ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ

January 10, 2007 - 10:25am — Sunil Jayaprakash

ಇಂದು, ಪ್ರಸಕ್ತ ರಣಜಿ ಋತುವಿನ ಕೊನೆಯ ಲೀಗ್ ಪಂದ್ಯ ಪ್ರಾರಂಭವಾಗಿದೆ. ಕರ್ನಾಟಕ ತಂಡವು ತನ್ನ ಕೊನೆಯ ಲೀಗ್ ಪಂದ್ಯವನ್ನು ಸೌರಾಷ್ಟ್ರದ ವಿರುದ್ಧ ರಾಜ್ಕೋಟ್ ನಲ್ಲಿ ಸೆಣೆಸುತ್ತಿದೆ.

ಅಂದ ಹಾಗೆ, ಇತ್ತೀಚಿನ ಸ್ಕೋರ್ ಬಂದಾಗ, ಕರ್ನಾಟಕವು ಟಾಸ್ ಗೆದ್ದು, ಬಾಟಿಂಗ್ ಆಯ್ದುಕೊಂಡಿದೆ ಎಂಬುದು ತಿಳಿಯಿತು. ಈಗಾಗಲೇ ಬ್ಯಾರಿಂಗ್ಟನ್ ರೋಲ್ಯಾಂಡ್ ಔಟಾಗಿದ್ದಾರೆ.

ಪ್ರಮುಖ ಅಂಶವೇನೆಂದರೆ ಈ ಪಂದ್ಯದಲ್ಲಿ, ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್, ಕರ್ನಾಟಕದ ಯರ್ರೇ ಗೌಡ ನಾಯಕತ್ವದಡಿ ಆಡುತ್ತಿದ್ದಾರೆ. ದ್ರಾವಿಡ್ ಆಡುತ್ತಿದ್ದಾನೆ ಎಂಬ ಒಂದೇ ಕಾರಣಕ್ಕೆ ಈ ಪಂದ್ಯಕ್ಕೆ ಹೆಚ್ಚು ಮಹತ್ವ ಕೊಡುವುದು ಬೇಡ. ಕರ್ನಾಟಕವು ಈ ಬಾರಿ ಹುಮ್ಮಸ್ಸು ಹುರುಪುನಿಂದ ಮುನ್ನಡೆಯಲಿ ಎಂಬ ಆಶಯಕ್ಕೆ ಹೆಚ್ಚು ಒತ್ತು ನೀಡೋಣ.

ಈ ಋತುವಿನಲ್ಲಿ ಅತ್ಯಂತ ಹೆಚ್ಚು ರನ್ನು ಪೇರಿಸಿರುವ ರಾಬಿನ್ ಉತ್ತಪ್ಪ ಮ್ತತು ಸಿ.ರಘು ಸದ್ಯಕ್ಕೆ ಕ್ರೀಸಿನಲ್ಲಿದ್ದಾರೆ.

  • ಪ್ರಚಲಿತ
~.~
  • Login or register to post comments
  • 549 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 10, 2007 - 1:07pm — Sunil Jayaprakash

ಕಸೌರಪ - ಮೊದಲ ದಿನದ ಊಟದ ಸಮಯ ವೇಳಗೆ

Sunil Jayaprakash's picture

ಕಮಸೌರಪ - ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ. Eye-wink

ಸ್ಕೋರ್
೩೧.೦ ಓವರುಗಳಲ್ಲಿ ೧೪೨/೧

ಮೊದಲ ಅವಧಿಯ ಪೂರ್ಣ ಅಂಕಗಳು ಕರ್ನಾಟಕದವರಿಗೆ ಸೇರುತ್ತದೆ. ದಿನದ ಎರಡನೆಯ ಓವರಿನಲ್ಲಿಯೇ ಒಂದು ವಿಕೇಟನ್ನು ಕಳೆದುಕೊಂಡು ಆತಂಕದಲ್ಲಿದ್ದ ತಂಡಕ್ಕೆ, ರಾಬಿನ್ ಉತ್ತಪ್ಪ (* ೮೬) ಮತ್ತು ಸಿ.ರಘು (* ೫೦) ಮುರಿಯದ ೨ನೆ ವಿಕೇಟಿಗೆ ೧೩೬ರನ್ನುಗಳನ್ನು ಕಲೆಹಾಕಿ ಒಳ್ಳೆಯ ಸ್ಥಿತಿಯತ್ತ ಕೊಂಡೊಯ್ಯುತ್ತಿದ್ದಾರೆ.

ಮುಂದಿನ ಎರಡು ಅವಧಿಗಳಲ್ಲಿಯೂ ಹೀಗೆಯೇ ಆಡುವರೆ ಕಾದು ನೋಡಬೇಕು. ಮತ್ತೊಮ್ಮೆ ನಮ್ಮವರಿಗೆ ದೃಷ್ಟಿಯಾಗದಿರಲಿ(ಇದನ್ನು ಎಲ್ಲಾ ಅಪ್ಡೇಟುಗಳಲ್ಲಿಯೂ ಹಾಕಲೇಬೇಕು) ಎಂದು ಹೇಳುತ್ತಾ ಶುಭ ಹಾರೈಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 10, 2007 - 5:37pm — Sunil Jayaprakash

ಬೃಹತ್ ಮೊತ್ತದತ್ತ ಕರ್ನಾಟಕ

Sunil Jayaprakash's picture

ಬೃಹತ್ ಮೊತ್ತದತ್ತ ಕರ್ನಾಟಕ - ಬಹುಶಃ ಇದು ನಾಳಿನ ಪತ್ರಿಕೆಗಳಲ್ಲಿ ಬರಬಹುದಾದ ಸಾಲು. Eye-wink

ಸೌರಾಷ್ಟ್ರದ ವಿರುದ್ಧ ಆತ್ಮವಿಶ್ವಾಸದಿಂದ ಆಡಿ ನಮ್ಮವರು, ಮೊದಲ ದಿನದಾಟದ ಅಂತ್ಯಕ್ಕೆ ೩೨೯ ರನ್ನುಗಳನ್ನು ಗಳಿಸಿ, ೪ ವಿಕೇಟುಗಳನ್ನು ಒಪ್ಪಿಸಿದ್ದಾರೆ.

ರಾಬಿನ್ ಉತ್ತಪ್ಪ - ೧೦೮, ಸಿ.ರಘು - ೮೩ , ದ್ರಾವಿಡ್ - ೫೬ - ದಿನದ ಪ್ರಮುಖ ಆಕರ್ಷಣೆ.

ನಾಯಕ ಯರ್ರೇ ಗೌಡ(* ೩೮) ಮತ್ತು ವಿ.ಎಸ್.ತಿಲಕ್ ನಾಯ್ಡು(* ೩೦) ಸದ್ಯಕ್ಕೆ ಕ್ರೀಸಿನಲ್ಲಿದ್ದಾರೆ. ನಾಳೆಯೂ ಹೀಗೆಯೇ ಆತ್ಮವಿಶ್ವಾಸದಿಂದ ನಮ್ಮವರು ಆಡಲಿ, ಆದರೆ ಅದು ಅತಿಯಾಗುವುದು ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 10, 2007 - 7:34pm — hpn

Re: ಬೃಹತ್ ಮೊತ್ತದತ್ತ ಕರ್ನಾಟಕ

hpn's picture

ಯಾವುದಾದರೂ ಚ್ಯಾನೆಲ್ಲಿನಲ್ಲಿ ಲೈವ್ ಬರ್ತಾ ಇದೆಯಾ ಮಾರಾಯ?

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 11, 2007 - 4:17pm — Sunil Jayaprakash

ಔಟಾಗದೇ ಉಳಿದ ಯರ್ರೇ ಗೌಡ

Sunil Jayaprakash's picture

ಕರ್ನಾಟಕ ತನ್ನ ಮೊದಲ ಇನ್ನಿಂಗ್ಸನ್ನು ಮುಗಿಸಿದೆ. ನಾಯಕ ಯರ್ರೇ ಗೌಡ ಮತ್ತು ಪಟೇಲ್ ನಡುವೆ ಹತ್ತನೇ ವಿಕೇಟಿಗೆ ದಾಖಲೆಯ ೧೧೨ ರನ್ನುಗಳ ನೆರವಿನಿಂದ ಕರ್ನಾಟಕವು ಒಟ್ಟು ೫೭೦ ರನ್ನುಗಳನ್ನು ಪೇರಿಸಿದೆ.

ತಾಂತ್ರಿಕೆ ತೊಂದರೆಯಿಂದ(Actually, ತೊಂದರೆಯಲ್ಲವದು, goof up) ಮೊದಲ ಪಂದ್ಯದಲ್ಲಿ ಆಡಲಾಗದಿದ್ದ ಯರ್ರೇ ಗೌಡ ಈ ಪಂದ್ಯದಲ್ಲಿ ೧೭೧ ರನ್ನುಗಳನ್ನು ಕಲೆಹಾಕಿ ಔಟಾಗದೆ ಉಳಿದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 11, 2007 - 8:25pm — Sunil Jayaprakash

ರಣಜಿ ಅರಿಕೆಗಳು

Sunil Jayaprakash's picture

ಎರಡನೆಯ ದಿನದಾಟದ ಕೊನೆಗೆ ಕರ್ನಾಟಕ ೫೭೦ ಗಳಿಸಿತು. ಸೌರಾಷ್ಟ್ರ ಕೂಡ ದಿಟ್ಟತನದಿಂದಲೇ ಸವಾಲನ್ನು ಸ್ವೀಕರಿಸಿ ಮುರಿಯದ ಮೊದಲ ವಿಕೇಟಿಗೆ ೧೦೩ ರನ್ನುಗಳನ್ನು ಪೇರಿಸಿದೆ. ಸೌರಾಷ್ಟ್ರದ ಪರ ಜೋಗಿಯಾನಿ ಬಿರುಸಿನ ೬೨(೧೦ ಫೋರು ಮತ್ತು ೨ ಸಿಕ್ಸ್ ಗಳಿಂದ ಕೂಡಿದ) ರನ್ನುಗಳನ್ನು ಗಳಿಸಿದ್ದಾರೆ.

ನಮ್ಮ ಬೌಲರುಗಳಿಗೆ ಏನಾಯಿತೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 11, 2007 - 10:11pm — ಶಿವ

Re: ರಣಜಿ ಅರಿಕೆಗಳು

ಶಿವ's picture

ನಮ್ಮ ಬೌಲರುಗಳಿಗೆ ಏನಾಯಿತೋ ?

ಕೊನೆಯ ವಿಕೆಟಿಗೆ ಕರ್ನಾಟಕೆ ೧೦೨ ರನ್ನುಗಳನ್ನು ಸೇರಿಸಿದೆ ಅಂತೆ..ಇನ್ನು ಸೌರಾಷ್ಟ ಮೊದಲ ವಿಕೆಟಿಗೆ ೧೦೩ ರನ್ನ್ಗುಗಳನ್ನು ಮಾಡಿರೋದ್ರಲ್ಲಿ ....?

ಯಾವುದೋ ಡಬ್ಬಾ ಬ್ಯಾಟಿಂಗ್ ಪಿಚ್ ಇರ್ಬೇಕು..Yell

 

 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 13, 2007 - 9:52am — ASHOKKUMAR

Re: ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ

ASHOKKUMAR's picture

ಪಂದ್ಯದಲ್ಲಿ ಶತಕ ಬಾರಿಸಿದ ರಾಬಿನ್ ಉತ್ತಪ್ಪ ಭಾರತೀಯ ಏಕದಿನ ತಂಡಕ್ಕೆ ಆಯ್ಕೆಯಾಗಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 13, 2007 - 10:45am — Sunil Jayaprakash

ಕರ್ನಾಟಕಕ್ಕೆ ಬೃಹತ್ ಮುನ್ನಡೆ..ಆದರೂ ಪ್ರಯೋಜನವಿಲ್ಲ.

Sunil Jayaprakash's picture

ಏನೇನೋ ಆಗುತ್ತಿದೆ ಗೆಳೆಯರೇ.

ಸೌರಾಷ್ಟ್ರದ ಹನ್ನೊಂದನೆಯ ಆಟಗಾರನು ಗಾಯಗೊಂಡು ಆಚೆಉಳಿದಿರುವನು. ಸೌರಾಷ್ಟ್ರ ತನ್ನ ಮೊದಲ ಇನ್ನಿಂಗ್ಸಿನಲ್ಲಿ ೩೫೪ ರನ್ನುಗಳನ್ನು ಗಳಿಸಿ ಒಂಬತ್ತು ವಿಕೇಟುಗಳನ್ನು ಕಳೆದುಕೊಂಡು ಪೂರ್ಣಗೊಳಿಸಿತು. ಒಟ್ಟು ಕರ್ನಾಟಕಕ್ಕೆ ೨೧೪ ರನ್ನುಗಳ ಮುನ್ನಡೆ ಸಿಕ್ಕಿದೆ. ಆದರೂ ಫಾಲೋ-ಆನ್ ಹೇರಲಿಲ್ಲ.

ಒಂದು ಪ್ರಶ್ನೆ, ಎದುರಾಳಿ ತಂಡ ಪೂರ್ಣವಾಗಿ ಔಟಾಗದಿದ್ದರೆ, ಫಾಲೋ-ಆನ್ ಹೇರಲಾಗುವುದಿಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
January 13, 2007 - 11:52am — rajeshnaik111

Re: ಕರ್ನಾಟಕಕ್ಕೆ ಬೃಹತ್ ಮುನ್ನಡೆ..ಆದರೂ ಪ್ರಯೋಜನವಿಲ್ಲ.

rajeshnaik111's picture

ಫಾಲೋ ಆನ್ ಹೇರಬಹುದಾಗಿತ್ತು. ಒಬ್ಬ ಆಟಗಾರ ಗಾಯಗೊಂಡು ಉಳಿದರೆ ಫಾಲೋ ಆನ್ ಹೇರಬಾರದು ಎಂಬ ನಿಯಮವಿಲ್ಲ. ಆದರೆ ಇಲ್ಲಿ ಕರ್ನಾಟಕ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಿರಬಹುದು.

೧. ಬೌಲರ್ ಗಳು ದಣಿದಿರಬಹುದು.

೨. ಕರ್ನಾಟಕವಿರುವ ಗುಂಪಿನಲ್ಲಿ ಈ ಪಂದ್ಯದ ಮೊದಲು ಕರ್ನಾಟಕಕ್ಕೆ ೧೫ ಮತ್ತು ಬರೋಡಕ್ಕೆ ೧೭ ಅಂಕಗಳು ಇದ್ದವು. ಬರೋಡ ತಮಿಳುನಾಡು ವಿರುದ್ಧ ಸೋತಿದೆ. ಆದ್ದರಿಂದ ಅದು ೧೭ರಲ್ಲೇ ಇರುತ್ತೆ. ಕರ್ನಾಟಕ ಈ ಪಂದ್ಯ ಗೆದ್ದರೆ ಅಂಕಗಳು ೧೭ರಕ್ಕಿಂತ ಹೆಚ್ಚಾಗಿ ಕರ್ನಾಟಕ ಗೊಂಪಿನಲ್ಲಿ ಮೊದಲ ಸ್ಥಾನಕ್ಕೆ ಬರುತ್ತೆ. ಈ ಗುಂಪಿನಲ್ಲಿ ಮೊದಲ ಸ್ಥಾನದವರು ಮತ್ತೊಂದು ಗುಂಪಿನ ದ್ವಿತೀಯ ಸ್ಥಾನದವರೊಂದಿಗೆ ಆಡಬೇಕು. ಮತ್ತೊಂದು ಗುಂಪಿನ ದ್ವೀತಿಯ ಸ್ಥಾನವನ್ನು ಬಲಶಾಲಿಯಾದ ಮುಂಬೈ ಗಳಿಸಲಿದೆ. ಕರ್ನಾಟಕಕ್ಕೆ ಸೆಮಿ ಫೈನಲ್ ನಲ್ಲಿ ಮುಂಬೈ ಬೇಡವಾಗಿರಬಹುದು. ಈ ಪಂದ್ಯ ಡ್ರಾ ಆದರೆ ಕರ್ನಾಟಕದ ಅಂಕಗಳೂ ೧೭ ಆಗುತ್ತವೆ. ಆಗ ಕರ್ನಾಟಕವನ್ನು ಸೋಲಿಸಿದ ಆಧಾರದಲ್ಲಿ ಬರೋಡ ಗುಂಪಿನ ಪ್ರಥಮ ಸ್ಥಾನಿಯಾಗಿ ಕರ್ನಾಟಕ ದ್ವಿತೀಯ ಸ್ಥಾನಿಯಾಗುತ್ತದೆ. ದ್ವಿತೀಯ ಸ್ಥಾನಿಯಾದಲ್ಲಿ ಮತ್ತೊಂದು ಗುಂಪಿನ ಅಗ್ರಸ್ಥಾನಿಯಾಗುವ ಬಂಗಾಲದ ವಿರುದ್ಧ ಕರ್ನಾಟಕ ಸೆಮಿ ಫೈನಲ್ ಆಡುತ್ತದೆ. ಸೆಮಿ ಫೈನಲ್ ನಲ್ಲಿ ಬಂಗಾಲದ ವಿರುದ್ಧ ಆಡುವುದೇ ಲೇಸು ಎಂದು ಕರ್ನಾಟಕ ತಂಡದ ಅನಿಸಿಕೆಯಾಗಿರಬಹುದು. ಆದ್ದರಿಂದ ಫಾಲೋ ಆನ್ ಹೇರದೆ ಸ್ವಲ್ಪ ಬ್ಯಾಟಿಂಗ್ ಪ್ರಾಕ್ಟೀಸ್ ಗಳಿಸುವ ಇರಾದೆ.

೩.ಬ್ಯಾಟಿಂಗ್ ಪಿಚ್ ಆಗಿರುವ ಕಾರಣ ಸೌರಾಷ್ಟ್ರವನ್ನು ಮತ್ತೊಂದು ಸಲ ಔಟ್ ಮಾಡುವುದು ಕಷ್ಟಸಾಧ್ಯ ಎಂಬ ಕಾರಣವೂ ಇರಬಹುದು.

ನನ್ನ ಅನಿಸಿಕೆ ಪ್ರಕಾರ ಎರಡನೇ ಕಾರಣವೇ ಸರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ ದಿನದ ಕ್ರಿಕೆಟ್ ಸುದ್ಧಿ - ಹಾ! ಎಚ್ಚರ ಇವು ಒಳ್ಳೆಯ ಸುದ್ಧಿಗಳು
  • ಕರ್ನಾಟಕ ಕ್ರಿಕೆಟ್ - ೪
  • ೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ
  • ಕರ್ನಾಟಕ ಮತ್ತು ತಮಿಳನಾಡು ನಡುವಣ ರಣಜಿ ಪಂದ್ಯದ updateಗಳು
  • ಸೇಡು ತೀರಿಸಿದ ಕರ್ನಾಟಕ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ
  • ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು

ಇತ್ತೀಚಿನ ಪ್ರತಿಕ್ರಿಯೆಗಳು

  • Arun Dongre
    ಉ: hi friends,
    October 8, 2008 - 11:14am
  • hndivya
    ಉ: ನಿರೀಕ್ಷೆ
    October 8, 2008 - 11:12am
  • vidhata
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 11:08am
  • Arun Dongre
    ಉ: ಗಜಲ್
    October 8, 2008 - 11:08am
  • harsha.st
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 11:02am
  • harsha.st
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 10:52am
  • ASHOKKUMAR
    ಉ: ಲಿನಕ್ಸ್ ಗೆ ೧೭ ವರ್ಷದ ಹರೆಯ
    October 8, 2008 - 10:52am
  • kishoreyc
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:24am
  • Aditi
    ಉ: ಇಂಬಕ್ಕ
    October 8, 2008 - 10:14am
  • mahesha
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 10:00am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 80 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator