March 30, 2010 - 4:24pm
ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ ಸಮಯದಲ್ಲಿ ನಿರ್ವಹಣಾ ತಂಡವು ಸಂಪದ ಆರ್ಕೈವಿನಿಂದ ಹಲವು ಲೇಖನಗಳನ್ನು ಆಯ್ಕೆ ಮಾಡಿ ಕೆಳಗಿನ ಪಟ್ಟಿಗೆ ಸೇರಿಸುತ್ತಿದೆ:
ಹೀಗೆ ಆಯ್ಕೆಯಾದ ಪುಟಗಳನ್ನು ಸೇರಿಸಿದ ಸದಸ್ಯರಿಗೆ ಆಯ್ಕೆಯಾದ ಪ್ರತಿ ಪುಟಕ್ಕೂ ಮೇಲಿನಂತೆ ಇ-ಮೇಯ್ಲ್ ತಲುಪುತ್ತಿದೆ. ಸಂಪದದ ಪುಟಗಳಲ್ಲಿ ಪ್ರಕಟವಾಗುವ ಕೆಲವು ಉತ್ತಮ ಹಾಗು ಸಧಬಿರುಚಿಯ ಲೇಖನಗಳನ್ನು ಆಯ್ದು ಪಟ್ಟಿ ಮಾಡುವ ಪ್ರಯತ್ನ ಇದು. ಹೀಗೆ ಆರ್ಕೈವಿನಿಂದ ಆಯ್ಕೆಯಾದ ಲೇಖನಗಳಲ್ಲಿ ಒಂದನ್ನು ಆಯ್ದು ಸಂಪದದ ಮುಖಪುಟದಲ್ಲಿ ಪ್ರಕಟಿಸುವ ಉದ್ದೇಶವಿದೆ.
ಸೂ: ಈ ಕಾರ್ಯದಲ್ಲಿ ನೀವೂ ಪಾಲ್ಗೊಳ್ಳಬಹುದು. ಸಂಪದ ಆರ್ಕೈವಿನಲ್ಲಿ ನಿಮಗೆ ಕಂಡು ಬಂದ ಉತ್ತಮ ಲೇಖನವನ್ನು ಈ ಪುಟದಲ್ಲಿ ಪ್ರತಿಕ್ರಿಯೆ ಮೂಲಕ ಸೂಚಿಸಬಹುದು. ಅಂತಿಮ ನಿರ್ಧಾರ ಸಂಪದ ನಿರ್ವಹಣೆ ತಂಡದ್ದು. ಸಂಪದ ಆರ್ಕೈವ್ ವೀಕ್ಷಿಸಲು ಕೆಳಗಿನ ಲಿಂಕ್ ನೋಡಿ:





ಪ್ರತಿಕ್ರಿಯೆಗಳು
ಲೇಖನಗಳನ್ನ 'ಆಯಲು' ಏನು ಮಾನದಂಡ?
ಲೇಖನಗಳನ್ನ 'ಆಯಲು' ಏನು ಮಾನದಂಡ? ಯಾವ್ ರೀತಿ ಇರಬೇಕು ಅಂತೆಲ್ಲ ಗೊತ್ತಾದ್ರೆ ಒಳ್ಳೆಯದಿತ್ತು.
ಸ೦ಪದ ನಿರ್ವಾಹಕರಿಗೆ ನನ್ನ
ಸ೦ಪದ ನಿರ್ವಾಹಕರಿಗೆ ನನ್ನ ನಮಸ್ಕಾರ.
ಶೆಟ್ರು ಕೇಳಿದ೦ತೆ ನನ್ನದೂ ಅದೇ ಪ್ರಶ್ನೆ? ವಿಶೇಷ ಲೇಖನಗಳೆ೦ದರೇನು? ಅವುಗಳನ್ನು ವಿಶೇಷವೆ೦ದು ಹೇಗೆ ವರ್ಗೀಕರಿಸುತ್ತೀರಿ? ಏಕೆ೦ದರೆ ನಿಮ್ಮ ವಿಶೇಷ ಲೇಖನಗಳ ಪಟ್ಟಿಯಲ್ಲಿ ಇರುವ ಲೇಖನಗಳನ್ನು ಬಿಟ್ಟು ಮತ್ತೆಲ್ಲವೂ ಅ-ವಿಶೇಷ ಲೇಖನಗಳೇ? ಬೇಸರಿಸುವ ಕಾರಣವಿಲ್ಲ. ನನ್ನ ಕುತೂಹಲದ ಪ್ರಶ್ನೆಯಷ್ಟೇ! ಆದ್ದರಿ೦ದ ಮಾನದ೦ಡಗಳ ಬಗ್ಗೆ ತಿಳಿಸಿದರೆ ಈ ಪ್ರಶ್ನೆಗಳೆಲ್ಲ ಅರ್ಥ ಕಳೆದುಕೊಳ್ಳುತ್ತವಲ್ಲವೇ?