18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಂಬೆ ದೃಶ್ಯ ೨ (೩)

January 12, 2010 - 8:15pm
csomsekraiah

ಸತ್ಯವತಿ : ನೀನೂ ಸಹ ರಾಜನಂದಿನಿಯಲ್ಲವೆ ? ಕಾಶೀ ರಾಜಕುಮಾರಿಗೆ ಕಾನನದ ಚಲುವಿನ ಸಿರಿ ಸಂಪದದ ತಿಳಿವು ಹೇಗೆ ಸಾಧ್ಯವಾಯಿತು ? ಕುತೂಹಲದಿಂದ ಕೇಳಿದೆನಷ್ಟೆ , ಸಾಮಾನ್ಯವಾಗಿ ರಾಜಕುಮಾರಿಯರು ತಮ್ಮ ಅಧಿಕಾರಬಲದಿಂದ ಅಹಂಕಾರಿಗಳಾಗಿರುವುದೇ ಹೆಚ್ಚು , ಜೊತೆಗೆ ಅವರಿಗೆ ಸೌಂದರ್ಯವೂ ಸೇರಿದರೆ ಅವರು ಮದ್ಯ ಕುಡಿದ ಮರ್ಕಟಗಳೇ ಆಗುವರು . ಅರಮನೆಯ ನಿರಂತರ ರಾಜಕೀಯ ಕ್ರೌರ್ಯದಿಂದಾಗಿ , ಕುಟಿಲತೆಯ ಸನ್ನಾಹಗಳಿಂದ ವಿಷ ಕನ್ಯೆಯರಂತೆ ಅಪಾಯಕಾರಿಗಳಾಗಿರುವರು . ಅವರ ಸೌಂದರ್ಯ ಸರ್ಪ ಸೌಂದರ್ಯ , ಅಲ್ಲಿ ತಿಳಿವು ವಿವೇಕಗಳಿಗೆ ; ಸೌಜನ್ಯ ಸೌಶೀಲ್ಯಗಳಿಗೆ ಅವಕಾಶ ತೀರಾ ಕಡಿಮೆ . ಇಂಥಲ್ಲಿ ನೀನು ಮಾತಾಡುತ್ತಿರುವ ರೀತಿಯನ್ನು ನೋಡಿದರೆ ನನಗೆ ಅಚ್ಚರಿ ಮೂಡುತ್ತದೆ 
ಅಂಬೆ : ನಿಜ ಅಮ್ಮ ಅರಮನೆಯ ಮೃಷ್ಟಾನ್ನ ಭೋಜನಕ್ಕೆ , ಲೋಕದ ಹಸಿವು ಹೇಗೆ ತಾನೆ ತಿಳಿದೀತು ? ನನ್ನ ತಂದೆ ಕೇವಲ ರಾಜ ಮಾತ್ರನಲ್ಲ ; ರಾಜರ್ಷಿ ಕೂಡ . ಅವರು ಅರಮನೆಯಲ್ಲಿದ್ದರೂ ನಿರ್ಲಿಪ್ತರು . ಅವರ ಒಡನಾಟ ಕಾಶಿಯ ಸುತ್ತಣ ನಿಬಿಡಾರಣ್ಯದ ಋಷಿ ಮುನಿಗಳೊಡನೆಯೇ ಹೆಚ್ಚು . ನಾವು ಮೂವರು ಹೆಣ್ಣುಮಕ್ಕಳನ್ನು ಹೆತ್ತ ತಾಯಿ , ಈ ಲೋಕದಿಂದ ದೂರಾದರು . ನನ್ನ ಹೆತ್ತಮ್ಮನ ಮೇಲೆ ನನ್ನ ತಂದೆಗೆ ಅಪಾರ ಅಂತಃಕರಣ ;ಅವಳ ಮರಣ ಅವರ ಪಾಲಿಗೆ ದುರ್ಭರವಾಯಿತು . ಅದರಿಂದಾಗಿ ಅರಸರಾಗಿಯೂ ಅವರು ಪುನರ್ವಿವಾಹ ಮಾಡಿಕೊಳ್ಳಲಿಲ್ಲ . ತಮ್ಮ ನೋವು ದುಃಖಗಳನ್ನೆಲ್ಲಾ ನಮ್ಮ ಮೇಲಣ ವಾತ್ಸಲ್ಯದಿಂದಾಗಿ ಅವರು ಮರೆತರು .  ಅವರು ನನ್ನನ್ನು ಹೆಣ್ಣುಮಗಳೆಂದು ತಿಳಿದವರಲ್ಲ , ನನ್ನನ್ನು ಗಂಡುಮಗುವಿನಂತೆ ಆಶ್ರಮಕ್ಕೆ ಸೇರಿಸಿ ವಿದ್ಯಾಭ್ಯಾಸ ಮಾಡಿಸಿದರು . ಇನ್ನೂ ಚಿಕ್ಕ ಕೂಸುಗಳಾಗಿದ್ದ ನನ್ನ ತಂಗಿಯರು ಅರಮನೆಯ ಆವರಣದಲ್ಲಿಯೇ ಬೆಳೆದರು , ಅವರಿಗೆ ತಂದೆಯೇ ಗುರು . ನಾನು ಕಾನನದ ಋಷ್ಯಾಶ್ರಮಗಳಲ್ಲಿ ಋಷಿಪುತ್ರಿಯರ ಜೊತೆಯಲ್ಲಿ ಬೆಳೆದೆ . ಆದುದರಿಂದ ಅರಮನೆಯೆಂಬುದು ನನಗೆ ಕೇವಲ ಒಂದು ಭ್ರಮಾಲೋಕ . ಈ ಐಶ್ವರ್ಯ ಅಧಿಕಾರ ಅರಮನೆಗಳಿಗಿಂತ ನನಗೆ ಸರಳವಾದ ಮನುಷ್ಯನ ಸಹಜವಾದ ಬದುಕು  ಹೆಚ್ಚು ಪ್ರಿಯವಾದುದು . ನಿಸರ್ಗದ ಸಹಜ ಜೀವನ : ಈ ಕೃತಕ ನಾಗರಿಕ ಜೀವನಕ್ಕಿಂತ ನನಗೆ ಸಾವಿರ ಮಡಿ ಇಷ್ಟದಾಯಕ . ಅದು ಮಾನವ ಸ್ವಾತಂತ್ರ್ಯದ ಸವಿಯನ್ನು ನೀಡಬಲ್ಲದು. 
ಸತ್ಯವತಿ : ಕಂದ , ನಿನ್ನ ಮಾತುಗಳನ್ನು ಕೇಳುತ್ತಿದ್ದರೆ , ನನ್ನ ಬಾಲ್ಯಜೀವನದ ಆ ಮುಗ್ಧ ದಿನಗಳು ಕಣ್ಮುಂದೆ ಪುನರ್ಮೂಡಿ ಬರುತ್ತಿವೆ . ನಾನೆಂಥ ಭಾಗ್ಯವನ್ನು ಕಳೆದುಕೊಂಡೆ ! ಸ್ವರ್ಗವೆಂದು ಭಾವಿಸಿ ನರಕದ ಪಾಲಾದೆ .ನಿಜವಾದ ಸ್ವರ್ಗ ನನ್ನ ಪಾಲಿಗೆ ಮರೀಚಿಕೆಯಾಯಿತು .ನನ್ನ ಜಾತಿಯಲ್ಲಿ ಹುಟ್ಟಿದ ಯಾವ ಹೆಣ್ಣೂ ಸಹ ಕನಸಿನಲ್ಲಿಯೂ ಊಹಿಸಲಾಗದ ಪದವಿಯ ಭಾಗ್ಯ , ನನ್ನ ಪಾಲಿಗೆ ಯಾವ ಆಸೆ ಪ್ರಯತ್ನಗಳೂ ಇಲ್ಲದೆ ತಾನಾಗಿ ಬಂತು . ಆದರೆ ಅದು ಭಾಗ್ಯವಲ್ಲ , ಬಂಧನ  ಎಂಬ ಅರಿವಾಗುವ ವೇಳೆಗೆ ನನ್ನೆಲ್ಲ ಸ್ವಾತಂತ್ರ್ಯ ಹರಣವಾಗಿತ್ತು. ಆಗ ನಾನು ನಾನಾಗಿರಲಿಲ್ಲ ; ಬೃಹತ್ ಸಾಮ್ರಾಜ್ಯದ ಪಟ್ಟಮಹಿಷಿಯಾಗಿದ್ದೆ , ಮುಂದೆ ನಾನು ರಾಜಮಾತೆಯಾದೆ . ನನ್ನೆದುರು ಯಾವ ಆಯ್ಕೆಯೂ ಇರಲಿಲ್ಲ , ನಾನು ಕೇವಲ ಸೂತ್ರದ ಬೊಂಬೆಯಾಗಿದ್ದೆ . ಹೀಗೆಯೇ ನಡೆಯಬೇಕು ; ಹೀಗೆಯೇ ಮಾತಾಡಬೇಕು ; ಹೀಗೆಯೇ ಗಂಭೀರವಾಗಿರಬೇಕು ; ಇಷ್ಟೇ ಮಾತಾಡಬೇಕು ; ಇಷ್ಟೇ ಬಿಡಬೇಕು .  ಅಬ್ಬಬ್ಬಾ ಆ ನಾಟಕದ ನಡೆನುಡಿಗಳು ನನ್ನನ್ನು ನಾನಾಗಿ ಉಳಿಸಲೇ ಇಲ್ಲ ; ಹೆಜ್ಜೆ ಹೆಜ್ಜೆಗೆ ನನ್ನ ವ್ಯಕ್ತಿತ್ವ ಅನ್ಯಾಕ್ರಾಂತವಾಗಿ ಹೋಯಿತು . ನಾನು ನಾನಲ್ಲದ ಇನ್ನಾರಾರೋ ಆಗಿಹೋದೆ . ಸಾಮಾನ್ಯ ಜನ ನನ್ನನ್ನು ಭಯ ಭಕ್ತಿಯಿಂದ ಕಂಡರು ; ಸಾಮಂತ ರಾಜ ಮನ್ನೆಯರು ಶಿರಬಾಗಿ ನಿಲ್ಲುತ್ತಿದ್ದರು .  ಬಿಂಕ ಗರ್ವಗಳು ನನಗೇ ತಿಳಿಯದಂತೆ ನನ್ನೆದೆಯಲ್ಲಿ ಮೊಳೆತವು . ನಾನು ಮುನಿದರೆ ಯಾರ ಜೀವಕ್ಕಾದರೂ ತೃಣದ ಬೆಲೆ ಇರಲಿಲ್ಲ ; ನಾನು ಮನಸ್ಸು ಮಾಡಿದರೆ ಶೂಲದ ಬಾಯಲ್ಲಿದ್ದವನು ಬದುಕಿ ಬರುತ್ತಿದ್ದ . ಮೇರೆ ಮೀರಿದ ಈ ಸಾಮ್ರಾಜ್ಯದಲ್ಲಿ ಮೇರೆ ಮೀರಿದ ಅಧಿಕಾರ ನನ್ನದು .
ಅಂಬೆ : ಅಮ್ಮ  ಕಂಡಿರಾ , ಮಾನವ ಜನ್ಮದ ಅವನತಿಗೆ ಕಡುಕಾರಣವಾದ ಈ ಅಧಿಕಾರವೆಂಬ ಕಾಳಸರ್ಪದ ಆಟವನ್ನ ; ಸಹ ಮಾನವರನ್ನು ತೃಣಸಮಾನವಾಗಿ ಕಾಣುಬಲ್ಲ ; ಎದೆಯ ಕರುಣೆಯ ಜಲವನ್ನೇ ಬತ್ತಿಸಿ  ಕಲ್ಲಾಗಿಸಬಲ್ಲ ; ಮನುಷ್ಯತ್ವವನ್ನೂ , ಮನುಷ್ಯನೆದೆಯ ಸಹಜ ಪ್ರೇಮವನ್ನೂ ಇಂಗಿಸಿ , ಮರುಭೂಮಿಯನ್ನಾಗಿ ಮಾರ್ಪಡಿಸಬಲ್ಲ ಈ ಭಯಂಕರ ಕ್ರೂರ ಅಹಂಕಾರಯುಕ್ತ ಅಧಿಕಾರ ರಾಕ್ಷಸನ ಅಟ್ಟಹಾಸವನ್ನ 
ಸತ್ಯವತಿ :  ಹೌದು ಅಂಬೆ , ಅಧಿಕಾರವಿದ್ದಲ್ಲಿ ಪ್ರೇಮಕ್ಕೆ ಬೆಲೆ ಎಲ್ಲಿ ? ಈ ಸತ್ಯವತಿ ಯೋಜನಗಂಧಿಯಾಗಿದ್ದಾಗ ಮನುಷ್ಯಳಾಗಿದ್ದಳು . ಇವಳ ಮುಖದಲ್ಲಿ ನಿಷ್ಕಲ್ಮಷ ನಗುವಿತ್ತು ; ಮಗುವಿನ ಮುಗ್ಧತೆ ಇತ್ತು . ಇಂದು ಆ ಎಲ್ಲ ಮಾನವೀಯ ಆಭರಣಗಳನ್ನು ಕಳಚಿ ಇದೋ ನಿಂತಿದೆ , ಇಲ್ಲೊಂದು ಮಾನವಾಕೃತಿಯ ಮಹಾರಾಣಿಯ ವೇಷ ಧರಿಸಿ ನಿಂತ ಬೆಂತರ . ಈಗ ನನಗೆ ಎಲ್ಲ ಇದೆ ; ಮಾನವತೆಯ ಸೊಗಡಿಗೆ ಅವಕಾಶವಿಲ್ಲ . ಹೆಜ್ಜೆ ಹೆಜ್ಜೆಗೆ ನನ್ನ ಆಣತಿಯನ್ನು ಪಾಲಿಸುವ ದಾಸ ದಾಸಿಯರಿದ್ದಾರೆ ; ನನ್ನೊಡನೆ ಮನುಷ್ಯರಂತೆ ವ್ಯವಹರಿಸುವ ಯಾರೂ ಇಲ್ಲ . ನನ್ನ ಪುಣ್ಯಕ್ಕೆ ಪ್ರಮದೆಯೊಬ್ಬಳಿಲ್ಲದೆ ಹೋಗಿದ್ದರೆ ಈ ವೇಳೆಗೆ ನಾನು ಪೈತ್ಯ ಬಡಿದವಳಾಗಿರುತ್ತಿದ್ದೆ  . ಇದೆಲ್ಲ ಕೃತಕ , ಕೃತಕ .  ಈ ಬದುಕು ಕೃತಕದ ನರಕ .
ಅಂಬೆ : ಹಾಗಾದರೆ ತಮ್ಮ ಬಾಲ್ಯ ಅಷ್ಟೊಂದು ಅಕುಟಿಲವಾಗಿತ್ತೆ ? 
ಸತ್ಯವತಿ : (ಕಣ್ಣು ಮುಚ್ಚಿ ನೆನಪುಗಳಿಗೆ ಜಾರುತ್ತ ) ಹೌದು ನನ್ನ ಬಾಲ್ಯ ಆ ಗಂಗಾನದಿಯ ತಿರದಲ್ಲಿ ಅಕುಟಿಲವಾಗಿತ್ತು ; ರಮ್ಯ ವನಪ್ರಾಂತ್ಯದಲ್ಲಿ ಮುಗ್ಧವಾಗಿತ್ತು . ನನಗೆ ಚನ್ನಾಗಿ ನೆನಪಿದೆ, ನಾನು ಹದಿನಾರು ವರ್ಷದವಳಾದಾಗ , ನಮ್ಮ ಜಾತಿಯಲ್ಲಿಯೇ ಯಾರಲ್ಲಿಯೂ ಕಾಣದಂತಹ ಚೆಲುವು ನನ್ನಲ್ಲಿತ್ತೆಂದು ನನ್ನ ಅಮ್ಮ ಹೆಮ್ಮೆಪಡುತ್ತಿದ್ದಳು .ಎಳೆಯ ಮಗುವಾದಾಗಿನಿಂದ ನನ್ನ ತಂದೆಯ ಜೊತೆಯಲ್ಲಿ ದೋಣಿಯಲ್ಲಿ ಹೋಗುತ್ತಿದ್ದೆ .ಗಂಗೆಯ ಒಂದು ತಡಿಯಿಂದ ಇನ್ನೊಂದು ತಡಿಗೆ ಜನರನ್ನು ಸಾಗಿಸುವುದು ನನ್ನ ತಂದೆಯ ಕಸುಬು . ಮಗುವಾಗಿದ್ದ ನನ್ನನ್ನು ತಂದೆ ಅಕ್ಕರೆಯಿಂದ ಜೊತೆಗೆ ಕರೆದೊಯ್ಯುತ್ತಿದ್ದರು .ದೋಣಿಯಲ್ಲಿ ಪಯಣಿಸುತ್ತಿದ್ದವರನ್ನು ಅವರ ಚರ್ಯೆಗಳನ್ನು ನೋಡುತ್ತ ನೋಡುತ್ತ ನನ್ನಲ್ಲಿ ಒಂದು ಬಗೆಯ ಇಂಗಿತಜ್ಞತೆ ಬೆಳೆಯಿತು . ಮನುಷ್ಯರ ಮನಸ್ಸಿನ ಭಾವನೆಗಳನ್ನು ನಾನು ಅರಿಯಲು ಕಲಿತೆ . ಬಿಡುವಿನ ಸಮಯದಲ್ಲಿ ಮೀನು ಹಿಡಿಯುವುದು ನನ್ನ ಮುಖ್ಯ ಹವ್ಯಾಸ , ವಿಧ ವಿಧದ ಬಣ್ಣದ ಮೀನುಗಳನ್ನು ಬರಿಗೈಯ್ಯಲ್ಲಿ ಲೀಲಾಜಾಲವಾಗಿ ಹಿಡಿದುಬಿಡುತ್ತಿದ್ದೆ .ಮೀನಿನ ವಾಸನೆಯಿಂದ ಕೂಡಿದ ನನ್ನನ್ನು ಮತ್ಸ್ಯಗಂಧಿ ಎಂದರು 
ಅಂಬೆ : ನೀವು ಮತ್ಸ್ಯಗಂಧಿಯೋ ? ಅಥವಾ ಯೋಜನ ಗಂಧಿಯೋ ? ಮತ್ಸ್ಯಗಳ ಜೊತೆಯಲ್ಲಿ ಆಟ , ಅವುಗಳಿಗೆ ಪ್ರಾಣ ಸಂಕಟವಾಗಿತ್ತಿತ್ತಲ್ಲವೆ ? ಆದರೂ ನಿಮಗೆ ಅದು ಆಕರ್ಷಕವಾಗಿತ್ತು ಎಂದೇ ಭಾವಿಸೋಣ , ನೀವು ಯೋಜನಗಂಧಿ ಹೇಗಾದಿರಿ ? 
ಸತ್ಯವತಿ : (ಭಾವಾವಿಷ್ಟಳಾಗುವಳು , ಮುಖದ ಮೇಲೆ ಮಂದಹಾಸ ಅರಳುವುದು , ಯಾವುದೋ ಪೂರ್ವದ ಮಧುರ ಸ್ಮೃತಿಗಳ ಪ್ರಭಾವದಿಂದಾಗಿ ಮುಖದ ಮೇಲೆ ನವಿರಾದ ಬೆರಗು ಗೋಚರಿಸುವುದು ) (ತನಗೆ ತಾನೆ ಎಂಬಂತೆ ) ಮತ್ಸ್ಯಗಂಧಿ ಯೋಜನಗಂಧಿಯಾದುದು ಅವಳಿಗಾಗಿ ಅಲ್ಲ  (ಪ್ರಕಟವಾಗಿ )  ನನಗಾಗ ಹದಿನಾರು , ನನ್ನನ್ನು ಕಂಡವರು ಎವೆ ಮುಚ್ಚುತ್ತಿರಲಿಲ್ಲ , ಅದು ನನಗೆ ಚನ್ನಾಗಿ ತಿಳಿಯುತ್ತಿತ್ತು . ನನಗೆ ಒಳಗೊಳಗೇ ಹೆಮ್ಮೆ ; ನನ್ನ ರೂಪದ ಮೇಲೆ ನನಗೇ ಅಭಿಮಾನ . ಗಂಗೆಯ ಎರಡೂ ತಡಿಗಳಲ್ಲಿ ಅನೇಕ ಆಶ್ರಮಗಳಿದ್ದವು , ಎರಡೂ ಕಡೆಗೆ ಓಡಾಟ ನಿತ್ಯವೂ ಇತ್ತು , ನಮ್ಮ ದೋಣಿಯ ಮೇಲೆ ಆಶ್ರಮವಾಸಿಗಳದೇ ಹೆಚ್ಚು ಓಡಾಟ , ಹಾಗಾಗಿ ಸಾಮಾನ್ಯ ಜನ ಭಯದಿಂದಲೋ , ಭಕ್ತಿಯಿಂದಲೋ , ಗೌರವದಿಂದಲೋ ನಮ್ಮ ದೋಣಿಯ ಕಡೆ ಸುಳಿಯುತ್ತಿರಲಿಲ್ಲ ;  ಇದರಿಂದ  ನಮ್ಮ ದೋಣಿ ಋಷಿಗಳ ದೋಣಿಯಾಗಿತ್ತು . ಋಷಿಜನಗಳೆಂದರೆ ಅಪ್ಪನಿಗೆ , ಗೌರವ  ಆದರ . ಅವರೂ ಅಪ್ಪನೊಡನೆ ಅಭಿಮಾನದಿಂದಿದ್ದರು . ಒಬ್ಬ ತರುಣ ಸನ್ಯಾಸಿ ನಿತ್ಯವೂ ಎಂಬಂತೆ ಎರಡೂ ದಂಡೆಗಳ ನಡುವೆ ಪಯಣಿಸುತ್ತಲೇ ಇದ್ದರು . ಅವರನ್ನು ಕಂಡರೆ ಮಿಕ್ಕವರು ಅಪಾರ ಗೌರವವನ್ನು ತೋರಿಸುತ್ತಿದ್ದರು . ಅಪ್ಪನಿಗಂತೂ ಅವರು ದೇವರು , ಮಹಾವಿದ್ವಾಂಸರಾಗಿದ್ದ ಅವರ ಹೆಸರು ಪಾರಾಶರ . ಬೇರೆ ತರುಣರಂತೆ , ಹುಡುಗುತನ , ಚಲ್ಲುನೋಟ ಅವರದಾಗಿರಲಿಲ್ಲ . ಯುವಕರಾಗಿದ್ದರೂ ಅವರು ಘನವಿದ್ವಾಂಸರಾಗಿದ್ದರಂತೆ , ಎರಡೂ ತಡಿಯ ಆಶ್ರಮಗಳಲ್ಲಿದ್ದ , ವಿದ್ಯಾರ್ಥಿಗಳಿಗೆ ಅವರು ಪ್ರಾಚಾರ್ಯರಾಗಿದ್ದರು . ಅವರು ಧರ್ಮಶಾಸ್ತ್ರದ ವಿಷಯದ ಮೇಲೆ ಅಪಾರ ಅಧ್ಯಯನ ನಡೆಸಿದ್ದರಂತೆ . ಸಾಮಾನ್ಯವಾಗಿ ರೂಪಸಿಯಾಗಿದ್ದ ನಾನು ಎಲ್ಲರ ದೃಷ್ಟಿಯ ಕೇಂದ್ರವಾಗಿದ್ದೆ . ಆದರೆ ನನಗೆ ಈ ಪಾರಾಶರರನ್ನು ಮರೆಯಲ್ಲಿ ನೋಡುವುದು ಆಪ್ಯಾಯಮಾನವಾಗಿತ್ತು . ನನ್ನ ಮನಸ್ಸಿನಲ್ಲಿ ಅವರಿಗೆ ವಿಶಿಷ್ಟವಾದ ಸ್ಥಾನವಿತ್ತು , ಅವರ ಕಣ್ಣಿನ ನೋಟ ನನ್ನೆಡೆಗೆ ಹರಿಯಲೆಂದು ಮನಸ್ಸು ಕಾತರಿಸುತ್ತಿತ್ತು . ಈ ಬಗೆಯ ಆಸೆ ತಪ್ಪೆಂದು ನನಗೆ ಗೊತ್ತಿತ್ತು , ಅವರಿಗೂ ನನಗೂ ಆಕಾಶ ಪಾತಾಳದಷ್ಟು ಅಂತರವಿತ್ತು . ಅದರೆ ನಾನು ಏನು ಮಾಡಲಿ ? ನನ್ನ ಮನಸ್ಸಿಗೆ ಈ ರೀತಿಯ ಯಾವುದೇ ಬಂಧನ ಕಡಿವಾಣಗಳಿರಲಿಲ್ಲವಲ್ಲ . 

ಸತ್ಯವತಿ : ನೀನೂ ಸಹ ರಾಜನಂದಿನಿಯಲ್ಲವೆ ? ಕಾಶೀ ರಾಜಕುಮಾರಿಗೆ ಕಾನನದ ಚಲುವಿನ ಸಿರಿ ಸಂಪದದ ತಿಳಿವು ಹೇಗೆ ಸಾಧ್ಯವಾಯಿತು ? ಕುತೂಹಲದಿಂದ ಕೇಳಿದೆನಷ್ಟೆ , ಸಾಮಾನ್ಯವಾಗಿ ರಾಜಕುಮಾರಿಯರು ತಮ್ಮ ಅಧಿಕಾರಬಲದಿಂದ ಅಹಂಕಾರಿಗಳಾಗಿರುವುದೇ ಹೆಚ್ಚು , ಜೊತೆಗೆ ಅವರಿಗೆ ಸೌಂದರ್ಯವೂ ಸೇರಿದರೆ ಅವರು ಮದ್ಯ ಕುಡಿದ ಮರ್ಕಟಗಳೇ ಆಗುವರು . ಅರಮನೆಯ ನಿರಂತರ ರಾಜಕೀಯ ಕ್ರೌರ್ಯದಿಂದಾಗಿ , ಕುಟಿಲತೆಯ ಸನ್ನಾಹಗಳಿಂದ ವಿಷ ಕನ್ಯೆಯರಂತೆ ಅಪಾಯಕಾರಿಗಳಾಗಿರುವರು . ಅವರ ಸೌಂದರ್ಯ ಸರ್ಪ ಸೌಂದರ್ಯ , ಅಲ್ಲಿ ತಿಳಿವು ವಿವೇಕಗಳಿಗೆ ; ಸೌಜನ್ಯ ಸೌಶೀಲ್ಯಗಳಿಗೆ ಅವಕಾಶ ತೀರಾ ಕಡಿಮೆ . ಇಂಥಲ್ಲಿ ನೀನು ಮಾತಾಡುತ್ತಿರುವ ರೀತಿಯನ್ನು ನೋಡಿದರೆ ನನಗೆ ಅಚ್ಚರಿ ಮೂಡುತ್ತದೆ 

ಅಂಬೆ : ನಿಜ ಅಮ್ಮ ಅರಮನೆಯ ಮೃಷ್ಟಾನ್ನ ಭೋಜನಕ್ಕೆ , ಲೋಕದ ಹಸಿವು ಹೇಗೆ ತಾನೆ ತಿಳಿದೀತು ? ನನ್ನ ತಂದೆ ಕೇವಲ ರಾಜ ಮಾತ್ರನಲ್ಲ ; ರಾಜರ್ಷಿ ಕೂಡ . ಅವರು ಅರಮನೆಯಲ್ಲಿದ್ದರೂ ನಿರ್ಲಿಪ್ತರು . ಅವರ ಒಡನಾಟ ಕಾಶಿಯ ಸುತ್ತಣ ನಿಬಿಡಾರಣ್ಯದ ಋಷಿ ಮುನಿಗಳೊಡನೆಯೇ ಹೆಚ್ಚು . ನಾವು ಮೂವರು ಹೆಣ್ಣುಮಕ್ಕಳನ್ನು ಹೆತ್ತ ತಾಯಿ , ಈ ಲೋಕದಿಂದ ದೂರಾದರು . ನನ್ನ ಹೆತ್ತಮ್ಮನ ಮೇಲೆ ನನ್ನ ತಂದೆಗೆ ಅಪಾರ ಅಂತಃಕರಣ ;ಅವಳ ಮರಣ ಅವರ ಪಾಲಿಗೆ ದುರ್ಭರವಾಯಿತು . ಅದರಿಂದಾಗಿ ಅರಸರಾಗಿಯೂ ಅವರು ಪುನರ್ವಿವಾಹ ಮಾಡಿಕೊಳ್ಳಲಿಲ್ಲ . ತಮ್ಮ ನೋವು ದುಃಖಗಳನ್ನೆಲ್ಲಾ ನಮ್ಮ ಮೇಲಣ ವಾತ್ಸಲ್ಯದಿಂದಾಗಿ ಅವರು ಮರೆತರು .  ಅವರು ನನ್ನನ್ನು ಹೆಣ್ಣುಮಗಳೆಂದು ತಿಳಿದವರಲ್ಲ , ನನ್ನನ್ನು ಗಂಡುಮಗುವಿನಂತೆ ಆಶ್ರಮಕ್ಕೆ ಸೇರಿಸಿ ವಿದ್ಯಾಭ್ಯಾಸ ಮಾಡಿಸಿದರು . ಇನ್ನೂ ಚಿಕ್ಕ ಕೂಸುಗಳಾಗಿದ್ದ ನನ್ನ ತಂಗಿಯರು ಅರಮನೆಯ ಆವರಣದಲ್ಲಿಯೇ ಬೆಳೆದರು , ಅವರಿಗೆ ತಂದೆಯೇ ಗುರು . ನಾನು ಕಾನನದ ಋಷ್ಯಾಶ್ರಮಗಳಲ್ಲಿ ಋಷಿಪುತ್ರಿಯರ ಜೊತೆಯಲ್ಲಿ ಬೆಳೆದೆ . ಆದುದರಿಂದ ಅರಮನೆಯೆಂಬುದು ನನಗೆ ಕೇವಲ ಒಂದು ಭ್ರಮಾಲೋಕ . ಈ ಐಶ್ವರ್ಯ ಅಧಿಕಾರ ಅರಮನೆಗಳಿಗಿಂತ ನನಗೆ ಸರಳವಾದ ಮನುಷ್ಯನ ಸಹಜವಾದ ಬದುಕು  ಹೆಚ್ಚು ಪ್ರಿಯವಾದುದು . ನಿಸರ್ಗದ ಸಹಜ ಜೀವನ : ಈ ಕೃತಕ ನಾಗರಿಕ ಜೀವನಕ್ಕಿಂತ ನನಗೆ ಸಾವಿರ ಮಡಿ ಇಷ್ಟದಾಯಕ . ಅದು ಮಾನವ ಸ್ವಾತಂತ್ರ್ಯದ ಸವಿಯನ್ನು ನೀಡಬಲ್ಲದು. 

ಸತ್ಯವತಿ : ಕಂದ , ನಿನ್ನ ಮಾತುಗಳನ್ನು ಕೇಳುತ್ತಿದ್ದರೆ , ನನ್ನ ಬಾಲ್ಯಜೀವನದ ಆ ಮುಗ್ಧ ದಿನಗಳು ಕಣ್ಮುಂದೆ ಪುನರ್ಮೂಡಿ ಬರುತ್ತಿವೆ . ನಾನೆಂಥ ಭಾಗ್ಯವನ್ನು ಕಳೆದುಕೊಂಡೆ ! ಸ್ವರ್ಗವೆಂದು ಭಾವಿಸಿ ನರಕದ ಪಾಲಾದೆ .ನಿಜವಾದ ಸ್ವರ್ಗ ನನ್ನ ಪಾಲಿಗೆ ಮರೀಚಿಕೆಯಾಯಿತು .ನನ್ನ ಜಾತಿಯಲ್ಲಿ ಹುಟ್ಟಿದ ಯಾವ ಹೆಣ್ಣೂ ಸಹ ಕನಸಿನಲ್ಲಿಯೂ ಊಹಿಸಲಾಗದ ಪದವಿಯ ಭಾಗ್ಯ , ನನ್ನ ಪಾಲಿಗೆ ಯಾವ ಆಸೆ ಪ್ರಯತ್ನಗಳೂ ಇಲ್ಲದೆ ತಾನಾಗಿ ಬಂತು . ಆದರೆ ಅದು ಭಾಗ್ಯವಲ್ಲ , ಬಂಧನ  ಎಂಬ ಅರಿವಾಗುವ ವೇಳೆಗೆ ನನ್ನೆಲ್ಲ ಸ್ವಾತಂತ್ರ್ಯ ಹರಣವಾಗಿತ್ತು. ಆಗ ನಾನು ನಾನಾಗಿರಲಿಲ್ಲ ; ಬೃಹತ್ ಸಾಮ್ರಾಜ್ಯದ ಪಟ್ಟಮಹಿಷಿಯಾಗಿದ್ದೆ , ಮುಂದೆ ನಾನು ರಾಜಮಾತೆಯಾದೆ . ನನ್ನೆದುರು ಯಾವ ಆಯ್ಕೆಯೂ ಇರಲಿಲ್ಲ , ನಾನು ಕೇವಲ ಸೂತ್ರದ ಬೊಂಬೆಯಾಗಿದ್ದೆ . ಹೀಗೆಯೇ ನಡೆಯಬೇಕು ; ಹೀಗೆಯೇ ಮಾತಾಡಬೇಕು ; ಹೀಗೆಯೇ ಗಂಭೀರವಾಗಿರಬೇಕು ; ಇಷ್ಟೇ ಮಾತಾಡಬೇಕು ; ಇಷ್ಟೇ ಬಿಡಬೇಕು .  ಅಬ್ಬಬ್ಬಾ ಆ ನಾಟಕದ ನಡೆನುಡಿಗಳು ನನ್ನನ್ನು ನಾನಾಗಿ ಉಳಿಸಲೇ ಇಲ್ಲ ; ಹೆಜ್ಜೆ ಹೆಜ್ಜೆಗೆ ನನ್ನ ವ್ಯಕ್ತಿತ್ವ ಅನ್ಯಾಕ್ರಾಂತವಾಗಿ ಹೋಯಿತು . ನಾನು ನಾನಲ್ಲದ ಇನ್ನಾರಾರೋ ಆಗಿಹೋದೆ . ಸಾಮಾನ್ಯ ಜನ ನನ್ನನ್ನು ಭಯ ಭಕ್ತಿಯಿಂದ ಕಂಡರು ; ಸಾಮಂತ ರಾಜ ಮನ್ನೆಯರು ಶಿರಬಾಗಿ ನಿಲ್ಲುತ್ತಿದ್ದರು .  ಬಿಂಕ ಗರ್ವಗಳು ನನಗೇ ತಿಳಿಯದಂತೆ ನನ್ನೆದೆಯಲ್ಲಿ ಮೊಳೆತವು . ನಾನು ಮುನಿದರೆ ಯಾರ ಜೀವಕ್ಕಾದರೂ ತೃಣದ ಬೆಲೆ ಇರಲಿಲ್ಲ ; ನಾನು ಮನಸ್ಸು ಮಾಡಿದರೆ ಶೂಲದ ಬಾಯಲ್ಲಿದ್ದವನು ಬದುಕಿ ಬರುತ್ತಿದ್ದ . ಮೇರೆ ಮೀರಿದ ಈ ಸಾಮ್ರಾಜ್ಯದಲ್ಲಿ ಮೇರೆ ಮೀರಿದ ಅಧಿಕಾರ ನನ್ನದು .

ಅಂಬೆ : ಅಮ್ಮ  ಕಂಡಿರಾ , ಮಾನವ ಜನ್ಮದ ಅವನತಿಗೆ ಕಡುಕಾರಣವಾದ ಈ ಅಧಿಕಾರವೆಂಬ ಕಾಳಸರ್ಪದ ಆಟವನ್ನ ; ಸಹ ಮಾನವರನ್ನು ತೃಣಸಮಾನವಾಗಿ ಕಾಣುಬಲ್ಲ ; ಎದೆಯ ಕರುಣೆಯ ಜಲವನ್ನೇ ಬತ್ತಿಸಿ  ಕಲ್ಲಾಗಿಸಬಲ್ಲ ; ಮನುಷ್ಯತ್ವವನ್ನೂ , ಮನುಷ್ಯನೆದೆಯ ಸಹಜ ಪ್ರೇಮವನ್ನೂ ಇಂಗಿಸಿ , ಮರುಭೂಮಿಯನ್ನಾಗಿ ಮಾರ್ಪಡಿಸಬಲ್ಲ ಈ ಭಯಂಕರ ಕ್ರೂರ ಅಹಂಕಾರಯುಕ್ತ ಅಧಿಕಾರ ರಾಕ್ಷಸನ ಅಟ್ಟಹಾಸವನ್ನ 

ಸತ್ಯವತಿ :  ಹೌದು ಅಂಬೆ , ಅಧಿಕಾರವಿದ್ದಲ್ಲಿ ಪ್ರೇಮಕ್ಕೆ ಬೆಲೆ ಎಲ್ಲಿ ? ಈ ಸತ್ಯವತಿ ಯೋಜನಗಂಧಿಯಾಗಿದ್ದಾಗ ಮನುಷ್ಯಳಾಗಿದ್ದಳು . ಇವಳ ಮುಖದಲ್ಲಿ ನಿಷ್ಕಲ್ಮಷ ನಗುವಿತ್ತು ; ಮಗುವಿನ ಮುಗ್ಧತೆ ಇತ್ತು . ಇಂದು ಆ ಎಲ್ಲ ಮಾನವೀಯ ಆಭರಣಗಳನ್ನು ಕಳಚಿ ಇದೋ ನಿಂತಿದೆ , ಇಲ್ಲೊಂದು ಮಾನವಾಕೃತಿಯ ಮಹಾರಾಣಿಯ ವೇಷ ಧರಿಸಿ ನಿಂತ ಬೆಂತರ . ಈಗ ನನಗೆ ಎಲ್ಲ ಇದೆ ; ಮಾನವತೆಯ ಸೊಗಡಿಗೆ ಅವಕಾಶವಿಲ್ಲ . ಹೆಜ್ಜೆ ಹೆಜ್ಜೆಗೆ ನನ್ನ ಆಣತಿಯನ್ನು ಪಾಲಿಸುವ ದಾಸ ದಾಸಿಯರಿದ್ದಾರೆ ; ನನ್ನೊಡನೆ ಮನುಷ್ಯರಂತೆ ವ್ಯವಹರಿಸುವ ಯಾರೂ ಇಲ್ಲ . ನನ್ನ ಪುಣ್ಯಕ್ಕೆ ಪ್ರಮದೆಯೊಬ್ಬಳಿಲ್ಲದೆ ಹೋಗಿದ್ದರೆ ಈ ವೇಳೆಗೆ ನಾನು ಪೈತ್ಯ ಬಡಿದವಳಾಗಿರುತ್ತಿದ್ದೆ  . ಇದೆಲ್ಲ ಕೃತಕ , ಕೃತಕ .  ಈ ಬದುಕು ಕೃತಕದ ನರಕ .

ಅಂಬೆ : ಹಾಗಾದರೆ ತಮ್ಮ ಬಾಲ್ಯ ಅಷ್ಟೊಂದು ಅಕುಟಿಲವಾಗಿತ್ತೆ ? 

ಸತ್ಯವತಿ : (ಕಣ್ಣು ಮುಚ್ಚಿ ನೆನಪುಗಳಿಗೆ ಜಾರುತ್ತ ) ಹೌದು ನನ್ನ ಬಾಲ್ಯ ಆ ಗಂಗಾನದಿಯತೀರದಲ್ಲಿ ಅಕುಟಿಲವಾಗಿತ್ತು ; ರಮ್ಯ ವನಪ್ರಾಂತ್ಯದಲ್ಲಿ ಮುಗ್ಧವಾಗಿತ್ತು . ನನಗೆ ಚನ್ನಾಗಿ ನೆನಪಿದೆ, ನಾನು ಹದಿನಾರು ವರ್ಷದವಳಾದಾಗ , ನಮ್ಮ ಜಾತಿಯಲ್ಲಿಯೇ ಯಾರಲ್ಲಿಯೂ ಕಾಣದಂತಹ ಚೆಲುವು ನನ್ನಲ್ಲಿತ್ತೆಂದು ನನ್ನ ಅಮ್ಮ ಹೆಮ್ಮೆಪಡುತ್ತಿದ್ದಳು .ಎಳೆಯ ಮಗುವಾದಾಗಿನಿಂದ ನನ್ನ ತಂದೆಯ ಜೊತೆಯಲ್ಲಿ ದೋಣಿಯಲ್ಲಿ ಹೋಗುತ್ತಿದ್ದೆ .ಗಂಗೆಯ ಒಂದು ತಡಿಯಿಂದ ಇನ್ನೊಂದು ತಡಿಗೆ ಜನರನ್ನು ಸಾಗಿಸುವುದು ನನ್ನ ತಂದೆಯ ಕಸುಬು . ಮಗುವಾಗಿದ್ದ ನನ್ನನ್ನು ತಂದೆ ಅಕ್ಕರೆಯಿಂದ ಜೊತೆಗೆ ಕರೆದೊಯ್ಯುತ್ತಿದ್ದರು .ದೋಣಿಯಲ್ಲಿ ಪಯಣಿಸುತ್ತಿದ್ದವರನ್ನು ಅವರ ಚರ್ಯೆಗಳನ್ನು ನೋಡುತ್ತ ನೋಡುತ್ತ ನನ್ನಲ್ಲಿ ಒಂದು ಬಗೆಯ ಇಂಗಿತಜ್ಞತೆ ಬೆಳೆಯಿತು . ಮನುಷ್ಯರ ಮನಸ್ಸಿನ ಭಾವನೆಗಳನ್ನು ನಾನು ಅರಿಯಲು ಕಲಿತೆ . ಬಿಡುವಿನ ಸಮಯದಲ್ಲಿ ಮೀನು ಹಿಡಿಯುವುದು ನನ್ನ ಮುಖ್ಯ ಹವ್ಯಾಸ , ವಿಧ ವಿಧದ ಬಣ್ಣದ ಮೀನುಗಳನ್ನು ಬರಿಗೈಯ್ಯಲ್ಲಿ ಲೀಲಾಜಾಲವಾಗಿ ಹಿಡಿದುಬಿಡುತ್ತಿದ್ದೆ .ಮೀನಿನ ವಾಸನೆಯಿಂದ ಕೂಡಿದ ನನ್ನನ್ನು ಮತ್ಸ್ಯಗಂಧಿ ಎಂದರು 

ಅಂಬೆ : ನೀವು ಮತ್ಸ್ಯಗಂಧಿಯೋ ? ಅಥವಾ ಯೋಜನ ಗಂಧಿಯೋ ? ಮತ್ಸ್ಯಗಳ ಜೊತೆಯಲ್ಲಿ ಆಟ , ಅವುಗಳಿಗೆ ಪ್ರಾಣಸಂಕಟವಾಗುತ್ತಿತ್ತಲ್ಲವೆ ? ಆದರೂ ನಿಮಗೆ ಅದು ಆಕರ್ಷಕವಾಗಿತ್ತು ಎಂದೇ ಭಾವಿಸೋಣ , ನೀವು ಯೋಜನಗಂಧಿ ಹೇಗಾದಿರಿ ? 

ಸತ್ಯವತಿ : (ಭಾವಾವಿಷ್ಟಳಾಗುವಳು , ಮುಖದ ಮೇಲೆ ಮಂದಹಾಸ ಅರಳುವುದು , ಯಾವುದೋ ಪೂರ್ವದ ಮಧುರ ಸ್ಮೃತಿಗಳ ಪ್ರಭಾವದಿಂದಾಗಿ ಮುಖದ ಮೇಲೆ ನವಿರಾದ ಬೆರಗು ಗೋಚರಿಸುವುದು ) (ತನಗೆ ತಾನೆ ಎಂಬಂತೆ ) ಮತ್ಸ್ಯಗಂಧಿ ಯೋಜನಗಂಧಿಯಾದುದು ಅವಳಿಗಾಗಿ ಅಲ್ಲ  (ಪ್ರಕಟವಾಗಿ )  ನನಗಾಗ ಹದಿನಾರು , ನನ್ನನ್ನು ಕಂಡವರು ಎವೆ ಮುಚ್ಚುತ್ತಿರಲಿಲ್ಲ , ಅದು ನನಗೆ ಚನ್ನಾಗಿ ತಿಳಿಯುತ್ತಿತ್ತು . ನನಗೆ ಒಳಗೊಳಗೇ ಹೆಮ್ಮೆ ; ನನ್ನ ರೂಪದ ಮೇಲೆ ನನಗೇ ಅಭಿಮಾನ . ಗಂಗೆಯ ಎರಡೂ ತಡಿಗಳಲ್ಲಿ ಅನೇಕ ಆಶ್ರಮಗಳಿದ್ದವು , ಎರಡೂ ಕಡೆಗೆ ಓಡಾಟ ನಿತ್ಯವೂ ಇತ್ತು , ನಮ್ಮ ದೋಣಿಯ ಮೇಲೆ ಆಶ್ರಮವಾಸಿಗಳದೇ ಹೆಚ್ಚು ಓಡಾಟ , ಹಾಗಾಗಿ ಸಾಮಾನ್ಯ ಜನ ಭಯದಿಂದಲೋ , ಭಕ್ತಿಯಿಂದಲೋ , ಗೌರವದಿಂದಲೋ ನಮ್ಮ ದೋಣಿಯ ಕಡೆ ಸುಳಿಯುತ್ತಿರಲಿಲ್ಲ ;  ಇದರಿಂದ  ನಮ್ಮ ದೋಣಿ ಋಷಿಗಳ ದೋಣಿಯಾಗಿತ್ತು . ಋಷಿಜನಗಳೆಂದರೆ ಅಪ್ಪನಿಗೆ , ಗೌರವ  ಆದರ . ಅವರೂ ಅಪ್ಪನೊಡನೆ ಅಭಿಮಾನದಿಂದಿದ್ದರು . ಒಬ್ಬ ತರುಣ ಸನ್ಯಾಸಿ ನಿತ್ಯವೂ ಎಂಬಂತೆ ಎರಡೂ ದಂಡೆಗಳ ನಡುವೆ ಪಯಣಿಸುತ್ತಲೇ ಇದ್ದರು . ಅವರನ್ನು ಕಂಡರೆ ಮಿಕ್ಕವರು ಅಪಾರ ಗೌರವವನ್ನು ತೋರಿಸುತ್ತಿದ್ದರು . ಅಪ್ಪನಿಗಂತೂ ಅವರು ದೇವರು , ಮಹಾವಿದ್ವಾಂಸರಾಗಿದ್ದ ಅವರ ಹೆಸರು ಪಾರಾಶರ . ಬೇರೆ ತರುಣರಂತೆ , ಹುಡುಗುತನ , ಚಲ್ಲುನೋಟ ಅವರದಾಗಿರಲಿಲ್ಲ . ಯುವಕರಾಗಿದ್ದರೂ ಅವರು ಘನವಿದ್ವಾಂಸರಾಗಿದ್ದರಂತೆ , ಎರಡೂ ತಡಿಯ ಆಶ್ರಮಗಳಲ್ಲಿದ್ದ , ವಿದ್ಯಾರ್ಥಿಗಳಿಗೆ ಅವರು ಪ್ರಾಚಾರ್ಯರಾಗಿದ್ದರು . ಅವರು ಧರ್ಮಶಾಸ್ತ್ರದ ವಿಷಯದ ಮೇಲೆ ಅಪಾರ ಅಧ್ಯಯನ ನಡೆಸಿದ್ದರಂತೆ . ಸಾಮಾನ್ಯವಾಗಿ ರೂಪಸಿಯಾಗಿದ್ದ ನಾನು ಎಲ್ಲರ ದೃಷ್ಟಿಯ ಕೇಂದ್ರವಾಗಿದ್ದೆ . ಆದರೆ ನನಗೆ ಈ ಪಾರಾಶರರನ್ನು ಮರೆಯಲ್ಲಿ ನೋಡುವುದು ಆಪ್ಯಾಯಮಾನವಾಗಿತ್ತು . ನನ್ನ ಮನಸ್ಸಿನಲ್ಲಿ ಅವರಿಗೆ ವಿಶಿಷ್ಟವಾದ ಸ್ಥಾನವಿತ್ತು , ಅವರ ಕಣ್ಣಿನ ನೋಟ ನನ್ನೆಡೆಗೆ ಹರಿಯಲೆಂದು ಮನಸ್ಸು ಕಾತರಿಸುತ್ತಿತ್ತು . ಈ ಬಗೆಯ ಆಸೆ ತಪ್ಪೆಂದು ನನಗೆ ಗೊತ್ತಿತ್ತು , ಅವರಿಗೂ ನನಗೂ ಆಕಾಶ ಪಾತಾಳದಷ್ಟು ಅಂತರವಿತ್ತು . ಅದರೆ ನಾನು ಏನು ಮಾಡಲಿ ? ನನ್ನ ಮನಸ್ಸಿಗೆ ಈ ರೀತಿಯ ಯಾವುದೇ ಬಂಧನ, ಕಡಿವಾಣಗಳಿರಲಿಲ್ಲವಲ್ಲ . 

ಲೇಖನ ವರ್ಗ (Category): 
Average: 5 (1 vote)
To prevent automated spam submissions leave this field empty.