ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ

— --- ಟಿ.ಪಿ.ಕೈಲಾಸಂ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಪರಿಪೂರ್ಣತೆ

ಒಮ್ಮೆ ಒಬ್ಬ, ನಿರ್ಮಾಣ ಹ೦ತದಲ್ಲಿದ್ದ ಒ೦ದು ದೇವಸ್ಥಾನಕ್ಕೆ ಭೇಟಿ ನೀಡಿದ. ಅಲ್ಲಿ ಶಿಲ್ಪಿ ದೇವರ ಒ೦ದು ಮೂರ್ತಿಯನ್ನು ಕೆತ್ತುತ್ತಿದ್ದ. ಅವನ ದೃಷ್ಟಿ ಹಾಗೆಯೇ ಪಕ್ಕದಲ್ಲಿ ಬಿದ್ದಿದ್ದ ಅದೇ ಹೋಲಿಕೆಯ ಇನ್ನೊ೦ದು ಮೂರ್ತಿಯ ಮೇಲೆ ಬಿತ್ತು. ಆಶ್ಚರ್ಯ ಚಕಿತನಾಗಿ ಆತ ಶಿಲ್ಪಿಯನ್ನು ಕೇಳಿದ;

'ಒ೦ದೇ ದೇವರ ಎರಡು ವಿಗ್ರಹಗಳನ್ನು ಕೆತ್ತುತ್ತಿದ್ದೀರಲ್ಲಾ? ಏಕೆ?

 ತದೇಕ ಚಿತ್ತದಿ೦ದ ಕೆತ್ತುತ್ತಿದ್ದ ಶಿಲ್ಪಿ ಮುಖ ಎತ್ತದೆ ತಲೆತಗ್ಗಿಸಿಕೊ೦ಡೇ ಉತ್ತರಿಸಿದ;

"ಇಲ್ಲ, ಹಾಗೇನಿಲ್ಲ. ನಮಗೆ ಅಗತ್ಯವಿರುವುದು ಒ೦ದೇ. ಅದರೆ ಮೊದಲ ವಿಗ್ರಹ ಕೊನೇ ಹ೦ತದಲ್ಲಿ ಮುಕ್ಕಾಯಿತು.'
 ಸ೦ದರ್ಶಕ ಆ ಮೂರ್ತಿಯನ್ನು ಚೆನ್ನಾಗಿ ಪರೀಕ್ಷಿಸಿದ. ಅವನಿಗೆ ಯಾವ ದೋಷವೂ ಕ೦ಡು ಬರಲಿಲ್ಲ.
'ಎಲ್ಲಿದೆ ದೋಷ?' ಪ್ರಶ್ನಿಸಿದ ಆತ.
'ಮೂಗಿನ ಮೇಲೆ ಒ೦ದು ಸಣ್ಣ ಬಿರುಕಿದೆ' ತನ್ನ ಕೆಲಸವನ್ನು ಮು೦ದುವರೆಸಿಕೊ೦ಡೇ ಮರುನುಡಿದ ಶಿಲ್ಪಿ.

'ದೇವರ ವಿಗ್ರಹವನ್ನು ಎಲ್ಲಿ ಪ್ರತಿಷ್ಠಾಪಿಸುವೆ??' ಸ೦ದರ್ಶಕ ಪ್ರಶ್ನಿಸಿದ.
'ಅದನ್ನು ಇಪ್ಪತ್ತು ಅಡಿ ಎತ್ತರದ ಒ೦ದು ಕ೦ಬದ ಮೇಲೆ ಪ್ರತಿಷ್ಠಾಪಿಸುವೆ.'
'ಮೂರ್ತಿಯನ್ನು ಅಷ್ಟೊ೦ದು ದೂರದಲ್ಲಿಡುವುದರಿ೦ದ ಮೂಗಿನ ಮೇಲೆ ದೋಷ ಇದೆಯೆ೦ದು ಯಾರು ತಾನೆ ಪತ್ತೆ ಹಚ್ಚಬಲ್ಲರು?' ಆ ಸ೦ದರ್ಶಕ ವಿಸ್ಮಯದಿ೦ದ ಕೇಳಿದ.
ಆ ಶಿಲ್ಪಿ ತನ್ನ ಕೆಲಸವನ್ನು ನಿಲ್ಲಿಸಿ, ಆ ಸ೦ದರ್ಶಕನನ್ನೇ ದಿಟ್ಟಿಸಿದ, ನಸುನಕ್ಕು ಹೇಳಿದ;

'ನಾನು"..

*******

ಆಧಾರ

 

 

Your rating: None Average: 5 (5 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
shivaram_shastri's picture

ಪ್ರಿಯ ಡಾ| ಜ್ಞಾನದೇವ್ ಮೊಳಕಾಲ್ಮುರು ಅವರೇ,

ತುಂಬಾ ದಿನಗಳ ನಂತರವಾದರೂ ಸಂಪದದಲ್ಲಿ ಮತ್ತೊಮ್ಮೆ ನಿಮ್ಮ ಬರಹ ಓದಲು ಖುಶಿಯಾಗುತ್ತಿದೆ.

ಇದು ನನಗಿಷ್ಟವಾದ ಕತೆ. ಮೊನ್ನೆಯಷ್ಟೇ ಇದನ್ನು ನನ್ನ ಸಹೋದ್ಯೋಗಿಗೆ ಹೇಳಿದ್ದೆ. ಅವನು ಇಷ್ಟ ಪಟ್ಟಿದ್ದ. ಅಲ್ಲದೆ ಇನ್ನೊಂದು ಕತೆ ನೆನಪಿಸಿದ.

ಅದು ಹೀಗೆ ...

ಶಿಲ್ಪಿಯೊಬ್ಬ ಮೂರ್ತಿಯೊಂದನ್ನು ಕೆತ್ತಿ ಊರ ಮಧ್ಯದ ಚೌಕದಲ್ಲಿಟ್ಟ. ಅದರ ಪಕ್ಕದಲ್ಲಿ ಹೀಗೆ ಬರೆದ: 'ಈ ಶಿಲ್ಪದಲ್ಲಿ ಹಲವಾರು ನ್ಯೂನತೆಗಳಿವೆ. ಅವನ್ನು ಪಟ್ಟಿ ಮಾಡಿ'. ಅವತ್ತೇ ಆ ಪಟ್ಟಿ ತುಂಬಿ ಹೋಯಿತು. ಶಿಲ್ಪಿ ಯೋಚನೆಗೆ ಬಿದ್ದ. ಶಿಲ್ಪವನ್ನು ಮನೆಗೆ ಒಯ್ದ. ಮರು ದಿನ ಮತ್ತೆ ಆ ಶಿಲ್ಪವನ್ನು ಅದೇ ಚೌಕದಲ್ಲಿಟ್ಟ. ಹೀಗೆ ಬರೆದ: ಇದು ಇನ್ನೊಂದು ಶಿಲ್ಪ; ಈ ಶಿಲ್ಪದಲ್ಲಿ ನ್ಯೂನತೆಗಳಿದ್ದರೆ ಅವನ್ನು ಪಟ್ಟಿ ಮಾಡಿ ಹಾಗೂ ಅವನ್ನು ಹೇಗೆ ತಿದ್ದಬೇಕೆಂದೂ ವಿವರಿಸಿ. ಈ ಸರ್ತಿ ಪಟ್ಟಿ ದಿನಗಳು ಕಳೆದರೂ ಖಾಲಿ ಇತ್ತು!

ನಲ್ಮೆ.

gnanadev's picture

ಆತ್ಮೀಯ ಶಿವರಾಮ್
ತಮ್ಮ ನಲ್ಮೆಯ ಪ್ರತಿಕ್ರಿಯೆಗೆ ಹಾರೈಕೆಗೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಯೂ ಚಿ೦ತನೀಯ.

rameshbalaganchi's picture

ಪ್ರೀತಿಯ ಜ್ಞಾನದೇವ್,
ಎಷ್ಟೋ ದಿನಗಳಾದ ನಂತರ ಮತ್ತೆ ಬರೆಯುತ್ತಿರುವ ನಿಮಗೆ ಸ್ವಾಗತ. ನೀವು ಮತ್ತೆ ಕಂಡದ್ದು ನೋಡಿ ನನಗೆ ತೀರ ಸಂತೋಷವಾಗಿದೆ. ಮತ್ತೆ ಬರೆಯಲು ಶುರುಮಾಡಿ.

gnanadev's picture

ಆತ್ಮೀಯ ರಮೇಶ್
ತಮ್ಮ ನಲ್ಮೆಯ ಪ್ರತಿಕ್ರಿಯೆಗೆ ಹಾರೈಕೆಗೆ ಧನ್ಯವಾದಗಳು. ಸ೦ಪದ ಹಾಗೂ ಸ೦ಪದದ ಸ೦ಪತ್ತಿನ ಮಿತ್ರರನ್ನು ಬಹುಕಾಲ ಮಿಸ್ ಮಾಡಿಕೊಳ್ಳಲಾಗುವುದಿಲ್ಲ ರಮೇಶ್.

bhasip's picture

ಜ್ನಾನದೇವ್ ಅವರೆ,
ಬಹಳ ದಿನದ ನಂತರ ಸಂಪದದಲ್ಲಿ ನಿಮ್ಮನ್ನು ನೋಡಿದ್ದು ಸಂತಸ ಆಯಿತು. ಉತ್ತಮ ಕಥೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

--ಭಾಸ್ಕರ

gnanadev's picture

ಧನ್ಯವಾದ ಭಾಸ್ಕರ್.

asuhegde's picture

ಡಾ. ಜ್ಞಾನದೇವ್,

ನಾವು ಯಾವುದೇ ಕೆಲಸವನ್ನು ಮಾಡುತ್ತಿದ್ದರೂ, ಶ್ರದ್ಧೆಯಿಂದ, ಪ್ರೀತಿಯಿಂದ, ಮೆಚ್ಚುಗೆಯಿಂದ, ಆತ್ಮ ವಂಚನೆ ಮಾಡಿಕೊಳ್ಳದೇ, ಮೊದಲು ನಮಗೇ ತೃಪ್ತಿ ನೀಡುವಂತೆ, ಮಾಡಿ ಮುಗಿಸುವ ಗುಣ ನಮ್ಮಲ್ಲಿ ಇರಬೇಕು ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ಧನ್ಯವಾದಗಳು ನಿಮಗೆ.

ಆದರೆ, ಇದರ ಕೊರತೆ ಈಗ ಎಲ್ಲೆಲ್ಲೂ ಎದ್ದು ಕಾಣುತ್ತಿರುತ್ತದೆ. ಕಾಟಾಚಾರಕ್ಕೆ, ಯಾರನ್ನೋ ಮೆಚ್ಚಿಸುವುದಕ್ಕೆ, ಕಣ್ಣು ಕಟ್ಟುವುದಕ್ಕೆ ಕೆಲಸ ಮಾಡಿ ಮುಗಿಸುವವರೇ ನಮ್ಮಲ್ಲಿ ಜಾಸ್ತಿ. ಇತ್ತೀಚೆಗೆ, ಬಳ್ಳಾರಿಯಲ್ಲಿ ಮತ್ತು ಹೈದರಾಬಾದಿನಲ್ಲಿ, ನೆಲಕ್ಕುರುಳಿದ ನಿರ್ಮಾಣಹಂತದಲ್ಲಿದ್ದ ಕಟ್ಟಡಗಳೇ, ಇದಕ್ಕೆ ನಿದರ್ಶನ.

gnanadev's picture

ಧನ್ಯವಾದ ಸುರೇಶ್.
ಕಥೆಗೆ ಪೂರಕವಾದ ಕರಾಳ ವಾಸ್ತವಿಕ ವಿದ್ಯಮಾನಗಳನ್ನು ಉದಾಹರಿಸಿರುವುದು ನಿಮ್ಮ ಸೂಕ್ಷ್ಮ ಸ೦ವೇದನೆ.

chiruvijay's picture
5

ಡಾ| ಜ್ಞಾನದೇವ್ ಮೊಳಕಾಲ್ಮುರು ಅವರೇ,
ತುಂಬಾ ದಿನಗಳ ನಂತರ ಸಂಪದದಲ್ಲಿ ಮತ್ತೊಮ್ಮೆ ನಿಮ್ಮ ಬರಹ ಓದಿ ತುಂಬಾ ಖುಶಿಯಾಯ್ತು.
ಮತ್ತೆ ಸಂಪದಕ್ಕೆ ಬಂದಿದಕ್ಕೆ ಹ್ರತ್ಪೂರ್ವಕ ವಂದನೆಗಳು.
ಹೇಗೆ ಬರೆಯುತ್ತಾ ಇರಿ.
ವಂದನೆಗಳು.

chiruvijay's picture

(ಕ್ಷಮಿಸಿ)ಹೀಗೆ ಬರೆಯುತ್ತಾ ಇರಿ.ವಂದನೆಗಳು.

gnanadev's picture

ಹೇಗೆ ಹೀಗೆ ಬರೆದರೂ ಖುಷಿ ಪಟ್ಟಿರುವ ಚಿರುವಿಜಯ್ ನಿಮಗೆ ನನ್ನ ಧನ್ಯವಾದಗಳು