21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೂರ್ಖನ ಗುಣಗಳು..

June 10, 2010 - 7:38am
Shrikantkalkoti

ಕನ್ನಡ ಭಾವಾನುವಾದ
 
ತಾನೇ ತಿಳಿದವನೆಂಬ ಗರುವ
ಇತರರ ಮಾತಿಗೆ ತೋರನವ ಗೌರವ
ಆಧಾರರಹಿತ ಗಟ್ಟಿವಾದ ಮಾಡುವವ  
ನಖಶಿಖಾಂತ ಕೋಪದಲಿ ಮುಳುಗಿದಾತ  
ಹೀನ ಶಬ್ದದಿ ನಿಂದಿಸುತ ತಿರುಗುವಾತ
ಈ ಐದು ಗುಣ ಹೊಂದಿರೆ ಮೂರ್ಖನಾತ 
 
 

ಸಂಸ್ಕೃತ ಮೂಲ

ಮೂರ್ಖಸ್ಯ ಪಂಚ ಚಿಹ್ನಾನಿ ಗರ್ವೋ ದುರ್ವಚನಂ ತಥಾ I
ಕ್ರೋಧಶ್ಚ್ಯ ಧ್ರುಧವದಶ್ಚ್ಯ ಪರ ವಾಕ್ಯೇ ಚ ಅನಾದರ II

ಲೇಖನ ವರ್ಗ (Category): 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by suresh nadig on

>>ಆಧಾರರಹಿತ ಘಟ್ಟಿವಾದ ಮಾಡುವವ <<
ಇದರಲ್ಲಿ ವ್ಯಂಗ್ಯ ಇದೆ ಅನ್ನಿಸಿತು. ಘಟ್ಟಿ - ಗಟ್ಟಿ ಅಲ್ಲವಾ.

Submitted by Shrikantkalkoti on

ನಮಸ್ಕಾರ ಸುರೇಶ
>ಇದರಲ್ಲಿ ವ್ಯಂಗ್ಯ ಇದೆ ಅನ್ನಿಸಿತು.<
ಇದು ಸುಭಾಷಿತದ ಭಾವಾನುವಾದ ಮಾತ್ರ..
>ಘಟ್ಟಿ - ಗಟ್ಟಿ ಅಲ್ಲವಾ<
ನನಗೂ ಸಂಶಯ ಇತ್ತು.ಈಗ ತಿದ್ದಿರುವೆ.ಧನ್ಯವಾದ

ಭಾವಾನುವಾದ ಇನ್ನೂ ಉತ್ತಮವಾಗಬೇಕೆಂದರೆ ಖಂಡಿತ ತಿಳಿಸಿ.

Submitted by manju787 on

ಸುಂದರವಾದ ಶ್ಲೋಕ ಮತ್ತು ಭಾವಾರ್ಥ ಕಣ್ರೀ ಶ್ರೀಕಾಂತರೆ, ಆದರೆ ಇದನ್ನು ನೀವು ನಿನ್ನೆಯೇ ಹಾಕಬೇಕಿತ್ತು! :)

Submitted by Shrikantkalkoti on

ಮೆಚ್ಚುಗೆಗೆ ಧನ್ಯವಾದ ಮಂಜಣ್ಣ ನವರೇ.

>ಆದರೆ ಇದನ್ನು ನೀವು ನಿನ್ನೆಯೇ ಹಾಕಬೇಕಿತ್ತು! :)<
ಅನ್ಯ ವಿಚಾರ ಇರಲಿಲ್ಲ.

ಖರೆ ಹೇಳಬೇಕೆಂದರೆ,ನಿಮ್ಮ ಹಾಗೂ ಸುರೇಶರ ಪ್ರತಿಕ್ರಿಯೆ ನೋಡಿದ ಮೇಲೆ ಇದನ್ನ ಮುಂದಿನವಾರ ಪ್ರಕಟಿಸಿದ್ದರೆ ಒಳ್ಳೆಯದಿತ್ತೇನೋ ಅಂತ ಅನಿಸ್ತಾ ಇದೆ..

ಆಮೇಲೆ ಇನ್ನೊಂದು ಮಾತು ಮಂಜಣ್ಣ..
ಶ್ಲೋಕ,ಸುಭಾಷಿತ,ಸ್ತೋತ್ರ,ಮಂತ್ರ ಇವೆಲ್ಲ ಬೇರೆ ಬೇರೆ..

ಶೋಕದಿಂದ ನುಡಿದದ್ದು ಶ್ಲೋಕ.
ಸುಭಾಷಿತ ಅಂದರೆ ಒಳ್ಳೆಯ ನುಡಿಗಳು.
ಸ್ತೋತ್ರ ಅಂದರೆ ಸ್ತುತಿಸುವುದು
ಮಂತ್ರ ಇದರ ಪಕ್ಕಾ ಅರ್ಥ ನನಗೆ ಗೊತ್ತಿಲ್ಲ.ಅರಿತವರು ತಿಳಿಸಿ.

Submitted by Shrikantkalkoti on

ಧನ್ಯವಾದ ಗೋಪಿನಾಥರೆ

>ಮೂರ್ಖಸ್ಯ ಪಂಚ ಚಿಹ್ನಾನಿ<-->ಈ ಐದು ಗುಣ ಹೊಂದಿರೆ<
ಸುಭಾಷಿತದ ಅರ್ಥದ ಪ್ರಕಾರ ಈ ಐದು ಗುಣಗಳು(?) ಮೂರ್ಖನಲ್ಲಿ ಇದ್ದೇ ಇರುತ್ತವೆ.

ಇನ್ನು ಇನ್ನೊಂದು ಸುಭಾಷಿತದ ಪ್ರಕಾರ (ಶುಕನಾಸೋಪದೇಶ ಸಾರ ಇರಬೇಕು,ಅರ್ಥ ಮಾತ್ರ ನೆನಪಿದೆ)
ವಿದ್ಯೆ ,ಧನ,ರೂಪ(ವಯಸ್ಸು) ಹಾಗೂ ಅಧಿಕಾರ ಇವು ಒಂದೊಂದು ಇದ್ದರೂ ಮಾನವನನ್ನು ಅವಿವೇಕಿಯನ್ನಾಗಿ ಮಾಡುತ್ತವಂತೆ.
ಇನ್ನು ನಾಲ್ಕೂ ಒಬ್ಬನಲ್ಲೇ ಇದ್ದರೆ ಪರಿಸ್ಥಿತಿ ಊಹಿಸಲಸಾಧ್ಯ ಅಂತ.

ಇದೆ ರೀತಿಯೇ ಮೇಲಿನ ಸುಭಾಷಿತವನ್ನೂ ಅರ್ಥೈಸಬಹುದು..ಅಂತ ನನ್ನ ಅನಿಸಿಕೆ.