24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹೊಸತು: ಸಂಪದದಲ್ಲಿ ಮಾಡರೇಶನ್ - ಹೇಗೆ?

June 4, 2010 - 10:51pm
ನಿರ್ವಹಣೆ

ಎಲ್ಲ ಓದುಗರ ಗಮನಕ್ಕೆ,

ಕಳೆದ ಕೆಲವು ದಿನಗಳಿಂದ ಸಂಪದದ ಪುಟಗಳಲ್ಲಿ ನೀವು ಗಮನಿಸಿರುವಂತೆ ಹೊಸತೊಂದು ಫೀಚರ್ ಸೇರ್ಪಡೆಯಾಗಿದೆ:

 

ಪುಟಗಳಲ್ಲಿ:

"ನಿರ್ವಾಹಕರ ಗಮನಕ್ಕೆ ತನ್ನಿ"

ಪ್ರತಿಕ್ರಿಯೆಗಳಲ್ಲಿ:

"ಅನುಚಿತ ಪ್ರತಿಕ್ರಿಯೆ? ಇಲ್ಲಿ ಕ್ಲಿಕ್ ಮಾಡಿ"

 

ಲಾಗಿನ್ ಆದ ಸದಸ್ಯರಿಗೆ ಮಾತ್ರ ಈ ಮಾಡರೇಶನ್ ಬಟನ್ನುಗಳು ಲಭ್ಯ.

ಸದಸ್ಯರು ಇದನ್ನು ಸಾಧ್ಯವಾದಷ್ಟು ಬಳಸಿ ಸಂಪದದಲ್ಲಿ ಸೇರಿಸಲ್ಪಡುತ್ತಿರುವ ಬರಹ ಹಾಗೂ ಪ್ರತಿಕ್ರಿಯೆಗಳಿಗೆ ಸ್ವತಃ ಸಮುದಾಯವೇ ಮಾಡರೇಶನ್ ಮಾಡಿಕೊಳ್ಳುವಂತೆ ಮಾಡಬಹುದು.

 

ಹೇಗೆ ಕೆಲಸ ಮಾಡುತ್ತದೆ?

ಪ್ರತಿ ಸದಸ್ಯರ ಅಕೌಂಟಿಗೂ ಒಂದು ಮಾಡರೇಶನ್ ಅಂಕ. ಒಟ್ಟಾರೆ ಮಾಡರೇಶನ್ ಅಂಕಗಳು  ನಿರ್ದಿಷ್ಟ ಸಂಖ್ಯೆ ತಲುಪಿದ ಕೂಡಲೆ ಪುಟ ಅಥವ ಪ್ರತಿಕ್ರಿಯೆ ತನ್ನಷ್ಟಕ್ಕೆ ಪ್ರಕಟಣೆಯಿಂದ ಹೊರಹೋಗುವುದು.

ಸಂಪದದ ಸೂಚನೆಗಳನ್ನು ಉಲ್ಲಂಘಿಸುವ ಸದಸ್ಯರ ಅಕೌಂಟುಗಳನ್ನೂ ಉಳಿದ ಸದಸ್ಯರು ರಿಪೋರ್ಟ್ ಮಾಡಬಹುದು. 

 

ಲೇಖನ ವರ್ಗ (Category): 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by santhosh_87 on

ಬದಲಾವಣೆಗಳು ಚೆನ್ನಾಗಿವೆ. ಮೊದಲು 'ಸಂಪದದಲ್ಲಿ ಹೊಸತು' ಎನ್ನುವ ಕೊಂಡಿ, ಪುಟದ ಮೇಲೆ ಇರುತ್ತಿತ್ತು. ಇದರಿಂದ ಹೋಮ್ ಪೇಜ್ ಗೆ ಹೋಗಲು ತುಂಬಾ ಅನುಕೂಲವಾಗುತ್ತಿತ್ತು. ಆ ಸೌಲಭ್ಯ ಈಗ ಇಲ್ಲ. ಅದು ಇದ್ದರೆ ಚೆನ್ನ ಎಂದು ನನ್ನ ಅನಿಸಿಕೆ.

Submitted by chaitu on

ಬದಲಾವಣೆ ಖುಷಿ ತಂದಿದೆ,
ನನ್ನ ಅನಿಸಿಕೆ : ಕೃಷಿ ಸಂಪದ ಹೇಗೋ, ಹಾಗೆ "ಪರಿಸರ ಸಂಪದ" ಅಂತ ಒಂದು ಪ್ರತ್ಯೇಕ ವಿಭಾಗ ಇದ್ದರೆ ಚೆನ್ನಾಗಿರುತ್ತಿತ್ತು.
ಇದರಲ್ಲಿ ಪರಿಸರ ಕಾಳಜಿ ಬಗ್ಗೆ, ಮಾಲಿನ್ಯ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಬಹುದು ಹಾಗು ವರ್ಷಕ್ಕೊಮ್ಮೆ ಸಂಪದ ತಂಡದಿಂದ ಗಿಡ ನೆಡೋ ಕಾರ್ಯಕ್ರಮ ಇದ್ದರೆ ಅದರ ಗಮ್ಮತ್ತೆ ಬೇರೆ..

-ಚೈತನ್ಯ

Submitted by smurthygr on

ಬದಲಾವಣೆ ಚೆನ್ನಾಗಿದೆ. ಆದರೆ ನಿರ್ವಾಹಕರ ಗಮನಕ್ಕೆ ಬರದೇ "ಒಟ್ಟಾರೆ ಮಾಡರೇಶನ್ ಅಂಕಗಳು ನಿರ್ದಿಷ್ಟ ಸಂಖ್ಯೆ ತಲುಪಿದ ಕೂಡಲೆ ಪುಟ ಅಥವ ಪ್ರತಿಕ್ರಿಯೆ ತನ್ನಷ್ಟಕ್ಕೆ ಪ್ರಕಟಣೆಯಿಂದ ಹೊರಹೋಗುವುದು" ಯಾಕೋ ಅಷ್ಟು ಸರಿ ಅನ್ನಿಸ್ತಾ ಇಲ್ಲ.  ನಿರ್ವಾಹಕರ ಗಮನಕ್ಕೆ ತಂದು ಅವರೇ ನಿರ್ಧಾರ ತೆಗೆದುಕೊಳ್ಳುವುದು ಸರಿ ಅಲ್ಲವೇ?  ಇಲ್ಲದಿದ್ದರೆ  fake IDಗಳನ್ನು ಬಳಸಿ ಕೆಲವು ಬರಹಗಳನ್ನು "ಹೊರಹೋಗಿಸ"ಬಹುದೇನೋ? 

Submitted by vijay pai on

ನನ್ನ ಅನಿಸಿಕೆ:
ಪ್ರತಿಕ್ರಿಯೆಗಳ ಬಗ್ಗೆ
- ಎಷ್ಟೇ ನೆಗೆಟಿವ್ ಅಂಕಗಳು ಬಂದರೂ ಪ್ರತಿಕ್ರಿಯೆ ಪ್ರಕಟನೆಯಿಂದ ಹೊರ ಬಿಳಬಾರದು. ಪ್ರತಿಕ್ರಿಯಿಸಿದವನ ವಾದ /ಸಿದ್ಧಾಂತ / ಪ್ರತಿಕ್ರಿಯೆಯ ಹೂರಣ, ಪ್ರತಿಕ್ರಿಯೆಯ ರೀತಿ ಮುಂದೊಂದು ದಿನ ಆ ಬ್ಲಾಗನ್ನು ಓದಬಹುದಾದ ಓದುಗರಿಗೆ ಗೊತ್ತಾಗಬೇಕು. ಆದ್ದರಿಂದ ಪ್ರತಿಕ್ರಿಯೆ ದಾಖಲಾಗಿಯೇ ಇರಬೇಕಾದ್ದದ್ದು ಅವಶ್ಯಕ. ಪ್ರತಿಕ್ರಿಯೆ ಸತ್ವಯುತವಾಗಿದ್ದು, ಅನುಚಿತವಾಗಿಲ್ಲದ್ದಿದ್ದರೂ ನೆಗೆಟಿವ್ ಅಂಕ ಬಂದಲ್ಲಿ ಮೆಚ್ಚಿದ ಓದುಗರು ಪಾಸಿಟಿವ್ ಅಂಕ ಹಾಕಿ ಬ್ಯಾಲೆನ್ಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪಾಯಿಂಟ್ ಆಧಾರಿತ ಆಟೊಮೆಟೆಡ್ ಮಾಡರೇಶನ್ ಸೂಕ್ತವಲ್ಲವೆಂದು ನನ್ನ ಅನಿಸಿಕೆ.
- ಪ್ರತಿಕ್ರಿಯಿಸುವ ವ್ಯಕ್ತಿ ತಮಗೆ ತಾವೇ ಅಂಕ ಹಾಕಿಕೊಳ್ಳಲು/ಕಡಿಮೆ ಮಾಡಿಕೊಳ್ಳಲು ಅವಕಾಶ ಇರಬಾರದು.

ಲೇಖನದ ಬಗ್ಗೆ:
- ಓದುಗರು ನಿರ್ವಾಹಕರ ಗಮನಕ್ಕೆ ತಂದು, ನಿರ್ವಾಹಕರು ಈ ಬಗ್ಗೆ ಸೂಕ್ತವಾದ ನಿರ್ಣಯ ಕೈಗೊಳ್ಳಬೇಕು.

Submitted by hpn on

ವಿಜಯ್,
"ಅನುಚಿತ ಪ್ರತಿಕ್ರಿಯೆ" ಎಂದು ನಮೂದಿಸುವ ಆಯ್ಕೆ, ಕಾಮೆಂಟುಗಳಿಗೆ ಅಂಕ ನೀಡುತ್ತಿದ್ದ ಮಾಡ್ಯೂಲುಗಳು ಪ್ರತ್ಯೇಕ ಫೀಚರುಗಳು.
ಏಳೆಂಟು ಪ್ರತ್ಯೇಕ ಅಕೌಂಟುಗಳಿಂದ ಪ್ರತಿಕ್ರಿಯೆ ರಿಪೋರ್ಟ್ ಮಾಡಲ್ಪಟ್ಟಿದೆಯೆಂದರೆ ಪ್ರತಿಕ್ರಿಯೆ ಅನುಚಿತವಾಗಿ ಇರುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಇದರಲ್ಲಿ ನೆಗೆಟಿವ್ ಅಂಕ ಇಲ್ಲ. It is a count of number of times the comment is reported to the moderation team.

ಈಗಿನಂತೆ ಸೇರ್ಪಡೆಯಾಗಿರುವುದು Basic moderation. ತೀರ ಕಡಿಮೆ ಸಂಪನ್ಮೂಲಗಳಲ್ಲಿ ನಡೆಯಿತ್ತಿರುವ ಸಂಪದದಲ್ಲಿ ಸದ್ಯಕ್ಕೆ ಇದೊಂದು ಹೆಜ್ಜೆ. ಕ್ರಮೇಣ ಮಾಡರೇಶನ್ ಉತ್ತಮಗೊಳ್ಳುತ್ತ ಹೋಗುವುದು. ಇದರಲ್ಲಿ ನಿಮ್ಮೆಲ್ಲರ ಭಾಗವಹಿಸುವಿಕೆ ಅಗತ್ಯ.

Submitted by vijay pai on

ವಿವರಣೆಗೆ ಧನ್ಯವಾದಗಳು ಹರಿ ಅವರೆ..
ನೀವು ಹೇಳಿದಂತೆ ಸಂಪದದ ಸದುಪಯೋಗ ಸಂಪದಿಗರ ಕೈಯಲ್ಲಿದೆ.

ಲೇಖನಗಳ ಗುಣಮಟ್ಟ ಕಾಪಾಡುವಲ್ಲಿ ಈ ಕೆಳಗಿನ ತಂತ್ರವನ್ನು ಅನುಸರಿಸಿದರೆ ಹೇಗೆ?
- ಎಲ್ಲ ಸಂಪದಿಗರಿಗೆ ಒಂದು ತಿಂಗಳಿಗೆ ಸೇರಿಸಬಹುದಾದ ಲೇಖನಗಳಿಗೆ ಆಟೊಮೆಟೆಡ್ ಮಿತಿ ಇಡುವುದು. ಉದಾ: ತಿಂಗಳಿಗೆ 5 ಲೇಖನ ಸೇರಿಸಬಹುದು. 6ನೇ ಲೇಖನ ತಾನಾಗಿ ತಿರಸ್ಕೃತವಾಗಬೇಕು.
- ನಿರ್ವಾಹಕರು ಒಬ್ಬ ಸಂಪದಿಗ ಲೇಖಕನ ಲೇಖನಗಳ ಗುಣಮಟ್ಟ ನೋಡಿ ಈ ಮಿತಿಯನ್ನು ಏರಿಸುವ ಅವಕಾಶವಿರಬೇಕು ಅವಶ್ಯಕವೆನಿಸಿದರೆ.

Submitted by ಉಉನಾಶೆ on

ವಿಜಯ್:
ಇದು ಕಿರುಕವಿ ಸಿದ್ಧರಾಮ ಅವರ ವಿರುದ್ಧ ಪಿತೂರಿ ಅನ್ನಬೇಕಾಗುತ್ತದೆ. ;)
ಹಾಗೆ ನಿಯಮ ಮಾಡಿದರೆ ನೀವು ಸಿದ್ಧರಾಮ ಶತಕವನ್ನು ಕಮೆಂಟಿನಲ್ಲೆ ಬರೆದು ಮುಗಿಸಬೇಕಾಗುತ್ತದೆ.
ಇತೀ, ಉಉನಾಶೆ

Submitted by vijay pai on

ಉಮೇಶ್..
ನಾನೇನಾದ್ರೂ ಸಿದ್ರಾಮ ಶತಕ ವನ್ನ ಬ್ಲಾಗ್ನಲ್ಲಿ ಹಾಕಿದ್ದಿದ್ರೆ..ಕಿರುಕವಿ ಜೊತೆ ಈ ಕಿರಿ ಕಿರಿ ಕವಿಗೂ ಗೇಟಪಾಸ್ ಕೊಡ್ಸತ್ತಿದ್ರೊ ಏನೊ! ;). ಅದಕ್ಕೆ ಕಮೆಂಟಿನಲ್ಲೇ ಕಾವ್ಯ(?) ಬರೆದು, ನನ್ನ ಪ್ರತಿಭೆ ತೋರಿಸಿ ಸಂಪದದ ಸದುಪಯೋಗ ಮಾಡಿಕೊಂಡೆ!:).

Submitted by smurthygr on

ನೋಡಿ, ಈಗಾಗಲೇ siddaramkorpalli ಅವರ ಒಂದು ಕವನ ಹೊರಹೋದಂತಿದೆ. ಅದರಲ್ಲಿ "ಅನುಚಿತ" ಏನಿತ್ತೋ ಗೊತ್ತಾಗ್ತಾ ಇಲ್ಲ.
ಇನ್ನೊಂದು ಪ್ರಶ್ನೆ: ಯಾವುದೋ ಒಂದು ಪ್ರತಿಕ್ರಿಯೆಗೆ ಮೈನಸ್ ಅಂಕಗಳು ಹೆಚ್ಚಾದರೆ ಕೇವಲ ಆ ಪ್ರತಿಕ್ರಿಯೆ ಹೊರಹೋಗುತ್ತೋ ಇಲ್ಲ ಇಡೀ ಪುಟ ಹೊರಹೋಗುತ್ತೋ? ಪ್ರತಿಕ್ರಿಯೆ ಮಾತ್ರ ಹೊರಹೋದರೆ ಇಂತಹವರ ಇಂತದ್ದೊಂದು ಪ್ರತಿಕ್ರಿಯೆ ಇತ್ತು ಅದು ಹೊರ ಹಾಕಲ್ಪಟ್ಟಿದೆ ಅಂತ ಆ ಜಾಗದಲ್ಲಿ ಬಂದರೆ ಚೆನ್ನಾಗಿರುತ್ತೆ ! ಈ ರೀತಿ ಮಾಡಲು ಸಾಧ್ಯವೇ?

Submitted by shivaram_shastri on

[ನೋಡಿ, ಈಗಾಗಲೇ siddaramkorpalli ಅವರ ಒಂದು ಕವನ ಹೊರಹೋದಂತಿದೆ.]
ಹೌದಾ? ಅದು ಯಾವ ಕವನ ಅಂತ ಗೊತ್ತಾಯ್ತಾ?
[ಅದರಲ್ಲಿ "ಅನುಚಿತ" ಏನಿತ್ತೋ ಗೊತ್ತಾಗ್ತಾ ಇಲ್ಲ.]
ಹೌದು; ನನಗೂ ಸಿದ್ದರಾಮರ ಕವನಗಳಲ್ಲಿ ಅನುಚಿತವಾದದ್ದು ಏನೇನೂ ಕಂಡಿರಲಿಲ್ಲ.

Submitted by manjunath.hosur on

ಹೌದು ಸಿದ್ದರಾಮನವರ ಕವನವನ್ನು ಹೊರತೆಗೆಯಬಾರದಾಗಿತ್ತು.. ಆ ಕವನ ಯಾವುದು ಅಂತಾ ಮರೆತುಹೋಗಿದೆ, ಯಾಕಂದ್ರೆ ಒಂದು ದಿವಸದಲ್ಲಿ ಅಷ್ಟೊಂದು ಕವನಗಳನ್ನು ಒಂದಾದ್ಮೇಲೊಂದು ಹಾಕ್ತಾ ಹೋದ್ರೆ ನೆನಪಲ್ಲುಳಿಯೋದು ಕಷ್ಟ. :). ಆದ್ರೆ ಆ ಕವನ ಬಂದ ಮೇಲೆ ನಾನು ಸಿದ್ದರಾಮ ಅವರಿಗೆ ಎಲ್ಲಾ ಕವನಗಳನ್ನು ಸೇರಿಸಿ ಒಂದೇ ಸಲ ಪ್ರಕಟಿಸೋದಕ್ಕೆ ಕೇಳಿಕೊಂಡಿದ್ದೆ. ಅಲ್ಲದೇ, ಅವರಿಗೆ ನೀವು ಈಗ ಸಂಪದದ ಮೋಸ್ಟ್ ವಾಂಟೆಡ್ ಪರ್ಸನಾಲಿಟಿ ಅಂತ ಕೂಡ ಹೇಳಿದ್ದೆ.. ಆದ್ರೆ ಅವರ ಆ ಕವನಾನೆ ತೆಗೆದು ಹಾಕಲಾಗಿದೆ. "ಆ ಕವನ" ಅಲ್ಲದೇ ಅವರ ಇನ್ನೊಂದು ಕವನವನ್ನೂ ತೆಗೆದುಹಾಕಲಾಗಿದೆ ಅಂತ ನನ್ನ ಭಾವನೆ. ಸರಿಯಾಗಿ ಹೇಳೋಕೆ ಆಗ್ತಾ ಇಲ್ಲ.

ವಿವಾದಾತ್ಮಕ ಲೇಖನವೇನೂ ಆಗಿರಲಿಲ್ಲ ಅವು. ಬರಹದ ಅಸಮರ್ಪಕ ಗುಣಮಟ್ಟ, ಕಾಗುಣಿತ ತಪ್ಪು, ಇತ್ಯಾದಿಗಳು ಎಲ್ಲರ ಲೇಖನಗಳಲ್ಲೂ ನುಸುಳುವಂಥವೇ ಆಗಿವೆ, ವಿಶೇಷವಾಗಿ ಹೊಸ ಲೇಖಕರಲ್ಲಿ. ಅದಕ್ಕೆ ಇಷ್ಟೊಂದು ದೊಡ್ಡ ಶಿಕ್ಷೆ ಕೊಡಬಾರದು ಅಂತಾ ನನ್ನ ಮನವಿ. ಯಾರಿಗೆ ಗೊತ್ತು ಯಾರು ಮುಂದೆ ಯಾವ ರೀತಿಯಲ್ಲಿ ಮಿಂಚಬಹುದು ಅಂತ.. ನಿಜಕ್ಕೂ ಅವರ ಎಲ್ಲಾ ಕವನಗಳನ್ನೂ ಎಂಜಾಯ್ ಮಾಡಿದ್ದೆ ನಾನು; ಎಲ್ಲಿಯವರೆಗೆಂದರೆ ಅದನ್ನೇ ನೆನಪಿಸಿಕೊಂಡು ಬೇರೆ ಸಮಯದಲ್ಲೂ ನಗುವಷ್ಟು.. :).

ಹೀಗಾಗಿ ಕೊನೆಯದಾಗಿ, ಆ ಕವನವನ್ನು/ಗಳನ್ನು ಮರುಪ್ರಕಟಿಸಿ ಅಂತಾ ವೈಯಕ್ತಿಕವಾಗಿ ಕೇಳಿಕೊಳ್ಳುತ್ತಾ ಇದ್ದೇನೆ. :)

Submitted by harsha.st on

ಹೌದು ಸಿದ್ದರಾಮರ ಕವಿತೆಗಳು ಅನುಚಿತವಾಗಿದ್ದಿಲ್ಲ. ಕೇವಲ ಬರಹದ ಅಸಮರ್ಪಕ ಗುಣಮಟ್ಟ, ಕಾಗುಣಿತ ತಪ್ಪು ಇಷ್ಟಕ್ಕೆ ಇಷ್ಟೊಂದು ದೊಡ್ಡ ಶಿಕ್ಷೆ ಕೊಡಬಾರದು ಅಂತಾ ನನ್ನ ಅನಿಸಿಕೆ. ಸಿದ್ದರಾಮರ ಐ.ಡಿ. ಬ್ಲಾಕ್ ಆಗಿದ್ದರೆ ಸಾಧ್ಯವಾದಲ್ಲಿ ಅದನ್ನು ಅನ್-ಬ್ಲಾಕ್ ಮಾಡಬೇಕಾಗಿ ಈ ಮೂಲಕ ಸ೦ಪದ ನಿರ್ವಹಣೆ ತ೦ಡಕ್ಕೆ ಕೇಳಿಕೊಳ್ಳುತ್ತೇನೆ.
-- ಹರ್ಷ

Submitted by hpn on

ಸಿದ್ದರಾಮ ಕೋರ್ಪಳ್ಳಿಯವರ ಪುಟಗಳಿಗೆ ಮೇಲೆ ಹರ್ಷ ಬರೆದಿರುವಂತೆ 'ಅಸಮರ್ಪಕ ಗುಣಮಟ್ಟ'ದ ಪುಟಗಳಿಗೆ ಅವಕಾಶ ಮಾಡಿಕೊಡುತ್ತಿದ್ದೀರಿ ಎನ್ನುತ್ತ ಹತ್ತಾರು ಇ-ಮೇಯ್ಲುಗಳು ಬಂದು ತಲುಪಿವೆ. ಏನೂ ಪ್ರಯಾಸಪಡದೆ ಹಾಕಿದ ಗಂಟೆಗೊಂದು ಪುಟ ಹಾಗೆ ಸೇರಿಸುವುದು ಕೂಡ ತರವಲ್ಲ. ಹೀಗೆ ಹಾಕಿದ ಪುಟಗಳನ್ನು spam ಎಂದು ಪರಿಗಣಿಸಲೂಬಹುದು.

ಸಂಪದ ಒಂದು ಉತ್ತಮ ವೇದಿಕೆ. neutral ವೇದಿಕೆ ಕೂಡ. ಈಗಿನಂತೆ ಸಂಪದಕ್ಕೆ ಏನೂ ರೆವೆನ್ಯು ಇಲ್ಲ ಎಂಬುದು ನೆನಪಿರಲಿ. ಹೀಗಾಗಿ ಇದರ ಸದುಪಯೋಗಪಡಿಸಿಕೊಳ್ಳುವುದು ಇದನ್ನು ಬಳಸುವವರ ಕೈಯಲ್ಲಿದೆ. ಉತ್ತಮ ಗುಣಮಟ್ಟದ ಉಳಿವಿನಲ್ಲಿ ಸಂಪದದ ಉಳಿವೂ ಇದೆ. ಸಂಪದದಲ್ಲಿ ಇದಕ್ಕಾಗಿ ಕೆಲವು ತೀರ ಸರಳ ನಿಯಮಗಳಿವೆ:
http://sampada.net/r...

ಸಂಪದದಲ್ಲಿ ಭಾಗವಹಿಸುವವರು ಮೇಲಿನ ಪುಟದಲ್ಲಿರುವುದನ್ನು ಗಂಭೀರವಾಗಿ ಪಾಲಿಸಿದಲ್ಲಿ ಸಂಪದ ಎಂದಿನಂತೆ ಕನ್ನಡದ ಸಿರಿಯಾಗಿ ಉಳಿಯಬಲ್ಲುದು.

Submitted by asuhegde on

<<ಈಗಿನಂತೆ ಸಂಪದಕ್ಕೆ ಏನೂ ರೆವೆನ್ಯು ಇಲ್ಲ ಎಂಬುದು ನೆನಪಿರಲಿ.>>

ಹರಿಪ್ರಸಾದ್,

ಪದೇ ಪದೇ ನೆನಪಿಸುತ್ತೀರಿ ಈ ಮಾತುಗಳನ್ನು
ಮುಜುಗರಕ್ಕೆ ಒಳಪಡಿಸುತ್ತೀರಿ ಸಂಪದಿಗರನ್ನು

ತಯಾರಿದ್ದಾರೆ ಹೆಚ್ಚಿನೆಲ್ಲಾ ಸಂಪದಿಗರು ಸಂಪದದ ಉಳಿವಿಗಾಗಿ ದೇಣಿಗೆ ನೀಡುವುದಕ್ಕೆ
ನಾನಾಗಲೇ ಸಲ್ಲಿಸಿದ್ದೆ ಪಾರದರ್ಶಕವಾದ ರೂಪುರೇಷೆ ತಯಾರು ಮಾಡಿ ಎಂಬ ಬೇಡಿಕೆ

ಈ ನಿಟ್ಟಿನಲ್ಲಿ ಹೊಸ ಯೋಜನೆಯನ್ನು ಕೈಗೊಂಡು ಸಂಪದಿಗರ ಮುಂದಿಟ್ಟು ನೋಡಿ
ಜಾಹೀರಾತು ಪಡೆಯಬೇಕಾಗಿಲ್ಲ ನಾವು ಅನ್ಯರಂತೆ ಉದ್ದಿಮೆದಾರರನ್ನು ಕಾಡಿಬೇಡಿ

Submitted by hpn on

ಸುರೇಶ್, ನೀವು ಹೇಳಿದಷ್ಟು ಅದು ಸುಲಭ ಇಲ್ಲ.
ಸಂಪದಕ್ಕೆ ಹಣಕ್ಕಿಂತ ಮುಖ್ಯವಾಗಿ ಕೆಲಸಗಳನ್ನು ಸ್ವತಃ ವಹಿಸಿಕೊಳ್ಳುವವರ ಅಗತ್ಯ ಇದೆ. ಹೆಚ್ಚಿನ ಕೈಗಳ ಅವಶ್ಯಕತೆ ಇದೆ. ಆಸಕ್ತಿ ಇರುವವರು ನನಗೆ ಖುದ್ದಾಗಿ ಮೇಯ್ಲ್ ಮಾಡಿ.

Submitted by vijay pai on

ಶಾಸ್ತ್ರಿಗಳೆ ಮತ್ತು ಮಂಜುನಾಥ್ ಅವರೆ..
ಶನಿವಾರದಿಂದಿಚೆಗೆ ಸಂಪದದಿಂದ ಹೋದ ಲೇಖನಗಳು/ಪ್ರತಿಕ್ರಿಯೆಗಳು..ನನ್ನ ಗಮನಕ್ಕೆ ಬಂದಂತೆ.
- ಸಿದ್ರಾಮವರ ಒಂದು ಕವನ ಮತ್ತು ಅದರಲ್ಲಿಯ ಪ್ರತಿಕ್ರಿಯೆಗಳು. (ಇದನ್ನಿಲ್ಲಿ ಓದಬಹುದು. ಟಿಪಿಕಲ್ ಸಿದ್ರಾಮಣ್ಣ ಶೈಲಿಯ ಬರಹ :) http://sampada.net/b... )
- ಭಾಷಾಪ್ರೇಮಿಯವರ 'ಕೋರ್ಟ ಆದೇಶ' ಲೇಖನದಿಂದ ಕೆಲವು ಪ್ರತಿಕ್ರಿಯೆಗಳು.
- ನಾವಡರ 'ಸಾಲಿಮಠರಿಗೆ ನಮಸ್ಕಾರಗಳು' ದಿಂದ ಪ್ರತಿಕ್ರಿಯೆ
- ಸಾಲಿಮಠರ 'ನೆಹರೂ=ಸುಭಾಶ' ಲೇಖನದಿಂದ ಪ್ರತಿಕ್ರಿಯೆ

Submitted by shivaram_shastri on

ವಿಜಯ್ ಪೈ ಅವರೇ,
ಉಳಿದವುಗಳ ಕುರಿತು ನೆನಪಿಲ್ಲ.
ಸಿದ್ದರಾಮರ ಕವಿತೆಗಳು ಅನುಚಿತವಾಗಿದ್ದಿಲ್ಲ. ಅವುಗಳನ್ನು ಯಾವ ಕಾರಣಕ್ಕೂ ಅಳಿಸುವ ಅಗತ್ಯ ಇರಲಿಲ್ಲ.
{ತಮಾಷೆಗೆ: ಸಿದ್ದರಾಮರನ್ನು ಒಮ್ಮೆಗೇ ಪ್ರಸಿದ್ಧಿಗೆ ತಂದು, ಅವರ ಪ್ರತಿಭೆ ಸ್ವಾಭಾವಿಕವಾಗಿ, ಸಾವಧಾನವಾಗಿ ಲೋಕಕ್ಕೆ ಅರ್ಪಣೆಯಾಗುವ ಸಾಧ್ಯತೆಯನ್ನು ವಿಫಲಗೊಳಿಸಿದ ಆರೋಪ (ನನ್ನಿಂದ) ನಿಮ್ಮ ಮೇಲಿದೆ. }

Submitted by vijay pai on

>>ಸಿದ್ದರಾಮರನ್ನು ಒಮ್ಮೆಗೇ ಪ್ರಸಿದ್ಧಿಗೆ ತಂದು, ಅವರ ಪ್ರತಿಭೆ ಸ್ವಾಭಾವಿಕವಾಗಿ, ಸಾವಧಾನವಾಗಿ ಲೋಕಕ್ಕೆ ಅರ್ಪಣೆಯಾಗುವ ಸಾಧ್ಯತೆಯನ್ನು ವಿಫಲಗೊಳಿಸಿದ ಆರೋಪ (ನನ್ನಿಂದ) ನಿಮ್ಮ ಮೇಲಿದೆ. >>
ಹೌದು ಶಾಸ್ತ್ರಿಗಳೆ..ತಾವು ಹೇಳಿದ್ದು ಸತ್ಯ. ನಿಜವಾಗಿಯೂ ಈ ಗಿಲ್ಟಿ ಫಿಲಿಂಗ ನನ್ನ ಕಾಡುತ್ತಿದೆ. ನಾವು ಎರಡು-ಮೂರು ಜನ ಸುಮ್-ಸುಮ್ನೆ ಇಲ್ಲದ, ಉತ್ಪ್ರೆಕ್ಷಿತ ಜನಪ್ರಿಯತೆಯನ್ನು ಸಿದ್ರಾಮಣ್ಣನಿಗೆ ತಂದು ಈಗಿನ ಸ್ಥಿತಿಗೆ ಕಾರಣರಾದೆವೆನೊ ಅಂತಾ ಅನಿಸ್ತಾ ಇದೆ. ಈ ಬ್ಲಾಕಿಂಗ್ ತಾತ್ಕಾಲಿಕವಾಗಿದ್ದು ಸಿದ್ದರಾಮ ವಾಪಸ ಬರಲಿ ಎಂಬ ಹಾರೈಕೆ ನನ್ನದು.

Submitted by shivaram_shastri on

ತಮಾಷೆಗೆ ಹಾಗಂದೆ ವಿಜಯ್ ಅವರೇ,
ಸಿದ್ದರಾಮ ಅವರು ಮತ್ತೆ ಬರೆಯುತ್ತಾರೆ ಎಂಬ ವಿಶ್ವಾಸ ನನಗಿದೆ.
ಹಾಗೇನಾದರೂ ತಾಂತ್ರಿಕ ಕಾರಣಗಳಿಂದಾಗಿ ಸಿದ್ದರಾಮ ಅವರ ಐಡಿ ಪೂರ್ತಿಯಾಗಿ ಪ್ರತಿಬಂಧಿತವಾಗಿದ್ದಲ್ಲಿ ಅವರನ್ನು ಇನ್ನೊಂದು ಐಡಿ ತೆಗೆದುಕೊಂಡು ಬರೆಯುವಂತೆ ಕೇಳಿಕೊಳ್ಳೋಣ. ಸಂಪದ ನಿರ್ವಹಣಾ ತಂಡ ಈ ಕುರಿತು ಒಪ್ಪಿಗೆ ನೀಡುತ್ತದೆ ಅಂದುಕೊಳ್ಳುತ್ತೇನೆ.

Submitted by asuhegde on

ಬರಹಗಳನ್ನು, ಅಥವಾ ಪ್ರತಿಕ್ರಿಯೆಗಳು ತನ್ನಷ್ಟಕ್ಕೇ ತೆಗೆದುಹಾಕಲ್ಪಡುವ ಈ ಹೊಸ ವಿಧಾನ ಅಷ್ಟೊಂದು ಸೂಕ್ತ ಅಂತ ಅನಿಸುತ್ತಿಲ್ಲ.
ಸಂಪದಿಗರ ಮೇಲಿನ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಅನ್ಯರು ಈ ಶಸ್ತ್ರವನ್ನು ಬಳಸಿ ಯೋಗ್ಯ ಬರಹಗಳನ್ನು ಮತ್ತು ಬರಹಗಾರರನ್ನು ಸಂಪದದಿಮ್ದ ಹೊರಗಟ್ಟಿಬಿಡಬಹುದು.
ಇದರ ಬಗ್ಗೆ ಮರುಚಿಂತನೆ ಅಗತ್ಯ.

- ಆಸು ಹೆಗ್ಡೆ

Submitted by Shrikantkalkoti on

ಪ್ರತಿಕ್ರಿಯೆಗಳನ್ನು ತೆಗೆಯಬಾರದು ಎಂದು ವಿನಂತಿ..
ಆದರೆ -ve ಪಾಯಿಂಟ್ಸ್ ಕೊಡುವವರು ಅವುಗಳನ್ನು ನಿಂದನಾತ್ಮಕ ಹಾಗೂ ಅಶ್ಲೀಲ ಭಾಷೆ ಎಂದು ವಿಂಗಡಿಸಲು ಅನುವುಮಾಡಿಕೊಡಬೇಕು..
ನಿಂದನಾತ್ಮಕ ಹಾಗೂ ಅಶ್ಲೀಲ ಭಾಷೆಗಳ ಪ್ರಯೋಗ ಬಹಳ ಎಂದಲ್ಲಿ ನಿರ್ಣಾಯಕರು ಪರಾಂಬರಿಸಿ ಪ್ರತಿಕ್ರಿಯೆ ತೆಗೆಯಬಹುದು..

ಇನ್ನೊಂದು ವಿಚಾರ,
ಸರಿಯಾದ ಹೆಸರು,ಸ್ವಂತದ ಭಾವಚಿತ್ರವಿಲ್ಲದ ಪ್ರೊಫೈಲ್ಗಳನ್ನು ನಿಷೇಧಿಸಬೇಕು..
ಸಂಪದ ಸಭ್ಯರ ಗುಂಪು..ಹೀಗಿರುವಾಗ ಮುಖ ತೋರಿಸದೇ ಪ್ರತಿಕ್ರಯಿಸುವುದು ಏನು ಸಭ್ಯತನವೋ..
ಪ್ರತಿಕ್ರಿಯೆಗಳಲ್ಲಿ ತೋರದ,ಹಿಂಜರಿಕೆ ಮತ್ತು ನಾಚಿಕೆ,ಸ್ವಂತದ ಭಾವಚಿತ್ರ ಹಾಕುವುದರಲ್ಲಿ ಏಕೋ?
ಇದರಿಂದ fake id ಗಳನ್ನೂ ತಡೆಯಬಹುದೇನೋ..

ಈ ರೀತಿ ಮಾಡಲು ಸಾಧ್ಯವೇ?

Submitted by manju787 on

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ ಶ್ರೀಕಾಂತರೆ, ಈ ಫೇಕ್ ಐಡಿಗಳ ಕಾಟ ಇತ್ತೀಚೆಗೆ ತುಂಬಾನೆ ಜಾಸ್ತಿಯಾಗಿದೆ ಅನ್ನಿಸುತ್ತಿದೆ. << ಒಟ್ಟಾರೆ ಮಾಡರೇಶನ್ ಅಂಕಗಳು ನಿರ್ದಿಷ್ಟ ಸಂಖ್ಯೆ ತಲುಪಿದ ಕೂಡಲೆ ಪುಟ ಅಥವ ಪ್ರತಿಕ್ರಿಯೆ ತನ್ನಷ್ಟಕ್ಕೆ ಪ್ರಕಟಣೆಯಿಂದ ಹೊರಹೋಗುವುದು.>> ಇಂತಹ ಒಂದು ಅವಕಾಶವಿದ್ದಲ್ಲಿ ಈ ಫೇಕ್ ಐಡಿಗಳು ಯಾರ ಬರಹವನ್ನು/ಪ್ರತಿಕ್ರಿಯೆಯನ್ನು ಬೇಕಾದರೂ ಹೊರಗಟ್ಟಬಹುದಲ್ಲವೆ?

Submitted by hpn on

ಸದಸ್ಯರ ಐಡಿ ಬೇರೊಬ್ಬರನ್ನು ನಕಲು ಮಾಡುತ್ತಿದೆ ಎಂದು ಕಂಡುಬಂದಲ್ಲಿ ಆಯಾ ಸದಸ್ಯರ ಪುಟದಲ್ಲಿರುವ "Report abuse" ಆಯ್ಕೆಯನ್ನು ಕ್ಲಿಕ್ ಮಾಡಿ.
ಈಗಿನಂತೆ ಹೊಸ ಅಕೌಂಟುಗಳು ಕೂಡ ಮಾಡರೇಶನ್ ಮೂಲಕ ಹಾದು ಹೋದ ನಂತರ ಅನುಮತಿ ಪಡೆಯುತ್ತಿವೆ. ಸಂಪದದ back-end IP, usage history, email address ಮುಂತಾದವುಗಳನ್ನು ಬಳಸಿ ಹಲವು ಫೇಕ್ ಐಡಿಗಳನ್ನು ಪತ್ತೆ ಕೂಡ ಮಾಡುತ್ತದೆ. ಆದರೂ ಸದಸ್ಯರು ಸಕ್ರಿಯರಾಗಿ ಮೇಲಿನ ಸವಲತ್ತು ಹೆಚ್ಚಿನಂತೆ ಬಳಸಿದಲ್ಲಿ ಫೇಕ್ ಐಡಿಗಳ ಜೊತೆ ನಿಜವಾದ ಐಡಿಗಳು ಕೂಡ ಬ್ಲಾಕ್ ಆಗಿ ಹೋಗುವುದನ್ನು ತಡೆಯಬಹುದು.

Submitted by hamsanandi on

>>ಸರಿಯಾದ ಹೆಸರು,ಸ್ವಂತದ ಭಾವಚಿತ್ರವಿಲ್ಲದ ಪ್ರೊಫೈಲ್ಗಳನ್ನು ನಿಷೇಧಿಸಬೇಕು..
>>ಸಂಪದ ಸಭ್ಯರ ಗುಂಪು..ಹೀಗಿರುವಾಗ ಮುಖ ತೋರಿಸದೇ ಪ್ರತಿಕ್ರಯಿಸುವುದು ಏನು ಸಭ್ಯತನವೋ..

ಸಭ್ಯರಾದ ಮಾತ್ರಕ್ಕೆ ಮುಖ ತೋರಿಸಬೇಕು ಎಂದೆಲ್ಲಿದೆ ;)? ಮುಖ ತೋರಿಸದೇ ಇದ್ದರೂ ಸಭ್ಯರಾಗಿರಲು ಸಾಧ್ಯವಿಲ್ಲವೇ?

ಎರ್ಡೆರ್ಡ್ ಸಲ ನೋಡಕ್ಮೊದಲು
ಆಡೋದ್ಬೇಡ ಮಾತು ಅಂತ್ಲೇ
ಕೊಟ್ಟಿರ್ರ್ಬೇಕು ಮನುಷ್ಯರ್ಗೆ
ಎರ್ಡ್ ಕಣ್ಣು - ಒಂದೇ ನಾಲ್ಗೆ!

ಅದಕ್ಕೇ, ಯಾವುದೇ ಟಿಪ್ಪಣಿ ಹಾಕುವ ಮೊದಲು ನಾನು ಹಿಂದೊಮ್ಮೆ ಮಾಡಿದ ಅನುವಾದವನ್ನು ನೆನೆದು, ಬರೆಯಲೇಬೇಕೆನಿಸಿದಾಗ ಮಾತ್ರ ಹಾಕುತ್ತೇನೆ.

http://sampada.net/b...

Submitted by Shrikantkalkoti on

>ಸಭ್ಯರಾದ ಮಾತ್ರಕ್ಕೆ ಮುಖ ತೋರಿಸಬೇಕು ಎಂದೆಲ್ಲಿದೆ ;)? ಮುಖ ತೋರಿಸದೇ ಇದ್ದರೂ ಸಭ್ಯರಾಗಿರಲು ಸಾಧ್ಯವಿಲ್ಲವೇ?<
ಸಭ್ಯರೇ ಎಂದ ಮೇಲೆ ಮುಖ ತೋರಿಸಲು ಹಿಂಜರಿಕೆ ಏಕೆ?ಹೌದೋ ಅಲ್ಲವೋ ಎಂಬ ಅಳುಕಿದೆ ಎಂದಲ್ಲವೇ?
ನಮ್ಮನ್ನು ಗುರುತಿಸಲು ಇರುವ ಈ ಮುಖಾರವಿಂದವನ್ನೇ ಮರೆಮಾಚಿದರೆ ಎಂತು?

ಹಾಗೆಯೇ ನಮಗೆ ಉತ್ತಮ ಬರಹ,ಉತ್ತಮ ಪ್ರತಿಕ್ರಿಯೆ ಕೊಟ್ಟು ಪ್ರಶಂಸಿಸುವವರ ಮುಖ ನೋಡುವುದು ಖುಷಿಯ ಸಂಗತಿಯಲ್ಲವೇ..
ಮುಖ ತೋರಿಸುವ ಚಿತ್ರ ಹಾಕುವವರು ಅನುಚಿತ ಪ್ರತಿಕ್ರಿಯೆ ಕೊಡಲು ಸ್ವಲ್ಪವಾದರೂ ಹಿಂಜರಿಯುತ್ತಾರೆ ಎಂತಲೂ ನನ್ನ ಅನಿಸಿಕೆ..

ಇನ್ನು ನಿಮ್ಮ ಬಗ್ಗೆ ಹೇಳಬೇಕೆಂದರೆ ,ಅಷ್ಟು ಉತ್ತಮವಾಗಿ ಸುಭಾಷಿತಗಳ ಅನುವಾದಿಸುವವರನ್ನು ನೋಡುವ,ತಿಳಿಯುವ ಕುತೂಹಲ ನನಗಂತೂ ಇದೆ..
ನಾನೂ ನಿಮ್ಮ ಸುಭಾಷಿತಗಳನ್ನು ಓದಿ ಅದೇ ರೀತಿ ಬರೆಯಲು ಪಡ್ತಾ ಇದ್ದೇನೆ..
ಒಂದನೇ ಪ್ರಯತ್ನ ಇಲ್ಲಿದೆ ನೋಡಿ..
http://sampada.net/a...

Submitted by uniquesupri on

ತಮ್ಮ ಭಾವ ಚಿತ್ರವನ್ನು, ವಯಕ್ತಿಕ ವಿವವರಗಳನ್ನು ಕೊಡುವ ಆಯ್ಕೆಯ ಸ್ವಾತಂತ್ರ್ಯ ಸದಸ್ಯರಿಗೆ ಇದೆ. ಅದಕ್ಕಾಗಿ ಆಗ್ರಹ ಪಡಿಸುವುದು ಸರಿಕಾಣದು ಅಲ್ಲವೇ?

Submitted by suresh nadig on

ಸುಪ್ರೀತ್ , ನಿಮ್ಮ ಪ್ರತಿಕ್ರಿಯೆಗೆ ನನ್ನ ಸಹಮತವಿದೆ. ಭಾವಚಿತ್ರ ಹಾಕುವುದರಿಂದ ಇಲ್ಲಿ ಶುದ್ದ ಹಸ್ತರು ಎಂದು ಕಂಡರೂ, ಕೆಲವೊಂದು ಲೇಖನಗಳಿಂದಾಗಿ ತೊಂದರೆಯಾಗಬಹುದು. ಆದರೆ ನನ್ನ ಭಾವಚಿತ್ರವನ್ನು ಹಾಕಿದ್ದೇನೆ. ಹಾಗೇ ದಯವಿಟ್ಟು ಪ್ರತಿಕ್ರಿಯೆ ತೆಗೆಯುವ ಮುನ್ನ ಕಾರಣ ತಿಳಿಸಿದರೆ ಮುಂದಿನ ದಿನಗಳಲ್ಲಿ ತಿದ್ದುಕೊಳ್ಳಲು ಸಹಕಾರಿಯಾಗುತ್ತದೆ.

Submitted by uniquesupri on

>>> ಹಾಗೇ ದಯವಿಟ್ಟು ಪ್ರತಿಕ್ರಿಯೆ ತೆಗೆಯುವ ಮುನ್ನ ಕಾರಣ ತಿಳಿಸಿದರೆ ಮುಂದಿನ ದಿನಗಳಲ್ಲಿ ತಿದ್ದುಕೊಳ್ಳಲು ಸಹಕಾರಿಯಾಗುತ್ತದೆ.

ನಿರ್ವಾಹಕರಲ್ಲಿ ಕೇಳಿ, ನಾನೂ ನಿಮ್ಮಂತೆ ಸಂಪದದ ಸದಸ್ಯನಷ್ಟೇ.

Submitted by hpn on

ದಿನಕ್ಕೆ ನೂರಾರು ಪ್ರತಿಕ್ರಿಯೆಗಳು ಸೇರ್ಪಡೆಯಾಗುವ ಕಾರಣ ಮಾಡರೇಟ್ ಆದ ಪ್ರತಿಕ್ರಿಯೆಗಳಿಗೆ ಪ್ರತ್ಯೇಕವಾಗಿ ಪುನಃ ಕಾರಣ ತಿಳಿಸಲು ಸದ್ಯಕ್ಕೆ ಅವಕಾಶ ಇಲ್ಲ. ಬರುವ ದಿನಗಳಲ್ಲಿ ಆಟೋಮೇಟೆಡ್ ಮೆಸೇಜ್ ತಲುಪುವ ವ್ಯವಸ್ಥೆ ಸಂಪದಕ್ಕೆ ಸೇರ್ಪಡೆಯಾಗಲಿದೆ.

ಸಂಪದದಲ್ಲಿ ಬರೆಯುವ ಮುನ್ನ ಸದಸ್ಯರು:
http://sampada.net/r...
ಓದಿಕೊಳ್ಳಬಹುದು.

Submitted by shaamala on

ಶ್ರೀಕಾಂತ್ ಅವರೇ,
ನೀವು ಹೇಳಿದಿರಿ :
<<ಸರಿಯಾದ ಹೆಸರು,ಸ್ವಂತದ ಭಾವಚಿತ್ರವಿಲ್ಲದ ಪ್ರೊಫೈಲ್ಗಳನ್ನು ನಿಷೇಧಿಸಬೇಕು..>>
ಅಂತರ್ಜಾಲದಲ್ಲಿ ನಮ್ಮ ಕುಟುಂಬದ ಯಾರದೇ ಚಿತ್ರವನ್ನು, ನಮ್ಮ ನಿಜವಾದ ಹೆಸರುಗಳನ್ನು, ಇರುವ ಸ್ಥಳವನ್ನು ಹಂಚಿಕೊಳ್ಳಲು ನಾವು ಇಷ್ಟ ಪಡುವುದಿಲ್ಲ. ಅದು ನಮ್ಮ ವ್ಯಕ್ತಿಗತ ನಿರ್ಧಾರ, ತೆಗೆದುಕೊಂಡಿರುವ ಮುನ್ನೆಚ್ಚರಿಕೆ. ಸಂಪದದಲ್ಲಿ ಭಾವಚಿತ್ರ ಹಾಕುವವರು ಮಾತ್ರ ಸದಸ್ಯರಾಗಬೇಕೆಂದರೆ, ಯೋಚಿಸಬೇಕಾಗುತ್ತದೆ.

<<ಸಂಪದ ಸಭ್ಯರ ಗುಂಪು..ಹೀಗಿರುವಾಗ ಮುಖ ತೋರಿಸದೇ ಪ್ರತಿಕ್ರಯಿಸುವುದು ಏನು ಸಭ್ಯತನವೋ..>>
ಸಂಪದದಲ್ಲಿ ಪ್ರತಿಶತ ಸಭ್ಯರೇ ಇದ್ದಾರೆ ಎಂದು ನಿಮಗೆ ಅಷ್ಟು ಖಾತರಿಯಾಗಿ ಗೊತ್ತೇ? ಈಗ ಬ್ಲಾಕ್ ಆಗಿರುವವರು ಅಸಭ್ಯತೆ ಪ್ರದರ್ಶಿಸಿರುವ ಸಾಧ್ಯತೆ ಇದೆಯಲ್ಲವೇ?

ನನ್ನ ಮಟ್ಟಿಗೆ ಈ ಸಲಹೆಗಳು ಸ್ವಾಗತಾರ್ಹ:

<<ಅದೇನೇ ಇದ್ದರೂ, ಅಸಮರ್ಪಕ ಗುಣಮಟ್ಟಕ್ಕೂ ಹೀಗೊಂದು ಮಿತವರ್ತನೆ ಇನ್ನು ಮುಂದೆ ಇರುವುದಾದಲ್ಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಸ್ವಲ್ಪ ಕಷ್ಟವಾದರೂ, ಸದಸ್ಯರಿಗೆ ಬಹಿಷ್ಕಾರದ ಮುನ್ನ ಈ ಕುರಿತು ಕಡೆಯ ಪಕ್ಷ ಒಂದು ಎಚ್ಚರಿಕೆ ಕೊಡುವ ಹಾಗೆ ವ್ಯವಸ್ಥೆ ಮಾಡಿ>.

ಸದಸ್ಯರೊಬ್ಬರು ದಿನ/ವಾರವೊಂದಕ್ಕೆ ಸೇರಿಸಬಹುದಾದ ಲೇಖನಗಳಿಗೆ ಮಿತಿ. ಪ್ರತಿಕ್ರಿಯೆಗಳಿಗೂ ಮಿತಿಯಿದ್ದರೆ ಸಂಪದದ ಸರ್ವೆರ್ ಬದುಕಿದೆನೆಂದು ನಿಟ್ಟುಸಿರು ಬಿಡಬಹುದು. :)

ಧನ್ಯವಾದ
ಶಾಮಲ

Submitted by shivaram_shastri on

ಸಂಪದದ ಒಡನಾಟ ಇತ್ತೀಚಿನ ವರ್ಷಗಳಲ್ಲಿ ನನಗೆ ತುಂಬಾ ಖುಶಿ ಕೊಟ್ಟ ಸಂಗತಿಗಳಲ್ಲಿ ಒಂದು. ಅಂತೆಯೇ, ಕೆಲವೊಮ್ಮೆ ಸಂಪದಿಗರು ತೀರ ವೈಯುಕ್ತಿಕ ಮಟ್ಟದಲ್ಲಿ ಚರ್ಚೆ ಮಾಡುತ್ತಾ, ವ್ಯಕ್ತಿ ನಿಂದೆಗೆ ತೊಡಗಿದ ಸಂದರ್ಭಗಳು ಬೇಸರ ತಂದಿವೆ. ಈ ಹಿನ್ನೆಲೆಯಲ್ಲಿ ಸಂಪದದ ನಿರ್ವಹಣಾ ತಂಡವು ಹೊಸ ಪರಿಣಾಮಕಾರಿ moderation
- ಮಿತವರ್ತನೆ (ಕನ್ನಡ ಕಸ್ತೂರಿ ನಿಘಂಟು http://www.kannadaka...) ಗೆ ಯೋಚಿಸುತ್ತಿರುವುದು ಸ್ವಾಗತಾರ್ಹ.

ಇನ್ನು, ಸಿದ್ದರಾಮ ಕೋರ್ಪಳ್ಳಿಯವರ ಪುಟಗಳು (ಅಥವಾ ಅವರ ಐಡಿ?, ಸರಿಯಾಗಿ ತಿಳಿಯಲಿಲ್ಲ) 'ಅಸಮರ್ಪಕ ಗುಣಮಟ್ಟ'ದ ಕಾರಣದಿಂದಾಗಿ ಬಹಿಷ್ಕರಿಸಲ್ಪಟ್ಟಿರುವುದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಅದಕ್ಕೆ, 'ಅಸಮರ್ಪಕ ಗುಣಮಟ್ಟದ ಕಾರಣದಿಂದಾಗಿ ಇಂತಹ ಬಹಿಷ್ಕಾರ ಆದೀತು ಎಂಬುದು ನನಗೆ ತಿಳಿದಿರಲಿಲ್ಲ' ಎಂಬುದು ಮುಖ್ಯ ಕಾರಣ. ಅಸಮರ್ಪಕ ಗುಣಮಟ್ಟದ ಕಾರಣದಿಂದಾಗಿ ಬಹಿಷ್ಕಾರದ ಸಾಧ್ಯತೆ ಹೆಚ್ಚಿನ ಸಂಪದಿಗರಿಗೆ ತಿಳಿದಿರಲಿಲ್ಲ ಎಂದು ನನ್ನ ನಂಬಿಕೆ. ನನಗನ್ನಿಸುವಂತೆ, ಸಿದ್ದರಾಮ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲ ಹಿರಿಯರು ಸಂಪದದಲ್ಲಿ ಇದ್ದೂ, ಅದು ಸಿಗದೇ, ಬಹಿಷ್ಕಾರದ ಅಗತ್ಯ ಬಂದುದು ಖೇದಕರ.

ಅದೇನೇ ಇದ್ದರೂ, ಅಸಮರ್ಪಕ ಗುಣಮಟ್ಟಕ್ಕೂ ಹೀಗೊಂದು ಮಿತವರ್ತನೆ ಇನ್ನು ಮುಂದೆ ಇರುವುದಾದಲ್ಲಿ ಅದಕ್ಕೆ ನನ್ನ ಅಭ್ಯಂತರವಿಲ್ಲ. ಸ್ವಲ್ಪ ಕಷ್ಟವಾದರೂ, ಸದಸ್ಯರಿಗೆ ಬಹಿಷ್ಕಾರದ ಮುನ್ನ ಈ ಕುರಿತು ಕಡೆಯ ಪಕ್ಷ ಒಂದು ಎಚ್ಚರಿಕೆ ಕೊಡುವ ಹಾಗೆ ವ್ಯವಸ್ಥೆ ಮಾಡಿ.

ಸದಸ್ಯರೊಬ್ಬರು ದಿನ/ವಾರವೊಂದಕ್ಕೆ ಸೇರಿಸಬಹುದಾದ ಲೇಖನಗಳಿಗೆ ಮಿತಿಯನ್ನಿಡುವ ಸಲಹೆಯೂ ಚೆನ್ನಾಗಿದೆ.

"ಈಗಿನಂತೆ ಸಂಪದಕ್ಕೆ ಏನೂ ಆದಾಯ ಇಲ್ಲ, ಸಂಪದವನ್ನು ಸದುಪಯೋಗಪಡಿಸಿಕೊಳ್ಳುವುದು ಇದನ್ನು ಬಳಸುವವರ ಕೈಯಲ್ಲಿದೆ" ಎಂಬುದನ್ನು ನೆನಪಲ್ಲಿ ಇಟ್ಟುಕೊಂಡು, ನನ್ನ ಬರಹಗಳ, ಪ್ರತಿಕ್ರಿಯೆಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇನೆ. ಆಗೀಗೊಮ್ಮೆ ಏನಾದರೊಂದು ಕೆಲಸಕ್ಕೆ ಬಾರದ ತಮಾಷೆಗೆ ಅನುಮತಿಯಿದೆ ಎಂದುಕೊಳ್ಳುತ್ತೇನೆ.

Submitted by asuhegde on

<<ನನಗನ್ನಿಸುವಂತೆ, ಸಿದ್ದರಾಮ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲ ಹಿರಿಯರು ಸಂಪದದಲ್ಲಿ ಇದ್ದೂ, ಅದು ಸಿಗದೇ, ಬಹಿಷ್ಕಾರದ ಅಗತ್ಯ ಬಂದುದು ಖೇದಕರ. >>

ಮಾರ್ಗದರ್ಶನ ಬಯಸುವವರಿಗೆ ಮತ್ತು ಸ್ವೀಕರಿಸುವವರಿಗೆ ಮಾತ್ರ ಮಾರ್ಗದರ್ಶನ ನೀಡಲು ಸಾಧ್ಯ.

ತಪ್ಪೊಪ್ಪಿಸಿ ಕೊಡುವುದು ಒಮ್ಮೆ ಮಾತ್ರ. ತಪ್ಪುಗಳನ್ನೇ ಮಾಡಿಕೊಂಡು ಹೋಗುವವರಿಗೆ ಮಾರ್ಗದರ್ಶನ ಮಾಡುತ್ತಾ ಕೂರುವುದು ಅಸಾಧ್ಯ, ಅಲ್ಲವೇ?

ಅಲ್ಲದೇ, ಸಂಪದ ಒಂದು ತೆರಪಿನ ಶಿಕ್ಷಣ ಸಂಸ್ಥೆ ಅಲ್ಲ ನೋಡಿ.

ನಿನ್ನೆ ಸಾಯಂಕಾಲ ಸಂಪದಕ್ಕೆ ಮರಳಿರುವ ಸಿದ್ರಾಮ, ಐದಾರು ಬರಹಗಳಲ್ಲಿ ಒಂದೇ ತೆರನಾದ ಪ್ರತಿಕ್ರಿಯೆಯನ್ನು ಪ್ರಕಟಿಸುತ್ತಾ ಹೋಗಿದ್ದಾರೆ. ಕಿರಿಕಿರಿ ಅನಿಸೋಲ್ವೇ. ಹೇಳಲು ಹೋದರೆ. ಇದೇ ನಮ್ ಸ್ಟೈಲ್... ಇದೇ ನಮ್ ಜಾಯಮಾನ ಅನ್ನುವ "ಕಿರುಕವಿ"ಯ ಹೊಸ ಕಿರಿಕಿರಿ ಹೊರಬರುತ್ತೆ. ಎರಡು ಮೂರು ದಿನ ಎಲ್ಲರೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿ ನಿಲ್ಲಿಸಿದ್ದಾಯ್ತು. ಇನ್ನಾದರೂ ಸ್ವಲ್ಪ ಗಂಭೀರರಾಗೋಣ, ಅಲ್ವೇ?

ಏನಂತೀರಿ?

:)

Submitted by vijay pai on

ಹೆಗ್ದೆಯವರೆ..
ನಾನು ಇದನ್ನು ನಿನ್ನೆ ಗಮನಿಸಿದೆ..ಇದರ ಬಗ್ಗೆ ಬರೆಯಬೇಕೆಂದುಕೊಂಡಿದ್ದೆ. ಎಲ್ಲ ಕಡೆ ಅರ್ಥವಿಲ್ಲದ ಒಂದೇ ತರಹದ ಪ್ರತಿಕ್ರಿಯೆ ಸಿದ್ರಾಮ ಹಾಕಿದ್ದಾರೆ. ಇದು ನಿಜವಾದ ಮುಗ್ಧತೆಯೊ, ವಿಷಯ ಅರ್ಥ ಮಾಡಿಕೊಳ್ಳದ ಮೂರ್ಖತನವೊ ಅಥವಾ ನಮ್ಮನ್ನ ಸುಮ-ಸುಮ್ನೆ ತಲೆ ತಿನ್ನಬೇಕು ಅಂತಾ ಮಾಡ್ತಿರೋದೊ ಅರ್ಥ ಆಗ್ಲಿಲ್ಲಾ. ಈ ಸಲ ಸಿದ್ರಾಮ ಏನಾದ್ರೂ ಲೇಖನ ಸೇರಿಸಿದಾಗ ಇದರ ಬಗ್ಗೆ ಒಂದು ಸಲ ಸಲಹೆ ಕೊಡೋಣ. ಅದಾದ ಮೇಲೂ ಸಿದ್ರಾಮ ಇದೇ ರೀತಿ ಮುಂದುವರ್ಸಿದ್ರೆ ನಿರ್ವಾಹಕರು ಬ್ಲಾಕ್ ಮಾಡಿದ್ರೂ ಚಿಂತೆ ಮಾಡ್ದಿರೋಣ!.

Submitted by suresh nadig on

ಅದು ಅವರ ಮುಗ್ದತೆ ವಿಜಯ್, ಅವರ ಪ್ರೊಫೈಲ್ ನ್ನು ನೋಡಿ, ಓದಿರುವುದು ಡಿಪ್ಲೊಮೊ ಕಂಪೆನಿಯೊದರಲ್ಲಿ ಕೆಲಸ ಮಾಡುತ್ತಿರುವುದು ಡಿಪ್ಲೊಮೊ ಇಂಜಿನಿಯರಿಂಗ್ ಎಂದಾಗಿ ನಮೂದಿಸಿದ್ದಾರೆ.

Submitted by shivaram_shastri on

ಹೆಗ್ಡೆಯವರೇ,
[ನಿನ್ನೆ ಸಾಯಂಕಾಲ ಸಂಪದಕ್ಕೆ ಮರಳಿರುವ ಸಿದ್ರಾಮ, ಐದಾರು ಬರಹಗಳಲ್ಲಿ ಒಂದೇ ತೆರನಾದ ಪ್ರತಿಕ್ರಿಯೆಯನ್ನು ಪ್ರಕಟಿಸುತ್ತಾ ಹೋಗಿದ್ದಾರೆ. ಕಿರಿಕಿರಿ ಅನಿಸೋಲ್ವೇ. ಹೇಳಲು ಹೋದರೆ. ಇದೇ ನಮ್ ಸ್ಟೈಲ್... ಇದೇ ನಮ್ ಜಾಯಮಾನ ಅನ್ನುವ "ಕಿರುಕವಿ"ಯ ಹೊಸ ಕಿರಿಕಿರಿ ಹೊರಬರುತ್ತೆ. ಎರಡು ಮೂರು ದಿನ ಎಲ್ಲರೂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿ ನಿಲ್ಲಿಸಿದ್ದಾಯ್ತು. ಇನ್ನಾದರೂ ಸ್ವಲ್ಪ ಗಂಭೀರರಾಗೋಣ, ಅಲ್ವೇ?

ಏನಂತೀರಿ?]
ಹೌದು, ನಾನೂ ಹಲವೆಡೆ ಸಿದ್ದರಾಮರ ಕಾಪಿ - ಪೇಸ್ಟ್ ಪ್ರತಿಕ್ರಿಯೆಯನ್ನು ಗಮನಿಸಿದೆ. ವಿಜಯ್ ಅವರು ಹೇಳಿದಂತೆ, ಸಿದ್ದರಾಮ ಅವರಿಗೆ ಇನ್ನೊಮ್ಮೆ ತಿಳಿಸಿ ಹೇಳಿ ನೋಡೋಣ. ಅದರ ನಂತರವೂ ಅವರ ಪ್ರತಿಕ್ರಿಯೆ 'ಇದೇ ನಮ್ ಸ್ಟೈಲ್... ' ಧಾಟಿಯಲ್ಲಿ ಇದ್ದಲ್ಲಿ, ಹರಿಪ್ರಸಾದ ನಾಡಿಗರ ನಿರ್ಧಾರವೇ ಸರಿ. ನಾನಾಗ ಬೇಸರಿಸುವುದಿಲ್ಲ.
[ಅಂದ ಹಾಗೆ, ಒಂದು ಗುಟ್ಟಿನ :-) ವಿಷಯ ಹೇಳ್ತೀನಿ. "ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲ ಹಿರಿಯರು ಸಂಪದದಲ್ಲಿ ಇದ್ದೂ" ಎಂದು ಬರೆಯುವಾಗ, ನನ್ನ ಮನಸ್ಸಿನಲ್ಲಿದ್ದ ಹಿರಿಯರಲ್ಲಿ ನೀವೂ ಇದ್ದಿದ್ದಿರಿ. ಅದು ನಿಮಗೆ ಹೇಗೆ ಗೊತ್ತಾಯ್ತು? :-))

Submitted by asuhegde on

ಶಿವರಾಮ್,

ಸದಭಿಪ್ರಾಯದ ಮರುನುಡಿಗಳಿಗೆ ಧನ್ಯವಾದಗಳು.

<<[ಅಂದ ಹಾಗೆ, ಒಂದು ಗುಟ್ಟಿನ :-) ವಿಷಯ ಹೇಳ್ತೀನಿ. "ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬಲ್ಲ ಹಿರಿಯರು ಸಂಪದದಲ್ಲಿ ಇದ್ದೂ" ಎಂದು ಬರೆಯುವಾಗ, ನನ್ನ ಮನಸ್ಸಿನಲ್ಲಿದ್ದ ಹಿರಿಯರಲ್ಲಿ ನೀವೂ ಇದ್ದಿದ್ದಿರಿ. ಅದು ನಿಮಗೆ ಹೇಗೆ ಗೊತ್ತಾಯ್ತು? :-))>>

ಸಂಪದದಂಗಳದಲ್ಲೇ ಹೇಳಿದಿರಲ್ಲಾ?
ಬಿಡಿ, ಅದೀಗ ಗುಟ್ಟಾಗಿ ಉಳಿದಿಲ್ಲ!

ಹೇಗೆ ಗೊತ್ತಾಯ್ತು ಅಂತೀರಾ?

ನನ್ನ ಆಯುಷ್ಯಕ್ಕೆ ವರ್ಷಗಳನ್ನು ಸೇರಿಸುತ್ತಾ ಹೋದರೆ ನಾನು ಮಧ್ಯ ವಯಸ್ಕನಾಗಬಹುದು, ನಂತರ ಮುದುಕನಾಗಬದು.

ಅದರ ಜೊತೆಜೊತೆಗೆ ನಮ್ಮವರ ಮಾತುಗಳನ್ನು, ಮಾತುಗಳ ಭಾವಾರ್ಥವನ್ನು, ಉದ್ದೇಶಗಳನ್ನು, ಇನ್ನು ಕೆಲವೊಮ್ಮೆ ಮಾತುಗಳ ನಡುವಿರುವ ಮೌನವನ್ನೂ ಅರ್ಥೈಸಿಕೊಳ್ಳುವ ಬುದ್ಧಿಮತ್ತೆ ಬೆಳೆಸಿಕೊಂಡರೆ ಮಾತ್ರ ಹಿರಿಯನೆನಿಸಿಕೊಂಡು ಬಾಳಿಗೊಂದು ಅರ್ಥಕೊಟ್ಟು ಸಮಾಜದಲ್ಲಿ ನಿಮ್ಮಂತ ಸಹೃದಯಿಗಳಿಂದ ಗೌರವವನ್ನೂ ಗಳಿಸಿಕೊಳ್ಳಬಹುದು.

- ಆತ್ರಾಡಿ ಸುರೇಶ ಹೆಗ್ಡೆ

Submitted by vijay pai on

ಹರಿಪ್ರಸಾದ್..
ದಯವಿಟ್ಟು ಪಾಯಿಂಟ್ ಕೊಡುವ ಮಾಡ್ಯೂಲ್ ಮತ್ತೆ ಆಕ್ಟಿವೇಟ್ ಮಾಡಿ..ಪ್ರತಿಕ್ರಿಯೆ ಬರೆಯುವವರಿಗೆ ಕೊಂಚ ಜವಾಬ್ದಾರಿಯಾದರೂ ಸೃಷ್ಟಿಯಾಗುತ್ತೆ..ಮುಖಕ್ಕೆ ಕನ್ನಡಿ ಹಿಡಿದ ಹಾಗಾಗಿ ಬರೆಯುವದರಲ್ಲಿ ಕೊಂಚ ಸಂಯಮ ಆದ್ರೂ ಬರುತ್ತೆ. ಸಂಪದದಲ್ಲಿ ಇತ್ತೀಚಿನ ಕೆಲವು ಪ್ರತಿಕ್ರಿಯೆಗಳನ್ನು ಗಮನಿಸಿ ಈ ಮಾತನ್ನು ಹೇಳುತ್ತಿದ್ದೇನೆ.