ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಸೆಂಜು ಕನೊನ್ !

October 18, 2006 - 11:14am — benaka
ಸೆಂಜು ಕನೊನ್ !
----------

ಎಂತಹ ದಿವ್ಯ ದೃಶ್ಯ! ಆಹಾ! ನೋಡಲೆರಡು ಕಣ್ಣುಗಳು ಸಾಲವು! ದೇವನ ಸಾಕ್ಷಾತ್ಕಾರವಾದರೆ ಅವನ ಪ್ರಭೆಗೆ, ಆ ದಿವ್ಯ ಸೌಂದರ್ಯವನ್ನು ಕಂಡು ಮಾತು ಹೊರಡದೆ ಮೂಕರಾಗಿ, ಆ ಬ್ರಹ್ಮಾನಂದಕ್ಕೆ ಬೇರೆಲ್ಲ ಶಬ್ದಗಳೂ ನಿಶ್ಶಬ್ದವಾಗಿ ಕಿವುಡರಾಗಿ, ಜಗದ ಉಸಿರೇ ತನ್ನೆದುರು ನಿಂತಿರುವ ಭಾವೋದ್ವೇಗಕ್ಕೆ ಉಸಿರೇ ನಿಂತಂತಾಗಿ, ಕಣ್ಣೆವೆಯಿಕ್ಕದೆ ಏನನ್ನೂ ತಿಳಿಯದೆ ನೋಡುತ್ತಿರುವಾಗ - ಆ ದಿವ್ಯ ಮೂರುತಿ ತನ್ನ ಏಕರೂಪವನ್ನು ಒಮ್ಮೆಲೇ ಅನೇಕರೂಪವನ್ನಾಗಿಸಿ, ತನ್ನ ಸಾವಿರ ಕೈಗಳನ್ನೊಮ್ಮೆ ಕ್ಷಣಾರ್ಧದಲ್ಲಿ ಬಿಡಿಸಿ ಆಶೀರ್ವದಿಸಿ, ಪ್ರಭಾವಳಿಯಂತೆ ಕೈಗಳನ್ನೇ ಜೋಡಿಸಿ, ಮತ್ತೆ ಕ್ಷಣಾರ್ಧದಲ್ಲೇ ಎಲ್ಲವನ್ನು ಉಪಸಂಹರಿಸಿ ಏಕರೂಪಕ್ಕೆ ಬಂದು ನಕ್ಕರೆ - ಆ ದೃಶ್ಯಕ್ಕೆ ತಿಳಿಯದಂತೆಯೇ ಪರವಶತೆಯಿಂದ ಕಣ್ಣೀರು ಧಾರೆಯಾಗಿ ಸುರಿಯುತ್ತದೆ! ಅಂಥ ಆನಂದ ಮೊನ್ನೆ ನನಗಾಯಿತು!

ನನ್ನ ಮುಂದೆ ನಿಂತವನು ತನ್ನ ಸೊಬಗಿನಿಂದ ನನ್ನನ್ನು ಮೂಕ-ಕಿವುಡನನ್ನಾಗಿಸಬಲ್ಲ ಜಗದ ಉಸಿರಾದ ಲಯಕರ್ತ ಶಂಭುವಲ್ಲ! ಬದಲಿಗೆ ತಮ್ಮ ಉಸಿರಿನಲ್ಲೇ ತಾಳ-ಲಯವನ್ನು ತಿಳಿಯುವ ಮೂಕ-ಕಿವುಡ ಚೀನೀ ಬಾಲೆಯರು! ದೇವ ನಿಮಗೆ ಕಾಣುವನೋ ಇಲ್ಲವೋ, ಆದರೆ ಈ ಬಾಲೆಯರ ನರ್ತನ ನಿಮಗೆ ದೇವದರ್ಶನವನ್ನು ಮಾಡಿಸುವುದರಲ್ಲಿ ಸಂದೇಹವೇ ಇಲ್ಲ! ಉತ್ಪ್ರೇಕ್ಷೆಯಲ್ಲ; ಅಕ್ಷರಶಃ ನಿಜ! ಈ ತರುಣಿಯರ ತಂಡದ ಹೆಸರೂ ಅವರು ಅಭಿನಯಿಸುವ ದೇವನ ಹೆಸರೇ - "ಸೆಂಜು ಕನೊನ್"! ಸಂಸ್ಕೃತದಲ್ಲಿ ಈ ಬೋಧಿಸತ್ವನನ್ನು "ಸಹಸ್ರಭುಜ ಆರ್ಯ ಅವಲೋಕಿತೇಶ್ವರ" ಎನ್ನುತ್ತಾರೆ; ಅವನೇ ಬೌದ್ಧಧರ್ಮದ ಹಿರಿಯ ದೈವ - ಶ್ರೀಕೃಷ್ಣನ ವಿಶ್ವರೂಪದ ವಿರಾಟ್ಪುರುಷನಷ್ಟೇ ಪ್ರಸಿದ್ಧ. ಕನ್ನಡದಲ್ಲಿ 'ಸಾವಿರಕೈಗಳೊಡೆಯ' ಎನ್ನಲಡ್ಡಿಯಿಲ್ಲ. ಆ ವಿರಾಡ್ರೂಪವನ್ನು ಮನಮುಟ್ಟುವಂತೆ - ಈಗಿನ ಗಣಕಚಿತ್ರದ ತಂತ್ರಜ್ಞಾನವನ್ನೂ ನೀವಾಳಿಸಿ ಎಸೆಯುವಂತೆ - ಅಭಿನಯಿಸುತ್ತಾರೆ! ಒಂದೇ ಒಂದು ಸೆಕೆಂಡಿನಲ್ಲಿ ಸಹಸ್ರಭುಜಗಳೂ ಒಂದಾದ ಮೇಲೊಂದು ಹೊರಮೂಡಿ ಒಳಹೋಗುವ ದೃಶ್ಯ ನೋಡಿದೊಡನೆಯೇ ನಿಮ್ಮ ಅದ್ಭುತಾನಂದ ಎದೆಯನ್ನು ಬಿರಿಯುತ್ತದೆ; ಕಣ್ಣೆವೆ ಬಡಿಯದೆ ನಿಲ್ಲುತ್ತದೆ; ಉಸಿರು ಪೂರಕ, ರೇಚಕಗಳನ್ನು ಮರೆತು ಕುಂಭಕದಲ್ಲಿ ನಿಲ್ಲುತ್ತದೆ! ಬಾಯ್ತೆರೆದು ಸಂತಸದಿಂದ, ಮತ್ತೊಂದು ಕಣ್ಣಾಗುತ್ತದೆ! ನೋಡಿದ ಐದೇ ಐದು ನಿಮಿಷದಲ್ಲಿ ಆ ಬಾಲೆಯರ ಕಿವುಡ-ಮೂಕತನವೆಲ್ಲ ನಿಮ್ಮೊಳಗೆ ಸೇರುತ್ತವೆ!

ನೋಡಿ:

ಸಹಸ್ರಭುಜಾವಲೋಕಿತೇಶ್ವರ ಪ್ರಭಾವಳಿ

ಸೆಂಜು ಕನೊನ್ - ತರುಣಿಯರ ಅದ್ಭುತ ನೃತ್ಯ

ಶಾಂಘಾಯ್ ಮೂಲದ ಈ ತಂಡ ೨೦೦೮ ರ ಬೀಜಿಂಗ್ ಒಲಿಂಪಿಕ್ಸ್ ಗೆ ಭಾರೀ ಕಸರತ್ತು ನಡೆಸುತ್ತಿದೆ. ಇತ್ತೀಚೆಗೆ ಅಭ್ಯಾಸಾರ್ಥವಾಗಿ ೪೦-೫೦ ಪ್ರದರ್ಶನ ನೀಡಿದೆ; ಅದನ್ನು ನೋಡಿಯೇ ಸುಸ್ತಾದ ವಿದೇಶೀಯರು ಒಲಿಂಪಿಕ್ಸ್ ನಲ್ಲಿ ಚೀನೀಯರು ಇನ್ನೇನೆಲ್ಲಾ ಮಾಡಬಹುದೋ ಎಂದು ಅಚ್ಚರಿಗೊಂಡಿದ್ದಾರೆ! ಭಾರತದವರನ್ನು ಬಿಡಿ ಎಂದಿನಂತೆ- ಓ! ಅದೇನು? ಅದು ನಮಗೆ ಮೊದಲೇ ಗೊತ್ತು; ನಾವೂ ಅಷ್ಟಲಕ್ಷ್ಮಿನರ್ತನ ಮಾಡಿಲ್ಲವೇ ಎಂದು ಹೀಗಳೆಯುವರೇನೋ! ಹಾಗೆನ್ನುವವರಿಗೊಂದು ಕಹಿ ಸುದ್ದಿ - ಈಗ ಭಾರತದ ಯಾವ ನೃತ್ಯದ ತಂಡವೂ 'ಸೆಂಜು ಕನೊನ್'ನ ಕಾಲ ಕಿರಿಬೆರಳ ಉಗುರಿನ ಹುಡಿಗೂ ಸಮವಾಗಲಾರದು; ಅಂತಹ ಅಭ್ಯಾಸ, ಪರಿಶ್ರಮ ಅವರದು! ಕನಿಷ್ಠಪಕ್ಷ, ಮುಂದಾದರೂ ನಮ್ಮವರು ಎಚ್ಚೆತ್ತುಕೊಳ್ಳುವರೇನೋ ನೋಡೋಣ! ಭಾರತದ ನೂರುಕೋಟಿ ಜನರಿಗೆ ನೂರು ಜನರಾದರೂ - ಚೀನೀಯರೇಕೆ ನಾವೂ ಮಾಡಬಲ್ಲೆವೆಂದು - ತೋರಿಸುವ ದಿನ ಬರುವುದೆಂದೇ ನಾನು ಕಾಯುತ್ತಿದ್ದೇನೆ. ಅಲ್ಲಿಯವರೆಗೆ ದಾಸರಂತೆ ನಾನೂ - "ಎಂದಿಗಾವುದೋ ನಿನ್ನ ದರುಶನ..?" ಎಂದು ಬೇಡಲಷ್ಟೇ ಸಾಧ್ಯ!

ನಿಮ್ಮ
ಬೆನಕ
ಕನ್ನಡಪುಟ . ಬ್ಲಾಗ್‍ಸ್ಪಾಟ್ . ಕಾಮ್

  • ಪ್ರಚಲಿತ
~.~
  • Login or register to post comments
  • 808 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 18, 2006 - 11:24am — benaka

ಇಲ್ಲಿ ನೋಡಿ ಆನಂದಿಸಿ

benaka's picture

ಮರೆತಿದ್ದೆ ಕ್ಷಮಿಸಿ,
ಗೂಗಲ್ ವಿಡಿಯೋ ನಲ್ಲೂ ಇದರ ಒಂದು ತುಣುಕು ಲಭ್ಯವಿದೆ. ಇಲ್ಲಿ ನೋಡಿ ಆನಂದಿಸಿ:

ಸಹಸ್ರಭುಜಾವಲೋಕಿತೇಶ್ವರ:ಚೀನೀ ನೃತ್ಯ

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 18, 2006 - 2:33pm — Sunil Jayaprakash

ಎಂದಿಗಾವುದೋ ನಿನ್ನ ದರುಶನ..?

Sunil Jayaprakash's picture

ಅಯ್ಯೋ ಬೆನಕರೆ,

Quote:
ಅಲ್ಲಿಯವರೆಗೆ ದಾಸರಂತೆ ನಾನೂ - "ಎಂದಿಗಾವುದೋ ನಿನ್ನ ದರುಶನ..?" ಎಂದು ಬೇಡಲಷ್ಟೇ ಸಾಧ್ಯ!

ನಾನು ಅದನ್ನೇ ಹೇಳೋಣ ಅಂತಿದ್ದೆ. ಆಗ ನನಗೆ ಮತ್ತೊಂದು ಹಾಡು ನೆನಪಿಗೆ ಬಂತು. "ಎಲ್ಲಿರುವನೋ ರಂಗ, ಎಂಬ ಸಂಶಯಬೇಡ".

ಒಂದು ಕಾಲದಲ್ಲಿ ಎಲ್ಲರೂ ಹಾಡಿನಲ್ಲೇ ಮಾತನಾಡುತ್ತಿದ್ದರೋ ಏನೋ. Wink

ಅಂದ ಹಾಗೆ, ಈ ಚಿಂಚೆಂಕುಣಿತ ನನ್ನನ್ನಂತೂ ಮೂಕನಾಗಿಸಿತು. ತುಂಬಾ ಹಿಂದೆ ನೋಡಿದ್ದೆ, ಮತ್ತೊಮ್ಮೆ ನೋಡುವಂತಾಯಿತು. ಇದನ್ನು ಎಷ್ಟು ಹೊಗಳಿದರೂ ಸಾಲದು. ಕೊಂಡಿ ನೀಡಿದ್ದಕ್ಕಾಗಿ ಸವಿಯೊದಗು.

ಚೀನಿಯರ ಚೆನ್ನಾಗಿರುವ ಕುಣಿತ - ಚಿಂಚೆಂಕುಣಿತ Laughing

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದಾಯ್ ಜನ್ ಗುಮ್!
  • ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ
  • ಕನಸ್ಸು
  • ನಮ್ಮ ಭಾರತದ ಡೈನೊಸಾರ್ ಗಳು ಹುಲ್ಲು ತಿನ್ನುತ್ತಿದ್ದವಂತೆ!
  • ಬೆಂಗಳೂರಿನಲ್ಲಿ ಗ್ನು/ಲಿನಕ್ಸ್ ಹಬ್ಬ!
Syndicate content

ಲೇಖಕರು

benaka's picture

ಪರಿಚಯ

ಹೊಯ್ಸಳರ ವೈಭವದಿ ಮೆರೆದು
ಪರಕೀಯರ ದಾಳಿಗೆ ಕೈಮುರಿದು
ದಂತವ ಎಡದ ಕೈಯಲಿ ಹಿಡಿದು
ನವಭಾರತವ ಕನ್ನಡದಿ ಬರೆಯೆ ಕಾದಿಹ ಬೆನಕ ಮೈಮುರಿದು

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
  • ಹರತಾಳಗಳ 'ತಾಳ'ಕ್ಕೆ ಕುಣಿಯುತ್ತಿರುವ ಕೇರಳ!
  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ

ಇತ್ತೀಚಿನ ಪ್ರತಿಕ್ರಿಯೆಗಳು

  • omshivaprakash
    ಉ: kannada kanda
    July 5, 2008 - 9:38am
  • hamsanandi
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 5, 2008 - 9:29am
  • Narayana
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:29am
  • omshivaprakash
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 9:20am
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 7:09am
  • rameshbalaganchi
    ಉ: ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
    July 5, 2008 - 5:52am
  • ಕೇವೆಂ
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 1:42am
  • ahankari
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 12:58am
  • sushil
    ಉ: ನಿರಕ್ಷರಿ ಕವಿಯ ಅಕ್ಷರಗಾಥೆ
    July 5, 2008 - 12:48am
  • hpn
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 10:56pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator