ಪ್ರೇಮೋದ್ಗಾರ...!!
ಬಂದವಳು ನೀನೆ, ಹೃದಯದ ಬಾಗಿಲ ಬಳಿಯಲಿ
ನಿಂದವಳು ನೀನೆ, ಎನ್ನ ಮನದ ಮಂಟಪದಲಿ
ಕರೆದವಳು ನೀನೆ, ನಿನ್ನ ಸನಿಹದೊಳು ಎನ್ನ
ಮೀಟಿದವಳು ನೀನೆ, ಎನ್ನ ತನುವಿನ ತಂತಿಯನ್ನ
ಬಾಡಿಯೋಯಿತೇಕೆ ನಮ್ಮ ಪ್ರೀತಿಯ ಬಳ್ಳಿ..
ಭಾವ ಭಿಂದುವಿನ ನಡುವೆ ನರಳುತ..
ಆಗಸದ ಅಂಚಿನೊಳು ಮಿಂಚಿಹುದು ಆ ಮೊಗವು
ನಕ್ಷತ್ರವ ನಾಚುವಂತೆ ಮಾಡಿಹುದು ಆ ನಗುವು
ಕುಣಿಯುವ ನವಿಲಿಗು ಕೊರಗು ಕಾಡಿಹುದು
ನಿನ ನಡೆಯ ಸವಿಯನೊಮ್ಮೆ ಸಹಿಸಲಾಗದೆ...!
ಹಾರಿಯೋಯಿತೇಕೆ ನಮ್ಮ ಪ್ರೇಮ ಪತಾಕೆ..
ಅಗಲುತ ಈ ದಣಿದೊಣಗಿದ ದೇಹವ..
ನೋಟವದು ಮೀಟಿಹುದು ಹೃದಯದ ತಳವನು
ಕ್ಷಣದೊಳು ದಾಟಿಹುದು ಜಗದೆಲ್ಲ ಮಾಟವನು
ಭುವಿಯಲೆಲ್ಲ ಸೊಸಿಹುದು ಸಹಿಸಲಾಗದ ಧಗೆಯ
ಸುಡುವ ಸುಳಿಗಾಳಿಯೊಳು ಸವಿಯದಂತಹ ಸೌಂದರ್ಯ..
ಉರಿ ಬೆಂಕಿಯದು ಅಗಲಿಸಿತೇಕೆ ನಮ್ಮನು...
ಕರಗಿಸುತ ನಮ್ಮ ಪ್ರೇಮ ಕಳಶವ..
ನಿನ ತನುವ ತಂಪಿನೊಳು ನಾ ಕಂಡೆ ಕಂಪುನು
ಮುನಿದಿರುವ ಮೌನದಲಿ ಮೊರೆಯಿಡುವ ಮಾತನು
ಜೇನಕಾಣದ ಪಾತರಗಿತ್ತಿಯು ಪೇಚಾಡುತಿದೆ
ಕೋರೈಸುವ ಕೇಂದುಟಿಯ ಕರುಣೆಯನು ಕಾಣದೆ..
ನಾವು ನಿಂತ ನೆಲವದು ದೊರವಯಿತೇಕೆ..
ಒಬ್ಬರೊಬ್ಬರ ಒಡೆದ ಒಡಲನು ಸರಿಸುತ...
ನಡುವದು ಕುಣಿದಿಹುದು ಕಾಮನಬಿಲ್ಲನು ನೆನಸುತ
ನುಲಿತದಲಿ ಪದವಿಲ್ಲದ ಸಪ್ತಸ್ವರವನು ಸಾರುತ
ಮುಂಗುರುಳದು ಜೋಡಿಸಿಹುದು ನಡುವಿನೊಳು ಕೈಯನು
ನಡೆದಂತಲೆ ನಲಿಯುತಿಹುದು ಮರೆಸುತಲಿ ಒಲವನು..
ಬಂದವಳು ನೀನೆ, ಬೆರೆಸುತಲಿ ಭವ್ಯ ಭಾವನೆಯ
ನಿಂದವಳು ನೀನೆ, ನೊಂದ ಮನಕೆ ಜೀವತುಂಬಿ
-ಯುವಪ್ರೇಮಿ

- Login or register to post comments
- 437 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ







RSS:
ಪ್ರತಿಕ್ರಿಯೆಗಳು
Re: ಪ್ರೇಮೋದ್ಗಾರ...!! -ನಾ ಕಂಡೆ ನಿನ್ನ ಮಧುರ...
ಪ್ರೀತಿಯ ಯುವಪ್ರೇಮಿಯವರೇ...
ತಮ್ಮ ಕಾವ್ಯ ಇಲ್ಲ ಕವನ ಬಹಳ ಮೊನಚಾಗಿದೆ.
ಬತ್ತದಿರಲಿ ನಿಮ್ಮ ಬರವಣಿಗೆ,
ಪಸರಿಸಲಿ ನಿಮ್ಮ ಕೀರ್ತಿ ಜಗಕೆ,
ನಾ ಕಂಡು ನಿಮ್ಮ ಹೃದಯ ಶ್ರೀಮಂತಿಕೆ,
ದಂಗಾದೆನು ಈ ಕ್ಷಣ ಮಾತ್ರಕೆ...
All the Best... Please continue...
ನಿಮ್ಮ ಕಾವ್ಯ ಇಲ್ಲ ಕವನಾಭಿಮಾನಿ,
ಶಿವಣ್ಣ.
Re: ಪ್ರೇಮೋದ್ಗಾರ...!! -ನಾ ಕಂಡೆ ನಿನ್ನ ಮಧುರ...
ಮನಸವಿಯುತು ಮಂದಹಾಸ...
ನಿಮ್ಮ ಒಲವಿನ ಮಾತಿನಿಂದ..
ಚಂದ,ಗಂಧ,ಸುಗಂಧಕ್ಕು ಮಿಗಿಲು..
ತಿಳಿದಿದೆ ಹೃದಯವು ಪ್ರೀತಿಯ ಹಂಚಳಲು..
ನಮ್ಮ ನಿಮ್ಮ ಆತ್ಮದ ಬೆಸುಗೆಯಲ್ಲಿ...
ಅನಂತ ವಂದನೆಗಳು ಶಿವ ರವರೆ...
-ಯುವಪ್ರೇಮಿ