ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪತಂಜಲಿಯ ಯೋಗ ಭಾಗ ೫

August 26, 2005 - 6:44pm — R M Rao

ಪತಂಜಲಿಯ ಯೋಗ ಭಾಗ ೫
ಐದನೆಯ ಲೇಖನ
ಬಾಹ್ಯ ಸಂವೇದನೆಗಳಿಂದ ಬರುವ ವೃತ್ತಿಗಳನ್ನು ತಡೆಯುವ ಬಗೆಯನ್ನು ಸಮಾಧಿ ಪಾದದಲ್ಲಿ ನೋಡಿದೆವು. ಆದರೆ ಮನದೊಳಗೇ ಇರುವ ಕ್ಲೇಷಗಳಿಂದ ಒಳಗೇ ವೃತ್ತಿಗಳು ಏಳುತ್ತದೆ. ಆ ವೃತ್ತಿಗಳನ್ನೂ ತಡೆಯುವುದನ್ನು ಸಾಧನ ಪಾದದಲ್ಲಿ ಕಲಿಯಬಹುದು.
ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರನ ಬಗ್ಗೆ ಆಳವಾದ ಚಿಂತನೆ ಕ್ರಿಯಾಯೋಗ.ಯೋಗ ಸೂತ್ರ ಪಾದ೨. ಸೂತ್ರ.೧ ಇಲ್ಲಿ ತಪಸ್ಸು ಎಂದರೆ ದೇಹಕ್ಕೆ ತೊಂದರೆಯಾದರೂ ಮನಸ್ಸು ಚಂಚಲವಾಗದ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನ. ಸ್ವಾಧ್ಯಾಯ ಎಂದರೆ ಬರೀ ಓದುವುದಲ್ಲ;ಓದಿದುದನ್ನು ಒರೆಗೆ ಹಚ್ಚಿ ಅದು ಸತ್ಯ ಎಂದು ಮನವರಿಕೆ ಮಾಡಿಕೊಳ್ಳುವುದು. ಅದೇ ಸಾಧನೆ. ಅದಕ್ಕೂ ಆಳವಾದ ಚಿಂತನೆ ಅಗತ್ಯ.
ಕ್ರಿಯಾಯೋಗದ ಅಗತ್ಯವೇನು ಎಂಬುದನ್ನು ಯೋ.ಸೂ.ಪಾದ೨. ಸೂತ್ರ.೨ ಹೇಳುತ್ತದೆ.
ಮನಸ್ಸನ್ನು ಸಮಾಧಿಗೆ ಅಣಿಗೂಳಿಸಲು ಮತ್ತು ಮನಸ್ಸಿನಲ್ಲಿ ಇರುವ ಕ್ಲೇಷಗಳನ್ನು ತನೂಕರಣಗೊಳಿಸುವುದಕ್ಕಾಗಿ ಕ್ರಿಯಾಯೋಗವನ್ನು ಮಾಡಬೇಕು. ಯೋ.ಸೂ.ಪಾದ೨. ಸೂತ್ರ.೩. ತನೂಕರಣ ಎಂಬುದಕ್ಕೆ ಅ‌ರ್ಥ ಯೋಗದ ಪರಿಭಾಷೆಯಲ್ಲಿಯೇ ಹೇಳುವುದಾದರೆ ಸುಟ್ಟ ಬೀಜಗಳಂತೆ ಮಾಡುವುದು ಎಂದು. ಸುಟ್ಟ ಬೀಜಗಳು ಹುಟ್ಟುವ ಸಾಮ‍ರ್ಥ್ಯ ಕಳೆದುಕೊಂಡಿರುವಂತೆ ತನೂಕರಣಗೊಳಿಸಿದ ಕ್ಲೇಷಗಳು ಯೋಗದ ಪ್ರಗತಿಗೆ ಅಡ್ಡಿಯಾಗುವುದಿಲ್ಲ.
ಅವಿದ್ಯಾ, ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶಗಳೇ ಐದು ಕ್ಲೇಷಗಳು.ಯೋ.ಸೂ.ಪಾದ೨. ಸೂತ್ರ.೪
ಅವಿದ್ಯೆಯು ಹೊಲವಿದ್ದಂತೆ;ಅದರಲ್ಲಿ ಅಸ್ಮಿತ, ರಾಗ, ದ್ವೇಷ ಮತ್ತು ಅಭಿನಿವೇಶಗಳು ಹುಲುಸಾಗಿ ಬೆಳೆಯುತ್ತಲಿರುತ್ತವೆ.ಯೋ.ಸೂ.ಪಾದ೨. ಸೂತ್ರ.೪. ಈ ನಾಲ್ಕೂ ಮನಸ್ಸಿನಲ್ಲಿ ನಾಲ್ಕರಲ್ಲಿ ಒಂದು ಅವಸ್ಥೆಯಲ್ಲಿ ನೆಲಸಿರುತ್ತದೆ. ಆ ಅವಸ್ಥೆಗಳು ಯಾವುವೆಂದರೆ ಉದಾರ(ಮುಕ್ತ-ಪ್ರಕಟವಾಗಲು ಸಿಧ್ಧವಿರುವ), ವಿಚ್ಚಿನ್ನ(ಉದಾರಾವಸ್ಥೆಯ ಕ್ಲೇಷದಿಂದ ತುಳಿಯಲ್ಪಟ್ಟಿರುತ್ತದೆ-ಅವಕಾಶ ಸಿಕ್ಕ ಕೂಡಲೇ ಮೇಲೇಳುತ್ತದೆ), ಪ್ರಸುಪ್ತ(ಇವುಗಳ ಇರುವಿಕೆ ಆಲೋಚಿಸಿದರೂ ಮನಸ್ಸಿಗೂ ನಿಲುಕದು-ಗುಪ್ತ) ಮತ್ತು ಮೇಲೆ ಹೇಳಿದ ತನು ಸ್ಥಿತಿ.
ಅನಿತ್ಯ(ಬದಲಾಗುವ), ಅಶುಚಿ(ಶುಭ್ರವಲ್ಲದ), ದುಃಖ(ಸುಖವಲ್ಲದ), ಅನಾತ್ಮ(ಆತ್ಮವಲ್ಲದುದು)ವನ್ನು ನಿತ್ಯ,ಶುಚಿ,ಸುಖ ಮತ್ತು ಆತ್ಮ ಎಂದು ತಿಳಿಯುವುದೇ ಅವಿದ್ಯೆ.ಯೋ.ಸೂ.ಪಾದ೨. ಸೂತ್ರ.೫. ನಾನು ಎಂದು ಯಾವುದನ್ನು ಗ್ರಹಿಸುತ್ತೇವೆಯೋ ಅದು ಆತ್ಮವಲ್ಲ. ಯಾವುದನ್ನು ಸುಖ ಎಂದು ತಿಳಿದು ಅದರ ಬೆನ್ನು ಹತ್ತು ತ್ತೇವೆಯೋ ಅದು ನಿಜವಾದ ಆನಂದವಲ್ಲ. ಆತ್ಮ ಯಾವಾಗಲೂ ಬದಲಾವಣೆ ಇಲ್ಲದುದು;ಯಾವಾಗಲೂ ಶುಭ್ರ;ಯಾವಾಗಲೂ ಸುಖಿ.ಸಚ್ಚಿದಾನಂದ.
ನೋಡುತ್ತಿರುವ ಅಂಗ(ನನ್ನತನ) ಮತ್ತು ನೋಡುತ್ತಿರುವ ಶಕ್ತಿ ಎರಡೂ ಒಂದೇ ಎಂದು ಅನಿಸುವುದೇ ಅಸ್ಮಿತ. ಯೋ.ಸೂ.ಪಾದ೨. ಸೂತ್ರ.೬
ಸುಖವನ್ನು ಬೆಂಬಿಡದೆ ಬರುವುದು ರಾಗ.ಯೋ.ಸೂ.ಪಾದ೨. ಸೂತ್ರ.೭
ದುಃಖವನ್ನು ಬೆಂಬಿಡದೆ ಬರುವುದು ದ್ವೇಷ.ಯೋ.ಸೂ.ಪಾದ೨. ಸೂತ್ರ.೮
ಪಂಡಿತಪಾಮರರನ್ನೂ ಬಿಡದೆ ತಾನಾಗಿಯೇ ಹುಟ್ಟುವುದು ಸಾವಿನ ಭಯ.ಯೋ.ಸೂ.ಪಾದ೨. ಸೂತ್ರ.೯
ನಾವು ಮಾಡುವ ಪ್ರತಿಯೊಂದು ಕೆಲಸದ ಹಿಂದೆಯೊ ಮನಸ್ಸಿನ ವ್ಯಕ್ತ/ಅವ್ಯಕ್ತ ಪ್ರೇರೇಪಣೆ ಇರುತ್ತದೆ.ಮನಸ್ಸು ಸುಖವನ್ನು ಬಯಸುತ್ತದೆ. ದುಃಖವನ್ನು ದೂರವಿಡಲಿಚ್ಚಿಸುತ್ತದೆ. ಇದಕ್ಕಾಗಿ ವ್ಯಕ್ತಿಗಳ ಜೊತೆ ಸಹವಾಸ ಮಾಡುತ್ತೇವೆ. ಅಧಿಕಾರ, ಧನ, ವಸ್ತು ಇವುಗಳನ್ನು ಸಂಗ್ರಹಿಸುತ್ತೇವೆ. ಇವೆಲ್ಲವೂ ಸಿಕ್ಕರೂ 'ನಾನು ಪೂ‍ರ್ಣ ತೃಪ್ತ. ನನಗೆ ಜೀವಮಾನವಿಡೀ ಇನ್ನೇನೂ ಬೇಡ' ಎಂದೆನುಸುವುದಿಲ್ಲ. ಇನ್ನೇನಿಲ್ಲದಿದ್ದರೂ ವಯಸ್ಸಿನ(ತಾರುಣ್ಯ) ಮತ್ತು ಸಾವಿನ ಭಯವಂತೂ ಮನಸ್ಸಿನಲ್ಲಿ ಹುದುಗಿರುತ್ತದೆ. 'ಬಡತನಕೆ ಉಂಬುವ ಚಿಂತೆ..' ಎಂಬ ವಚನವನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.
ಈ ದುಃಖವನ್ನು ದೂರ ಮಾಡುವ ಬಗೆಯನ್ನು ಮುಂದಿನ ಲೇಖನದಲ್ಲಿ ನೋಡೋಣ.

ಮುಂದುವರೆಯುವುದು...

  • ಅಧ್ಯಾತ್ಮ
~.~
  • Login or register to post comments
  • 670 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪತಂಜಲಿಯ ಯೋಗ ಭಾಗ ೭
  • ಪತಂಜಲಿಯ ಯೋಗ ಭಾಗ ೬
  • ಪತಂಜಲಿಯ ಯೋಗ ಭಾಗ ೩
  • ಪತಂಜಲಿಯ ಯೋಗ ಭಾಗ ೮
  • ಪತಂಜಲಿಯ ಯೋಗ : ಭಾಗ ೨
Syndicate content

ಲೇಖಕರು

R M Rao's picture

ಪರಿಚಯ

ನನ್ನ ಬಗ್ಗೆ ನಾನೇ ಹುಡುಕಾಟ ಪ್ರಾರಂಭ ಮಾಡಿ
ಈಗ ಯೋಗದ ಹಾದಿಯಲ್ಲಿ ಹುಡುಕಾಟ ಮುಂದುವರಿಸಿದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ
  • ಶಾಸಕರ ರಾಜೀನಾಮೆ ರಾಜಕೀಯ
  • ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
  • ಗಿರಿಜನರ ನಾಡು ಕೋರಾಪುಟ್
  • ಹೀಗೇ ಎಂದು ಬರಿ
  • ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
  • ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಒ೦ದೇ ಜನ್ಮದಿ ಬಹು ಜನ್ಮ೦ಗಳ
ಚೆ೦ದವಗಾಣಿಸುವಮಳ ಕಲೆ
ಮ೦ದಿಗೆ ದೇವರ ವರವಲೆ ಅದುವೇ
ಮು೦ದಿನ ಬಿಡುಹುಕು ಹಾನಿಯಲೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator