೧೯೮೪ರಲ್ಲಿ ಕಾಲೇಜಿನ ಮ್ಯಾಗಜೀನಿಗೆ ಬರೆದ ಕವನ... ಚಿಕ್ಕಮ್ಮನ ಪ್ರಶ್ನೆಗಳಿಗೆ, ಆಕೆಯ ತೊಡೆಯ ಮೇಲೆ ಕುಳಿತ ಪುಟ್ಟನ ಉತ್ತರವೇನು? ಮತ್ತೊಮ್ಮೆ ನೆನಪಿಸಿಕೊಂಡು ನಿಮ್ಮ ಮುಂದೆ ಇಟ್ಟಿರುವೆ.
"ನೀನಾಗುವೆಯೇನು ಪುಟ್ಟ ದೊಡ್ದೋನಾದ್ಮೇಲೆ...? ಡಾಕ್ಟ್ರೋ,ಇಂಜಿನಿಯರ್ರೋ, ಗವಾಸ್ಕರ್ರೋ, ಬೋರಿಸ್ ಬೆಕರ್ರೋ.. ರಾಜ್ ಕುಮಾರ್ರೋ, ರಾಜ್ ಕಪೂರ್ರೋ.. ಕೇಳಿದಳು ಚಿಕ್ಕಮ್ಮ ಲೊಚಲೊಚನೆ ಮುದ್ದಿಟ್ಟು.
ಕಣ್ಣರಳಿಸಿ,ತಲೆಯಲುಗಿಸಿ ಪುಟ್ಟ ಬಾಯ್ಬಿಟ್ಟ "ಹೋಗು ಚಿಕ್ಕಮ್ಮ... ನಾನಾಗೋಲ್ಲ ..ದೊಡ್ದವ...!!"









ಪ್ರತಿಕ್ರಿಯೆಗಳು
ಉ: ದೊಡ್ದೋನಾದ್ಮೇಲೆ....!
ಲೊಚಲೊಚನೆ ಮುದ್ದಿಡುವ ಚಿಕ್ಕಮ್ಮನ ಮುತ್ತುಗಳು ಸಿಗಲಾರವೇನೋ ತಾನು ದೊಡ್ಡೋನಾದ್ಮೇಲೆ ಎಂಬ ಅನುಮಾನ ಆಗಲೇ ಆ ಪುಟ್ಟನ ಮನದಲ್ಲಿ...?!
:)
ಉ: ದೊಡ್ದೋನಾದ್ಮೇಲೆ....!
ದೊಡ್ಡವರಿಗೆ ಸಿಗುವ ಮುತ್ತುಗಳು ಚಿಕ್ಕಮ್ಮನದಾಗಿರಲಿಕ್ಕಿಲ್ಲ.. ಆಂಟಿಯದಾಗಿರಬಹುದೇನೋ..! (ಸುಮ್ನೆ...ತಮಾಷೆಗೆ ಸಾರ್)
ಉ: ದೊಡ್ದೋನಾದ್ಮೇಲೆ....!
ಹೌದು ಚಿಕ್ಕವನಾಗೇ ಇರಬೇಕು
ಉ: ದೊಡ್ದೋನಾದ್ಮೇಲೆ....!
"Small is beautiful"...! ಅಲ್ವಾ ಸಾರ್? ಧನ್ಯವಾದಗಳು..!
ಉ: ದೊಡ್ದೋನಾದ್ಮೇಲೆ....!
nija, makkalage iddare yeshtu chennagittu. Ee yaantrika jevanada janjatadalli nammannu naave maretideve.
Danyavadagalu Basavaraj avare adannu nenpisi kottiddakke.
Mahipati
ಉ: ದೊಡ್ದೋನಾದ್ಮೇಲೆ....!
ಧನ್ಯವಾದಗಳು ಮಹಿಪತಿ ಕುಲಕರ್ಣಿಯವರೆ ನಿಮ್ಮ ಅನಿಸಿಕೆಗಾಗಿ....!
ಉ: ದೊಡ್ದೋನಾದ್ಮೇಲೆ....!
ಸಂಪದಕ್ಕೆ ಸುಸ್ವಾಗತ. ಇಲ್ಲಿ ಕನ್ನಡ ಭಾಷೆಯಲ್ಲಿ ಕನ್ನಡ ಲಿಪಿಯಲ್ಲಿ ಬರೆಯಬೇಕೆಂಬ ನಿಯಮವಿದೆ. ಕನ್ನಡದಲ್ಲಿ ಬರೆಯಲು ಬರಹ ಗೂಗಲ್ ಟ್ರಾನ್ಸ್‌ಲಿಟರೇಷನ್ ನುಡಿ ಮುಂತಾದ ತಂತ್ರಾಂಶಗಳನ್ನು ಉಪಯೋಗಿಸಬಹುದು.
ಧನ್ಯವಾದಗಳು,
-ಪ್ರ
ಉ: ದೊಡ್ದೋನಾದ್ಮೇಲೆ....!
ಪ್ರಸನ್ನ ನಿಮ್ಮ ಫೋಟೋಗೇನಾಗಿದೆ...!!!?
ಉ: ದೊಡ್ದೋನಾದ್ಮೇಲೆ....!
ಸುಮ್ಮನೆ! ಫೋಟೋ ಉಲ್ಟಾ ಇದ್ದರೆ ತಮಾಷೆಯಾಗಿರುತ್ತದೆ ಎಂದು ಹಾಗೆ ಹಾಕಿದೆ. :-)
ಉ: ದೊಡ್ದೋನಾದ್ಮೇಲೆ....!
ಗಾಹಾ..? ರಿಸ.. ರಿಸ.. ಲ್ಟಾಉ ರೆದ್ದಇ ನೇಷೆಮಾತ...!
ಉ: ದೊಡ್ದೋನಾದ್ಮೇಲೆ....!
ಕನ್ನಡದಲ್ಲಿ ಬರೆಯಲು ಕ್ವಿಲ್‌ಪ್ಯಾಡ್(quillpad) ಹೆಸರಿನ ತಂತ್ರಾಂಶವೂ ಇದೆ. ಉಪಯೋಗಿಸಲು ತುಂಬಾ ಸುಲಭ! ಡೌನ್‌ಲೋಡ್ ಮಾಡುವ ಅಗತ್ಯ ಕೂಡ ಇಲ್ಲ!
ಇ-ವಿಳಾಸ:http://www.quillpad.in/
ನಿಮ್ಮವ,
ಸಂದೀಪ್
ಉ: ದೊಡ್ದೋನಾದ್ಮೇಲೆ....!
ಹಳೆಯ ಬರಹ ಆದರೆ ನಾ ಓದಿದು ಈಗ...
ಶೀರ್ಷಿಕೆಯೇ ನನ್ ಗಮನ ಸೆಳೆಯಿತು ..
ಬಾಲ್ಯವೇ ಮೋಜು,
ಹಾಗೆಯೇ ಚಿಕ್ಕ ಮಕ್ಕಳ ಮಾತುಗಳು ಕಪಟತನವಿಲ್ಲದ್ದು ,
ನೇರಾನೆರಾ ,
ಇಲ್ಲೂ ಅಸ್ಟೇ ಆ ಹುಡುಗನ ಪ್ರತಿಯುತ್ತರ ...
ಪ್ರತಿಕ್ರಿಯೆಗಳೂ ಮುದ ನೀಡಿದವು ...