24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒಂದು ಸಣ್ಣ ಸುಳ್ಳು ನೀನು

July 25, 2010 - 7:35pm
prasannas

 

ಬ್ರಹ್ಮ ನನ್ನ ಎದೆಯ ಮೇಲೆ ಬರೆದು 

ಮರೆತ ಒಂದು ಸಣ್ಣ ಸುಳ್ಳು ನೀನು 

ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ 

ಮರೆಯಾದ ಒಂದು ಸಣ್ಣ ಗುರುತು ನಾನು

 

ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ 

ಒಂದು ಸಣ್ಣ ಎಳೆಯು ನನ್ನ ಪ್ರೀತಿ

ತಂಗಾಳಿಗೆ ನಿನ್ನ ಮುಂಗುರುಳು ಹಾರಿ ನನ್ನ 

ಹೃದಯ ಸೇರಿದ ಒಂದು ಸಣ್ಣ ಗಾಯ ನಿನ್ನ ನೆನಪು

 

ಬೆಳದಿಂಗಳ ರಾತ್ರಿಯಲಿ ಮೌನದ 

ಮರೆಯಲಿ ಸ್ತಬ್ದ ಅಲೆಗಳ ಮೇಲೆ

ನಿ ಒಮ್ಮೆ ಸುಮ್ಮನೆ ಕುಳಿತು 

ಬಿಡಿಸಿದ ಕಾಮನಬಿಲ್ಲು ಕನಸು

ಲೇಖನ ವರ್ಗ (Category): 
No votes yet
To prevent automated spam submissions leave this field empty.