ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ ಸೇವೆ ಮಾಡುವ ಒಂದು ಸಂಘ .

 

ರಾಷ್ಟ್ರೀಯ ಸ್ವಯಂ ಸೇವಕ ಸಂಘ .(National Volunteers Organization ) .

ಸ್ಥಾಪನೆ : ೧೯೨೫

ಸ್ಥಳ : ನಾಗಪುರ

ಸದಸ್ಯ ಬಲ : ೨೫ - ೬೦ ಲಕ್ಷ ( ಅಂದಾಜು )

 

"The RSS was established as a educational body whose objective was to train a group of Hindus, who on the basis of their character would work to unite the Hindu community so that India could become an Independent country and a creative ಸೊಸೈಟಿ "

 

ಇನ್ನು ನಾನು ನನ್ನ ಸ್ವಂತ ಅನುಭವಗಳನ್ನು ಸ್ವಲ್ಪ ಹಂಚಿಕೊಳ್ಳುತ್ತೇನೆ .ದಯವಿಟ್ಟು ಕೋಮು ಬೇಡ ಇದರಲ್ಲಿ .

ಒಬ್ಬರು ಇತ್ತೀಚಿಗೆ ಚರ್ಚೆ ಯಾ ಮಧ್ಯೆ " ಸಂಘ ದ ಕೀಳು ಅಭಿರುಚಿಯ ಸಾಹಿತ್ಯ " ಅಂದಿದ್ದು ನೋಡಿ ಮನಸ್ಸು ಮಡಚಿ ಮಲಗಿ ,ಯೋಚಿಸಿ ಹೇಳುತ್ತಿರುವ ಕೆಲವು ಮಾತುಗಳು ಅಷ್ಟೇ :

 

ಸಂಘದಲ್ಲಿ ಯಾವುದೇ ಕೀಳು ಅಭಿರುಚಿಯ ಸಾಹಿತ್ಯ ಇದುವರೆಗೆ ಬಂದಿಲ್ಲ . ಸಂಘ ಇಲ್ಲಿಯ ತನಕ ಯಾವತ್ತು ನಮ್ಮ ದೇಶ ದ ಸೌಹಾರ್ದ ಮುಸಲ್ಮಾನರನ್ನು ದ್ವೇಷಿಸಿ ಅಂದಿಲ್ಲ . ಸಂಘ ದ ತಾರ್ಕಿಕ ನಿಲುವು ಇದು ಹಿಂದೂ ರಾಷ್ಟ್ರ . ಇಲ್ಲಿ ನಮ್ಮ  ದೇಶದಲ್ಲಿ ಇರುವ ನಮ್ಮ ಎಲ್ಲ ಮುಸಲ್ಮಾನ ಬಾಂಧವರನ್ನು ಕೂಡ ನಮ್ಮವರು. ನಮ್ಮ ದೇಶವನ್ನು ಆಳಿದ ಆಂಗ್ಲರು ಪೋರ್ಚುಗೀಸರು  ಫ್ರೆಂಚರು, .......... (ಹಾಗೇನೆ  ಈಗ  ಇಟಲಿ ( !)( ಕ್ಷಮಿಸಿ ನಾನಂದಿದ್ದು ಬೋಫೋರ್ಸ್ ಹಗರಣದ ರೂವಾರಿ ಕ್ವಟ್ರೋಚ್ಚಿ ಸಹೋದರರ ಬಗ್ಗೆ ! ರಾಜಕೀಯ   ಲೇಪ ಬೇಡ )) ನಮ್ಮನ್ನು ಬಿಟ್ಟು ಹೋದಮೇಲೆ ನಮ್ಮ ಮೂಲಭೂತ ಸಂಸ್ಕೃತಿಕ ಥಳಹದಿಗಳಿಗೆ ಪೆಟ್ಟು ಬಿದ್ದಾಗ , ಹೌದು ಹಿಂದುಗಳನ್ನು ಒಗ್ಗಟ್ಟಗಿಸುವ ಅಗತ್ಯತೆ ಬಂದಿದೆ . ಹೀಗೆ ಮೇಲ್ಜಾತಿ ಕೀಲ್ಜಾಥಿ ಅನ್ನುತ್ತ ನಾವೇ ಕಿತ್ತದಿದ್ರೆ ಮುಂದೆ ಒಂದು ದಿನ ಜಗತ್ತಲ್ಲಿ ಹಿಂದೂಗಳ ಅಸ್ತಿತ್ವಕ್ಕೆ ದಕ್ಕೆ ಬಂದೆ ಬರುತ್ತೆ ಎಂದು ಮಾನ್ಯ ಹೆಗಡೆವಾರ್ ಅವರು ಸ್ಥಾಪ್ಪಿಸಿದ ಒಂದು ಸಮಾಜಮುಖಿ ಸಂಘಟನೆಯೇ RSS .    ಸಂಘ ದ ಇಲ್ಲಿಯ ಇತಿಹಾಸದಲ್ಲಿ ಇಲ್ಲಿ ತನಕ ಭಾರತೀಯತೆ ಯನ್ನು ಎತ್ತಿ ಹಿಡಿದ್ದದ್ದು ಬಿಟ್ಟರೆ ಬೇರೆ ಯಾವುದೇ ಸ್ವಂತ ಕಿಸೆ ಗೆ ತುಂಬಿಸುವ ಕೆಲಸ ಮಾಡುತ್ತಿಲ್ಲ . ಸಂಘ ದ ಯಾವು ದೇ ಕಾರ್ಯ ವಾಹ್ ಪ್ರಮುಖರು ದೇಶದ ಬ್ರಷ್ಟರ ಸಾಲಲ್ಲಿ ಬಂದಿಲ್ಲ. ಸಂಘಕ್ಕೆ ದುಡಿಯುವವರಲ್ಲಿ   ಎಸ್ಟೋ ಜನ ಬ್ರಮ್ಹಚಾರಿಗಳು . ಇದಕ್ಕೆ ವಾಜಪೇಯಿ , ಮೋದಿ , ಭಾಗವತ್ ಉದಾಹರಿಸಿದ್ರೆ ಸಾಲಲ್ಲ . ಸಾವಿರಾರು ಜನ ಇದ್ದಾರೆ . ಸಂಘ ಕ್ಕೆ ಇಂಥ ಹ ದೇಶ ಸೇವೆ ಗೆ ದುಡ್ಡೆಲ್ಲಿಂದ ಅಂತ ನೀವು ಕೇಳಿದ್ರೆ , ನಮ್ಮಂಥ ಹ ಸಂಘ ದ ಜನ ಗುರುಜಿ ಜನ್ಮ ದಿನದಂದು (ಗುರು ಪೂಜೆ) ಕೊಡುವ ಗುರು ದಕ್ಷಿಣೆ ಹಣ .  ಪಾಪ ಒಂದು ಮೂಲ ಉದ್ದೇಶ ಇಟ್ಟು ದೇಶ ಕಟ್ಟುವವರು ಸಂಘದವರು . ನಾನು ಸಂಘದಲ್ಲಿ ೧೫ ವರ್ಷಗಳ ಒಡನಾಟ ಇತ್ತುಕೊಂಡವ . ಸಂಘ ನನ್ನ ಯಾವುದೇ ದಿನಗಳಲ್ಲಿ ಸೌಹಾರ್ದ  ಮುಸಲ್ಮಾನ ಬಾಂಧವರ ಬಗ್ಗೆ ದ್ವೇಷ ತುಂಬಿ ಮಾತಾಡಿಲ್ಲ . ಸಂಘ ಜಾತಿಯತೆ , ಪ್ರತ್ಯೇಕತೆ , ಭಾಷಾವಾರು ಹೆಸರಲ್ಲಿ ದೇಶ ಒಡೆಯುವ ವಿಧಾನಗಳನ್ನು ವಿರೋಧಿಸುತ್ತದೆ .  ಸಂಘ ಮುಸಲ್ಮಾನ ವಿರೋಧಿ ಅನ್ನೋದು ಇಷ್ಟಕ್ಕೆ " ಭಯೋತ್ಪಾದಕರನ್ನು ಬಯ್ಯೋದಿಕ್ಕೆ " ಹಾಗೂ ಮತ್ಹಾನ್ಥರಗಳನ್ನುಮಾಡುವ ಮಿಷನರಿಗಳ ಆಷಾಢಭೂತಿ ಮುಖವಾಡಕ್ಕೆ .

 

ನಾನೊಬ್ಬ ಬ್ರಾಹ್ಮಣ ನಾಗಿ ನನ್ನ ೫ ನೆ ತರಗತಿಯಲ್ಲಿದ್ದಾಗ , ನಾನು ನನ್ನ ಶಾಖಾ ಪಾಟಿಗಳು ಸಂಪರ್ಕ ಅಂತ ಹೋಗಿ ತುಂಬಾ ಹರಿಜನರ ಮನೆಯಲ್ಲಿ ಊಟ ಮಾಡಿದ್ದೇವೆ, ತಂಗಿದ್ದೇವೆ. ಅವರ ಮಕ್ಕಳನ್ನು ಕರೆದುಕ್ಕೊಂದು ಕೂರಿಸಿ ಪಾಠ  ಹೇಳಿದ್ದೇವೆ . ಕುಡಿದು ಬಂದು ಗಲಾಟೆ ಮಾಡುವ ಮನೆ ಯಜಮಾನನ ಮಕ್ಕಳನ್ನು ಕರೆದು ಕೂರಿಸಿ , ದಿನವೂ ಭಾರತೀಯತೆ ಯಾ ಬೀಜ ಬಿಟ್ಟಿದ್ದೇವೆ. ನಮ್ಮ ಊರಲ್ಲಿ ಕೂಲಿ ಮಾಡಿ ಬದುಕುವ ಜನರಮಕ್ಕಳು ಇಂದಿಗೂ ಅಷ್ಟು ಸುಂದರಬದುಕು ಕಂಡಿದ್ದು ಸಂಘ ದಿಂದ, ಸಂಘ ಅವರಿಗೆ ಕಟ್ಟಿ ಕೊಟ್ಟ ಅ ಸಂಸ್ಕಾರ ದ ಬುತ್ತಿ ಊಟದಿಂದ . ಇದಕ್ಕೆ ಮಂಗಳೂರು ನಗರದಲ್ಲಿ ನಡೆದ ಪಥ ಸಂಚಲನಗಳೇ ಸಾಕ್ಷಿ . ಅಲ್ಲಿ ಬಂದವರು ಯಾರು ಹೋಗುವಾಗ , ಎರಡು ತೊಟ್ಟೆ ಸರಾಯಿ ಕುಡಿದು , ೧೦೦ ರ ನೋಟು ಜೋಬಿಗಿಳಿಸಿ ಹೋಗುವ ರಾಜಕೀಯ ಪುಡಾರಿಗಳ 'ಮಾಟಿನೀ ಶೋ' ಅಲ್ಲ ( ನಾನು ಹಾಸನ  ದಲ್ಲಿದ್ದಾಗ ಕಣ್ಣಾರೆ ನೋಡಿದ ಘಟನೆ ಮೇಲೆ ಹೇಳಿದ್ದು ! ವ್ಯಭವೀಕರಣ ಅಲ್ಲ )  . ಹಾಗೆ ಹೋಗುವಾಗ ಅದೇ ಕುಡುಕ ಅಪ್ಪನ ಅದೇ ಮಕ್ಕಳು ನಮ್ಮ ಜೊತೆ ಕೂತು ಪಾಠ ಓದಿದ ನಮ್ಮ ಸಹೋದರರು ಎಳ್ಳು ಹೋಗುವಾಗ ಮುಸಲ್ಮಾನ ದೂಷಣೆ ಯಾಗಲಿ , ವಿರೋಧವಾಗಲಿ ಮಾಡಲ್ಲ , ಬದಲಿಗೆ " ಭಾರತ್ ಮಾತಾ ಕಿ ಜೈ , ಶಿವಾಜಿ ಮಹಾರಾಜ್ ಕಿ ಜೈ " ಅನ್ನುತ್ತೇವೆ ಅಷ್ಟೇ .   ಪುರೋಹಿತಶಾಹಿ ಚಿಕ್ಕ ಮನಸ್ಸುಗಳನ್ನು ವಿರೋಧಿಸಿದ್ದು ಸಂಘ  ದ ಹೆಗ್ಗಳಿಕೆ . ಹುಡುಕಿ ನೋಡಿ , ಸಂಘ ದ ಅಂಗಳದಲ್ಲಿ ಇರುವ ಯಾರು FORBES  ಗುಂಪಲ್ಲಿ ಬರುವವರಲ್ಲ . ಒಂದು ರುಪಾಯಿ ಯು ನಮ್ಮ ದೇಶದ ಮಣ್ಣಿಂದ ಕದ್ದು ಜೋಬಿಗೆ ತುರುಕಿದವರಲ್ಲ .

 

ಹೇಳುವುದು ಸುಲಭ . " ಸಂಘ, ಕೋಮು ವಾದ "  ಅಂದು ಒಂದು ಮಿಲ್ಕ್ shake ಮಾಡಿ ಬರೆಯೋದು ಓದೋಕೆ ಮಜಾ ಇರುತ್ತೆ , ಸಂಘ ದ ಬಗ್ಗೆ ಗೊತ್ತೇ ಇಲ್ಲದವರಿಗೆ . 

 

ಆದರೆ ಇದು ರಾಷ್ಟ್ರೀಯ ಸ್ವಯಂ ಸೇವಕ ಸಂಘ . ನಾವೇ ಸ್ವಯಂ  ಸೇವೆ ಮಾಡುವ ಒಂದು ಸಂಘ . 

 

 ನಮ್ಮ ಕಯ್ಯಲ್ಲಿ ಆಗ್ಲಿಲ್ಲ ಅಂದ್ರೆ , ಪ್ರೋತ್ಸಾಹಿಸೋ ಗುಣ ಇಲ್ಲಾಂದ್ರು,  ಬಯ್ಯುವವರನ್ನು ನೋಡಿ ಬರೆದದ್ದು . ಸ್ವಯಂ ಅನುಭವ . ರಾಜಕೀಯ ಲೇಪ ಬೇಡ .

 

ಪ್ರೀತಿ ಇಂದ 

 

ಪ್ರವೀಣ ಸಾಯ  

Your rating: None Average: 4.4 (7 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
thesalimath's picture

ಹೆಗಡೆವಾರರ ಬಗ್ಗೆ ನನಗೆ ಗೌರವವಿದೆ. ಅವರ ಸಂಘಟನಾ ಚಾತುರ್ಯ ಅದ್ಭುತ.
ಸಂಘದವರನ್ನು ನಾನು ಒಂದೇ ವಿಷಯದಲ್ಲಿ ಬಹಳ ಮೆಚ್ಚುತ್ತೇನೆ - ಬಾಬರಿ ಮಸೀದಿಯನ್ನು ಒಡೆದು ಹಾಕಿದ್ದು!
ಗಾಂಧಿಜಿಯ ಬಗೆಗಿನ ಅವರ ಅಪಪ್ರಚಾರ ತೀವ್ರ ಬೇಸರ ತರಿಸುತ್ತದೆ. ಹಾಗೆಯೇ ಅನೇಕ ಕಡೆ ಅವರು ಬರೆದಿರುವ ಹೊತ್ತಗೆಗಳಲ್ಲಿ ವಸ್ತುನಿಷ್ಟತೆ ಇಲ್ಲದಿರುವುದು ಕಂಡಿದ್ದೇನೆ. ಅದಕ್ಕೂ ನನ್ನ ವಿರೋಧವಿದೆ.
ಅಂತಹ ಒಳ್ಳೆಯ ಸಂಘಟನೆಯನ್ನು ಇಟ್ಟುಕೊಂಡು ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಆರೆಸ್ಸೆಸ್‌ನಲ್ಲಿ ಸಮಾಜಮುಖಿ ಕೆಲಸಗಳು ನಡೆಯುತ್ತಿಲ್ಲ. ಇದನ್ನು ಆರೆಸ್ಸೆಸ್ ನ ಒಳಗೆ ಒಂದು ವರುಷ ಇದ್ದುಕೊಂಡು ನೋಡಿದ್ದೇನೆ! ಬರೀ ಮಾತು, ಮಾತು.
ಬಿಜೆಪಿಯಂತಹ ಪಕ್ಷವನ್ನು ಕಟ್ಟಿ ಅದನ್ನು ಭಸ್ಮಾಸುರನನ್ನಾಗಿಸಿದ್ದು ಅಕ್ಷಮ್ಯ!

praveena saya's picture

ಹೆಗ್ದೆವಾರ್ ಅವರ ಅಭಿಮಾನಕ್ಕೆ ನನ್ನಿ.

<<ಗಾಂಧಿಜಿಯ ಬಗೆಗಿನ ಅವರ ಅಪಪ್ರಚಾರ ತೀವ್ರ ಬೇಸರ ತರಿಸುತ್ತದೆ.

ಗಾಂಧೀಜಿ ಅವರ ಬಗ್ಗೆ ವಾದ ಅನಾವಶ್ಯಕ . ದೇಶ ಒಡೆದು ಹೋದ ದಿನಗಳಲ್ಲಿ ಉಂಟಾದ ದಳ್ಳುರಿ, ಕಾಶ್ಮೀರಿ ಪಂಡಿತರ , ಹಿಂದೂಗಳ ಮಾರಣ ಹೋಮ ಈ ಕೋಪಕ್ಕೆ ಕಾರಣ .

<<ಅಂತಹ ಒಳ್ಳೆಯ ಸಂಘಟನೆಯನ್ನು ಇಟ್ಟುಕೊಂಡು ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಆರೆಸ್ಸೆಸ್‌ನಲ್ಲಿ ಸಮಾಜಮುಖಿ ಕೆಲಸಗಳು ನಡೆಯುತ್ತಿಲ್ಲ
ತಾವು ದಯವಿಟ್ಟು ಒಂದು ಸಲ ಚೆನ್ನೆನ ಹಳ್ಳಿ ಬೆಂಗಳೂರು ಸಂಘ ದ ಮುಖ್ಯ ಕಚೇರಿ ಗೆ ಹೋಗಿ ಬನ್ನಿ . ತಮಗೆ ತಿಳಿಯುತ್ತದೆ .

<<ಇದನ್ನು ಆರೆಸ್ಸೆಸ್ ನ ಒಳಗೆ ಒಂದು ವರುಷ ಇದ್ದುಕೊಂಡು ನೋಡಿದ್ದೇನೆ! ಬರೀ ಮಾತು, ಮಾತು.
ಅರೆಸ್ಸೇಸ್ಸ್ ನಲ್ಲಿ ಮಾತು ದೇಶದ ಬಗ್ಗೆ ಜಾಸ್ತಿ ಇರುತ್ತದೆ . ಹೇಗೆ ದೇಶ ಅನಾದಿ ಕಾಲದಿಂದ ನಡೆದು ಬಂದಿದೆ ಅನ್ನುವ ವಿವರಣೆಗಳನ್ನು ಒತ್ತಿ ಒತ್ತಿ ಹೇಳುತ್ತಾರೆ. ನಾನು ಆಗಲೇ ಹೇಳಿದೆ . ಕೂಲಿ ಮಾಡಿ ಬದುಕುವ ಜನ ಸಾಮಾನ್ಯರಿಗೆ ದೇಶ ದ ಬಗ್ಗೆ ಮತ್ತೆ ಮತ್ತೆ ಹೇಳಿ ವಿವರಿಸುವ ಕರ್ತವ್ಯ ಇರುತ್ತದೆ .
ಹಾಗು ನಾನು ಈ ಮಾತಿನ ಪರಿಣಾಮಗಳನ್ನು ನೋಡಿದ್ದೇನೆ . ತಾವು ಒಮ್ಮೆ ನಮ್ಮ ಊರಿನ ಕಡೆ ಬಂದರೆ ನಾನು ತೋರಿಸುವೆ , ಹೇಗೆ ಒಂದು ನಿಜವಾದ ಸಮಾಜ ಮುಖಿ ಕೆಲಸ ನಮ್ಮ ಊರಲ್ಲಿ ನಡೆಯುತ್ತಿದೆ ಅಂತ , ಸಂಘ ದ ಮೂಲಕ .
ಆರೆಸ್ಸೆಸ್ ನ ಒಳಗೆ ಒಂದು ವರುಷ ಇದ್ದು ನೋಡಿದ್ದಕ್ಕೂ ವಂದನೆಗಳು .

ಪ್ರವೀಣ ಸಾಯ

thesalimath's picture

<<ಕೂಲಿ ಮಾಡಿ ಬದುಕುವ ಜನ ಸಾಮಾನ್ಯರಿಗೆ ದೇಶ ದ ಬಗ್ಗೆ ಮತ್ತೆ ಮತ್ತೆ ಹೇಳಿ ವಿವರಿಸುವ ಕರ್ತವ್ಯ ಇರುತ್ತದೆ .>>
ಮತ್ತದೇ ಕಾಮಿಡಿ ಸ್ಟೇಟ್ ಮೆಂಟು!
ಕೂಲಿಯಲ್ಲದೆ ಕೂಳಿಲ್ಲದೇ ಇರುವವರಿಗೆ ???

<<ತಾವು ಒಮ್ಮೆ ನಮ್ಮ ಊರಿನ ಕಡೆ ಬಂದರೆ ನಾನು ತೋರಿಸುವೆ , ಹೇಗೆ ಒಂದು ನಿಜವಾದ ಸಮಾಜ ಮುಖಿ ಕೆಲಸ ನಮ್ಮ ಊರಲ್ಲಿ ನಡೆಯುತ್ತಿದೆ ಅಂತ , ಸಂಘ ದ ಮೂಲಕ >>
ನೋಡುವ ಆಸೆಯಿದೆ! ಖಂಡಿತ ನೋಡುತೇನೆ!

<<ಗಾಂಧೀಜಿ ಅವರ ಬಗ್ಗೆ ವಾದ ಅನಾವಶ್ಯಕ . ದೇಶ ಒಡೆದು ಹೋದ ದಿನಗಳಲ್ಲಿ ಉಂಟಾದ ದಳ್ಳುರಿ, ಕಾಶ್ಮೀರಿ ಪಂಡಿತರ , ಹಿಂದೂಗಳ ಮಾರಣ ಹೋಮ ಈ ಕೋಪಕ್ಕೆ ಕಾರಣ .>>

ಇದಂತೂ ಸಕತ್ ಕಾಮೆಡಿ!!! ನಗು ತಡೆಯಲಾಗಲಿಲ್ಲ! ಮಾರಣಹೋಮ ನಡೆದರೆ ಗಾಂಧಿಜಿಯನ್ನು ಸುಳ್ಳು ಸುಳ್ಳೇ ಬೈತಾ ಕೂರಬೇಕಾ?

bhasip's picture

http://www.organiser...

ಇದು ಸುಳ್ಳು ಇತಿಹಾಸ , ನಗು ತಡೆಯಕ್ಕೆ ಅಗ್ತ ಇಲ್ಲ ಅಂತ ನೀವು ಬರೆದರೆ,ನಿಮ್ಮ ಇಷ್ಟ ;)

"<<ಗಾಂಧೀಜಿ ಅವರ ಬಗ್ಗೆ ವಾದ ಅನಾವಶ್ಯಕ . ದೇಶ ಒಡೆದು ಹೋದ ದಿನಗಳಲ್ಲಿ ಉಂಟಾದ ದಳ್ಳುರಿ, ಕಾಶ್ಮೀರಿ ಪಂಡಿತರ , ಹಿಂದೂಗಳ ಮಾರಣ ಹೋಮ ಈ ಕೋಪಕ್ಕೆ ಕಾರಣ .>>

ಇದಂತೂ ಸಕತ್ ಕಾಮೆಡಿ!!! ನಗು ತಡೆಯಲಾಗಲಿಲ್ಲ! ಮಾರಣಹೋಮ ನಡೆದರೆ ಗಾಂಧಿಜಿಯನ್ನು ಸುಳ್ಳು ಸುಳ್ಳೇ ಬೈತಾ ಕೂರಬೇಕಾ?"

-- ಮಾತು ಮಾತಿಗೂ ನೀವು RSS ನ ಬೈತ ಇರ್ತೀರಲ್ಲ ಇದೂ ಹಾಗೆನೆ ಅಂದುಕೊಂಡು ಬಿಡಿ ಅಷ್ಟೆ.

bhasip's picture

ಇನ್ನೋಂದು ಕೊಂಡಿ

[ಸಮಯದ ಅಭಾವ ಇರುವುದರಿಂದ ಬರಿ ಕೊಂಡಿ ನೀಡಿದ್ದೇನೆ. ಸಮಯ ಸಿಕ್ಕಲ್ಲಿ ಇದನ್ನು ಕನ್ನಡಕ್ಕೆ ಅನುವಾದಿಸಿ ಹಾಕುತ್ತೇನೆ. ]
http://blogs. timesofindia. indiatimes. com/indus- calling/entry/ daffodils- in-face-of- bullets

ಹಾಗೆಯೆ ಒಮ್ಮೆ ತಾವು, ರಾಷ್ಟೋತ್ತಾನ ರಕ್ತ ನಿಧಿಗೆ ಒಮ್ಮೆ ಭೇಟಿ ಕೊಟ್ಟು, ೧ ವರ್ಷದ ಅಂಕಿ ಅಂಶ ಪಡೆಯಬೇಕಾಗಿ ವಿನಂತಿ. ಎಷ್ಟು ರಕ್ತ ಸಂಗ್ರಹ ಆಗಿದೆ, ಅದರ ಫಲಾನುಭವಿಗಳು ಯಾರು ಎಂದು ಒಮ್ಮೆ ಪರಾಂಬರಿಸಿ. ಕೂಳಿಲ್ಲದೆ, ಕಾಸಿಲ್ಲದೆ ನರಳುವ ರೋಗಿಗಳಿಗೆ ಬೆಂಗಳೂರಿನಲ್ಲಿ ಉಚಿತವಾಗಿ ರಕ್ತ ನೀಡುವ ಸಂಸ್ಥೆಯ ಬಗ್ಗೆ ಒಮ್ಮೆ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಅಥ್ವ ವಿಕ್ಟೋರಿಯಾ ಆಸ್ಪತ್ರೆ ಇಂಥ ಕಡೆಗಳಲ್ಲಿ ಮಾಹಿತಿ ಪಡೆದು ಆಮೆಲೆ ಇನ್ನೊಮ್ಮೆ ವಿವರವಾಗಿ ಬರೆಯಿರಿ.

hariharapurasridhar's picture

ಆತ್ಮೀಯ ಶ್ರೀ ಹರ್ಷ,
ಅವರು ಹೆಗಡೆವಾರರಲ್ಲ. ಹೆಡಗೆವಾರ್. ಪೂರ್ಣ ಹೆಸರು ಡಾ|| ಕೇಶವ ಬಲಿರಾಮ್ ಹೆಡಗೆವಾರ್

abdul's picture

ಒಬ್ಬ ಮುಸ್ಲಿಮನಾಗಿ RSS ಬಗ್ಗೆ ನನ್ನಲ್ಲಿ ಬಹಳಷ್ಟು ಪ್ರಶ್ನೆಗಳಿವೆ. ಹಿಂದೊಮ್ಮೆ ಈ ವಿಷಯದ ಬಗ್ಗೆ ಮಾತನಾಡಿದಾಗ ನನ್ನ ಮಿತ್ರರೊಬ್ಬರು (ಓರ್ವ ಹಿಂದೂ) ಆ ಸಂಘಟನೆಯ ಬಗ್ಗೆ ಕಡಿಮೆ ಹೇಳಿದಷ್ಟೂ ಒಳ್ಳೆಯದು ಎಂದು ಹೇಳಿದರು. ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವ ಉದ್ದೇಶದಿಂದಲೋ ಏನೋ?
"ಸಂಘದವರನ್ನು ನಾನು ಒಂದೇ ವಿಷಯದಲ್ಲಿ ಬಹಳ ಮೆಚ್ಚುತ್ತೇನೆ - ಬಾಬರಿ ಮಸೀದಿಯನ್ನು ಒಡೆದು ಹಾಕಿದ್ದು!" ಸಾಲಿಮಠರ ಈ ವ್ಯಂಗ್ಯಕ್ಕೆ ತಾವು ಉತ್ತರಿಸಲೇ ಇಲ್ಲ.

praveena saya's picture

ಬೇಡಿ ಅಬ್ದುಲ್ ಅವರೇ ,

ಸಂಘ ದ ಬಗ್ಗೆ ವಿವಾದ ಹುಟ್ಟು ಹಾಕುವ ಕಾರಣದಿಂದ ನಾನು ಈ ಲೇಖನ ಬರೆದಿದ್ದಲ್ಲ . ನಾನು ಆಗಲೇ ಹೇಳಿದ್ದೇನೆ ಇದನ್ನು. ನಾನು ಒಬ್ಬ ನಿರೀಶ್ವರವಾದಿ ಆಗಿ,ಸಂಘ ದ ಬಗ್ಗೆ ನೂ ತಿಳಿದಿದ್ದೇನೆ . ಬಾಬರಿ ಮಸ್ಜಿದ್ ಬಗ್ಗೆ ಕೂಡ ವಿವಾದಗಳು ಬೇಡ. ನಾನು ಅದನ್ನು ಉಚ್ಚರಿಸಲೇ ಇಲ್ಲಾ ಅಲ್ವ. ನನ್ನ ಉದ್ದೇಶ ನಿಮ್ಮಂಥ ನಮ್ಮ ಸದ್ಬಂಧವರನ್ನು ನೋಯಿಸುವುದು ಅಲ್ಲ ಅಬ್ದುಲು ಅವರೇ .
ನಿಮ್ಮ ಪ್ರಶ್ನೆಗಳನ್ನು ಕೇಳಿ , ನನ್ನ ಕಯ್ಯಲ್ಲಿ ಆದಷ್ಟು ಉತ್ತರಿಸುತ್ತೇನೆ .ನನ್ನ ಲೇಖನ ಓದಿದರೆ ನಾನೆಲ್ಲೂ ನಮ್ಮ ದೇಶದ ಸಹೃದಯರ ಬಗ್ಗೆ 'ಕಾಮೆಂಟ್' ಮಾಡಿಲ್ಲ ಅಂದುಕೊಂಡಿದ್ದೇನೆ.ಮಾಡಿದ್ದರೆ ಕ್ಷಮಿಸಿ , ನಾನು ಮಾಡುವ ಹಾಗೆ ಇಲ್ಲ. ನೀವು , ನಾನು ಈ ಭಾರತ ಮಣ್ಣಿನ ಸಮರ್ಥ ಪ್ರಜೆಗಳು .ನನ್ನ ಚಿಕ್ಕಪ್ಪ,ದೊಡ್ಡಪ್ಪನ ಮಕ್ಕಳನ್ನು ಬಯ್ಯುವ ಹಕ್ಕು ನನಗೆ ಇಲ್ಲ . RSS ಯಾವತ್ತು ಮುಸಲ್ಮಾನ ವಿರೋಧಿ ಅಲ್ಲ . ಹಾಗಾದಲ್ಲಿ ನಾನದನ್ನು ಸಮರ್ಥಿಸುವ ಪ್ರಶ್ನೆಯೇ ಉದ್ಭವಿಸುವಿದೆ ಇಲ್ಲ . ಭಯೋತ್ಪಾದನೆ ಯಾ ಸಮರ್ಥಿಸಿದ ಪಾಕಿಸ್ತಾನ ದ ಮೇಲೆ ತಿರುಗಿ ಬಿದ್ದಿದ್ದು ಹಾಗು ಅದನ್ನು ಸಮರ್ಥಿಸಿ, ' ವೋಟು BANK ' ಮಾಡಿ ಕೊಳ್ಳುವ ಪಕ್ಷಗಳ ಬಗ್ಗೆ ನನ್ನ ,ಹಾಗು RSS ನ ವಿರೋಧ ಇದೆ ಅಷ್ಟೇ . ನಾನು ದೇಶ ಪ್ರೇಮಿ ! ದೇಶ ದ ಬಗ್ಗೆ ಮತಾಡ್ತ್ಹಿನಿ ಅಬ್ದುಲ್ , ಅಷ್ಟೇ . ನನ್ನ ಬಗ್ಗೆ ಅಷ್ಟು response ಬೈದರು ಭಾವುಕನಾಗದೆ ಬರೆಯುವುದು ಅಷ್ಟಕ್ಕೆ , ' ದೇಶದ ಬಗ್ಗೆ ಯೋಚಿಸಿದ ಪ್ರೇಮಿಗಳ ಬಗ್ಗೆ ತುಚ್ಛವಾಗಿ ಮಾತನಾಡುವುದು ತಪ್ಪು' ಅಂದಿದ್ದು ಅಸ್ತೆ :)

ಪ್ರೀತಿ ಇಂದ ,

ಪ್ರವೀಣ ಸಾಯ

bhasip's picture

ತಮ್ಮ ಗಮನ ಈ ಲೇಖನದ ಕದೆ ಹೋಗಿಲ್ಲವೇ? http://sampada.net/b...

bhasip's picture

ಒಬ್ಬ ಹಿಂದುವಾಗಿ, ನನಗೆ ಮುಸ್ಲೀಮರ ಬಗ್ಗೆ ಹಲವಾರು ಸಂದೇಹಗಳಿವೆ, ಉತ್ತರಿಸುವಿರ? ನನ್ನ ಮಿತ್ರನೊಬ್ಬನಿಗೆ, ಈ ವಿಷಯ ಪ್ರಸ್ತಾಪಿಸಿದಾಗ, ನಾನು ಕೇಳಿದ ಪ್ರಶ್ನೆ ಎಲ್ಲವೂ ಕೋಮುವಾದ ಎಂದು ಸುಮ್ಮನಾದ. ಎಂಥಹ ಸ್ವಾಸ್ತ್ಯ ಕಾಪಾಡಿಕೊಳ್ಳಲೋ ಇನ್ನೂ ಗೊತ್ತಾಗಿಲ್ಲ.

praveena saya's picture

ಭಾಸ್ಕರ್ ಕೇಳಿ,
ನನಗೂ ಇವೆ . ಆದರೆ ಯಾರನ್ನು ಟಾರ್ಗೆಟ್ ಮಾಡಿದ್ದೂ ಅನ್ನುವ ಭಾವ ಹುಟ್ಟಿದಾಗ ವಿವಾದ ಹುಟ್ಟುತ್ತೆ. ಹಾಗಾಗಿ ನೆ ಇವತ್ತಿನ ತನಕ ಆ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿದಿವೆ. ಮುಸಲ್ಮಾನ ಬಾಂಧವರು ನಮ್ಮ ದೇಶ ದ ಅಭಿಮಾನಿಗಳಾಗಿದ್ದಲ್ಲಿ ನಾನು ಚಪ್ಪಾಳೆ ತಟ್ಟುವವ . ಆದರೆ ಅಲ್ಯಾಕೋ ಕೆಲವರು ಹಲವರ ಹೆಸರನ್ನು ಹಾಳು ಮಾಡುವ ಸೂಚನೆಗಳು ಸಿಗುವಾಗಲೂ 'ಅಂತವರನ್ನು' ಮಾತ್ರ ವಿರೋಧಿಸಿದ್ದು 'ಸಂಘ' . ಹಾಗೆ ಸಂಘಕ್ಕೆ ಸಿಕ್ಕಿದ್ದು 'ಕೋಮು ' ಪಟ್ಟ !! ಅಂಥವರನ್ನೂ ವಿರೋಧಿಸಬಾರದು ಅನ್ನುವವರು ಹಲವರು !! ಅವರಿ ಗೆ ಸಿಕ್ಕಿದ್ದು ಚಪ್ಪಾಳೆ !!

bhasip's picture

"ಮುಸಲ್ಮಾನ ಬಾಂಧವರು ನಮ್ಮ ದೇಶ ದ ಅಭಿಮಾನಿಗಳಾಗಿದ್ದಲ್ಲಿ ನಾನು ಚಪ್ಪಾಳೆ ತಟ್ಟುವವ "
>> +1

thesalimath's picture

ಎಲ್ಲಾ ಧರ್ಮಗಳ ಬಗೆಗೂ ಪ್ರಶ್ನೆಗಳಿವೆ. ಒಂದು ಧರ್ಮವು ನಾಡಿನ ಒಳಿತಿಗೆ ಎಷ್ಟು ಪೂರಕವಾಗಿರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ಭಾರತಕ್ಕೆ ಹಿಂದಿನಿಂದಲೂ ಬೇರೆ ಬೇರೆ ಪ್ರಾಂತಗಳಿಂದ ವಲಸೆ/ದಾಳಿ ಯ ಮೂಲಕ ಬಂದಿದ್ದಾರೆ. ಯುರೋಪಿಯನ್ನರು, ಆಫ್ರಿಕನ್ನರು, ಯುಹೂದಿಗಳು, ಈಜಿಪ್ತದವರು, ಹೂಣರು, ಫಾರಸಿಗಳು ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರು. ಉಳಿದವರೆಲ್ಲ ದೇಶದ ಮುಖ್ಯವಾಹಿನಿಯಲ್ಲಿ ಒಂದಾದರೂ ಮುಸ್ಲಿಮರಿಗೆ ಅದು ಸಾಧ್ಯವಾಗಿಲ್ಲ.

ಬಾಬರಿ ಮಸೀದಿಯನ್ನು ಒಡೆದು ಹಾಕಿದ ನಂತರ ದೇಶದಲ್ಲಿ ಹಿಂದೂಮುಸ್ಲಿಮರ ನಡುವೆ ಕಂದಕ ಹೆಚ್ಚಿದ್ದು ಸುಳ್ಳಲ್ಲ. ಸಂಘದವರು ಒಂದು ಯಾತ್ರೆಯ ಮೂಲಕ ಬದಲಾವಣೆ ತರಲು ಮುಂದಾದರೂ ಅದನ್ನು ದಕ್ಕಿಸಿಕೊಳ್ಳುವ ಶಕ್ತಿ ಅವರಿಗಿರಲಿಲ್ಲ. ಕಂದಕ ಹೆಚ್ಚಾಗುತ್ತಲೇ ಹೋಯಿತು. ಈ ಕಂದಕಕ್ಕೆ ಗಾಂಧಿಜಿಯನ್ನು ದೂರುವುದು ಹೇಡಿತನವೇ ಸರಿ.

ಆರೆಸ್ಸೆಸ್ ಬಗ್ಗೆ ನನ್ನ ಬಹುಮುಖ್ಯ ವಿರೋಧವಿರುವುದು ಅವರು ಜನರ ದಾರಿತಪ್ಪಿಸುತ್ತಿರುವ ರೀತಿಯ ಬಗ್ಗೆ. ಕೋಮುವಾದಕ್ಕೆಲ್ಲ ಗಾಂಧಿಜಿ ಕಾರಣ, ಗಾಂಧಿಜಿ ದೇಶದ್ರೋಹಿ ಎಂಬ ಸುಳ್ಳುಗಳನ್ನು ಎಲ್ಲೆಡೆ ಬಿಂಬಿಸುವುದು ಸಹಿಸಲಸಾಧ್ಯ! ಪಾಕಿಸ್ತಾನ ಕ್ರಿಕೆಟ್ನಲ್ಲಿ ಗೆದ್ದಾಗ ಮುಸಲ್ಮಾನರು ಪಟಾಕಿ ಹೊಡೆದರೆ ಅದಕ್ಕೆ ಗಾಂಧಿಜಿ ಕಾರಣರಲ್ಲ.

bhasip's picture

quote <<ಎಲ್ಲಾ ಧರ್ಮಗಳ ಬಗೆಗೂ ಪ್ರಶ್ನೆಗಳಿವೆ. ಒಂದು ಧರ್ಮವು ನಾಡಿನ ಒಳಿತಿಗೆ ಎಷ್ಟು ಪೂರಕವಾಗಿರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. >>

ಇದಕ್ಕೆ ಸಂಭಂಧಿಸಿದ್ದೆ ನನ್ನ ಪ್ರಶ್ನೆಗಳು. ಯಾವ ಮಸೀದಿ, ಮಂದಿರ, ಚರ್ಚ್, ಮತಾಂತರ , ಗಲಭೆ, ಕಂದಕ ಇವುಗಳಿಗೆ ಸಂಬಂಧಿಸಿದಲ್ಲ.

quote <<ಆರೆಸ್ಸೆಸ್ ಬಗ್ಗೆ ನನ್ನ ಬಹುಮುಖ್ಯ ವಿರೋಧವಿರುವುದು ಅವರು ಜನರ ದಾರಿತಪ್ಪಿಸುತ್ತಿರುವ ರೀತಿಯ ಬಗ್ಗೆ. ಕೋಮುವಾದಕ್ಕೆಲ್ಲ ಗಾಂಧಿಜಿ ಕಾರಣ, ಗಾಂಧಿಜಿ ದೇಶದ್ರೋಹಿ ಎಂಬ ಸುಳ್ಳುಗಳನ್ನು ಎಲ್ಲೆಡೆ ಬಿಂಬಿಸುವುದು ಸಹಿಸಲಸಾಧ್ಯ! ಪಾಕಿಸ್ತಾನ ಕ್ರಿಕೆಟ್ನಲ್ಲಿ ಗೆದ್ದಾಗ ಮುಸಲ್ಮಾನರು ಪಟಾಕಿ ಹೊಡೆದರೆ ಅದಕ್ಕೆ ಗಾಂಧಿಜಿ ಕಾರಣರಲ್ಲ.>>

ಸಂಘದ ಬಗ್ಗೆ ನೀವು ಹೀಗೆ ಬರೆದ ಮೇಲೆ ನಿಮ್ಮ ಸಂಘದ ಪರಿಚಯ ಯಾವ ಮಟ್ಟದು ಎಂದು ಅರ್ಥ ಆಯಿತು ಬಿಡಿ. ನಿಮನ್ನ ಪ್ರಶ್ನಿಸುವುದಿಲ್ಲ.

thesalimath's picture

<<ಸಂಘದ ಬಗ್ಗೆ ನೀವು ಹೀಗೆ ಬರೆದ ಮೇಲೆ ನಿಮ್ಮ ಸಂಘದ ಪರಿಚಯ ಯಾವ ಮಟ್ಟದು ಎಂದು ಅರ್ಥ ಆಯಿತು ಬಿಡಿ. ನಿಮನ್ನ ಪ್ರಶ್ನಿಸುವುದಿಲ್ಲ.>>
ನಿಮ್ಮ ಶಾಖೆಗೇ ಬರುತ್ತೇನೆ. ತಿಳಿಸಿಕೊಡಿ.

bhasip's picture

ಸ್ವಾಗತ, ಸುಸ್ವಾಗತ

abdul's picture

"ಭಾರತಕ್ಕೆ ಹಿಂದಿನಿಂದಲೂ ಬೇರೆ ಬೇರೆ ಪ್ರಾಂತಗಳಿಂದ ವಲಸೆ/ದಾಳಿ ಯ ಮೂಲಕ ಬಂದಿದ್ದಾರೆ. ಯುರೋಪಿಯನ್ನರು, ಆಫ್ರಿಕನ್ನರು, ಯುಹೂದಿಗಳು, ಈಜಿಪ್ತದವರು, ಹೂಣರು, ಫಾರಸಿಗಳು ಮುಸಲ್ಮಾನರು ಹಾಗೂ ಕ್ರಿಶ್ಚಿಯನ್ನರು."
ಆರ್ಯರು? ಅವರ ಆಗಮನ ಎಲ್ಲಿಂದ? ತಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಉದ್ದೇಶದಿಂದ ಬರೆದದ್ದಲ್ಲ.

thesalimath's picture

ಆರ್ಯರ ಬರುವಿಕೆಯ ಬಗ್ಗೆ ಅನೇಕ ಥಿಯರಿಗಳಿವೆ. ಅದರ ಬಗ್ಗೆ ನಾನೂ ಸಾಕಷ್ಟು ತಲೆಕೆಡಿಸಿಕೊಂಡಿದ್ದೇನೆ. ಸರಿಯಾದ ಉತ್ತರ ದೊರೆತಿಲ್ಲದ ಕಾರಣ ಇಲ್ಲಿ ಉಲ್ಲೇಖಿಸಿಲ್ಲ.

hamsanandi's picture

>>ಆರ್ಯರು? ಅವರ ಆಗಮನ ಎಲ್ಲಿಂದ? ತಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಉದ್ದೇಶದಿಂದ ಬರೆದದ್ದಲ್ಲ.

ಅಬ್ದುಲ್, ಆರ್ಯರು ಎಲ್ಲಿಂದಲೂ ಬಂದಿರಬೇಕಿಲ್ಲ - ಇಲ್ಲೇ ಇದ್ದವರು ಅಂತ ನನಗನಿಸುತ್ತೆ. ಚರಿತ್ರೆಗೂ ಮುಂಚಿನ ದಿನಗಳಿಗೆ ಹೋದರೆ, ಆಫ್ರಿಕಾದಿಂದಲೇ ಎಲ್ಲ ಕಡೆಗೂ ಮನುಷ್ಯರು ಹೋಗಿರುವುದೇನೋ ಸರಿ.

ಮುಖ್ಯವಾಗಿ ಆರ್ಯ - ಎಂದರೆ ಗೌರವಕ್ಕೆ ತಕ್ಕ - ಅನ್ನುವ ತಿಳಿವನ್ನು ಬಿಟ್ಟು ಅದನ್ನು ಜನಾಂಗವೊಂದಕ್ಕೆ ಬಳಸುವುದರಿಂದ ಆಗಿರುವ ತೊಡಕು ಇದು ಅಂತ ನನ್ನ ಎಣಿಕೆ.

ಈ ವಿಷಯದಲ್ಲಿ ಹಲವಾರು ಅಭಿಪ್ರಾಯಗಳನ್ನು ಓದಿದಮೇಲೆ, ಭಾರತಕ್ಕೆ ವಲಸೆಗೆ ಎಷ್ಟು ಆಧಾರವಿದೆಯೋ, ಅಷ್ಟೇ ಅಥವಾ ಹೆಚ್ಚೇ ಭಾರತದಿಂದ ಹೊರವಲಸೆಗೆ ಇದೆ ಅಂತ ಅನಿಸುತ್ತಿದೆ.

modmani's picture

//ಆರ್ಯರು ಎಲ್ಲಿಂದಲೂ ಬಂದಿರಬೇಕಿಲ್ಲ - ಇಲ್ಲೇ ಇದ್ದವರು ಅಂತ ನನಗನಿಸುತ್ತೆ.
ನನಗೂ ಸಹ ಚಿಕ್ಕಂದಿನಿಂದಲೇ ಏಕೋ ಏನೋ ಅರ್ಯ ದ್ರಾವಿಡ ಕಾಳಗದ ಥಿಯರಿ ನನ್ನ ಮನಸ್ಸಿಗೊಪ್ಪಿರಲಿಲ್ಲ. ಇದೇ ಅಂಕಣದಲ್ಲಿ ಉಲ್ಲೇಖಿತ ಅಂತರ್ಜಾಲ ತಾಣಗಳು ಹೇಳುವುದು ಸರಿ ಎಂದೇ ನನ್ನ ಭಾವನೆ, ಮ್ಯಾಕ್ಸ್ ಮುಲ್ಲರ್ ಅಂದಿನ ರಾಜಕೀಯ ಒತ್ತಡಗಳ ಪೂರ್ವಾಗ್ರಹದಲ್ಲಿ ಕೆಲಸಮಾಡುತ್ತಿದ್ದು, ಅವರಿಗೆ ಆ ಆರ್ಯನ್ನರ ದಾಳಿ ಎಷ್ಟೋ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವಾಗಿರಬಹುದು.

ಅಬ್ದುಲ್ ಜೀ.. ಹಿಂದೂಗಳೆಲ್ಲರೂ ಕೆಟ್ಟವರಲ್ಲ. ಮುಸ್ಲಿಮರೆಲ್ಲರೂ ಒಳ್ಳೆಯವರಲ್ಲ.
ಉಳಿದ ನನ್ನ ಹಿಂದೂ ಗೆಳೆಯರಿಗೆ.. ಮುಸ್ಲಿಮರೆಲ್ಲರೂ ಕೆಟ್ಟವರಲ್ಲ, ಹಿಂದೂಗಳೆಲ್ಲರೂ ಒಳ್ಳೆಯವರಲ್ಲ.

ಕಡೆಯದಾಗಿ ಒಂದು ಮಾತು. ಜಗತ್ತಿನ ಬೇರಾವುದೇ ಮತಗಳು ಹೇಳದಿರುವ ಒಂದು ತತ್ವವನ್ನು ಹಿಂದೂ ಧರ್ಮ ಹೇಳುತ್ತದೆ. "ಇದು ಹೀಗಿದೆ. ನಿನ್ನ ಚಿಂತನೆಯ ಒರೆಗೆ ಹಚ್ಚಿ ನಿನಗೆ ಸರಿಕಂಡಂತೆ ಮಾಡು" ಎಂದು. ಹಾಗಾಗಿ ನಾನು ನಾಸ್ತಿಕನಾದರೂ ಹಿಂದು ಎನ್ನಲಡ್ಡಿಯಿಲ್ಲ.

ಧರ್ಮದ ಮೂಲಾರ್ಥದೆಳೆಗೆ ಹೊರಳುವವರು ಹೀಗೆ ಕಚ್ಚಾಡುವುದಿಲ್ಲ. ಅದೇನಿದ್ದರು ಭೌತಿಕ ಜಗತ್ತಿನ ಸುಖಕ್ಕಾಗಿ ಅಷ್ಟೇ. ಆದರೆ ನಮ್ಮಿಂದ ಇತರ(ರ) ನಂಬಿಕೆಗಳಿಗೆ ಧಕ್ಕೆಯಾಗುತ್ತದೆಯೇ ಎಂದು ವಿಚಾರಿಸುವಲ್ಲಿ ಕ್ರೈಸ್ತ ಮತ್ತು ಮುಸಲ್ಮಾನ ಭಾಂದವರು ಸೋಲುತ್ತಾರೆ. ಅಷ್ಟೇ ಅಲ್ಲ.. ಆವೇಶದ ಭರದಲ್ಲಿರುವ ಹಿಂದುವೂ ಸೋಲುತ್ತಾನೆ.

abdul's picture

ಖಂಡಿತ ಉತ್ತರಿಸಬಲ್ಲೆ ಭಾಸಿಪ್, ಪ್ರಶ್ನಿಸಿದಾಗಲೂ, ಉತ್ತರಿಸಿದಾಗಲೂ ಅಲ್ಲವೇ ಪೂರ್ವಾಗ್ರಹಪೀಡಿತ ವಿಚಾರಗಳ ಪರಿಚಯ ಆಗುವುದು?

bhasip's picture

ಪ್ರಶ್ನೆ ೧)
http://www.indianexp...

ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ?

mpneerkaje's picture

ಅಬ್ದುಲ್ಲರೆ, ನಾನು ನಿಮಗೆ ಅತ್ಯಂತ ಸುಲಭ ಪ್ರಶ್ನೆ ಕೇಳುತ್ತೇನೆ. ಉತ್ತರ ಹೇಳುತ್ತೀರ?

ಈಗ ಹಿಂದುಗಳು ಈ ಆರೆಸ್ಸೆಸ್, ವಿಹಂಪ ಭಜರಂಗದಳ ಎಲ್ಲವನ್ನೂ ತ್ಯಜಿಸಿದರು ಎಂದಿಟ್ಟುಕೊಳ್ಳಿ. ಬಾಬ್ರಿ ಮಸೀದಿಯನ್ನು ನಾವು ಹಿಂದುಗಳೇ ಪುನಹ ಕಟ್ಟಿ ಕೊಟ್ಟೆವು ಎಂದಿಟ್ಟುಕೊಳ್ಳಿ. ಹಾಗಾದಲ್ಲಿ,
1. ನಮ್ಮನ್ನು ಕಾಫಿರರೆಂದು ಕರೆಯುವದನ್ನು ನಿಲ್ಲಿಸುತ್ತಾರೆಯೇ ಮುಸ್ಲಿಮರು?
2. ಹಿಂದೂ ಪರಂಪರೆಯ ತಾಣಗಳ ಅತಿಕ್ರಮಣಗಳನ್ನು (ಉದಾ ಹಂಪಿ) ನಿಲ್ಲಿಸುತ್ತಾರೆಯೇ?
3. ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ (ಉದಾ ಜಮ್ಮು ಕಾಶ್ಮೀರ) ಹಿಂದೂ ಒಬ್ಬಮುಖ್ಯಮಂತ್ರಿ ಆಗಲು ಬಿಡುತ್ತಾರೆಯೆ?
4. ಮುಸ್ಲಿಮ್ ಹುಡುಗಿಯರನ್ನ ಮದುವೆಯಾಗುವ ಹಿಂದೂ ಹುಡುಗರನ್ನು (ಸಾಮಾನ್ಯ ಹಿಂದು. ಸಿನೆಮಾ ತಾರೆಗಳನ್ನು ಬಿಟ್ಟು) ಕೊಲ್ಲದೇ ಇರುತ್ತಾರೆಯೇ?
5. ಮುಸ್ಲಿಮ್ ಬಾಹುಳ್ಯದ ಜಾಗಗಳಲ್ಲಿ ಹಿಂದೂಗಳನ್ನು ಇರಗೊಡುತ್ತಾರೆಯೇ?
6. ಮುಸ್ಲಿಮ್ ಬಾಹುಳ್ಯ ಜಾಗಗಳಲ್ಲಿ ಹಿಂದೂ ದೇವರ ವಿಗ್ರಹಗಳನ್ನು ಭಗ್ನಗೊಳಿಸುವ ನೀಚ ಕೆಲಸವನ್ನು (ಕೊಲ್ಕತ್ತಾದಲ್ಲಿ ಇತ್ತೀಚೆಗೆ ನಡೆದ ಘಟನೆ) ಕೈ ಬಿಡುತ್ತಾರೆಯೇ?
7. ಲವ್ ಜಿಹಾದ್ ಅನ್ನು ನಿಲ್ಲಿಸುತ್ತಾರೆಯೇ?
8. ಮುಸ್ಲಿಮ್ ಬಾಹುಳ್ಯದ ದೇಶಗಳಲ್ಲಿ ಹಿಂದುಗಳ ಮತಾಂತರ ನಿಲ್ಲಿಸುತ್ತಾರೆಯೆ?

ಹೀಗೆ ಇನ್ನೂ ಹತ್ತು ಹಲವು ಪ್ರಶ್ನೆಗಳಿವೆ. ಇವಕ್ಕೆ ನಿಮ್ಮ ಉತ್ತರ ಏನು?. ನಿಜ, ಭಜರಂಗದಳವನ್ನು ನಾನೊಬ್ಬ ನಿಲ್ಲಿಸಲಾರೆ, ಮುಸ್ಲಿಮರ ಮೇಲ್ಕಂಡ ಕೃತ್ಯಗಳಿಗೆ ನೀವು ಕಾರಣರಲ್ಲ. ಕೇವಲ ತರ್ಕಕ್ಕಾಗಿ ಕೇಳುತ್ತಿದ್ದೇನೆ ಅಷ್ಟೆ. ಹಿಂದೂ ಮುಸ್ಲಿಮ್ ಸಂಬಂಧ ಸರಿಯಾಗಿಲ್ಲ ನಿಜ. ಅದನ್ನು ಸರಿಪಡಿಸುವುದು ಅಷ್ಟೇ ಕಷ್ಟ ಇದೆ ಎಂದು ತಿಳಿದುಕೊಳ್ಳಿ. ಕೇವಲ ಹಿಂದೂ ಸಂಘಟನೆಗಳನ್ನು ನಿಷೇಧಿಸುವುದರಿಂದ ಅದು ಪರಿಹಾರವಾಗದು ಎಂದು ಅಷ್ಟೇ ಹೇಳಲು ಇಛ್ಛಿಸುತ್ತೇನೆ.

abdul's picture

ವಂದನೆಗಳು ಮಹೇಶ್. ತಮ್ಮ ಪ್ರಶ್ನೆಗಳಿಗೆ ಕೆಳಗಿವೆ ಉತ್ತರಗಳು.

೧. ಹಿಂದೂಗಳನ್ನು ಕಾಫಿರರೆಂದು ಕರೆಯಕೂಡದೆಂದು ನಮ್ಮ ವಿಧ್ವಾಂಸರ ಅಭಿಪ್ರಾಯ ಮತ್ತು ನೀತಿ.

೨. ಹಿಂದೂ ತಾಣಗಳ, ಹಂಪಿ ಮುಂತಾದವು, ಆಕ್ರಮಣ ಇನ್ನೂ ನಡೆಯುತ್ತಿದೆ ಎಂದು ತಿಳಿಸಿ ನನ್ನನ್ನು ಮಾತ್ರ ಅಲ್ಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದ್ದೀರಿ. ಕಾಶ್ಮೀರದ ಪಂಡಿತರು ಬಿಟ್ಟು ಹೋದ ಮಂದಿರಗಳನ್ನು ಈಗಲೂ ಮುಸ್ಲಿಮರು ಕಾಯ್ದು ಕೊಂಡಿದ್ದಾರೆ ಎಂದು ಓದಿದ್ದೇನೆ.

೩. ಯೋಗ್ಯತೆ ಇರುವವನು ಮುಖ್ಯ ಮಂತ್ರಿ ಆಗಿಯೇ ತೀರುತ್ತಾನೆ. ರಾಹುಲ್ ರಿಗೂ ಒಬ್ಬ ಇದೆ ಪ್ರಶ್ನೆ ಕೇಳಿದ್ದ, ಮುಸ್ಲಿಂ ಪ್ರಧಾನಿ ಆಗಬಹುದೇ ಎಂದು.

4. http://ibnlive.in.co...

above link is just a sample.

7. ಲವ್ ಜಿಹಾದ್ ಸುಳ್ಳು, ಪೊಳ್ಳು ಎಂದು ಕೇರಳದ ಹೈ ಕೋರ್ಟ್ ಛೀಮಾರಿ ಹಾಕಿದೆ.

ಬೇರೆ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಕಾಣಲಿಲ್ಲ ಏಕೆಂದರೆ ಅಂಥ ಘಟನೆಗಳು ಎಲ್ಲೂ ನಡೆದಿಲ್ಲ.

mpneerkaje's picture

>> ಕಾಶ್ಮೀರದ ಪಂಡಿತರು ಬಿಟ್ಟು ಹೋದ ಮಂದಿರಗಳನ್ನು ಈಗಲೂ ಮುಸ್ಲಿಮರು ಕಾಯ್ದು ಕೊಂಡಿದ್ದಾರೆ ಎಂದು ಓದಿದ್ದೇನೆ. <<
ಒಪ್ಪುತ್ತೇನೆ. ನಿಜಕ್ಕೂ ಇದು ಹೊಸ ಬೆಳವಣಿಗೆ. ಅದಕ್ಕೇ ಹಿಂದು ಮುಸ್ಲಿಮ್ ಕಂದಕ ಒಂದು ದಿನ ಮಾಯವಾಭಉದು ಎಂಬ ನಂಬಿಕೆ ಇನ್ನೂ ಉಳಿದುಕೊಂಡಿದೆ ನನ್ನಲ್ಲಿ. ಹಾಗೆಯೇ ಮೊಹರಮ್ ನಲ್ಲಿ ಭಾಗವಹಿಸುವ ಹಿಂದೂಗಳು, ಅಯ್ಯಪ್ಪನ ಮಂದಿರ ಪ್ರವೇಶಿಸುವ ಮೊದಲು ಪಳ್ಳಿ (ಮಸೀದಿ) ಯಲ್ಲಿ ಪ್ರಾರ್ಥಿಸುವ ಹಿಂದೂಗಳು ಇದ್ದಾರೆ. ಹಾಗೆಂದು ಹಂಪಿ ಬಗ್ಗೆ ನಾನು ಹೇಳುತ್ತಿರುವುದು ಸುಳ್ಳಲ್ಲ. ಇದರ ಬಗ್ಗೆ ಸಂಶೋಧಕ ಚಿದಾನಂದ ಮೂರ್ತಿಯವರು ಸಾಕಷ್ಟು ಅಧಧ್ಯಯನ ಮಾಡಿ ಒಂದು ಕೈಪಿಡಿಯನ್ನೂ ಹೊರತಂದಿದ್ದರು. ಅದನ್ನು ಓದಿದ್ದೇನೆ ನಾನು. ಅದರಲ್ಲಿ ಆಧಾರ ಸಹಿತ ತೋರಿಸಲಾಗಿದೆ. ನಿಮಗೆ ಬೇಕಿದ್ದರೆ ಅಂತರ್ಜಾಲ ಲಿಂಕ್ ಹುಡುಕಿ ಕಳಿಸುವೆ.

ಇನ್ನು ನೀವು ಕೊಟ್ಟ ರಿಜ್ವಾನೂರ್ ಪ್ರಕರಣ. ಅದೃಷ್ಟ(?)ವಶಾತ್ ಇದು ನನ್ನ ವಾದವನ್ನೇ ಸಮರ್ಥಿಸುತ್ತದೆ. ರಿಜ್ವಾನೂರ್ ಪ್ರಕರಣ ಸಮಯದಲ್ಲಿ ಪ್ರತಿಯೊಂದು ಬೆಳವಣಿಗೆಯನ್ನೂ ಗಮನಿಸಿದ್ದೇನೆ ನಾನು. ಈ ರಿಜ್ವಾನೂರ್ ಹಿಂದೂ ಹುಡುಗಿಯನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರ ಆಗಲು ಪ್ರಯತ್ನಿಸಿದ್ದ. ಅದಕ್ಕೇ ಆತನನ್ನು ಕೊಲ್ಲಲಾಯಿತು! ಅದೇ ಹುಡುಗಿ ಇಸ್ಲಾಮಿಗೆ ಮತಾಂತರವಾಗಿದ್ದರೆ ಏನೂ ಆಗುತ್ತಿರಲಿಲ್ಲ. ಮೊನ್ನೆ ತಾನೆ ಶಿಮೊಗ್ಗದಲ್ಲಿ ಅಶ್ವಿನಿ ಎಂಬ ಹುಡಗಿ ಮುಸ್ಲಿಮ್ ಹುಡುಗನೊಬ್ಬನನ್ನು ಮದುವೆಯಾಗಿ ಇಸ್ಲಾಮಿಗೆ ಮತಾಂತರವಾಗಿದ್ದಳು. ಆ ಹುಡುಗನಿಗೆ ಏನೂ ಆಗಿಲ್ಲ!!! ರಿಜ್ವಾನೂರ್ ಪ್ರಕರಣ ಒಂದಲ್ಲ. ಬೇಕಾದಷ್ಟಿವೆ. ಎರಡು ಉದಾಹರಣೆ ಕೆಳಗೆ ಕೊಟ್ಟಿದೀನಿ ನೋಡಿ :
http://hindufocus.wo...
http://www.hindujagr...

<< ಲವ್ ಜಿಹಾದ್ ಸುಳ್ಳು, ಪೊಳ್ಳು ಎಂದು ಕೇರಳದ ಹೈ ಕೋರ್ಟ್ ಛೀಮಾರಿ ಹಾಕಿದೆ >>
ಲಿಂಕ್ ಕಳಿಸ್ತೀರ ಸ್ವಲ್ಪ??

bhasip's picture

ನನ್ನ ಪ್ರಶ್ನೆ ನಿಮಗೆ ಕಂಡೀಲ್ಲ ಅನ್ಸುತ್ತೆ..

bhasip's picture

". ಹಿಂದೂ ತಾಣಗಳ, ಹಂಪಿ ಮುಂತಾದವು, ಆಕ್ರಮಣ ಇನ್ನೂ ನಡೆಯುತ್ತಿದೆ ಎಂದು ತಿಳಿಸಿ ನನ್ನನ್ನು ಮಾತ್ರ ಅಲ್ಲ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದ್ದೀರಿ. .."

ಹಾಗಿದಲ್ಲಿ ಹಿಂದೆ ಆಕ್ರಮಣ ನಡೆದಿತ್ತು ಮುಸಲ್ಮಾನರಿಂದ ಎಂದು ಒಪ್ಪುತ್ತಿದ್ದೀರ ಅಂತ ಆಯಿತು...

mpneerkaje's picture

<< ಬೇರೆ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಕಾಣಲಿಲ್ಲ ಏಕೆಂದರೆ ಅಂಥ ಘಟನೆಗಳು ಎಲ್ಲೂ ನಡೆದಿಲ್ಲ. >>
http://hinduexistenc...

ಘಟನೆಗಳ ಬಗ್ಗೆ ನಿಮಗೆ ತಿಳಿದಿಲ್ಲದಿರಬಹುದು. ಹಾಗಂತ ಅದು ನಡೆದಿಲ್ಲ ಎಂದು ಹೇಗೆ ಹೇಳುತ್ತೀರಿ?

vikashegde's picture

ಪ್ರವೀಣ,

ಸಂಘದ ಪರಿಚಯ ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ಅದರೊಳಗಿದ್ದು ಕೆಲಸ ಮಾಡಿದವರಿಗೆ ಇದು ಗೊತ್ತಿರುತ್ತದೆ. ತಾನು ಏನೂ ಸಮಾಜಮುಖಿ ಕೆಲಸ ಮಾಡದೇ ಸುಮ್ಮನೇ ಕ್ಲಬ್ ಮೆಂಬರ್ ಶಿಪ್ ತರಹ ಒಂದು ವರ್ಷ ಇದ್ದೆ ಎಂದು ಅಂತ ಕೆಲವರು ಅಂದುಕೊಂಡರೆ ಅದು ಸಂಘದ ತಪ್ಪಲ್ಲ. ಒಂದು ವರ್ಷ ಇರಲಿ ಒಂದೇ ತಿಂಗಳು ಇರಲಿ ಬರೀ ಮಾತಾಡೋರು ಮಾತಾಡ್ತಾನೇ ಇರ್ತಾರೆ, ಕೆಲಸ ಮಾಡೋರು ಮಾಡ್ತಾರೆ. ಪೂರ್ವಗ್ರಹವಿರುವವರ ಜೊತೆ, ತಿಳಿದುಕೊಳ್ಳುವ ಮನಸ್ಸಿಲ್ಲದವರ ಜೊತೆ, ತಮ್ಮ ಮೊಲಕ್ಕೆ ಮೂರೇ ಕಾಲು ಎನ್ನುವವರ ಜೊತೆ ವಾದಕ್ಕಿಳಿದು ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ.

praveena saya's picture

ಧನ್ಯವಾದಗಳು ವಿಕಾಸ್ ಅವರೇ,

ನೀವು ಹೇಳಿರುವ ಮಾತುಗಳು ನಿಜ. ಆದರೆ ಕೆಲವೊಮ್ಮೆ ನಾವು ಉತ್ತರಿಸದಿದ್ದಲ್ಲಿ ಗೊತ್ತಿಲ್ಲದೇ ಸುಮನಿದ್ದಾನೆ ಅಂತ ಅರ್ಥ ಬರಬಾರದು ನೋಡಿ , ಅದಿಕ್ಕೆ ಉತ್ತರಿಸಿದ್ದು . ಮತ್ತೆ ಮಾತು ಮಾತಿಗೂ ದೇಶ ದ ಬಗ್ಗೆ ಬರೆಯುವುದನ್ನೂ ಕೂಡ ಮೂಗು ಮುರಿಯುವವರಿದ್ದಾರೆ. ಆದರೆ ಒಂದು ದೇಶ ಅಂತ ಕಟ್ಟಲು ಹೊರಡುವಾಗ ಸಣ್ಣ ಪುಟ್ಟ ಕಾರಣ ಹಿಡಿದು , ಮುಖ್ಯ ವಾಹಿನಿ ಯ ' ಅಜೆಂಡಾ ' ಮರೆಯುವುದು ತಪ್ಪು. ನಮ್ಮ ಬ್ರಷ್ಟ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸಲಾಗದ ನಾವು ಇಲ್ಲ ಸಲ್ಲದ ಕಾರಣ ಹಿಡಿದು ಸಮಾಜ ದ ಹುಳುಕುಗಳನ್ನು ಎತ್ತಿ ಹಿಡಿದು ಲೇಖನ ಬರೆದು ಚಪ್ಪಾಳೆ ಗಿಟ್ಟಿಸಬಹುದು. ಆದರೆ ಬದಲಾವಣೆ ಯ ನಿಟ್ಟಿನಲ್ಲಿ ಕಳೆದ ೮೫ ವರ್ಷಗಳಿಂದ ಹೊರದ್ಥ ಇರೋದು ನಮ್ಮ ಸಂಘ. ಮೂಗು ಮುರಿದು ಹೀಗಳೆಯುವ ದ್ರಿಷ್ಟಿಕೂನ ಕಂಡಾಗ ಬರೆಯೋಣ ಅನ್ನಿಸ್ತು . ಬರೆಯಲು ಸಾಕಷ್ಟಿದೆ . ಸಂಘ ಒಬ್ಬ ಮನುಷ್ಯನನ್ನು ತಿದ್ದಿ ತೀಡಿ ಸಮಾಜ ಮುಖಿ ಮನುಷ್ಯನನ್ನಗಿಸುತ್ತದೆ ಎಂದು ನನ್ನ ಕಣ್ಣಾರೆ ನೋಡಿದ್ದೇನೆ. ಒಬ್ಬ ಅಮ್ಮ ಮಾಡಬೇಕಾದ ಕೆಲಸ ಮಾಡುವುದು ಸಂಘ ದ ಹೆಗ್ಗಳಿಕೆ . ನನ್ನ ಬರಹ ಪೂರ್ವಗ್ರಹ ಪೀಡಿತ ಅನ್ನಿಸಿದ್ರೂ ಪರವಾಗಿಲ್ಲ. ನಾನು ನಿಶ್ಚಯಿಸಿದ್ದೇನೆ , ಬರೆಯುವುದು ಬರೆಯೋಣ . ಮೂಗು ಮುರಿಯುವ ಕಾಮೆಂಟ್ ಗಳಿಗೆ ನಕ್ಕು ಸುಮ್ಮನಾದರೆ ಆಯಿತು !

ಪ್ರೀತಿ ಇಂದ,

ಪ್ರವೀಣ ಸಾಯ

thesalimath's picture

ಒಂದು ಸಂಘಟನೆಯ ಯೋಗ್ಯತೆ ಏನು ಎಂದು ತಿಳಿಯಲು ಒಂದು ವರ್ಷ ಸಾಕಾಗಲ್ವಾ?
ಒಂದೇ ಒಂದು productive ಕೆಲಸ ನಡೆಯದಿದ್ದ ಮೇಲೆ, ಬರೀ ಭಾಷಣಗಳಿಂದ ತುಂಬಿರುವ ಸಂಘಟನೆಯ ಜೊತೆ ಇರುವುದು ವೇಸ್ಟು!

<<ಬರೀ ಮಾತಾಡೋರು ಮಾತಾಡ್ತಾನೇ ಇರ್ತಾರೆ, ಕೆಲಸ ಮಾಡೋರು ಮಾಡ್ತಾರೆ.>>
ಆರೆಸ್ಸೆಸ್ ನಲ್ಲಿ ಇರೋರಿಗೆ ಸರಿಯಾಗಿ ಹೊಂದುತ್ತದೆ ಈ ಮಾತು. ಮಾತಾಡೋರು ಮಾತಾಡುತಾನೇ ಇರ್ತಾರೆ, ಕೆಲಸ ಮಾಡೋರು ಮಾಡುತಾನೇ ಇರ್ತಾರೆ. :) :) :)

vikashegde's picture

ಅದರಲ್ಲಿ ಒಂದು ವರ್ಷ ಇದ್ದು ಏನೂ ಕೆಲಸ ಮಾಡದೇ ಇಲ್ಲಿ ಬಂದು ಬರೀ ಮಾತಾಡುವವರಿಗೇ ಇನ್ನೂ ಚೆನ್ನಾಗಿ ಹೊಂದುತ್ತದೆ. :) :) :)
ಸಂಘಟನೆ ಅಂದ್ರೆ ಅದರಲ್ಲಿರೋ ಸದಸ್ಯರೇ ಹೊರತು ಬೇರೇನಲ್ಲ. ಯಾರೋ productive ಕೆಲ್ಸ ಮಾಡುತ್ತಾರೆ, ನಾವು ಮಾತಾಡ್ತೇವೆ ಅಂದ್ರೆ ಆಗಲಿಲ್ಲ. ನಾವು ಬರೀ ಮಾತಾಡುವುದು ಬಿಟ್ಟ ಏನು ಕೆಲಸ ಮಾಡಿದ್ದೇವೆ ಅನ್ನೋದು ಮುಖ್ಯ. ಒಬ್ಬ ಮನುಷ್ಯನ ಯೋಗ್ಯತೆ ತಿಳಿಯಲು ಇಷ್ಟು ಸಾಕು!

bhasip's picture

ಪ್ರವೀಣ್,

ಸಂಘದ ಪರಿಚಯ ಚೆನ್ನಾಗಿ ಮಾಡಿಕೊಟ್ಟಿದ್ದೀರಿ. ಸಂಘದಂತೆ ನೀವು ಸಹ, ಟೀಕೆಗಳಿಗೆ ಅನಗತ್ಯ ಉತ್ತರ ನೀಡದೆ, ನಿಮ್ಮ ಲೇಖನಗಳನ್ನು ಮುಂದುವರಿಸಿ. ಅದರ ಮೂಲಕ ಸರಿಯಾದ ಉತ್ತ್ರ ನೀಡಿ.

praveena saya's picture

ಧನ್ಯವಾದಗಳು ಭಾಸ್ಕರ್ ಅವರೇ

prasca's picture

http://www.gosai.com...

http://www.stephen-k...

http://www.archaeolo...

ಇದು ಬಹುಶಃ ಬೆಳಕು ಚೆಲ್ಲಬಹುದು

hariharapurasridhar's picture

ಪ್ರಸನ್ನ,
ಕೊಂಡಿಗಳನ್ನು ಇಣುಕಿದೆ. ನೋಡುವುದು ಬಹಳವಿದೆ. ನಿಮ್ಮಂತವರು ಅದನ್ನು ಏಕೆ ಕನ್ನಡಕ್ಕೆ ಅನುವಾದಿಸಬಾರದು? ಸಮಾಜಕ್ಕೆ ನಾವೆಲ್ಲಾ ಮಾಡಬೇಕಾದ್ದು ಬಹಳವಿದೆ

hariharapurasridhar's picture
2

ಮಿತ್ರರೇ,
ಆರ್.ಎಸ್.ಎಸ್. ಬಗ್ಗೆಯಾಗಲೀ ಅಥವಾ ಬೇರೆಯಾವ ಸಂಘಟನೆಯ ಬಗ್ಗೆ ಯಾಗಲೀ ಕೇವಲ ಹೊರಗಿನಿಂದ ಚರ್ಚೆ ಮಾಡಿದರೆ ಅದು ಸಾಲದಾಗುತ್ತದೆ.ಆರ್.ಎಸ್.ಎಸ್. ಬಗ್ಗೆ ಚರ್ಚೆ ಏನೇ ಇರಲಿ. ಪ್ರಪಂಚಕ್ಕೆ ಆರ್.ಎಸ್.ಎಸ್ ಗೊತ್ತಾಗಿಬಿಟ್ಟಿದೆ. ರಾಜಕೀಯದ ವಿಚಾರ ತೆಗೆದುಕೊಂಡರೂ ಸಹ ಅದರದೇ ಒಂದು ಮುಖವಾಗಿ ರೂಪಿತಗೊಂಡ ಭಾರತೀಯ ಜನಸಂಘದ ಕಾಲದಿಂದ ಅದನ್ನು ನೋಡುತ್ತಾ ಬಂದರೂ ಒಬ್ಬ ಪಾರ್ಲಿಮೆಂಟ್ ಸದಸ್ಯನಿಂದ ೧೮ ಕ್ಕೆ ಬರುವ ಹೊತ್ತಿಗೆ ಸಾಕಷ್ಟು ವರ್ಷಗಳಾಗಿತ್ತು. ಈಗ ಬಿಡಿ ಬಿ.ಜೆ.ಪಿ ಎಂದರೆ ಮತ್ತೊಂದು ಕಾಂಗ್ರೆಸ್ ನಂತೆ ಬೆಳದದ್ದಾಗಿದೆ. ರಾಜಕೀಯ ನನಗೆ ಅಲರ್ಜಿ. ಆ ಮಾತು ಬೇಡ. ಆದರೆ ೪೦ ವರ್ಷಗಳಿಂದ ಸಂಘದಲ್ಲಿರುವವನು ನಾನು. ಈಗಲೂ. ಒಂದು ಸಂಘಟನೆ ಬೆಳೆದಂತೆ ಅದರ ಹಲವು ಮುಖಗಳೂ ಕೂಡ ಬೆಳೆಯುತ್ತಾ ಹೋಗುತ್ತವೆ. ಜನರಿಗೆ ಯಾವುದೋ ಒಂದು ಮುಖ[ಸುದ್ಧಿಯಲ್ಲಿರುವ] ಕಾಣುತ್ತದೆ. ಆದರೆ ನನ್ನಂತವನಿಗೆ ಅದರಲ್ಲಿರುವ ಪ್ರಾಮಾಣಿಕ ದೇಶ ಭಕ್ತರು ಕಾಣುತ್ತಾರೆ. ತಮ್ಮ ಜೀವವನ್ನೇ ಸಮರ್ಪಣೆ ಮಾಡಿರುವ ಸಾವಿರಾರು ಪ್ರಚಾರಕರು ಸಂಘದಲ್ಲಿದ್ದಾರೆ. ಅವರೆಲ್ಲಾ ಸುದ್ಧಿಯಾಗುವುದಿಲ್ಲ. ಆದರೆ ರಾಜಕಾರಣದಲ್ಲಿ ತಲೆ ಎತ್ತಿದ ಕೆಲವರು, ಹಿಂದು ಹೆಸರಿನಲ್ಲಿ ಆಕ್ರೋಶಭರಿತರಾಗಿರುವ ಕೆಲವರು ಸುದ್ಧಿಯಾಗುತ್ತಾರೆ.ಸಂಘದ ಸಮಾಜಸೇವೆಯ ಮುಖವನ್ನು ನೋಡಬೇಕಾದರೆ ಒಳಹೊಕ್ಕಿ ನೋಡಬೇಕು.
ಹಿಂದು ಹೆಸರಿನಲ್ಲೂ ಅಷ್ಟೆ. ಈ ದೇಶದಲ್ಲಿರುವ, ಈ ದೇಶವನ್ನು ಪ್ರೀತಿಸುವ ಎಲ್ಲರೂ[ಹಿಂದು, ಮುಸ್ಲಿಮ್,ಕ್ರೈಸ್ತ, ಜೈನ...ಇತ್ಯಾದಿ]ಹಿಂದುಗಳು. ಅಂದರೆ ಅದು ರಾಷ್ಟ್ರೀಯತೆಯ ಸಂಕೇತ.ಆದರೆ ಅದನ್ನು ಮತೀಯ ಗೊಳಿಸಿದಾಗ ಗೊಂದಲಕ್ಕೆ ಕಾರಣವಾಗುತ್ತದೆ. ಪ್ರಾಮಾಣಿಕವಾಗಿ ಹೇಳುವೆ.ನನಗೆ ಇರುವ ಆಪ್ತರಲ್ಲಿ ಮುಸಲ್ಮಾನರು ಬಹಳ ಇದ್ದಾರೆ. ಯಾರೂ ನನ್ನನ್ನು ಕೋಮುವಾದಿಯಾಗಿ ನೋಡಿಲ್ಲ, ಬದಲಿಗೆ ಉತ್ತಮ ಸ್ನೇಹಿತನಂತೆ ಕಂಡುಕೊಂಡಿದ್ದಾರೆ.

praveena saya's picture

ಹೌದು ಶ್ರೀಧರ್ ,
ನೀವಂದಂತೆ , ನನಗೂ ಎಸ್ಟೋ ಮುಸಲ್ಮಾನ ಸ್ನೇಹಿತರಿದ್ದಾರೆ. ಆದರೆ ಯಾರೂ ನನ್ನನ್ನು ಕೋಮು ಅಂದಿಲ್ಲ !. ಸಂಘದ ತ್ಯಾಗ ಬಲಿದಾನ ಕಥೆಗಳು ಎಲ್ಲೂ ಹೇಳಿ ತಿರುಗಿಲ್ಲ ಯಾರೂ . ಸಾವಿರಾರು ಜನರ ಜೀವನ ದ ಬೆವರು ಇದೆ . ದೇಶ ದೇಶ ಅಂತ ಹೇಳುವವರನ್ನೂ ಈಗ ಜನ ಭಾವನಾತ್ಮಕ ಅನ್ನತೊಡಗಿದ್ದಾರೆ !

ಒಳ್ಳೆಯ ರಿಪ್ಲೈ ,

ಪ್ರವೀಣ ಸಾಯ

prasca's picture

ಶ್ರೀಧರ್ ಸಾರ್,
ಕೆಲವು ವರ್ಷಗಳ ಹಿಂದೆ ಪ್ಲೇಗ್ ಮರುಕಳಿಸಿದ್ದಾಗ ಒಂದು ಟೀವಿಯಲ್ಲಿ ಚರ್ಚೆ ನಡೀತಿತ್ತು. ಅಲ್ಲಿನ ಆರೆಸ್ಸೆಸ್ ಪ್ರಮುಖರೊಬ್ಬರು ಅದರಲ್ಲಿ ಭಾಗವಹಿಸಿದ್ದರು ಕಾರಣ ಆ ನಗರದಲ್ಲಿ ಆರೆಸ್ಸೆಸ್ ಸ್ವಯಂ ಸೇವಕರುಗಳು ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಟೀವಿ ನಿರೂಪಕಿ ಮೇಲಿಂದ ಮೇಲೆ ಆ ಪ್ರಮುಖನನ್ನು ಪೇಚಿಗೆ ಸಿಲುಕಿಸುವ ಪ್ರಯತ್ನದಲ್ಲಿ ಸಫಲಳಾಗುತ್ತಿರಲಿಲ್ಲ. ಕೆಲವು ತೊಂದರೆಗೊಳಗಾದ ನಿವಾಸಿಗಳು ದೂರವಾಣಿ ಮೂಲಕ ಸಮಸ್ಯೆಗಳನ್ನು ನಿವೇದಿಸಿಕೊಳ್ಳುತ್ತಿದ್ದರು ಒಬ್ಬ ವ್ಯಕ್ತಿಯಂತೂ ಕೂಗಾಡ ತೊಡಗಿದ ಆರೆಸೆಸ್ ನವರ ಮೇಲೆ ಆತನ ದೂರು ಅವರ ಸ್ವಯಂ ಸೇವಕರು ಅವರ ಬೀದಿಯನ್ನು ಸ್ವಚ್ಚಗೊಳಿಸುತ್ತಿಲ್ಲ ಎಂಬುದು ಅವನ ಅಹವಾಲು. ಸಹನೆ ಕಳೆದು ಕೊಂಡ ಆ ಪ್ರಮುಖರು ಹೇಳಿದ ಉತ್ತರ. ಸ್ವಾಮಿ ನೀವು ದೂರು ಕೊಡಬೇಕಾಗಿರುವುದು ಅಲ್ಲಿನ ಪುರಸಭೆಗೆ ನಾವು ಮಾಡುತ್ತಿರುವುದು ಸ್ವಯಂ ಸೇವೆ, ನೀವು ತೆರಿಗೆ ಕಟ್ಟುವುದು ಆರೆಸೆಸ್ಗಲ್ಲ ಎಂದೂ ಆದರೂ ನಾವು ಇರುವ ಸ್ವಯಂ ಸೇವಕರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದೇವೆಂದು ಆಗಲೇ ಆ ನಿರೂಪಕಿ ತೆಪ್ಪಗಾದದ್ದು.

ಹಾಂ, ನಾನು ಆರೆಸ್ಸಿಸಿಗನಲ್ಲ ನನಗೆ ಆರೆಸೆಸ್ ಬಗ್ಗೆ ತಿಳಿದು ಬಂದದ್ದೇ ೯೦ ರಲ್ಲಿ ಬೆಂಗಳೂರಿಗೆ ಬಂದ ಮೇಲೆ.
ಚೋರ ನಿಂದಿಸಿ ಶಶಿಯ ಬಯ್ದೊಡೆ, ಕ್ಷೀರವನು ಕ್ಷಯ ರೋಗಿ ಹಳಿದೊಡೆ ವಾರಣಾಸಿಯ ಹೆಳವ ನಿಂದಿಸಿ ನಕ್ಕೊಡೇನಹುದು ಅಂತ ಕುಮಾರವ್ಯಾಸ ಭಾರತದಲ್ಲಿ ಸಾಲುಗಳಿವೆ, ಹಾಗನ್ಕೊಂಡು ಸುಮ್ಮನಾಗಿಬಿಡಿ. ಸೂರ್ಯಂಗೆ ಉಗಿಯುವವರಿಗೆ ಏಕೆ ಬುದ್ದಿಯ ಮಾತು.

prasca's picture

ಶ್ರೀಧರ್ ಸಾರ್, ಆ ಭಾಷೆ ನನಗೂ ಕೂಡ ಕಬ್ಬಿಣದ ಕಡಲೆ. ಬಲ್ಲವರಿಂದ ಆ ಕೆಲಸವಾದರೆ ನಾನೂ ಋಣಿ.