Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ

"ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

December 14, 2006 - 3:11pm — Sunil Jayaprakash

ಗೆಳೆಯರೆ,

ಈ ದಿನ, ಪಂಡಿತ ಕವಲಿ ಎಂಬುವರ ಕಸ್ತೂರೀ ಕೋಶ ಎಂಬ ಗ್ರಂಥವನ್ನು(ನಿಘಂಟು), ಓದುವಾಗ ಕಣ್ಣಿಗೆ ಬಿದ್ದ ಕೆಲವು ಕನ್ನಡ ಪದಗಳು. ನಿಮ್ಮೊಡನೆ ಆ ಪದಗಳನ್ನು ಹಂಚಿಕೊಳ್ಳಬೇಕೆಂದು ಬರೆಯುತ್ತಿದ್ದೇನೆ.

ಉಲ್ಲಿ - ಅಲ್ಲಿಯೂ ಅಲ್ಲದ್ದು ಮತ್ತು ಇಲ್ಲಿಯೂ ಅಲ್ಲದ್ದು. fuzzy logic ಎನ್ನಬಹದೇ ?
ಇದರ ಬಳಕೆ ಕವಿರಾಜ ಮಾರ್ಗದಲ್ಲಿದೆ.

ಉತ್ತ - ಅತ್ತವೂ ಅಲ್ಲದ ಇತ್ತವೂ ಅಲ್ಲದ, ನೆನಪಿಸಿಕೊಳ್ಳಿ, ಹೇಳುತ್ತಾ, ಮಾಡುತ್ತಾ (ಮಾಡಿ ಮುಗಿಸಿಯೂ ಅಲ್ಲದ್ದು, ಮಾಡದೆಯೂ ಇಲ್ಲದ ಸ್ಥಿತಿ).
ಉತ್ತಲ್ - ಉತ್ತದ ರೀತಿ, ಉತ್ತಲ ದೇಶ ಎಂದರೆ ಮಧ್ಯಪ್ರದೇಶವಿರಬಹುದೇ??. ನೋಡಿ, ನಾವು ಒಂದು ಮಾತು ಬಳಸುತ್ತೇವೆ - ಮಾಡುತ್ತಲೇ ಇರುತ್ತಾರೆ.

ಉನ್ನಿಸು - ಆಲೋಚಿಸು (ನೆನಪಿಗೆ ತಂದುಕೊಳ್ಳಿ - ಅನ್ನಿಸು)
ಉಮ್ಮಗೆ - ಸುಮ್ಮನೆ. ಒಂದು ಹಾಡನ್ನು ನೆನಪಿಸುವೆ, ಶ್ರಾದ್ಧದೂಟ ಸುಮ್ಮಗೆ ನೆನಸಿಕೊಂಡು ಝುಮ್ಮಗೆ - ಸತ್ಯ ಹರೀಶ್ಚಂದ್ರ

ಉರವಣೆ - ಆತುರ, ವೇಗ, ಗಡಿಬಿಡಿ, ದುಡುಕು, ಕೋಪ, ಪ್ರಭಾವ, ದಿಟ್ಟತನ.
ಈಗ ನಾವು ಕೆಟ್ಟ ಧೈರ್ಯ ಎಂದು ಹೇಳುತ್ತೇವಲ್ಲ ಅದಕ್ಕೆ ಉರವಣೆ ಎನ್ನಬಹುದೇ ?

ಉಂಕಿಸು - ಪರೀಕ್ಷೆ ಮಾಡು, ನಿರೀಕ್ಷಿಸು, ಲಕ್ಷ್ಯ ಕೊಟ್ಟು ನೋಡು. scrutiny, scrutinize ??
ಉಡಿಕೆ - ಮೊಳಿಕೆ, ಮರು ಮದುವೆ. ಮರುವಿವಾಹ ಎಂಬ ಕಡೆ ಉಡಿಕೆ ಎಂಬುದನ್ನು ಬಳಸಬಹುದಲ್ಲವೇ ?
ಉಸ್ತ - ಬೆಳಕಿನ ಕಿರಣ.
ಉಳ್ಗೆ - ಪ್ರೇಮ, ಸ್ನೇಹ, ಅನುರಾಗ.

ಕನ್ನಡದಲ್ಲಿ ಉಳ್ಳಿ ಎಂಬ ಪದವೂ ಇದೆ. ಉಳ್ಳಿ ಎಂದರೆ ಉಬ್ಬು, ನೆನಪಿಗೆ ತಂದುಕೊಳ್ಳಿ, ಈರುಳ್ಳಿ, ಬೆಳ್ಳುಳ್ಳಿ.

  • ಜ್ಞಾನವಾಹಿನಿ
Ornamental seperator
  • Login or register to post comments
  • 920 hits
  • Email this page
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 15, 2006 - 1:39am — srivathsajoshi

Re: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

srivathsajoshi's picture

ಉರವಣೆ - ಆತುರ, ವೇಗ, ಗಡಿಬಿಡಿ, ದುಡುಕು, ಕೋಪ, ಪ್ರಭಾವ, ದಿಟ್ಟತನ.
ಈಗ ನಾವು ಕೆಟ್ಟ ಧೈರ್ಯ ಎಂದು ಹೇಳುತ್ತೇವಲ್ಲ ಅದಕ್ಕೆ ಉರವಣೆ ಎನ್ನಬಹುದೇ ?

ಬಬ್ರುವಾಹನ ಚಿತ್ರದ 'ಆರಾಧಿಸುವೆ ಮದನಾರಿ...' ಹಾಡಿನಲ್ಲಿ
"ಮೈದೋರಿ ಮುಂದೆ ಸಹಕರಿಸು... ಆ ಮಾರನುರವಣೆ ಪರಿಹರಿಸು..." ಎಂಬ ಸಾಲು ಇದೆ.
ಮಾರನ + ಉರವಣೆ = ಮಾರನುರವಣೆ (= ಕಾಮೋದ್ವೇಗ). ಹೌದು, ಅದು ಒಂದು ರೀತಿಯಲ್ಲಿ 'ಕೆಟ್ಟ ಧೈರ್ಯ'ಕ್ಕೂ ಕಾರಣವಾಗಬಹುದು!

- ಶ್ರೀವತ್ಸ ಜೋಶಿ

  • Login or register to post comments
  • link
  • Email this ಪ್ರತಿಕ್ರಿಯೆ
December 15, 2006 - 10:40am — shreekant.mishrikoti

ಉ:ಉಳ್ಳಿ, ಉರವಣಿ, ಉಡಿಕೆ

shreekant.mishrikoti's picture

ಉಳ್ಳೀ/ಉಳ್ಳೆ ಇವು ಉರುಳಿ/ಉರುಳೆ ಯ ಆಡುಬುಮಾತಿನ ರೂಪ.
( ನೋಡಿ ಮರಳು - ಮಳ್ಳು , ಸುರುಳಿ - ಸುಳ್ಳೀ , ಕರುಳು-ಕಳ್ಳೂ ,ಒರಳು-ಒಳ್ಳೂ ಇತ್ಯಾದಿ - ರ ಬದಲಾಗಿ ಳ ಬರುತ್ತದೆ ಅಂತ ಕಾಣುತ್ತದೆ)

ಉಡಿಕೆ - ಉತ್ತರ ಕರ್ನಾಟಕದಲ್ಲಿ ಮರುವಿವಾಹದ ಅರ್ಥದಲ್ಲೇ ಬಳಕೆಯಲ್ಲಿದೆ.

ಉರವಣಿಗೆ- ಉರಿ ಕ್ರಿಯಾಪದದ ರೂಪ ( ಉದಾ: ಅಂವ ಯಾಕೋ ಭಾಳ ಉರೀಲಿಕ್ಕೆ ಹತ್ಯಾನ. ಅವನ ಉರವಣಿಗೆ ಭಾಳ ಆತು. )

ನೀವು ನೆನಪಿಸಿಕೊಂಡ ದೇಷ ಉತ್ತಲ ಅಲ್ಲ - ಅದು ಉತ್ಕಲ - (ಬಹುSಅಃ ಓರಿಸ್ಸಾ)

(ಬರಹ ಸ್ಕೀಮಿನಂತೆ ಬರೆದಿದ್ದೇನೆ- ಬರಹದಲಿ ಪೇಸ್ಟ್ ಮಾಡಿಕೊಳ್ಳಿ)

  • Login or register to post comments
  • link
  • Email this ಪ್ರತಿಕ್ರಿಯೆ
December 15, 2006 - 11:19am — Sunil Jayaprakash

ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

Sunil Jayaprakash's picture

ಶ್ರೀವತ್ಸ ಜೋಶಿ wrote:
ಮಾರನ + ಉರವಣೆ = ಮಾರನುರವಣೆ (= ಕಾಮೋದ್ವೇಗ)

ಧನ್ಯವಾದಗಳು ಶ್ರೀವತ್ಸ ಜೋಶಿಯವರೆ, ಇಷ್ಟು ದಿನ ಎಲ್ಲೋ ಕಾಣೆಯಾಗಿಬಿಟ್ಟಿದ್ದಿರಲ್ಲಾ.

ಶ್ರೀಕಾಂತ ಮಿಶ್ರಿಕೋಟಿ wrote:

ಉಡಿಕೆ - ಉತ್ತರ ಕರ್ನಾಟಕದಲ್ಲಿ ಮರುವಿವಾಹದ ಅರ್ಥದಲ್ಲೇ ಬಳಕೆಯಲ್ಲಿದೆ.
ಉರವಣಿಗೆ- ಉರಿ ಕ್ರಿಯಾಪದದ ರೂಪ ( ಉದಾ: ಅಂವ ಯಾಕೋ ಭಾಳ ಉರೀಲಿಕ್ಕೆ ಹತ್ಯಾನ. ಅವನ ಉರವಣಿಗೆ ಭಾಳ ಆತು. )

ಸವಿಯೊದಗು. ಹಾಗಾದರೆ, ಉಡಿಕೆ ಉರವಣೆಗಳು ಇನ್ನೂ ಬಳಕೆಯಲ್ಲಿ ಅಂತಾಯಿತು.

ಉತ್ತಲ - ಎಂದರೆ ಅತ್ತಲೂ ಅಲ್ಲದ್ದು ಮತ್ತು ಇತ್ತಲೂ ಅಲ್ಲದ್ದು. ಮಾಡುತ್ತಲೇ, ಹೇಳುತ್ತಲೇ, ಕೇಳುತ್ತಲೇ.

ಅಲ್ಲಿ ಇಲ್ಲಿ ಉಲ್ಲಿ
ಅದು ಇದು ಉದು
ಅವರು ಇವರು ಉವರು
ಬಳಕೆ - ಅವರು ಹೇಳಿದ್ದನು ಇವರು ಬರೇ ಕೇಳುವಾಗ, ಕೆಲಸವನ್ನು ಯಾರು ಮಾಡುವರು ?
ಅತ್ತ ಇತ್ತ ಉತ್ತ
ಅತ್ತಣ ಇತ್ತಣ ಉತ್ತಣ
ಅತ್ತಲ ಇತ್ತಲ ಉತ್ತಲ, ಮಾಡುತ್ತಾ, ಮಾಡುತ್ತಲೇ

ಹಾಗೆಯೇ, ಉಳ್ಳಿ, ಉಳ್ಳೆ ಬಗ್ಗೆ ಇಲ್ಲಿ ವಿವರಣೆ ನೀಡಿದ್ದಾರೆ.

ಒಟ್ಟಿನಲ್ಲಿ, ಉರುಳಿ, ಉಳ್ಳಿ ಎಂಬುದು ತಿರುಗುತ್ತಿರುವುದನ್ನು, ಗುಂಡು ಗುಂಡಾಗಿರುವುದನ್ನು ಸೂಚಿಸುತ್ತದೆ. ಹಾಗೆಯೇ ಮುಳ್ಳು ಗಮನಿಸಿ. ಇದು ಆಡು ಮಾತಿನಲ್ಲಷ್ಟೇ ಅಲ್ಲದೆ, ಬರವಣಿಗೆಯಲ್ಲೂ ಹಾಗೆಯೇ ತಾನೇ ಇರುವುದು.

ಕನ್ನಡದಲ್ಲಿ, ಈ ರೀತಿಯ ಪ್ರಯೋಗಗಳು ಹಲವಾರಿವೆ.
ಕರ್ ಗಂಟು - ಕಗ್ಗಂಟು.

  • Login or register to post comments
  • link
  • Email this ಪ್ರತಿಕ್ರಿಯೆ
December 22, 2006 - 6:46am — Shyam Kishore

Re: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

Shyam Kishore's picture

ನಮಸ್ಕಾರ,

ಈ ಪದ ಬಹಳ ಪ್ರಚಲಿತದಲ್ಲಿದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮ ಕಡೆ ಬಳಕೆಯಲ್ಲಿತ್ತು. ಹಾಗಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೀನಿ.

ಉಬ್ಬೆ : ಶಾಖದಿಂದ ಹಣ್ಣು ಮಾಡುವುದು (ಬಾಳೆಹಣ್ಣು ಉಬ್ಬೆಗೆ ಹಾಕೋದು)

- ಶ್ಯಾಮ್ ಕಿಶೋರ್

  • Login or register to post comments
  • link
  • Email this ಪ್ರತಿಕ್ರಿಯೆ
December 22, 2006 - 10:41am — Sunil Jayaprakash

ಸವಿ: ಉಬ್ಬೆ

Sunil Jayaprakash's picture

ನಮ್ಮ ಕಡೆ ಉಬ್ಬೆ ಈ ರೀತಿ ಬಳಕೆಯಲ್ಲಿದೆ.

೧. ಸ್ವಲ್ಪ ಕಿಟಕಿ ತೆಗಿ, ಉಬ್ಬೆಗ್ ಹಾಕಿದ ಹಾಗ್ ಆಗ್ತಾ ಇದೆ.
೨. ಯಪ್ಪಾ! ಉಬ್ಬೆಗ್ ಹಾಕ್ದಾಗ್ ಆಗ್ತಾ ಇತ್ತು. ಸದ್ಯ ಕರೆಂಟ್ ಬಂತಲ್ಲ. ಫ್ಹಾನ್ ಹಾಕು.

ಉಬ್ಬೆ ಜಾಸ್ತಿ ಆದಾಗ ಬೊಬ್ಬೆಗಳು ಮೂಡುತ್ತವೆ. ಹಾಗೆಯೇ ನೀರನ್ನು ಉಬ್ಬೆಗೆ ಹಾಕಿದಾಗ ಬೊಬ್ಬುಳಿಗಳೇಳುತ್ತವೆ.

ಅಂದಹಾಗೆ ಇಂಗ್ಲೀಷಿನ bubble ಕೂಡ ಕನ್ನಡದಿಂದಲೇ ಬಂದಿರಬಹುದು. ಏಕೆ ಗೊತ್ತೆ, ನೋಡಿ, ಬೊಬ್ಬೆ ಎಂಬ ಪ್ರಯೋಗಗಳು ಕನ್ನಡದಲ್ಲಿದೆಯಲ್ಲವೇ?

ಕನ್ನಡದಲ್ಲಿ ಬೊಬ್ಬುಳಿ ಎಂಬ ಪದವಿದೆ. ಬೊಬ್ಬುಳಿ ಎಂದರೆ ಗುಳ್ಳೆಗಳು.

ಹಾಗೆಯೇ, ಕನ್ನಡದಲ್ಲಿ ಉಬ್ಬೆ ಅಂದರೆ ಮಳೆ ಎಂದೂ ಅರ್ಥವಿದೆಯಂತೆ.

ಪ್ರೊ.ಜಿ.ವಿ. ಅವರ ಅಂತರ್ಜಾಲ ನಿಘಂಟಿನಲ್ಲಿ ಇದಕ್ಕೆ ವಿವರಣೆ ಇಲ್ಲ.

ಕನ್ನಡ ಕಸ್ತೂರಿಯಲ್ಲಿ ಈ ರೀತಿ ವಿವರಣೆಯಿದೆ.
ಶೆಖೆ, ಕಾವು, ಉಷ್ಣ, Heat , The process by which clothes are steam-washed.

  • Login or register to post comments
  • link
  • Email this ಪ್ರತಿಕ್ರಿಯೆ
December 24, 2006 - 11:43pm — ravee...

Re: ಸವಿ: ಉಬ್ಬೆ

ravee...'s picture

ಸ್ನೇಹಿತರೆ, ನಮ್ಮ ಕಡೆ ಇಡ್ಲಿ, 'ಉಸಿರು ವಡೆ' ಇತ್ಯಾದಿಗಳನ್ನು ಉಬ್ಬೆಗೆ ಹಾಕಿಯೇ ಬೇಯಿಸುತ್ತಾರೆ! 'ಉಬ್ಬೆ' ಅನ್ನೋದು ಉಬ್ಬು ಪದದಿಂದಲೇ ಬಂದಿರಬಹುದು. 'ಉಬ್ಬೆ' ಮಳೆ ಅಲ್ಲ; 'ಹುಬ್ಬೆ' ಮಳೆ . ಆ ಮಳೆಯ ಕಾಲದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
April 28, 2007 - 3:48pm — mahesha

ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

mahesha's picture

ಅಲ್ಲಿ ಇಲ್ಲಿ ಉಲ್ಲಿ
ಅದು ಇದು ಉದು
ಅವರು ಇವರು ಉವರು
ಬಳಕೆ - ಅವರು ಹೇಳಿದ್ದನು ಇವರು ಬರೇ ಕೇಳುವಾಗ, ಕೆಲಸವನ್ನು ಯಾರು ಮಾಡುವರು ?
ಅತ್ತ ಇತ್ತ ಉತ್ತ
ಅತ್ತಣ ಇತ್ತಣ ಉತ್ತಣ
ಅತ್ತಲ ಇತ್ತಲ ಉತ್ತಲ, ಮಾಡುತ್ತಾ, ಮಾಡುತ್ತಲೇ

ಹಾಗೆ

ಎಲ್ಲಿ,
ಎದು,
ಎವರು
ಎತ್ತ,
ಎತ್ತಣ,
ಎತ್ತಲ
ಇವೂ ಕೇಳ್ಮೆ(ಕೇಳುವಿಕೆ)ಯನ್ನು ತೋರುವುವು

ಅನಿತು, ಇನಿತು, ಉನಿತು, ಎನಿತು
ಅನಿಬರು, ಇನಿಬರು, ಉನಿಬರು, ಎನಿಬರು ( ಅಷ್ಟು ಜನ, ಇಷ್ಟು ಜನ, ಉಷ್ಟು ಜನ, ಎಷ್ಟು ಜನ )
ಅನ್ನಿ, ಇನ್ನಿ, ಉನ್ನಿ, ಎನ್ನಿ ( ತೆಲುಗು )
ಅಂತು, ಇಂತು, ಉಂತು, ಎಂತು
ಅಪ್ಪಗೆ, ಇಪ್ಪಗೆ, ಉಪ್ಪಗೆ, ಎಪ್ಪಗೆ
ಅಹಗೆ, ಇಹಗೆ, ಉಹಗೆ, ಎಹಗೆ
ಹಾಗೆ, ಹೀಗೆ, ಹೂಗೆ, ಹೇಗೆ

ಹಾಗೆ
ಅಪ್ಪುದು( ಅಹುದು/ಹೌದು )= ಅದು ಹಾಗೇ, it is like that ( ಇಂದೂ ನಮ್ಮ ಕಡೆ ಮಾತಲ್ಲಿ 'ಅವುದು' ಆಗಿದೆ, ಪ ಬದಲು ವ ಬರುವಿಕೆ )
ಇಪ್ಪುದು ( ಇಹುದು ) = ಇದು ಇಗೇ, it is like this
ಉಪ್ಪುದು ( ಉಹುದು ) = ಅದು ಹೇಗೋ, it is somehow
ಎಪ್ಪುದು ( ಎಹುದು ) = ಅದು ಹೇಗೆ?, how is that?

ಅಂತ ಕೂಡ ಹೇಳಬೋದು...

"ಅಲ್ಲ , ಇಲ್ಲ, ಉಲ್ಲ, ಎಲ್ಲ" ಇವುಗಳ ನಡುವೇ ಏನಾದ್ರು ನಂಟಿದೆಯೇ? Smiling

======================================

  • Login or register to post comments
  • link
  • Email this ಪ್ರತಿಕ್ರಿಯೆ
April 28, 2007 - 3:50pm — mahesha

ಉ: ಸವಿ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

mahesha's picture

ಅಪ್ಪಂಗೆ => ಅಹಂಗೆ => ಹಂಗೆ
ಇಪ್ಪಂಗೆ => ಇಹಂಗೆ => ಹಿಂಗೆ
ಉಪ್ಪಂಗೆ => ಉಹಂಗೆ =>ಹುಂಗೆ
ಎಪ್ಪಂಗೆ => ಎಹಂಗೆ => ಹೆಂಗೆ

ಈ ೦ ಕಾಣೆಯಾಗುವುದು ಉಂಟು

ಬೇಂಟ => ಬೇಟ
ಮಡಂಗು => ಮಡಗು
ತೋಂಟ => ತೋಟ
ತಾಂಕು => ತಾಕು
======================================

  • Login or register to post comments
  • link
  • Email this ಪ್ರತಿಕ್ರಿಯೆ
December 23, 2006 - 7:14pm — ಸಂಗನಗೌಡ

ಉ: 'ಉಬ್ಬೆ' , 'ಬೊಬ್ಬೆ', 'ಪುಗ್ಗಿ', 'ಗುಳ್ಳಿ' ಎಲ್ಲವೂ ಒಂದೇ.

ಸಂಗನಗೌಡ's picture

ಬಡಗಣ(ಉತ್ತರ) ಕರ್ನಾಟಕದಲ್ಲಿ 'ಹುಗ್ಗಿ' ಎಂಬ ಬೆಲಚು ತಿನಿಸು, ಬಲು ಸವಿಯಾಗಿರುತ್ತದೆ. ಇದನ್ನು ಗೋದಿಯನ್ನು ಹಾಲಿನಲ್ಲಿ ಕುದಿಸಿ ಮಾಡುತ್ತಾರೆ. ಇದು 'ಪುಗ್ಗಿ' ಎಂಬುದರಿಂದ ಬಂದಿರಬೇಕು. ಪುಗ್ಗಿ/ಪುಗ್ಗಾ ಎಂದರೆ ಗುಳ್ಳಿಯಂತೆ 'ಉಬ್ಬಿ'ರುವಂತದು. baloon ಅನ್ನು ಬಡಗಣದಲ್ಲಿ ಪುಗ್ಗಾ ಎನ್ನುತ್ತಾರೆ. 'ಉಬ್ಬಿ' ಎಂಬುವದೂ ಇದೇ ಅರು ನೀಡುತ್ತದೆ. ಉಬ್ಬುವದು ಎಂದರೆ ಊದುವದು ತಾನೆ.ಕುದಿಸುವದರಿಂದ ಕಾಳುಗಳು - ಇಲ್ಲವೇ ಇನ್ನಾವುದೇ ಇರಲಿ - ಉಬ್ಬಿಕೊಳ್ಳುವದರಿಂದ ಉಬ್ಬೆಗೆ ಹಾಕುವದು ಎಂಬ ಬಳಕೆ ರೂಢಿಗೆ ಬಂದಿರಬೇಕು.

ಹಾಗೆಯೇ ಬೊಬ್ಬೆ/ಬೊಬ್ಬುಳಿ ಅಂದರೆ ಅದೇ ಆಗುವದು. 'ಮೈ ಮೇಲೆ ಬೊಬ್ಬೆಗಳೇಳುವದು' ಅನ್ನುತ್ತೇವಲ್ಲವೇ?

ಒಂದು ಕಾಲದಲ್ಲಿ ಕರ್ನಾಟಕದಲ್ಲಿ 'ಪುಗ್ಗಾ ಕುಪ್ಪಸ' ಭಾರಿ famous ಆಗಿತ್ತು.

'ಮೂತಿಯು ಉಬಾರಿಸಿದೆ' ಅಂದರೆ ಮೂತಿಯು ಉಬ್ಬಿಕೊಂಡಿದೆ ಎಂದು.

ಹಾಗಾಗಿ, ಉಬ್ಬೆ,ಪುಗ್ಗಿ,ಬೊಬ್ಬೆ,ಬೊಬ್ಬುಳಿ,ಗುಳ್ಳಿ ಇವೆಲ್ಲವೂ ಉಬ್ಬಿಕೊಂಡಿರುವ ಅದನ್ನು ತೋರಿಸಲು ಬಳಸುವ ಒರೆ(ಪದ)ಗಳು.

  • Login or register to post comments
  • link
  • Email this ಪ್ರತಿಕ್ರಿಯೆ
December 24, 2006 - 12:03pm — olnswamy

ಉ ನಿಂದ ಆರಂಭವಾಗುವ ಪದಗಳು: ಬರ್ದುಂಕು, ಬದುಕು, ಸಾವು!

olnswamy's picture

ನಿಮ್ಮ ಬರವಣಿಗೆ ನೋಡಿ ಒಂದು ಹಳೆಯ ನೆನಪು ಹೀಗೆ ಮೂಡಿತು.
ಗೋವಿಂದ ಪೈಗಳ ಪದ್ಯ, ಗಿಳಿವಿಂಡು ಸಂಕಲನದ್ದು, "ಬರ್ದಿಲರು". ಹಾಗಂದರೇನು ಎಂದು ಕನ್ನಡ ಮೇಷ್ಟರೊಬ್ಬರು ಕೇಳಿದರು. ನಾವಿಬ್ಬರೂ ಹೋಗಿ ಕಿಟಲ್ ನಿಘಂಟು ನೋಡಿದೆವು. ಬರ್ದು ಎಂದರೆ ಸಾವು, ಇಲ ಅಂದರೆ ಇಲ್ಲ, ಇಲ್ಲದ ಎಂದರ್ಥ. ಬರ್ದಿಲರು ಎಂದರೆ ದೇವತೆಗಳು ಎಂದು ತಿಳಿಯಿತು.
ಬರ್ದುಂಕು ಅನ್ನುವುದು ಹೊಸಗನ್ನಡದಲ್ಲಿ ಬದುಕು ಎಂದಾಗಿದೆ. ಬರ್ದು ಎಂದರೆ ಸಾವು ಎಂಬರ್ಥವಾದರೆ ಉಂಕು ಅನ್ನುವ ಪ್ರತ್ಯಯ ಇದೆಯೋ? ಕೇಶಿರಾಜನ ಶಬ್ದಮಣಿ ದರ್ಪಣ ನೋಡಿದೆ. ಉಂಕು ಅನ್ನುವುದು ಪ್ರತ್ಯಯ ಹೌದು. ಅವುಂಕು, ಅಡುಂಕು, ಇತ್ಯಾದಿ ಉದಾಹರಣೆ ಕೊಟ್ಟಿದ್ದಾನೆ.
ಹಾಗಾದರೆ ಬದುಕು ಅನ್ನುವುದು, ಹಿಂದಿನ ರೂಪ ಬರ್ದುಂಕು ಅನ್ನುವುದು, ಸಾವಿನಿಂದ ಆವೃತ್ತವಾದ, ಸಾವನ್ನು ಒಳಗೊಂಡ ಅನ್ನುವ ಅರ್ಥ ಕೊಡಬೇಕಲ್ಲವೇ! ಬದುಕು ಅಂದರೆ ಸಾವನ್ನು ಒಳಗೊಂಡದ್ದು ಅನ್ನುವ ನಿಷ್ಪತ್ತಿ ರೋಮಾಂಚಕಾರಿ. ಭಾಷೆಯ ಸೊಗಸು ಇದಲ್ಲವೆ!

  • Login or register to post comments
  • link
  • Email this ಪ್ರತಿಕ್ರಿಯೆ
January 4, 2007 - 3:26pm — Sunil Jayaprakash

ಬದುಕಿನ ಸ್ವಾರಸ್ಯ

Sunil Jayaprakash's picture

ಓ.ಎಲ್.ಎನ್ ಸ್ವಾಮಿಯವರೆ, ಬದುಕು ಪದದ ನಿಷ್ಪತ್ತಿಯನ್ನು ತಿಳಿಸಿಕೊಟ್ಟು ತುಂಬಾ ಉಪಕಾರ ಮಾಡಿದ್ದೀರಿ. ರೋಮಾಂಚನಕಾರಿಯಾಗಿದೆ ಈ ವಿವರಣೆ. ಈ ನಿಷ್ಪತ್ತಿಯನ್ನು ನಾನು ಕನ್ನಡ ವಿಕ್ಷ್‌ನರಿಯಲ್ಲಿ ಸೇರಿಸಿರುವೆ.

  • Login or register to post comments
  • link
  • Email this ಪ್ರತಿಕ್ರಿಯೆ
January 4, 2007 - 4:12pm — ಶಿವ

ಬದುಕು!

ಶಿವ's picture

ಹಾಗಾದರೆ ಬದುಕು ಅನ್ನುವುದು, ಹಿಂದಿನ ರೂಪ ಬರ್ದುಂಕು ಅನ್ನುವುದು, ಸಾವಿನಿಂದ ಆವೃತ್ತವಾದ, ಸಾವನ್ನು ಒಳಗೊಂಡ ಅನ್ನುವ ಅರ್ಥ ಕೊಡಬೇಕಲ್ಲವೇ! ಬದುಕು ಅಂದರೆ ಸಾವನ್ನು ಒಳಗೊಂಡದ್ದು ಅನ್ನುವ ನಿಷ್ಪತ್ತಿ ರೋಮಾಂಚಕಾರಿ.

 

 

ವಾವ್! ಧನ್ಯವಾದಗಳು ಈ ಮಾಹಿತಿಗೆ.

  • Login or register to post comments
  • link
  • Email this ಪ್ರತಿಕ್ರಿಯೆ
April 28, 2007 - 3:35pm — mahesha

ಉ: ಬದುಕು!

mahesha's picture

ಬರ್ದು = ಸಾವು
ಬರ್ದಿಲ = ಸತ್ತವರ ಮನೆ; ನಾಕ
ಬರ್ದಿಲರು = ದೇವರೆಗೆಳು

======================================

  • Login or register to post comments
  • link
  • Email this ಪ್ರತಿಕ್ರಿಯೆ
April 29, 2008 - 9:01pm — kannadakanda

ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

kannadakanda's picture

ಉಳ್ಳಿ ಎಂದರೆ ಉಬ್ಬು ಅಲ್ಲ ಸ್ವಾಮಿ. ಉಳ್ಳಿ ಅಂದರೆ ಉರುಳಿ. ಅಂದರೆ ಉರುಳಿಕೊಂಡು ಹೋಗುವುದರಿಂದ ಉಳ್ಳಿ, ಉಳ್ಳಾಗೆಡ್ಡೆ, ಈರುಳ್ಳಿ, ಈರು ಅಂದರೆ ತೇವ ಆದ್ದರಿಂದ ನೀರುಳ್ಳಿ (ನೀರಿರುವ ಉಳ್ಳಿ). ಬೆಳ್ಳುಳ್ಳಿ= ಬೆಳ್ಳಗಿರುವ ಉಳ್ಳಿ. ಹೋಲಿಸಿ ಮರುಳ =ಮಳ್ಳ (ಆಡುಭಾಷೆ) ಬೆರಳು=ಬೆಳ್ಳು(ಆಡುಭಾಷೆ). ಹಾಗೆಯೇ ಉರುಳಿ=ಉಳ್ಳಿ (ಆಡುಭಾಷೆ ಕಾಲಕ್ರಮೇಣ ಒಗ್ಗಿಸಿಕೊಂಡ ಶಿಷ್ಟಭಾಷೆ). ಇನ್ನೂ ಸಾಕಷ್ಟು ಉದಾಹರೆಣೆಗಳಿವೆ.

  • Login or register to post comments
  • link
  • Email this ಪ್ರತಿಕ್ರಿಯೆ
April 30, 2008 - 6:08am — mahesha

ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

mahesha's picture

^^ ಒಪ್ಪ ತಕ್ಕ ಮಾತು
=====================================
ಮಾಯ್ಸ!

  • Login or register to post comments
  • link
  • Email this ಪ್ರತಿಕ್ರಿಯೆ
May 7, 2008 - 12:07pm — kannadakanda

ಉ: "ಉ"ವಿನಿಂದ ಪ್ರಾರಂಭವಾಗುವ ಕೆಲವು ಕನ್ನಡ ಪದಗಳು

kannadakanda's picture

ಉಳ್ಳಿ ಅಂದರೆ ಉಬ್ಬು ಎನ್ನುವುದು ತಪ್ಪು ಕಲ್ಪನೆ. ಉಳ್ಳಿ ಎಂದರೆ ಉರುಳಿ ಅಂದರೆ ಉರುಳಿಕೊಂಡು ಹೊಗುವುದಱಿಂದ ಉರುಳಿ->ಉಳ್ಳಿ. ಗ್ರಾಮೀಣರ ಬಾಯಲ್ಲಿ ಬೆರಳು->ಬೆಳ್ಳು ಆಗುವಂತೆ ಮೊದಲು ಉರುಳಿ ಎನ್ನುವುದನ್ನು ಉಳ್ಳಿ ಎಂದು ಗ್ರಾಮ್ಯರ ನುಡಿಯನ್ನು ಶಿಷ್ಟಕ್ಕೆ ಸೇರಿಸುವಂತೆ ಉದಾಹರಣೆಗೆ ಬೆರಲ್‍->ಬೆರಳ್‍ ಶಿಷ್ಟವಾದಂತೆ ಈ ಉರುಳಿ->ಉಳ್ಳಿ ಶಿಷ್ಟವಾಗಿದೆ. ನೀರುಳ್ಳಿ->ಈರುಳ್ಳಿ ನೀರಿರುವುದಱಿಂದ (ಈರು ಅಂದರೆ ಒದ್ದೆ ತೇವ) ಹಾಗೂ ಬಿಟ್ಟರೆ ಉರುಳಿಕೊಂಡುಹೋಗುವುದಱಿಂದ ಈರುಳ್ಳಿ ಅಥವಾ ನೀರುಳ್ಳಿ. ಬೆಳ್ಳುಳ್ಳಿ ಬೆಳ್ಳಗಿದ್ದು ಬಿಟ್ಟರೆ ಉರುಳಿಕೊಂಡುಹೋಗುವುದಱಿಂದ ಬೆಳ್ಳುಳ್ಳಿ. ಇದನ್ನಾಗಲೆ ವಿಶ್ಲೇಷಿಸಿದ್ದೇನೆ.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • firefox tab, keyboard tabಗಳಿಗೆ ಕನ್ನಡ ಪದಗಳು
  • Minimize and Maximize
  • ಕನ್ನಡದ ಆಪು ಮತ್ತು ಇಂಗ್ಲೀಸ off ಎರಡು ಒಂದೇ
  • ಕನ್ನಡದಿಂದ ಸಕ್ಕದಕ್ಕೆ ಒರೆಗಳು
  • ಅಚ್ಚಕನ್ನಡದ ನೆಚ್ಚನ ಒರೆಗಳು
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮೇ, 23, ರಿಂದ ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಧಿಕೃತವಾಗಿ ವಿಮಾನಯಾನ ಪ್ರಾರಂಭಿಸಲಿದೆ !
  • ಆಹಾರ ಬೆಲೆ ಏರಿಕೆ: ಭಾರತದ ಮಕ್ಕಳಿಗೆ ಸಿಕ್ಕಾಪಟ್ಟೆ ತೊಂದರೆಯಾಗಬಹುದು - ಯೂನಿಸೆಫ್ ಎಚ್ಚರಿಕೆ
  • ಕಲಿತರೆ ಹೀಗೆ...
  • ಬುದ್ಧನ ನೆನಪಲ್ಲ್ಲಿ ಕೆಲವು ಸತ್ಯಗಳನ್ನು ಧ್ಯಾನಿಸುತ್ತಾ....
  • 'ವಿಧ್ಯಾರ್ಥಿಗೂ.......ಕಲೆಗೂ' ಮಧ್ಯ ಇರೋ ಕಲಾ ವಿದ್ಯಾರ್ಥಿಯ 'ಖಾಲಿ' ಮೂರ್ತ ರೂಪ
  • ರವಿವರ್ಮನ ನಾಡಿನಲ್ಲೊ೦ದು ವಾರ
  • ಅನನ್ಯ ಅಲ್ಲಮ - ೮

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator