ವಿಶಿಷ್ಟ ಆಟೋ ನುಡಿ - ೬, ೭
ನಿಮಗೀಗಾಲೇ ಆಟೋಹುಡುಗರ ಕಹಿಯೊಲವು ತಿಳಿದಿದೆ. ಇಂದಿನ ಆಟೋ ನುಡಿಗಳು ಕೂಡ ಆ ಸಾಲಿಗೆ ಸೇರುತ್ತವೆ.
ಆಟೋ ನುಡಿ ೬
ಹೆಣ್ಣೊಂದು ಬಣ್ಣದ ಚಿಟ್ಟೆ,
ಅದನ್ನು ನಂಬಿ ನಾ ಕೆಟ್ಟೆ.
ನೆನಪಿಸಿಕೊಳ್ಳಿ, ಏಕಾಂಗಿ ಚಿತ್ರದ "ಈ ಚಿಟ್ಟೆತರವಣ್ಣ ಹೆಣ್ಣಿನ ಬಣ್ಣ" ಹಾಡನ್ನು.
ಆಟೋ ನುಡಿ ೭
ಒಂದೇ ಆಟೋದಲ್ಲಿ ಮೂರು ನುಡಿಗಳು ಕಂಡವು. ಇವುಗಳುನ್ನು ಒಳನುಡಿಗಳನ್ನಾಗಿ ಮಾಡಿ ಹಾಕಿದ್ದೇನೆ.
೭.೧
ಇದು ಕನ್ನಡದ ತೇರು,
ಕೈ ಮುಗಿದು ಒಳಗೇರು.
೭.೨
ನೊಂದ ಜೀವ, ನೋಯಿಸದಿರಿ.
೭.೩
ಸಾಯುವ ಮುನ್ನ, ಒಂದೇ ಒಂದು ಬಾರಿ, I LOVE YOU, ಚಿನ್ನ. !#%#$!$@%$^#
ನೋಡಿ, ಇಂತಹ ವಿರಹ ವೇದನೆಯಲ್ಲೂ, ಕನ್ನಡವನ್ನು ಬಿಡದ ಈ ಆಟೋದವನಿಗೆ ಯಾವ ರೀತಿಯಲ್ಲಿ ನಾವು ಕೃತಜ್ಞರಾಗಿರೋಣ.
ಆ ಮೇಘದೂತದಲ್ಲಿ, ಮೋಡ ಯಕ್ಷನ ಗೆಳೆಯನಾದರೆ, ಇಲ್ಲಿ, ಬೆಂಗಳೂರೆಂಬ ಬೆಂಗಳೂರಲ್ಲಿ, ಆಟೋ ನಮ್ಮ "ಆಟೋಹುಡುಗರ" ಗೆಳೆಯ. ಸರಿ, ಈ ಆಟೋ, "ಆಟೋಹುಡುಗರ" ಗೆಳೆಯನಾದರೆ, ಅವರ ಹೊಸ ಗೆಳತಿಯರಾರು (ಹಳಬರು ಕೈಕೊಟ್ಟ ಮೇಲೆ) ಎಂಬ ಪ್ರಶ್ನೆಬರುತ್ತದೆ.
ವಿರಹತಾಪದಲ್ಲಿ ಬೇಯುತ್ತಿರುವ ನಮ್ಮ "ಆಟೋಗೆಳೆಯರ" ಹೊಸ ಸಂಗಾತಿ, "ಅಯ್ಯಯ್ಯೋ ಎಫ್.ಎಮ್.ರೇನ್ಬೋ ೧೦೧.೩ ಕಂಪನಾಂಕ." - AIR F.M. Rainbow 101.3 MHz ಕ್ಷಮೆ ಕೋರುತ್ತಾ.

- Login or register to post comments
- 768 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: