22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ರಾತ್ರಿಯ ಕವನಗಳು

May 31, 2010 - 7:30pm
Radhika

ಕತ್ತಲೆಂದರೆ


ಕತ್ತಲೆಂದರೆ,
ಕೆಲವರಿಗೆ ನಿದ್ರೆ
ಕೆಲವರಿಗೆ ಭಯ
ಕೆಲವರಿಗೆ ಮರುದಿನದ ಕಾತುರ
ನನಗಂತೂ ಕತ್ತಲು
ಕನಸುಗಳ ಬೀಜ ಬಿತ್ತುವ
ಹಿತ್ತಲು..

******************



ನಂದೊಂದು ಕನಸು


ನಾ ಕಂಡ ಕನಸಲ್ಲಿ
ಹಾರಿದ್ದೆ ನಾ ಹಕ್ಕಿಯಾಗಿ
ಗಾಳಿಯಲಿ ತೂರಿ ದೂರ ದೂರಕೆ ಸಾಗಿ.
ಒಮ್ಮೆಲೇ ಬಿದ್ದೆ
ರೆಕ್ಕೆ ತುಂಡಾಗಿ ಕೆಳಗೆ.
ಕಣ್ತೆರೆದು ನೋಡಿದೆ
ಅರೆರೆ! ಇದು ಏನು?
ಮೇಲೆ ಗರಗರನೆ ತಿರುಗಿತ್ತು
ಕ್ರಾಂಪ್ಟನ್ ಫ್ಯಾನು ...
*********************


ಮಿಂಚು ಹುಳ


ನಡುರಾತ್ರಿ ಬಂದೆ ಮನೆಯಾಚೆ
ನೋಡಲು ನಕ್ಷತ್ರಗಳ
ಅರೆರೆ! ಕಂಡಿತೊಂದು ತಾರೆ
ಅಲ್ಲೆ ಅಂಗಳದಿ ಕೆಳಗೆ
ನೋಡಲದು ಮಿಂಚು ಹುಳ.. :(
********************

Average: 4 (1 vote)
To prevent automated spam submissions leave this field empty.