತಿಂಗಳ ಹಿಂದೆ ಹೇಳಿದ್ದು ನೀವು ಮರೆತಿಲ್ಲ ಅಂತ ಆಯ್ತು!Smiling

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.
http://shree-lazyguy.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ~~~ ನನ್ನವಳು ~~~
  • *ನನ್ನ ಸ್ವಪ್ನ ಸುಂದರಿ*
  • ಕೆಲವು ಹನಿಗವನಗಳು
  • ಅಕ್ಕ ತಮ್ಮರ ಅನುಬಂದದ ಗೀತೆ
  • ಇಟ್ಟ ಹೆಜ್ಜೆ
Syndicate content

ಲೇಖಕರು

shreenidhi's picture

ಪರಿಚಯ

ನಾನು ಶ್ರೀನಿಧಿ. ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ, ಮಾನವ ಸಂಪನ್ಮೂಲ (HR )ವಿಭಾಗದಲ್ಲಿ ಉದ್ಯೋಗಿ. ಕಥೆ, ಕವನ ಬರೆಯುವಿಕೆ ಹವ್ಯಾಸ. ಮೂಲತ: ಮಂಗಳೂರಿನವನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator