24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಭಜನೆ - ಬಾಳಿಗೊಂದು ಮಂತ್ರ

February 12, 2010 - 10:18pm
rkekkar

ಸುಖದ ಸಮೃದ್ಧಿಯಲ್ಲಿ ಬಾಳಪಥದಿ ಸಾಗಿರಲು
ಅರ್ಥ ಕಾಮಗಳನು ಭೊಗಿಸುತ್ತ ಜೀವ ನಡೆದಿರಲು ||
ಇನಿತು ಬಿಸಿಲು, ಇನಿತು ನೆಳಲು, ಎಲ್ಲೆಡೆ ಸೊಗಸಿರಲು
ಪಂಚಾಕ್ಷರಿ ಮನದೊಳಿರಲಿ "ಓಂ ನಮಃ ಶಿವಾಯ" || ||

ನೋಟ ಕುಗ್ಗಿ ಮನದಿ ಮಬ್ಬು ಕವಿದು ಮಂದವಾಗಲು
ದಾರಿಯೆಂದು ಬಗೆದು ವ್ಯೂಹದಲ್ಲಿ ಸುತ್ತಿ ಸೊರಗಲು ||
ಗುರಿಯಿಲ್ಲದ ಬದುಕನಾವೆ ಬರಿದೆ ತೇಲಿ ತಿರುಗಲು
ಬೆಳಕ ತೋರೊ ಪದವ ಪೇಳೊ "ಓಂ ನಮಃ ಶಿವಾಯ" || ||

ದುಗುಡ ದುಮ್ಮಾನಗಳಾ ಹಿಡಿತದಲ್ಲಿ ನಲುಗಿರಲು
ಸಂಸಾರದ ಸಾಗರದಿ ಈಸಿ ಮೀಸಿ ದಣಿದಿರಲು ||
ಕಯ್ಯಿ ಕಾಲು ಸೋತು ಇನ್ನು ಮುಳುಗುವುದೇ ಲೇಸೆನಲು
ಪಾರಗೊಳಲು ಕೂಗಿಕೊಳ್ಳೊ "ಓಂ ನಮಃ ಶಿವಾಯ" || ||

ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ ||
ಓಂ ನಮಃ ಶಿವಾಯ, ಓಂ ನಮಃ ಶಿವಾಯ
ಓಂ ನಮಃ ಶಿವಾಯ, ಓಂ ನಮಃ ಶಿವಾಯ || ||

ಕೆ. . ಶ್ರೀ. ರಾಮಚಂದ್ರ

ಲೇಖನ ವರ್ಗ (Category): 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by shivaram_shastri on

ಪ್ರಿಯ ಕೆ. ಭ. ಶ್ರೀ. ರಾಮಚಂದ್ರ ಅವರೇ,
ನಿಮ್ಮ ಹೆಸರಿನ (ಹಾಗೂ 'ಮೀಸಿ', 'ಕಯ್ಯಿ'ಗಳ :-)) ಕುರಿತು ಕುತೂಹಲ ಮೂಡಿ, ಅಂತರ್ಜಾಲವನ್ನು ಸ್ವಲ್ಪ ತಡಕಾಡಿದಾಗ ನೀವು ಕೆಕ್ಕಾರಿನವರು - ಅದರಲ್ಲೂ ನರಸಪ್ಪನ ಮನೆಯವರು - ಅಂದ ಮೇಲೆ ನನ್ನ ಹತ್ತಿರದ ಸಂಬಂಧಿಗಳು ಎಂದು ತಿಳಿದು ಸಂತಸವಾಯ್ತು.