ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

csomsekraiah's picture

ಪೂರ್ಣ ಹೆಸರು
ಸಿ ಸೋಮಶೇಖರಯ್ಯ

ಪರಿಚಯ

ಕನ್ನಡ ಪುಸ್ತಕಗಳನ್ನು ಓದುವುದು, ಕನ್ನಡದಲ್ಲಿ ಬರೆಯುವುದು, ಕೆಲವು ಪುಸ್ತಕಗಳು ಪ್ರಕಟವಾಗಿವೆ.

ಅನನ್ಯ ಅಲ್ಲಮ ೬ (೧)

ಉಜ್ಜಯಿನಿಯ ಗುಹೆಯಲ್ಲಿ ಕಾಳಿಚರಣನನ್ನು , ಸಂಕಲೆಯನ್ನು ಅನುಗ್ರಹಿಸಿದ ಅಲ್ಲಮನು , ತ್ರಿಯಂಬಕೇಶ್ವರಕ್ಕೆ ಬಂದನು . ಅಲ್ಲಿ ಗೋದಾವರಿ ನದಿ ಮೂಲದ ಬ್ರಹ್ಮಗಿರಿಯ ಗುಹೆಗಳಲ್ಲಿ ಅನೇಕ ತಪಸ್ವಿಗಳಿದ್ದರು , ಅವರ ಒಡನಾಟದಲ್ಲಿ , ಅಲ್ಲಿಯ ರಮಣೀಯತೆಗೆ ಮನಸೋತು ಕೆಲ ಕಾಲ ಅಲ್ಲಿ ನಿಂತನು . ಆದರೆ ಅವನಿಗೆ ಅರಿವಿತ್ತು ;  ತನ್ನ ಕಲ್ಯಾಣದ ವಾಸ್ತವ್ಯದ ದಿನಗಳು ಹತ್ತಿರವಾಗುತ್ತಿವೆಯೆಂದು . ಒಂದು ದಿನ   ಇಳಿ ಸಂಜೆಯ ಸಮಯದಲ್ಲಿ ಬ್ರಹ್ಮಗಿರಿಯ ತಪ್ಪಲಿನ ಬೃಹತ್ ಕಪ್ಪು ಶಿಲಾಖಂಡದ ಮೇಲೆ ಕುಳಿತ ಅಲ್ಲಮನಿಗೆ , ಮುಂದೆ ಹಾಸಿ ಹರಡಿ ನಿಂತ ದಟ್ಟ ಹಸಿರು ಕಾನನ ಪಂಕ್ತಿಯು ಕಣ್ಣು ಹರಿದತ್ತೆಲ್ಲಾ ಪಸರಿಸಿದ  ಮನೋಹರ ದೃಶ್ಯ  ಚಿತ್ತವನ್ನು ಸೆರೆ ಹಿಡಿದಿತ್ತು  . ಬಂಡೆಯ  ಬುಡದಲ್ಲಿ ಬೆಳೆದಿದ್ದ ಹುಲ್ಲಿನ ನಡುವೆ ಗೂಡು ಕಟ್ಟಿಕೊಂಡಿದ್ದ ಮೊಲಗಳು , ಆ ಸಂಜೆಯ ಸೊಬಗಿನಲ್ಲಿ ಗೂಡುಗಳಿಂದ ಹೊರ ಬಂದು ಚಿನ್ನಾಟದಲ್ಲಿ ತೊಡಗಿದ್ದವು . ಅದು ಅಲ್ಲಮನಿಗೆ ಹೊಸದೇನಾಗಿರಲಿಲ್ಲ , ನಿತ್ಯ ಸಂಜೆ ಅಲಿಗೆ ಬರುತ್ತಿದ್ದ ಅಲ್ಲಮನಿಗೆ ಮೊಲಗಳ ಆಟ ಮನಕ್ಕೆ ಮುದ ನೀಡುವ ಮೋಜಿನ ವಿಷಯವಾಗಿತ್ತು . ಇಂದೂ ಸಹ ಮೊಲಗಳು ಅವಿತುಕೊಳ್ಳುವುದು , ಅವಿತುಕೊಂಡವನ್ನು ಇತರ ಮೊಲಗಳು ಹುಡುಕಾಟ ನಡೆಸುವುದು , ಮರಿ ಮೊಲಗಳನ್ನು ತಾಯಿ ಮೊಲಗಳು ಎಚ್ಚರದಿಂದ ಆಟಕ್ಕೆ ಬಿಡುವುದು ಮುಂತಾದ ಆಟಗಳಲ್ಲಿ ತಲ್ಲೀನವಾಗಿದ್ದವು .  ಆ ಪುಟ್ಟ ಜೀವಿಗಳ ಭಾವ ಪ್ರಪಂಚದೊಡನೆ ಒಂದಾಗುತ್ತಾ , ಮುಗುಳ್ನಗುತ್ತಾ ಅಲ್ಲಮನು  ಕುಳಿತಿದ್ದನು . ಇಂತಹ ಮೋಜಿನ ಸಂತೆಯ ನಡುವೆ ನಡೆದ ಒಂದು ಘಟನೆ ಇಡೀ ಮೊಲಗಳ ಸಮುದಾಯ ಬೆಚ್ಚು ಬಡಿದು ಮಂಕು ಹಿಡಿದು ಕ್ಷಣಾರ್ಧದಲ್ಲಿ ಓಡಿ ಮರೆಯಾಗಿ ತಮ್ಮ ಬಿಲಗಳಲ್ಲಿ ಅವಿತುಕೊಳ್ಳುವಂತೆ ಮಾಡಿತು . ಅದೆಲ್ಲಿತ್ತೋ ಒಂದು ಘಟ ಸರ್ಪ,  ಮಿಂಚಿನಂತೆ ಎರಗಿ , ಮೊಲಗಳ ಗುಂಪೊಂದರ ಸಲಗ ಮೊಲವನ್ನು ಹಿಡಿಯಿತು . ಸರ್ಪದ ಬಾಯಿಗೆ ಸಿಕ್ಕ ಮೊಲ ವಿಲ ವಿಲನೆ ಒದ್ದಾಡುತ್ತಾ ಬಿಡಿಸಿಕೊಳ್ಳುವ ವ್ಯರ್ಥ ಪ್ರಯತ್ನದೊಡನೆ ಸೆಣಸುತ್ತಿತ್ತು . ರೋಷದಿಂದ ಸರ್ಪ ಹೆಡೆ  ಆಡಿಸುತ್ತಾ  ತನ್ನ ಕೆಂಗಣ್ಣಿನಿಂದ ಬಾಯಲ್ಲಿದ್ದ ಮೊಲವನ್ನು ದುರುಗುಟ್ಟಿ ನೋಡುತ್ತಾ ಅದನ್ನು ಸ್ಥಂಭೀಭೂತಗೊಳಿಸುತ್ತಿತ್ತು . 
   ಸರ್ಪದ ಈ ನಡೆ ಅಲ್ಲಮನನ್ನು ಚಕಿತಗೊಳಿಸಿತು , ಮೊಲಗಳು ಉತ್ಸಾಹದಿಂದ ತಮ್ಮ ಕ್ರಿಯೆಗಳಲ್ಲಿ ತೊಡಗಿದ್ದಾಗ ಅಲ್ಲಿ ಮೃತ್ಯು ಒಂದು ಅಡಗಿರುವುದರ ಸದ್ದೇ ಇರಲಿಲ್ಲ . ಅಷ್ಟು ಜಾಗರೂಕತೆಯಿಂದ ತನ್ನ ಇರವನ್ನು ತೋರಗೊಡದೆ , ಆ ಅಮಾಯಕ ಮೊಲಗಳ ನಾಯಕನನ್ನು ಗುರಿ ಹಿಡಿದು ಎರಗಿ ಕಬಳಿಸಿದ ಸರ್ಪ ಅಲ್ಲಮನ ವಿಚಾರಶಕ್ತಿಯನ್ನು ಜಾಗೃತಗೊಳಿಸಿತು . ಕಲ್ಯಾಣದಲ್ಲಿ ಬಸವಣ್ಣನವರು ಬೆಳ್ಳಗಿರುವುದೆಲ್ಲವೂ ಹಾಲೆಂದು ಬಗೆದಿದ್ದಾರೆ . ತಾವು ಮಾಡುತ್ತಿರುವ ಕಾರ್ಯಗಳಿಗೆ ಸಕಲರ ಬೆಂಬಲವನ್ನೂ ಆಶಿಸುತ್ತಿದ್ದಾರೆ . ಆ ಸರಳ ಮನಸ್ಸು ಅರಿಯದು ಸನಿಹವೇ ಮೈಮರೆತಂತೆ ನಟಿಸುತ್ತಾ ಮಲಗಿರುವ ಅನಾದಿ ಕಾಲದ ಘಟ ಸರ್ಪ , ತನ್ನ ಬಲಿಗಾಗಿ ಎಚ್ಚರದಿಂದ ಕಾಯುತ್ತ , ಅಮಾಯಕತೆ ನಟಿಸುತ್ತ , ನಿದ್ರೆಯ ನಟನೆಯಲ್ಲಿದೆ ಎಂಬುದನ್ನು .   ಅಲ್ಲಮನ ಒಳಗಣ್ಣಿನ ಮುಂದೆ ಸುಳಿದ ಈ ಭಯಂಕರ ದೌರ್ಭಾಗ್ಯದ ಒಳ ಸುಳಿಯ ಬಗ್ಗೆ ಚಿಂತಿತರಾಗಿದ್ದಾಗಲೇ  ,
 
" ಏನು ಯೋಚಿಸುತ್ತಿರುವೆ ಅಲ್ಲಮ ?,, 
ಅಲ್ಲಮನು ತಲೆ ಎತ್ತಿ ನೋಡಿದನು ಗಳಿತ ಶರೀರದ , ಕೆನ್ನೆಯ ತೆರೆಗಳ , ಕವಡೆಯ ಸರಗಳ , ನೊಸಲ ಅಗಲ ಕುಂಕುಮದ , ಕೋಲೂರಿದ ಮುದುಕಿ ಬೊಚ್ಚು ಬಾಯಲ್ಲಿ ನಗುತ್ತಾ  ನಿಂತಿದ್ದಳು
 " ಓ , ನೀನೇ ,, ಎಂದು ಅಲ್ಲಮನು ಅನ್ಯ ಮನಸ್ಕನಾದನು . 
" ಈ ಸಮಯದಲ್ಲಿ ನಾನು  ಬಂದುದು ನಿನಗೆ ಹಿಡಿಸಲಿಲ್ಲವೇ ? ,,
 " ಬರುವುದೂ ಬಿಡುವುದು ನಿನ್ನ ಇಷ್ಟ , ಅದನ್ನು ಪ್ರಶ್ನಿಸಲು ನಾನಾರು ? , ಆದರೆ ಈಗೇಕೆ ಈ ಭೈರವಿಯ ವೇಷ ? ,, 
" ಭೈರವದ ಮುನ್ನುಡಿಗೆ ಭೈರವಿಯ ವೇಷ ,,
 ಆಗ ಅಲ್ಲಮನು , " ವೇಷ ಭೈರವವಾದರೂ ಅಷ್ಟೇ , ಕುಸುಮ ಮೋಹಿನಿಯಾದರೂ  ಅಷ್ಟೇ , ಪರಿಣಾಮಗಳಲ್ಲಿ ವ್ಯತ್ಯಾಸಗಳಿಲ್ಲ ,, 
ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ 
ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ 
ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ .
ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು .
ದಿವಾರಾತ್ರಿ ಉದಯದ ಬೆಳಗನು ಕತ್ತಲೆ ನುಂಗಿತ್ತು 
ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು 
ಈ ಮಾತುಗಳನ್ನು ಕೇಳಿದ ಭೈರವಿ ಕಂಪಿಸಿದಳು ,
  " ಹಾಗಾದರೆ ಸರ್ವನಾಶವನ್ನು ತಡೆಗಟ್ಟಬಲ್ಲೆಯಾ ? ,,  
" ಅದು ನನ್ನ ಕೆಲಸವಲ್ಲ ,ನಾನು ಸ್ಥಿತಿ ಕರ್ತನಲ್ಲ , ಸಂಹಾರಕರ್ತನು ಮೊದಲೇ ಅಲ್ಲ   ,, 
" ಹಾಗಾದರೆ ಬರಿಯ ಮೂಕ ಪ್ರೇಕ್ಷಕನೇನು ? ,, 
’ ಏಕೆ ಕೆಣಕುವೆ ಭೈರವಿಯ ವೇಷಧಾರಿ  ? , ಈ ಜಗತ್ತಿನ ಸೃಷ್ಟಿ ಸ್ಥಿತಿಗಳು ನನ್ನವಲ್ಲ , ಅದಕ್ಕೆ ಬೇರೆ ಶಕ್ತಿಗಳಿವೆ . ಆದರೆ ಸರ್ವನಾಶದ ಸಮಯದಲ್ಲಿ ಏನನ್ನು ಉಳಿಸಿಕೊಳ್ಳಬೇಕು , ಏನನ್ನು ಉಳಿಸಿಕೊಳ್ಳಬಹುದು,  ಎಂಬ  ಚಿಂತನೆಯಲ್ಲಿದ್ದೇನೆ ,, 
" ಏನನ್ನು ಉಳಿಸಿಕೊಳ್ಳಲು ಬಯಸುವೆ ?  ,,
" ಈ ನಿನ್ನ  ಈ ಪ್ರಶ್ನೆಗೆ ನಿನಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ ಎಂದುಕೊಂಡಿದ್ದೇನೆ ,, 
" ಏಕೆ , ಅಡ್ಡಿಯಾದೇನೆಂಬ ಭಯವೇ ? ,, 
" ನನ್ನ ಭಯದ ಅಗತ್ಯಗಳು ಕಳೆದು ಬಹಳ ದಿನಗಳಾದುವೆಂದು ನೀನು ಚನ್ನಾಗಿ ಬಲ್ಲೆ ,,  
" ಏಕೆ ಅಲ್ಲಮ ನನ್ನ ಕರ್ತವ್ಯಗಳನ್ನು ನಾನು ನಿರ್ವಹಿಸಬಾರದೆ ? ,,
" ನಿನ್ನ ಕರ್ತವ್ಯಗಳನ್ನು ನೀನು ನಿರ್ವಹಿಸಬಹುದು , ಆದರೆ ನನಗೂ ಇರುವ ಕರ್ತವ್ಯಗಳನ್ನು ನಾನೂ ನಿರ್ವಹಿಸಲೇಬೇಕು . ನಿನ್ನ ಕರ್ತವ್ಯಗಳಿಗೆ ನೀನು ಹೇಗೆ ಬಾಧ್ಯಳೋ ಹಾಗೆ ನಾನೂ ಸಹ , ಆ ಸತ್ಯವನ್ನು ಒಪ್ಪಿಕೊಳ್ಳಲು ನೀನೇ ಸಿದ್ದಳಿಲ್ಲ ,, 
 " ಅಂದರೆ ನನ್ನ ನಿನ್ನ ಸಂಘರ್ಷಗಳಿಗೆ ಕೊನೆ ಇಲ್ಲ ,, 
ಸಶಬ್ದವಾಗಿ ನಗುತ್ತಾ ಕೈಯಲ್ಲಿದ್ದ ಕೋಲಿಗೆ ಕಟ್ಟಿದ್ದ ಗೆಜ್ಜೆಗಳ ಸದ್ದುಗೈಯುತ್ತಾ 
" ನೋಡೋಣ ಮುಂದಿನ ನಾಟಕದ ರಂಗಭೂಮಿ ಕಲ್ಯಾಣ , ಅಲ್ಲಿಯೇ ಸಂಧಿಸುತ್ತೇನೆ ,,  ಎನ್ನುತ್ತಾ  ಮುದುಕಿ ಅಲ್ಲಿಂದ ಸರಿದಳು  . 
   ಅಲ್ಲಮನ ಮುಖದಲ್ಲಿ ಪರಿಹಾಸದ ನಗೆ ಮೂಡಿತು . ’ ಇದು ವರೆಗೆ ಕಲ್ಯಾಣಕ್ಕೆ ನಾನು ಕಳುಹಿಸಿದುದು , ಕಾರ್ಯಕರ್ತರು ಮತ್ತು ಅನುಯಾಯಿಗಳ ಪಡೆಯನ್ನು , ಆದರೆ ಈಗ ನಿಚ್ಚಳವಾಗುತ್ತಿದೆ , ಅಲ್ಲಿ ನಾಯಕತ್ವ ವಹಿಸುವವರು ಬೇಕು .  ಸದ್ಯದಲ್ಲೇ ಅಪಾಯವೇನೂ ಕಂಡು ಬರುತ್ತಿಲ್ಲ , ಆದರೆ ದೂರ ಭವಿಷ್ಯದಲ್ಲಿ ಅಡಗಿ ಕುಳಿತಿರುವ ಅಪಾಯದ ಕಾಲ ಸರ್ಪದ ಕರಿ ನೆರಳು ಇಣುಕಿ ಕಾಣುತ್ತಿದೆ . ಈಗ ಅಲ್ಲಿರುವ ಮಾಚಿದೇವರು , ಮೋಳಿಗೆ ಮಾರಯ್ಯಗಳು, ಅಂಬಿಗರ ಚೌಡಯ್ಯ ಇವರೆಲ್ಲ ಸಮಯ ಒದಗಿದರೆ ವೀರ ಯೋಧರಾಗಬಲ್ಲರು ; ಸೂತ್ರಧಾರಿಗಳಾಗಲಾರರು . ಬಾಲಕನಾದರೂ ಚನ್ನಬಸವಣ್ಣ ಸೂತ್ರ ಹಿಡಿಯ ಬಲ್ಲ ಸಮರ್ಥ .  ಆದರೆ ಇದು ಒಬ್ಬ ನಾಯಕನಿಂದ ಬಗೆ ಹರಿಯುವ ಸಮಸ್ಯೆಯಾಗಲಾರದು ಅನೇಕಮುಖಿ ನಾಯಕತ್ವ ಬೇಕು . ಅನೇಕ ದಿಕ್ಕಿನ ರಕ್ಷಣೆ ಬೇಕು ; ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಸಹ . ’ ಯಾರು  ಸಮರ್ಥರು ? ಎನ್ನುವ ಆಲೋಚನೆಯೊಂದಿಗೆ ಅಲ್ಲಮನು ಅಂದಿನ ಇರುಳನ್ನು ಕಳೆದನು .
          ಮರುದಿನ ಸಂಜೆಯ ವೇಳೆಗೆ ಪುನಃ ಅದೇ ಬಂಡೆಯಮೇಲಕ್ಕೆ ತೆರಳಿ ನಿಸರ್ಗ ನಿರೀಕ್ಷಣೆಯಲ್ಲಿ ಕುಳಿತ ಅಲ್ಲಮನ ಮನೋಪ್ರಪಂಚದಲ್ಲಿ ಧೀರ ಬಾಲಕನೊಬ್ಬನ ಸೂಕ್ಷ್ಮ ಚಿತ್ರ , ಮಸುಕು ಮಸುಕಾಗಿ ಮೂಡತೊಡಗಿತು . ಅಲ್ಲಮನ ಬಗೆಗಣ್ಣಿನ ಮುಂದೆ ಕಂಡುಬರುತ್ತಿದ್ದ , ಉನ್ನತ ಪರ್ವತಾವಳಿಯ  ಕೋಡುಗಲ್ಲ ಮೇಲೆ  ಕೈ ಚಾಚಿ ನಿಂತ ; ಮನದಲ್ಲಿ ಮೂಡಿದ ಸಾತ್ವಿಕ ಬಯಕೆಗಳನ್ನು ಈಡೇರಿಸಿಕೊಂಡೇ ತೀರುವೆನೆಂಬ ಛಲದ ಮುಖ ಮುದ್ರೆಯ ಈ ಬಾಲಕ ಯಾರು ? ’ ಓ ! ಇವನೇ , ನಮ್ಮವನು , ಚಿಂತೆಯಿಲ್ಲ ಇವನು !  ಎಂದುಕೊಂಡ ಅಲ್ಲಮನ ಮನಸ್ಸಿನಲ್ಲಿ ಬಾಲಕನ ಜೀವನ ಚಿತ್ರ ಸುಳಿದಾಡತೊಡಗಿತು . 
   ಸೊನ್ನಲಿಗೆಯ ಕುಡು ಒಕ್ಕಲಿಗರ ನಾಯಕ ಮೋರ್ಡಿ ಮುದ್ದಯ್ಯ  ಸುಗ್ಗಲಾದೇವಿಯವರ ಪ್ರೇಮದ ಕುವರ ಇವನು , ಮುದ್ದಯ್ಯ ಸುಗ್ಗಲಾದೇವಿ ದಂಪತಿಗಳಿಗೆ ತಾರುಣ್ಯ ಕಳೆದು ವಾರ್ಧಕ್ಯದ ಚಿನ್ಹೆಗಳು ಮೂಡತೊಡಗಿದರೂ  ಮಕ್ಕಳ ಭಾಗ್ಯ ಮಾತ್ರ ದೊರಕಿರದ ಅಭಾಗ್ಯರು . ಇದರಿಂದ ಚಿಂತಿತರಾಗಿದ್ದ ದಂಪತಿಗಳ ಮನೆಗೆ ಒಮ್ಮೆ ಆಗಮಿಸಿದ್ದ ಗುರು ರೇವಣಸಿದ್ದರೊಡನೆ ಸುಗ್ಗಲಾದೇವಿಯ ಪ್ರಾಣ ಮಿತ್ರಳು ಮತ್ತು  ಆ ನಾಡಿನ ಅರಸಿಯೂ ಆಗಿದ್ದ ಚಾಮಲದೇವಿಯು ತನ್ನ ಗೆಳತಿಯ ಬಾಳು , ಮಕ್ಕಳಿಲ್ಲದ   ಬರಡು ಬಾಳಾಗಿರುವ ,ಅದರಿಂದ ನಿತ್ಯ ಚಿಂತಿತಳಾಗಿರುವ ಗೆಳತಿಯ ನೋವನ್ನು ಪರಿಹರಿಸುವಂತೆ ಬೇಡಿದಳು ,   ಆಗ ರೇವಣಸಿದ್ದರು , ಮನಸ್ಸಿನಲ್ಲಿ , ಇಂತಹ ಯಾತನೆಯನ್ನು ತುಂಬಿಕೊಂಡೂ , ಶಾಂತಳಾಗಿರುವ , ತನಗೆ ಇಂಥದು ಬೇಕು ಎಂದೂ ಸಹ ಬೇಡದ , ಸುಗ್ಗಲಾದೇವಿಯ ಮನಃಸ್ಥಿತಿಗೆ ಮೆಚ್ಚುತ್ತ ,  " ತಾಯೆ ಚಿಂತೆ ಬಿಡು , ನಿನ್ನ ಬಸಿರಿನಲ್ಲಿ ಕಾರಣಪುರುಷನೋರ್ವನು ಜನಿಸುವನು, ಅವನನ್ನು ’ ಸಿದ್ದರಾಮನೆಂಬ ಹೆಸರಿನಿಂದ ಕರೆಯಿರಿ , ಎಂದು ಆಶೀರ್ವದಿಸಿದರು .  ಬಹು ಕಾಲದಿಂದಲೂ ಮಕ್ಕಳಿಗಾಗಿ ಹಂಬಲಿಸಿ ತಮಗೆ ಆ ಪುಣ್ಯವೇ ಇಲ್ಲವೆಂದುಕೊಂಡಿದ್ದ ದಂಪತಿಗಳಿಗೆ , ಇಳಿವಯಸ್ಸಿನಲ್ಲಿ ಮುದ್ದಿನ  ಕಂದನೊಬ್ಬನು ಜನಿಸಿದನು . ಇದರಿಂದ ಮುದಗೊಂಡ ಮುದ್ದಯ್ಯ ತನ್ನ ಕುಲದೇವರಾದ ಧೂಳಿ ಮಾಂಕಾಳನ ಹೆಸರನ್ನೇ  ಶಿಶುವಿಗೆ ಇಟ್ಟನು . ಮಗು ಬೆಳೆಯತೊಡಗುತ್ತಿದ್ದಂತೆಯೇ ಧೂಳಿಮಾಂಕಾಳನೆಂದು ಕರೆದರೆ ಲಕ್ಷಿಸುತ್ತಲೇ ಇರಲಿಲ್ಲ , ಸಿದ್ದಾರಾಮನೆಂದು ಕರೆದರೆ ಮಾತ್ರ ಪ್ರತಿಕ್ರಿಯಿಸಿ ಲಕ್ಷ್ಯ ಕೊಡುತ್ತಿತ್ತು . ಹೀಗಾಗಿ ಆ ಮಗು ಸಿದ್ದರಾಮನೆಂದೇ ಕರೆಸಿಕೊಳ್ಳತೊಡಗಿತು .     
   ಬಾಲ್ಯದಲ್ಲಿ ಮೊದ್ದು ಕಂದನಂತಿದ್ದ , ಸದಾ ಅನ್ಯಮನಸ್ಕನಾಗಿರುತ್ತಿದ್ದ ಸಿದ್ದರಾಮನು , ಲೋಕದ ದೃಷ್ಟಿಯಲ್ಲಿ ಮೊದ್ದು ಬಾಲಕನೆಂಬ ತಾತ್ಸಾರಕ್ಕೇ ಒಳಗಾದನು . ಇಂತಹ ಬಾಲಕನಿಗೆ ಒಮ್ಮೆ  ಮಾಗಿದ ನವಣೆಯ ಹೊಲವನ್ನು ಕಾವಲು ಕಾಯುತ್ತಿದ್ದಾಗ , ಆಗಮಿಸಿದ  ಜಂಗಮನೋರ್ವನು ತನಗೆ ಹಸಿವಾಗಿದೆ ಎಂದನು . ಬಂದ ಜಂಗಮನನ್ನು ಕಂಡ ಮೊದ್ದು ಸಿದ್ದರಾಮನಿಗೆ  ಅವನು ವಿಶೇಷ ವ್ಯಕ್ತಿಯಂತೆ ಕಂಡು ಬಂದನು , ಅವನು ಜನ್ಮ ಜನ್ಮಾಂತರಗಳಲ್ಲಿಯೂ ತನ್ನ ಬಂಧುವೆಂಬ ಭಾವನೆ ಮನಸ್ಸಿನಲ್ಲಿ ಮೊಳೆತು , ತನ್ನಯ್ಯ , ತನ್ನೊಡೆಯ ಎಂಬ ಕಕ್ಕುಲತೆಯಿಂದ ಜಂಗಮನನ್ನು ಆದರಿಸಲು ಉದ್ಯುಕ್ತನಾದ ಬಾಲಕನು , ತಕ್ಷಣ ಹೊಲದ ನವಣೆಯನ್ನು ಬೆಳಸೆ ಮಾಡಿ ಬಂದ ಜಂಗಮನಿಗೆ ತಿನ್ನಲು ಕೊಟ್ಟನು ,  " ಇವನ್ನು ತಿನ್ನುತ್ತೇನೆ , ಆದರೆ ಅಷ್ಟಕ್ಕೆ ನನ್ನ ಹಸಿವು ತೀರದು , ಮನೆಗೆ ಹೋಗಿ ನವಣೆಯ ಓಗರವನ್ನು ಮಾಡಿಸಿ , ಮೊಸರು ಕಲೆಸಿ ತೆಗೆದುಕೊಂಡು ಬಾ ,, ಎಂದು  ಆಜ್ಞಾಪಿಸಿದರು . 
   " ಓ , ಈಗಲೇ ತರುತ್ತೇನೆ , ಆದರೆ ನಾನು ಬರುವವರೆಗೆ ನೀವು ಎಲ್ಲೂ ಹೋಗಕೂಡದು , ಎಂದು ಹೊರಡಲನುವಾಗಿ , ತಿರುಗಿ ಜಂಗಮನನ್ನು ನೋಡಿ , " ನಿಮ್ಮ ಹೆಸರೇನೆಂದಿರಿ ? ನೀವು ಎಲ್ಲಿಯವರು ? , ಎಂದು  ಪ್ರಶ್ನಿಸಿದನು . ಆಗ ನಗುತ್ತಾ ಜಂಗಮನು " ನನ್ನ ಹೆಸರು ಮಲ್ಲಯ್ಯ , ನಾನು ಶ್ರೀಶೈಲಪರ್ವತ ಪ್ರಾಂತ್ಯದ ನಿವಾಸಿ ,, ಎಂದು ಉತ್ತರ ನೀಡಿದನು .
   ಓಡುತ್ತಾ ಮನೆಗೆ ತಲುಪಿದ ಸಿದ್ದರಾಮನು,  ತಾಯಿಯ ಹತ್ತಿರ ಮೊಸರನ್ನವನ್ನು ಬೇಡಿದನು . ಸುಗ್ಗಲಾದೇವಿಗೆ ಐಶ್ವರ್ಯವೇ ಇಳಿದಂತಾಯಿತು . ಎಂದೂ ಇಂಥದು ಬೇಕು ಎಂದು ಕೇಳದ ಮಗ , ಹೀಗೆ  ಮುಂದೆ ನಿಂತು ಮೊಸರನ್ನವನ್ನು ಬೇಡಿದರೆ ! ತಾಯಿಯ ಹೃದಯ ಎಷ್ಟು  ಹಿಗ್ಗಬೇಡ . ಮರು ಮಾತಾಡದೆ  ಮಗನಿಗೆ , ಅವನು ಬೇಡಿದ ಬಿಸಿ ಓಗರವನ್ನು ಮಾಡಿ ಮೊಸರು ಬೆರೆಸಿ  ಹದವಾಗಿ ಕಲೆಸಿ , ಬುತ್ತಿಯ  ಕಲ್ಲಿಯಲ್ಲಿ  ಕಟ್ಟಿ ಕೊಟ್ಟಳು .
                                                                    
     ಉಜ್ಜಯಿನಿಯ ಗುಹೆಯಲ್ಲಿ ಕಾಳಿಚರಣನನ್ನು , ಸಂಕಲೆಯನ್ನು ಅನುಗ್ರಹಿಸಿದ ಅಲ್ಲಮನು , ತ್ರಿಯಂಬಕೇಶ್ವರಕ್ಕೆ ಬಂದನು . ಅಲ್ಲಿ ಗೋದಾವರಿ ನದಿ ಮೂಲದ ಬ್ರಹ್ಮಗಿರಿಯ ಗುಹೆಗಳಲ್ಲಿ ಅನೇಕ ತಪಸ್ವಿಗಳಿದ್ದರು , ಅವರ ಒಡನಾಟದಲ್ಲಿ , ಅಲ್ಲಿಯ ರಮಣೀಯತೆಗೆ ಮನಸೋತು ಕೆಲ ಕಾಲ ಅಲ್ಲಿ ನಿಂತನು . ಆದರೆ ಅವನಿಗೆ ಅರಿವಿತ್ತು ;  ತನ್ನ ಕಲ್ಯಾಣದ ವಾಸ್ತವ್ಯದ ದಿನಗಳು ಹತ್ತಿರವಾಗುತ್ತಿವೆಯೆಂದು . ಒಂದು ದಿನ   ಇಳಿ ಸಂಜೆಯ ಸಮಯದಲ್ಲಿ ಬ್ರಹ್ಮಗಿರಿಯ ತಪ್ಪಲಿನ ಬೃಹತ್ ಕಪ್ಪು ಶಿಲಾಖಂಡದ ಮೇಲೆ ಕುಳಿತ ಅಲ್ಲಮನಿಗೆ , ಮುಂದೆ ಹಾಸಿ ಹರಡಿ ನಿಂತ ದಟ್ಟ ಹಸಿರು ಕಾನನ ಪಂಕ್ತಿಯು ಕಣ್ಣು ಹರಿದತ್ತೆಲ್ಲಾ ಪಸರಿಸಿದ  ಮನೋಹರ ದೃಶ್ಯ  ಚಿತ್ತವನ್ನು ಸೆರೆ ಹಿಡಿದಿತ್ತು  . ಬಂಡೆಯ  ಬುಡದಲ್ಲಿ ಬೆಳೆದಿದ್ದ ಹುಲ್ಲಿನ ನಡುವೆ ಗೂಡು ಕಟ್ಟಿಕೊಂಡಿದ್ದ ಮೊಲಗಳು , ಆ ಸಂಜೆಯ ಸೊಬಗಿನಲ್ಲಿ ಗೂಡುಗಳಿಂದ ಹೊರ ಬಂದು ಚಿನ್ನಾಟದಲ್ಲಿ ತೊಡಗಿದ್ದವು . ಅದು ಅಲ್ಲಮನಿಗೆ ಹೊಸದೇನಾಗಿರಲಿಲ್ಲ , ನಿತ್ಯ ಸಂಜೆ ಅಲಿಗೆ ಬರುತ್ತಿದ್ದ ಅಲ್ಲಮನಿಗೆ ಮೊಲಗಳ ಆಟ ಮನಕ್ಕೆ ಮುದ ನೀಡುವ ಮೋಜಿನ ವಿಷಯವಾಗಿತ್ತು . ಇಂದೂ ಸಹ ಮೊಲಗಳು ಅವಿತುಕೊಳ್ಳುವುದು , ಅವಿತುಕೊಂಡವನ್ನು ಇತರ ಮೊಲಗಳು ಹುಡುಕಾಟ ನಡೆಸುವುದು , ಮರಿ ಮೊಲಗಳನ್ನು ತಾಯಿ ಮೊಲಗಳು ಎಚ್ಚರದಿಂದ ಆಟಕ್ಕೆ ಬಿಡುವುದು ಮುಂತಾದ ಆಟಗಳಲ್ಲಿ ತಲ್ಲೀನವಾಗಿದ್ದವು .  ಆ ಪುಟ್ಟ ಜೀವಿಗಳ ಭಾವ ಪ್ರಪಂಚದೊಡನೆ ಒಂದಾಗುತ್ತಾ , ಮುಗುಳ್ನಗುತ್ತಾ ಅಲ್ಲಮನು  ಕುಳಿತಿದ್ದನು . ಇಂತಹ ಮೋಜಿನ ಸಂತೆಯ ನಡುವೆ ನಡೆದ ಒಂದು ಘಟನೆ ಇಡೀ ಮೊಲಗಳ ಸಮುದಾಯ ಬೆಚ್ಚು ಬಡಿದು ಮಂಕು ಹಿಡಿದು ಕ್ಷಣಾರ್ಧದಲ್ಲಿ ಓಡಿ ಮರೆಯಾಗಿ ತಮ್ಮ ಬಿಲಗಳಲ್ಲಿ ಅವಿತುಕೊಳ್ಳುವಂತೆ ಮಾಡಿತು . ಅದೆಲ್ಲಿತ್ತೋ ಒಂದು ಘಟ ಸರ್ಪ,  ಮಿಂಚಿನಂತೆ ಎರಗಿ , ಮೊಲಗಳ ಗುಂಪೊಂದರ ಸಲಗ ಮೊಲವನ್ನು ಹಿಡಿಯಿತು . ಸರ್ಪದ ಬಾಯಿಗೆ ಸಿಕ್ಕ ಮೊಲ ವಿಲ ವಿಲನೆ ಒದ್ದಾಡುತ್ತಾ ಬಿಡಿಸಿಕೊಳ್ಳುವ ವ್ಯರ್ಥ ಪ್ರಯತ್ನದೊಡನೆ ಸೆಣಸುತ್ತಿತ್ತು . ರೋಷದಿಂದ ಸರ್ಪ ಹೆಡೆ  ಆಡಿಸುತ್ತಾ  ತನ್ನ ಕೆಂಗಣ್ಣಿನಿಂದ ಬಾಯಲ್ಲಿದ್ದ ಮೊಲವನ್ನು ದುರುಗುಟ್ಟಿ ನೋಡುತ್ತಾ ಅದನ್ನು ಸ್ಥಂಭೀಭೂತಗೊಳಿಸುತ್ತಿತ್ತು . 

    ಸರ್ಪದ ಈ ನಡೆ ಅಲ್ಲಮನನ್ನು ಚಕಿತಗೊಳಿಸಿತು , ಮೊಲಗಳು ಉತ್ಸಾಹದಿಂದ ತಮ್ಮ ಕ್ರಿಯೆಗಳಲ್ಲಿ ತೊಡಗಿದ್ದಾಗ ಅಲ್ಲಿ ಮೃತ್ಯು ಒಂದು ಅಡಗಿರುವುದರ ಸದ್ದೇ ಇರಲಿಲ್ಲ . ಅಷ್ಟು ಜಾಗರೂಕತೆಯಿಂದ ತನ್ನ ಇರವನ್ನು ತೋರಗೊಡದೆ , ಆ ಅಮಾಯಕ ಮೊಲಗಳ ನಾಯಕನನ್ನು ಗುರಿ ಹಿಡಿದು ಎರಗಿ ಕಬಳಿಸಿದ ಸರ್ಪ ಅಲ್ಲಮನ ವಿಚಾರಶಕ್ತಿಯನ್ನು ಜಾಗೃತಗೊಳಿಸಿತು . ಕಲ್ಯಾಣದಲ್ಲಿ ಬಸವಣ್ಣನವರು ಬೆಳ್ಳಗಿರುವುದೆಲ್ಲವೂ ಹಾಲೆಂದು ಬಗೆದಿದ್ದಾರೆ . ತಾವು ಮಾಡುತ್ತಿರುವ ಕಾರ್ಯಗಳಿಗೆ ಸಕಲರ ಬೆಂಬಲವನ್ನೂ ಆಶಿಸುತ್ತಿದ್ದಾರೆ . ಆ ಸರಳ ಮನಸ್ಸು ಅರಿಯದು ಸನಿಹವೇ ಮೈಮರೆತಂತೆ ನಟಿಸುತ್ತಾ ಮಲಗಿರುವ ಅನಾದಿ ಕಾಲದ ಘಟ ಸರ್ಪ , ತನ್ನ ಬಲಿಗಾಗಿ ಎಚ್ಚರದಿಂದ ಕಾಯುತ್ತ , ಅಮಾಯಕತೆ ನಟಿಸುತ್ತ , ನಿದ್ರೆಯ ನಟನೆಯಲ್ಲಿದೆ ಎಂಬುದನ್ನು .   ಅಲ್ಲಮನ ಒಳಗಣ್ಣಿನ ಮುಂದೆ ಸುಳಿದ ಈ ಭಯಂಕರ ದೌರ್ಭಾಗ್ಯದ ಒಳ ಸುಳಿಯ ಬಗ್ಗೆ ಚಿಂತಿತರಾಗಿದ್ದಾಗಲೇ  ,

 " ಏನು ಯೋಚಿಸುತ್ತಿರುವೆ ಅಲ್ಲಮ ?,, 

ಅಲ್ಲಮನು ತಲೆ ಎತ್ತಿ ನೋಡಿದನು ಗಳಿತ ಶರೀರದ , ಕೆನ್ನೆಯ ತೆರೆಗಳ , ಕವಡೆಯ ಸರಗಳ , ನೊಸಲ ಅಗಲ ಕುಂಕುಮದ , ಕೋಲೂರಿದ ಮುದುಕಿ ಬೊಚ್ಚು ಬಾಯಲ್ಲಿ ನಗುತ್ತಾ  ನಿಂತಿದ್ದಳು " ಓ , ನೀನೇ ,, ಎಂದು ಅಲ್ಲಮನು ಅನ್ಯ ಮನಸ್ಕನಾದನು .

 " ಈ ಸಮಯದಲ್ಲಿ ನಾನು  ಬಂದುದು ನಿನಗೆ ಹಿಡಿಸಲಿಲ್ಲವೇ ? ,,

 " ಬರುವುದೂ ಬಿಡುವುದು ನಿನ್ನ ಇಷ್ಟ , ಅದನ್ನು ಪ್ರಶ್ನಿಸಲು ನಾನಾರು ? , ಆದರೆ ಈಗೇಕೆ ಈ ಭೈರವಿಯ ವೇಷ ? ,,

 " ಭೈರವದ ಮುನ್ನುಡಿಗೆ ಭೈರವಿಯ ವೇಷ ,,

 ಆಗ ಅಲ್ಲಮನು , " ವೇಷ ಭೈರವವಾದರೂ ಅಷ್ಟೇ , ಕುಸುಮ ಮೋಹಿನಿಯಾದರೂ  ಅಷ್ಟೇ , ಪರಿಣಾಮಗಳಲ್ಲಿ ವ್ಯತ್ಯಾಸಗಳಿಲ್ಲ ,, 

ಅಂಡಜವೆಂಬ ತತ್ತಿಯೊಡೆದು ಪಿಂಡ ಪಲ್ಲಟವಾಗಿ

 ಗಂಡ ಗಂಡರನರಸಿ ತೊಳಲಿ ಬಳಲುತ್ತೈದಾರೆ

 ಖಂಡ ಮಂಡಲದೊಳಗೆ ಕಂಡೆನೊಂದು ಚೋದ್ಯವ .

ಕಂದನ ಕೈಯ ದರ್ಪಣವ ಪ್ರತಿಬಿಂಬ ನುಂಗಿತ್ತು

.ದಿವಾರಾತ್ರಿ ಉದಯದ ಬೆಳಗನು ಕತ್ತಲೆ ನುಂಗಿತ್ತು 

ಗುಹೇಶ್ವರನಲ್ಲಿಯೇ ನಿರ್ವಯಲಾಯಿತ್ತು 

ಈ ಮಾತುಗಳನ್ನು ಕೇಳಿದ ಭೈರವಿ ಕಂಪಿಸಿದಳು ,

" ಹಾಗಾದರೆ ಸರ್ವನಾಶವನ್ನು ತಡೆಗಟ್ಟಬಲ್ಲೆಯಾ ? ,,

 " ಅದು ನನ್ನ ಕೆಲಸವಲ್ಲ ,ನಾನು ಸ್ಥಿತಿ ಕರ್ತನಲ್ಲ , ಸಂಹಾರಕರ್ತನು ಮೊದಲೇ ಅಲ್ಲ   ,,

 " ಹಾಗಾದರೆ ಬರಿಯ ಮೂಕ ಪ್ರೇಕ್ಷಕನೇನು ? ,,

 ’ ಏಕೆ ಕೆಣಕುವೆ ಭೈರವಿಯ ವೇಷಧಾರಿ  ? , ಈ ಜಗತ್ತಿನ ಸೃಷ್ಟಿ ಸ್ಥಿತಿಗಳು ನನ್ನವಲ್ಲ , ಅದಕ್ಕೆ ಬೇರೆ ಶಕ್ತಿಗಳಿವೆ . ಆದರೆ ಸರ್ವನಾಶದ ಸಮಯದಲ್ಲಿ ಏನನ್ನು ಉಳಿಸಿಕೊಳ್ಳಬೇಕು , ಏನನ್ನು ಉಳಿಸಿಕೊಳ್ಳಬಹುದು,  ಎಂಬ  ಚಿಂತನೆಯಲ್ಲಿದ್ದೇನೆ ,,

 " ಏನನ್ನು ಉಳಿಸಿಕೊಳ್ಳಲು ಬಯಸುವೆ ?  ,,

" ಈ ನಿನ್ನ  ಈ ಪ್ರಶ್ನೆಗೆ ನಿನಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ ಎಂದುಕೊಂಡಿದ್ದೇನೆ ,,

 " ಏಕೆ , ಅಡ್ಡಿಯಾದೇನೆಂಬ ಭಯವೇ ? ,,

 " ನನ್ನ ಭಯದ ಅಗತ್ಯಗಳು ಕಳೆದು ಬಹಳ ದಿನಗಳಾದುವೆಂದು ನೀನು ಚನ್ನಾಗಿ ಬಲ್ಲೆ ,,

 " ಏಕೆ ಅಲ್ಲಮ ನನ್ನ ಕರ್ತವ್ಯಗಳನ್ನು ನಾನು ನಿರ್ವಹಿಸಬಾರದೆ ? ,,

" ನಿನ್ನ ಕರ್ತವ್ಯಗಳನ್ನು ನೀನು ನಿರ್ವಹಿಸಬಹುದು , ಆದರೆ ನನಗೂ ಇರುವ ಕರ್ತವ್ಯಗಳನ್ನು ನಾನೂ ನಿರ್ವಹಿಸಲೇಬೇಕು . ನಿನ್ನ ಕರ್ತವ್ಯಗಳಿಗೆ ನೀನು ಹೇಗೆ ಬಾಧ್ಯಳೋ ಹಾಗೆ ನಾನೂ ಸಹ , ಆ ಸತ್ಯವನ್ನು ಒಪ್ಪಿಕೊಳ್ಳಲು ನೀನೇ ಸಿದ್ದಳಿಲ್ಲ ,,

  " ಅಂದರೆ ನನ್ನ ನಿನ್ನ ಸಂಘರ್ಷಗಳಿಗೆ ಕೊನೆ ಇಲ್ಲ ,, 

ಸಶಬ್ದವಾಗಿ ನಗುತ್ತಾ ಕೈಯಲ್ಲಿದ್ದ ಕೋಲಿಗೆ ಕಟ್ಟಿದ್ದ ಗೆಜ್ಜೆಗಳ ಸದ್ದುಗೈಯುತ್ತಾ " ನೋಡೋಣ ಮುಂದಿನ ನಾಟಕದ ರಂಗಭೂಮಿ ಕಲ್ಯಾಣ , ಅಲ್ಲಿಯೇ ಸಂಧಿಸುತ್ತೇನೆ ,,  

ಎನ್ನುತ್ತಾ  ಮುದುಕಿ ಅಲ್ಲಿಂದ ಸರಿದಳು  . 

     ಅಲ್ಲಮನ ಮುಖದಲ್ಲಿ ಪರಿಹಾಸದ ನಗೆ ಮೂಡಿತು . ’ ಇದು ವರೆಗೆ ಕಲ್ಯಾಣಕ್ಕೆ ನಾನು ಕಳುಹಿಸಿದುದು , ಕಾರ್ಯಕರ್ತರು ಮತ್ತು ಅನುಯಾಯಿಗಳ ಪಡೆಯನ್ನು , ಆದರೆ ಈಗ ನಿಚ್ಚಳವಾಗುತ್ತಿದೆ , ಅಲ್ಲಿ ನಾಯಕತ್ವ ವಹಿಸುವವರು ಬೇಕು .  ಸದ್ಯದಲ್ಲೇ ಅಪಾಯವೇನೂ ಕಂಡು ಬರುತ್ತಿಲ್ಲ , ಆದರೆ ದೂರ ಭವಿಷ್ಯದಲ್ಲಿ ಅಡಗಿ ಕುಳಿತಿರುವ ಅಪಾಯದ ಕಾಲ ಸರ್ಪದ ಕರಿ ನೆರಳು ಇಣುಕಿ ಕಾಣುತ್ತಿದೆ . ಈಗ ಅಲ್ಲಿರುವ ಮಾಚಿದೇವರು , ಮೋಳಿಗೆ ಮಾರಯ್ಯಗಳು, ಅಂಬಿಗರ ಚೌಡಯ್ಯ ಇವರೆಲ್ಲ ಸಮಯ ಒದಗಿದರೆ ವೀರ ಯೋಧರಾಗಬಲ್ಲರು ; ಸೂತ್ರಧಾರಿಗಳಾಗಲಾರರು . ಬಾಲಕನಾದರೂ ಚನ್ನಬಸವಣ್ಣ ಸೂತ್ರ ಹಿಡಿಯ ಬಲ್ಲ ಸಮರ್ಥ .  ಆದರೆ ಇದು ಒಬ್ಬ ನಾಯಕನಿಂದ ಬಗೆ ಹರಿಯುವ ಸಮಸ್ಯೆಯಾಗಲಾರದು ಅನೇಕಮುಖಿ ನಾಯಕತ್ವ ಬೇಕು . ಅನೇಕ ದಿಕ್ಕಿನ ರಕ್ಷಣೆ ಬೇಕು ; ಭೌತಿಕವಾಗಿ ಮತ್ತು ಆಧ್ಯಾತ್ಮಿಕವಾಗಿಯೂ ಸಹ . ’ ಯಾರು  ಸಮರ್ಥರು ? ಎನ್ನುವ ಆಲೋಚನೆಯೊಂದಿಗೆ ಅಲ್ಲಮನು ಅಂದಿನ ಇರುಳನ್ನು ಕಳೆದನು .

      ಮರುದಿನ ಸಂಜೆಯ ವೇಳೆಗೆ ಪುನಃ ಅದೇ ಬಂಡೆಯಮೇಲಕ್ಕೆ ತೆರಳಿ ನಿಸರ್ಗ ನಿರೀಕ್ಷಣೆಯಲ್ಲಿ ಕುಳಿತ ಅಲ್ಲಮನ ಮನೋಪ್ರಪಂಚದಲ್ಲಿ ಧೀರ ಬಾಲಕನೊಬ್ಬನ ಸೂಕ್ಷ್ಮ ಚಿತ್ರ , ಮಸುಕು ಮಸುಕಾಗಿ ಮೂಡತೊಡಗಿತು . ಅಲ್ಲಮನ ಬಗೆಗಣ್ಣಿನ ಮುಂದೆ ಕಂಡುಬರುತ್ತಿದ್ದ , ಉನ್ನತ ಪರ್ವತಾವಳಿಯ  ಕೋಡುಗಲ್ಲ ಮೇಲೆ  ಕೈ ಚಾಚಿ ನಿಂತ ; ಮನದಲ್ಲಿ ಮೂಡಿದ ಸಾತ್ವಿಕ ಬಯಕೆಗಳನ್ನು ಈಡೇರಿಸಿಕೊಂಡೇ ತೀರುವೆನೆಂಬ ಛಲದ ಮುಖ ಮುದ್ರೆಯ ಈ ಬಾಲಕ ಯಾರು ? ’ ಓ ! ಇವನೇ , ನಮ್ಮವನು , ಚಿಂತೆಯಿಲ್ಲ ಇವನು !  ಎಂದುಕೊಂಡ ಅಲ್ಲಮನ ಮನಸ್ಸಿನಲ್ಲಿ ಬಾಲಕನ ಜೀವನ ಚಿತ್ರ ಸುಳಿದಾಡತೊಡಗಿತು . 

         ಸೊನ್ನಲಿಗೆಯ ಕುಡು ಒಕ್ಕಲಿಗರ ನಾಯಕ ಮೋರ್ಡಿ ಮುದ್ದಯ್ಯ  ಸುಗ್ಗಲಾದೇವಿಯವರ ಪ್ರೇಮದ ಕುವರ ಇವನು , ಮುದ್ದಯ್ಯ ಸುಗ್ಗಲಾದೇವಿ ದಂಪತಿಗಳಿಗೆ ತಾರುಣ್ಯ ಕಳೆದು ವಾರ್ಧಕ್ಯದ ಚಿನ್ಹೆಗಳು ಮೂಡತೊಡಗಿದರೂ  ಮಕ್ಕಳ ಭಾಗ್ಯ ಮಾತ್ರ ದೊರಕಿರದ ಅಭಾಗ್ಯರು . ಇದರಿಂದ ಚಿಂತಿತರಾಗಿದ್ದ ದಂಪತಿಗಳ ಮನೆಗೆ ಒಮ್ಮೆ ಆಗಮಿಸಿದ್ದ ಗುರು ರೇವಣಸಿದ್ದರೊಡನೆ ಸುಗ್ಗಲಾದೇವಿಯ ಪ್ರಾಣ ಮಿತ್ರಳು ಮತ್ತು  ಆ ನಾಡಿನ ಅರಸಿಯೂ ಆಗಿದ್ದ ಚಾಮಲದೇವಿಯು ತನ್ನ ಗೆಳತಿಯ ಬಾಳು , ಮಕ್ಕಳಿಲ್ಲದ   ಬರಡು ಬಾಳಾಗಿರುವ ,ಅದರಿಂದ ನಿತ್ಯ ಚಿಂತಿತಳಾಗಿರುವ ಗೆಳತಿಯ ನೋವನ್ನು ಪರಿಹರಿಸುವಂತೆ ಬೇಡಿದಳು ,   ಆಗ ರೇವಣಸಿದ್ದರು , ಮನಸ್ಸಿನಲ್ಲಿ , ಇಂತಹ ಯಾತನೆಯನ್ನು ತುಂಬಿಕೊಂಡೂ , ಶಾಂತಳಾಗಿರುವ , ತನಗೆ ಇಂಥದು ಬೇಕು ಎಂದೂ ಸಹ ಬೇಡದ , ಸುಗ್ಗಲಾದೇವಿಯ ಮನಃಸ್ಥಿತಿಗೆ ಮೆಚ್ಚುತ್ತ ,  " ತಾಯೆ ಚಿಂತೆ ಬಿಡು , ನಿನ್ನ ಬಸಿರಿನಲ್ಲಿ ಕಾರಣಪುರುಷನೋರ್ವನು ಜನಿಸುವನು, ಅವನನ್ನು ’ ಸಿದ್ದರಾಮನೆಂಬ ಹೆಸರಿನಿಂದ ಕರೆಯಿರಿ , ಎಂದು ಆಶೀರ್ವದಿಸಿದರು .  ಬಹು ಕಾಲದಿಂದಲೂ ಮಕ್ಕಳಿಗಾಗಿ ಹಂಬಲಿಸಿ ತಮಗೆ ಆ ಪುಣ್ಯವೇ ಇಲ್ಲವೆಂದುಕೊಂಡಿದ್ದ ದಂಪತಿಗಳಿಗೆ , ಇಳಿವಯಸ್ಸಿನಲ್ಲಿ ಮುದ್ದಿನ  ಕಂದನೊಬ್ಬನು ಜನಿಸಿದನು . ಇದರಿಂದ ಮುದಗೊಂಡ ಮುದ್ದಯ್ಯ ತನ್ನ ಕುಲದೇವರಾದ ಧೂಳಿ ಮಾಂಕಾಳನ ಹೆಸರನ್ನೇ  ಶಿಶುವಿಗೆ ಇಟ್ಟನು . ಮಗು ಬೆಳೆಯತೊಡಗುತ್ತಿದ್ದಂತೆಯೇ ಧೂಳಿಮಾಂಕಾಳನೆಂದು ಕರೆದರೆ ಲಕ್ಷಿಸುತ್ತಲೇ ಇರಲಿಲ್ಲ , ಸಿದ್ದಾರಾಮನೆಂದು ಕರೆದರೆ ಮಾತ್ರ ಪ್ರತಿಕ್ರಿಯಿಸಿ ಲಕ್ಷ್ಯ ಕೊಡುತ್ತಿತ್ತು . ಹೀಗಾಗಿ ಆ ಮಗು ಸಿದ್ದರಾಮನೆಂದೇ ಕರೆಸಿಕೊಳ್ಳತೊಡಗಿತು .     

ಬಾಲ್ಯದಲ್ಲಿ ಮೊದ್ದು ಕಂದನಂತಿದ್ದ , ಸದಾ ಅನ್ಯಮನಸ್ಕನಾಗಿರುತ್ತಿದ್ದ ಸಿದ್ದರಾಮನು , ಲೋಕದ ದೃಷ್ಟಿಯಲ್ಲಿ ಮೊದ್ದು ಬಾಲಕನೆಂಬ ತಾತ್ಸಾರಕ್ಕೇ ಒಳಗಾದನು . ಇಂತಹ ಬಾಲಕನಿಗೆ ಒಮ್ಮೆ  ಮಾಗಿದ ನವಣೆಯ ಹೊಲವನ್ನು ಕಾವಲು ಕಾಯುತ್ತಿದ್ದಾಗ , ಆಗಮಿಸಿದ  ಜಂಗಮನೋರ್ವನು ತನಗೆ ಹಸಿವಾಗಿದೆ ಎಂದನು . ಬಂದ ಜಂಗಮನನ್ನು ಕಂಡ ಮೊದ್ದು ಸಿದ್ದರಾಮನಿಗೆ  ಅವನು ವಿಶೇಷ ವ್ಯಕ್ತಿಯಂತೆ ಕಂಡು ಬಂದನು , ಅವನು ಜನ್ಮ ಜನ್ಮಾಂತರಗಳಲ್ಲಿಯೂ ತನ್ನ ಬಂಧುವೆಂಬ ಭಾವನೆ ಮನಸ್ಸಿನಲ್ಲಿ ಮೊಳೆತು , ತನ್ನಯ್ಯ , ತನ್ನೊಡೆಯ ಎಂಬ ಕಕ್ಕುಲತೆಯಿಂದ ಜಂಗಮನನ್ನು ಆದರಿಸಲು ಉದ್ಯುಕ್ತನಾದ ಬಾಲಕನು , ತಕ್ಷಣ ಹೊಲದ ನವಣೆಯನ್ನು ಬೆಳಸೆ ಮಾಡಿ ಬಂದ ಜಂಗಮನಿಗೆ ತಿನ್ನಲು ಕೊಟ್ಟನು ,

 " ಇವನ್ನು ತಿನ್ನುತ್ತೇನೆ , ಆದರೆ ಅಷ್ಟಕ್ಕೆ ನನ್ನ ಹಸಿವು ತೀರದು , ಮನೆಗೆ ಹೋಗಿ ನವಣೆಯ ಓಗರವನ್ನು ಮಾಡಿಸಿ , ಮೊಸರು ಕಲೆಸಿ ತೆಗೆದುಕೊಂಡು ಬಾ ,, ಎಂದು  ಆಜ್ಞಾಪಿಸಿದರು . 

  " ಓ , ಈಗಲೇ ತರುತ್ತೇನೆ , ಆದರೆ ನಾನು ಬರುವವರೆಗೆ ನೀವು ಎಲ್ಲೂ ಹೋಗಕೂಡದು , ಎಂದು ಹೊರಡಲನುವಾಗಿ , ತಿರುಗಿ ಜಂಗಮನನ್ನು ನೋಡಿ ,

" ನಿಮ್ಮ ಹೆಸರೇನೆಂದಿರಿ ? ನೀವು ಎಲ್ಲಿಯವರು ? , ಎಂದು  ಪ್ರಶ್ನಿಸಿದನು . ಆಗ ನಗುತ್ತಾ ಜಂಗಮನು

" ನನ್ನ ಹೆಸರು ಮಲ್ಲಯ್ಯ , ನಾನು ಶ್ರೀಶೈಲಪರ್ವತ ಪ್ರಾಂತ್ಯದ ನಿವಾಸಿ ,, ಎಂದು ಉತ್ತರ ನೀಡಿದನು .

       ಓಡುತ್ತಾ ಮನೆಗೆ ತಲುಪಿದ ಸಿದ್ದರಾಮನು,  ತಾಯಿಯ ಹತ್ತಿರ ಮೊಸರನ್ನವನ್ನು ಬೇಡಿದನು . ಸುಗ್ಗಲಾದೇವಿಗೆ ಐಶ್ವರ್ಯವೇ ಇಳಿದಂತಾಯಿತು . ಎಂದೂ ಇಂಥದು ಬೇಕು ಎಂದು ಕೇಳದ ಮಗ , ಹೀಗೆ  ಮುಂದೆ ನಿಂತು ಮೊಸರನ್ನವನ್ನು ಬೇಡಿದರೆ , ತಾಯಿಯ ಹೃದಯ ಎಷ್ಟು  ಹಿಗ್ಗಬೇಡ ! . ಮರು ಮಾತಾಡದೆ  ಮಗನಿಗೆ , ಅವನು ಬೇಡಿದ ಬಿಸಿ ಓಗರವನ್ನು ಮಾಡಿ ಮೊಸರು ಬೆರೆಸಿ  ಹದವಾಗಿ ಕಲೆಸಿ , ಬುತ್ತಿಯ  ಕಲ್ಲಿಯಲ್ಲಿ  ಕಟ್ಟಿ ಕೊಟ್ಟಳು .                                                                    

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kavinagaraj's picture

ಚೆನ್ನಾಗಿದೆ. ಮುಂದುವರೆಸಿರಿ.

csomsekraiah's picture

ಪ್ರತಿಕ್ರಿಯೆಗೆ ಧನ್ಯವಾದಗಳು ಆತ್ಮೀಯ ಕವಿನಾಗರಾಜ್ ಅವರೆ