ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

January 11, 2007 - 5:19pm — venkatesh

Rev Ferdinand Kittelರೆವೆರೆಂಡ್ ಎಫ್. ಕಿಟ್ಟೆಲ್ ರ ಕನ್ನಡ- ಇಂಗ್ಲೀಷ್ ನಿಘಂಟಿನಷ್ಟು ಅಪೂರ್ವವಾದದ್ದು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯವಾದವುಗಳು. ಅದರ ಪ್ರಕಟಣೆ ನೂರುವರ್ಷದ ಮೇಲಾದಾಗ್ಯೂ ಇಂದಿನ ಸಂದರ್ಭದಲ್ಲೂ ಕಿಟೆಲ್ ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ. ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿಯೇ ೧೮೫೩ ರಲ್ಲಿ ಬಾರತಕ್ಕೆ ಬಂದವರು. ಮೊದಲು ಧಾರವಾಡ, ಮಂಗಳೂರು, ಹುಬ್ಬಳ್ಳಿ ಯಲ್ಲಿ ಮತಪ್ರಚಾರದ ಕಾರ್ಯ ನಡೆಸಿದರು. ಭಾಷಾ ಪ್ರಚಾರಕ್ಕೆ ಮುಖ್ಯವಾದದ್ದು ಅಲ್ಲಿನ ದೇಸಿ ಭಾಷೆ. ಅದಕ್ಕಾಗಿ ಅವರು ಎಲ್ಲಕ್ಕಿಂತ ಮೊದಲೇ ಕನ್ನಡಭಾಷೆಯನ್ನು ಕಲಿತರು. ಧರ್ಮಪ್ರಚಾರವನ್ನು ಸ್ವಲ್ಪ ಕಾಲ ಬದಿಗಿಟ್ಟು ದೇಸಿ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳನ್ನು ಕಲಿತಿದ್ದಲ್ಲದೆ ಅದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದರೆಂಬುದು ಇಲ್ಲಿ ನಾವು ಗಮನಿಸಬೇಕಾದ ಸಂಗತಿ. ರೆವರೆಂಡ್ .ಕಿಟ್ಟಲ್ ಅದರಲ್ಲಿ ಅಗ್ರೇಸರು ಎಂದು ಖಂಡಿತವಾಗಿ ಹೇಳಬಹುದು.

ಕಿಟ್ಟೆಲ್ ರು ಜರ್ಮನಿಯ 'ಹ್ಯಾನ್ ವರ್ 'ನಲ್ಲಿ ೧೮೩೨ ನೆಯ ಏಪ್ರಿಲ್ ೭ ರಂದು ಜನಿಸಿದರು. ಅವರ ಫಾಸ್ಟರ್ ತಂದೆಯೂ ಮತಪ್ರಚಾರ ಮಾಡುತ್ತಿದ್ದರು. ಹೀಗೆ ತಮ್ಮ ಚಿಕ್ಕಂದಿನಲ್ಲೇ ಅವರು ಮತಪ್ರಚಾರವನ್ನು ಸ್ವೀಕರಿಸಲೇಬೇಕಾಯಿತು. ಕಿಟ್ಟಲ್ ಮಂಗಳೂರಿನ 'ಪಾಲೆನಿತ್'' ಎಂಬ ಹುಡುಗಿಯೊಡನೆ ೧೮೬೦ ರಲ್ಲಿ ವಿವಾಹವಾದರು. ಈ ಮದುವೆ ೪ ವರ್ಷಗಳಲ್ಲೇ ಅಂತ್ಯವಾಯಿತು. ಬಹುಬೇಗ ಅವರ ಹೆಂಡತಿ ತೀರಿಕೊಂಡರು. ಸುಮಾರು ೧೪ ವರ್ಷಗಳಕಾಲ ಮತಪ್ರಚಾರದ ಕೆಲಸ ಮುಂದುವರೆಸಿ, ಜರ್ಮನಿಗೆ ತೆರಳಿದರು. ಅವರು ಮತ್ತೆ ಭಾರತಕ್ಕೆ ಮರಳಿ ಬಂದಿದ್ದು ೧೮೬೭ ರಲ್ಲಿ. ಈ ಬಾರಿ ಅವರು ಮರು ಮದುವೆಯಾದರು. ಆಕೆ ತಮ್ಮ ಮೊದಲನೆಯ ಪತ್ನಿ ಯ ತಂಗಿ- 'ಜೂಲಿಯ' ಎಂಬುವಳೊಡನೆ.

ಕನ್ನಡ ಸಾಹಿತ್ಯಕ್ಕೆ ಅವರ ಸೇವೆ ಅಪಾರ : ಮೊಟ್ಟಮೊದಲನೆಯದಾಗಿ ಕಿಟ್ಟೆಲ್ಲರು ಇಂದಿಗೂ 'ಅವಿಸ್ಮರಣೀಯರಾಗಿರುವುದು' ಅವರ ಕಿಟ್ಟೆಲ್ ಶಬ್ದಕೋಶದಿಂದ. ಸುಮಾರು ೨೦ ವರ್ಷಗಳಕಾಲ ಸತತವಾಗಿ ದುಡಿದಿದ್ದರ ಪರಿಣಾಮ - ಈ ಅಮರ ಕೃತಿಯ ನಿರ್ಮಾಣ. ಅವರು ೧೮೫೭ ರಲ್ಲಿ ಮೊದಲುಮಾಡಿ, ೧೮೯೩ ರಲ್ಲಿ ಹಸ್ತಪ್ರತಿ ತಯಾರಿಸಿದರು. ಅದನ್ನು 'ಬಾಸೆಲ್ ಮಿಶನ್' ನವರು ಪ್ರಕಟಿಸಿದರು. ಆಗಿನ ಕಾಲದಲ್ಲಿ ಯಾವ ಪ್ರಚೀನ ಕನ್ನಡ ಗ್ರಂಥಗಳು ಮುದ್ರಣದಲ್ಲಿರಲಿಲ್ಲ. ಅವು ಸುಲಭವಾಗಿ ಸಿಗುತ್ತಲೂ ಇರಲಿಲ್ಲ. ತಮಗೆ ಅಲ್ಲಿ ಇಲ್ಲಿ ಸಿಕ್ಕ ಸುಮಾರು ೩೫ ಕನ್ನಡ ಕೃತಿಗಳಸಹಾಯದಿಂದ ತಮ್ಮ (ಕರಡು ಪ್ರತಿ) ಕೃತಿಯನ್ನು ಸಿದ್ಧಪಡಿಸಿದರು. ೧೭೫೨ ಪುಟಗಳಿರುವ ಈ ಗ್ರಂಥ ೧೮೯೪ ರಲ್ಲಿ ಪ್ರಕಟವಾಯಿತು.

ಮತ ಪ್ರಚಾರವೇ ಅವರ 'ಮಿಶನ್' ನ ಮುಖ್ಯೋದ್ದೇಶ. ಅದಕ್ಕಾಗಿಯೇ ಭಾರತಕ್ಕೆ ಬಂದು ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ದ್ರಾವಿಡಭಾಷೆಗಳಾದ ಕನ್ನಡ, ತಮಿಳು, ತುಳು, ಮಲಯಾಳಂ, , ಮತ್ತು ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದ ಸಲುವಾಗಿಯೇ ಇಂಥ ಕೆಲಸ ಮಾಡಲು ಸಾಧ್ಯವಾಯಿತು. ನಿಧಾನವಾಗಿ ಯೋಚಿಸಿದರೆ ಆ ಕಾಲದಲ್ಲಿ, ಪಂಪಭಾರತ, ವಡ್ಡಾರಾಧನೆ, ಕವಿರಾಜಮಾರ್ಗ ದಂತಹ ಕಾವ್ಯಗಳು ಇನ್ನೂ ಪ್ರಕಟವಾಗಿರಲಿಲ್ಲ. ಅಂತಹ ಸಮಯದಲ್ಲಿ ಕನ್ನಡ - ಇಂಗ್ಲೀಷ್ ನಂತಹ ಗ್ರಂಥ ರಚನೆ ನಿಜಕ್ಕೂ ಆಶ್ಚರ್ಯಕರವಾದದ್ದು- ಅದೂ ಒಬ್ಬ ವಿದೇಶೀಯನಿಂದ. ಅವರು ತಮ್ಮ ಕಿಟ್ಟೆಲ್ ಶಬ್ದಕೊಶಕ್ಕೆ ಮುನ್ನುಡಿ ಬರೆದಾಗಲೇ ಅದನ್ನು ಹೇಗೆ ಓದಿಕೊಳ್ಳಬೇಕು, ಎನ್ನುವುದರ ಬಗ್ಗೆಯೂ ತಿಳಿಸಿದ್ದಾರೆ.(" The compiler entreats the public to look upon the present dictionary with an indulgent eye " ) ಜರ್ಮನಿಯ 'ಟ್ಯೂಬಿಂಜಿನ್' ವಿಶ್ವವಿದ್ಯಾಲಯ ಅವರಿಗೆ "ಗೌರವ ಡಾಕ್ಟರೇಟ್" ಕೊಟ್ಟು ಗೌರವಿಸಿತು.

ಶಬ್ದಕೋಶದ ರಚನೆಯಲ್ಲಿ ಒಂದು ಉತ್ತಮ ಕ್ರಮವನ್ನು ಅವರು ಉಪಯೋಗಿಸಿಕೊಂಡರು. ದೇಶ್ಯ, ಸಂಸ್ಕೃತ, ಮತ್ತು ಅನ್ಯದೇಶಿ ಪದಗಳ ಉಪಯೋಗ. ಇಂತಹ ವಿತರಣೆ ಬಹಳ ಶಾಸ್ತ್ರೀಯವಾಗಿವೆ. ದೇಶ್ಯ ಶಬ್ದಗಳಿಗೆ ವಿಶೇಷಗಮನವನ್ನು ಕೊಡಲಾಗಿದೆ. ಹೊಸ ಪದಗಳ ಬಳಕೆ- ಹೇಗೆ ವಾಕ್ಯಗಳಲ್ಲಿ ಪ್ರಯೋಗಿಸಬಹುದೆಂಬುದನ್ನು ತೋರಿಸಿದ್ದಾರೆ. ಏಕಾಕ್ಷರ ಶಬ್ದಗಳು, ತತ್ಸಮ, ತದ್ಭವ, ಪ್ರತ್ಯಯ, ಸಮಾಸಗಳನ್ನು ಸೂಚಿಸಿದ್ದಾರೆ. ಪ್ರತಿಶಬ್ದವೂ ಅದರ ಮೂಲರೂಪ ಹೇಗಾಯಿತು, ಯಾವ ಭಾಷೆಯಿಂದ ಬಂದಿದೆ, ಎನ್ನುವ ಆಧಾರಗಳೂ ಧಾಖಲಾಗಿವೆ. ಆಡುಮಾತು ನುಡಿಗಟ್ಟು, ಗ್ರಾಮ್ಯ ಶಬ್ದಗಳು ಹೇಗೆ ಒಂದು ಪ್ರಾಂತ್ಯದಿಂದ ಪಕ್ಕದ ಪ್ರಾಂತ್ಯಕ್ಕೆ ಬದಲಾಗುತ್ತವೆ ಎನ್ನುವ ವಿಷಯನ್ನು ತೋರಿಸಿದ್ದಾರೆ.

ಅವರ ಕನ್ನಡ ಭಾಷಾ ಪ್ರೇಮ ಶ್ಲಾಘನೀಯವಾದದ್ದು. 'ಶಬ್ದ ಮಣಿ ದರ್ಪಣ' ಎಂಬ, ಗ್ರಂಥವನ್ನು (೯ ಹಸ್ತಪ್ರತಿಗಳ ಆಧಾರದಿಂದ) ಶಾಸ್ತ್ರೀಯವಾಗಿ ಸಂಪಾ ದಿಸಿದ್ದಾರೆ. ಅದರ ಪ್ರಸ್ತಾವನೆ, ಟಿಪ್ಪಣಿಗಳು ವಿದ್ವಾಂಸರನ್ನು ಇಂದಿಗೂ ಕಾಡಿವೆ. ೧೫ ಹಸ್ತಪ್ರತಿಗಳ ಆಧಾರದಿಂದ 'ಛಂದೋಂಬುಧಿ' ಎಂಬ ನಾಗವರ್ಮನ ಕಾವ್ಯವನ್ನು ಸಂಪಾದಿಸಿ, ವಿಸ್ತಾರವಾದ ಪೀಠಿಕಾ ಟಿಪ್ಪಣಿಯನ್ನು ತಯಾರಿಸಿದ್ದಾರೆ.

' ಶಬ್ದಮಣಿದರ್ಶನ' ವನ್ನು ಮೂಲವಾಗಿಟ್ಟುಕೊಂಡು ಭಾಷಾಶಾಸ್ತ್ರಕ್ಕೆ ಸಹಾಯಮಾಡುವಂತಹ ರಚನೆ, ('A Grammar of the kannada language') ಬಹು ಮೆಚ್ಚುಗೆ ಪಡೆದ ಕೃತಿ. ಅಪಾರ ಶ್ರದ್ಧೆ, ಪರಿಶ್ರಮಗಳಿಲ್ಲದೆ ಇಂತಹ ಶ್ರೇಷ್ಟ ಕೃತಿಗಳನ್ನು ಹೊರತರಲು ಸಾಧ್ಯವೇ?

ಕನ್ನಡದಲ್ಲಿ 'ಜ್ಞಾನಾರ್ಜನೆ'ಮಾಡಿಕೊಂಡ ಬಳಿಕ, ಬೈಬಲ್ಲನ್ನು ಕನ್ನಡಕ್ಕೆ ತರ್ಜುಮೆ ಮಾಡಿದರು. ಪರಮಾತ್ಮ ಜ್ಞಾನ, ಸಂಕ್ಷೇಪ ವ್ಯಾಕರಣ, ಕನ್ನಡ ಕಾವ್ಯಮಾಲೆ, ಗಳಂತಹ ಗ್ರಂಥಗಳು ಬೆಳಕಿಗೆ ಬಂದವು. ಇನ್ನಿತರ ಗ್ರಂಥಗಳ ಪಟ್ಟಿ ಹೀಗಿದೆ :

೧. ( Parables in Coorg ) ೧೮೭೩ ರಲ್ಲಿ, ಕೊಡಗಿನ ನುಡಿಗಟ್ಟುಗಳ ಸಂಗ್ರಹ

೨. ೧೮೭೫ ರಲ್ಲಿ, ೨,೦೦೦ ಗಾದೆಗಳ ಸಂಗ್ರಹವನ್ನು ಪ್ರಕಟಿಸಿದರು.

೩. ಶಾಲಾ ಕಾಲೇಜುಗಳಿಗೆ ಬೇಕಾದ ಪಠ್ಯಪುಸ್ತಕಗಳು. ಅವರ ಮತಕ್ಕೆ ಸಂಬಂಧಪಟ್ಟ ಕೃತಿಗಳ ಪ್ರಕಟಣೆ.

ಕಿಟ್ಟೆಲ್ ತಮ್ಮ ಸ್ವದೇಶಕ್ಕೆ ಹೋಗಿದ್ದವರು, ದುರ್ದೈವದಿಂದ ಮರಳಲೇ ಇಲ್ಲ. ಡಿಸೆಂಬರ್, ೨೦, ೧೯೦೩ ರಲ್ಲಿ ಜರ್ಮನಿಯಲ್ಲೇ ದೈವಾಧೀನರಾದರು. ಕನ್ನಡವನ್ನು ನಿಜವಾಗಿಯೂ, ಹೃದಯಪೂರ್ವಕವಾಗಿಯೂ ಪ್ರೀತಿಸುತ್ತಿದ್ದರು. ಅವರ ನಿಜವಾದ ಉದ್ದೇಶ್ಯ ಮತಪ್ರಚಾರವೊಂದೇ ಆಗಿರಲ್ಲಿಲ್ಲ. ಕನ್ನಡಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದರೆ ತಪ್ಪಲ್ಲ.

*
ಆಧಾರ :ಮುಂಬೈ ಕರ್ಣಾಟಕ ಸಂಘ, ಪ್ರಕಟಿಸಿದ್ದ ಸೆಪ್ಟೆಂಬರ್- ಅಕ್ಟೋಬರ್ ೧೯೯೩ ರ 'ಸಂಬಂಧ' ಎಂಬ ಪತ್ರಿಕೆಯಿಂದ.

** ಶ್ರೀ ನಾಡಿಗ್ ರವರಿಗೆ, ಈ ಲೇಖನದಿಂದ ಉಪಯೋಗವಾದರೆ ನಾನು ಧನ್ಯ.

  • ಪ್ರಬಂಧ
~.~
  • Login or register to post comments
  • 838 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 11, 2007 - 10:42pm — hpn

ಉ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

hpn's picture

ಒಳ್ಳೆಯ ಲೇಖನ, ವೆಂಕಟೇಶ್ ರವರೆ. ನಿಮ್ಮ ಮೂಲ ಲೇಖನಕ್ಕೆ ಒಂದಷ್ಟು ಚಿಕ್ಕ ಪುಟ್ಟ ಸಂಪಾದನೆ ಮಾಡಿ ಒಂದು ಚಿತ್ರವನ್ನೂ‌ ಹಾಕಿರುವೆ. (ಒಂದೆರಡು '!'ಗಳನ್ನು ತೆಗೆದಿರುವೆ. ಕ್ಷಮೆಯಿರಲಿ)
ಈ ಲೇಖನವನ್ನು "ವಿಶೇಷ ಲೇಖನ"ವಾಗಿಯೂ ಸೇರಿಸಿದ್ದೇನೆ.

ಒಟ್ಟಾರೆ ಬಹು ಮಾಹಿತಿಯುಳ್ಳ ಲೇಖನ! (ವಿಕಿಪೀಡಿಯದಲ್ಲಿ ಬರೆಯುತ್ತಿರುವವರಿಗೆ ಈ‌ ಮಾಹಿತಿಯ ಬೆಲೆ ಗೊತ್ತಿರುತ್ತೆ Eye-wink )

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2007 - 8:48am — venkatesh

Re: ಉ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

venkatesh's picture

ಪ್ರಿಯ ನಾಡಿಗರೆ,

ನಿಮ್ಮ 'ಸ್ಪಂದನ' ನನ್ನನ್ನು ಇನ್ನೂ ಕ್ರಿಯಾಶೀಲನನ್ನಾಗಿ ಮಾಡುತ್ತದೆ ಎಂದು ನಂಬುತ್ತೇನೆ. 'ವಿಕೀಪೀಡಿಯ'ದ ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿದ್ದಾಗ್ಯೂ, ಸಮಯಹೊಂದಿಸಿಕೊಂಡು ಇಂತಹ ಪುಟ್ಟ- ಲೇಖನದ 'ಮೌಲ್ಯಮಾಪನ' ಮಾಡಿದ್ದಕ್ಕೆ, ನಾನು ಚಿರ ಋಣಿ !

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2007 - 9:08am — Shyam Kishore

ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

Shyam Kishore's picture

ವೆಂಕಟೇಶ್‌ರವರೇ,

ಉತ್ತಮ ಮಾಹಿತಿಯುಳ್ಳ ಬರಹಕ್ಕಾಗಿ ಧನ್ಯವಾದಗಳು. ಇದರಲ್ಲಿ ಸೇರಿಸಬಹುದಾದ ಇನ್ನೊಂದು ಮಾಹಿತಿಯೆಂದರೆ: ಕಿಟ್ಟೆಲ್ ಅವರ ನಿಘಂಟಿನ ಮೊದಲ ಆವೃತ್ತಿಯಲ್ಲಿ ೭೦,೦೦೦ (ಎಪ್ಪತ್ತು ಸಾವಿರ) ಪದಗಳಿದ್ದವು.

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2007 - 2:31pm — venkatesh

Re: ಪ್ರತಿಕ್ರಿಯೆ: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

venkatesh's picture

ಮೊದಲ ಎಡಿಶನ್ ಗೆ 'ಮೊದಲ ಮಾತ'ನ್ನು ಜನವರಿ, ೧೮೯೯ ರಲ್ಲಿ (ಮಂಗಳೂರಿನಲ್ಲಿ), ಶ್ರೀ ಜೆ. ಬುಚರ್ ರವರು ಬರೆದಿದ್ದಾರೆ.

ಎರಡನೆಯ ಎಡಿಶನ್ ಚೆನ್ನಾಗಿ ಪರಿಷ್ಕ್ರುತ ಗೊಂಡಿತು. ಅದಕ್ಕೆ ಮುನ್ನುಡಿಯನ್ನು, ಪ್ರಕಾಶಕರು ಜನವರಿ, ೧೯೨೩ ರಲ್ಲಿ ಬರೆದಿದ್ದಾರೆ. ಈ ಪುಸ್ತಕ ಸಹಿತ ಮಂಗಳೂರಿನಲ್ಲಿ ಪ್ರಕಾಶನ ಕಂಡಿತು.

ರೆವ್.ಕಿಟ್ಟೆಲ್ಲರ ಅಮೂಲ್ಯವಾದ ಕೊಡುಗೆಯಂತೆ ಈ ಕೆಳಗೆ ಉಲ್ಲೇಖಿಸಿದ ಕೃತಿಗಳೂ ಹೆಚ್ಚಿನ ಮಾಹಿತಿಗಳನ್ನು ಕೊಡುವಲ್ಲಿ ಸಕ್ರಿಯವಾಗಿವೆ.

೧. ರೀವನ್ ನ ಕನ್ನಡ -ಇಂಗ್ಲೀಷ್ -ಶಬ್ದಕೊಶ

೨. ಅಪ್ಟೆ ಯವರ ಸಂಸ್ಕೃತ - ಇಂಗ್ಲೀಷ್ ಶಬ್ದಕೋಶ

೩. ಮೋಲ್ಸ್ವರ್ತರ ಮರಾಠಿ- ಇಂಗ್ಲೀಷ್ ಶಬ್ದಕೋಶ

೪. ಕ್ರಾವೆನ್ಸ್ ನ ಹಿಂದೂಸ್ಥಾನಿ -ಇಂಗ್ಲೀಷ್ ಶಬ್ದಕೋಶ

ಇನ್ನೊಂದು ವಿಶಯ ಇಲ್ಲಿ ಗಮನಿಸಬೇಕಾದದ್ದು- ಈ ಪ್ರಯತ್ನ ಆದದ್ದು, ಹತ್ತಾರು ದಶಕಗಳ ಹಿಂದೆ. ಆಗ ಸಿಗುತ್ತಿದ್ದದ್ದು ದೇವರ ಮನೆಯ ಗೂಡಿನಲ್ಲಿ ಶತಮಾನಗಳಿಂದ ಇಟ್ಟು ಪೂಜಿಸುತ್ತಿದ್ದ 'ಓಲೆ ಗರಿಗಳು'.

ಆ ತರಹ ನಮ್ಮ ಹಳ್ಳಿ ಮನೆಯಲ್ಲಿ ಸಿಕ್ಕ ಓಲೆಗರಿಯ ಕಂತೆಯನ್ನು ನನ್ನತಮ್ಮ, ಅಮೆರಿಕಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಅಭ್ಯಸಿಸಿ ಪುಸ್ತಕ ಪ್ರಕಟಿಸುವನಿದ್ದಾನೆ. ಇದು ಸದ್ಯದಲ್ಲೇ ಹೊರಗೆ ಬರಬಹುದು. ಅದನ್ನು ಎಲ್ಲರಿಗೂ ತಿಳಿಸುತ್ತೇನೆ.
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 12, 2007 - 11:50am — Sunil Jayaprakash

ಅಳು: ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

Sunil Jayaprakash's picture

ಇದಕ್ಕೆ ಉತ್ತರವನ್ನು ಇಲ್ಲಿಯೆ ಬರೆಯಬೇಕೆಂದಿದ್ದೆ, ಆದರೆ ತುಂಬಾ ದೊಡ್ಡದಾದ್ದರಿಂದ ಹೊಸ ಲೇಖನದಲ್ಲಿ ಹಾಕಿದ್ದೇನೆ. ಬಿಡುವಾದಾಗ ಓದಿ ನೋಡಿ.
ಒತ್ತರಿಸಿ ಬರುವ ಬೇಸರ ಮತ್ತು ಕೋಪಗಳು

ಕಿವಿಮಾತು - ಯಾರೂ ಕೂಡ ನನ್ನ ಲೇಖನವನ್ನು ಓದಿ ಬೇಸರಪಟ್ಟುಕೊಳ್ಳಬೇಡಿ. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಿಟ್ಟೆಲ್ ಬಗ್ಗೆ ನಿಮಗೆಷ್ಟು ಗೊತ್ತು?
  • ಇಂಗ್ಲಿಷ್ ಕಾದಂಬರಿಕಾರ, ಕನ್ನಡದ ಎಚ್. ರಾಜಾರಾವ್ ಇನ್ನಿಲ್ಲ !
  • ರೆವೆರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ರ ಬಗ್ಗೆ ಒಂದೆರಡು ಮಾತುಗಳು
  • ಶಂಕರ್ಸ್ ವೀಕ್ಲಿಯ ಶ್ರೀ. ಶಂಕರ್ ಕೇಶವ್ ಪಿಳ್ಳೆ !
  • ಮಿ. ಹರ್ಜ್ ರಿಗೆ, ೧೦೦ ನೇ ವರ್ಷದ ಜನ್ಮದಿನೋತ್ಸವವಾದರೆ, ಟಿನ್ ಟಿನ್ ಗೆ ೭೮ ನೆ ವರ್ಷದ ಜನ್ಮದಿನ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ವಿಧ್ಯಾಭ್ಯಾಸ ಮತ್ತು ಕಾಲೇಜು
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ಬ್ರಹ್ಮ ಕಮಲ.
  • ಲ೦ಡನ್ ಪ್ರವಾಸಕಥನ ಭಾಗ ೯: ಫ್ರೆ೦ಚ್-ಮೇಡ್ ದುರ೦ತದ ಲ೦ಡನ್ ರಸಸ್ವಾಧನೆ
  • ಕಾಶ್ಮೀರದ ಹುಡುಗಿಯ ಕತೆ
  • ಪ್ರತಿಭಟನೆಗಳು, ಮೆರವಣಿಗೆ, ಬಂದ್..ಸಹ ವೃತ್ತಿಯೇ?
  • ಜಿಪುಣ

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಕಾಶ್ಮೀರದ ಹುಡುಗಿಯ ಕತೆ
    July 4, 2008 - 7:20pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:51pm
  • ಸಂಗನಗೌಡ
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 6:50pm
  • ವೈಭವ
    ಉ: Cosmic Rays ಗೆ ಕನ್ನಡ/ಸಕ್ಕದದಲ್ಲಿ ಏನಂತಾರೆ?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:36pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:33pm
  • ಸಂಗನಗೌಡ
    ಉ: ಕನ್ನಡ ಅಂಕಿಗಳು ಮಾಡಿದ ಪಾಪವೇನು?
    July 4, 2008 - 6:31pm
  • cmariejoseph
    ಉ: ಹೆಂಡತಿ-ಎಂದರೆ ಜೋಕು ಯಾಕೆ ?
    July 4, 2008 - 6:20pm
  • cmariejoseph
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 4, 2008 - 6:07pm
  • roshan_netla
    ಉ: ನಿಮಗೆ ಕನ್ನಡ ಬರುತ್ತಾ?
    July 4, 2008 - 5:59pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಕವಿತೆಯೆಂದರೆ ಶಬ್ದಗಳ ಹಂದರವಲ್ಲ, ಜೀವನದೆಡೆಗಿನ ಅನುಸಂಧಾನದ ದೃಷ್ಟಿಕೋನ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator