22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಲೇಜಿನಿಂದ ಕಚೇರಿವರೆಗೆ

May 21, 2010 - 8:23pm
Tejaswi_ac

   ಕಾಲೇಜಿನಿಂದ ಕಚೇರಿವರೆಗೆ
 
  ಹುಡುಗರು ಓದಿ ಮುಗಿಸಿದರು ಕಾಲೇಜು ಶಿಕ್ಷಣ
  ಕೆಲಸಕ್ಕೆ ಹೊರಡಲು ಒತ್ತಡ ಬಿದ್ದಿತ್ತು ಮರುಕ್ಷಣ 
 
  ಗೆಳೆಯರು ಸೇರಿ ಸಭೆ ನಡೆಸಿದರು ಈ ಬಾರಿ  
  ಕೆಲಸಕ್ಕಾಗಿ ಎಲ್ಲರು ಹಿಡಿದರು ನಗರದ ದಾರಿ
 
  ಒಟ್ಟಿಗೆ ಸೇರಿದರು ಕೊಂಡು ರೈಲಿನ ಟಿಕೇಟು 
  ನಡೆದರು ಹೊತ್ತು ತಮ್ಮ ಬ್ಯಾಗು, ಸರ್ಟಿಫಿಕೇಟು
 
  ಹುಡುಗರು ಸೇರಿ ಪಡೆದರು ಒಂದು ಕೋಣೆಯ ಮನೆ
  ಅವಿವಾಹಿತರ ಮನೆಯ ಹುಡು’ಕಾಟಕ್ಕೆ’ ಸಿಕ್ಕಿತು ಕೊನೆ
 
  ಹುಡುಗರು ಗಳಿಸಿದ್ದರು ಒಬ್ಬಬ್ಬರೂ ಒಂದೊಂದು ಅಂಕ
  ಕಷ್ಟಪಟ್ಟು ಕೆಲಸ ಗಿಟ್ಟಿಸಲೇಬೇಕೆಂದು ಕಟ್ಟಿದ್ದರು ಟೊಂಕ
 
  ಒಳ್ಳೆಯ ತಿಂಡಿ ಊಟವ ಪಡೆಯುವುದು ಆಗಿತ್ತು ದುಸ್ತರ
  ಅಮ್ಮ ಮಾಡಿದ ಅಡುಗೆಯ ಬೆಲೆ ಗೊತ್ತಾಗಿತ್ತು ಈ ಥರ 
 
  ವೃತ್ತಿ ಕೌಶಲ ಕಲಿಯಲು ಸೇರಿದರು ವಿವಿಧ ಕೋರ್ಸುಗಳು
  ಕೋರ್ಸುಗಳ ಮಾಡುತ ಕೊಟ್ಟರು ಹಲವು ಸಂದರ್ಶನಗಳು   
 
  ಕೊನೆಗೂ ಸಿಗುತ ಬಂತು ನಮ್ಮ ಹುಡುಗರಿಗೆ ಕೆಲಸದ ಕರೆ
  ಮಕ್ಕಳು ಯಶಸ್ಸು ಕಂಡು ಪೋಷಕರ ಕನಸಾಯಿತು ಖರೆ 
 
  - ತೇಜಸ್ವಿ.ಎ.ಸಿ   

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Tejaswi_ac on

ರಾಜಿ , ಅದು ಪ್ರಾಸಕ್ಕೆ ಸರಿ ಹೊಂದುತ್ತದೆ ಆದರೆ ಅದು ಸರಿಯಾದ ಪದವೇ ಎಂಬುದು ನನ್ನ ಅನುಮಾನ. ಆದರು ಪ್ರಾಸಕ್ಕಾಗಿ ತಿದ್ದಿದ್ದೇನೆ......ನೋಡೋಣ ನಮ್ಮ ಕನ್ನಡ ಪರಿಣಿತರು ಏನ್ ಹೇಳ್ತಾರೆ ಅಂತ. ನಿಮ್ಮ ಉತ್ತೇಜನಕ್ಕೆ ಧನ್ಯವಾದಗಳು.

Submitted by Manasa G N on

ತೇಜಸ್ವಿ ರವರೇ - ನಿಮ್ಮ ಕವನ ಸೊಗಸಾಗಿದೆ :). ತರ ಅನ್ನೊಂದು ಆಡು ಭಾಷೆ ಅನ್ಸುತ್ತೆ , ತರಹ ಪದ ಪ್ರಯೋಗ ಇಲ್ಲಿ ಸೂಕ್ತ ಎಂದು ನನ್ನ ಅನಿಸಿಕೆ.