ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸುರಿವ ಸೋನೆಯಲ್ಲಿ

ಸಂಭ್ರಮದ ಗಳಿಗೆಗಳನ್ನ ಯಾರೂ ಮರೆಯಲು ಇಚ್ಛಿಸುತ್ತಾರೆ ಹೇಳಿ ಕನಸಲ್ಲೂ ಯಾರೂ ಅದನ್ನ ಅಗಲಲು ಇಚ್ಛಿಸೊಲ್ಲ, ಈ ಕ್ಷಣ ಬದುಕಲ್ಲಿ ಹೀಗೆ ಯಾಕೆ ಉಳಿಯಬಾರದು, ಜಗತ್ತು ಈ ಕ್ಷಣಕ್ಕೆ ಹೀಗೆ ಸ್ಥಗಿತವಾಗ ಬಾರದೇಕೆ,ಸುರಿವ ಮಳೆ , ಬೀಸೋ ಗಾಳಿ, ಎಲ್ಲಾ ನನಗಾಗಿ ಒಮ್ಮೆ ಹಾಗೆ ಏಕೆ ನಿಲ್ಲ ಬಾರದು ! ಈ ಕ್ಷಣಕ್ಕೆ ನನ್ನ ಈ ಬದುಕು ಇಲ್ಲಿಗೆ ಕೊನೆಯಾದರೂ ಅಡ್ಡಿ ಇಲ್ಲ, ಜಗತ್ತಿನ ಎಲ್ಲಾ ಸಂತೋಷ ಇಂದು ನನ್ನ ಮಡಿಲಲ್ಲೇ ಇದೆ ಎಂಬ ಆ ಒಂದು ಸಂಭ್ರಮದ ಕ್ಷಣವನ್ನು ಎಲ್ಲರೂ ಅನುಭವಿಸಿರುತ್ತಾರೆ, ಬದುಕಿನ ಅಂತಹ ಒಂದು ಸಂಭ್ರಮವನ್ನು ಕೊಡುವ ಶಕ್ತಿ ಬದುಕಿನ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ ಅಂತಹ ಒಂದು ಷ್ಷಣ ನಿಮಗಾಗಿ,

*********

ಜಲಪಾತದಿಂದ ಧುಮ್ಮಿಕ್ಕುವ ನೀರು ಆಷಾಢದ ಗಾಳಿಗೆ ದೂರದಲ್ಲೆಲ್ಲೋ ನಿಂತ ಹರೆಯದ ಜೋಡಿಗಳ ಮೇಲಿಳಿದ ಹಾಗೆ, ಸಣ್ಣಗೆ ತುಂತುರು ಸೋನೆಯಾಗುತ್ತಿತ್ತು. ಮತ್ತಷ್ಟು ಹೆಚ್ಚಿದರೆ ತನ್ನ ನಿರೀಷ್ಷೆ ಸುಳ್ಳಾಗ ಬಹುದು ? ಎಂಬ ಭಯ ಅವನಲ್ಲಿ ಕಾಡುತ್ತಿತ್ತು.  ಇಲ್ಲ,  ಅವಳು ಖಂಡಿತ ಬರುತ್ತಾಳೆ,,,,,,,,,, 

ಹನಿ ಹನಿಯಾಗಿ ಭೂಮಿಗಿಳಿದ ಮಳೆಯಂತೆ, ಸಮುದ್ರದ ಮೇಲೆ ಬೀಸುವ ಶೀತಲ ಗಾಳಿಯಂತೆ, ನನ್ನ ಕಣ್ಣುಗಳ ನಿರೀಷ್ಷೆಯನ್ನು ಅವಳು ಸುಳ್ಳಾಗಿಸಲಾರಳು, ಅವಳು ಬರುವುದಿಲ್ಲ ಎಂಬುದು ಗೊತ್ತು ಆದರೂ ಅವಳಿಗೆ ಕಾಯುತ್ತಾ ಕುಳಿತ್ತಿದ್ದೇನೆ, ಕಾಯುತ್ತಲೇ ಇರುತ್ತೇನೆ.  ಸರ್ವನಾಶವಾದರೂ ಉಳಿದು ಹೋಗುವ ಒಂದು ಸಣ್ಣ ಕುರುಹಿನಂತೆ ನಿರೀಷ್ಷೆಯಲ್ಲಿ,

ಕಾಯುತ್ತಿದ್ದಾನೆ,  ತನ್ನೆರಡೂ ಕಂಗಳನ್ನು ಬದುಕಿನ ಅಂಗಳಕ್ಕೆ ಚಾಚಿ ವಸಂತ ಮಾಸದ ಬರುವಿಕೆಗಾಗಿ ಕಾದಂತೆ, ನನ್ನ ಎದೆ ಬಡಿತಗಳೂ ಅವಳಿಗೆ ಕೇಳಿಸದೆ ಇರಬಹುದೇ, ಅಥವಾ ಅವಳು ನನ್ನನ್ನು ಮರೆತು ಹೋಗಿರ ಬಹುದೇ,

 ನಿನ್ನೆಯಷ್ಟೆ ಅವಳು ತನ್ನ ನಿರ್ಧಾರಗಳನ್ನು ತಣ್ಣನೆ ಕುಳಿತು ಹೇಳಿ ಹೋಗಿದ್ದಳು, ನಾನು ಸಹ ಅಷ್ಟೇ ತಣ್ಣಗೆ ಅವುಗಳನ್ನು ಕೇಳಿದ್ದೆ. ನಿಜ , ಅವಳ ಮಾತಲ್ಲಿ ತರ್ಕವಿತ್ತು ಅದು ನನಗೆ ಅರ್ಥವು ಆಗಿತ್ತು , ಆದರೂ, ಆಕೆಯನ್ನು ಹೇಗೆ ಮರೆಯಲಾದೀತು, ಮರೆತು ಬದುಕುವುದಾದರೂ ಹೇಗೆ ?

ಇರಬಹುದು ಬದುಕು ನಮ್ಮ ನಡುವೆ ಬಾರಿ ಅಂತರವನ್ನು ಸೃಷ್ಟಿಸಿರ ಬಹುದು, ಆದರೂ ನೆನಪುಗಳ ಸಾಗರದಿಂದ ಹೇಗೆ ಹೊರ  ಬರಲಾದೀತು ? ಅದೇಕೆ ಅವಳು ಅಷ್ಟು ಇಷ್ಟವಾಗುತ್ತಾಳೆ ? ಅದೇಕೆ ಹೀಗೆ ಕಾಡುತ್ತಾಳೆ ? ಬುದ್ದಿ ಕೇಳಿದರೂ ಮನಸ್ಸೇಕೋ ಮಾತೇ ಕೇಳುತ್ತಿಲ್ಲವಲ್ಲ,  ಇದು ಅರುಳೋ, ಮರುಳೋ ಅರಿವಾಗುತ್ತಿಲ್ಲ,

 ಅವಳು ಹೇಳಿ ಹೋದ ಆ ಕೊನೆಯ ಮಾತು , " ನಿನ್ನ ಪ್ರೀತಿ ಸಮುದ್ರದ ಹಾಗೆ ಕಣೋ , ಬಿರು ಬಿಸಿಲೆಗೆ ಕುಗ್ಗದು ಮಳೆಗೆ ಹಿಗ್ಗದು

  ಮರು ಮಾತಲ್ಲೇ ಕೇಳಿದೆ, ನಿನ್ನದು ? ಅದು ಮಳೆ.

ಸಮುದ್ರ ಮತ್ತು ಮಳೆ ಬೇರೆ ಇರಲು ಸಾಧ್ಯವಿಲ್ಲ ಎಂದು ಅವಳ ಕಣ್ಣೂಗಳತ್ತ ಮಿಂಚು ಬೆಳಕಿನ ನಿರೀಕ್ಷೆಯಲ್ಲಿ ನೋಡಿದ ಅಲ್ಲಿ ಮಳೆಯಾಗುತಿತ್ತು. ಮಾತಿಲ್ಲದಾಗಿದ್ದಳು, ಹೊರಟು ನಿಂತಳು ,  ಅವಳು ಬಿಟ್ಟೂ ಹೋದ ಹೆಜ್ಜೆ ಗುರುತುಗಳನ್ನ ನಿಟ್ಟಿಸುತ್ತಾ ಹಾಗೆ ಕುಳಿತ್ತಿದ್ದ, ಸುರಿವ ಸೋನೆ ಅದನ್ನು ಕದಡಿ ಹೋಯಿತು. ಆ ಗುರುತುಗಳನ್ನ ಹಿಡಿದಿಟ್ಟು ಕೊಳ್ಳುವ ಉತ್ಸಾಹ ಅವನಲ್ಲಿರಲಿಲ್ಲ, ತೊರಿಯುವವರಿಗೆ ಹೆಜ್ಜೆ ಗುರುತುಗಳ ಹಂಗೇಕೆ ? ಎಂದು .

ಆದರೂ ಕಾಯುತ್ತಾ ಕುಳಿತ್ತಿದ್ದಾನೆ, ಅವಳು ಬರ ಬಹುದೆಂದು , ಇಲ್ಲ ಎಲ್ಲಾ ಮುಗಿದು ಹೋಯಿತು ಎಂದು ಕೊಂಡು, ಕೆಂಪೇರಿ ಅಸ್ತಂಗತವಾಗುತ್ತಿದ್ದ ಸೂರ್ಯನನ್ನು ಹಳಿಯುತ್ತಾ, ಶೂನ್ಯದತ್ತ ಮುಖಮಾಡಿ ಕುಳಿತಾ...........

ಪ್ರೀತಿಯ ಸಿರಿ ವೀಣೆ ಮೀಟಿದೆ, ಈ ಹೃದಯ
ನಿಂತಲ್ಲಿ ಕುಂತಲ್ಲಿ ನೆನೆದಿದೆ ನಿನ್ನ ದೆಸೆಯ
ಪ್ರೀತಿ ಕೋಗಿಲೆ ನಿನಗಾಗಿ ಕೂಗಿದೆ,

*******

ಬೆಳಗಿನ ಎಲ್ಲಾ ಸಂಭ್ರಮಗಳಲ್ಲಿ , ಕೃತಕ ನಗೆಯೊಂದಿಗೆ ಪಾಲ್ಗೊಂಡಿದ್ದಳು, ಆದರೂ ಮನಸ್ಸಿಗೊಂದು ಕಸಿವಿಸಿ,  ಸಂಜೆಯಲ್ಲಿ ಹಚ್ಚಿಟ್ಟಿದ್ದ ದೀಪವು ಕುಡಿಕಟ್ಟಿದ್ದರಿಂದ ಬೆಳಕು ಮಂದವಾಗಿತ್ತು. ಕಡ್ಡಿಯಿಂದ ಅದರ ಕುಡಿಯನ್ನ ಕೆಡವಿ ಜ್ಯೋತಿಯು ಉಜ್ಜಲಿಸುವಂತೆ ಮಾಡಿದಳು, ಆ ಬೆಳಕಿನ ಪ್ರಖರತೆಯಲ್ಲಿ ಅವನ ಮುಖ ಕಾಣ ತೊಡಗಿತು ಹಾಗೆ ನೋಡುತ್ತಾ ನಿಂತಳು, ಅವನ ಮಾತು, ಅವನ ನೋಟ, ಆ ಅಲೆಗೂದಲೂ , ಆ ಕಂಗಳು, ಆ ಬಿಗಿದ ಮೌನ, ಕಣ್ಣುಗಳು ತುಂಬಿ ಬಂದವು ಅವನ ಮುಖ ಕದಲಿದಂತಾಗಿ ಅಪರಾಧಿ ಭಾವ ಅವಳನ್ನು ಕಾಡ ತೊಡಗಿತು,  " ನೀ ಸಿಗದೆ ಬಾಳೊಂದು ಬಾಳೆ ಕೃಷ್ಣ " ಮರು ಷ್ಷಣವೇ ಬೇರೆ ಯಾವುದೇ ಆಲೋಚನೆಗೆ ಎಡೆಗೊಡದೆ ಸರ ಸರನೇ ನೆಡೆದು ಬಿಟ್ಟಳು.........

*********

ಮನದಲ್ಲೇ ಕಳವಳ, ಮತ್ತೇನೋ ಭಾಂತಿಗೊಳಗಾದಂತೆ ಅನಿಸ ತೊಡಗಿತು ಅವನಿಗೆ ಅವನ ನಿರೀಷ್ಷೆ ನಿಜವಾಗುತ್ತಿದೆ ಅನಿಸ ತೊಡಗಿತು , ಸೂರ್ಯನ ಹೊಂಬಣ್ಣದ ತನ್ನ ಬಾಳಿನಲ್ಲಿ ಹೊಸ ಬೆಳಗು ತುಂಬುತ್ತಿದೆ ಎನಿಸ ತೊಡಗಿತು. ಅವಳ ಬರುವಿಕೆಯ ಅರಿವಾಗ ತೊಡಗಿತು ಅವನಿಗೆ ತಿರುಗಿ ನೋಡಿದ,

 ಅಲೆದು ಅಲೆದು ಬಂದಿದ್ದ ಅವಳಲ್ಲಿ ಒಂದು ಸಣ್ಣ ದಣಿವು, ಸಣ್ಣ ನಡುಕ ಕಾಣುತ್ತಿತ್ತು. ಅವನಲ್ಲಿ ಇಡೀ ಜಗತ್ತನ್ನೇ ಗೆದ್ದ ಸಂಭ್ರಮ,,,,, ಅಲೆಗೂದಲನ್ನು ಹಿದ್ದೆ ತಳ್ಳುತ್ತಾ ಮಾತೇ ಮರೆತವನಂತೆ ಸಂಭ್ರಮಿಸುತ್ತಿದ್ದಾನೆ. ಅವಳೇ ಮಾತಿಗೆ ಮುಂದಾದಳು ನಿನ್ನ ನಗು, ಮಾತು ಎಲ್ಲಕ್ಕಿಂತ ನಿನ್ನ ಮೌನವೇ ನನ್ನನ್ನು ಜಯಿಸಿದ್ದು.  ತಡೆ ತಡೆದೆ ಮಾತಾಡಿದಳು , ನಿಜ , ಸಮುದ್ರ ಮತ್ತು ಮಳೆ ಬಿಟ್ಟಿರಲು ಸಾಧ್ಯವಿಲ್ಲ.

ಕಲ್ಲನ್ನು ಕರಗಿಸುವ ಶಕ್ತಿ ಪ್ರೀತಿಗೆ ಇದೆ ಅಂದ ಮೇಲೆ ನಾವಿನ್ನೆಷ್ಟರವರು , ಅದರಲ್ಲು ಮನಸ್ಸಿರುವ ಮಾನವರು, ಹಿಡಿ ಹೃದಯಕ್ಕೆ ಅದೆಷ್ಟು ಶಕ್ತಿ ಇದೆ.

"ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ

ಕಣ್ಣ ಸನ್ನೆಯ ಹೆಸರು ಪ್ರೇಮವೆಂದು."

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
swathi hg's picture

ತುಂಬ ಚೆನ್ನಾಗಿದೆ.