ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಲೇಖಕರು

shivaram_shastri's picture

ಪೂರ್ಣ ಹೆಸರು
ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ

ಪರಿಚಯ

ಕಡಲ ತೀರದ, ಹೊನ್ನಾವರ ತಾಲೂಕಿನ, ಉಂಚಗೇರಿಯವನು.
ಕಳೆದ ಹನ್ನೆರಡು ವರ್ಷಗಳಿಂದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ, ದೆಹಲಿಯಲ್ಲಿ Molecular Genetics ಕ್ಷೇತ್ರದಲ್ಲಿದ್ದೇನೆ. ಪರಿಣತಿ ಏನೇನೂ ಸಾಲದು.
ಸೋಮಾರಿ.
ಸಂಪದದ ಒಡನಾಟವು ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸೆ, ತಿಳಿದುಕೊಳ್ಳಬಲ್ಲೆ ಎಂಬ ವಿಶ್ವಾಸವನ್ನು ಮೂಡಿಸುತ್ತಿದೆ.

ಮಲೇರಿಯಾ ಸೊಳ್ಳೆಗಳಿಗೆ ಬಿಯರ್ 'ಸೇವಕರು' ಇಷ್ಟವಂತೆ!

ಅಪರೂಪಕ್ಕೆ ಬೆಳಿಗ್ಗೆ ಬೇಗ ಎದ್ದು, ಅಂತರ್ಜಾಲದಲ್ಲಿ ಏನನ್ನೋ ಓದಬೇಕೆಂದು ಹುಡುಕುತ್ತಿದ್ದಾಗ, ಅದು ಹೇಗೋ ಬಿಯರ್ ಸೇವನೆ ಮತ್ತು ಮಲೇರಿಯಾ ಸೊಳ್ಳೆಗಳ ಕುರಿತು  ಸಂಶೋಧನಾ ಲೇಖನ ಕಣ್ಣಿಗೆ ಬಿತ್ತು.

(ಅಂದ ಹಾಗೇ, 'ಕಣ್ಣಿಗೆ ಬಿತ್ತು' ಎನ್ನುತ್ತಲೇ, ಜೋಕೊಂದು ನೆನಪಾಯಿತು. ಹೇಳಿಬಿಡುತ್ತೇನೆ. 

ಒಬ್ಬ: ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಕಸ ಬಿದ್ದಿತ್ತು. ವೈದ್ಯರ ಶುಲ್ಕಕ್ಕೆ ನೂರು ರೂಪಾಯಿ ಖರ್ಚಾಯಿತು.

ಇನ್ನೊಬ್ಬ: ಅದಾದರೂ ಪರವಾಗಿಲ್ಲ. ನಿನ್ನೆ, ನನ್ನ ಹೆಂಡತಿ ಕಣ್ಣಿಗೆ ಒಂದು ರೇಷ್ಮೆ ಸೀರೆ ಬಿತ್ತು. ಖರೀದಿಸಲು ನಾಲ್ಕೂವರೆ ಸಾವಿರ ರೂಪಾಯಿ ಖರ್ಚಾಯಿತು.)

ಹೋಗಲಿ ಬಿಡಿ. ಮಲೇರಿಯಾ ಅಂದರೆ ನಗುವ ವಿಷಯ ಏನಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಲ್ಲಿ ಅರ್ಧದಷ್ಟು ಜನರು ಮಲೇರಿಯಾ ರೋಗದ ಅಪಾಯದಲ್ಲಿದ್ದಾರೆ. ೨೦೦೮ರಲ್ಲಿ ಸರಿ ಸುಮಾರು ೨೪೩,೦೦,೦೦,೦೦೦ ಮಲೇರಿಯಾ ರೋಗಿಗಳ ಪತ್ತೆಯಾಗಿತ್ತು. ಅವರಲ್ಲಿ ಅಂದಾಜು ೮,೬೩,೦೦೦ ಜನರು ಈ ರೋಗಕ್ಕೆ ಬಲಿಯಾಗಿದ್ದರು.

ಈ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಪ್ಲಾಸ್ಮೋಡಿಯಂ ಪರೋಪಜೀವಿ ಮತ್ತು ಅದನ್ನು ಹರಡುವ ಅನಾಫಿಲಿಸ್ ಸೊಳ್ಳೆ ೩೦,೦೦,೦೦,೦೦೦ ವರ್ಷಗಳಿಂದ ಈ ಭೂಮಿಯ ಮೇಲಿವೆ ಎನ್ನಲಾಗಿದೆ. ಇಂದಿಗೂ ಜಗತ್ತಿನ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಹರಡಿರುವ ಮಲೇರಿಯಾದಿಂದಾಗಿ ಹೆಚ್ಹು ಕಡಿಮೆ ಪ್ರತಿ ೩೦ ಸೆಕೆಂಡುಗಳಿಗೆ ಒಬ್ಬ ಬಾಲಕನ ಸಾವು ಸಂಭವಿಸುತ್ತದೆ. ಈ ಸಾವುಗಳನ್ನು ನಾವು ತಡೆಗಟ್ಟಬಹುದಾಗಿದ್ದೂ, ತಡೆಗಟ್ಟಲಾರದವರಾಗಿದ್ದೇವೆ.      

ಇರಲಿ; ನಾನೀಗ ಹೇಳ ಹೊರಟ ಸುದ್ದಿ ಬೇರೆ.  ಸಂಶೋಧನಾ ಲೇಖನದ ಪ್ರಕಾರ ಅನಾಫಿಲಿಸ್ ಗಾಂಬಿಯೇ  (Anopheles gambiae) ಸೊಳ್ಳೆಗಳು ಬಿಯರ್ ಕುಡಿದಿರುವ ಜನರತ್ತ ಆಕರ್ಷಿತವಾಗುತ್ತವೆ.  Y tube-olfactometer ಎಂಬ ಸಾಧನವನ್ನು ಹಾಗೂ ೪೩೦೦ ಸೊಳ್ಳೆಗಳನ್ನು ಬಳಸಿ ನಾಲ್ವತ್ಮೂರು ಸ್ವಯಂ ಸೇವಕರ ಮೇಲೆ ಮಾಡಲಾದ ಈ ಸಂಶೋಧನೆಯಲ್ಲಿ ಸೊಳ್ಳೆಗಳು ಬಿಯರ್ ಕುಡಿದಿದ್ದ ಇಪ್ಪತ್ತೈದು ಜನ ಸ್ವಯಂ ಸೇವಕರ ಕಡೆ ಆಕರ್ಷಿತವಾದವು; ಹದಿನೆಂಟು ಜನ ನೀರು ಕುಡಿದ ಸ್ವಯಂ ಸೇವಕರತ್ತಲ್ಲ. ಸ್ವಯಂ ಸೇವಕರ ದೇಹದ ಉಷ್ಣತೆ  ಮತ್ತು ಅವರು ಉಸಿರಿನಲ್ಲಿ ಹೊರಬಿಟ್ಟ ಕಾರ್ಬನ್ ಡಯೋಕ್ಸೈಡ್ ಪ್ರಮಾಣ ಸೊಳ್ಳೆಗಳ ಆಕರ್ಷಣೆಗೆ ಮುಖ್ಯವಾಗಿರಲಿಲ್ಲ. 

ಸಂಶೋಧನಾಕಾರರು ಬಿಯರ್ ಸೇವನೆ ಮಲೇರಿಯಾ ರೋಗಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಈ ಕುರಿತು ಜನ ಜಾಗ್ರತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ನಾನಂತೂ ನಿಮ್ಮ ಗಮನಕ್ಕೆ ತಂದಿದ್ದೇನೆ!                

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
prithvirajsm's picture

ಪ್ಲಾಸ್ಮೋಡಿಯಂ ಪರೋಪಜೀವಿಯೋ ಅಥವಾ ಪರಾವಲಂಬಿ ಜೀವಿಯೋ

...ಪೃಥ್ವಿ

shivaram_shastri's picture

ಪೃಥ್ವಿರಾಜ್ ಅವರೇ,
ಪ್ರತಿಕ್ರಿಯೆಗೆ ಧನ್ಯವಾದ.
ಪ್ಲಾಸ್ಮೋಡಿಯಂ ಒಂದು ಪಾರಾಸೈಟ್. ಪಾರಾಸೈಟ್ ಎಂಬುದಕ್ಕೆ ಬರಹ ಅಂತರಜಾಲ ನಿಘಂಟಿನ ತಾಣದಲ್ಲಿ, ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟಿನ ಪ್ರಕಾರ (http://www.baraha.co...) ಪರೋಪಜೀವಿ, ಪರಾವಲಂಬಿ, ಪರಪುಷ್ಟ ಇತ್ಯಾದಿ ಸಮಾನಾರ್ಥಕ ಶಬ್ದಗಳನ್ನು ನೀಡಿದ್ದಾರೆ. ನಾನು ಪರೋಪಜೀವಿ ಎಂಬ ಶಬ್ದ ಬಳಸಿದೆ. ನೀವು ಹೇಳಿದಂತೆ ಪರಾವಲಂಬಿ ಎಂಬ ಶಬ್ದವೇ ಹೆಚ್ಚು ಸೂಕ್ತ.

manjunath s reddy's picture

ಈ ನಿಮ್ಮ ಲೇಖನ ಮುಖ ಪುಟದಲ್ಲಿ ನೋಡಿದಾಗ ಇನ್ನು ಬಿಯರ್ ಕುಡಿಯಲು ಪ್ರಾರಂಬಿಸಿರಲಿಲ್ಲ...
ಅರ್ಧ ಬಿಯರ್ ಖಾಲಿ ಆದ್ಮೇಲೆ ನೋಡಿದೆ.... ;-)
ಒಳ್ಳೆಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

shivaram_shastri's picture

ಮಂಸೋರೆಯವರೇ,

ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.

[ಈ ನಿಮ್ಮ ಲೇಖನ ಮುಖ ಪುಟದಲ್ಲಿ ನೋಡಿದಾಗ ಇನ್ನು ಬಿಯರ್ ಕುಡಿಯಲು ಪ್ರಾರಂಬಿಸಿರಲಿಲ್ಲ... ಅರ್ಧ ಬಿಯರ್ ಖಾಲಿ ಆದ್ಮೇಲೆ ನೋಡಿದೆ.... ;-) ]

ನನಗನ್ಸುತ್ತೆ, 'ಬಿಯರ್ ಕುಡಿಯಲು ಶುರು ಮಾಡಿದಾಗ ನಿಮ್ಮ ಲೇಖನವನ್ನು ನೋಡಿರಲಿಲ್ಲ; ಅರ್ಧ ಬಿಯರ್ ಖಾಲಿ ಆದ್ಮೇಲೆ ನೋಡಿದೆ' ಎಂದು ಹೇಳಬಯಸಿದ್ದಿರಿ.
ಹೂಂ... ಗೊತ್ತಾಯ್ತು. ಬಿಯರ್ ಪ್ರಭಾವ :-)

siddharam's picture

ಶಿವರಾಂ ಅವರೆ, ಬಹುಶ: ಮಲೇರಿಯಾ ಸೊಳ್ಳೆಗಳಿಗೆ ಬಿಯರ್ ಕುಡಿದವರ ರಕ್ತದಿಂದ ನಶೆ ಏರುತ್ತಿರಬೇಕು, ಅದಕ್ಕೇ ಬೇಗನೇ ಆಕರ್ಶಿತವಾಗುತ್ತಿವೆ. ಏನ್ ಕಾಲ ಬಂತಪ್ಪಾ, ಬಿಯರ್ ಕುಡಿದವರನ್ನು ಮನೆಯವರಷ್ಟೇ ಅಲ್ಲ ಸೊಳ್ಳೆಗಳೂ ಬೆನ್ನುಹತ್ತುತ್ತಿವೆ-ಸಿದ್ಧರಾಮ ಹಿರೇಮಠ.

shivaram_shastri's picture

ಸಿದ್ಧರಾಮ ಹಿರೇಮಠರವರೇ,

[ಮಲೇರಿಯಾ ಸೊಳ್ಳೆಗಳಿಗೆ ಬಿಯರ್ ಕುಡಿದವರ ರಕ್ತದಿಂದ ನಶೆ ಏರುತ್ತಿರಬೇಕು, ಅದಕ್ಕೇ ಬೇಗನೇ ಆಕರ್ಶಿತವಾಗುತ್ತಿವೆ.]

ಈ ಕುರಿತು ಗೊತ್ತಿಲ್ಲ.

"‘ಮಲಬಾರ್ ಪೈಡ್ ಹಾರ್ನ್ ಬಿಲ್’ ಗಳಿಗೂ ಆಗಾಗ ‘ನಶೆ’ ಏರುತ್ತದೆ!" ಎಂದು ಸಹಸಂಪದಿಗ ಹರ್ಷವರ್ಧನ್ ಅವರು ಬರೆದಿದ್ದಾರೆ.

ಅಂದ ಹಾಗೇ, ಆಗಸ್ಟ್ ಇಪ್ಪತ್ತು ವಿಶ್ವ ಸೊಳ್ಳೆ (ನಿವಾರಣೆ) ದಿನವಂತೆ. ಗೊತ್ತಾ?

siddharam's picture

ಶಿವರಾಮ್ ಅವರೆ,
[ಆಗಸ್ಟ್ ಇಪ್ಪತ್ತು ವಿಶ್ವ ಸೊಳ್ಳೆ (ನಿವಾರಣೆ) ದಿನವಂತೆ] ಅಂದು ಒಂದೇ ದಿನವಾ? ಉಳಿದ ದಿನ ನಮ್ಮ ಗತಿಯೇನ್ರೀ ಶಾಸ್ತ್ರಿಗಳೆ, ಅವುಗಳ ಪಾಲಿಗಂತೂ ರಕ್ತ ಹೀರುವ ದಿನಗಳೇ ಸರಿ ಅಲ್ಲವೇ?

shivagadag's picture

ಏನ್ ಸಾಹೆಬ್ರೇ..

ಕುಡಿದದ್ದನ್ನೆಲ್ಲಾ ಇಳಿಸಿಬಿಟ್ಟಿರಿ...............

ಇಂತಿ,
ಯಳವತ್ತಿ

shivaram_shastri's picture

:-)

ಭಾಗ್ವತ's picture

ಶಿವರಾಮರವರೆ, ಒಳ್ಳೆಯ ಮಾಹಿತಿ ನೀಡಿರುವಿರಿ ವಂದನೆಗಳು.

shivaram_shastri's picture

ಧನ್ಯವಾದಗಳು ಭಾಗ್ವತ ಅವರೇ,
ಅಂದ ಹಾಗೆ, ಯಾವೂರು ನಿಮ್ದು?