18
June
2013

ಅನನ್ಯ ಅಲ್ಲಮ ೪ (೪)

May 14, 2010 - 5:37am
csomsekraiah

" ಹೌದು ,ನಿಮ್ಮ ಬಗ್ಗೆಯೇ , ಬಸವಣ್ಣನವರು ಶರಣರ ಪಡೆಯನ್ನು ಕಟ್ಟಿಕೊಂಡು ರಾಜ್ಯಾಪಹಾರ ಮಾಡುವ ಸನ್ನಾಹದಲ್ಲಿದ್ದಾರೆ ,ಎಂದು ನನಗೆ ವರದಿಯಾಗಿದೆ ,, 
ಬಸವಣ್ಣನವರು ನಕ್ಕುಬಿಟ್ಟರು , " ಮತ್ತೆ ಇನ್ನೇನೇನು ವರದಿಯಾಗಿದೆ ?,, 
" ನಾನೂ ನಿಮ್ಮ ಹಾಗೆ ನಕ್ಕುಬಿಟ್ಟೆ ,  ಅಪ್ರತಿಭನಾದ ಆಸುದ್ದಿಯನ್ನು ತಂದ ವ್ಯಕ್ತಿ , ’ನೀವು ನಂಬಲಾರಿರಿ , ನಂಬುವ ಕಾಲ ಬರುತ್ತದೆ ’ ಎಂದು ಬೆದರಿಸಲು ನೋಡಿದ . ನಾನು ಅವನಿಗೆ ಹೇಳಿದೆ , " ಬಸವಣ್ಣನವರನ್ನು ಬರ ಹೇಳು , ಅವರು ರಾಜ್ಯಾಪಹಾರ ಮಾಡುವ ಅಗತ್ಯವೇನಿದೆ ? ತಂಗಿ  ನೀಲಲೋಚನೆಯ ಮದುವೆಯ ಸಮಯದಲ್ಲಿ ಅವರು ನಮ್ಮಿಂದ ಏನೂ ಪಡೆಯಲಿಲ್ಲ , ಬಲವಂತ ಮಾಡಿ ಕೊಡಲು ಹೋದ ಅಲ್ಪ ಧನವನ್ನೂ ನಾಡಿನ ಶಿಕ್ಷಣ ಕೇಂದ್ರಗಳಿಗೆ , ಚಿಕಿತ್ಸಾಲಯಗಳಿಗೆ ಕೊಡಿಸಿಬಿಟ್ಟರು . ಈ ಕಲಚುರ್ಯ ರಾಜ್ಯದಲ್ಲಿ ನಮಗೆ ಎಷ್ಟು ಹಕ್ಕಿದೆಯೋ , ತಂಗಿ ನೀಲಲೋಚನೆಗೂ ಅಷ್ಟೇ ಹಕ್ಕಿದೆ . ಸಂತೋಷವಾಗಿಯೇ ಅವರಿಗೆ ಅದನ್ನು ಕೊಟ್ಟುಬಿಡುತ್ತೇವೆ , ಎಂದು ನಾನು ಹೇಳಿದಾಗ ಆ ವ್ಯಕ್ತಿ ತಲೆ ತಗ್ಗಿಸಿ ಹೊರಟು ಹೋದ ,, 
ಬಸವಣ್ಣನವರಿಗೆ ಬಿಜ್ಜಳನ ವ್ಯಕ್ತಿತ್ವವೇ ಅರ್ಥವಾಗದಷ್ಟು ಒಗಟಾಗಿ ಹೋಯಿತು ,
" ಇಷ್ಟು ವಿವೇಕವಿರುವ ತಾವು , ತೈಲಪರನ್ನು ಸೆರೆಯಲ್ಲಿಡುವ ಅಗತ್ಯವಾದರು ಏನಿತ್ತು ? ,,
 " ಅದೇ ವಿಷಯವನ್ನು ತಿಳಿಸಲು ನಾನು ತಮ್ಮನ್ನು ಕರೆದುದು ,  ಸೇವುಣರು ತೈಲಪ ಚಕ್ರವರ್ತಿಗಳನ್ನು ಕೊಲ್ಲಿಸುವ ಸಂಚು ರೂಪಿಸಿದ್ದು ತಿಳಿದು ಬಂತು , ಅದೂ ಅವರ ಅತ್ಯಂತ ದುರ್ಬಲ ಸ್ವಭಾವವಾದ ವಿಷಯಾಸಕ್ತಿಯ ಲಾಭ ಪಡೆದು . ಹೊಯ್ಸಳನಾಡಿನ ನಮ್ಮ ಗುಪ್ತಚರರು ಆ ಸುದ್ದಿಯನ್ನು ಕಳಿಸಿದರು , ಹೊಯ್ಸಳರ  ನರಸಿಂಹನು ಸಾಮಾನ್ಯನಲ್ಲ , ಅಂದಗಾತಿಯರನ್ನು ಸೆಳೆದು ತರುವಲ್ಲಿ ನಮ್ಮ ತೈಲಪರನ್ನು ಮೀರಿಸಿದವನು ಅವನು . ದೇವಗಿರಿಯಿಂದ ಬಂದು ಹೊಯ್ಸಳನ ಅಂತಃಪುರವನ್ನು ಸೇರಿದ ಬಿನ್ನಾಣಗಾತಿಯೊಬ್ಬಳು ಕುಡಿದ ಮತ್ತಿನಲ್ಲಿ ಗೆಳತಿಯರೊಡನೆ ಈ ಬಗೆಯ ಸುಳುಹು ನೀಡಿದಳು . ತನ್ನ ಜೊತೆಗೇ ಬಂದು ಚಾಲುಕ್ಯರ ಅರಮನೆಯನ್ನು ಪ್ರವೇಶಿಸಲು ಕಾದಿರುವ ಚದುರೆಯೋರ್ವಳು ತೈಲಪರ ಜೀವಕ್ಕೆ ಎರವಾಗುತ್ತಾಳೆ ಎಂಬ ವಿಷಯವನ್ನು . ನಮ್ಮ ದಕ್ಷಿಣದ ಗೂಢಚಾರರಿಗೆ ಈ ವಿಷಯ ತಿಳಿದು , ನರಸಿಂಹನಿಗೆ ತಿಳಿಯದಂತೆ ಅವಳನ್ನು ಬಂಧಿಸಿ ಅಪಹರಿಸಿ ವಿಚಾರಣೆಗೆ ಗುರಿಪಡಿಸುವ ವೇಳೆಯಲ್ಲಿ ಅವಳು ವಿಷ ಸೇವಿಸಿ ಪ್ರಾಣ ಕಳೆದುಕೊಂಡಳು ,, 
ಈ ವಿವರಗಳಿಂದ ಬೇಸರ ಹೊಂದಿದ ಬಸವಣ್ಣನವರು 
" ಪ್ರಸಿದ್ದ ಸಾಮ್ರಾಜ್ಯಗಳು ನಾಶವಾಗಿರುವುದೇ ಮದಿರೆ ಮತ್ತು ಮಾನಿನಿಯರಿಂದ ,ರಾಜಮನೆತನದಲ್ಲಿ ಹುಟ್ಟುವ ಪ್ರತಿ ಶಿಶುವೂ ಶಾಪಗ್ರಸ್ತವಾಗಿರುತ್ತದೆ . ಹುಟ್ಟುವ ಕಂದನಿಗೆ ಅದರ ತಾಯಿಯ ಹಾಲು ಸಿಕ್ಕುವುದಿಲ್ಲ ; ಅರಮನೆಯ ದಾಸಿಯರ ಸ್ತನ್ಯಪಾನವೇ ಅದಕ್ಕೆ ಗತಿ , ತಾನು ಹೆತ್ತ ಮಗುವಿನ ಪ್ರೇಮಕ್ಕಿಂತ ರಾಣಿಯರೆಂಬ ಬಿಂಕ , ಅರಮನೆಯ ಆತ್ಮವನ್ನೇ ನಾಶಮಾಡಿ ಬಿಡುತ್ತದೆ .
ಅದಕ್ಕೆ ಬಿಜ್ಜಳ 
" ತಮ್ಮ ಮಾತು ಸತ್ಯ ಬಸವರಾಜರೇ , ನಾಡಿನಲ್ಲಿ ಕಂಡ ಸುಂದರಿಯರನ್ನು ಹಿಡಿದು ತಂದು ದಾಸಿಯರನ್ನಾಗಿ ಮಾರ್ಪಡಿಸಿಕೊಳ್ಳುವ ಅರಸರು ’ ಅವರಲ್ಲಿ ಹೆಚ್ಚಿನವರನ್ನು ಭ್ರಷ್ಟಗೊಳಿಸಿರುತ್ತಾರೆ , ಇಂತಹ ಹೀನ ವಾತಾವರಣದಲ್ಲಿ , ತಾಯಿಯ ಪ್ರೀತಿಯನ್ನು ಕಾಣದೆ , ದಾಸಿಯರ ಸಂಗದಲ್ಲಿ ಬೆಳೆಯುವ ಮಗು ಸ್ವಾಭಾವಿಕವಾಗಿಯೇ ರೂಕ್ಷವಾಗಿರುತ್ತದೆ . ಸ್ವಲ್ಪ ವಯಸ್ಸಿಗೆ ಬಂದಕೂಡಲೇ ಕೈಚಾಚಿದತ್ತ ದೊರೆಯುವ ಮದಿರೆ , ಮಾನಿನಿಯರ ದೆಸೆಯಿಂದ  , ವಿವೇಕ ಹೇಳುವವರಿಗಿಂತ ; ಓಲೈಸುವವರೇ ತುಂಬಿರುವ ಪರಿಜನರಿಂದ ; ಅನಿರ್ಭಂದಿತ ಅಧಿಕಾರದ ಅಮಲಿನಿಂದ , ವಿವೇಕಿ ರಾಜನಾಗಬೇಕಾದವನು ಹುಚ್ಚನಾಗುತ್ತಾನೆ . ಇಂತಹ ವಿಷವೃತ್ತದಿಂದ ಪಾರಾಗುವವನು ಯಾರೋ ಒಬ್ಬ ಅದೃಷ್ಟವಂತ . ಈಗ ತಮ್ಮ ಸಂದೇಹದ ವಿಚಾರಕ್ಕೆ ಬರುತ್ತೇನೆ . ಹೊರಗಿನ ಶತ್ರುಗಳಿಂದ ಮತ್ತು ಒಳಗಿನ ವ್ಯಸನ ಮತ್ತು ರೋಗಗಳಿಂದ ಅಪಾಯದಲ್ಲಿದ್ದ ಚಕ್ರವರ್ತಿಗಳನ್ನು ಪಾರು ಮಾಡಬೇಕೆಂಬ ಉದ್ದೇಶದಿಂದಲೇ ತೈಲಪ ಚಕ್ರವರ್ತಿಯ ಬಂಧನದ ಕತೆಯನ್ನು ಸೃಷ್ಟಿಸಲಾಯಿತು ; ಅವರನ್ನು ಸಾಮಾನ್ಯ ಬಂದಿಯಂತೆ ಸೆರೆ ಮನೆಗೆ ತಳ್ಳಲಾಗಿದೆ ಎಂಬ ವದಂತಿಯನ್ನು ಹಬ್ಬಿಸಲಾಯಿತು . ತೈಲಪರ ಆರೋಗ್ಯವೂ ತೀರಾ ಸೂಕ್ಷ್ಮ ಘಟ್ಟವನ್ನು ಮುಟ್ಟಿರುವುದರಿಂದ ,ಅವರನ್ನು ನೋಡಿಕೊಳ್ಳಲು ಚತುರ ಪಂಡಿತರನ್ನು ನೇಮಿಸಲಾಗಿದೆ  . ಅವರನ್ನು ಎಲ್ಲಿಟ್ಟಿರುವೆವೆಂಬ ವಿಷಯಮಾತ್ರ ರಾಜ ರಹಸ್ಯ ,ಸೂಕ್ತ ಕಾಲ ಬಂದಾಗ ಅದನ್ನು ತಮಗೆ ತಿಳಿಸಲಾಗುವುದು ,,
ಇಷ್ಟನ್ನು ಹೇಳಿ ಬಿಜ್ಜಳನು ಎದ್ದು ಅಲ್ಲಿಯೇ ಹತ್ತಿರದಲ್ಲಿದ್ದ ಪೆಠಾರಿಯಿಂದ ಎರಡು ರಾಯಸಗಳನ್ನು ತಂದು ಬಸವಣ್ಣನವರ ಕೈಗೆ ಕೊಟ್ಟನು , ಅವನ್ನು ಬಿಡಿಸಿ ನೋಡಿದಾಗ ಒಂದರಲ್ಲಿ ಮಹಾರಾಣಿ ಸುಕಾಮದೃಮೆಯು ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಹಾಯವನ್ನು ಯಾಚಿಸಿ ಬರೆದ ಒಂದು ಪತ್ರ , ಇನ್ನೊಂದರಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಬಿಜ್ಜಳನಿಗೆ ಸಂಪೂರ್ಣ ಸರ್ವಾಧಿಕಾರವನ್ನು ವಹಿಸಿ ಕೊಟ್ಟಿರುವ ವಿಷಯಗಳು ಸ್ಪಷ್ಟವಾಗಿದ್ದವು .
ಬಿಜ್ಜಳನು , 
" ಬಸವರಾಜರೇ ,ನಾಡಿನ ಪರಿಸ್ಥಿತಿ ತಮಗರಿಯದುದಲ್ಲ , ಎಲ್ಲ ಸಾಮ್ರಾಜ್ಯಗಳೂ ಕುದಿಯುವ ಬಿಂದುವಿನಲ್ಲಿವೆ . ಭಾರತ ಭೂಖಂಡದ ವಾಯುವ್ಯ ಭಾಗವು ಅಗ್ನಿಕುಂಡವಾಗಿದೆ , ಹೊರಗಿನ ದಾಳಿಕಾರರು ಜನರ ಬದುಕನ್ನು ಮಸಣ ಮಾಡಿದ್ದಾರೆ ; ನಿತ್ಯದ ದಾಳಿಗಳು , ಲೂಟಿಗಳಿಂದ ಜನ ತತ್ತರಿಸುತ್ತಿದ್ದಾರೆ . ದಕ್ಷಿಣದಲ್ಲೂ ಈ ಹಿಂದೆ ದಾಳಿಗಳು ನಡೆದಿವೆಯಾದರೂ ಅದು ನಿತ್ಯದ ನರಕವಾಗಿಲ್ಲ . ಸದ್ಯಕ್ಕೆ ಹೊರಗಿನವರ ಉಪಟಳವೂ ದೂರದ ದಕ್ಷಿಣದತ್ತ ಕಡಿಮೆಯೇ ಆಗಿದೆ . ಆದರೂ ಸಂಭವನೀಯ ಬರ್ಬರ ದಾಳಿಕಾರರ ಭೀತಿಯಿಂದ , ಜನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ . ದಕ್ಷಿಣ ಕರ್ನಾಟಕ , ಅತಂತ್ರ ಪ್ರಭುತ್ವಗಳಿಂದ ನಡುಗುತ್ತಿದೆ . ಎಲ್ಲೆಲ್ಲಿಯೂ ಪಾಳೆಯಪಟ್ಟುಗಳು ತಲೆ ಎತ್ತುತ್ತಿವೆ , ಅವುಗಳಲ್ಲಿರುವ ಅವಿವೇಕಿ ಆಡಳಿತಗಾರರಿಂದ ಪ್ರಜೆಗಳು ಅಸಹನೀಯ ನೋವು ಅನುಭವಿಸುತ್ತಿದ್ದಾರೆ . ಗ್ರಾಮಗಳಲ್ಲಿ ಚಲುವೆಯರು ಕಣ್ಣಿಗೆ ಬೀಳುವಂತಿಲ್ಲ ; ಯಾರಾದರೂ ಕಷ್ಟಾರ್ಜಿತದಿಂದ ಮುಂದಕ್ಕೆ ಬರುವಂತಿಲ್ಲ , ಚಲುವೆಯರೂ , ಪರಧನವೂ ಬಲಾತ್ಕಾರದಿಂದ ಪಾಳೆಯಗಾರರ ವಾಡೆಯನ್ನು ಸೇರಬೇಕಾದ ಕೆಟ್ಟ ವಾತಾವರಣವಿದೆ .ಇದನ್ನೆಲ್ಲಾ ಕಂಡೂ ಸಹ ಚಾಲುಕ್ಯರ ಮಾಂಡಲಿಕನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲೇ ? ಅಥವಾ ಅಪನಿಂದೆ ಅಪವಾದಗಳಿಗೆ ಅಂಜಿ ಪಲಾಯನ ಮಾಡಲೇ ? ,,

" ಹೌದು ,ನಿಮ್ಮ ಬಗ್ಗೆಯೇ , ಬಸವಣ್ಣನವರು ಶರಣರ ಪಡೆಯನ್ನು ಕಟ್ಟಿಕೊಂಡು ರಾಜ್ಯಾಪಹಾರ ಮಾಡುವ ಸನ್ನಾಹದಲ್ಲಿದ್ದಾರೆ ,ಎಂದು ನನಗೆ ವರದಿಯಾಗಿದೆ ,, 

ಬಸವಣ್ಣನವರು ನಕ್ಕುಬಿಟ್ಟರು , " ಮತ್ತೆ ಇನ್ನೇನೇನು ವರದಿಯಾಗಿದೆ ?,, 

" ನಾನೂ ನಿಮ್ಮ ಹಾಗೆ ನಕ್ಕುಬಿಟ್ಟೆ ,  ಅಪ್ರತಿಭನಾದ ಆಸುದ್ದಿಯನ್ನು ತಂದ ವ್ಯಕ್ತಿ , ’ನೀವು ನಂಬಲಾರಿರಿ , ನಂಬುವ ಕಾಲ ಬರುತ್ತದೆ ’ ಎಂದು ಬೆದರಿಸಲು ನೋಡಿದ . ನಾನು ಅವನಿಗೆ ಹೇಳಿದೆ , " ಬಸವಣ್ಣನವರನ್ನು ಬರ ಹೇಳು , ಅವರು ರಾಜ್ಯಾಪಹಾರ ಮಾಡುವ ಅಗತ್ಯವೇನಿದೆ ? ತಂಗಿ  ನೀಲಲೋಚನೆಯ ಮದುವೆಯ ಸಮಯದಲ್ಲಿ ಅವರು ನಮ್ಮಿಂದ ಏನೂ ಪಡೆಯಲಿಲ್ಲ , ಬಲವಂತ ಮಾಡಿ ಕೊಡಲು ಹೋದ ಅಲ್ಪ ಧನವನ್ನೂ ನಾಡಿನ ಶಿಕ್ಷಣ ಕೇಂದ್ರಗಳಿಗೆ , ಚಿಕಿತ್ಸಾಲಯಗಳಿಗೆ ಕೊಡಿಸಿಬಿಟ್ಟರು . ಈ ಕಲಚುರ್ಯ ರಾಜ್ಯದಲ್ಲಿ ನಮಗೆ ಎಷ್ಟು ಹಕ್ಕಿದೆಯೋ , ತಂಗಿ ನೀಲಲೋಚನೆಗೂ ಅಷ್ಟೇ ಹಕ್ಕಿದೆ . ಸಂತೋಷವಾಗಿಯೇ ಅವರಿಗೆ ಅದನ್ನು ಕೊಟ್ಟುಬಿಡುತ್ತೇವೆ , ಎಂದು ನಾನು ಹೇಳಿದಾಗ ಆ ವ್ಯಕ್ತಿ ತಲೆ ತಗ್ಗಿಸಿ ಹೊರಟು ಹೋದ ,, 

ಬಸವಣ್ಣನವರಿಗೆ ಬಿಜ್ಜಳನ ವ್ಯಕ್ತಿತ್ವವೇ ಅರ್ಥವಾಗದಷ್ಟು ಒಗಟಾಗಿ ಹೋಯಿತು ,

" ಇಷ್ಟು ವಿವೇಕವಿರುವ ತಾವು , ತೈಲಪರನ್ನು ಸೆರೆಯಲ್ಲಿಡುವ ಅಗತ್ಯವಾದರು ಏನಿತ್ತು ? ,,

 " ಅದೇ ವಿಷಯವನ್ನು ತಿಳಿಸಲು ನಾನು ತಮ್ಮನ್ನು ಕರೆದುದು ,  ಸೇವುಣರು ತೈಲಪ ಚಕ್ರವರ್ತಿಗಳನ್ನು ಕೊಲ್ಲಿಸುವ ಸಂಚು ರೂಪಿಸಿದ್ದು ತಿಳಿದು ಬಂತು , ಅದೂ ಅವರ ಅತ್ಯಂತ ದುರ್ಬಲ ಸ್ವಭಾವವಾದ ವಿಷಯಾಸಕ್ತಿಯ ಲಾಭ ಪಡೆದು . ಹೊಯ್ಸಳನಾಡಿನ ನಮ್ಮ ಗುಪ್ತಚರರು ಆ ಸುದ್ದಿಯನ್ನು ಕಳಿಸಿದರು , ಹೊಯ್ಸಳರ  ನರಸಿಂಹನು ಸಾಮಾನ್ಯನಲ್ಲ , ಅಂದಗಾತಿಯರನ್ನು ಸೆಳೆದು ತರುವಲ್ಲಿ ನಮ್ಮ ತೈಲಪರನ್ನು ಮೀರಿಸಿದವನು ಅವನು . ದೇವಗಿರಿಯಿಂದ ಬಂದು ಹೊಯ್ಸಳನ ಅಂತಃಪುರವನ್ನು ಸೇರಿದ ಬಿನ್ನಾಣಗಾತಿಯೊಬ್ಬಳು ಕುಡಿದ ಮತ್ತಿನಲ್ಲಿ ಗೆಳತಿಯರೊಡನೆ ಈ ಬಗೆಯ ಸುಳುಹು ನೀಡಿದಳು . ತನ್ನ ಜೊತೆಗೇ ಬಂದು ಚಾಲುಕ್ಯರ ಅರಮನೆಯನ್ನು ಪ್ರವೇಶಿಸಲು ಕಾದಿರುವ ಚದುರೆಯೋರ್ವಳು ತೈಲಪರ ಜೀವಕ್ಕೆ ಎರವಾಗುತ್ತಾಳೆ ಎಂಬ ವಿಷಯವನ್ನು . ನಮ್ಮ ದಕ್ಷಿಣದ ಗೂಢಚಾರರಿಗೆ ಈ ವಿಷಯ ತಿಳಿದು , ನರಸಿಂಹನಿಗೆ ತಿಳಿಯದಂತೆ ಅವಳನ್ನು ಬಂಧಿಸಿ ಅಪಹರಿಸಿ ವಿಚಾರಣೆಗೆ ಗುರಿಪಡಿಸುವ ವೇಳೆಯಲ್ಲಿ ಅವಳು ವಿಷ ಸೇವಿಸಿ ಪ್ರಾಣ ಕಳೆದುಕೊಂಡಳು ,, 

ಈ ವಿವರಗಳಿಂದ ಬೇಸರ ಹೊಂದಿದ ಬಸವಣ್ಣನವರು 

" ಪ್ರಸಿದ್ದ ಸಾಮ್ರಾಜ್ಯಗಳು ನಾಶವಾಗಿರುವುದೇ ಮದಿರೆ ಮತ್ತು ಮಾನಿನಿಯರಿಂದ ,ರಾಜಮನೆತನದಲ್ಲಿ ಹುಟ್ಟುವ ಪ್ರತಿ ಶಿಶುವೂ ಶಾಪಗ್ರಸ್ತವಾಗಿರುತ್ತದೆ . ಹುಟ್ಟುವ ಕಂದನಿಗೆ ಅದರ ತಾಯಿಯ ಹಾಲು ಸಿಕ್ಕುವುದಿಲ್ಲ ; ಅರಮನೆಯ ದಾಸಿಯರ ಸ್ತನ್ಯಪಾನವೇ ಅದಕ್ಕೆ ಗತಿ , ತಾನು ಹೆತ್ತ ಮಗುವಿನ ಪ್ರೇಮಕ್ಕಿಂತ ರಾಣಿಯರೆಂಬ ಬಿಂಕ , ಅರಮನೆಯ ಆತ್ಮವನ್ನೇ ನಾಶಮಾಡಿ ಬಿಡುತ್ತದೆ .

ಅದಕ್ಕೆ ಬಿಜ್ಜಳ 

" ತಮ್ಮ ಮಾತು ಸತ್ಯ ಬಸವರಾಜರೇ , ನಾಡಿನಲ್ಲಿ ಕಂಡ ಸುಂದರಿಯರನ್ನು ಹಿಡಿದು ತಂದು ದಾಸಿಯರನ್ನಾಗಿ ಮಾರ್ಪಡಿಸಿಕೊಳ್ಳುವ ಅರಸರು ’ ಅವರಲ್ಲಿ ಹೆಚ್ಚಿನವರನ್ನು ಭ್ರಷ್ಟಗೊಳಿಸಿರುತ್ತಾರೆ , ಇಂತಹ ಹೀನ ವಾತಾವರಣದಲ್ಲಿ , ತಾಯಿಯ ಪ್ರೀತಿಯನ್ನು ಕಾಣದೆ , ದಾಸಿಯರ ಸಂಗದಲ್ಲಿ ಬೆಳೆಯುವ ಮಗು ಸ್ವಾಭಾವಿಕವಾಗಿಯೇ ರೂಕ್ಷವಾಗಿರುತ್ತದೆ . ಸ್ವಲ್ಪ ವಯಸ್ಸಿಗೆ ಬಂದಕೂಡಲೇ ಕೈಚಾಚಿದತ್ತ ದೊರೆಯುವ ಮದಿರೆ , ಮಾನಿನಿಯರ ದೆಸೆಯಿಂದ  , ವಿವೇಕ ಹೇಳುವವರಿಗಿಂತ ; ಓಲೈಸುವವರೇ ತುಂಬಿರುವ ಪರಿಜನರಿಂದ ; ಅನಿರ್ಬಂಧಿತ ಅಧಿಕಾರದ ಅಮಲಿನಿಂದ , ವಿವೇಕಿ ರಾಜನಾಗಬೇಕಾದವನು ಹುಚ್ಚನಾಗುತ್ತಾನೆ . ಇಂತಹ ವಿಷವೃತ್ತದಿಂದ ಪಾರಾಗುವವನು ಯಾರೋ ಒಬ್ಬ ಅದೃಷ್ಟವಂತ . ಈಗ ತಮ್ಮ ಸಂದೇಹದ ವಿಚಾರಕ್ಕೆ ಬರುತ್ತೇನೆ . ಹೊರಗಿನ ಶತ್ರುಗಳಿಂದ ಮತ್ತು ಒಳಗಿನ ವ್ಯಸನ ಮತ್ತು ರೋಗಗಳಿಂದ ಅಪಾಯದಲ್ಲಿದ್ದ ಚಕ್ರವರ್ತಿಗಳನ್ನು ಪಾರು ಮಾಡಬೇಕೆಂಬ ಉದ್ದೇಶದಿಂದಲೇ ತೈಲಪ ಚಕ್ರವರ್ತಿಯ ಬಂಧನದ ಕತೆಯನ್ನು ಸೃಷ್ಟಿಸಲಾಯಿತು ; ಅವರನ್ನು ಸಾಮಾನ್ಯ ಬಂದಿಯಂತೆ ಸೆರೆ ಮನೆಗೆ ತಳ್ಳಲಾಗಿದೆ ಎಂಬ ವದಂತಿಯನ್ನು ಹಬ್ಬಿಸಲಾಯಿತು . ತೈಲಪರ ಆರೋಗ್ಯವೂ ತೀರಾ ಸೂಕ್ಷ್ಮ ಘಟ್ಟವನ್ನು ಮುಟ್ಟಿರುವುದರಿಂದ ,ಅವರನ್ನು ನೋಡಿಕೊಳ್ಳಲು ಚತುರ ಪಂಡಿತರನ್ನು ನೇಮಿಸಲಾಗಿದೆ  . ಅವರನ್ನು ಎಲ್ಲಿಟ್ಟಿರುವೆವೆಂಬ ವಿಷಯಮಾತ್ರ ರಾಜ ರಹಸ್ಯ ,ಸೂಕ್ತ ಕಾಲ ಬಂದಾಗ ಅದನ್ನು ತಮಗೆ ತಿಳಿಸಲಾಗುವುದು ,,

ಇಷ್ಟನ್ನು ಹೇಳಿ ಬಿಜ್ಜಳನು ಎದ್ದು ಅಲ್ಲಿಯೇ ಹತ್ತಿರದಲ್ಲಿದ್ದ ಪೆಠಾರಿಯಿಂದ ಎರಡು ರಾಯಸಗಳನ್ನು ತಂದು ಬಸವಣ್ಣನವರ ಕೈಗೆ ಕೊಟ್ಟನು , ಅವನ್ನು ಬಿಡಿಸಿ ನೋಡಿದಾಗ ಒಂದರಲ್ಲಿ ಮಹಾರಾಣಿ ಸುಕಾಮದೃಮೆಯು ಇಂತಹ ವಿಷಮ ಪರಿಸ್ಥಿತಿಯಲ್ಲಿ ಸಹಾಯವನ್ನು ಯಾಚಿಸಿ ಬರೆದ ಒಂದು ಪತ್ರ , ಇನ್ನೊಂದರಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಬಿಜ್ಜಳನಿಗೆ ಸಂಪೂರ್ಣ ಸರ್ವಾಧಿಕಾರವನ್ನು ವಹಿಸಿ ಕೊಟ್ಟಿರುವ ವಿಷಯಗಳು ಸ್ಪಷ್ಟವಾಗಿದ್ದವು .ಬಿಜ್ಜಳನು , 

" ಬಸವರಾಜರೇ ,ನಾಡಿನ ಪರಿಸ್ಥಿತಿ ತಮಗರಿಯದುದಲ್ಲ , ಎಲ್ಲ ಸಾಮ್ರಾಜ್ಯಗಳೂ ಕುದಿಯುವ ಬಿಂದುವಿನಲ್ಲಿವೆ . ಭಾರತ ಭೂಖಂಡದ ವಾಯುವ್ಯ ಭಾಗವು ಅಗ್ನಿಕುಂಡವಾಗಿದೆ , ಹೊರಗಿನ ದಾಳಿಕಾರರು ಜನರ ಬದುಕನ್ನು ಮಸಣ ಮಾಡಿದ್ದಾರೆ ; ನಿತ್ಯದ ದಾಳಿಗಳು , ಲೂಟಿಗಳಿಂದ ಜನ ತತ್ತರಿಸುತ್ತಿದ್ದಾರೆ . ದಕ್ಷಿಣದಲ್ಲೂ ಈ ಹಿಂದೆ ದಾಳಿಗಳು ನಡೆದಿವೆಯಾದರೂ ಅದು ನಿತ್ಯದ ನರಕವಾಗಿಲ್ಲ . ಸದ್ಯಕ್ಕೆ ಹೊರಗಿನವರ ಉಪಟಳವೂ ದೂರದ ದಕ್ಷಿಣದತ್ತ ಕಡಿಮೆಯೇ ಆಗಿದೆ . ಆದರೂ ಸಂಭವನೀಯ ಬರ್ಬರ ದಾಳಿಕಾರರ ಭೀತಿಯಿಂದ , ಜನ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ . ದಕ್ಷಿಣ ಕರ್ನಾಟಕ , ಅತಂತ್ರ ಪ್ರಭುತ್ವಗಳಿಂದ ನಡುಗುತ್ತಿದೆ . ಎಲ್ಲೆಲ್ಲಿಯೂ ಪಾಳೆಯಪಟ್ಟುಗಳು ತಲೆ ಎತ್ತುತ್ತಿವೆ , ಅವುಗಳಲ್ಲಿರುವ ಅವಿವೇಕಿ ಆಡಳಿತಗಾರರಿಂದ ಪ್ರಜೆಗಳು ಅಸಹನೀಯ ನೋವು ಅನುಭವಿಸುತ್ತಿದ್ದಾರೆ . ಗ್ರಾಮಗಳಲ್ಲಿ ಚಲುವೆಯರು ಕಣ್ಣಿಗೆ ಬೀಳುವಂತಿಲ್ಲ ; ಯಾರಾದರೂ ಕಷ್ಟಾರ್ಜಿತದಿಂದ ಮುಂದಕ್ಕೆ ಬರುವಂತಿಲ್ಲ , ಚಲುವೆಯರೂ , ಪರಧನವೂ ಬಲಾತ್ಕಾರದಿಂದ ಪಾಳೆಯಗಾರರ ವಾಡೆಯನ್ನು ಸೇರಬೇಕಾದ ಕೆಟ್ಟ ವಾತಾವರಣವಿದೆ .ಇದನ್ನೆಲ್ಲಾ ಕಂಡೂ ಸಹ ಚಾಲುಕ್ಯರ ಮಾಂಡಲಿಕನಾಗಿ ನನ್ನ ಕರ್ತವ್ಯಗಳನ್ನು ನಿರ್ವಹಿಸಲೇ ? ಅಥವಾ ಅಪನಿಂದೆ ಅಪವಾದಗಳಿಗೆ ಅಂಜಿ ಪಲಾಯನ ಮಾಡಲೇ ? ,,

ಸರಣಿ: 
ಲೇಖನ ವರ್ಗ (Category): 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by savithru on

ಸೋಮ ಶೇಖರಯ್ಯನವರೆ ಅನನ್ಯಅಲ್ಲಮ ವನ್ನು ಮತ್ತೊಮ್ಮೆ ಪ್ರಾರಂಭಿಸಿದ್ದಕ್ಕೆ ತುಂಬಾ ಧನ್ಯವಾದಗಳು. ದಯವಿಟ್ಟು ನಿಲ್ಲಿಸಬೇಡಿ. ಸಮಯಮಾಡಿಕೊಂಡು ಹೆಚ್ಚು ಹೆಚ್ಚು ಬರೆದು ಹಾಕಿ.

ಬಸವಣ್ಣನ, ಬಿಜ್ಜಳನ, ಒಳ ತೊಳಲಾಟಗಳನ್ನು, ಅಲ್ಲಿನ ರಾಜಕೀಯ ಸನ್ನಿವೇಶಗಳನ್ನು ಚನ್ನಾಗಿ ನಿರೂಪಿಸುತ್ತಾ ಇದ್ದೀರಿ. ಧನ್ಯವಾದಗಳು.

ನನ್ನ ಇತಿಹಾಸ ಜ್ಞಾನ ಅಷ್ಟಕ್ಕಷ್ಟೇ... ಹಾಗಾಗಿ ಕೆಲ ಸಂದೇಹಗಳು.
(ಅಲ್ಲಮನ ಬಗೆಗಿನ ಈ ಲೇಖನಗಳ ಓಘಕ್ಕೆ ನನ್ನ ಪ್ರಶ್ನೆಗಳು ಅಡ್ಡ ಬರುತ್ತವೆ ಅಂದರೆ ಈ ಪ್ರಶ್ನೆಗಳನ್ನು ಅಲಕ್ಷಿಸಬಹುದು. ನಾನೇ ಸಮಯ ಸಿಕ್ಕಾಗೊಮ್ಮೆ ಓದಲು ಪ್ರಯತ್ನಿಸಿವೆ. )

೧. ಸೇವುಣರು ಯಾರು? ಯಾವ ಭಾಗದ ರಾಜಮನೆತನ? . ಸವಣ ( ಜೈನ ಸನ್ಯಾಸಿ ) ರಿಗೂ ಇವರಿಗೂ ಸಂಬಂಧವಿಲ್ಲೆಂದು ತಿಳಿಯುತ್ತೇನೆ.
೨. ಬಿಜ್ಜಳ ಒಬ್ಬ ಸಾಮಂತ ರಾಜ ನಿಜ. ತೈಲಪನ ಬಗ್ಗೆಯೂ "ಕೆಲ" ಸಾಲುಗಳಲ್ಲಿ ತಿಳಿಸಿ.

Submitted by csomsekraiah on

ಆತ್ಮೀಯ ಸವಿತೃ ಅವರೆ

ದೇವಗಿರಿ ಯಾದವರೇ ಸೇವುಣರು , ಅಚ್ಚ ಕನ್ನಡಿಗರಾದ ಇವರು, ತಾವು ಉತ್ತರ ಭಾರತೀರೆಂದು ಚಂದ್ರವಂಶೀಯ ಯಾದವರೆಂದು ಕರೆದುಕೊಂಡವರು . ದೇವಗಿರಿ ಇವರ ರಾಜಧಾನಿ ;ಅದು ಈಗಿನ ಮಹಾರಾಷ್ಟ್ರದ ದೌಲತಾಬಾದ್ . ತೈಲಪನ ಬಗ್ಗೆ ಮುಂದೆ ಇನ್ನಷ್ಟು ವಿವರಗಳು ಬರುತ್ತವೆ . ಸವಣರಿಗೂ ಸೇವುಣರಿಗೂ ಸಂಬಂಧವಿಲ್ಲ .