23
October
2014

ಸಂಪದ - Sampada

'ಹೊಸ ಚಿಗುರು, ಹಳೆ ಬೇರು'

ಸಂಪಾದಕನ ಕಿವಿ ಮಾತು

June 30, 2010 - 10:52am
abdul
To prevent automated spam submissions leave this field empty.

ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ.  ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು. ಪ್ರವಾದಿ ಮೋಸೆಸ್ ಅವರಿಗೆ ತಮ್ಮ ಅನುಯಾಯಿಗಳು ಹೇಗೆ ನಡೆದುಕೊಳ್ಳಬೇಕು ಎಂದು ಪರಮಾತ್ಮ (ten commandments) "ಹತ್ತು ದೈವಾಜ್ಞೆ" ಗಳನ್ನು ನೀಡುತ್ತಾನೆ. ಅದೇ ರೀತಿಯ ಕೆಲವು "ಭಟ್ಟರಾಜ್ಞೆ" ಗಳು ಮಿತಿ ಮೀರಿ ವರ್ತಿಸುತ್ತಿರುವ "ಕೀಲಿ" ಪಟುಗಳಿಗೆ. 


ಬೆಳಿಗ್ಗೆ ಮೇಲ್ ಬಾಕ್ಸ್ ತೆರೆದ ಕೂಡಲೇ ಎದುರಾಗುತ್ತವೆ ಯಾವುದಾದರೂ ವಿಷಯ ತೆಗೆದುಕೊಂಡು ಕಪೋಲಕಲ್ಪಿತ ವರದಿಗಳನ್ನ ಹೆಣೆದ ಮೇಲ್ ಗಳು. ಈ ರೀತಿ ಫುಲ್ ಟೈಮ್ slandering ಮಾಡುವ ಜನ ತಮ್ಮ ಕಸುಬಿನ ವೇಳೆ ಮಾಡುತ್ತಿರಬಹುದು ಅಲ್ಲವೇ? ಅಂದರೆ ಕೆಲಸಕ್ಕೆಂದು ನಿಯುಕ್ತಗೊಂಡ ವ್ಯಕ್ತಿ ಸಂಬಳ ಪಡೆದುಕೊಂಡು ಮಾಡಬೇಕಾದ ಕೆಲಸ ಮಾಡದೆ ದಿನದಲ್ಲಿ ಕಡೆ ಪಕ್ಷ ಮೂರು, ನಾಲ್ಕು ಘಂಟೆಗಳಾದರೂ ಇಂಥ ಚಟುವಟಿಕೆಗಳಲ್ಲಿ ನಿರತರು. ಈ ವಿದ್ಯಮಾನಕ್ಕೆ ಭಟ್ಟ ಕಿವಿ ಮಾತು ಹೇಳುವುದಿಲ್ಲವೇ? ಈ ವಿಷಯಕ್ಕೆ ಬಂದಾಗ ಜಾಣ ಕುರುಡೋ ಹೇಗೆ? ಇಂಥ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುವ ಯಜಮಾನರುಗಳಿಗೆ ತಿಳಿದಿಲ್ಲವೇ ಇದು? ಕೆಲಸದ ವೇಳೆಯಲ್ಲಿ ಅಂತರ್ಜಾಲ ತಡಕಾಡುವ ಈ ಜನರನ್ನು ನಿರ್ದಾಕ್ಷಿಣ್ಯವಾಗಿ ಕೆಲಸದಿಂದ ಕಿತ್ತುಹಾಕಬೇಕು. ಘಂಟೆಗಳ ಮಾತು ದೂರವೇ ಉಳಿಯಿತು ಒಂದು ನಿಮಿಷವೂ ಕೆಲಸಕ್ಕೆ ಸಂಬಂಧಿಸಿದ್ದಲ್ಲದ ಚಟುವಟಿಕೆಯಲ್ಲಿ ಭಾಗವಹಿಸುವವರನ್ನು ಮುಲಾಜಿಲ್ಲದೆ ಶಿಸ್ತಿಗೆ ಒಳಪಡಿಸಬೇಕು. ಮುಂದುವರಿದ ವಿಶ್ವದಲ್ಲಿ ಈ ರೀತಿಯ ನದತೆಯನ್ನು ಖಂಡಿತಾ ತಾಳಿಕೊಳ್ಳಲಾರರು. ಸರಕಾರೀ ಸೇವಕರು ಬೆಳಿಗ್ಗೆ ಬಂದು ಹಾಜರಿ ಹಾಕಿ ಬೇರೆಡೆ ಕೆಲಸಕ್ಕೆ ಹೋಗುತ್ತಾರಂತೆ. ಕೆಲಸಕ್ಕೆ ಸೇರಿದ ಕೂಡಲೇ ಬೀದಿ ಗೂಳಿ ಗಳಾಗಿ ಬಿಡುತ್ತಾರೆಯೇ ಈ ನೌಕರರು. ಲಂಗು ಲಗಾಮಿಲ್ಲದ ಗೂಳಿಗಳು. ಆಧುನಿಕ ಜೀವನದ ಮತ್ತೊಂದು ರೀತಿಯ ಕರ್ತವ್ಯ ಚ್ಯುತಿ ಕೆಲಸದ ವೇಳೆ ಮೇಲ್ campaigning. ಹೀಗೆ ಕೆಲಸಕ್ಕೆ ಬಂದೂ ಕೆಲಸ ಮಾಡದೆ ಸಂಬಳ ಪಡೆಯುವ ವರ್ಗ ಒಂದೆಡೆಯಾದರೆ ಮೇಲಿಂಗ್ ಮಾಡೋದಕ್ಕೆ ನಮ್ಮನ್ನು ಸಂಬಳ ಕೊಟ್ಟು ಇತ್ತು ಕೊಂಡಿರುವುದು ಎನ್ನುವ ಭಾವನೆ  ತಾಳಿರುವ ವರ್ಗ ಮತ್ತೊಂದೆಡೆ. 


"ಇಂಟರ್ನೆಟ್ ಹಿಂದು : ಮುಖ್ಯವಾಹಿನಿಗೇಕೆ ಸಿಡಿಮಿಡಿ?" ಲೇಖನದಲ್ಲಿ ಇಂಟರ್ನೆಟ್ ಹಿಂದೂಗಳನ್ನು ಮೂಲಭೂತವಾದಿಗಳು, ತಾಲಿಬಾನಿಗಳು ಎಂದು ಕರೆಯುತ್ತಾರೆಂದು ಅಳಲನ್ನು ತೋಡಿಕೊಳ್ಳುವ ಈ ಲೇಖಕ ಹಾಗೆ ಕರೆಯುವವರನ್ನು " ಎಡಪಂಥೀಯ ಒಲವಿನ ಹಾಗೂ ಮಾಧ್ಯಮದ ಹಿಡಿತ ಹೊಂದಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿರುವ ಪತ್ರಕರ್ತರಂತೆ ". ಅಂದರೆ ಈ ರೀತಿ ತಮ್ಮ ಕೆಲಸದ ವೇಳೆ ಕೆಸರೆರೆಚಲೆಂದೇ ಲಾಗಿನ್ ಆಗುವ ಮಹಾತ್ಮರ ಬಗ್ಗೆ ಯಾರೂ ಸೊಲ್ಲೆತ್ತಬಾರದೆಂದು ಈ ವ್ಯಕ್ತಿಯ ಕಿವಿಮಾತು.‍‍‌


ಈ ಲೇಖನ ಬರೆದ ವ್ಯಕ್ತಿ ವಿ (ಕೃತ). ಕ. ಪತ್ರಿಕೆ ಗೆ ಸೇರಿದವರಂತೆ. ಈ ಪತ್ರಿಕೆ ಈಗ ನಾಡಿನ ಪ್ರಮುಖ ಪತ್ರಿಕೆ. ಪ್ರಮುಖ ಪತ್ರಿಕೆಯಾದ ಮೇಲೆ ನಾಡಿನ ಎಲ್ಲಾ ಧರ್ಮಗಳವರೂ ಖಂಡಿತವಾಗಿ ಓದುತ್ತಾರೆ ಈ ಪತ್ರಿಕೆಯನ್ನ. ಹೀಗಿರುವಾಗ "ಇಂಟರ್ನೆಟ್ ಹಿಂದೂ"ಗಳ ವಕಾಲತ್ತು ಮಾತ್ರ ವಹಿಸಿ ಲೇಖನ ಬರೆಯುವುದು ಪತ್ರಿಕಾ ಧರ್ಮಕ್ಕೆ ಬಗೆಯುವ ದ್ರೋಹವಲ್ಲವೇ? ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನರು ಹುಟ್ಟಿದ, ಸೂಫಿ ಸಂತರ, kittel ರು ಪ್ರೀತಿಸಿದ, ಬೌದ್ಧ ಭಿಕ್ಷುಗಳು ಬಾಳಿದ ಈ ನಾಡು ಎಲ್ಲಾ ಧರ್ಮಗಳವರಿಗೆ ಸೇರಿದ್ದು ಎಂದು ಈ ಪತ್ರಿಕೆಗೆ ಯಾರಾದರೂ ಕಿವಿ ಮಾತನ್ನು ಹೇಳಿಯಾರೆ? ತಪ್ಪು ದಾರಿಗೆ ಎಳೆಯುವ ಹೆಸರನ್ನಿಟ್ಟು ಕೊಂಡು ಬಹುಸಂಖ್ಯಾತ ವರ್ಗದವರಿಗೆ cater ಮಾಡುತ್ತಿರುವ ಈ ಪತ್ರಿಕೆಗೆ ಪತ್ರಿಕಾ ಧರ್ಮದ ಬಗ್ಗೆ ಯಾರಾದರೂ ಕಿವಿ ಮಾತು ಹೇಳಿದ್ದರೆ ಚೆನ್ನಿತ್ತು.  


`ಹಿಂದು ಐಡೆಂಟಿಟಿ ಹೊಂದಲು ಮುಸ್ಲಿಮರನ್ನು ದೂಷಿಸಬೇಕಿಲ್ಲ".


ಬಹುಶಃ ಮುಸ್ಲಿಮರ ವಿರುದ್ಧ ಬರೆಯುವುದೇ ತಮ್ಮ ಧರ್ಮ ಮತ್ತು ಕಸುಬು ಎಂದು ಕೊಂಡಿರುವ ಈ ಸಮೂಹದ ಬಗ್ಗೆ ಬೇಸತ್ತ ಭಟ್ ಅವರು ಮೇಲಿನ ಕಿವಿ ಮಾತನ್ನೂ ಸೇರಿಸುತ್ತಾರೆ.  ತಮ್ಮ ಸಮುದಾಯವರ ಈ ವರ್ತನೆಯನ್ನು ಒಪ್ಪಿಕೊಂಡು apologetic ಆಗುವ ಭಟ್ಟರು ಹೃದಯವಂತಿಕೆಯನ್ನೇ ಮೆರೆದಿದ್ದಾರೆ ಎನ್ನಬಹುದು. ಈಗ ನನ್ನದೊಂದು ಪ್ರಶ್ನೆ. ಈ ರೀತಿ ವಿವಿಧ ಧರ್ಮಗಳ ವಿರುದ್ಧ ಹರಿ ಹಾಯುವ ಇಂಟರ್ನೆಟ್ ಹಿಂದೂಗಳು ಮುಸ್ಲಿಮರೂ ಅದೇ ರೀತಿಯದಾದ ನಡವಳಿಕೆಯನ್ನು ತಾಳಿದ್ದಾರೆಯೇ ಎಂದು ಏಕೆ ನೋಡಿಕೊಳ್ಳುವುದಿಲ್ಲ? ನನಗಂತೂ ಅಂಥ ಒಂದೇ ಒಂದು ಮೇಲೂ ಕಣ್ಣಿಗೆ ಬಿದ್ದಿಲ್ಲ. ತೀರಾ ಇಲ್ಲ ಎಂದಿಲ್ಲ. ತಮ್ಮ ಧರ್ಮವೇ ಮೇಲು ಎಂದು ತೋರಿಸಲು ಕೆಲವು ಚಮತ್ಕಾರಗಳ ಪ್ರಸ್ತಾಪ ಇರುವ ಮೇಲುಗಳು ನನಗೆ ಬಂದಿವೆ, ಅಂಥ ಮೇಲುಗಳು ನೇರವಾಗಿ ಬೆಳೆಸುತ್ತವೆ ತಿಪ್ಪೆ ಯಾತ್ರೆ.


"ಜವಾಬ್ದಾರಿಯುತ ಇಂಟರ್ನೆಟ್ ಹಿಂದು ಆಗಲು ನಿಯಮಗಳು ಬ್ಲಾಗ್‌ಗಳಲ್ಲಿ ಕಾಮೆಂಟ್ ಮಾಡುವಾಗ ಬೈಗುಳದ ಭಾಷೆ ಬಳಸದಿರಿ".


ಮತ್ತೊಂದು ಕಿವಿಮಾತು. ಈ ಕಿವಿಮಾತಿನ ಅವಶ್ಯಕತೆ ಹಿಂದೆಂದಿಗಿಂತ ಈಗ ಹೆಚ್ಚು. ಪಥ್ಯವಿಲ್ಲದ ಯಾವುದಾದರೂ ವಿಷಯ ಬರೆದಿರೋ ಬಂದೆರಗುತ್ತವೆ ಅವಹೇಳನಕಾರಿ ಮೇಲುಗಳು. ತಾಯಿ, ತಂಗಿ ಎನ್ನದೆ ಇಡೀ ಕುಟುಂಬವನ್ನೇ ಹರಾಜಿಗೆ ಹಾಕಿ ಬಿಡುತ್ತಾರೆ. ಇಷ್ಟೆಲ್ಲಾ ಬರೆದು ಹೊಲಸೆಬ್ಬಿಸಿದ ನಂತರ "ಇಷ್ಟಕ್ಕೂ ಹಿಂದು ಧರ್ಮ ಗುರುತಿಸಿಕೊಳ್ಳುವುದೇ ಸಹಿಷ್ಣುತೆಯಿಂದ" ಎಂದು ಮತ್ತೊಂದು ಮೇಲ್ ಬಿಡುತ್ತಾರೆ. ನನಗೂ ಆಗಿದೆ ಅನುಭವ. ನನ್ನ ತಾಯಿ ತಂಗಿಯರನ್ನು ಬೀದಿಗೆ ಎಳೆಯದೆ ಕೃಪೆ ತೋರಿದ ಈ ಜನ ಒಂದು ಸಣ್ಣ ಟೀಕೆಗೂ ನಿನ್ನ ಸಮುದಾಯ ಹಾಗೆ, ಹೀಗೆ ಎಂದು ತೋಚಿದ ರೀತಿಯಲ್ಲಿ ಬರೆದು ತಮ್ಮ ತೀಟೆ ತೀರಿಸಿಕೊಳ್ಳುತಾರೆ. ಈ ರೀತಿಯ ವರ್ತನೆಯಿಂದ ಗಾಭರಿಯಾಗಿ, ಬೇಸತ್ತು ಬಹಳಷ್ಟು ಜನ ಸಂಪದಿಗರು ಸಂಪದ ಬಿಟ್ಟು ನಡೆದಿದ್ದಾರೆಂದು ಕೆಲವು ಸಂಪದಿಗರು ಬರೆಯುವುದನ್ನು ನೋಡಿದ್ದೇನೆ.


"ಗುಂಪು ಗುಂಪಾಗಿ ಬ್ಲಾಗರ್ ಮೇಲೆ ಮುಗಿಬೀಳಬೇಡಿ. ಇದು ನಿಯೋಜಿತ ದಾಳಿಯಂತೆ ಕಾಣುತ್ತದೆ"


ಮುತ್ತಿನಂಥ ಮಾತು. ಸಾಕಷ್ಟು ನೋಡಿದ್ದಾರೆ ಮೇಲಿನ ವರಸೆಯನ್ನು ನಮ್ಮ ಭಟ್ಟರು. ನೀವೂ ನೋಡಿರಬಹುದು ಈ ವರ್ತನೆಯನ್ನು. ಈ ವಿಷಯದ ಮೇಲೆ ನಿಮಗೆ ಸಂದೇಹವಿದ್ದರೆ ಒಂದು ಉದಾಹರಣೆ ಕೊಡುತ್ತೇನೆ.


ಸಮುದಾಯಗಳ ಮಧ್ಯೆ ವಿವಾದ ಬಂದಾಗ ಸಾಕಷ್ಟು ರಾಡಿ ನೀರಿನೊಂದಿಗೆ ಬರುವ ಈ ಜನ ಪರಿಸ್ಥಿತಿ ಶಾಂತವಾಗಿದ್ದಾಗ ಮತ್ತೊಂದು ವರಸೆ ತೆಗೆದುಕೊಂಡು ಹಾಜರಾಗುತ್ತಾರೆ. "ಒಂದು ವರ್ಗಕ್ಕೆ ಸೇರಿದವರು ರೈಲು ಹತ್ತುತ್ತಾರೆ, ಅವರು ಹಕ್ಕುಬದ್ದವಾಗಿ ಕೂರಬೇಕಾದ ಜಾಗದಲ್ಲಿ "ಕರೀಂ" ಎನ್ನುವ ಮುಗ್ಧ ಬಾಲಕ ಕೂತಿರುತ್ತಾನೆ. ಅವನನ್ನು "ನಲ್ಮೆಯಿಂದ" ಎಬ್ಬಿಸಲು ಹೋದಾಗ ಅವನು "ಕ್ರುದ್ಧ ನಾಗುತ್ತಾನೆ", ನಂತರ ಕರೀಮ ತನ್ನ ಜನರನ್ನು ಕಲೆ ಹಾಕಲು ಕರೆ ಮಾಡುತ್ತಾನೆ, ಅವನು ಕರೆ ಮಾಡುತ್ತಿರುವಾಗ ಈ ಗುಂಪು ಪುಂಡರು ಬರುವವರೆಗೆ ವೀಳ್ಯ ಕೈಯ್ಯಲ್ಲಿ ಹಿಡಿದು ಕೊಂಡು ಕಾಯುತ್ತಿರುತ್ತಾರೆ". ಹೇಗಿದೆ ಸ್ಟೋರಿ? ಮಣಿರತ್ನಂ ಗೆ ಕೊಟ್ಟರೆ ಹೇಗಿರಬಹುದು? ಇಲ್ಲಿ ಕರೀಮನನ್ನು ಖಳನಾಯಕನಾಗಿಸಿ ಅವನ ಸಮುದಾಯವೆ ಹೀಗೆ ಎಂದು ಬಿಂಬಿಸಿ ಬಹುಸಂಖ್ಯಾತ ವರ್ಗದವರು  ಸಂಭಾವಿತರು ಎಂದು ತೋರಿಸಿ ಜನರಲ್ಲಿ ಸಂಶಯದ ಬೀಜ ಬಿತ್ತುವುದು. ಈ ಬ್ಲಾಗ್ ಬರೆದ ವ್ಯಕ್ತಿಗೆ ಗೊತ್ತು ಇದು ಕಟ್ಟು ಕಥೆ ಎಂದು, ಇದನ್ನು ಓದಿ ನಾ ಮುಂದು, ತಾ ಮುಂದು ಎಂದು ಪ್ರತಿಕ್ರಿಯೆ ನೀಡಿದ ಮಹನೀಯರಿಗೂ ಗೊತ್ತು ಇದು ಹುಟ್ಟಿಸಿಕೊಂಡು ಬರೆದ ಕತೆ ಎಂದು. ಇದೊಂದು coordinated ಕಾರ್ಯಾಚರಣೆ. ಮೇಲೆ ಹೇಳಿದ "ರೈಲಿನ" ಬ್ಲಾಗ್ ಓದಿ ಪ್ರತಿಕ್ರಿಯೆ ಬರೆಯಬೇಕು ಎಂದುಕೊಂಡಿದ್ದೆ. ಆದರೆ garbage ಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟ ಹಾಗಾಗುತ್ತದೆ ಎಂದು ಅರಿತು ಹಿಂಜರಿದೆ. 


ಮೇಲಿನ ರೀತಿಯದೇ ಆದ ಮತ್ತೊಂದು ಬರಹವನ್ನ ಈಗ ಇಲ್ಲಿ ಕಾಣಬಹುದು. ಜಿಹಾದ್, ಅದೂ, ಇದೂ ಎಂದು ಒದರಿಕೊಳ್ಳುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಇನ್ನಷ್ಟು ಜನರನ್ನು confuse ಹೇಗೆ ಮಾಡುತ್ತಾರೆಂದು ತಿಳಿಯುತ್ತದೆ. convince ಮಾಡಲು ಸಾಧ್ಯವಾಗದಿದ್ದರೆ confuse ಮಾಡಬೇಕು, ಇದು ಇವರ ಕಾರ್ಯತಂತ್ರ. ಇಂಥ ಬರಹ ಬರೆಯುವ, ಸುಳ್ಳನ್ನು ಪೋಣಿಸುವ mediocre ವ್ಯಕ್ತಿಗಳು ನಮ್ಮ ನಾಡಿನಲ್ಲಿ ತುಂಬಿರುವುದರಿಂದ ಹೊರ ರಾಜ್ಯದವರು ನಮ್ಮ ಮೇಲೆ ಸವಾರಿ ಮಾಡುತ್ತಿರುವುದು. ಇಂಥ ಬರಹಗಳನ್ನ ಓದಿ ಪ್ರತಿಕ್ರಯಿಸುವ ವ್ಯಕ್ತಿಗಳ ಪ್ರೊಫೈಲ್ ಒಮ್ಮೆ ನೋಡಿ, ಕನಿಕರ ಹುಟ್ಟುವುದಿಲ್ಲವೇ ಬುದ್ಧಿಯ ದಿವಾಳಿತನಕ್ಕೆ?  


ಅಂತಿಮವಾಗಿ, ಮುಸ್ಲಿಮರಲ್ಲಿ ಕಾಣುವ ನ್ಯೂನತೆಗಳಿಗೆ ಅವರ ಮದ್ರಸಾ ಶಿಕ್ಷಣವನ್ನು ದೂರುವ ಜನ ಮೇಲಿನ ಲೇಖನದಲ್ಲಿ ಭಟ್ಟರು ಎತ್ತಿ ತೋರಿಸಿದ "ಅಂತರ್ಜಾಲ" ನಡವಳಿಕೆಗಳು ಯಾವ ಮೂಲದಿಂದ ಬಂದವು ಮತ್ತು ಇವರಿಗೆ ತರಬೇತಿ ನೀಡುತ್ತಿರುವವರು ಯಾರು ಎಂದು ಹೇಳಿಯಾರೇ?         


 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

Submitted by asuhegde on
ಅಬ್ದುಲ್, <<ಹೀಗೇ ಜಾಲವನ್ನು ತಡಕಾಡುತ್ತಿದ್ದಾಗೆ ಕಣ್ಣಿಗೆ ಬಿದ್ದ ಲೇಖನ. ಅಂತರ್ಜಾಲದಲ್ಲಿ ಹೇಗೆ ನಡೆದು ಕೊಳ್ಳಬೇಕು, ಯಾವ ರೀತಿ propaganada ಹರಿಬಿಡಬೇಕು ಎಂದು ತನ್ನ ಅನುಯಾಯಿಗಳಿಗೆ ಕನ್ನಡ ಪತ್ರಿಕೆಯ ಸಂಪಾದಕನೋರ್ವ ಹೇಳಿದ್ದಾನೆ ಕಿವಿಮಾತನ್ನು.>> ಆ ಕಿವಿಮಾತಿನ ಕೊಂಡಿಯನ್ನು ದಯಪಾಲಿಸಿದರೆ ಅನುಕೂಲವಾದೀತು ನನಗೆ ಆ ಕಿವಿಮಾತನ್ನು ಅರಿಯಲು ಮತ್ತು ನಿಮ್ಮ ಮಾತುಗಳನ್ನು ಅರ್ಥೈಸಿಕೊಳ್ಳಲು. - ಆಸು ಹೆಗ್ಡೆ.

Submitted by mpneerkaje on
ಈ ಲೇಖನವನ್ನು ವಿಕ ಭಟ್ಟರಿಗೆ ಕಳಿಸುವ ಬದಲು ಇಲ್ಲಿ ಹಾಕಿದ್ದು ಏಕೆ? ಇನ್ನು ಸಂಪದದಲ್ಲಿ ಹೀಗೆಯೇ ಬರೆಯಬೇಕೆಂದು ಎಲ್ಲಿಯೂ ಹೇಳಿಲ್ಲ. ವೈಯಕ್ತಿಕ ಟೀಕೆ ಇನ್ನೊಬ್ಬರಿಗೆ ನೋವಾಗದಂತೆ (ವೈಯಕ್ತಿಕವಾಗಿ) ಬರೆಯಬೇಕು ಅಷ್ಟೇ. ಹಾಗೆಂದು ಬರೆದಿದ್ದರಲ್ಲಿ ನಿಮಗೆ ಹಿಡಿಸದ್ದನ್ನು ಕೆಟ್ಟದ್ದು ಎಂದು ಹೇಳುವುದು ಎಷ್ಟು ಸರಿ?

Submitted by asuhegde on
ಅಬ್ದುಲ್, ನನ್ನ ಮೆಚ್ಚಿನ ಲೇಖಕರಲ್ಲಿ ಒಬ್ಬರಾದ ವಿಶ್ವೇಶ್ವರ ಭಟ್ಟರ, ಒಂದು ಉತ್ತಮ ಲೇಖನದತ್ತ ನನ್ನ ಗಮನಹರಿಸಿದ್ದಕ್ಕೆ ತಮಗೆ ಧನ್ಯವಾದಗಳು. - ಆಸು ಹೆಗ್ಡೆ

Submitted by Shrikantkalkoti on
ಅಬ್ದುಲ್ ನಮಸ್ಕಾರ, >ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನರು ಹುಟ್ಟಿದ< ಟಿಪ್ಪುವಿನ "ಅಪ್ರತಿಮ ದೇಶಭಕ್ತಿಯ" ಬಗ್ಗೆ ಒಂದು ಲೇಖನ ಬರೆದರೆ ಖುಷಿಯಾಗುತ್ತದೆ.. ತಮ್ಮ ಮಗುವಿಗೆ ಹೇಳುವ ಆ ಕಥೆಗಳನ್ನು ದಯವಿಟ್ಟು ನಮಗೂ ಹೇಳಿ..(ಹಿಂದೆ ಒಂದು ಪ್ರತಿಕ್ರಿಯೆಯಲ್ಲಿ ಬರೆದಿದ್ದೀರಿ..) ನಾವು ಶಾಲೆಯಲ್ಲಿ ಕಲಿತದ್ದು ಕೇವಲ ಒಂದೆರಡು ಪ್ಯಾರಾಗಳು ಮಾತ್ರ.. ಅದಕ್ಕೆ ಇಲ್ಲಿ ತುಂಬಾ ಸಮಯ ವ್ಯಾಯ ಮಾಡಿ ಉದ್ದದ ಲೇಖನ ಬರೆದಿರುವಿರಿ.. ಹಿಂದೆ, ಇಸ್ಲಾಂ ತಿಳಿಯಲು ಕೇಳಿದ ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಲು ನಿಮಗೆ ಸಮಯವಿಲ್ಲ ಎಂದು ಗೊತ್ತು.. http://sampada.net/a... ಆದರೂ ದೇಶಭಕ್ತನ ದೇಶಭಕ್ತಿಯ ಬಗ್ಗೆ ಖಂಡಿತ ತಿಳಿಸುವಿರಿ ಎಂಬ ಆಶಾವಾದ.. ಮಿಸ್ ಆಗಬಹುದಾಗಿದ್ದ ಉತ್ತಮ ಲೇಖನದ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದ..

Submitted by suresh nadig on
>>ಮೇಲಿನ ರೀತಿಯದೇ ಆದ ಮತ್ತೊಂದು ಬರಹವನ್ನ ಈಗ ಇಲ್ಲಿ ಕಾಣಬಹುದು. ಜಿಹಾದ್, ಅದೂ, ಇದೂ ಎಂದು ಒದರಿಕೊಳ್ಳುತ್ತಾ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಇನ್ನಷ್ಟು ಜನರನ್ನು confuse ಹೇಗೆ ಮಾಡುತ್ತಾರೆಂದು ತಿಳಿಯುತ್ತದೆ<< ಅಬ್ದುಲ್. ಜಿಹಾದ್ ಬರಹ ನಾನೇ ಹಾಕಿರುವುದು.ಇಲ್ಲಿ ಮುಸ್ಲಿಂ ಕೆಟ್ಟವರು ಅಥವಾ ಹಿಂದೂಗಳು ಒಳ್ಳೆಯವರು ಎನ್ನುವುದಕ್ಕೆ ಬರೆದಿದ್ದಲ್ಲ. ಬದಲಾಗಿ ಸಮಾಜದಲ್ಲಿ ಈ ರೀತಿ ನಡೆದು ಅನೇಕ ಸಂಘರ್ಷಗಳಿಗೆ ಕಾರಣವಾಗುತ್ತಿದೆಯೆಲ್ಲಾ ಎಂದು. ಹಾಗೇ ಸರಿಯಾದ ಕಾರಣ ಏನಿರಬಹುದೆಂಬ ಕುತೂಹಲಕ್ಕೆ. ಇಬ್ಬರೂ ಮನೆಯವರು ಒಪ್ಪಿ ಮದುವೆಯದಾರೆ ಅಲ್ಲಿ ಜಿಹಾದ್ ಪದ ಉದ್ಭವೇ ಆಗುವುದಿಲ್ಲ. ಈ ಜಿಹಾದ್ ಪದ ಕಂಡುಹಿಡಿದ ಮಹಾತ್ಮಾ ನನಗೂ ಗೊತ್ತಿಲ್ಲ. ವೃಥಾ ಗೊಂದಲ ಬೇಡವೆಂದು ಸ್ಪಷ್ಟನೆ ನೀಡಿದ್ದೇನೆ.

Submitted by mpneerkaje on
ನೀವು ಹೇಳಿದ (ಅಥವಾ ಭಟ್ಟರು ಹೇಳಿದ) ಇಂಟರ್ನೆಟ್ ಹಿಂದೂ ಗಳಲ್ಲಿ ನಾನೂ ಒಬ್ಬ. ಇಂಟರ್ನೆಟ್ ಹಿಂದೂ ಆದರೆ ತಪ್ಪೇನು? ಹಿಂದುಗಳ ಮೇಲಾಗುತ್ತಿರುವ ಅನ್ಯಾಯವನ್ನು ನಾವು ಪ್ರತಿಭಟಿಸುತ್ತೇವೆ. ಆ ಹಕ್ಕು ನಮಗಿಲ್ಲವೇ? ನಾವು ಎಲ್ಲೂ ಕಾನೂನು ಬಾಹಿರ ಕೃತ್ಯ ಮಾಡಿಲ್ಲವಲ್ಲ?

Submitted by bhasip on
"ಇಂಟರ್ನೆಟ್ ಹಿಂದು : ಮುಖ್ಯವಾಹಿನಿಗೇಕೆ ಸಿಡಿಮಿಡಿ?" ಲೇಖನದಲ್ಲಿ ಇಂಟರ್ನೆಟ್ ಹಿಂದೂಗಳನ್ನು ಮೂಲಭೂತವಾದಿಗಳು, ತಾಲಿಬಾನಿಗಳು ಎಂದು ಕರೆಯುತ್ತಾರೆಂದು ಅಳಲನ್ನು ತೋಡಿಕೊಳ್ಳುವ ಈ ಲೇಖಕ ಹಾಗೆ ಕರೆಯುವವರನ್ನು " ಎಡಪಂಥೀಯ ಒಲವಿನ ಹಾಗೂ ಮಾಧ್ಯಮದ ಹಿಡಿತ ಹೊಂದಿರುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದುಕೊಂಡಿರುವ ಪತ್ರಕರ್ತರಂತೆ ". ಅಂದರೆ ಈ ರೀತಿ ತಮ್ಮ ಕೆಲಸದ ವೇಳೆ ಕೆಸರೆರೆಚಲೆಂದೇ ಲಾಗಿನ್ ಆಗುವ ಮಹಾತ್ಮರ ಬಗ್ಗೆ ಯಾರೂ ಸೊಲ್ಲೆತ್ತಬಾರದೆಂದು ಈ ವ್ಯಕ್ತಿಯ ಕಿವಿಮಾತು.‍‍‌" >> He is part of a growing tribe called Internet Hindus, a term coined by journalist Sagarika Ghose after she blocked on Twitter those who aggressively and often abusively commented on her "pseudo-secular thoughts". "The ones I came across are defined by their total hatred for Muslims, Pakistan, so-called pseudosecular journalists and activist women. Narendra Modi is their hero," Ghose said, when asked why she blocked them. Source [http://www.mid-day.c... ಜನ ಬರೆಯುವ ಕಾಮೆಂಟ್ ಎದುರಿಸುವ ತಾಕತ್ತಿಲ್ಲದೆ ಟ್ವೀಟರ್ ಬ್ಲಾಕ್ ಮಾಡಿಕೊಂಡಿರುವ ಮಹನೀಯರು ಈಕೆ. ಇವರು ಕೆಲವರನ್ನು ಮೂಲಭೂತವಾದಿಗಳು ಎಂದು ಕರೆಯುವುದನ್ನು ಜನ ಸಹಿಸಿಕೊಳ್ಳುವುದಾದರೆ, ಭಟ್ಟರು , ಹಾಗೆ ಕರೆಯುವವರನ್ನು ಎಡಪಂಥಿಯರು ಎಂದು ಕರೆದರೆ ತಪ್ಪೇನು? ಈರೀತಿಯ ಎಡಪಂಥೀಯ ಬೆಂಬಲಿಗರು ಮಾಡಲು ಪ್ರಯತ್ನಿಸುತ್ತಿರುವುದು ಇದನ್ನೆ. ಬೇರೆಯವರು ಸೊಲ್ಲೆತ್ತದಂತೆ ಮಾಡುವ ಪ್ರಯತ್ನ. ಕಳೆದ ಎರಡು ಚುನಾವಣೆ ಸಮಯದಲ್ಲಿ ಗುಜರಾತ್ ಬಗ್ಗೆ ಇವರ "ಕವರೇಜ್" ಹೇಗಿತ್ತು ಅನ್ನುವುದು ನೋಡಿದವರಿಗೆಲ್ಲಾ ಚೆನ್ನಾಗಿ ಗೊತ್ತಿದೆ. ಇವರ ಕವ್ರೇಜ್ ಯಾವ ಮಟ್ಟದ್ದು ಅಂದರೆ, ನಿತ್ಯಾನಂದ ಅರೆಸ್ಟ್ ಆದರೆ, ಅದಕ್ಕೂ ನರೆಂದ್ರ ಮೋದಿಗೂ ತಳುಕು ಹಾಕುವ ಪ್ರಯತ್ನ ನಡೆಸಿದ್ದಾರೆ [http://timesofindia.... ಇವರು ಹೇಳಿದ್ದೆಲ್ಲ ಸರಿ, ವಿರೋಧಿಸುವ ಹಕ್ಕು ಜನಕ್ಕೆ ಇಲ್ಲ ಅನ್ನುವಂತಿದೆ ಕೆಲವರ ವಾದ. "ಇಷ್ಟಕ್ಕೂ ಹಿಂದು ಧರ್ಮ ಗುರುತಿಸಿಕೊಳ್ಳುವುದೇ ಸಹಿಷ್ಣುತೆಯಿಂದ" ಎಂದು ಮತ್ತೊಂದು ಮೇಲ್ ಬಿಡುತ್ತಾರೆ. ನನಗೂ ಆಗಿದೆ ಅನುಭವ." >> ಪ್ರಪಂಚದಲ್ಲಿ ನಡೆದ, ನಡೆಯುತ್ತಿರುವ ಯಾವ ಭೀಕರ ಬಾಂಬ್ ದಾಳಿಯನ್ನೂ ಹಿಂದು ನಡೆಸಿಲ್ಲ, ದೇಶದ ಮೇಲೆ ಅತಿಕ್ರಮಣ ಮಾಡಿ ಸಂಸ್ಕೃತಿಯನ್ನ ಹಾಳು ಗೆಡವಿದರೂ , ಆ ರೀತಿ ಮಾಡಿದ ಧರ್ಮೀಯರನ್ನು ತರಿದು ಹಾಕಿಲ್ಲ, ಅಥವಾ ಹಿಂಸೆಗೆ ಒಳಪಡಿಸಿಲ್ಲ. ಆದರೆ, ಪ್ರತಭಟಿಸುವ ಗುಣ ಬೆಳೆಸಿಕೊಳ್ಳುತ್ತಿದ್ದಾನೆ ಹಿಂದು. ಇದೇ ಕೆಲವರಿಗೆ ತಡೆಯಗಲು ಆಗದೆ ಈ ರೀತೀಯ ಬ್ಲಾಗ್ ಗಳಿಗೆ ವಸ್ತು ಆಗುತ್ತಾ ಇದೆ. ಇಡಿ ಲೇಖನ, ಭಟ್ಟರನ್ನೂ, ಹಿಂದು ಪರವಾಗಿ ಬರೆಯುವವರನ್ನು ದೂಷಿಸಲು, ಮುಸ್ಲೀಮರು ಸಜ್ಜನರು. ಪ್ರಪಂಚದಲ್ಲಿ ನಡೆದ ಎಲ್ಲಾ ಬಾಂಬ್ ಸ್ಪೋಟಕ್ಕೂ ಅವರನ್ನು ವಿನಾ ಕಾರಣ ದೂಷಿಸಲಾಗುತ್ತಿದೆ ಎಂದು ಎರಡು ಸಾಲು ಹಾಕಿದ್ದರೆ ಸಾಕಾಗಿತ್ತು. ರೈಲಿನ ಬ್ಲಾಗು ಮತ್ತು ಗಾರ್ಬೇಜ್ :) ಗುಂಪಾಗಿ ರಲಿನಲ್ಲಿ ದಾಳಿ ನಡೆಸಿದ್ದನ್ನ ಬರೆದರೆ ಕೆಲವರಿಗೆ ಕಸವಾಗಿ ಕಾಣುತ್ತದೆ ಅನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಹಾರಣೆ ಬೇಕೆ? ಅಂದ ಹಾಗೆ ಇನ್ನು ಹೆಚ್ಚು ಪ್ರತಿಕ್ರಯಿಸದೆ, shift+del ಒತ್ತಬೇಕು ಈ ರೀತಿಯ ಬ್ಲಾಗ್ ಗಳಿಗೆ.

Submitted by abdul on
ಭಾಸ್ಕರ್, ಸಾಮಾನ್ಯವಾಗಿ ತಮ್ಮ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನಾನು ಬರೆಯೋಲ್ಲ ಕಾರಣ, ನೀವು ಬಹು ಬೇಗ ಉದ್ವೇಗಕ್ಕೆ ಒಳಗಾಗಿ ಬಿಡ್ತೀರ. ಈಗ ಬರೆಯಲು ಕಾರಣ ಏನೆಂದರೆ ತಮಗೆ ಮತ್ತು ತಮ್ಮ tribe ನವರಿಗೆ ಪಥ್ಯವಿಲ್ಲದ್ದು ಕಂಡ ಕ್ಷಣ ಲಿಂಕುಗಳ ಮಹಾ ಪೂರವನ್ನೇ ಹರಿಬಿಡುತ್ತೀರ. ಲಿಂಕ್ ಗಳೊಂದಿಗಿನ ತಮ್ಮ ಲಿಂಕ್ ಹೀಗೆ ಸಾಗಲಿ. :)

Submitted by mpneerkaje on
<< ನೀವು ಬಹು ಬೇಗ ಉದ್ವೇಗಕ್ಕೆ ಒಳಗಾಗಿ ಬಿಡ್ತೀರ >> ಇವೊತ್ತು ಬೆಳಗ್ಗೆ ಉದ್ವೇಗಕ್ಕೆ ಒಳಗಾಗಿ ತಾವು ಬಡಬಡಿಸಿದ್ದು ಮರೆತು ಹೋಯಿತೆ?? :) ಭಾಸ್ಕರ್ ಗೆ ಅದು ಗೊತ್ತಿರಲಿಕ್ಕಿಲ್ಲ.. ಅದಕ್ಕೇ ನಾನು ಹೇಳುತ್ತಿದ್ದೇನೆ.. ಕೂಲ್..

Submitted by bhasip on
ತಾವು ಹೇಗೆ ಅಂತ ಗೊತ್ತು ಬಿಡಿ;) ಯಾವಗ ಯವುದಕ್ಕೆ ಎಷ್ಟು ಉತ್ತರ ಕೊಡುತ್ತೀರ ಚೆನ್ನಾಗಿ ಗೊತ್ತು :) ಹಸಿರು ಬಾವುಟ ಅಂದ ಕೂಡಲೆ ಅದು ಎಲ್ಲಿ ಹಾರುತ್ತೆ ಅಂತ ಉತ್ತರ ಕೊಟ್ಟಾಗಲೆ, speed ಎಷ್ಟು, ಬಾವೊದ್ವೇಗ ಯಾವ ಮಟ್ಟಕ್ಕೆ ಆಗುತ್ತೆ ಅಂತ ಸುಲಭವಾಗಿ ಗೊತ್ತಾಗುತ್ತೆ. ಆದರೆ ರೈತಸಂಘ ಮಾತ್ರ ಹಾರಿಸೋಲ್ಲ ಅಂತ ತಮಗೆ ಹೊಳೇಯೋದೆ ಇಲ್ಲ :೦ ತಾವು ಅಷ್ಟೆ, ತಮಗೆ ಪಥ್ಯವಲ್ಲ ಅಂದ ಕೂಡಲೇ ಅದರ ಬಗ್ಗೆ ಬ್ಲಾಗ್ ಇಳಿಸಿ ಬಿಡುತ್ತೀರ. ಈ ಲೇಖನಕ್ಕಿಂತ ಉತ್ತಮ ಸಾಕ್ಷಿ ಬೇಕೆ? :) ತಾವು ಅಷ್ಟೆ, ನಿಮ್ಮ ಹಿಂದು/ಭಟ್ಟ ವಿರೋಧಿ ಲೇಖನ ಮುಂದು ವರಿಸಿ, ಯಾವ (ಉದ್) ವೇಗದಲ್ಲಾದರು..... ಅಂದ ಹಾಗೆ , ಈ ಲೇಖನ ಬರೆಯುವಾಗ, ಭಟ್ಟರ ಲೇಖನ ಓದುವಾಗ ನಿಮ್ಮ ಬಿಪಿ ಪರೀಕ್ಷೆ ಮಾಡಿಸಿಕೊಂಡಿದೀರ? ;) ಹಾಗೆಯೆ ಈ ಲೇಖನಗಳಿಗೆ ಪ್ರತಿಕ್ರಯಿಸುವಾಗ ಕೂಡ? :)

Submitted by bhasip on
ನಾನು ಬರೆದಿರುವ ವಿಶ್ಃಅಯಗಳ ಬಗ್ಗೆ ಪ್ರತಿಕ್ರಯಿಸುವ ಬದಲು, ನನ್ನ ವೇಗದ ಬಗ್ಗೆ ಬರೆಯಲು ಹೋಗುವ ನಿಮ್ಮ escapism ಎಂಥದ್ದು ಅಂತ ಚೆನ್ನಾಗಿ ಗೊತ್ತಾಗುತಿದೆ..... ನಿಮ್ಮ ಉದ್ವೇಗ ಎಂತದ್ದು ಅಂತ. ಬಾಂಬ್ ಸ್ಪೋಟಗಳಿಗೆ ಕಾರಣ ಯಾರು ಹೇಳಿ.. ಕಾಶ್ಮೀರದಲ್ಲಿ ನಡೆದ, ನಡೆಯುತ್ತಿರುವ ಹಿಂಸೆಗೆ ಕಾರಣ? ಇಂದಿನ ಪತ್ರಿಕೆಗಳನ್ನು, ಮತ್ತು ಐಬಿಎನ್ ಪುಟ ನೋಡಿ. ಗೃಹಮಂತ್ರಿಗಳೆ ಹೆಳಿದ್ದಾರೆ ಗಲಾಟೆಗೆ ಕಾರಣ ಯಾರು ಅಂತ..

Submitted by manju787 on
<<ಇಂಥ ಬರಹಗಳನ್ನ ಓದಿ ಪ್ರತಿಕ್ರಯಿಸುವ ವ್ಯಕ್ತಿಗಳ ಪ್ರೊಫೈಲ್ ಒಮ್ಮೆ ನೋಡಿ, ಕನಿಕರ ಹುಟ್ಟುವುದಿಲ್ಲವೇ ಬುದ್ಧಿಯ ದಿವಾಳಿತನಕ್ಕೆ?>> ಅಬ್ದುಲ್, ನಿಮ್ಮ ಲೇಖನದ ಈ ಸಾಲು ಸ್ವಲ್ಪ ಅತಿಯಾಯಿತು ಅನ್ನಿಸುತ್ತದೆ. ಲವ್ ಜಿಹಾದ್ ಬಗ್ಗೆ ಪ್ರತಿಕ್ರಿಯಿಸಿದ ಯಾರೂ ಹುಚ್ಚರಲ್ಲ, ಬೌದ್ಧಿಕವಾಗಿ ದಿವಾಳಿಯೂ ಆಗಿಲ್ಲ. ಪಾಪ, ನಿಮ್ಮ ಬಗ್ಗೆ ನನಗೆ ಕನಿಕರವಾಗುತ್ತಿದೆ, ಲವ್ ಜಿಹಾದ್ ಬಗ್ಗೆ ನಿಮಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲವಲ್ಲ ಎ೦ದು. ಈ ಸಲ ರಜಕ್ಕೆ ಬ೦ದಾಗ ಪುರುಸೊತ್ತಾಗಿ ಮ೦ಜೇಶ್ವರ, ಕಾಸರಗೋಡು, ಮ೦ಗಳೂರು, ಉಡುಪಿ ನಾಲ್ಕು ಊರುಗಳನ್ನು ಸುತ್ತಿ ಬನ್ನಿ. ವಿಚಾರ ಸ೦ಗ್ರಹಿಸಿ, ಆಗ ನಿಮಗೆ ಬಹುಶಃ ಗೊತ್ತಾಗಬಹುದು, ಇದು ಯಾವ ಮಟ್ಟಕ್ಕೆ ಮುಟ್ಟಿದೆಯೆ೦ದು. ಇನ್ನು ಭಾರತದ ಬಹುಸ೦ಖ್ಯಾತ ಹಿ೦ದೂಗಳಿಗೆ ತಮ್ಮ ಅಭಿಪ್ರಾಯವನ್ನು ಅ೦ತರ್ಜಾಲದಲ್ಲಿ ವ್ಯಕ್ತಪಡಿಸಲು ಯಾರ ಅಪ್ಪಣೆಯನ್ನೂ ಪಡೆಯಬೇಕಾಗಿಲ್ಲ ಎ೦ದು ನನ್ನ ಅಭಿಪ್ರಾಯ. ನೀವು ಕೊಟ್ಟ ಲಿ೦ಕಿಗಾಗಿ ಧನ್ಯವಾದಗಳು. ಭಟ್ಟರ ಎರಡೂ ಲೇಖನಗಳನ್ನು ಓದಿದೆ, ಅಲ್ಲಿ "ಇ೦ಟರ್ನೆಟ್ ಹಿ೦ದೂಗಳು" ಹೇಗೆ ಕೆಲವೇ ಮಾಧ್ಯಮದವರು ಏಕಸ್ವಾಮ್ಯ ಸಾಧಿಸಿದ್ದ ಜಾಗದಲ್ಲಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೊರಹಾಕಿ ಬದಲಾವಣೆಗೆ ಕಾರಣರಾಗುತ್ತಿದ್ದಾರೆ೦ದು ವಿವರಿಸಿದ್ದಾರೆಯೇ ಹೊರತು ಮುಸ್ಲಿ೦ ದ್ವೇಷಿಯಾದ ಒ೦ದೇ ಒ೦ದು ಪದವೂ ಅವರು ಬರೆದಿಲ್ಲ. ಜನ್ಮತಃ ಹಿ೦ದೂಗಳಾದ ನಮ್ಮನ್ನು ನಾವು ಈ ಮಾಹಿತಿ ತ೦ತ್ರಜ್ಞಾನದ ಯುಗದಲ್ಲಿ "ಇ೦ಟರ್ನೆಟ್ ಹಿ೦ದೂ" ಎ೦ದು ಕರೆದುಕೊಳ್ಳುವುದರಲ್ಲಿ ತಪ್ಪೇನಿದೆ? ನಿಮ್ಮ ಕೋಪಕ್ಕೆ ಕಾರಣವೇನು ಎ೦ದು ನನಗೆ ಅರ್ಥವಾಗುತ್ತಿಲ್ಲ.

Submitted by vinayak.mdesai on
>> ತಮ್ಮ ಧರ್ಮವೇ ಮೇಲು ಎಂದು ತೋರಿಸಲು ಕೆಲವು ಚಮತ್ಕಾರಗಳ ಪ್ರಸ್ತಾಪ ಇರುವ ಮೇಲುಗಳು ನನಗೆ ಬಂದಿವೆ..... ಮೊನ್ನೆ ಸಂಪದದಲ್ಲಿ ಯಾರೋ ಒಂದು ಲೇಖನ ಬರೆದಿದ್ದರೆ..[ಅವರ ಹೆಸರು ಜ್ನಾಪಕಕ್ಕೆ ಬರುತ್ತಿಲ್ಲ] ಅದರಲ್ಲಿ ಒಂದು youtube ಲಿಂಕ್ ಇತ್ತು ಝಾಕೀರ್ ನಾಯಿಕ್ ಬಗ್ಗೆ.. ಅದರಲ್ಲಿ.. ಹಿಂದೂ, ಕ್ರಿಶ್ಚಿಯನ್ ಹಾಗು ಇತರೆ ಧರ್ಮಗಳಿಗಿಂತ ಇಸ್ಲಾಂ ಶೇಷ್ಠ (?) ಅಂತ ಬೊಬ್ಬೆ ಹಾಕ್ತಿದ್ದ.. ಆಗ ಯಾಕೆ ತಾವು ಜಾಣಕುರುಡುತನ ತೋರಿದ್ದು? ನನ್ಗೂ ಒಂದು email ಬಂದಿದೆ ಇಸ್ಲಾಂ ಬಗ್ಗೆ.. ದಿನಕ್ಕೆ ೫ ಬಾರಿ ಪ್ರಾರ್ಥನೆ ಮಾಡಿ ನಿಮಗೆ ಅಲ್ಲಾ ಒಳ್ಳೆಯದನ್ನು ಮಾಡ್ತಾನೆ ಅಂತ.. ನಿಮ್ಮ E mail ವಿಳಾಸ ಕೊಡಿ ಬೇಕಾದರೆ fwd ಮಾಡ್ತೀನಿ... >> ಒಂದು ವರ್ಗಕ್ಕೆ ಸೇರಿದವರು ರೈಲು ಹತ್ತುತ್ತಾರೆ, ......... ಇದು ಕಟ್ಟುಕಥೆ ಅಲ್ಲ ಸ್ವಾಮಿ.. ಇದು ನೈಜ ಚಿತ್ರಣ.. ಬನ್ನಿ ನಮ್ಮ ಊರಿಗೆ ಒಮ್ಮೆ ಅಲ್ಲಿ ನೋಡಿದಮೇಲೆ ನಿಮಗೇ ಅರಿವಾಗಬಹುದು...ಇಂಥ ನೂರಾರು ಉದಾಹರಣೆಗಳನ್ನು ನಾನೂ ನೋಡಿದ್ದೇನೆ.. ಒಮ್ಮೇ ಹೀಗೆ ಆಗಿತ್ತು.. ಮಾತು ಎತ್ತಿದ್ದೀರಿ ಅಂತ ಹೇಳುತ್ತಿದ್ದೇನೆ... ನನ್ನ ಅಣ್ಣ RSS ಶಾಖೆ ಮಾಡುತ್ತಿದ್ದಾಗ ೩-೪ ಜನ ಮುಸ್ಲಿಮರು ಬಂದು ಅಣ್ಣನಿಗೆ ಬಾಯಿಯಿಂದ ರಕ್ತ ಬರುವ ಹಾಗೆ ಹೊಡೆದು ಹೋಗಿದ್ರು.. ಮರುದಿನ ಬೆಳಗ್ಗೆ ಸುಮಾರು ೧೦-೧೫ ಜನ ೫ ಗಂಟೆಗೆ ಹೋಗಿ ಮನೆ ಹೊಕ್ಕು ಹೊಡೆದು ಬಂದಿದ್ವಿ.. ಅದಾದ ಮೇಲೆ ಅವರಿಗೆ ಬುದ್ಧಿ ಬಂದದ್ದು... ಈ ಘಟನೆ ಆದಮೇಲೆ ಇಂದಿಗೂ ನಮ್ಮ ಏರಿಯಾನಲ್ಲಿ ಒಬ್ಬನೇ ಒಬ್ಬ ಹಿಂದುಗಳನ್ನು ಕೆಣಕುವ ಧೈರ್ಯ ಮಾಡಿಲ್ಲ... ಮನುಷ್ಯನಿಗೆ ಮಾತಿನ ಪೆಟ್ಟು ಕತ್ತೆಗೆ ಲತ್ತೆ ಪೆಟ್ಟು ಅಂತಾರಲ್ಲ ಹಾಗೆ.. ಒದೆ ಬಿದ್ಮೇಲೆನೆ ಬುದ್ಧಿ ಬಂತು.. ಅಷ್ಟಾಗಿ ನಾವೇನು ಅವರಮೇಲೆ ಕಾಲು ಕೆರೆದು ಜಗಳಕ್ಕೆ ಹೋಗಿದ್ದಲ್ಲ...

Submitted by bhasip on
ರೈಲಿನ ಮತ್ತೊಂದು ನಿಜ ಘಟನೆ... ನಾನು ಬರೆಯಲು ಹೋಗಿರಲಿಲ್ಲ ಅಷ್ಟೆ.... ಕಳೆದ ಡಿಸೆಂಬರ್ ನಲ್ಲಿ ಹಂಪೆ ಪ್ರವಾಸ ಮುಗಿಸಿ ೨೮ ಜನರ ತಂಡ ವಾಪಸ್ ಆಗುತ್ತಿದ್ದೆವು. ೬ ಜನ ಹಿರಿಯ ನಾಗರೀಕರೂ ಇದ್ದರು ನಮ್ಮ ಜೊತೆ. ನಮಗೆ ಕಾಯ್ದಿರಿಸಿದ ಬೋಗಿಗೆ ಹತ್ತಿ, ನಮ್ಮ ಸೀಟು ಹುಡುಕಿ ನೋಡಿದರೆ ಅವು ಖಾಲಿ ಇರಲಿಲ್ಲ. ಆಮೆಲೆ ಕೆಲವರು ಬಿಟ್ಟು ಕೊಟ್ಟರು ನಮ್ಮ ಕಾಯ್ದಿರಿಸಿದ ಟಿಕೇಟ್ ತೋರಿಸಿದ ಮೇಲೆ. ಒಂದು ಕಡೆ ೬ ಜನರಿಗೆ ಕೂರುವ ಕಡೆ ಇದ್ದ ಜನ ಜಾಗ ಬಿಟ್ಟು ಕದಲಲಿಲ್ಲ.. ಕೆಳಿದ್ದಕ್ಕೆ ಯಾವುದೋ ಭಾಷೆಯಲ್ಲಿ ಉತ್ತರ ಕೊಟ್ಟರು. ನಾನು ಕನ್ನಡ ಮಾತಾಡೀ ಮೊದಲು ಅಂದಾಗ , ಮುಂದೆ ನಮ್ಮ ಇಶ್ಟಾಪ್ ಇದೆ, ಇನ್ನು ೧ ಘಂಟೆಯಲ್ಲಿ ಬರುತ್ತೆ, ಆಮೆಲೆ ಇಳಿದು ಕೊಳ್ಳಿ ಅಂದರು. ಸ್ವಾಮಿ ನಾವು ಪ್ರವಾಸ ಮಾಡೀ ಸುಸ್ತಾಗಿದ್ದೀವಿ , ಇದು ನಮಗೆ ಕಾಯ್ದಿರಿಸಿದ ಸ್ಥಳ ಬಿಡಿ ಎಂದು ನಯವಾಗಿ ಕೆಳಿಕೊಂಡರೂ ಇಲ್ಲ ಬಿಡಲ್ಲ, ಈಗ ಇನ್ನು ೯ ಘಂಟೆ ಅಷ್ಟೆ, ೧೦ ಘಂಟೆ ವರೆಗೆ ತಡೆಯಿರಿ, ಆಮೆಲೆ ಮಲಗಿ ಅಂತ ಉತ್ತರ. ನಾವು ಇದ್ದ ೧೦ ಜನ ಹುಡುಗರು ಒಟ್ಟಿಗೆ ಸೇರಿ ಪ್ರಶ್ನಿಸಿದರೆ ,ಅಲ್ಲಿ ಇದ್ದ ೧೨ + ೪ ಮಕಳಲ್ಲಿ , ಒಬ್ಬ ಮಹಿಳೆ ಬುರ್ಖಾ ದೊಳಗಿಂದ ಉತ್ತರಿಸಿದಳು "ಮಗು ಕೈಲಿ "೧" ಮಾಡಿಸ್ತಿನಿ ಸೀಟ್ ಮೇಲೆನೀವು ಹೀಗೆ ಮಾಡಿದ್ರೆ.. ಆಗ ಹೆಗೆ ಮಲ್ಗತಾರೆ ನೀವು ".. ಅಲ್ಲಿದ್ದ ನಾವೆಲ್ಲ ಓಂದು ಕ್ಷಣ ಅವಕಾದೆವು ಆ ಉತ್ತರ ಕೇಳಿ. ನಮ್ಮ ಪುಣ್ಯ ಟಿಟಿ ಅಲ್ಲಿಗೆ ಆಗಮಿಸಿ ಅವರನೆಲ್ಲಾ ನಮ್ಮ ಬೋಗಿಯಿಂದ ಆಚೆ ಕಳುಹಿಸಿದರು. ಸಧ್ಯ ಈಗ ಅನ್ನಿಸ್ತಾ ಇದೆ, ನಮಗೆ ಕೈ ಕಾಲು ಮುರಿಲಿಲ್ಲ ಮುಂದಿನ ನಿಲ್ದಾಣದಲ್ಲಿ ಅಂತ... ಈ ಘಟನೆ ನಡೆದಾದ ಮೇಲೆ, ನಾವು ಗೆಳೆಯರು ಊಟ ಮಾಡುತ್ತಾ ಅಂದು ಕೊಂಡಿದ್ದು .. ದೇಶದ ಮೇಲೆ ಅತಿಕ್ರಮಣ ಹೀಗೆ ನಡೆದಿದ್ದು ಅಂತ. ಯಾರೋ ಉತ್ತರ ಬರೆಯಲಿ, ಪ್ರತಿಕ್ರಯಿಸಲಿ ಅಂತ ನಾನು ಇದನ್ನ ಬರೆದಿಲ್ಲ. ಕೊ ಕೊ : ಅಲ್ಲಿ ಬುರ್ಖಾ ಒಳಗೆ ಹಿಂದು ಇದ್ದಳೊ ಅಥವ್ವ ಬೇರೆಯವರೋ ಅಂಥ ನನ್ನ ಪ್ರಶ್ನೆ ಮಾಡಬೇಡಿ, ಹಾಗೆಯೆ ಟೋಪಿ ಧರಿಸಿ ಕುರುಚಲು ಗಡ್ಡ ಬಿಟಿದ್ದ ವ್ಯಕ್ತಿ ಆರೀತಿ ವೇಷ ಧರಿಸಿದ್ದ ಹಿಂದುವೆ ಎಂದು ಪರೀಕ್ಷಿಸಲು ಹೋಗಿಲ್ಲ.

Submitted by mpneerkaje on
ನಿಜ ವಿನಾಯಕರೆ.. ಹಿಜಿಡಾಗಳ ಥರ ಹೆದರಿಕೊಂಡು ಬದುಕುವುದಕ್ಕಿಂತ ಹೀಗೆ ಸ್ವರಕ್ಷಣೆ ಎಲ್ಲರು ಕಲೀಬೇಕು ಅಂತ ನನ್ನ ಅನಿಸಿಕೆ.. ಪೊಲೀಸರು ಹೇಗೂ ಇಂತಹ ವಿಷಯಗಳಲ್ಲಿ ಅವರ ಬೆಂಬಲಕ್ಕೆ ನಿಂತಿರುವುದರಿಂದ ಬೇರೇನೂ ಉಪಾಯ ಕಾಣದು ನಂಗೆ. ಇನ್ನೂ ಜಾಸ್ತಿ ಬರೆಯೋ ಹಾಗಿಲ್ಲ ಅಂತ ಕಾಣ್ಸುತ್ತೆ ಇಲ್ಲಿ.. :) ಇರಲಿ.. ಈ ಚರ್ಚೆ ಇಲ್ಲಿಗೆ ಸಾಕು ಅನ್ಸುತ್ತೆ... ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು..

Submitted by ಉಉನಾಶೆ on
ಅಬ್ದುಲ್: ಈ ಬರಹ ತುಂಬ ಗೋಜಲು ಗೋಜಲಾಗಿದೆ ಅನ್ನಿಸಿತು. ತುಂಬ ರೋಷದಲ್ಲಿ ಬರೆದಂತೆ ಕಾಣಿಸಿತು. ಹಲವು ಕಡೆ "ಛೆ! ಇವೆಲ್ಲ ಯಾಕೆ" ಅನ್ನಿಸಿತು. ಸಮಾಧಾನ ಮಾಡಿಕೊಂಡು ಓದಿ ತಿದ್ದುಪಡಿ ಮಾಡಬೇಕು ಅನ್ನಿಸಿದರೆ ಮಾಡಿ. ಇತೀ, ಉಉನಾಶೆ

ಟ್ವಿಟ್ಟರಿನಲ್ಲಿ ಸಂಪದ