ಎಲ್ಲಿ ಮಂಥನ ನಡೆಯುವುದೋ ಅಲ್ಲಿ ಉಚ್ಚ ಮಟ್ಟದ ಸತ್ಯ ಕೈಗೂಡದಿದ್ದರೂ ಕೆಳಮಟ್ಟದ ಸತ್ಯ ಕೈಗೆ ಹತ್ತುವುದೇ ಹೊರತು ಅಸತ್ಯ ಯಾವಾಗಲೂ ಕೈಗೆ ಬರದು.

— ವಿನೋಬಾ ಭಾವೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??


 'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!? 


ಅಂತ ಗಡಿ ನಾಡ ಕನ್ನಡ ದ ಬಗ್ಗೆ  ರಾಕೇಶ್ ಶೆಟ್ಟಿ ಬರೆದ ಲೇಖನ  ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ ಹಿಂದೆ ಹಿಂದೆ ಓಡತೊಡಗಿದೆ .

<!-- /#content-header -->

ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕ ಕೇರಳ ಗಡಿ ಭಾಗ ದಲ್ಲಿ . ಹೌದು ನಮ್ಮ ಊರಲ್ಲಿ ಇನ್ನು ಕನ್ನಡವೇ ಜೀವಂತ !

೧೯೯೦ ರ ಸಮಯ ನಾನಾಗ ೫ ರ ಪೋರ . ಇನ್ನು ಚಡ್ಡಿ ಯ ದಾರವನ್ನು ಕಯ್ಯಲ್ಲಿ ಹಿಡಿದು ಅಮ್ಮಾ ಅಂತ ಓಡಾಡುವ ಪ್ರಾಯ. ನಮ್ಮಪ್ಪ ನನ್ನನ್ನು ಕರೆದೊಯ್ದು ನಮ್ಮ ಮನೆ ಪಕ್ಕದಲ್ಲಿದ್ದ ಕನ್ನಡ ಶಾಲೆಗೆ ಸೇರಿಸಿದರು. ಆಂಗ್ಲ ಮಾಧ್ಯಮದ ಹಾವಳಿ ಇಲ್ಲದ ಒಂದು ಪ್ರಶಾಂತ ಊರು ನಮ್ಮದ್ದು . ಆದರೆ ಆ ದಿನ , ಆ ಶಾಲೆಗೆ ಓದಲು ಅಂತ ಸೇರಿ ೧೦  ವರ್ಷಗಳ ನಂತರ ಕರ್ನಾಟಕದಲ್ಲಿ ಓದು ಮುಂದುವರಿಸಿ, ಮುಂದೆ ೨ ವರ್ಷಗಳ ನಂತರ  ೨೦೦೨ ರಲ್ಲಿ ಬೆಂಗಳೂರು ನಗರದಲ್ಲಿ ಕೂತಿರುವ ವಿದ್ಯಾಧಿಕಾರಿಯೋಬ್ಬರು ನನ್ನ ಪಕ್ಕ ಕರೆದು " ನೋಡು ಮರಿ ನೀನು ಕರ್ನಾಟಕ ದವನಲ್ಲ  ! ಹಾಗಾಗಿ ಕನ್ನಡ ಪರೀಕ್ಷೆ ಬರಿ ! ಪಾಸು ಮಾಡು ! ಮಾಡಿದ್ರೆ ಇಲ್ಲಿ ಕಲಿಬೋದು ನೀನು !! "  ಅಂತ ಹೇಳುತ್ತಾರೆ ಅಂತ ಊಹೆ ಕೂಡ ಇರಲಿಲ್ಲ ನನ್ನ ತಲೆಯಲ್ಲಿ !!!

 ಹೌದು......

 

 ನಾನೊಬ್ಬ ಗಡಿನಾಡ ಕನ್ನಡಿಗ . ೧೦ ನೆ ತರಗತಿಯವರೆಗೆ ಕನ್ನಡ ಮಾಧ್ಯಮದ ಒಂದು ಹಳ್ಳಿ ಶಾಲೆಯಲ್ಲಿ ಓದಿದವ ನಾನು. ನಮ್ಮೊರ ಜನಸಂಖ್ಯೆ ೫೦೦ ದಾಟಲ್ಲ! ನನಿಗೆ ಓದೋಕೆ ಕರ್ನಾಟಕದಲ್ಲಿ ಬಂದಾಗ , ಕನ್ನಡ ಅ , ಆ , ಇ, ಈ ಪರೀಕ್ಷೆ ಬರೆದು ' ಜನರಲ್ ಮೆರಿಟ್ ' ಸೀಟ್ ಲ್ಲಿ ಓದಿದವ . ನೆನಪಿಡಿ ಅಲ್ಲಿ ಕನ್ನಡ ಬಾರದ ಎಸ್ಟೊ ಮಕ್ಕಳು ಅದೇ ' ಜನರಲ್ ಮೆರಿಟ್ ' ನನ್ನ ಕಣ್ಣೆದುರೇ ಪಡೆದಿದ್ದಾರೆ. ನಾನು ಪೂರ್ಣ ಕನ್ನಡಿಗ . ನನಿಗೆ ಕನ್ನಡ quota  ಹಾಗು ಗ್ರಾಮೀಣ  quota  ಎರಡರಲ್ಲೂ ಮುಂಚೂಣಿಯ ಅರ್ಹತೆ ಇತ್ತು ನನ್ನನ್ನು ಕನ್ನಡಿಗ ಅಂತ ಪರಿಗನಿಸಿದ್ದರೆ !!( ಹಾಗೆ ನೆ ನಾನು ಕರ್ನಾಟಕದಲ್ಲಿ ಹತ್ತನೇ ತನಕ ಕಲಿಯಲ್ಲ ಅಂತ ಕೇರಳ ಕನ್ನಡ ಮಾಧ್ಯಮದಲ್ಲಿ ಓದಿದವನಲ್ಲ ! ಊರಲ್ಲಿ ಬೇರೆ ಶಾಲೆಗಲಿರಲಿಲ್ಲ ಅಸ್ತೆ !)    ಅದೇ ಪರೀಕ್ಷೆಯಲ್ಲಿ ಬೇರೆ ಬೇರೆ quota ಹಿಡಿದು ಒಲಾಡಿದ ಹುಡುಗರನ್ನು ನೋಡಿ ಸಣ್ಣಕ್ಕೆ ಬೇಜಾರು ಮಾಡಿಕೊಂಡವನು ನಾನು . ಆದರೆ ನಾನು ಅದೇ ಗ್ರಾಮ , ಅದೇ ಕನ್ನಡ ಶಾಲೆಗಳಲ್ಲಿ ( ನೆನಪಿಡಿ ! ಕೇರಳ ಕನ್ನಡ ಮಾಧ್ಯಮದ ಪಾಠಗಳು ಹಾಗು ಕೇಂದ್ರೀಯ ವಿದ್ಯಾಲಯ ದ ಪಾಠ ಗಳು ತುಮ್ಮ್ಬ ಸಾಮ್ಯತೆ ಇವೆ ! ) ಓದಿ ಒಳ್ಳೆಯ ಅಂಕಗಳನ್ನು ಗಳಿಸಿ , ಅನುಕಂಪ ದ ಯಾವುದೇ quota  ಇಲ್ಲದೆ ನೆ ಓದಿದವನು . ಆದರೆ ಎಲ್ಲರು ಹಾಗಲ್ಲ  ಅಲ್ಲವ . ನನ್ನ ಮಿತ್ರರೆಲ್ಲರೂ ಕೂತು ಬೈದಿದ್ದು ನಿಜ .

 

<<ಗಡಿನಾಡಿನಲ್ಲಿರುವ ಕಾರಣ ಕೇರಳ ಸರ್ಕಾರ ಅವರಿಗೆ ಅನೇಕ ಮೀಸಲಾತಿಯೂ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಜೊತೆಗೆ ಕಾಸರಗೋಡಿನವರ್‍ನು ಕನ್ನಡಿಗರು ಎಂದೇ ಕರ್ನಾಟಕದವರು ಒಪ್ಪುವುದರಿಂದ ಕರ್ನಾಕದಲ್ಲೂ ಅವರಿಗೆ ಸವಲತ್ತುಗಳಿವೆ. >> 
ಅಂತ ರಾಕೇಶ್ ಅವರ ಲೇಖನ ದ ಕೆಳಗೆ  ಮಿತ್ರ ಮಹಾಶಯರೊಬ್ಬರು ಬರೆದ ಕಾಮೆಂಟ್ ಓದಿದ ಮೇಲೆ , ಮನಸ್ಸು ಹೇಳಿತು ನನ್ನ ಹತ್ರ

 

ಪ್ರವೀಣ , ನೀನೂ ಕೇಳಪ್ಪ ಅವ್ರ ಹತ್ರ ಯಾವ ಸವಲತ್ತು ಇದೆ ಅಲ್ಲಿ ಹುಟ್ಟಿ ಬೆಳೆದವರಿಗೆ ? 

 

ಒಂದು ಮಾತು ನಿಜ , ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಕೊಡುವುದು ಮಾತ್ರ ಒಳ್ಳೆಯ ಸವಲತ್ತು ! ಆದರೆ ಅದೇ ಅಲ್ಲಿರುವ ಕನ್ನಡಿಗರಿಗೆ ಕುತ್ತಾಗಿದೆ ಈಗ ! ಅಲ್ಲಿ ಕನ್ನಡದಲ್ಲಿ ಓದಿದ ಮಕ್ಕಳು ಅಲ್ಲಿನ ಮಲಯಾಳೀ ಜನರಿಗೆ ತಾತ್ಸಾರ , ಹಾಗೇನೆ ಅವರು 'ನಮ್ಮವರಲ್ಲ ' ಅನ್ನುವ ರಾಜಕೀಯ 'ಅಧಿಕಾರದ್ದು' . ಆ ಕಡೆ ಅಲ್ಲೂ ಇಲ್ಲ , ಇಲ್ಲೂ ಕಷ್ಟ ಅನ್ನುವ ಜೀವನ ಅಲ್ಲಿಯ ಕನ್ನಡಿಗರದ್ದು ಈಗ . ಪರೀಕ್ಷೆಯ ಫಲಿತಾಂಶ ಅಗತ್ಯಕ್ಕಿಂತ ಜಾಸ್ತಿ ನಿಧಾನಿಸುತ್ತಾರೆ ( ಸ್ವಯಂ ಅನುಭವ ! ) , ಇಲ್ಲೇ ಓದಲಿ ಕಳ್ಳ ಭಡವ ಅಂತ ! ಅದೇ ಲೇಟ್ ಅದಾಗ್ಯೂ ಓಡಿ ಬರುವ ನನ್ನತಹ ಕನ್ನಡ ದ ಮಣ್ಣಿನ ಕಂಪು ಇರುವವರಿಗೆ ' ಲೇಟ್ ಆಯ್ತಪ್ಪ ' ಬಸ್ ಹೊರಟಿದೆ , ಮುಂದಿನ ವರ್ಷ ಪ್ರಯತ್ನಿಸಿ ಅಂತ ಹೇಳಿದ್ದು ಪುತ್ತೂರು PU College  ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲರು ! 

ಅಂದ ಹಾಗೆ ನನ್ನ ಹತ್ತನೇ ತರಗತಿ ಅನ್ಕಗಳಿದ್ದದ್ದು ಬರೇ ೯೩  % ! ಅದೋ  ಕೇರಳ ಕನ್ನಡ ಮಾಧ್ಯಮದಲ್ಲಿ !

ಒಹ್ ... ನಾನು ಲೇಟ್ ಆಗಿದ್ದು ಒಂದು ದಿನ !

 ಹೌದು !

 ಅಸ್ಟೇ ಅಲ್ಲ ! ಈ ಕಾಲೇಜಿನ ಆವರಣ ನನ್ನ ಮನೆ ಇಂದ ಹತ್ತು ಕಿ ಮಿ ಅಷ್ಟೇ !

 ನನ್ನ ಜೊತೆ ಹುಟ್ಟಿ ಬೆಳೆದು ಅಪ್ಪ ಅಮ್ಮ ನ ಹತ್ತಿರ ದುಡ್ಡಿದ್ದು ಕರ್ನಾಟಕದಲ್ಲಿ ಹತ್ತನೇ ತರಗತಿ ಯ ವರೆಗೆ ಓದಿ ೭೦ % ಅಂಕ ತೆಗೆದ ನನ್ನ ದೊಡ್ಡಪ್ಪ ನ ಮಗ ಸುಮ್ಮನೆ ಅಣಕ ನಗು ಬೀರಿದ್ದ , ನಾನು ಕಾಲೇಜಿನ ಅಂಗಣದಿಂದ ಹೊರ ನಡೆಯುವಾಗ !

 ನಿಜ ಹೇಳ್ತೆನೆ ಕೇಳಿ , 
 ಅಲ್ಲಿನ ಸವಲತ್ತು,  ಇಲ್ಲಿನ ಸವಲತ್ತು  ಅನುಭವಿಸಿ ಅಲ್ಲ ಅಲ್ಲಿನ  ' ನಮ್ಮ ಕನ್ನಡ' ದ ಮಕ್ಕಳು ಕನ್ನಡ ದ ಬಗ್ಗೆ ಬೇಸರಗೊಂಡಿದ್ದು !

ಆದರೆ .....

ಇಲ್ಲಿ ಬಂದಾಗ ದೊರೆತ ತಾರತಮ್ಯ ಗಳನ್ನು . ಇಲ್ಲಿ ಆಂಗ್ಲ ಮಾಧ್ಯಮ ದಲ್ಲಿ ಓದಿ , ಅ ಆ ಇ ಈ ಬಾರದ ಹುಡುಗರು " kannada barutte " ಅಂತ english  ಅಲ್ಲಿ ಹೇಳಿದ್ದಕ್ಕೆ ದೊರೆಯುವ ಸಾಲಲ್ಲಿ ಕೂತು ಹೊರಗೆ ಬಂದವ ನಾನು , ಅದೇ  COMMON ENTRANCE TEST 'ಸೆಲ್ ' ನಿಂದ  !  ಒಳಗೆ ಹೋಗುವಾಗ ಸಂಪಿಗೆ ರಸ್ತೆ , ಮಲ್ಲೇಶ್ವರ ನಮ್ಮ ಜನ  ಅಂತ ಎದ್ದು ಬಿದ್ದು ಓಡಿದವನಿಗೆ , ಹೊರ ಬರುವಾಗ ಯಾಕೋ ಕಣ್ಣು ನವೆ ಗಟ್ಟಿತ್ತು. ಹಾಗು ನಿಧಾನಕ್ಕೆ ನಮ್ಮೊರ ಬಸ್ಸು ಹತ್ತುವ ಅಸೆ ಜಾಸ್ತಿ ಆಗಿತ್ತು !   

 ಇದೊಂದು ಉದಾಹರಿಸಿದ್ದಷ್ಟೇ , ಈ ಥರ ಸಾವಿರ ಅನುಭವಗಳಾಗಿವೆ .....

  ನಾನು ಈ ಬಗ್ಗೆ ಜಾಸ್ತಿ ಬೇಸರ ಗೊಳ್ಳುವುದಿಲ್ಲ  !

ನಾನೊಬ್ಬ ದೇಶ ಕಟ್ಟುವ ಗುಂಪಿನವ , ಹಾಗಾಗಿ ಭಾಷೆಯ ಹೆಸರಲ್ಲಿ ಆದ ನೋವನ್ನು ಹೊಟ್ಟೆಗೆ ಹಾಕಿ ಎದ್ದು  ನಿಂತವ  ....

 

  ಒಂದು ದೇಶ ಅಂತ ಕಟ್ಟುವ ಹೊತ್ತಲ್ಲಿ ನನಿಗಾಗುವ ಚಿಕ್ಕಪುಟ್ಟ ನೋವುಗಳನ್ನು ಮರೆಯದಿದ್ದರೆ ನಾನೂ  ಒಬ್ಬ ದೇಶ ಕಟ್ಟುವ ಕನಸು ಕಾಣುವವನ   !

 

ಪ್ರೀತಿ ಇಂದ

 

ಪ್ರವೀಣ ಸಾಯ

 

 

Your rating: None Average: 3.8 (5 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
thesalimath's picture

ನೀವು ಕೋಟ್ ಮಾಡಿದ ವಾಕ್ಯವನ್ನು ಬರೆದವನು ನಾನೇ! ನನ್ನ ಹೆಸರು ಅಲ್ಲೇ ಇದೆ. ಈ ರೀತಿ ಹಿಂಬಾಗಿಲ ಮೂಲಕ ತಿಣುಕುವ ಚಟ ಏಕೋ!
ಯಾರು ಯಾಕೆ ನಿಮಗಾಗಿ ಕೇಳಬೇಕು? ರಾಕೇಶನೇನು ನಿಮ್ಮ ಜೀತದಾಳಾ? ನೀವೇ ಕೇಳಿ. ಅಲ್ಲಿಯೇ ಕೇಳಬಹುದಿತ್ತು(ನಿಮ್ಮ ಕಾಮೆಡಿಗೆ ನಾನು ಜವಾಬ್ದಾರನಲ್ಲ!).

"ಗಡಿನಾಡ ಕನ್ನಡಿಗ" ಕೋಟಾದಡಿ ಅನೇಕ ಸೌಲಭ್ಯಗಳು ಲಭ್ಯವಿವೆ. ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ. ಕೇರಳದಲ್ಲೂ ಅನೇಕ ಸೌಲಭ್ಯಗಳು ಕಾಸರಗೋಡಿನವರಿಗಾಗಿಯೇ ಮೀಸಲಿವೆ. ಇದರ ಬಗ್ಗೆ ಅನೇಕ ಜನ ನನ್ನ ಬಳಿ ಒಪ್ಪಿಕೊಂಡಿದ್ದಾರೆ. ನಾನು ಗಡಿನಾಡಿನವನಲ್ಲವಾದ್ದರಿಂದ ನಾನು ಅಷ್ಟು ಈ ಸೌಲಭ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ. ಹೊರನಾಡ ಕನ್ನಡಿಗರಿಗೂ ಸರ್ಕಾರದಲ್ಲಿ ಅನೇಕ ಸೌಲಭ್ಯಗಳಿವೆ. ನನಗೆ ಈ ವಿಷಯಗಳ ಬಗ್ಗೆ ಹೇಳಿದ ಕಾಸರಗೋಡಿನವರನ್ನೇ ಭೇಟಿ ಮಾಡಿಸುತ್ತೇನೆ. ತಾವು ಅವರನ್ನೂ ವಿಚಾರಿಸಬಹುದು.

ನಿಮ್ಮ ನೋವಿಗೆ ನನ್ನ ಸಂತಾಪವಿದೆ. ನಿಮ್ಮ ಅನುಭವವನ್ನು ನಾನು ಅಲ್ಲಗಳೆಯತ್ತಿಲ್ಲ. ಹಾಗೆಯೆ ಕಾಸರಗೋಡಿನ ಅನೇಕ ಕನ್ನಡಿಗರು ಕರುನಾಡಲ್ಲಿ ಸೇರಲು ಇಷ್ಟಪಡುವುದಿಲ್ಲ ಎಂಬುದೂ ದಿಟ. ಅಲ್ಲದೇ ಇತ್ತೀಚೆಗೆ ಮಲೆಯಾಳಿ ಮಾಧ್ಯಮದಲ್ಲಿ ಓದಿದ ಕಾಸರಗೋಡಿನವರಿಗೆ ಹೆಚ್ಚಿನ ಸೌಲಭ್ಯ ದೊರೆಯುತ್ತಿದೆಯಂತೆ. ಹಾಗಾಗಿ ಅನೇಕ ಕನ್ನಡಿಗರೂ ಮಲೆಯಾಳಿ ಮಾಧ್ಯಮದಲ್ಲಿ ಓದಲು ಇಷ್ಟ ಪಡುತ್ತಿದ್ದಾರೆ.

ಏನಿದೆಯೋ ಅದನ್ನು ಹೇಳಿದ್ದರೆ ಸಾಕಿತ್ತು. ನನ್ನ ಬಗ್ಗೆ ಈ ವ್ಯಂಗ್ಯ,ಕುಹಕಗಳು ಯಾಕೆ?

praveena saya's picture

ಹರ್ಷ ಅವರೇ,

ನನ್ನ ರಿಪ್ಲೈ ಇದ್ದದ್ದು ತಮ್ಮ ಆಯ್ಕೆ ಯಾ ಶಬ್ದಗಳ ಮೇಲಷ್ಟೇ ಹೊರತು ತಮ್ಮ ಮೇಲಲ್ಲ ! ಹೌದು ತಾವು ಬರೆದದ್ದು ಅಂತ ನನಗೂ ಗೊತ್ತು ! ತಾವು ಬರೆದ್ದದ್ದು ಅಂತ ವ್ಯಂಗ್ಯ ಮಾಡುವುದು ವೈಯ್ಯಕ್ತಿಕ ! ನನ್ನದ್ದು ತಮ್ಮ ಶಬ್ದ ದ ಮೇಲಷ್ಟೇ ಹೊರತು ವಯ್ಯಕ್ತಿಕ ಅಲ್ಲ ! ನೀವನ್ದಷ್ಟು ಏನು ಸುಲಭ ಅಲ್ಲ ರೀ ಗಡಿನಾಡ ಬವಣೆಗಳು ! ಹಾಗೇನೆ ಗಡಿನಾಡು ಅನ್ನುವ ಹೆಸರಲ್ಲಿ ಸಾವಿರಾರು ಹೊಸ ಸವಲತ್ತು ಕೊಡುವಷ್ಟು ಒಳ್ಳೆಯ ಸರಕಾರಗಳು ಇನ್ನೂ ಬಂದಿಲ್ಲ ! ತಮ್ಮ ಆ ಮಿತ್ರರ ಹತ್ತರ ಇನ್ನೊಮೆ ಕೂಲಂಕುಶವಾಗಿ ವಿಚಾರಿಸಿ !

<<ನಾನು ಗಡಿನಾಡಿನವನಲ್ಲವಾದ್ದರಿಂದ ನಾನು ಅಷ್ಟು ಈ ಸೌಲಭ್ಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಿಲ್ಲ.

ಮತ್ತೆ ತಾವೇಕೆ ರಿಪ್ಲೈ ಮಾಡೋಕೆ ಹೋಗಿದ್ದು ! ಬಿಟ್ಟು ಬಿಡಿ ! ಒಹ್ ಪ್ರಚಾರದ ಹುಚ್ಚಾ! ಹಾಗಿದ್ರೂ ಪರವಾಗಿಲ್ಲ ! ಆದರೆ ತಾರ್ಕಿಕ ವಾಗಿ ಸರಿಯಾಗಿರಿ! ಹೀಗಲ್ಲ !

<< ರಾಕೇಶನೇನು ನಿಮ್ಮ ಜೀತದಾಳಾ? ನೀವೇ ಕೇಳಿ. ಅಲ್ಲಿಯೇ ಕೇಳಬಹುದಿತ್ತು

ಇದೇನಿದು ವಾಕ್ಯ ಪ್ರಯೋಗ ? ನಾನು ರಾಕೇಶ್ ಅವರ ಲೇಖನ ಓದಿ ನಾನು 'nostalgic' ಆಗಿ ಬರೆಯೋಕೆ ತಮ್ಮ ಅಪ್ಪಣೆ ಬೇಕಾ !!!

<<ನಿಮ್ಮ ನೋವಿಗೆ ನನ್ನ ಸಂತಾಪವಿದೆ. ನಿಮ್ಮ ಅನುಭವವನ್ನು ನಾನು ಅಲ್ಲಗಳೆಯತ್ತಿಲ್ಲ
ನೋ ಥ್ಯಾಂಕ್ಸ್ !!! ನಾನು ಹೇಳಿದ್ದೀನಿ ಆಗ್ಲೇ ! ಈ ಥರ ಅನುಭವ ಇಟ್ಕೊಂಡು regionalism ತ್ಹೊರಿಸುವುದಲ್ಲ ನನ್ನ ಉದ್ದೇಶ! ನಿಮ್ಮ ಸಂತಾಪವನ್ನು ನೀವೇ ಇಟ್ಟುಕೊಳ್ಳಿ !

ನಾನು ಹಿಂಬಾಗಿಲ ಮೂಲಕ ತಿಣುಕುವ ಗೋಜಿಗೆ ಹೋಗಿಲ್ಲ ! ನಿಮ್ಮ ಹೆಸರು ಅಗತ್ಯ ಇರಲಿಲ್ಲ quote ಮಾಡುವಾಗ . ಹಾಗಾಗಿ ಮಾಡಿಲ್ಲ ! ತಾವೇಕೆ ಕುಂಬಳ ಕಾಯಿ ಕಳ್ಳ ನ ಥರ ಹಾರಾದೊಡೋದು !

ಪ್ರವೀಣ ಸಾಯ

Rakesh Shetty's picture

ಪ್ರವೀಣ್,

ಗಡಿ ಸಮಸ್ಯೆಗಳ ಬಗ್ಗೆ ನನಗರಿವಿದ್ದ ವಿಷಯವನ್ನಷ್ಟೇ ಬರೆದಿದ್ದೆ ನಾನು.ಆದರೆ ನಿಮ್ಮ ಅನುಭವದ ಲೇಖನ ಓದಿ ಬೇಸರವಾಯಿತು.ನನ್ನ ಲೇಖನದಲ್ಲಾಗಲಿ ಇಲ್ಲ ಪ್ರತಿಕ್ರಿಯೆಗಳಲ್ಲಾಗಲಿ ನೋವಾಗುವಂತ ಅಂಶಗಳಿದ್ದರೆ ಕ್ಷಮೆಯಿರಲಿ.

ದೇಶ ಕಟ್ಟುವಾಗ ಭಾಷೆಯ ಹಂಗು ಬೇಡ ಅನ್ನೋದೇನೋ ನಿಜ.ಭಾಷೆ ಬಗ್ಗೆ ಮಾತಾಡಿದಾಕ್ಷಣ ದೇಶಕ್ಕೆನು ಆಗೋಲ್ಲ.ಪ್ರಾದೇಶಿಕ ತಾರತಮ್ಯವನ್ನ ಪ್ರಶ್ನಿಸದೆ ದೇಶ ಅಂತ ಮುಂದುವರೆದರೆ ಅದು ಆತ್ಮ ವಂಚನೆಯಲ್ಲದೆ ಬೇರೇನೂ ಅಲ್ಲ. ನಿಮಗಾದ ನೋವಿನ ಬಗ್ಗೆ ದನಿಯೇತ್ತದೆ ದೇಶ ಕಟ್ಟಲು ಹೊರಟರೆ ನಾಳೆ ನಿಮ್ಮ ಹಿಂದೆ ಬರುವ ಎಷ್ಟೋ ಜನರು ನೀವು ಅನುಭವಿಸಿದ ಪಾಡನ್ನೇ ಅನುಭವಿಸಬೇಕಲ್ಲ ಸರ್.ಏನಂತಿರಾ?

ರಾಕೇಶ್ ಶೆಟ್ಟಿ :)
'ಎಲ್ಲರೊಳಗೊಂದಾಗು - ಮಂಕು ತಿಮ್ಮ!!'

praveena saya's picture

ರಾಕೆಶಣ್ಣ ,
ನಿಮ್ಮ ಲೇಖನ ಓದಿ ಮೆಚ್ಚಿ ಬರೆದದ್ದು ! ನೀವು ಕನ್ನಡ ದ ಗಡಿ ಜನರ ಬಗ್ಗೆ ತುಂಬಾ ಒಳ್ಳೆ ಯಾ concern ತೋರಿ ಬರೆದಿದ್ದೇರ. ಇನ್ನು ನೋವಾಗುವುದು ಎಲ್ಲಿ ಬಂತು :)

ಪ್ರೀತಿ ಇಂದ ,
ಪ್ರವೀಣ ಸಾಯ

thesalimath's picture

ಒಟ್ಟಿನಲ್ಲಿ ವಯಕ್ತಿಕವಾಗಿ ನನ್ನ ತೇಜೋವಧೆ ಮಾಡಲು ನಿಂತುಬಿಟ್ಟಿದ್ದೀರಿ! ನಿಮ್ಮ ಬಗ್ಗೆಯೂ ಪಾಪ ಎನಿಸುತ್ತಿದೆ. ಮೊದಲನೆಯದಾಗಿ ಸರಿಯಾದ ಮಂಡನೆ ತಮಗೆ ಬರುವುದಿಲ್ಲ. ಇದಕ್ಕಾಗಿ ನಿಮ್ಮೊಡನೆ ನನ್ನ ಅನುಕಂಪವಿದೆ.

ಗಡಿನಾಡು ಸೌಲಭ್ಯಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಏಕೆಂದರೆ ನನಗೆ ಅವುಗಳಿಂದ ನನಗೆ ಉಪಯೋಗವಿಲ್ಲ. ಸೌಲಭ್ಯ ಪಡೆದವರು ಹೇಳಿದ್ದಾರೆ ಅದನ್ನೇ ಹೇಳಿದೆ. ಅದು ನಿಮಗೆ ಪ್ರಚಾರದ ಗೀಳು ಅನ್ನಿಸಿತಾ? ನನ್ನ ಗೆಳೆಯರೊಡನೆ ನನ್ನ ಚರ್ಚೆಯನ್ನು ಹೇಳಿದೆ ಅಷ್ಟೇ!ಅದು ಪ್ರಚಾರದ ಹುಚ್ಚು ಎನಿಸಿತಾ? ತಮ್ಮ ವಾದಗಳಲ್ಲಿ ತರ್ಕವೇ ಇರುವುದಿಲ್ಲ ಬರೀ ಮಣ್ಣು, ಭಾವನೆ,ತಾಯಿ ಇವೇ ಇರುತ್ತವೆ. ನೀವು ನನಗೆ ತರ್ಕದ ಪಾಠ ಹೇಳುವುದು ಕುಚೋದ್ಯವೇ ಸರಿ!

ಸಿಇಟಿ ಯಲ್ಲಿ ಗಡಿನಾಡ ಕನ್ನಡಿಗರ ಕೋಟಾ ಇದೆ, ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳು ಈ ಕೋಟಾದಲ್ಲಿ ಲಭ್ಯವಿವೆ! ನಿಮಗೆ ಗೊತ್ತಿಲ್ಲ ಎಂದರೆ ಇಲ್ಲವೇ ಇಲ್ಲ ಎಂದಲ್ಲ.

ಯಾವುದ್ಯಾವುದನ್ನೋ ಎಲ್ಲೆಲ್ಲಿಗೋ ಜೋಡಿಸಿ ಇನ್ನೊಬ್ಬರನ್ನು ಕೀಳುಗಳೆಯುವುದು ಆರೆಸ್ಸೆಸ್ ನ ಚಾಳಿ. ತಮಗೂ ಅದು ಬಂದಿರುವುದು ಅಚ್ಚರಿಯೇನಲ್ಲ!
ಸಾಧ್ಯವಾದರೆ ನಿಮ್ಮಂತವರಿಗೆ ದೇವರು ಬುದ್ದಿ ಕೊಡಲಿ.

ಸಂಪದದ ಮೂಲಕ ವಿಶ್ವದೆಲ್ಲೆಡೆ ನಿಮ್ಮ ಮಾತು ಕೇಳುತ್ತಿರುತ್ತದೆ. ಬರೆಯುವಾಗ ಹುಶಾರು. ಹೇಳಿದ್ದಕ್ಕೆಲ್ಲ ಸರಿಯಾದ ಹಿನ್ನೆಲೆ ಇರದೆ ಹೋದರೆ ಯಾರೂ ಒಪ್ಪುವುದಿಲ್ಲ. ನಗೆಪಾಟಲಿಗೀಡಾಗಬೇಕಾದೀತು!

praveena saya's picture

<< ಸಿಇಟಿ ಯಲ್ಲಿ ಗಡಿನಾಡ ಕನ್ನಡಿಗರ ಕೋಟಾ ಇದೆ, ಇಂಜಿನಿಯರಿಂಗ್, ಮೆಡಿಕಲ್ ಸೀಟುಗಳು ಈ ಕೋಟಾದಲ್ಲಿ ಲಭ್ಯವಿವೆ! ನಿಮಗೆ ಗೊತ್ತಿಲ್ಲ ಎಂದರೆ ಇಲ್ಲವೇ ಇಲ್ಲ ಎಂದಲ್ಲ.

ಇಲ್ಲ :) ಕೇಳಿ ನೋಡಿ !! ತಾವು ೧೯೯೫ ರ ಸಮಯದ ಬಗ್ಗೆ ಅಲ್ಲ ಅಲ್ವ ಹೇಳ್ತಿರೋದು ?? :)

ಈಗ ಜನರಲ್ ಮೆರಿಟ್ ಮಾತ್ರ ಇರೋದು ! ಜೀವಂತ ಉದಾಹರಣೆ ನಾನೇ !! :) ಜನರಲ್ ಮೆರಿಟ್ ಗೆ quota ಅನ್ನಲ್ಲ !!

<<ಯಾವುದ್ಯಾವುದನ್ನೋ ಎಲ್ಲೆಲ್ಲಿಗೋ ಜೋಡಿಸಿ ಇನ್ನೊಬ್ಬರನ್ನು ಕೀಳುಗಳೆಯುವುದು ಆರೆಸ್ಸೆಸ್ ನ ಚಾಳಿ. ತಮಗೂ ಅದು ಬಂದಿರುವುದು ಅಚ್ಚರಿಯೇನಲ್ಲ!
ಇನ್ನೊಮ್ಮೆ ನನ್ನ ಲೇಖನ ಓದಿ ! RSS ಇದೆಯಾ ಅಂತ ತಿಳೀಲಿ ತಮಗೆ :)
<<ಸಾಧ್ಯವಾದರೆ ನಿಮ್ಮಂತವರಿಗೆ ದೇವರು ಬುದ್ದಿ ಕೊಡಲಿ.
ನನ್ನ ಪ್ರೊಫೈಲ್ ಓದಿ ಒಮ್ಮೆ :)
<< ಸಂಪದದ ಮೂಲಕ ವಿಶ್ವದೆಲ್ಲೆಡೆ ನಿಮ್ಮ ಮಾತು ಕೇಳುತ್ತಿರುತ್ತದೆ. ಬರೆಯುವಾಗ ಹುಶಾರು. ಹೇಳಿದ್ದಕ್ಕೆಲ್ಲ ಸರಿಯಾದ ಹಿನ್ನೆಲೆ ಇರದೆ ಹೋದರೆ ಯಾರೂ ಒಪ್ಪುವುದಿಲ್ಲ. ನಗೆಪಾಟಲಿಗೀಡಾಗಬೇಕಾದೀತು!
"" ಸಿಇಟಿ ಯಲ್ಲಿ ಗಡಿನಾಡ ಕನ್ನಡಿಗರ ಕೋಟಾ ಇಲ್ಲ "" ಕನ್ನಡಿಗ ಓದುಗರೇ , ದಯವಿಟ್ಟು ನಗೆಪಾಟಲಿಗೆ ಈಡು ಮಾಡಬೇಡಿ ಹರ್ಷ ಅವರನ್ನು !
ಇದೊಂದು ಸಲ ಬಿಟ್ಟು ಬಿಡಿ ( ಪ್ರತಿ ಸಲ ದಂತೆ ! )

ಇದಾಗಿ ನಿಮ್ಮ ಗಮನಕ್ಕೆ , ೧೯೯೦ ರ ದಶಕದಲ್ಲಿ ಗಡಿನಾಡ quota ಇತ್ತು . ನನ್ನ ಅಣ್ಣಂದಿರೆಲ್ಲ ಓದಿದ್ದರೆ. ಆದರೆ ೨೦೦೦ ದ ನಂತರದ ಸಮಯದಲ್ಲಿ ಅದನ್ನು ತೆಗೆದು , ಜನರಲ್ ಮೆರಿಟ್ quota ಮಾಡಿದ್ದರೆ ! ಬೇಕಿದ್ದಲ್ಲಿ ಮಿಂಚಂಚೆ ಯಲ್ಲಿ ಮಾರ್ಕ್ಸ್ ಕಾರ್ಡ್ಸ್ ಸ್ಕ್ಯಾನ್ ಮಾಡಿ ಕಳಿಸುತ್ತೇನೆ !! :)
ಆಗ ಜಾಸ್ತಿ ನಗೆಪಾಟಲದ್ರೆ ಮತ್ತೆ ಕೂಗಾಡ್ಬಾರ್ದು ನೋಡಿ ! ನಗು ನಗುತ್ತ ತಗೋಬೇಕು! sportive ಆಗಿ :)
ಹಾಗೆ ನೆ ತಮ್ಮ ಹೆಸರು ಬರೆಯಲಿಲ್ಲ ಎಂಬುದು ತಮ್ಮ ಕೋಪ ಎಂದಾದಲ್ಲಿ ಎಲ್ಲರಲ್ಲಿ ಹೇಳುತ್ತೇನೆ ! ಕಾಮೆಂಟ್ ತಮ್ಮದ್ದೆ ಅಂತ ! ಅದನ್ನ ತಾವೇ ಬರೆದಿದ್ದು ಅಂತ !! ಒಹ್ ಬೇಡ ಬಿಡಿ, ನೀವೇ ಹೇಳಾಯ್ತಲ್ವಾ :)

ಪ್ರೀತಿ ಇಂದ
ಪ್ರವೀಣ ಸಾಯ

ಸಂಗನಗೌಡ's picture

Sir,
arguments ಅಲ್ಲಿ ಯಾವಗ್ಲೂ ವಿಷಯದ ಮೇಲೆ ಮಾತುಗಳಿರಲಿ, ಯಾರನ್ನೂ ಪಿನ್ ಪಾಯಿಂಟ್ ಮಾಡಬಾರದು!, ಹಳೆಯ ಥ್ರೆಡ್‍ಗಳಲ್ಲಿ ನಿಮ್ಮ ಅವರ ನಡುವೆ ಏನು ನಡಿದೆದೆಯೋ ಅದ್ಯಾರಿಗೂ ಇಲ್ಲಿ ಬೇಕಾಗಿಲ್ಲ, ಗಡಿನಾಡ ಕನ್ನಡಿಗನಾಗಿ ತನ್ನ ನೋವು ಹೇಳಿಕೊಂಡು ಬರೆದದ್ದಿದೆ, ಬರಹ ಓದಿದ ಮೇಲೆ, ನಿಮ್ಮ ಮೊಟ್ಟಮೊದಲ ಕಮೆಂಟ್ ಓದಿದರೆ, ಮನೇಲಿ ಜಗಳ ಮಾಡ್ಕೊಂಡು ಬಂದು ಇಲ್ಲಿ ಸಿಟ್ಟು ತೀರಿಸ್ಕೋತಿದಾರೇನೋ ಅಂತ ಬೇರೆ ಓದುಗರಿಗೆ ಅನಿಸುತ್ತದೆ. ಈಗ ನನ್ನ ಹಿಂದೆ ಬೀಳ್ಬೇಡಿ ಗುರು, ಸೋಸಿಯಲ್ ಬ್ಲಾಗ್ಸ್ ಅಲ್ಲಿ ಚರ್ಚೆ ಮಾಡಬೇಕಂದ್ರೆ ಕೆಲವು ಬೇಸಿಕ್ things ಅನ್ನು ತಿಳ್ಕೊಂಡಿದ್ರೆ ಬಳಕೆಗೆ ಬರುತ್ತೆ ಅಂತ ಹೇಳಿದ್ದು ಅಸ್ಟೇ!

thesalimath's picture

ಪ್ರಿಯ ಸಂಗನಗೌಡ,

ತಾವು ಲೇಖನ ಓದಿದ್ದೀರೋ ಇಲ್ಲವೋ ಅರಿಯೆ!
ನನ್ನ ಕಮೆಂಟನ್ನಂತೂ ಓದಿದ್ದೀರಿ.

<<ಅಂತ ರಾಕೇಶ್ ಅವರ ಲೇಖನ ದ ಕೆಳಗೆ ಮಿತ್ರ ಮಹಾಶಯರೊಬ್ಬರು ಬರೆದ ಕಾಮೆಂಟ್ ಓದಿದ ಮೇಲೆ , ಮನಸ್ಸು ಹೇಳಿತು ನನ್ನ ಹತ್ರ
ಪ್ರವೀಣ , ನೀನೂ ಕೇಳಪ್ಪ ಅವ್ರ ಹತ್ರ ಯಾವ ಸವಲತ್ತು ಇದೆ ಅಲ್ಲಿ ಹುಟ್ಟಿ ಬೆಳೆದವರಿಗೆ ? >>
ಇದೊಂದು ಸಾಲು ಈ ಬರಹದಲ್ಲಿದೆ.

ಆ "ಮಿತ್ರಮಹಾಶಯ" ಎಂದು ಸಂಬೋಧಿಸಿರುವುದು ನನಗೇ! ಕುಹಕವಾಡಿ ಇಡೀ ಲೇಖನವನ್ನೇ ಬರೆದದ್ದು ತಮ್ಮ ಕಣ್ಣಿಗೆ ಕಾಣಲಿಲ್ಲ. ನನ್ನ ಕಮೆಂಟು ಕಂಡಿತು!
ನಿಜವಾಗಿಯೂ ಮಾಹಿತಿಯೇ ಬೇಕಿದ್ದರೆ ನಾನು ಎಲ್ಲಿ ಕಮೆಂಟು ಮಾಡಿದ್ದೆನೋ ಅಲ್ಲೇ ಕೇಳಬೆಕಿತ್ತು. ಈ ರೀತಿ ವಿಶೇಷವಾಗಿ ಲೇಖನವನ್ನೇ ಬರೆಯುವುದೆಂದರೆ ಏನೆಂದುಕೊಳ್ಳಲಿ? ಗಡಿನಾಡ ಕನ್ನಡಿಗರಿಗೆ quota ಇರುವುದಂತೂ ನಿಜ. ಆ quota ಕ್ಕಾಗಿ ಕರುನಾಡನ್ನು ಸೇರಬಯಸದವರು ಇರುವುದೂ ನಿಜ. ಬರಹಗಾರರು ಓದಲು ಬಯಸಿದಾಗ quota ಇತ್ತೋ ಇಲ್ಲವೋ ಅರಿಯೆ. ಈಗಂತೂ ಇದೆ. ನಿಜ ಹೆಳಿದ್ದಕ್ಕೆ ನನಗೆ ಸಿಕ್ಕ ಬಹುಮಾನ ನೀವು ನೋಡುತ್ತಿದ್ದೀರಿ. ಲೇಖಕರು ಓದುವಾಗ quota ಇರಲಿಲ್ಲ ಎಂದರೆ ಅದನ್ನು ಹೇಳಿದ್ದರೆ ಆಗಿತ್ತು. ಈಗಲೂ ಇಲ್ಲ ಎಂಬ ತಿಳಿಮೆ ಬರುವಂತೆ ಕುಹಕ ಮತ್ತು ವ್ಯಂಗ್ಯಗಳೇಕೆ?
ಇಲ್ಲಿ ವಿಷಯಕ್ಕಿಂತ ವಯಕ್ತಿಕ ದ್ವೇಷ ಹೆಚ್ಚು ಕೆಲಸ ಮಾಡುತ್ತಿದೆ. ಕೇವಲ ನೋವು ತೋಡಿಕೊಳ್ಳುವ ಬಯಕೆ ಲೇಖಕರಿಗಿತ್ತು ಎಂದರೆ ನಂಬಲಾಗದು.
ಇನ್ನು ಇದರ ಬಗ್ಗೆ ಚರ್ಚೆ ಮಾಡಲಾರೆ!

vijay pai's picture

ಇದು ತೇಜೊವಧೆಯಲ್ಲ...ವ್ಯಂಗ ಕುಹಕವು ಅಲ್ಲ !

>>ಈ ರೀತಿ ಹಿಂಬಾಗಿಲ ಮೂಲಕ ತಿಣುಕುವ ಚಟ ಏಕೋ!
ಯಾರು ಯಾಕೆ ನಿಮಗಾಗಿ ಕೇಳಬೇಕು? ರಾಕೇಶನೇನು ನಿಮ್ಮ ಜೀತದಾಳಾ? ನೀವೇ ಕೇಳಿ. ಅಲ್ಲಿಯೇ ಕೇಳಬಹುದಿತ್ತು(ನಿಮ್ಮ ಕಾಮೆಡಿಗೆ ನಾನು ಜವಾಬ್ದಾರನಲ್ಲ!).

>>ನಿಮ್ಮ ಬಗ್ಗೆಯೂ ಪಾಪ ಎನಿಸುತ್ತಿದೆ. ಮೊದಲನೆಯದಾಗಿ ಸರಿಯಾದ ಮಂಡನೆ ತಮಗೆ ಬರುವುದಿಲ್ಲ. ಇದಕ್ಕಾಗಿ ನಿಮ್ಮೊಡನೆ ನನ್ನ ಅನುಕಂಪವಿದೆ.

>>ಯಾವುದ್ಯಾವುದನ್ನೋ ಎಲ್ಲೆಲ್ಲಿಗೋ ಜೋಡಿಸಿ ಇನ್ನೊಬ್ಬರನ್ನು ಕೀಳುಗಳೆಯುವುದು ಆರೆಸ್ಸೆಸ್ ನ ಚಾಳಿ. ತಮಗೂ ಅದು ಬಂದಿರುವುದು ಅಚ್ಚರಿಯೇನಲ್ಲ!
ಸಾಧ್ಯವಾದರೆ ನಿಮ್ಮಂತವರಿಗೆ ದೇವರು ಬುದ್ದಿ ಕೊಡಲಿ.

ಸಖತ್ತಾಗಿದೆ ಕಾಮಿಡಿ!! :)

praveena saya's picture

ಹರ್ಷ ಅವರೇ ,
CET ಯಲ್ಲಿ , ಕನ್ನಡ ಯಾ ಗ್ರಾಮೀಣ quota ಇಲ್ಲ ಈಗ . ಅದು ಜನರಲ್ ಮೆರಿಟ್ ಆಗಿ ಬದಲಿಸಿದ್ದಾರೆ . ಆಮೇಲೆ ಗಡಿನಾಡ ಕನ್ನಡಿಗರಿಗೆ ಭಾರಿ ಕಷ್ಟ ಆಗಿವೆ ಈ ವಿಷಯದಲ್ಲಿ . ನಾನು ಸೆಟ್ ಪರೀಕ್ಷೆ ಬರೆದದ್ದು ಬೆಂಗಳೂರು ಬಂದು ! ಎಲ್ಲರು ಅವರ ಪಾಡಿಗೆ ಅವರ ಮನೆಯಲ್ಲಿ ಕೂತು ಪರೀಕ್ಷೆ ಗೆ ಓದಿ ಆರಾಮದಲ್ಲಿ ಸಾವಕಾಶವಾಗಿ ಅವರವರ ಕಾಲೇಜಿನಲ್ಲಿ ಬರೆದರೆ , ನಾನು ಬೆಂಗಳೂರು ನಗರಕ್ಕೆ ಬಂದು ನನ್ನ ತಂದೆ ಯ ಪರಿಚಯದವರ ಮನೆಯಲ್ಲಿ ಕೂತು ಓದಿ , ಅಲ್ಲ ಓದಲು ಆಗದೆ ( ಅವರು ನಂಗೆ ಉಳ್ಕೊಲ್ಲೋಕೆ ಜಾಗ ಕೊಟ್ಟಿದ್ದೆ ಹೆಚ್ಚು ! ) ಮಾಳಿಗೆ ಗೆ ಹೋಗಿ , ಬೀದಿ ದೀಪ ದ ಬೆಳಕಲ್ಲಿ ಓದಿ " ಛೆ ! ನಾನೊಬ್ಬ ಯಾಕೆ ಗಡಿನಾಡಲ್ಲಿ ಹುಟ್ಟಿದೇನೋ " ಅಂತ ಬೇಜಾರು ಮಾಡಿಕೊಂಡಿದ್ದೆ !
ನಾನೊಬ್ಬ ಹಳ್ಳಿಯಲ್ಲಿ ಪಕ್ಕ ಆಂಗ್ಲ ಶಬ್ದ ಗಳ ಪರಿಚಯವೇ ಇಲ್ಲದೆ ಓದಿ , ಮೊದಲ ಬಾರಿ ಬೆಂಗಳೂರು ನಗರಕ್ಕೆ CET ಪರೀಕ್ಷೆ ಗೆ ಅಂತ ಬೆಂಗಳೂರು ಬಂದು ಈ ಮಹಾ ನಗರ , ವಿದ್ಯಾರ್ಥಿಗಳ ಭಾಷೆ , ನುಡಿ ಕೇಳಿ ಹೇಗೆ ಅನ್ನಿಸಿರಬೇಡ ! ನೀವೇ ಯೋಚಿಸಿ ! ಎಲ್ಲರು IIT NIT ಅಂತ ಮಾತಾಡೋರು , ನಾನೊಬ್ಬ ದುಡ್ಡಿಲ್ಲದ ನೀವು ಹೇಳುವ ಅದೇ " ಪುರೋಹಿತ " ಮನೆಯ ಹುಡುಗ ! ನಮ್ಮ ತಂದೆ ಗೆ ಬೆಂಗಳೂರು ಗೆ ನನ್ನ ಕರೆದುಕೊಂಡು ಬರುವಷ್ಟು ದುಡ್ಡಿತ್ತೆ ಹೊರತು , ಅಲ್ಲಿ ಉಳಿದುಕೊಳ್ಳುವ ಅಸ್ಟಿರಲಿಲ್ಲ ! ನನ್ನ ಅಂಗ್ಲ ಭಾಷೆ ಚೆನ್ನಾಗಿರಲಿಲ್ಲ ! ನಂಗೆ ವೇಗೋತ್ಕರ್ಷ ಚೆನ್ನಾಗಿ ಗೊತ್ತಿತ್ತೆ ಹೊರತು ಅದನ್ನು Acceleration ಅನ್ನುತ್ತಾರೆ ಅಂತ ಕೂಡ ಗೊತ್ತಿರ್ಲಿಲ್ಲ PUC ಸೇರುವ ಹೊತ್ತಿಗೆ ! ಊಹಿಸಿ ಹೇಗಿರಬೇಕು ನನ್ನ ಮನಸ್ಥಿತಿ !!
ಯೋಚಿಸಿ ಒಮ್ಮೆ , CET ಪರೀಕ್ಷೆಯ ಕೊನೆಯ ನಿರ್ಣಾಯಕ ೪ ದಿನ ನಾನು ಪ್ರಯಾಣ , ಅಪರಿಚಿತರ ಮನೆಯಲ್ಲಿ ಒಂದು ಅಸಹಾಯಕ ತಂಗುವಿಕೆ , ಜೀವಮಾನ ಪೂರ ಸ್ವಾಭಿಮಾನದಲ್ಲಿ ಬದುಕಿ , ಕೈ ಚಾಚಿ ಉಳಿದುಕೊಳ್ಳುವ ಒಂದು ಸಂದರ್ಭ , ಬೆಂಗಳೂರು ಮಹಾ ನಗರದ ವಿಧ್ಯಾರ್ಥಿ ಭಾಂದವರ ನಡೆ ನುಡಿ , ಓದುವ ರೀತಿ !
ನೀವೇ ಹೇಳಿ ಹೇಗೆ ನನ್ನ ಆತ್ಮ ವಿಶ್ವಾಸ ಕುಸಿದು ಮಲಗಿರ್ಬೇಡ ಇದನೆಲ್ಲ ನೋಡಿ ..... ನಾನು CET ಯಲ್ಲಿ ೨೦೦ ರ ಒಳಗೆ ಅಂಕ ಪಡೆಯುವ ಧ್ಯೇಯ ಇಟ್ಟು ಎರಡು ವರ್ಷ ಓದಿ ಬಂದವನ ಮನಸ್ಸು ಹೇಗೆ ಕುಸಿದು ಮಲಗಿತ್ತು ಅಂತ ಈವತ್ತು ಇಬ್ಬರಿಗೆ ಗೊತ್ತು , ಅದು ನಾನು ಹಾಗು ನನ್ನ ಮನಸ್ಸು !! ಅದಾಗ್ಯೂ ನಾನು ೧೭೦೦ rank ಪಡೆದು ಹಾಸನ ಕಾಲೇಜಿನ ಸೀಟ್ ಹಿಡಿದ ಮೇಲೆ ನನಗೆ ತಿಳಿದ್ದು , ನಾನು ಆ ಕಾಲೇಜಿನ Electronics & Communication ವಿಭಾಗ ಸೆಲೆಕ್ಟ್ ಮಾಡಿದ ಎರಡನೇ ಹುಡುಗ CET " ಸೆಲ್ " ನಲ್ಲಿ !

ನಾನು ಈ ಲೇಖನ ಬರೆದದ್ದು ಕೂಡ, ಅವರಿಗೆ ಗಡಿನಾಡು quota ಇದೆ ರೀ , ಅವರು ರಾಜರ ಥರ ಬದುಕುತ್ತಿದ್ದಾರೆ ಅಂತ ತಾವು ಪ್ರಕಟಿಸಿದ ತಮ್ಮ ಭಾವ ನೋಡಿ ಅಷ್ಟೇ ! ಇಲ್ಲಾಂದ್ರೆ ಇವತ್ತಿಗೂ ಇದು ನನ್ನ ಮನಸಲ್ಲೇ ಇರುತಿತ್ತು !

ನಾನು ಲೇಖನದಲ್ಲಿ ಇದನೆಲ್ಲ ಬರೆದು ವೈಭವೀಕರಿಸುವ ಗೋಜಿಗೆ ಹೋಗಿಲ್ಲ , ಯಾಕಂದ್ರೆ ನನ್ನ ಉದ್ದೇಶ ಅದಲ್ಲ ! ನನ್ನ ಕೊನೆಯ ವಾಕ್ಯ ಓದಿ , ಇಂತದೆಲ್ಲ ನಡಿತು ಅಂತ ನಾನೇ ಈ ದೇಶ ದ ಪ್ರಜೆ ಯಾಗಿ , ಅಭಿಮಾನಿ ಯಾಗಿ ತಿರುಗಿ ನಿಂತು "ನಮ್ಮನ್ನೇ" :ಡೌನ್ ಡೌನ್" ಅಂದರೆ ಮತ್ಯವಾಗ ನಮ್ಮ ದೇಶ ಅಂತ ನಾವು ಎದ್ದು ನಿಲ್ಲೋದು ! ನಾನು ಇದನ್ನು ಹಿಡಿದು ನಮಗೆ ಅನ್ಯಾಯ ಆಗಿದೆ ಅಂತ ಎಳ್ಳು ಹೇಳೋಕೆ ಹೋದೋನೆ ಅಲ್ಲ , ರೀ ನಮ್ಮ ದೇಶ ರೀ ! ನಾನೇನು ಪಾಕಿಸ್ಥಾನ ದಲ್ಲ ಇದ್ದೀನಿ ! ಏನೋ ಆಗುತ್ತೆ ಇರಲಿ , ಒಮ್ಮೆ ದೇಶ ಉದ್ಧಾರ ಆಗುತ್ತ ಬಂದಂತೆ ಇದು ಕೂಡ ಸರಿ ಆಗುತ್ತೆ ! ಅಲ್ಲಿ ತನಕ ದೇಶ ಕಟ್ಟೋಣ ಅಂದಿದ್ದು ಅಷ್ಟೇ !
ನೀವು ಮಾತು ಮಾತಿಗೂ ನಾನು ಯಾವಾಗಲು, ತಾಯಿ , ಮಣ್ಣು ದೇಶ ಅಂತಾನೆ ಇರ್ತೀರ ಅನ್ತೀರಲ್ವ ! ಹಂಗಿದ್ರೆ ರೀ ಒಂದು ದೇಶ ಅಂತ ಕಟ್ಟೋಕೆ ಆಗೋದು !
ಆದ ಅನ್ಯಾಯಕ್ಕೆ ನಮ್ಮ ಜನರ ವಿರುದ್ದವೇ ಹಲ್ಲು ಮಸಿತಾ ಕೂದಷ್ಟು ನಾವು ಒಂದಗೋಲ್ಲ . ಮೂರನೇ ನಾಯಿ ನಮ್ಮ ಮನೆ ಅಂಗಳಕ್ಕೆ ನುಗ್ಗೋವಾಗ ಮನೆಯ ಎರಡೂ ನಾಯಿಗಳು ಕಚ್ಚಡೋದು ನಿಲ್ಲಿಸಿ ಆ ಮಾಯಿ ಮೇಲೆ ಆಕ್ರಮಣ ಮಾಡುತ್ತೆ ! ನಾವು ಮನುಷ್ಯರು , ಯಾಕೆ ಆ ಮೂರನೇ ನಾಯಿ ನಮ್ಮ ಮನೆಯ ಹತ್ತಿರ ಸುಳಿಯ ಬಿಡಬೇಕು !
ನೀವು ವಾದ ಮಾಡುವ ಮೊದಲೇ ,

ಮನೆ ನಾಯಿ - ನಮ್ಮ ರಾಜ್ಯಗಳು
ಮೂರನೇ ನಾಯಿ - ಪಾಕಿಸ್ತಾನ , ಚೀನಾ ಹಾಗು ಉಳಿದದ್ದು !

ಆಮೇಲೆ ಉಳಿದದ್ದು ನಿಮಗೆ ಬಿಟ್ಟಿದ್ದು !

ನನ್ನ ಮಾತು ನಿಮ್ಮ ಅಕ್ಷರಗಳ ಮೇಲೆ ಹೊರತು, ತಮ್ಮ ಮೇಲಲ್ಲ ! ಅದಕ್ಕಾಗಿ ನಿಮ್ಮ ಹೆಸರು ಹಾಕಿ ಬರೆದಿಲ್ಲ

ಪ್ರೀತಿ ಇಂದ ,
ಪ್ರವೀಣ ಸಾಯ