ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಎಫ್ ಎಮ್ ರೇಡಿಯೋ ಚಾನಲುಗಳು ಮತ್ತು ಅವುಗಳ ಬಧ್ಧತೆ.

November 8, 2006 - 5:33pm — shreenidhi

ಇತಿಹಾಸ ಮರುಕಳಿಸುತ್ತಿದೆ. ಜನ ಮತ್ತೆ ರೇಡಿಯೋದ ಕಡೆ ವಾಲುತ್ತಿದ್ದಾರೆ. ೭೦-೮೦ರ ದಶಕದ ನಂತರ ಟಿ ವಿ ಯ ಅಬ್ಬರದಿಂದ ಮೂಲೆಗುಂಪಾಗಿ, ಹಳ್ಳಿಯ ಹಿರಿಯರ ಕೈ ಸೇರಿದ್ದ, ಅಟ್ಟದ ಧೂಳು ತಿನ್ನುತ್ತಿದ್ದ ರೇಡಿಯೋಗೆ ಕಾಯಕಲ್ಪವಾಗಿದೆ. ಸಂತೋಷ. ಜನ ಬಸ್ಸಲ್ಲಿ, ಕ್ಯೂನಲ್ಲಿ ಕಾಯಬೇಕಾದಾಗ ಮೊದಲಿನಂತೆ ಬೋರೆದ್ದು ಹೋಗಬೇಕಾಗಿಲ್ಲ, 10x6 ಕಿಷ್ಕಿಂದೆಯಲ್ಲಿ ಬದುಕೋರು ರಾತ್ರಿಯ ಕತ್ತಲೇಲಿ ನಿರಾಶವದನರಾಗಿ ಕೂರಬೇಕಿಲ್ಲ, ಸಂತೋಷ. ಕೆಲಸ ಮಾಡುತ್ತಲೇ ಮನರಂಜನೆಯನ್ನೂ ಪಡೆಯಬಹುದು. ಅದೂ ಸಂತಸದ ಸಂಗತಿಯೇ!
ಆಕಾಶವಾಣಿ , ಈಗ "fm" ಎಂಬ ಹೊಸ ಬಟ್ಟೆ ತೊಟ್ಟು, ನಳನಳಿಸುತ್ತಿದೆ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ fm ರೇಡಿಯೋ channel ಗಳನ್ನ ಆರಂಭಿಸಿವೆ. AIR ಕೂಡ ವಿವಿಧ ಭಾರತಿ ನ fm ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ. FM ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ. Short Way ಮತ್ತು medium way ಗಳಂತೆ ದೇಶದಾದ್ಯಂತ ಪ್ರಸಾರ ಆಗುವುದಿಲ್ಲ. ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ.
ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ( ಉಳಿದ ಸಂಗೀತ ಪ್ರಕಾರಗಳು ಎಲ್ಲಿ ಪ್ರಸಾರ ಆಗತ್ತೆ ಅಂತ ಕೇಳಬೇಡಿ) ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮಾಮೂಲಿ ಮೆನು!
ಬೆಂಗಳೂರೊಂದರಲ್ಲೆ ಇವತ್ತಿಗೆ, { ೦೮.೧೧.೨೦೦೬) ೮ ಎಫ್ ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ನ್ನು ಸೇರಿ!. ಅದೆಷ್ಟು ಆದಾಯ ಬರಬಹುದು ಆಲೋಚನೆ ಮಾಡಿ!ಯಾವ ಚಾನಲ್ಲು ಕೂಡಾ ವಿಶೇಷವಾಗಿಲ್ಲ.ಎಲ್ಲವೂ ಹಾಡಿದ್ದೇ ಹಾಡೋ ಕಿಸಬಾಯಿ ದಾಸರೇ!ದಿನಾ ಬಸ್ಸಲ್ಲಿ ಆಫೀಸಿಗೆ ಹೋಗಿ- ಬಂದು ಮಾಡುವ ನಾನು ಈ ಎಫ್ ಎಮ್ ಗಳಿಗೆ ಕಿವಿ ಕೊಡೊ ಅಭ್ಯಾಸ ಮಾಡಿಕೊಂಡಿದ್ದೇನೆ, ಹಾಗಾಗಿ ಧೈರ್ಯವಾಗಿ ಈ ಮಾತು ಹೇಳಿದೆ.
ನನ್ನ ಕೆಲವೊಂದಿಷ್ಟು ಆಲೋಚನೆಗಳನ್ನ ನಿಮ್ಮ ಜೊತೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ, ಈ ಎಫ್ಎಮ್ ಗಳ ಪ್ರಲಾಪಗಳನ್ನ ದಿನಾ ಕೇಳುತ್ತೇನಾದ್ದರಿಂದ.
ಈ ಚಾನಲುಗಳಿಗೆ ಸಾಮಾಜಿಕ ಬದ್ದತೆ ಎಂಬುದೇ ಇಲ್ಲವೆ?, ಕೇವಲ ಮನರಂಜನೆ ಮತ್ತು ವ್ಯ್ರರ್ಥ ಕಾಲಹರಣಕಾಗಿ ಮಾತ್ರವೆ ಇವುಗಳ ಇರುವಿಕೆಯೆ? ನೀವು ಯಾವುದೇ ಚಾನಲು ತಿರುಗಿಸಿದರೂ ಒಂದೇ ತೆರನಾದ ಮಾತುಗಳು ಕೇಳಿ ಬರುತ್ತವೆ! ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇವಕ್ಕೆ ಯಾವ ತಲೆ ಬುಡವೂ ಇರುವುದಿಲ್ಲ.ಮೊನ್ನೆ ಮೊನ್ನೆ ಒಂದು ಎಫ್ ಎಮ್ ನಲ್ಲಿ ಕೇಳಿ ಬಂದ ಒರಲಾಟ - " ನಿಮ್ ಚಪ್ಲಿನ ಯಾರಾದ್ರೂ ದೇವಸ್ಥಾನದಲ್ಲಿ ಕದ್ಕೊಂಡ್ ಹೋದ್ರೆ ನೀವೇನ್ ಮಾಡ್ತೀರಾ ಅಂತ ಹೇಳಿ, ಬಹುಮಾನ ಗೆಲ್ಲಿ!! ಕೂಡ್ಲೇ ಮೆಸೇಜ್ ಮಾಡಿ **** ನಂಬರ್ ಗೆ.. " ಯಾವನೋ ಒಬ್ಬ ಪೆಕರ ಫೋನ್ ಮಾಡಿ ಹೇಳುತ್ತಿದ್ದ, "ನಾನು ಇನ್ನೊಬ್ರ ಚಪ್ಲಿ ಹಾಕ್ಕೊಂಡು ಜಾಗ ಖಾಲಿ ಮಾಡ್ತೀನಿ" ಆಹಾ!
ಅತ್ಯಂತ ಬಾಲಿಶ RJ ( ರೇಡಿಯೊ ಜಾಕಿ) ಗಳೇ ಹೆಚ್ಚಿನ ಕಡೆ ಕಾಣಸಿಗುತ್ತಾರೆ( ಎಲ್ಲರೂ ಅಲ್ಲ ಮತ್ತೆ..) "ನಿಮ್ಮ ಗಂಡ ಬೇರೆ ಹುಡ್ಗೀನ ಪ್ರೀತ್ಸಿದ್ರೆ ಏನ್ ಮಾಡ್ತೀರ" , "ಹುಡ್ಗೀರ್ನ ಪಟಾಯ್ಸೋದು ಹೇಗೆ?" "ಬಾಸ್ ಗೆ ಹೇಗೆ ಮಸ್ಕಾ ಹೊಡೀಬೇಕು", ಇಂತಹ ಶೈಲಿಯ ಮಾತುಗಳೇ ಅವರ ಬಾಯಲ್ಲಿ ಚರ್ವಿತ ಚರ್ವಣಗೊಳ್ಳುತ್ತವೆ! ಇನ್ನು ಕೇಳುಗರಿಗೆ ಕೇಳೋ ಪ್ರಶ್ನೆಗಳೋ, ಭಗವಂತಾ!-" ಕನ್ನಡ ಚಿತ್ರರಂಗದ "ಕ್ರೇಜಿ ಸ್ಟಾರ್‍" ಯಾರು ಅಂತ ತಿಳಿಸಿ , ನಿಮ್ಮ options, a) ರವಿಚಂದ್ರನ್ b)ಅಶು ಚಂದ್ರನ್ c) ವಿಶು ಚಂದ್ರನ್ " - ಏನು ಹೇಳಬೇಕು ಇದಕ್ಕೆ?
ಈ ಎಫ್ ಎಮ್ ಗಳಿಗೆ ಕಳಿಸೋ ಮೆಸೇಜೊಂದಕ್ಕೆ, ೨-೩ ರೂಪಾಯಿಗಳು ಉದುರುತ್ತವೆ, ಮತ್ತು ಹೆಚ್ಚು ಹೆಚ್ಚು ಮೆಸೇಜುಗಳು ಬಂದಷ್ಟು, ಲಾಭ ಅವಕ್ಕೆ!
ಯಾವುದೋ ಒಂದು ಚಾನಲ್ಲು "ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು ನಿಷೇಧ ಮಾಡೋದಕ್ಕೆ ನಿಮ್ಮ ಸಹಮತ ತಿಳಿಸಿ, ನಮಗೆ ಮೆಸೇಜು ಕಳ್ಸಿ ಅಂತ ಬೆಳಗ್ಗಿಂದ ಸಂಜೆ ವರೆಗೆ ಅರಚಿಕೊಂಡಿತು, ಮತ್ತು ಅದಕ್ಕೆ ೩೦-೪೦ ಸಾವಿರ ಮೆಸೇಜುಗಳೂ ಬಂದವು.(ಆ ಚಾನಲ್ಲೇ ಹೇಳಿಕೊಂಡದ್ದು) ಯಾವುದೋ ರೇಡಿಯೋ ಸ್ಟೇಷನ್ ಗೆ ಮೆಸೇಜು ಕಳ್ಸೋದಕ್ಕು, ಧೂಮಪಾನ ನಿಷೇಧಕ್ಕೂ ಏನು ಸಂಬಂಧ? ಅದರ ಬದಲಾಗಿ ಅದಕ್ಕೆ ಸಂಬಂಧಿತ ಅದಿಕಾರಿಗಳನ್ನೋ , ಸಚಿವರನ್ನೋ ಕರೆಸಿ ಮಾತನಾಡಿಸಿದ್ದರೆ?!
ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋಗೋದಕ್ಕೆ ಕೂಪನ್ನುಗಳು, ಸಿನಿಮಾ ಟಿಕೇಟುಗಳು," couple passes" ಇವುಗಳೇ ಈ ಎಫ್ ಎಮ್ ಗಳ ಕೊಡುಗೆ! ಜನರನ್ನ ಮತ್ತೊಂದಿಷ್ಟು ಕೊಳ್ಳುಬಾಕರನ್ನಾಗಿ ಮಾಡುವ ಹುನ್ನಾರವಿದೆಯೇ ಹೊರತು ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಸುವ ಆಶಯವೇ ಇವುಗಳಿಗಿದ್ದಂತಿಲ್ಲ! ಎಲ್ಲೋ ರಾಜ್ಯೋತ್ಸವಕ್ಕೋ ಇನ್ನಾವಾಗಲೋ ಸುಮ್ಮನೆ ಒಂದು ತಾಸಿನ ಮಟ್ಟಿಗೆ ಯಾರಾದರೂ ಸಾಹಿತೀನ ಕರಕೊಂಡು ಮಾತನಾಡಿಸೋದು ಬಿಟ್ಟರೆ, ವರ್ಷಪೂರ್ತಿ ಇವರಿಗೆ ಸಿನಿಮಾ ತಾರೆಯರೇ ಆರಾಧ್ಯ ದೈವಗಳು!
ಇನ್ನು ಇವುಗಳು ಮಾಡುವ ಕನ್ನಡ ಕೊಲೆಯ ಬಗ್ಗೆ ಮಾತಾಡೋಕೆ ಹೊರಟರೆ , ಈ ಜಾಗ ಸಾಕಾಗದು. ಅದರ ಬಗ್ಗೆ ಬೇರೆಯದಾಗೇ ಬರೆಯಬೇಕು!
ಬೆಂಗಳೂರಿನಾದ್ಯಂತ ಈಗ ಹೆಚ್ಚಿನ ಜನ ಈ ಎಫ್ ಎಮ್ ಗಳನ್ನ ಕೇಳುತ್ತಾರೆ. BMTC ಬಸ್ಸಿನ ಡ್ರೈವರಿಂದ ಹಿಡಿದು, ಜ್ಯೂಸಿನಂಗಡಿ ಹುಡುಗನ ವರೆಗೆ! ಸಾಫ್ಟ್ ವೇರ್ ಹುಡುಗರಿಂದ ತೊಡಗಿ ಮನೆಗೆಲಸದ ಹುಡುಗಿಯವರೆಗೆ! ಈ ಚಾನಲ್ಲುಗಳು ನಮ್ಮ ತನದ ಬಗ್ಗೆ, ನಾಡು ನುಡಿಯ ಬಗ್ಗೆ, ಸಾಹಿತ್ಯ - ಸಂಸ್ಕೃತಿಯ ಬಗ್ಗೆ ಕಾರ್ಯಕ್ರಮ ಮಾಡಿದ್ದಿದ್ದರೆ ಎಷ್ಟು ಸುಂದರವಾದ ಒಂದು ಜಾಲ ಹಬ್ಬಿದಂತಾಗುತ್ತಿತ್ತು, ಅಲ್ಲವೆ?!
ಬಾಲಿಶತನದ ಕೆಲಸಕ್ಕೆ ಬಾರದ ಹಲುಬುವಿಕೆಗಳನ್ನ ಕಡಿಮೆ ಮಾಡಿ ಸ್ವಲ್ಪವಾದರೂ ಸಮಯವನ್ನ ದಿನದೆ ಬೇರೆ ಬೇರೆ ಹೊತ್ತು ಒಳ್ಳೆಯ , ಸದಭಿರುಚಿಯ ಕಾರ್ಯಕ್ರಮಗಳಿಗೆ ಮೀಸಲಿಟ್ಟಿದ್ದರೆ.. ( ಈಗ ಎಲ್ಲೊ ಒಂದೆರಡು ಕಾರ್ಯಕ್ರಮಗಳಿವೆ, ಅಂತಾದ್ದು) ಎಷ್ಟು ಚೆನ್ನಿತ್ತು!.

ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?!.

  • ಚಿಂತನೆ
~.~
  • Login or register to post comments
  • 857 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 8, 2006 - 10:01pm — naveenbm

ಎಫ್-ಎಂಗಳಂತೆ ಇಂದಿನ ಟಿವಿ ಚಾನೆಲ್‌ಗಳೂ

naveenbm's picture

ಸರಿಯಾಗಿ ಹೇಳಿದಿರಿ..ಟಿವಿ ಚಾನೆಲ್‌ಗಳೂ ಇದಕ್ಕೆ ಕಮ್ಮಿ ಇಲ್ಲ...ವೀಕ್ಷಕರನ್ನು ದಿನಕ್ಕೊಂದು ಪ್ರಶ್ನೆ ಕೇಳಿ ಅವರ ಅಭಿಪ್ರಾಯ ಸಂಗ್ರಹ. ಇದರಿಂದ ಯಾವ ಪುರುಷಾರ್ಥ ಸಾಧಿಸಿದಂತಾಗುತ್ತದೋ ತಿಳಿಯದು.. ಇಂದು ಒಂದು ಆಂಗ್ಲ ಟೀವಿ ಚಾನಲ್‌ನಲ್ಲಿ ಜನರನ್ನು ಕೇಳಿದ ಪ್ರಶ್ನೆ...ಅಮೇರಿಕಾದಲ್ಲಿ ಡೆಮೋಕ್ರಾಟರು ಗೆದ್ದಿರುವುದರಿಂದ ಭಾರತದೊಡನೆ ಅಮೇರಿಕಾ ಪರಮಾಣು ಒಪ್ಪಂದಕ್ಕೇನಾಗುತ್ತದೆ..ಭಾರತದ ಸಾಮನ್ಯ ಜನರೇನು ಅಮೇರಿಕಾದ ರಾಜಕೀಯ ವಿಶ್ಲೇಷಕರೇ!!!

-- ನವೀನ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 8, 2006 - 11:40pm — hpn

ಸಾಧನೆಯ ಮಾಪನ

hpn's picture

ನವೀನ್ ಪ್ರಶ್ನೆ ಕೇಳುವುದರಿಂದ ಹಾಗೂ ಉತ್ತರಗಳನ್ನು ಪಡೆಯುವುದರಿಂದ ಅವರಿಗೆ ಸಾಕಷ್ಟು ಉಪಯೋಗವಾಗುತ್ತದೆ. ಅವರಿಗೆ ಅದು ಅತಿ ದೊಡ್ಡ ಸಾಧಕ ಮಾಪನ!

ಒಂದು ಕಾರ್ಯಕ್ರಮವನ್ನು ಎಷ್ಟು ಜನ ನೋಡುತ್ತಿದ್ದಾರೆ ಎಂದು ಕಂಡು ಹಿಡಿಯುವುದು ಅವರಿಗೆ ಬಹಳ ಕಷ್ಟದ ಕೆಲಸ (ಟಿ ಅರ್ ಪಿ ಇದೆ, ಆದರೆ ಅದು ಕೂಡ ನಿಜ ಸ್ಥಿತಿ ಹೇಳೋದಿಲ್ಲ). ಹೀಗಾಗಿ ಎಸ್ ಎಮ್ ಎಸ್ ಕಳುಹಿಸಿ, ಈ-ಮೇಯ್ಲ್ ಕಳುಹಿಸಿ, ಕಳುಹಿಸಿದವರಿಗೆ ಬಹುಮಾನ ಎಂದೆಲ್ಲ ಮಾಡುತ್ತಾರೆ - ಇದು ಮಾರ್ಕೆಟಿಂಗ್.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 13, 2006 - 6:35pm — uniquesupri

ಎಫ್ ಎಮ್ ಅವತಾರ

uniquesupri's picture

ಎಫ್ ಎಮ್ ಚಾನಲ್‍ಗಳ ಬಗ್ಗೆ ನಿಮ್ಮ ಬರಹ ಒದಿದೆ. ನನ್ನ ಪ್ರಕಾರ ಇವುಗಳಿಗೆ ಬದ್ಧತೆ ಎಮ್ಬುದೇ ಇಲ್ಲ. ಅಗ್ಗದ ಮನರಂಜನೆಯ ಮೂಲಕ, ಕೇವಲ ವ್ಯಾಪಾರಿ ಮನೋಭಾವದಿಂದ ನಡೆಸಲ್ಪಡುವ ಇವುಗಳು ಜಂಕ್ ಎನ್ನಿಸಿಕೊಳ್ಳಲು ತಕ್ಕನೆಯವು. ಆದರೂ ಅಪವಾದಕ್ಕೆಂಬಂತೆ ಅಲ್ಲಲ್ಲಿ ಒಳ್ಳೆಯ ಕಾರ್ಯಕ್ರಮಗಳು ಪ್ರಸಾರವಾಗ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 9, 2006 - 1:02am — pradeepkishore

ಪ್ರತಿ smsಗೆ

pradeepkishore's picture

ಪ್ರತಿ smsಗೆ ಮೂರು ರುಪಾಯಿಯಂತೆ, ಇದರಿಂದ ಅವರಿಗೆ ನಷ್ಟವೀನಿಲ್ಲ ಬಿಡಿ.
೧೦೦೦೦ ಜನ ರೆಪ್ಲೈ ಮಾಡಿದರೆ, ೩೦೦೦೦ ಸಾವಿರ ರೂ!!
ಇದಕ್ಕಿಂತ ಸುಲಭ income ಇನ್ನೆಲ್ಲಿದೆ?

--
btbytes.com - bytes of Bangalore, Kannada and Open Source.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 9, 2006 - 12:37pm — Sunil Jayaprakash

ಜ್ಯೂಸ್ ನಾಗ ಮತ್ತು ಅಯ್ಯಯ್ಯೋ

Sunil Jayaprakash's picture

ನಿಮಗೆ ತಿಳಿದಿರಬಹುದು, ಸರಕಾರಿ ಸ್ವಾಮ್ಯದಲ್ಲಿ ಅಯ್ಯಯ್ಯೋ(ಅದು ದಿಟವಾಗಿ AIR ಎಂಬುದಾಗಿ, ಆದರೆ ಅವರ ರಾಗವಾಗಿ ಹಾಡುವಾಗ ಅಯ್ಯಯ್ಯೋ ಎಂಬಂತೆ ಕೇಳಿದಂತಾಗುತ್ತದೆ.) ಎಫ್.ಎಮ್.ರೇನ್ಬೋ ಕೇಳುತ್ತೀರಾದರೆ, ಎರಡು ಹೆಸರುಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇ ಬೇಕು.

೧. ಕಬಾಡಿಯಿಂದ(ಅದು ಕಬಾಡಿ ಇಂದ್ರ ಇರಬಹುದು) ವೆಂಕಟೇಶ್.
೨. ಜ್ಹೂಸ್(ಅಥವಾ ಜ್ಯೂಸ್) ನಾಗ.

ಇವರಿಬ್ಬರು ಯಾವುದೇ, ಕಾರ್ಯಕ್ರಮವಿರಲಿ, ತಪ್ಪದೇ ಕರೆ ಮಾಡುತ್ತಾರೆ. ನಾನು ಇವರಿಬ್ಬರಲ್ಲಿ, ಜ್ಯೂಸ್ ನಾಗನನ್ನು ಭೇಟಿ ಮಾಡಿರುವೆ. ಇವನದು, ಬನಶಂಕರಿ ಎರಡನೇ ಹಂತದಲ್ಲಿರುವ ಬಿ.ಡಿ.ಎ ಕಾಂಪ್ಲೆಕ್ಸ್ ಬಳಿ ಒಂದು ಜ್ಯೂಸ್ ಅಂಗಡಿ ಇದೆ. ತುಂಬಾ ಚೆನ್ನಾಗಿ ಮಾತನ್ನಾಡುತ್ತಾನೆ.

ಅಂದ ಹಾಗೆ ನನ್ನ ಗೆಳೆಯನೊಬ್ಬ ಹೇಳಿದ, "೮ ಅಲ್ಲ ೧೦ ಎಫ್.ಎಮ್. ಚಾನಲ್ಲುಗಳಿವೆ" ಎಂಬುದಾಗಿ. ಅದರಲ್ಲಿ ಸರಕಾರದವರದು ೩ ಅಂತೆ. ಅಮೃತವರ್ಷಣಿ, ರೇನ್ಬೋ, ಮತ್ತು ವಿವಿಧಭಾರತಿ.

ಅದೆಲ್ಲಾ, ಇರಲಿ, ಇನ್ನೊಂದು ೨೪ ಘಂಟೆ ಕನ್ನಡ ಹಾಡುಗಳನ್ನು ಹಾಕುವ ಚಾನೆಲ್ ಇದೆ. ತಮಾಷೆಯೆಂದರೆ ಮೊನ್ನೆ ಮಧ್ಯರಾತ್ರಿ ೨:೦೦ ಘಂಟೆಗೆ ಎಚ್ಚರವಾದಾಗ, ಗಮನಿಸಿದೆ, ನನ್ನ ತಮ್ಮ ರೇಡಿಯೋ ಆಫ್, ಮಾಡದೆ ಮಲಗಿದ್ದ. ಆದರೆ ಅಚ್ಚರಿಯೆಂದರೆ, ಆಗಲೂ ಲೈವ್ ಕಾರ್ಯಕ್ರಮ ಬರುತ್ತಿತ್ತು, ಕನ್ನಡದಲ್ಲಿ. ಮಧ್ಯೆ ಮಧ್ಯೆ ಆಚಮನೀಯಂ ಆಚಮನೀಯಂ ಸಮರ್ಪಯಾಮಿ ಎನ್ನುವಂತೆ ಅವರುಗಳು ಮಸ್ತ್ ಮಜ್ಜಾ ಮಾಡಿ ಅಂತ ಪದೇ ಪದೇ ಉಲಿಯುತ್ತಿದ್ದರು.

ಆಗಲೂ ಅವನು ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದ. ನೀವು ಚಿನ್ನದ ನಾಣ್ಯ ಗೆಲ್ಲಬೇಕಾದರೆ, ಕರೆ ಮಾಡಿ ******* ಎಂದ. ನಾನು ಅರ್ಧ ಘಂಟೆ ಜತುನಗೈದೆ. ನನಗೆ ಎಂದೂ ಕೂಡ, ಯಾವ ಚಾನೆಲ್ಲಿನಲ್ಲಿಯೂ ಲೈನ್ ಸಿಕ್ಕಿಲ್ಲ, ಎಸ್.ಎಮ್.ಎಸ್ ಅಂತೂ ನಾನು ಎಂದೂ ಕಳುಹಿಸುವುದಿಲ್ಲ. ಯಾವಾಗ ಮಾಡಿದರೂ, "ಇಸ್, ಮಾರ್ಗೆ ಕೆ ಸಭೀ ಲೈನೇ......" ಬರುತ್ತದೆ. ಸರಿ ಈ ಸರಿರಾತ್ರಿಯಾದರೂ ಸಿಗಬಹುದು ಎಂದು ಮಾಡಿದರೆ ಮತ್ತದೇ, "ಇಸ್, ಮಾರ್ಗೆ ಕೆ ಸಭೀ ಲೈನೇ......". ಸದ್ಯ, ನನ್ನಂತ ಬಕ್ರಗಳು ಬಹಳಷ್ಟಿದ್ದಾರೆ ಎಂದು ನನಗೆ ನಾನೇ ಸಮಾಧಾನ ಮಾಡಿಕೊಂಡು ಸುಸ್ತಾಗಿ ರೇಡಿಯೋ ಆರಿಸಿ ಮಲಗಿದೆ.

ಅಲ್ಲ ಸರಿ ರಾತ್ರಿಯಲ್ಲೂ  ಫೋನ್ ಮಾಡುವವರು ಇದ್ದಾರೆ ಎಂದರೆ ನಂಬುವುದ ಸ್ವಲ್ಪ ಕಷ್ಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 10, 2006 - 11:39am — Sunil Jayaprakash

ಯಾರಿಗೂ ಹೇಳಬಾರದ್ದ್ದು

Sunil Jayaprakash's picture

ಏನು ಮಾಡುವುದು ಆದರೂ ಹೇಳಲೇಬೇಕಲ್ಲ. ನೆನ್ನೆ ರಾತ್ರಿ ಸರಿಸುಮಾರು ೧೧:೦೫ ಘಂಟೆಗೆ ಒಂದು ಎಫ್.ಎಂ.ಚಾನೆಲ್ ಹಾಕಿದೆ. ಯಾವುದೆಂದರೆ, ನುಕ್ಕು ನಗಿಸಿ ...ಅನ್ನುವ ಧಾಟಿಯಲ್ಲಿ ಬರುತ್ತದೆಯಲ್ಲ ಅದು. 'ಎ' ಟಿ.ವಿಯಲ್ಲಿ ಗಾಂಪ.ಪಾಂಡು ಎಂಬ ಧಾರಾವಾಹಿ ಬರುತ್ತಿತ್ತಲ್ಲ ಅದರಲ್ಲಿ, ನಮ್ಮೆಲ್ಲರ ಶ್ರೀಮತಿಯವರೂ ಮಾಡುತ್ತಿದ್ದರು ಎಂಬುದು ನಿಮ್ಮೆಲ್ಲರ ಗಮನದಲ್ಲಿದೆಯೆಂದುಕೊಂಡಿದ್ದೇನೆ. ಅದೇ ಶ್ರೀಮತಿಯೇ ನಡೆಸಿಕೊಡುವುದು ಈ ಕಾರ್ಯಕ್ರಮವನ್ನು, ನೆನ್ನೆ ನಮ್ಮೆಲ್ಲರ ಶ್ರೀಮತಿ ಹೇಳಿದ್ದನ್ನು ದಂಗುಬಡಿದಂತಾಯಿತು. ಆಕೆ ಏನು ಹೇಳಿದಳು ಗೊತ್ತೇ.? ಹೇಳುವ ಮೊದಲೇ ತಿಳಿಸಿಬಿಡುತ್ತೇನೆ ಆಕೆಯ ದನಿ ಮೆತ್ತಗಿತ್ತು.

"ಯಾರಿಗೂ ಹೇಳಿಕೊಳ್ಳಲಾಗದ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ ?. ಉದಾ - .......ಮದುವೆಯಾಗಿ ಗಂಡ ಇದ್ದರೂ ಬೇರೊಬ್ಬನ್ನ ಇಷ್ಟಪಟ್ಟೀದ್ದೀರೆ ?. ಹಾಗಿದ್ದರೆ ಕರೆ ಮಾಡಿ, ನಿಮ್ಮ ಅನಿಸಿಕೆಯನ್ನು ನಮ್ಮೊಡನೆ ಹಂಚಿಕೊಳ್ಳಿ. ನಮ್ಮ ನಂ.********...ಗಪ್ ಚುಪ್"

ನಮ್ಮ ಮಹಿಳಾ NGOಗಳು ಎಲ್ಲಿರುವರೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 10, 2006 - 1:09pm — shreenidhi

ಇನ್ನೊಂದಿಷ್ಟು ಉದಾಹರಣೆಗಳು

shreenidhi's picture

ಈ ಎಫ್ ಎಮ್ ಗಳ ಹುಚ್ಚಾಟ ದ ಬರಿಯೋಕೆ ಹೊರಟರೆ ಥಾನುಗಟ್ಟಲೆ ಬರೀ ಬಹುದು ! ನಿನ್ನೆ ಬೆಳಗ್ಗೆ ಒಂದು ಚಾನಲಿನ RJ ಅನು ಪ್ರಭಾಕರ್ ಗೆ phone ಮಾಡಿ "ಬರ್ತ್ ಡೇ ಬಕ್ರಾ" ಮಾಡ್ತಾ ಇದ್ದ, ಪಾಪ ಅವಳು ಜ್ವರ ಅಂತ ಮನೇಲಿ ಮಲಗಿದ್ಲಂತೆ! ಅದ್ರೂ ಆಸಾಮಿ ಅವಳನ್ನ ಬಿಡೋಕೇ ತಯಾರಿಲ್ಲ!
"ಬ್ಲೇಡ್ ರಾಜ ", "ಮಂಗ್ಳ್ಳೂರ್ ಮಾಣಿ, ಲಂಡನ್ ರಾಣಿ" ಇವೆಲ್ಲ ಕಾರ್ಯಕ್ರಮಗಳ ಹೆಸರುಗಳು!

ನಮ್ಮ ಬೆಂಗಳೂರಿಗರ ಕತೆ ಏನಾಗಿದೆ ಅಂದ್ರೆ, ಒಳ್ಳೆ ಕಾರ್ಯಕ್ರಮ ಬೇಕಾ ಅಂತ ಆಲೋಚ್ನೆ ಮಾಡೋಕೂ ಯಾರಿಗೂ ಸಮಯ ಇಲ್ಲ! ತೀರಾ ಬಾಲಿಶ, ಹಾಸ್ಯಾಸ್ಪದ ಕಾರ್ಯಕ್ರಮಗಳಿಂದಲೇ ತೃಪಭಾವ ಹೊಂದಿ , ಆರಾಮಾಗಿದ್ದಾರೆ.ಏನು ಮಾಡೋಣ!

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.
http://shree-lazyguy.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2006 - 5:07am — kannadiga_1956

hindi beda kannada beku

kannadiga_1956's picture

sorry for writing in english. spread this message to all kannadigas 

By learning/speaking in Hindi we are not getting benefitted in any way. In Job English is enough. Only benefit we have got is that we are able to understand when Hindiwallas rudicule our language, Culture, etc.
By Learning and speaking in Hindi, we are increasing market for them in everything from TV Channels, Films, Music albums. We maybe doing this from Patriotism point of view, but they always think "We ourselves dont like Kannada, and feel free to talk against kannada in front of us". No wonder Hindi entertainment field is growing as they have huge market and at what cost ??  at the cost of Kannada market.  In recent years no good Books, Music or Films are forthcoming in Kannada because not many creative people are in that field. Creative people are going into other fields as there is no money in whatever that is kannada. There is no Money because our kannada market is very small.  In This Capitalist Economy Market decides everything.  If we do not consolidate our market atleast now, kannada will be washed away. 

Few Things which I feel is good: 

- Let us not speak Hindi anywhere in Bangalore or Karnataka. Let us stick to Kannada and limit English only to office as much as possible.
- Let us subcribe to atleast 1 kannada Newspaper
- Let us BAN "Times of India" all over karnataka. That is no-1 anti Kannada paper. This way let the message go to all anti-kannada businesses.  Deccan Herald is the good choice as it is Karnataka Newspaper.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2006 - 8:23pm — honnung

FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ

honnung's picture

ಇವತ್ತು ಅದರ ಬಗ್ಗೆ ಜಾಹೀರಾತು ಕೇಳಿದೆ.

ಪ್ರತಿ ದಿನ ಬೆಳಿಗ್ಗೆ 8 ಗಂಟೆಗೆ FM Rainbow ನಲ್ಲಿ.

ಇದನ್ನು ಯಾರಾದರೂ ಕೇಳಿದ್ದೀರಾ?
-----
ಶಶಿಧರ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 29, 2006 - 6:13pm — shreenidhi

Re: FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ

shreenidhi's picture

ನಾನು ನಿತ್ಯವೂ ಕೇಳುತ್ತೇನೆ, ಕಾರ್ಯಕ್ರಮ ಸೊಗಸಾಗಿದೆ. ರವಿ ಬೆಳಗೆರೆ ಉತ್ತಮ ಮಾತುಗಾರ.ಮನಸ್ಸಿಗೆ ಮುಟ್ಟುವಂತೆ, ಸಲಹೆ, ಸಮಾಧಾನ ನೀಡುತ್ತಾರೆ, ಒಳ್ಳೆಯ ಹಳೆಯ ಗೀತೆಗಳು ಪ್ರಸಾರವಾಗುತ್ತವೆ.. ಒಟ್ಟಿನಲ್ಲಿ ಚೆನ್ನಾಗಿ ಮೂಡಿಬರುತ್ತಿದೆ.

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ.
http://shree-lazyguy.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 14, 2006 - 12:01pm — nmshyam

Re: FM ಕಾಮನಬಿಲ್ಲುವಿನಲ್ಲಿ ರವಿ ಬೆಳಗೆರೆ ಕಾರ್ಯಕ್ರಮ

nmshyam's picture

ಬಹಳ ಸಾರಿ ಕೇಳಿದ್ದೇನೆ ಮತ್ತು ಕೇಳುತ್ತಿರುತ್ತೇನೆ.
ಇಲ್ಲಿ ವಿಷೇಶವೇನೆಂದರೆ, ಬೇರೆ channelಗಳ ರೀತಿ, celebrities ಮಾತಾಡುವುದಕ್ಕೆ ಮಾತ್ರಾ ಸೀಮಿತವಲ್ಲದೆ, ಅವರ ಇಷ್ಟದ ಹಾಡುಗಳನ್ನು ಪ್ರಸಾರ ಮಾಡುತ್ತಾರೆ. ಅದರಲ್ಲೂ, ರವಿ ಬೆಳಗೆರೆ ಟಿವಿಯಲ್ಲಿ ನೆಡೆಸಿಕೊಡುತ್ತಿದ್ದ ಹಾಡುಗಳ ಕಾರ್ಯಕ್ರಮ ನೋಡಿದ್ದವರಿಗೆ ಅವರ ಶೈಲಿ ಗೊತ್ತೇ ಇರುತ್ತೆ.
ಒಳ್ಳೊಳ್ಳೆಯ ಹಳೇ ಹಾಡುಗಳು, ಭಾವಗೀತೆಗಳು ಬರುತ್ತವೆ. ಕೊನೆಯಲ್ಲಿ, "ಭವಿಷ್ಯವಲ್ಲದ ಭವಿಷ್ಯ" ಅವರದೇ ಧಾಟಿಯಲ್ಲಿ ಹೇಳುತ್ತಾರೆ.

ಒಟ್ಟಿನಲ್ಲಿ, ಮೇಲೆಲ್ಲರೂ ಹೇಳಿದಂತೆ monotonous ಆಗಿರುವ ಮತ್ತು ಎಳೆನಿಂಬೆಕಾಯಿಯಂಥ ಆರ್.ಜೆ ಗಳಿಗಿಂತ, ಜೀವನಾನುಭವ, ಒಳ್ಳೆಯ talent ಇರುವ "ರವಿ ಬೆಳಗೆರೆ at 8AM - ಓ ಮನಸೇ" ಕಾರ್ಯಕ್ರಮ ನಿಜಕ್ಕೂ ಕೇಳಬೇಕಾದಂತಹುದು.

ಕೊನೆಯಲ್ಲಿ ಅವರದೇ ಸ್ಟೈಲ್ ನಲ್ಲಿ - "have a wooooonderful day"
-ನಮಸ್ತೆ
ಮೇಘಶ್ಯಾಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರೇಡಿಯೋ ಪುರಾಣ...
  • ನಮ್ಮಧ್ವನಿ
  • ಓಕಳಿಪುರಂ
  • ರಾರಾಜಿಸುತ್ತಿದೆ ಕನ್ನಡ ಚಿತ್ರ ಸಂಗೀತ !!!
  • ಬರಹ ಕ್ರಾಂತಿ!
Syndicate content

ಲೇಖಕರು

shreenidhi's picture

ಪರಿಚಯ

ನಾನು ಶ್ರೀನಿಧಿ. ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ, ಮಾನವ ಸಂಪನ್ಮೂಲ (HR )ವಿಭಾಗದಲ್ಲಿ ಉದ್ಯೋಗಿ. ಕಥೆ, ಕವನ ಬರೆಯುವಿಕೆ ಹವ್ಯಾಸ. ಮೂಲತ: ಮಂಗಳೂರಿನವನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಲ್ಯದ ನೆನಪುಗಳು
  • ಖಾಲಿ ಹಾಳೆ"
  • ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಜೀವ ಕಾಯುವುದೇತಕೆ?
  • ಅಮೆರಿಕದ ಸಾರ್ವಜನಿಕ ಸಂಸ್ಥೆಗಳು-೧

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ನಾನು ನಿಜವಾಗಿಯು ಹುಚ್ಚಾನ?
    September 8, 2008 - 4:06pm
  • girish.rajanal
    ಉ: ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
    September 8, 2008 - 3:32pm
  • kannadakanda
    ಉ: ಎಲ್ಲ ಓಕೆ ಹಿಂದಿ ಹೇರಿಕೆ ಯಾಕೆ
    September 8, 2008 - 3:26pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 3:14pm
  • vikashegde
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:53pm
  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:52pm
  • Jayalaxmi.Patil
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 2:37pm
  • kannadakanda
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 2:30pm
  • kannadakanda
    ಉ: ಮುರಿ, ಮುಱಿ
    September 8, 2008 - 2:26pm
  • girish.rajanal
    ಉ: ನೀನು ನಾನು ಜೋಡಿ
    September 8, 2008 - 2:21pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 141 ಅತಿಥಿಗಳು ಆನ್ಲೈನ್ ಇರುವರು.


ಪ್ರತ್ಯಕ್ಷವಿಲ್ಲದಾ ಸ್ವಾಮಿಯಂ ನೆನೆನೆನೆದು |
ಸತ್ಯಭಕ್ತಿಯ ಸೇವೆಗೆಯ್ದವಂ ಭರತಂ ||
ನಿತ್ಯಜೀವನದಿ ನೀನಾ ನಯವನನುಸರಿಸೊ |
ಸತ್ವದಾಶೆಯ ನೀಗಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator