ಆಟೋ ನುಡಿ - ೪
ಈ ಯುವ ಆಟೋದವರು ಪಾಪ "ಒಲವ ಕಹಿ ಅಥವಾ ಕಹಿಯೊಲವನ್ನುಂಡಿರುತ್ತಾರೆ" (ಅದೇ ಕನ್ನಡದಲ್ಲಿ LOVE FAILURE ಅಂತಾರಲ್ಲ, ಅದು) ಅಂತ ಕಾಣತ್ತೆ.
ಓದಿ, ಈ ದಿನದ ಆಟೋ ನುಡಿ. ಇವನಗೆ ಅದು ಹೇಗೆ ಸಾಂತ್ವನ ಹೇಳುವಿರೋ ನಿಮಗೆ ಬಿಟ್ಟಿದ್ದು.
ಪ್ರೀತಿಗೆ ಸಾವಿಲ್ಲ, || ಸಾಯಿಸ್ತಾರೆ ಹುಡುಗಿಯರೆಲ್ಲ ||
-- Bharath, ನವೀನ್
ಯಾವ ಉಡ್ಗಿ ಪಾಪ ಇವನನ್ನು ವೇದಾಂತಿಯನ್ನಾಗಿ ಮಾಡಿದಳೋ ತಿಳಿಯದು.
ಇದನ್ನು ನೋಡಿದೊಡನೆಯೇ ನನಗೆ ನೆನಪಾದದದ್ದು,
"ವೇದಾಂತಿ ಹೇಳಿದನು ಹೊನ್ನೆಲ್ಲ ಮಣ್ಣು, ಮಣ್ಣು.
ಕವಿಯೊಬ್ಬ ಸಾರಿದನು, ಮಣ್ಣೆಲ್ಲ ಹೊನ್ನು, ಹೊನ್ನು".

- Login or register to post comments
- 612 hits
- Email this page





RSS: