20
June
2013

ಕೊನೆಗೂ ಬಂತು ಆ ದಿನ...

October 1, 2010 - 2:29pm
abdul

ಕೊನೆಗೂ ಬಂತು ಆ ದಿನ. ಆಂಗ್ಲ ಭಾಷೆಯಲ್ಲಿ D-Day. ತಮಗೆ ನಿರಾಸೆಯಾಗದಿರಲಿ ಎಂದು ಎರಡೂ ಕಡೆಯವರು ಆಶಿಸಿದ, ಬೇಡಿಕೊಂಡ, ಹರಕೆ ಹೊತ್ತು ಕೊಂಡ ದಿನ. ನೂರಾರು ವರ್ಷಗಳ ವಿವಾದಕ್ಕೆ, ವಿಶಾಲವಾದ ಭೂಮಿಯ ಜೊತೆ ನಮ್ಮೆಲ್ಲರನ್ನೂ ಸೃಷ್ಟಿಸಿದ, ಮನುಷ್ಯರಂತೆ ಬದುಕು ಎಂದು ತಾಕೀತಿನೊಂದಿಗೆ ಕಳಿಸಿದ, ಎಲ್ಲರೂ ಆರಾಧಿಸುವ ಪರಮಾತ್ಮನಿಗೆ  ಮಂದಿರವೋ ಮಸೀದಿಯೋ ಎನ್ನುವ ತಕಾರಾರಿಗೆ ಸಿಕ್ಕಿತು ಮುಕ್ತಿ. ಅದೂ ಸಂಕೀರ್ಣಮಯ ಮುಕ್ತಿ. ಸಂಕೀರ್ಣ ಸಮಸ್ಯೆಗೊಂದು ಅಷ್ಟೇ ಸಂಕೀರ್ಣವಾದ ಪರಿಹಾರ. ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “ವಸುಧೈವ ಕುಟುಂಬಕಮ್” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ. ಬದುಕು, ಬದುಕಲು ಬಿಡು (ಜಿಯೋ ಔರ್ ಜೀನೇದೋ) ಎನ್ನುವ ಸಮೀಕರಣಕ್ಕೆ ಒಲ್ಲೆ ಎಂದು ಪಟ್ಟು ಹಿಡಿದ ವಿವಾದ. ಮೂರು ನ್ಯಾಯಾಧೀಶರುಗಳ ಪೀಠ ಕೊನೆಗೂ ಕೊಟ್ಟಿತು ತೀರ್ಪು, ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು. ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.

ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು. ದೇವರ ಹೆಸರಿನಲ್ಲಿ ರಾಜಕಾರಣ ಮಾಡಿ ಹೊಟ್ಟೆ ಹೊರೆದು ಕೊಳ್ಳುವವರಿಗೆ ಯಾವ ಸಂದಿಗ್ಧ ಪರಿಸ್ಥಿತಿಯೂ ವಿಜಯೋಲ್ಲಸವೇ. ಒಪ್ಪೊತ್ತಿನ ಅನ್ನಕ್ಕಾಗಿ ಪರದಾಡುವವನಿಗೆ ತನ್ನ ಹಸಿದ ಹೊಟ್ಟೆಗೆ ಊಟ ಯಾವ ಕಡೆಯಿಂದ ಬರಬಹುದು ಎನ್ನುವ ಕಾತುರ, ನಿರೀಕ್ಷೆ. ಇಂದು ಬೆಳಗ್ಗಿನ ಹಲವು ಪತ್ರಿಕೆಗಳನ್ನು ನೋಡಿದ ನನಗೆ ಅನ್ನಿಸಿದ್ದು ಈಗಲೂ ಮಾಧ್ಯಮಕ್ಕೆ ಭಾರತೀಯರ ನಡುವೆ ಕಂದಕ ತೊಡುವುದೇ ಇವರ ಕಾಯಕ ಎಂದು. ಕರಾವಳಿಯ ಗುಡ್ಡದ ಮೇಲೊಂದರಿಂದ  ಪ್ರಕಾಶಿತವಾಗುವ ಪತ್ರಿಕೆಯಾಗಲಿ, ಸಮಸ್ತ ಕನ್ನಡಿಗರ ಹೆಮ್ಮೆ ಎಂದು ಘೋಷಣೆ ಹೊತ್ತ ಪತ್ರಿಕೆಯಾಗಲಿ ತಮ್ಮ screaming headlines ಮೂಲಕ ಒಂದು ಸಮಾಜಕ್ಕೆ ಸಂದ ವಿಜಯವೆಂದೇ ಪ್ರತಿಬಿಂಬಿಸಿದವು. ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

ದೇಶದ ಜನಸಂಖ್ಯೆಯ ಶೇಕಡಾ ೭೭ ಭಾಗ ಇಪ್ಪತ್ತಕ್ಕೂ ಕಡಿಮೆ ರೂಪಾಯಿಯ ಆದಾಯದ ಮೇಲೆ ಕಳೆಯುತ್ತಾರಂತೆ. ದೇಶವನ್ನು ಕಿತ್ತು ತಿನ್ನುತ್ತಿರುವ ಸಾಮಾಜಿಕ ಅಸಮಾನತೆ, ಹಸಿವು, ಲಂಚ, ಕೊಲೆ ಸುಲಿಗೆ ಬಗ್ಗೆ ಮೇಲಿನ ಸಮಸ್ಯೆಗಳಿಗೆ ತೋರಿಸಿದ ಕಾಳಜಿ, ಕಾತುರ ತೋರಿದ್ದಿದ್ದರೆ ಪಕ್ಕದ ಚೀನಾ ಅಥವಾ ಮಲೇಷ್ಯ ದಂಥ ದೇಶಗಳ ಪ್ರಗತಿ ಕಂಡು ಕರುಬುವ ಅವಶ್ಯಕತೆ ಇರಲಿಲ್ಲ. ಏನೇ ಆಗಲಿ ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್). ಈ ತೀರ್ಪು ದೇಶಕ್ಕೆ ಅವಶ್ಯ ಬೇಕಾದ ಶಾಂತಿ ನೆಮ್ಮದಿ ಕೊಡಿಸುವುದೋ ಎಂದು ನ್ಯಾಯ ಮೂರ್ತಿಗಳು ವಿಧಿಸಿದ ಮೂರು ತಿಂಗಳುಗಳ status quo ಉತ್ತರ ನೀಡಬಹುದು.            

ಇಂದು ಬೆಳಿಗ್ಗೆ ನನ್ನ mobile ಗೆ ಬಂದ ಸಂದೇಶ; who are we Hindu or Muslim? When there is “Ali” in “Diwali” and “Ram” in “Ramadan” cant we help India to be united?

ಈ ಮೇಲಿನ ಉದಾತ್ತ, ಸಾಮರಸ್ಯದ ಭಾವನೆ ಸರ್ವರಲ್ಲೂ ಕಾಣುವಂತಾಗಲಿ ಎಂದು ಆಶಿಸುತ್ತಾ..    

ಲೇಖನ ವರ್ಗ (Category): 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manju787 on

ಅಬ್ದುಲ್, ಕ್ಯಾ ಬಾತ್ ಹೈ! ಸಕತ್ತಾಗಿದೆ ಕಣ್ರೀ ನಿಮ್ಮ ವ್ಯಾಖ್ಯಾನ. ಭಾರತದ ಉದ್ಧಗಲಕ್ಕೂ ಎಲ್ಲ ಮುಸ್ಲಿಮರಿಗೂ ಇದೇ ಬುದ್ಧಿ ಬರಲಿ ಎ೦ದು ಹಾರೈಸುತ್ತೇನೆ. ಅದಿರಲಿ, ನಾನು ಇಲ್ಲಿ, ಬೆ೦ಗಳೂರಿನಲ್ಲಿ, ಮೂರು ದಿನಗಳಿ೦ದ ನಿಮ್ಮ ಪ್ರತ್ಯುತರದ ನಿರೀಕ್ಷೆಯಲ್ಲಿದ್ದೇನೆ! ಯಾವಾಗ ಬರ್ತೀರಾ ಬೆ೦ಗ್ಳೂರಿಗೆ?

Submitted by asuhegde on

ನಿಮ್ಮ ಆಶಯಗಳು ಪ್ರಶ್ನಾತೀತ ಮತ್ತು ಸ್ವಾಗತಾರ್ಹ.

ಆದರೆ ಒಕ್ಕಣೆಗಳು ಪ್ರಶ್ನಾರ್ಹವೆನಿಸುತ್ತವೆ.

<<ಭಾರತ ಜಾತ್ಯಾತೀತ ರಾಷ್ಟ್ರ. ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು.>>

ವಿಜಯಮಾಲೆ ತಾಯಿ ಭಾರತಿಗೆ ಎನ್ನುವುದನ್ನು ಒಪ್ಪಿಕೊಳ್ಳುವ ನಾನು, ಆ ತಾಯಿಯ ಮಕ್ಕಳಾದ ಭಾರತೀಯರು "V" ಪ್ರದರ್ಶಿಸಿದಾಗ, ಅದನ್ನೂ ಭಾರತೀಯರ ವಿಜಯೋತ್ಸಾಹ ಸಂಕೇತ ಎಂದು ಸಮಚಿತ್ತದಿಂದ ಯಾವುದೇ ಪೂರ್ವಗ್ರಹ ಪೀಡಿತನಾಗದೇ ಸ್ವೀಕರಿಸುತ್ತೇನೆ. ಆದರೆ ನೀವು ಹಾಗಲ್ಲ ಎನಿಸುತ್ತದೆ. ಆ ಭಾರತೀಯರಿಗೆ ಕಿಡಿಗೇಡಿಗಳು ಅನ್ನುವ ಹಣೆಪಟ್ಟಿ ಹಚ್ಚುವ ನಿಮ್ಮ ಮಾತಿನ ಹಿಂದಡಗಿರುವ ಉದ್ದೇಶ ಏನು? ಇನ್ನೊಂದು ರೀತಿಯ ವ್ಯಂಗ್ಯಭರಿತ ಮಾತುಗಳನ್ನು ಹೊರಹಾಕಿ ಭಿನ್ನ ಮತಭಾಂಧವರ ನಡುವಣ ಚರ್ಚೆ ವಾಗ್ವಾದಗಳನ್ನು ಸದಾ ಮುಂದುವರಿಸುತ್ತಲೇ ಇರಬೇಕೆಂದು ನೀವು ಆಶಿಸುತ್ತೀರಿ ಎಂದು ನನಗೆ ಅನಿಸಿದರೆ ತಪ್ಪೇ? ತಾಯಿ ಭಾರತಿಯ ಮಕ್ಕಳು ಕಿಡಿಗೇಡಿಗಳು ಎಂದು ನಿಮಗನ್ನಿಸಿದ್ದು ಹೇಗೆ?

Submitted by soumya.mr on

ಹೆಗ್ದೆಯವರೆ,

ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತ ಇದೆ...ಇಲ್ಲಿ ಈ ಕುರಿತ ಹೇಳಿಕೆ ನಿಜಕ್ಕೊ ಪ್ರಶ್ನಾತೀತ..."V" ಎಂಬ ಸಂಕೇತವನ್ನು ಇಷ್ಟು ತಿಳುವಳಿಕೆ ಇರುವ ನಮ್ಮ ಅಬ್ದುಲ್ ಸಾಹೇಬರು ಭಾರತಾಂಬೆಯ ಮಕ್ಕಳು ಸಂತಸ ವ್ಯಕ್ತ ಪಡಿಸಿದ ರೀತಿ ಎಂದುಕೊಂಡು ತಮ್ಮ ಉದಾರ ಭಾವ ಮೆರೆಯಬಹುದಿತ್ತು.. ವ್ಯಂಗ್ಯಭರಿತ ಮಾತುಗಳಿಂದ ತಮ್ಮ ಲೇಖನಕ್ಕೆ ಪ್ರಚೋದನಕಾರಿ ಪ್ರತಿಕ್ರಿಯೆಗಳನ್ನು ನಿರೀಕ್ಷುತಿದ್ದಾರೆಯೇ ಎಂಬ ಅನಿಸಿಕೆಗಳನ್ನು ಹುಸಿಗೊಳಿಸಬಹುದಾಗಿತ್ತು.....ಲೇಖನದ ಒಟ್ಟು ಉದ್ದೇಶ ಸೌಹರ್ದತೆ ಮೆರೆಸುವುದೇ ಎಂಬುದಾಗಿದ್ದರೆ ಕೆಲವು ಟೀಕಾ ಪ್ರಹಾರ ಮತ್ತು ಸ್ವ ಜಾತಿ ಪ್ರಶಂಸೆಗಳನ್ನು ಸೀಮಿತಗೊಳಿಸಿದ್ದರೆ ಲೇಖನಕ್ಕೆ ಇನ್ನೂ ತೂಕ ಸಿಗುತ್ತಿತ್ತೆನೋ ಎನಿಸುತ್ತಿದೆ......

Submitted by bhasip on

http://www.hindustan...,

ಶಿಯಾ ಸಂಘಟನೆಯೊಂದು ೧೫ ಲಕ್ಷ ಹಣಕಾಸಿನ ಸಹಾಯ ನೀಡಲು ಮುಂದೆ ಬಂದಿದೆ ರಾಮಮಂದಿರ ನಿರ್ಮಿಸಲು ಮತ್ತು ೧/೩ ಜಾಗವನ್ನು ಮಂದಿರಕ್ಕೆ ಕೊಡಬೇಕೆಂದು ಆಗ್ರಹಿಸಿದೆ.. ಪಾಪ ಆ ಸಂಘಟನೆಯ ಗತಿ?

"Hussaini Tigers, an organisation of Shia youths, on Friday urged the All India Muslim Personal Law Board (AIMPLB) not to approach the Supreme Court against the Allahabad High Court verdict on Ayodhya title suits and instead let the matter end here for good. It also announced a financial aid of Rs 15 lakh for construction of the temple at the site. Criticising Samajwadi Party president Mulayam Singh Yadav and Shahi Imam of Jama Masjid Syed Ahmed Bukhari for their criticism of the verdict, Shamsi termed them as "most unfortunate."

Submitted by raghusp on

<<ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.>>

ನಿಮ್ಮ ಈ ಸಾಲುಗಳನ್ನು ಬಿಟ್ಟು ಬೇರೆಲ್ಲ ವಿಷಯಗಳು ಸ್ವಾಗತಾರ್ಹ ಮತ್ತು ಸಮ್ಮತ

Submitted by bhasip on

"ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ."

>> ಅಲ್ಲಿ ಇದ್ದ ದೇವಾಲಯ ಒಡೆದು ಮಸೀದಿ ಕಟ್ಟುವಾಗ ಹಿಂದುಗಳು ಸಂಯಮ ತೋರಿಸಿದರೊ ಬಿಟ್ಟರೊ ಅದರ ಬಗ್ಗೆ ಇತಿಹಾಸದಲ್ಲಿ ಉಲ್ಲೇಖ ಇಲ್ಲ. ಆದರೆ ದೇವಾಲಯ ಒಡೆದವರು ಮಾತ್ರ ಇಂದಿಗೂ ಸಂಯಮ ತೋರಿಸಿಲ್ಲ ಅನ್ನುವುದಕ್ಕೆ ತೀರ್ಪು ಬಂದ ಕೂಡಲೆ ಸುಪ್ರೀಮ್ ಕೋರ್ಟ್ ಗೆ ಹೋಗುವುದಾಗೆ ಹೇಳಿದ ಸುನ್ನಿ ವಕ್ಫ್ ಬೋರ್ಡ್ ಮುಸ್ಲೀಂ ಸಮಾಜದ ಬಂಧುಗಳಲ್ಲವಾದರೆ , ನಿಮ್ಮ ಮಾತು ೧೦೦ ಕ್ಕೆ ನೂರು ನಿಜ

ಅಥವಾ, ೧/೩ ಭಾಗ ಅವರಿಗೆ ಸಿಕ್ಕಿದ್ದಕೆ ಬೇಸರವಾಗಿ, ಅದನ್ನೂ ರಾಮ ಮಂದಿರಕ್ಕೆ ಕೊಡಬೇಕು ಎನ್ನುವ ಬಯಕೆ ಯಿಂದ ಉನ್ನತ ನ್ಯಾಯಲಯಕ್ಕೆ ಮೊರೆ ಇಡೂತ್ತಿದ್ದರೊ ತಿಳಿಯದಾಗಿದೆ!

"characteristic poise ಜೊತೆಗೆ “ಸಬರ್” (ಸಂಯಮ) ಅನ್ನು " ಕಾಶ್ಮೀರಿ ಪಂಡಿತರು ಚೆನ್ನಾಅಗಿ ಅನುಭವಿಸಿದ್ದಾರೆ ;)

ಅಂದ ಹಾಗೆ ಪ್ರತಿಕ್ರಿಯೆಯಲ್ಲಿ ಯಾವ link ಕೂಡ ಕೊಟ್ಟಿಲ್ಲ ಎಂದು ದಂಗಾಗಬೇಡಿ ಪ್ಲೀಸ್....

Submitted by abdul on

ಭಾಸ್ಕರ್, ತಮಗೆ “ಲಿಂಕು” ಗಳ ವ್ಯಾಮೋಹ ಬಿಟ್ಟಿದೆ ಎನ್ನುವ ಸುಳಿವು ನನಗೆ ಸಿಕ್ಕಿತು. ಅದರ ಬದಲಿಗೆ ಮತ್ತೊಂದು ವ್ಯಾಮೋಹ ಅಂಟಿ ಕೊಂಡಿದ್ದು ಬಹುಶಃ ತಮ್ಮ ದೃಷ್ಟಿಯಿಂದ ತಪ್ಪಿರಬಹುದು. ಅದೆಂದರೆ ಪದಗಳಿಗೆ ವಿಕೃತ ವ್ಯಾಖ್ಯಾನ ನೀಡೋದು. “ಕಾದು ನೋಡಿ” ಮಾತಿನಲ್ಲಿ “ಕಾದು” ಎನ್ನೋದು ಕದನಕ್ಕೆ ಸಮಾನ ತಮಗೆ. ಸಾಧಾರಣವಾಗಿ ಈ ಬ್ಯಾನೆ war monger ಗಳಲ್ಲಿ ಕಾಣುತ್ತೆ. ತಮಗೆ ಇದು (ಬ್ಯಾನೆ) ಹೇಗೆ ಬಂದು ಮುಟ್ಟಿತೋ ನಾ ಕಾಣೆ.

Submitted by bhasip on

ವಿಕೃತ ಲೇಖನ ಬರೆಯುವ ಚಟ ಕಲವರಿಗೆ ಅಂಟಿಕೊಂಡ ಹಾಗೆ? ಅಥವಾ ಊಹೆಯ ಚಟ ಹತ್ತಿದ ಹಾಗೆ? ಕಾದು ಅನ್ನುವುದು ಕದನ ಸಮಾನ ಅಂತ ತಾವು ಹೇಗೆ ಉಹಿಸಿಕೊಂಡಿರಿ? ಹಿಂದೆ ಒಂದು ಗಾದೆ ಬರೆದಿದ್ದರಲ್ಲ ಅದನ್ನ ತಾವೆ ಓದಿಕೊಳ್ಳಿ ಪ್ಲೀಸ್.. ಯಾರದೊ ಮನಸ್ಸು ಎಲ್ಲೊ ಅಂತ.. ಕಾದು ಅನ್ನುವುದಕ್ಕೆ, wait, heated.. war, ಈ ರೀತಿಯ ಅರ್ಥ ಇದೆ ಅನ್ನುವುದು ಗೊತ್ತಿಲ್ಲದಿದ್ದರೆ ಅದು ನನ್ನ ತಪ್ಪಲ್ಲ.
ಅಂದ ಹಾಗೆ,ನಾನು ಬರೆದ ಕಾದು ಪದ ಇರುವುದು ಬೇರೆ thread ನಲ್ಲಿ, ಇಲ್ಲಿ ಎತ್ತಿರುವ ವಿಷಯಗಳ ಬಗ್ಗೆ ಮಾತನಡುವುದ್ದು ಬಿಟ್ಟು ಬೇರೆ ಕಡೆ ಹರಿಸಿ, ಪಲಾಯನ ಮಾಡುವ ನಿಮ್ಮ ಬ್ಯಾನೆ ಮತೊಮ್ಮೆ ಎತ್ತಿ ತೋರಿಸಿದ್ದೀರಿ ಅಷ್ಟೆ..

ಈಗ ನನ್ನ Badminton slot ಇದೆ. ಮುಗಿಸಿ ಬರ್ತಿನಿ...

ಕೊ ಕೊ: ಆ ಯಾ thread ನಲ್ಲಿ ಅದರ ಬಗ್ಗೆ ಚರ್ಚೆ ಆದರೆ ಅದು ಸಮಂಜಸ ಹಾಗೂ ... :)

Submitted by soumya.mr on

bhasipರವರೇ ನಿಮ್ಮ ನಿದರ್ಶನಗಳು ನಿಜಕ್ಕೂ ಶ್ಲಾಘನೀಯ.....ಮತ್ತು ಈ ರೀತಿ ಸಬರ್ (ಸಂಯಮ) ಮೆರೆಯುತ್ತಿರುವ ನಮ್ಮ ಮುಸ್ಲಿಮ್ ಭಾಂಧವರ ಪರಿ ನನಗೆ ಅರ್ಥ ಮಾಡಿಸಿದ್ದಕ್ಕಾಗಿ.....
ಎಷ್ಟೊ ವರ್ಷಗಳ ನಮ್ಮ ಸಬರ್ ಇಲ್ಲಿ ಉಲ್ಲೇಖನಾರ್ಹ.....

ಇವೆಲ್ಲ ಹೊರತುಪಡಿಸಿ ಅಬ್ದುಲ್ ರವರೇ ತಮ್ಮ ಶಾಂತಿಯ ನಿಲುವು ಮಾತ್ರ ಸ್ವಾಗತಾರ್ಹ......

Submitted by asuhegde on

<<ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.>>

ಅವರೀರ್ವರು ಕಾಲ್ಕಿತ್ತ ನಿಖರವಾದ ದಿನಾಂಕ, ಸಮಯ ಯಾವುದು?
ನಿಮ್ಮನ್ನೇಕೆ ಕೇಳ್ತಿದ್ದೇನೆ ಅಂದರೆ ನಾವ್ಯಾರೂ ಗಮನಿಸಿಲ್ಲದುದನ್ನು ನೀವು ಗಮನಿಸಿದ್ದೀರಿ. (ಇಲ್ಲಾಂದ್ರೆ ಬರೀತಿದ್ರಾ...?)
ಅವರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ, ಅನ್ನುವುದಕ್ಕೆ ಮೊದಲು, ಅವೆಲ್ಲಾ ನಮಗೆ ಬೇಕು ಅಂದಿದ್ದರೇ? ಅದು ಯಾವಾಗ?
ಈ ದಿನಾಂಕ ಮತ್ತು ಸಮಯಗಳ ಪುರಾವೆಗಳು ಸಿಕ್ಕಿದರೆ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಬಹುದೇನೋ...
:)

Submitted by soumya.mr on

"ಎರಡೆಕರೆ ೭೦ ಗುಂಟೆ ಮೂರುಭಾಗ ಮಾಡಿಕೊಂಡು ಭಜನೆ, ಹರಕೆ, ಏಕದೇವೋಪಾಸನೆ ಮಾಡಿಕೊಳ್ಳಿ ಎಂದು."

ಇಲ್ಲಿ ತಮ್ಮ ಟೀಕೆಯನ್ನು ಬರಿ ಭಜನೆ ಹರಕೆಗಳಿಗೆ ಮೀಸಲಿಟ್ಟಿರುವುದು ಏಷ್ಟು ಸಮಂಜಸ...ಇದನ್ನು ಬರೆಯುವಾಗ ತಮಗೆ "ನಮಾಜ್" ಎಂಬ ಪದ ಮರೆತು ಹೋಗಿತ್ತೆ ಎನ್ನುವುದು ವಿಪರ್ಯಾಸ.... ಇಲ್ಲಿ ನಿಮ್ಮ ಜ್ಯಾತ್ಯಾತೀತಯನ್ನು ಮೆರೆಯುವುದಕ್ಕೆ ಒಳ್ಳೆಯ ಮಂಚ ಇತ್ತು :)

ಹಾಗೆಯೇ ಹೆಗ್ದೆಯವರೊಂದಿಗೆ ನಿಮ್ಮ ಪುರಾವೆಗೆ ಎದುರು ನೋಡುತ್ತಿರುವ :)

Submitted by abdul on

ಸೌಮ್ಯ, ಭಜನೆ, ಹರಕೆ ನಂತರ ಮತ್ತೊಂದು ಪದ (ಏಕದೇವೋಪಾಸನೆ) ಪಕ್ಕದಲ್ಲೇ ಇದೆ ಎಂದು ತಾವೇಕೆ ಗಮನಿಸಲಿಲ್ಲ?
ಇನ್ನು ಹೆಗಡೆಯವರ ಪ್ರಶ್ನೆಗೆ ಬೇಕೆಂದೇ ಉತ್ತರಿಸಲಿಲ್ಲ ನಾನು. ಏಕೆಂದರೆ genuine innocence ಗೆ ಕ್ಷಮೆ ಇದೆ, pretending innocence ಆ ಸೌಲಭ್ಯ (ಕ್ಷಮೆಯ) ಕೊಡಲಿಕ್ಕೆ ಬರುವುದಿಲ್ಲ. ಆದರೂ ತಮ್ಮ ಅಭಿಲಾಷೆಯಂತೆ ಇದಕ್ಕಿದೆ ಉತ್ತರ. ರಾಮ ಮತ್ತು ರಹೀಮರು ಕಾಲ್ಕಿತ್ತಿದ್ದು ಡಿಸೆಂಬರ್ ೬, ೧೯೯೨ ರಂದು. ಸಮಸ್ತ ದೇಶಕ್ಕೆ, ಕೇಂದ್ರ ಸರಕಾರಕ್ಕೆ ಅಯೋಧ್ಯೆಯಲ್ಲಿ ಏನೂ ಸಂಭವಿಸದು ಎಂದು ಭರವಸೆ ನೀಡಿ ಸಾವಿರಾರು ಜನ ಗುಮ್ಮಟಗಳನ್ನು ನೆಲಸಮ ಮಾಡಿದ ದಿನ ಯಾವ ದೇವರು ತಾನೇ ಅಲ್ಲಿ ಇರಲು ಸಾಧ್ಯ?

Submitted by bhasip on

"ಏಕೆಂದರೆ genuine innocence ಗೆ ಕ್ಷಮೆ ಇದೆ, pretending innocence ಆ ಸೌಲಭ್ಯ (ಕ್ಷಮೆಯ) ಕೊಡಲಿಕ್ಕೆ ಬರುವುದಿಲ್ಲ. "
Correct!! ಅದಕ್ಕಾಗಿಯೆ , ರಾಮ ಜನ್ಮಭೂಮಿಯಲ್ಲಿ ದೇವಾಲಯವನ್ನು ನಾಶಗೊಳಿಸಿ ನಿಲ್ಲಿಸಿದ್ದ ಸಂಕೇತಗಳನ್ನು ಉರುಳಿಸಿದ್ದು. ಸದಾ ಶಾಂತಿಯ ಮಂತ್ರ ಜಪಿಸುತ್ತಾ ಕೂತರೆ ಏನೂ ಸಾಧ್ಯವಿಲ್ಲ. ಮುಳ್ಳಿಗೆ ಮುಳ್ಳೆ ಉತ್ತರ. ಅದನ್ನೆ ಡಿಸೆಂಬರ್ ೬ ರಂದು ಮಾಡಿದ್ದು ಅಷ್ಟೆ. ಅಂದ ಹಾಗೆ ಡಿಸೆಂಬರ್ ೬ ರಂದು ಅಲ್ಲಿ ರಾಮನ ವಿಗ್ರಹ ಸ್ಥಾಪಿಸಲಾಯಿತು. ರಾಮ ಹಿಂದೆಯೂ ಅಲ್ಲೆ ಇದ್ದ. ಅದು ರಾಮಜನ್ಮಭೂಮಿ ಎಂದು ನ್ಯಾಯಲಯವೇ ತೀರ್ಪು ಕೊಟ್ಟಿದೆ.

ಅಂದ ಹಾಗೆ, ಓಂದು ದೇಶದಲ್ಲಿದ್ದು, ಅಲ್ಲಿಯೆ ಕಾನೂನನ್ನೆ ಪಾಲಿಸದೆ, ಸ್ವಂತ ಕಾನೂನು ಇಟ್ಟು. ಸಾರ್ವಭೌಮತ್ವಕ್ಕೆ ಧಕ್ಕೆ ಉಂಟುಮಾಡುವ ಜನರು ಇರುವಾಗ , ಕೇವಲ ಒಂದು ಭರವಸೆ ಮೇಲೆ ಜನಕ್ಕೆ ಎಷ್ಟು ಜಿದ್ದು?

Submitted by asuhegde on

ಅಬದುಲ್,
ದೇವರು ಸರ್ವಾಂತರ್ಯಾಮಿ ಎಂದು ನಂಬುವವನು ನಾನು
ನಿಮಗೆ ಅರಿವಿಲ್ಲವೆಂದರಿತು ನಿಮ್ಮನ್ನು ಕ್ಷಮಿಸುವೆನು ನಾನು

Submitted by asuhegde on

ನಾನು ಅರಿತೇ ಬರೆದದ್ದು
ಅಬ್ದುಲ್ ಅಬದುಲ್ ಆದಾಗ ಆಗುವ ವಿಕೃತಿಯ ಅರಿವು ಹೆಗ್ಡೆ ಹೆಗಡೆ ಆದಾಗ ಆಗಿಲ್ಲ ಏಕೆ?

Submitted by bhasip on

ಈಗ "ಸಬರ್" ಜ್ಞಾಪಕಕ್ಕೆ ಬಂದಿದೆ ಸುರೇಶ್ ಹೆಗ್ಡೆ ಸರ್ :)
ಹಿಂದೆ ಒಡೆದ ಮಂದಿರಗಳು, ಬಲವಂತವಾಗಿ ತಾಂತರಗೊಂಡ ಹಿಂದುಗಳು, ಹಾಗೆ ಆಗದೆ ಪ್ರಾಣಕೊಟ್ಟ ಅಸಂಖ್ಯಾತ ಜೀವಗಳು, ಇಷ್ಟೆ ಏಕೆ, ಕಸಬ್ ಮತ್ತು ತಂಡದಿಂದ ದಾಳಿಗೊಳಗಾಗಿ ಪ್ರಾಣ ಕೊಟ್ಟ ಎಷ್ಟು ಜನ, ಕೆಲವರಿಗೆ ಏಕೈಕ reference sOurce ಆಗಿದ್ದ ಕರ್ಕರೆ ಪ್ರಾಣ ತೆಗೆದ ಘಟನೆ. , .. ಈ ರೀತಿಯ ಘಟನೆಗಳಿಗೆ ಕಾರಣರಾದವರಿಗೆ "ಸಬರ್ " ಬೋಧನೆ ಆಗಿದೆಯೆ ಇಲ್ಲವೆ ಎಂಬುದನ್ನು, ಅದನ್ನು ಇಲ್ಲಿ ಬೋಧಿಸಲು ಹೊರಟಿರುವ ಮಹನೀಯರು ಸ್ಪಷ್ಟಪಡಿಸಿಕೊಳ್ಳಲಿ.. ಅಷ್ಟೆ ಏಕೆ ಅದು ಅವರಲ್ಲೇ ಅಳವಡಿಕೆಯಾಗಿದೆಯೆ ಎಂದು ಪರೀಕ್ಷಿಸಿಕೊಳ್ಳಲಿ..

ಡಿಸೆಂಬರ್ ೬ ರಂದು ರಾಮ ಅಲ್ಲಿಂದ ಕಾಲು ಕಿತ್ತ ಎನ್ನುವವರು ಹಿಂದೆ ಇದ್ದ ದೇವಾಲಯವನ್ನು ಒಡೆದು ಮಸೀದಿ ಕಟ್ಟಿದ್ದ ಬಗ್ಗೆ ಚಕಾರ ಎತ್ತುವುದಿಲ್ಲ..
ಅಫ್ಜಲ್ /ಕಸಬ್ ಖುಷಿಯಾಗಿ ಜೈಲಿನಲ್ಲಿ free meals ತಿಂದು ಮಜ ಉಡಾಯಿಸ್ತಾ ಇರುತ್ತಾರೆ ತೆರಿಗೆ ದಾರನ ಹಣದಲ್ಲಿ, ಅದಕ್ಕೆ ಕಾರಣ ಯಾರು ಎಂದು ಮತ್ತೆ ಹೇಳುವ ಅವಶ್ಯಕತೆ ಇಲ್ಲ ಅಲ್ಲವೆ? :)

Submitted by kavinagaraj on

[[ರಾಮ ಮತ್ತು ರಹೀಮರು ಕಾಲ್ಕಿತ್ತಿದ್ದು ಡಿಸೆಂಬರ್ ೬, ೧೯೯೨ ರಂದು.]]
ಅಲ್ಲಿಯವರೆಗೆ ರಾಮ ಮಾತ್ರ ಕಾಲು ಕಿತ್ತಿಸಲ್ಪಟ್ಟಿದ್ದ! ಇತರ ಧರ್ಮಗಳ ಬಗ್ಗೆ ಅಸಹಿಷ್ಣುತೆ ಇರುವ ಜನರಿರುವವರೆಗೂ, (ಏಕ ದೇವೊಪಾಸನೆ ಮಾಡಿಕೊಳ್ಳಿ, ಆದರೆ ಇತರರನ್ನು ಕಾಫಿರರಾಗಿ ಕಂಡು, ಅವರ ಶ್ರದ್ಧಾಸ್ಥಾನಗಳನ್ನು ನಾಶಪಡಿಸುವವರಿರುವರೆಗೂ) ರಾಮ, ರಹೀಮರು ಕಾಲು ಕೀಳುತ್ತಲೇ ಇರುತ್ತಾರೆ!

Submitted by mpneerkaje on

"V" ತೋರಿಸಿದವರು ಕೇಸಿನಲ್ಲಿ ಭಾಗಿಯಾಗಿದ್ದವರು. ಅವರು ವಿಜಯದ ಸಂಕೇತ ತೋರಿಸಿದ್ದರಲ್ಲಿ ಯಾವ ತಪ್ಪೂ ಇಲ್ಲ. ನಾವು ನೀವು ಹಾಗೆ ಮಾಡಿದ್ದಲ್ಲಿ ಅದು ತಪ್ಪು.

Submitted by mpneerkaje on

ಎಲ್ಲರೂ ಈ ತೀರ್ಪನ್ನು ಒಪ್ಪಿದ್ದರೆ ಒಳ್ಳೆಯದಿತ್ತು. ಎಲ್ಲರಿಗೂ ಸಮಾಧಾನ ಇದೆ, ಮುಲಾಯಮ್, ಲಲ್ಲೂ ಮತ್ತು ಇನ್ನು ಕೆಲವು ಮುಸ್ಲಿಮ್ ಮೂಲಭೂತವಾದಿಗಳನ್ನು ಬಿಟ್ಟು. ಸುನ್ನಿ ವಕ್ಫ್ ಸುಪ್ರೀಮ್ ಕೋರ್ಟಿಗೆ ಹೋದರೆ ಹಿಂದೂ ಮಹಾಸಭಾ ಕೂಡ ಪೂರ್ತಿ ಜಾಗಕ್ಕಾಗಿ ಮೇಲ್ಮನವಿ ಸಲ್ಲಿಸಬಹುದು. ಅಲ್ಲಿಗೆ ಎಲ್ಲಾ ಬಣ್ಣ ಮಸಿ ನುಂಗಿದಂತೆ ಆಗುತ್ತದೆ.

Submitted by ananthesha nempu on

ಅಬ್ದುಲ್,

>>“ವಸುದೇವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ.>>

ಇದು ವಸುಧೈವ ಕುಟುಂಬಕಮ್ ಎಂದಾಗಬೇಕಿತ್ತು. ( ವಸುಧಾ (ಭೂಮಿ) + ಏವ = ವಸುಧೈವ).

Submitted by prasca on

**ಆ ಹೆಗ್ಗಳಿಕೆಗೆ ನ್ಯಾಯವೆಸಗಲು ಹೆಣಗಿದ ತೀರ್ಪು ಇದು. ಇದರಲ್ಲಿ ಯಾರಿಗೂ ವಿಜಯವಿಲ್ಲ. ಆದರೆ ವಿಜಯ ಮಾಲೆ ತಾಯಿ ಭಾರತಿಗೆ ಎಂದು ಸಮಾಧಾನ. ಆದರೂ ಕೆಲವು ಕಿಡಿ ಗೇಡಿಗಳು “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು.**

**ಅಯೋಧ್ಯೆ, ದೇಶದ ಜನರನ್ನು ಬೇರ್ಪಡಿಸಿದ್ದು ಮಾತ್ರವಲ್ಲ ದೇಶವಾಸಿಗಳ ಸಮಯ, ಶ್ರಮ, ಸಂಪತ್ತು ಈ ವಿವಾದದ ಹಿಂದೆ ಹೂಡಿ, ಕಚ್ಚಾಡಿ, ಬಡಿದಾಡಿ “ವಸುದೇವ ಕುಟುಂಬಕಂ” ಎಂಬುದು ಪುಸ್ತಕದ ಬದನೇಕಾಯಿ ಮಾತ್ರ ಎಂದು ಜಗತ್ತಿಗೆ ಸಾರಿದ ಸಮಸ್ಯೆ**

ಈ ಸಾಲುಗಳು ತಮ್ಮ ಮನದಲ್ಲಿರುವ ಬೆಂಕಿಯ ಪ್ರತೀಕವೆ? ತೀರ್ಪಿಗೆ ಮುನ್ನ ಬಂದ ಈ http://sampada.net/a... ಲೇಖನ ಬರೆಯುವಾಗಿನ ಮನಸ್ಥಿತಿ ಪ್ರಸ್ತುತ ಲೇಖನದಲ್ಲಿ ಮಾಯವಾಗಿರುವುದು ಯಾವುದರ ಧ್ಯೋತಕ ಅಬ್ದುಲ್, ಒಂದೋ ತಾವು ಮುಖವಾಡ ಅಂದು ಹಾಕಿದ್ದು ಇಂದು ಕಳಚಿರಬಹುದೆ?
ಇರಲಿ ಬಿಡಿ,
ತನ್ನೊಡಲ ಕಿಚ್ಚು ತನ್ನನ್ನು ಸುಡದೆ ಅನ್ಯರನ್ನು ಸುಡುವುದೇ.........

Submitted by asuhegde on

<<ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.>>

ನಿಮ್ಮ ಸಂತಸಕರ ಸುದ್ದಿಯನ್ನು ಸುಳ್ಳಾಗಿಸಲು ಇಲ್ಲಿ ಸುದ್ದಿಗಳಿವೆ:

ಈ ತೀರ್ಪು ನಾನು ಎರಡನೇ ದರ್ಜೆ ನಾಗರಿಕಳು ಎಂಬ ಭಾವನೆ ಹುಟ್ಟುವಂತೆ ಮಾಡಿದೆ.... ಇತ್ಯಾದಿ...ಇತ್ಯಾದಿ...

http://timesofindia....

Submitted by vijay pai on

ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೊದಲಬಾರಿಗೆ, ಅಪರೂಪಕ್ಕೆ ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ.

>>ಈ ದೇಶದ ನೆಮ್ಮದಿ ಕೆಡಿಸಿದ್ದ ಸಮಸ್ಯೆಗೆ ಒಂದು ಪರಿಹಾರ ಬಂತು ಅಲ್ಲಾಹನ ಊರಿನಿಂದ (ಇಲಾಹಾಬಾದ್).
ಪ್ರಯಾಗ ಎನ್ನುವುದನ್ನು ಅಲಹಾಬಾದ್ ಮಾಡಿದಂತೆ.. ಅಯೋಧ್ಯಾವನ್ನು ಬಾಬರಾಬಾದ್ ಮಾಡಲ್ಲಿಲ್ಲವಲ್ಲ ಎಂದು ಖುಷಿಯಾಯ್ತು. ಇಲ್ಲವಾದಲ್ಲಿ ಬಾಬರಾಬಾದ ಹೆಸರನ್ನು ಅಯೋಧ್ಯಾ ಮಾಡಲು right-wing Hindu fanatics, ಕೇಸರಿ ಕಣ್ಣಿನವರು ಇನ್ನೊಂದು ಹೋರಾಟ ಮಾಡಿ..ದೇಶದ ನೆಮ್ಮದಿ ಕೆಡಿಸಿ, ಅಸಹಿಂಷ್ಣುತೆ ಯನ್ನು ಹುಟ್ಟುಹಾಕಿ, ಭಾರತ ದೇಶದ ಪ್ರಗತಿಗೆ ಅಡ್ಡಗಾಲು ಹಾಕುತ್ತಿದ್ದರೊ ಏನೊ!.

Submitted by manjunath.kunigal on

ಅಬ್ದುಲ್

ನಿಮ್ಮ ಆಶಯ ಸಾಂದರ್ಭಿಕ ಹಾಗೂ ಒಪ್ಪಿಕೊಳ್ಳಬಹುದು. ಆದರೂ ತಮ್ಮವರನ್ನು ಹೊಗಳಿ ಅಟ್ಟಕ್ಕೇರಿಸಿ, ಇತರರನ್ನು ಕಿಡಿಗೇಡಿ ಎಂದು ಸಾರುವ ನಿಮ್ಮ ಇಬ್ಬಗೆ ನೀತಿ ಪೂರ್ವಾಗ್ರಹ ಪೀಡಿತ ಅನ್ನೋದು ವೇದ್ಯ.

ಮಂಜುನಾಥ್ ಕುಣಿಗಲ್
ದುಬೈ

Submitted by santhosh_87 on

ನಿಮ್ಮ ಆಶಯ ನನ್ನದೂ ಕೂಡ ಅಬ್ದುಲ್.

ಆದರೂ ಕೆಲವು ಆಕ್ಷೇಪಗಳು -

೧)’ಡಿ-ಡೇ’ ಪದದ ಪ್ರಯೋಗಕ್ಕೆ. ಏಕೆಂದರೆ ಈ ಪದವನ್ನು ಯುದ್ಧ ಪ್ರಾರಂಭವಾಗುವ ದಿನಕ್ಕೂ ಬಳಸಲಾಗುತ್ತದೆ.

೨) <ಆದರೆ ಈ ಗಲಾಟೆಯಲ್ಲಿ ರಾಮ ಮತ್ತು ರಹೀಮರು ನಿಮ್ಮ ಭಜನೆಯೂ ಬೇಡ, ಭಕ್ತಿಯೂ ಬೇಡ ಎಂದು ಕಾಲು ಕಿತ್ತಿದ್ದು ಮಾತ್ರ ಯಾರೂ ಗಮನಿಸಲೇ ಇಲ್ಲ.>
ನಿಜವಾಗಿಯೂ ರಾಮ, ರಹೀಮರು ಕಾಲು ಕಿತ್ತಿದ್ದು ಧರ್ಮದ ಹೆಸರಿನಲ್ಲಿ ಜನ ಕಿತ್ತಾಡಲು ಆರಂಭವಾದಾಗ! ಅದು ೧೯೯೨ರಲ್ಲಿ ಅಲ್ಲ ಯಾವಾಗ ಬಹು ಧರ್ಮಗಳ ಮಧ್ಯೆ ತೊಡಕುಗಳು ಉಂಟಾದವೋ, ಯಾವಾಗ ವರ್ಣಾಶ್ರಮದಲ್ಲಿ ದಬ್ಬಾಳಿಕೆ ಮತ್ತು ಭೇದ ಭಾವ ಮೂಡಲಾರಂಭಿಸಿತೋ ಆವಾಗದಿಂದ. ಯಾವಾಗ ಕ್ರೈಸ್ತ ಮಿಶಿನರಿಗಳು ಬಲಾತ್ಕಾರವಾಗಿ ಮತಾಂತರ ಮಾಡಲು ಆರಂಭಿಸಿದರೋ ಆವಾಗದಿಂದ, ಯಾವಾಗ ಇಸ್ಲಾಂ ರಾಜರು ಧರ್ಮ ಯುದ್ಧದ ಹೆಸರಿನಲ್ಲಿ ದೇಶಗಳನ್ನು ಲೂಟಿ ಮತ್ತು ಇತರ ಧರ್ಮದವರನ್ನು ’ಕಾಫಿರ್’ ಎಂದು ಕರೆಯಲಾರಂಭಿಸಿದರೋ ಆವಾಗದಿಂದ!

೩) <...ಅಲ್ಲಾಹನ ಊರಿನಿಂದ (ಇಲಾಹಾಬಾದ್)> ಪ್ರಯಾಗ ಎಂಬ ’ತ್ಯಾಗದ ಸ್ಥಳ’ ಎಂಬ ಅರ್ಥವಿರುವ ಈ ಸ್ಥಳಕ್ಕೆ ಅಕ್ಬರ್ ಆಡಳಿತದಲ್ಲಿ ಇಲಾಹಾಬಾದ್ ಎಂದು ಹೆಸರಿಡಲಾಯಿತು. ದೇವರು ತೀರ್ಪು ಕೊಡುವಂತಿದ್ದರೆ ಇಲ್ಲಿಯವರೆಗೆ ಪ್ರಳಯವಾಗಬೇಕಿತ್ತು! :)

೪) ಇದರಲ್ಲಿ ಯಾರಿಗೂ ವಿಜಯವಿಲ್ಲ ಎಂಬುದು ಸತ್ಯ. <ಆದರೂ ಕೆಲವು ಕಿಡಿ ಗೇಡಿಗಳು “V” ಪ್ರದರ್ಶಿಸುತ್ತಾ ಏನೋ ಸಾಧಿಸಿದವರಂತೆ ಫೋಸ್ ಕೊಟ್ಟರು.> ಈ ವಾಕ್ಯದ ಅಗತ್ಯವಿರಲಿಲ್ಲವೇನೋ. ದೇವಾಲಯದ ಭಾಗ ಸಿಕ್ಕಿದವರಿಗೆ ಖುಶಿಯಾಗಿದ್ದರಲ್ಲಿ ಉತ್ಪ್ರೇಕ್ಷೆ ಎನೂ ಇಲ್ಲ.

೫) ಇನ್ನು ’ಸಬರ್’ ಮಾತು, ಮಸೀದಿಗಳಿಗಿಂತ ದೇಶ ದೊಡ್ಡದು ಎಂದು ಅವರೂ ಭಾವಿಸಲಿ ಎಂದು ನಾನೂ ಆಶಿಸುತ್ತೇನೆ.

Submitted by bhasip on

"ಆದರೆ ಈ ತೀರ್ಪನ್ನು ತಮ್ಮ ಸಂಸ್ಕೃತಿ ತಮ್ಮಿಂದ ಬಯಸುವ characteristic poise ಜೊತೆಗೆ “ಸಬರ್” (ಸಂಯಮ) ಅನ್ನು ಮೋಹಕವಾಗಿ ಪ್ರದರ್ಶಿಸುವ ಮೂಲಕ ಮುಸ್ಲಿಂ ಸಮಾಜದ ಬಂಧುಗಳು ಮಸೀದಿಗಿಂತ ದೇಶ ದೊಡ್ಡದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದು ಸಂತಸಕರ"

>> ನಿಜವಾಗಿ!! ಅವರ ದೇಶದ ಹಿತಾಸಕ್ತಿಗಾಗಿ, ಭಯೋತ್ಪಾದಕರನ್ನು ತರಬೇತಿಗೊಳಿಸಿ,ಪಕ್ಕದ ದೇಶಕ್ಕೆ ಕಳಿಸಿದ್ದಾರೆ!! ಎಂತಹ ಪ್ರದರ್ಶನ "ಸಬರ್ " ದು!!

http://ibnlive.in.co...

"Washington: Former military ruler Pervez Musharraf has admitted that Pakistan had trained underground militant groups to fight in Kashmir, the first such admission by a top leader of the country."

"Yes, it is the right of any country to promote its own interests... when India is not prepared to discuss Kashmir at the United Nations and is not prepared to resolve the dispute in a peaceful manner," Musharraf claimed."

Submitted by mpneerkaje on

ಹೋಗ್ಲಿ ಬಿಡಿ ಭಾಸ್ಕರ್.. ನಮ್ಮಲ್ಲೇ "ಸಬರ್" ಪದದ ಅರ್ಥ ಎರಡು ಮೂರು ದಿನಗಳಲ್ಲೇ ಬದಲಾಯಿತು. ಇನ್ನು ಮುಷಿರಪ್ಪಂದು ಕಥೆ ಏನಾಗಬೇಡ! :)