ಗೆಳೆಯನೊಬ್ಬ ಮಿಂಚಂಚೆಯಲ್ಲಿ ಈ ಚಿತ್ರಗಳನ್ನು ಕಳಿಸಿ ತುಂಬ ದಿನವಾಯ್ತು.
ನೋಡಿದಾಗಿನಿಂದ ಮನಸ್ಸು ಕಲಕಿದಂತಾಗಿದೆ. ಭಾವನೆಗಳು ಮನುಷ್ಯರಿಗೆ ಮಾತ್ರ ಅಂದುಕೊಂಡ ನಾವೆಲ್ಲ ಇತರ ಜೀವಿಗಳಿಗೆ ಮಾಡುತ್ತಿರುವ ಅನ್ಯಾಯ ಅಷ್ಟಿಷ್ಟಲ್ಲ. ಈ ಚಿತ್ರಗಳು ನನ್ನ ಸಾಕ್ಷಿಪ್ರಜ್ಞೆಯನ್ನು ಕಲಕಿಬಿಟ್ಟಿವೆ. ಘಟನೆ ಹೀಗಿದೆ:
ಅಪಘಾತವೊಂದರಲ್ಲಿ ಹಕ್ಕಿಯೊಂದು ಮಾರಣಾಂತಿಕವಾಗಿ ಗಾಯಗೊಂಡಿತು.

ಜೊತೆಗಾರ ಹಕ್ಕಿ ಸಂಗಾತಿಯ ನೆರವಿಗೆ ಧಾವಿಸಿ ಬಂತು.

ಆದರೆ, ರಸ್ತೆಯ ಮಧ್ಯೆ ತೀವ್ರ ಗಾಯಗೊಂಡು ಬಿದ್ದಿದ್ದ ಅದಕ್ಕೆ ನೆರವು ನೀಡುವುದಾದರೂ ಹೇಗೆ?

ಜೊತೆಗಾರ ಹಕ್ಕಿ ಕೂಗುತ್ತದೆ, ಅರಚುತ್ತದೆ, ಯಾರನ್ನೋ ನೆರವಿಗೆ ಮೊರೆಯಿಡುತ್ತದೆ.

ನೆರವು ದೊರೆಯದೇ ಗಾಯಗೊಂಡ ಹಕ್ಕಿ ಸತ್ತುಹೋಗುತ್ತದೆ. ರಸ್ತೆ ಮಧ್ಯೆ ಬಿದ್ದಿರುವ ಸಂಗಾತಿಯ ಕಳೇಬರ ನೋಡಿ ಜೊತೆಗಾರ ಹಕ್ಕಿ ವ್ಯಕ್ತಪಡಿಸಿದ ನೋವು ಮನಸ್ಸನ್ನು ಕಲಕಿಬಿಡುತ್ತದೆ.


ಚಿತ್ರಗಳನ್ನು ನೋಡನೋಡುತ್ತ ಮನಸ್ಸು ಮೂಕವಾಗುತ್ತದೆ. ಮೌನವಾಗಿಯೇ ರೋದಿಸುತ್ತದೆ. ಹಕ್ಕಿಯ ನೋವು ಯಾವ ಮನುಷ್ಯನ ನೋವಿಗೂ ಕಡಿಮೆಯೇನಲ್ಲ. ಅದನ್ನೇ ನೆನೆಯುತ್ತ ಮಂಕಾಗುತ್ತದೆ.
ನಿಜ, ಸಾವು ಅಂತಿಮ. ವಿಷಾದ ಮಾತ್ರ ನಿರಂತರ.
- ಚಾಮರಾಜ ಸವಡಿ
(ಚಿತ್ರ ಕೃಪೆ: abunavaf.com - ಚಿತ್ರಗಳಲ್ಲಿ ಕಾಣಸಿಗುವ ವಿಳಾಸ)









ಪ್ರತಿಕ್ರಿಯೆಗಳು
ಸವಡಿ; ಯಾವ ಪ್ರತಿಕ್ರಿಯೆ ನೀಡಲೂ
ಸವಡಿ; ಯಾವ ಪ್ರತಿಕ್ರಿಯೆ ನೀಡಲೂ ಸಾಧ್ಯವಾಗುತ್ತಿಲ್ಲ! ಮನಸ್ಸು ಮೂಕವಾಗಿಬಿಟ್ಟಿದೆ. ಇನ್ನೂ ಎಷ್ಟು ಹೊತ್ತು ಹೀಗೆಯೋ ಗೊತ್ತಿಲ್ಲ!!
ನಿಜ ಪ್ರಭಾಕರ. ಮಿಂಚಂಚೆ ನೋಡಿದಾಗ
ನಿಜ ಪ್ರಭಾಕರ. ಮಿಂಚಂಚೆ ನೋಡಿದಾಗ ಈ ಬಗ್ಗೆ ಬರೆಯಬೇಕೆಂದುಕೊಂಡೆ. ಆದರೆ, ತುಂಬ ದಿನ ಬರೆಯಲು ಆಗಲೇ ಇಲ್ಲ. ನಿರ್ಲಿಪ್ತರಾಗಿ ಬರೆದು ಬೀಸಾಕುವುದು ಪತ್ರಕರ್ತನ ವೃತ್ತಿಯೇ ಆಗಿರಬಹುದು. ಆದರೆ, ಈ ಹಕ್ಕಯ ಸಾವಿನ ವಿಷಯದಲ್ಲಿ ಆ ವೃತ್ತಿಪರತೆ ನನಗೆ ಬರಲಿಲ್ಲ. ಎಷ್ಟೋ ದಿನಗಳ ಕಾಲ ಮೌನವಾಗಿ ಧ್ಯಾನಿಸಿದ ನಂತರ, ಒಂದೆರಡು ಪ್ಯಾರಾ ಬರೆಯಲಷ್ಟೇ ಸಾಧ್ಯವಾಯ್ತು.
ಏನು ಹೇಳಲು ತೋಚುತ್ತಿಲ್ಲ....
ಏನು ಹೇಳಲು ತೋಚುತ್ತಿಲ್ಲ.... ಸೂಡಾನಿನಲ್ಲಿ ಫೋಟೊ ತೆಗೆದು ಜಗತ್ಪ್ರಸಿದ್ದಿಯಾದ ನಂತರ ಕೆವಿನ್ ನನ್ನು ಕಾಡಿದ ಪಾಪಪ್ರಜ್ಞಎ ಈ ಫೋಟೋಗ್ರಾಫರ್ನನ್ನು ಆ ಕ್ಷಣದಲ್ಲಿ ಕಾಡಿದ್ದರೆ ಬಹುಶಃ ಆ ಪಕ್ಷಿ ಬದುಕುತ್ತಿತ್ತೇನೋ...
ನಿಜ ಮಂಜು. ಸುದ್ದಿಯನ್ನು
ನಿಜ ಮಂಜು. ಸುದ್ದಿಯನ್ನು ತಲುಪಿಸುವ ಹಪಹಪಿಯ ಒಂದು ಸಣ್ಣ ಪಾಲು ಹಕ್ಕಿಯನ್ನು ಬದುಕಿಸುವುದರಲ್ಲಿ ಇದ್ದರೆ ಖಂಡಿತ ಆ ಪಕ್ಷಿ ಬದುಕುತ್ತಿತ್ತು. ಆದರೆ, ತುಂಬ ಜನರಿಗೆ ಇಂಥ ಘಟನೆಗಳನ್ನು ದುರಂತವಾಗಿಸುವ ತುಡಿತವೇ ಹೆಚ್ಚಾಗಿರುತ್ತದೆ. ಅದಕ್ಕೆಂದೇ ಅಲ್ಲವೆ ಸತ್ತವರ ಮನೆಯಲ್ಲಿ ಮೈಕ್ ಹಿಡಿದು ಪ್ರತಿಕ್ರಿಯೆ ಕೇಳುವುದು !
ಹುಟ್ಟಿದ ಪ್ರತಿ ಜೀವಿಯ ಏಕೈಕ
ಹುಟ್ಟಿದ ಪ್ರತಿ ಜೀವಿಯ ಏಕೈಕ ಶಾಶ್ವತ ಆಸ್ತಿ ಅಂದರೆ ಅದು ಸಾವು ಮಾತ್ರ.
ಇಂತಹ ನಿಸ್ಸಾಯಕ ಸ್ಥಿತಿ ಬಂದರೆ ಅದು ಜೀವಂತವಾಗಿರುವವರಿಗೆ ನೋವು ತರುತ್ತೆ.
ಸಾವು ಅಕಾಲಿಕವಾಗಿ ಬಂದಾಗ
ಸಾವು ಅಕಾಲಿಕವಾಗಿ ಬಂದಾಗ ಜೀರ್ಣಿಸಿಕೊಳ್ಳುವುದು ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿ-ಪಕ್ಷಿಗಳಿಗೂ ಕಷ್ಟಕರ ಎಂಬುದಕ್ಕೆ ಈ ಘಟನೆಯೇ ನಿದರ್ಶನ ಲೋಹಿತ್. ಅದನ್ನು ನೋಡಿದ ನಮಗೇ ಇಷ್ಟೊಂದು ಸಂಕಟವಾಗುತ್ತಿದೆ. ಇನ್ನು ಅನುಭವಿಸಿದ ಸಂಗಾತಿ ಹಕ್ಕಿಗೆ ಅದೆಂಥ ಆಘಾತವಾಗಿರಬಹುದು!
ಚಾಮರಾಜ್, ಚಿತ್ರ-ಲೇಖನ
ಚಾಮರಾಜ್,
ಚಿತ್ರ-ಲೇಖನ ಮನಕಲಕುವಂತಿತ್ತು. ಹಕ್ಕಿಯ ರೀತಿಯಲ್ಲಿ ಮನಸ್ಸೂ ಮೂಕವಾಯಿತು. ಎಂಥ ಅದ್ಭುತ ಛಾಯಾಚಿತ್ರಣವೋ ಅಷ್ಟೇ ಅದ್ಭುತವಾದ ಬರವಣಿಗೆ. ಬಹುಶ: ಬರವಣಿಗೆಯೂ ಅಲ್ಲಿ ಮೂಕವಾಗುತ್ತದೆಯೇನೋ ಅನಿಸುತ್ತಿದೆ. ಸಾವಿಗೀಡಾದ ಹಕ್ಕಿಗೆ ಅಂತಿಮ ವಿದಾಯ ಹಾಗೂ ಅಶ್ರುತರ್ಪಣ - ಸಿದ್ಧರಾಮ ಹಿರೇಮಠ. ಕೂಡ್ಲಿಗಿ
ಚಿತ್ರಗಳೇ ಮನಕಲಕುವಂತಿವೆ
ಚಿತ್ರಗಳೇ ಮನಕಲಕುವಂತಿವೆ ಸಿದ್ಧರಾಮ. ಬರವಣಿಗೆ, ಆ ಘಟನೆಯ ವಿವರಗಳನ್ನು ಮಾತ್ರ ಹೇಳಿದೆ. ನೋವಿನ ದಾಖಲೆ ಇಡುವುದು ಬಹಳ ಕಷ್ಟ. ಅದರಲ್ಲಿಯೂ ದುಃಖದಲ್ಲಿ ಮುಳುಗಿದ್ದಾಗಲಂತೂ ಬಹಳ ಬಹಳ ಕಷ್ಟ.
ಚಾಮರಾಜ್, ಚಿತ್ರ-ಲೇಖನ
ಚಾಮರಾಜ್,
ಚಿತ್ರ-ಲೇಖನ ಮನಕಲಕುವಂತಿತ್ತು. ಹಕ್ಕಿಯ ರೀತಿಯಲ್ಲಿ ಮನಸ್ಸೂ ಮೂಕವಾಯಿತು. ಎಂಥ ಅದ್ಭುತ ಛಾಯಾಚಿತ್ರಣವೋ ಅಷ್ಟೇ ಅದ್ಭುತವಾದ ಬರವಣಿಗೆ. ಬಹುಶ: ಬರವಣಿಗೆಯೂ ಅಲ್ಲಿ ಮೂಕವಾಗುತ್ತದೆಯೇನೋ ಅನಿಸುತ್ತಿದೆ. ಸಾವಿಗೀಡಾದ ಹಕ್ಕಿಗೆ ಅಂತಿಮ ವಿದಾಯ ಹಾಗೂ ಅಶ್ರುತರ್ಪಣ - ಸಿದ್ಧರಾಮ ಹಿರೇಮಠ. ಕೂಡ್ಲಿಗಿ
ನನಗೂ ಮಿ೦ಚ೦ಚೆಯಲ್ಲಿ ಈ ಚಿತ್ರಗಳು
ನನಗೂ ಮಿ೦ಚ೦ಚೆಯಲ್ಲಿ ಈ ಚಿತ್ರಗಳು ಬ೦ದಿತ್ತು..,ಹಕ್ಕಿಯನ್ನು ಉಳಿಸುವ ಪ್ರಯತ್ನ ಮಾಡದೆ ಅದರ ಚಿತ್ರಗಳನ್ನು ತೆಗೆಯುತ್ತಾ ಕೂತ ಛಾಯಾಗ್ರಾಹಕನ ಬಗ್ಗೆ ಛೇ,ಎ೦ತಹ ಮನುಷ್ಯನಪ್ಪಾ ಅನ್ನಿಸಿಬಿಟ್ಟಿತ್ತು.