ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!

January 9, 2007 - 7:10am — Shyam Kishore

ಒಮ್ಮೆ ಗೌತಮ ಬುದ್ಧನ ಬಳಿಗೆ ಅವನನ್ನು ತೀವ್ರವಾಗಿ ದ್ವೇಷಿಸುವ ವ್ಯಕ್ತಿಯೊಬ್ಬ ಬಂದನಂತೆ. ಬುದ್ಧನ ಸುತ್ತ ಅನೇಕ ಶಿಷ್ಯಂದಿರು ನೆರೆದಿದ್ದ ಸಮಯ. ಬಂದಾತ ಬುದ್ಧನೊಡನೆ ಚರ್ಚೆಗಿಳಿಯಲು ಬಯಸಿದ. ಬುದ್ಧ ಆತನ ಕೋರಿಕೆಯನ್ನು ಸಂತೋಷದಿಂದ ಸಮ್ಮತಿಸಿದ. ಪ್ರಾರಂಭದಲ್ಲಿ ನೇರವಾಗಿಯೇ ಸಾಗಿದ ಚರ್ಚೆ ಕ್ರಮೇಣ ಅಡ್ಡದಾರಿ ಹಿಡಿಯಿತಂತೆ. ಚರ್ಚೆಗಿಳಿದ ವ್ಯಕ್ತಿ ಬುದ್ಧನ ಬಗೆಗಿನ ವೈಯಕ್ತಿಕ ದ್ವೇಷವನ್ನು ತನ್ನ ಮಾತುಗಳಲ್ಲಿ ವ್ಯಕ್ತಪಡಿಸಲು ಆರಂಭಿಸಿದ. ಸುಳ್ಳು ಆರೋಪಗಳನ್ನು ಹೊರಿಸಿ ಬುದ್ಧನನ್ನು ನಿಂದಿಸಿದ. ಬುದ್ಧ ಮಾತ್ರ ಸ್ವಲ್ಪವೂ ಬೇಸರಗೊಳ್ಳದೇ ಶಾಂತನಾಗಿಯೇ ಕುಳಿತಿದ್ದ. ಅ ವ್ಯಕ್ತಿ ಕೊನೆಗೆ ಅವಾಚ್ಯ ಶಬ್ದಗಳಿಂದ ಬುದ್ಧನನ್ನು ನಿಂದಿಸಲು ಪ್ರಾರಂಭಿಸಿದ. ಇದನ್ನು ಸಹಿಸಲಾರದ ಬುದ್ಧನ ಶಿಷ್ಯಂದಿರು ಆತನನ್ನು ಬಲವಂತದಿಂದ ಹೊರದಬ್ಬಲು ಪ್ರಯತ್ನಿಸಿದಾಗ, ಬುದ್ಧ ನಸುನಗುತ್ತಲೇ ಅವರನ್ನು ತಡೆದ.

ಸುಮಾರು ಸಮಯ ಬುದ್ಧನನ್ನು ನಿಂದಿಸಿದ ಆ ವ್ಯಕ್ತಿ ಕೊನೆಗೆ ತಾನಾಗಿಯೇ ಹೊರಟು ಹೋದನಂತೆ. ಬುದ್ಧ ಏನೂ ನಡೆದೇ ಇಲ್ಲವೆಂಬಂತೆ ನಗುತ್ತಾ ಕುಳಿತಿದ್ದ. ಆದರೆ ಈ ಘಟನೆಯಿಂದ ಬಹಳವಾಗಿ ನೊಂದ ಆನಂದನೆಂಬ ಆಪ್ತ ಶಿಷ್ಯ ಬುದ್ಧನನ್ನು ಕೇಳಿಯೇಬಿಟ್ಟ - "ಆತ ಸುಳ್ಳು ಆರೋಪಗಳನ್ನು ನಿಮ್ಮ ಮೇಲೆ ಹೊರಿಸಿ, ಅವಾಚ್ಯ ಶಬ್ದಗಳಿಂದ ನಿಮ್ಮನ್ನು ಅವಮಾನಿಸಿದರೂ ನೀವು ಸುಮ್ಮನೇ ಇದ್ದೀರಲ್ಲ, ಇದು ಸರಿಯೇ? ಆತನಿಗೆ ಸರಿಯಾಗಿ ಪ್ರತ್ಯುತ್ತರ ಕೊಡಬಾರದಿತ್ತೇ?".

ನಸುನಕ್ಕ ಬುದ್ಧ ಅಲ್ಲಿಯೇ ಇದ್ದ ಕಲ್ಲೊಂದನ್ನು ಕೊಡುವಂತೆ ಆನಂದನನ್ನು ಕೋರಿದ. ಆನಂದ ಆ ಕಲ್ಲನ್ನೆತ್ತಿ ಕೊಡಲು ಹೋದಾಗ ಬುದ್ಧ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದ. "ಇದೇನು?" ಎಂಬಂತೆ ಆನಂದ ಯೋಚಿಸುತ್ತಾ ನಿಂತಾಗ ಬುದ್ಧ ಕೇಳಿದ - "ನೀನು ಕಲ್ಲೊಂದನ್ನು ನನಗೆ ಕೊಡಲೆಂದು ತಂದೆ. ಆದರೆ ನಾನದನ್ನು ತೆಗೆದುಕೊಳ್ಳಲಿಲ್ಲ. ಈಗ ಆ ಕಲ್ಲು ಯಾರ ಬಳಿಯಲ್ಲಿದೆ?". "ನನ್ನ ಹತ್ತಿರ" ಹೇಳಿದ ಆನಂದ. "ನೀನು ಕೊಡಲು ಬಂದ ಮಾತ್ರಕ್ಕೆ ಆ ವಸ್ತು ನನ್ನ ಬಳಿಸೇರಿತು ಎಂದು ಹೇಳಲಾಗುವುದಿಲ್ಲ! ನೀನು ಕೊಟ್ಟದ್ದನ್ನು ನಾನು ನಿರಾಕರಿಸಿದರೆ ಆ ವಸ್ತು ನಿನ್ನ ಬಳಿಯೇ ಉಳಿಯುತ್ತದೆ. ಹಾಗೆಯೇ ಆ ವ್ಯಕ್ತಿ ಕೊಡಲು ಬಂದ ಬಯ್ಗುಳಗಳನ್ನೂ ನಾನು ಸ್ವೀಕರಿಸಲಿಲ್ಲ. ಹಾಗಾಗಿ ಅವು ಆತನ ಬಳಿಯೇ ಉಳಿದಿವೆ! ಅದಕ್ಕೆ ಬದಲಾಗಿ ನಾನೂ ಪ್ರತಿಕ್ರಿಯಿಸಲು ಆರಂಭಿಸಿದ್ದಲ್ಲಿ ಆ ಬಯ್ಗುಳಗಳು ನನ್ನ ಮನಸ್ಸಿನಾಳಕ್ಕಿಳಿದು ನನ್ನ ಶಾಂತಿಯನ್ನೂ ಕದಡುತಿತ್ತೇ ವಿನಃ ಆತನಿಗೆ ಬುದ್ಧಿವಾದ ಹೇಳಿದಂತೆ ಆಗುತ್ತಿರಲಿಲ್ಲ. ಆತ ನನ್ನ ಶಾಂತಿಗೆ ಭಂಗವನ್ನುಂಟು ಮಾಡಲು ಪ್ರಯತ್ನಿಸಿದ. ಆದರೆ ನಾನದನ್ನು ನಿರಾಕರಿಸಿದೆ!" ಎಂದ ಬುದ್ಧ. "ನಮ್ಮ ಮನಸ್ಸಿನ ಶಾಂತಿ ನಮ್ಮನ್ನು ಅವಲಂಬಿಸಿರಬೇಕೇ ಹೊರತು ಹೊರಗಿನ ಪ್ರಚೋದನೆಯನ್ನಲ್ಲ" ಎಂದು ಬೋಧಿಸಿದ ಬುದ್ಧ.

  • ಸಣ್ಣ ಕಥೆ
~.~
  • Login or register to post comments
  • 525 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ದೇಹ, ಮನಸ್ಸು ಮತ್ತು ಇಂದ್ರಿಯಗಳು ತಂತಿವಾದ್ಯವಿದ್ದಂತೆ
  • ಝೆನ ಕಥೆ ೩೬: ಛತ್ರ
  • ನಗುವ ಬುದ್ಧ
  • ಮುಕ್ತಾಯ
  • ನೀಳ್ಗತೆ
Syndicate content

ಲೇಖಕರು

Shyam Kishore's picture

ಪರಿಚಯ

ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
  • ಕತೆಗಾರ್ತಿ ದೊಡ್ಡಮ್ಮ
  • ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಗೂಗಲ್ ಅಂತರ್ಜಾಲತಾಣ:ಅತಿ ಅಪಾಯಕಾರಿ!
  • ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
  • ಟೆನಿಸ್ ಲೋಕದ ರಾಜನಿಗೆ ಕಿರೀಟದಾರಣೆ

ಇತ್ತೀಚಿನ ಪ್ರತಿಕ್ರಿಯೆಗಳು

  • Jayalaxmi.Patil
    ಉ: ಹನಿಗವನಗಳು
    July 9, 2008 - 3:28pm
  • Jayalaxmi.Patil
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 3:22pm
  • Jayalaxmi.Patil
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 3:00pm
  • savithasr
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 2:56pm
  • srinivasps
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 2:35pm
  • Chamaraj
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 1:37pm
  • savithasr
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 12:56pm
  • savithru
    ಉ: ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
    July 9, 2008 - 12:37pm
  • shashikannada
    ಉ: ಮಾಧ್ಯಮದ ಜವಾಬ್ದಾರಿ ಹಾಗೂ ಎರಡು ಆಯಾಮಗಳು
    July 9, 2008 - 12:28pm
  • shashikannada
    ಉ: ನೆನೆವುದೆನ್ನ ಮನ ಕರ್ನಾಟಕ ದೇಶವಮ್
    July 9, 2008 - 12:18pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 47 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator