ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ಶವ

September 5, 2005 - 8:22pm — tvsrinivas41

ಎಂದಿಗೂ ನಗುತ ನಗಿಸುತಿಹ ನಗೆ ಬುಗ್ಗೆ
ಹಿರಿಯ ಕಿರಿಯರೆಲ್ಲರ ಮನ ತಣಿಸುವ ಕಣ್ಮಣಿ
ಕಪ್ಪಾದರೂ ಕಡೆದಿಟ್ಟ ಕರಿಬಂಡೆಯಂತಿಹ ತರುಣ
ಸಹೃದಯರಿಗೆ ತೋರಿಸುವ ತನ್ನಲಿರುವ ಕರುಣ

ಕೆಟ್ಟವರಿಗೆ ಕೆಟ್ಟವನಾಗಿ ದುಷ್ಟರ ಸದೆಬಡಿಯುವ ವೀರ
ದಾಂಡಿಗರೂ ಇವನ ಹತ್ತಿರ ಬರಲು ಹೆದರಿಯಾರು
ಒಳ್ಳೆಯವರಿಗೆ ಒಳ್ಳೆಯವನಾಗಿ ಸಹಾಯ ಹಸ್ತ ಚಾಚುವ ಧೀರ
ಓಣಿಯ ಮಕ್ಕಳಿಗೆಲ್ಲ ಅಚ್ಚು ಮೆಚ್ಚಿನ ಅಣ್ಣ

ಸ್ನೇಹಿತರ ನಗಿಸುತ ದಾಟಲು ಹೋದ ರೈಲ್ವೇ ಹಳಿ
ದೈತ್ಯಾಕಾರದ ಬಂಡಿ ಬಂದೇ ಬಿಟ್ಟಿತು ಇವನ ಬಳಿ
ಇವನ ಸಹೃದಯತನವ ಹೇಗೆ ಅರಿಯಬೇಕಾ ಬಂಡಿ
ಕಣ್ಮುಚ್ಚಿ ಇವನ ಕೊಚ್ಚಿ ಹಾಕಿತು ಆ ಚಂಡಿ

ರಕ್ತ ಸಿಕ್ತ ದೇಹ ನೋಡಲು ಹೃದಯ ವಿದ್ರಾವಕ
ರುಂಡ ಮುಂಡ ಬೇರ್ಪಡಲು ಎಲ್ಲಿ ಹೋಯಿತೋ ಅವನ ಚೇತನ
ಎಲ್ಲರ ಹೆದರಿಸಿ ಹೆಬ್ಬಂಡೆಯಾಗಿದ್ದಾ ದೇಹ
ಮೇಲೆ ಕೂತ ಸಣ್ಣ ನೊಣವನೂ ಓಡಿಸಿಲಾದೀತೇ

ಕ್ಷಣ ಮಾತ್ರದಲಿ ಆಯಿತೇ
ಅಂದಿನ ಮಾಂಸ ಪರ್ವತ ಇಂದಿನ ಎಲುಬಿನ ಹಂದರ

ಅಂದು ಅಬ್ಬೇಪಾರಿಗಳಿಗೆ ಉಣಿಸಿದ ಮೃಷ್ಟಾನ್ನ
ಇಂದು ಕಾಗೆ ನಾಯಿಗಳಿಗಾಗಿಹ ಚಿತ್ರಾನ್ನ
ಅವನ ರಕ್ಷಣೆಗೆ ಯಾರೂ ಬರಲಾರರೇ
ಮತ್ತೆ ಆ ದಷ್ಟ ಪುಷ್ಟ ದೇಹ ಮೃದು ಮನಸು ಅರಳೀತೇ?

  • ಕಾವ್ಯ ಮತ್ತು ಕವನ
~.~
  • Login or register to post comments
  • 626 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಂಥ ಜೋಡಿ
  • ನನ್ನ ಬಗ್ಗೆ....
  • ಬಂಡಿ, ಬಂಡೆ
  • ಅವೆಯ ಮಣ್ಣಿನ ಆಟದ ಬಂಡಿ
  • ಮನಸಲ್ಲಿ ಬರುತ್ತೆ ಯೋಚನೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಅರಸೀಕೆರೆಯ ಕಣಕಟ್ಟೆ ಕಡೆಗೊಂದು ಪಯಣ
  • ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
  • ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
  • ಮಕ್ಕಳ ಹಾಡು
  • ಉಗ್ರವಾದ - ಇದೊಂದು ಹಳೇ ಉದ್ಯೋಗ
  • ಹೀಗೊ೦ದು ರಸಕ್ಷಣ

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:58pm
  • sudhimail
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:54pm
  • benaka
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 1:52pm
  • Aravind M.S
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:16pm
  • mahesha
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:13pm
  • sudatta
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 3, 2008 - 1:11pm
  • kannadakanda
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 1:05pm
  • Achala Sethu
    ಉ: ಭೂತವಿಲ್ಲ..ಪಿಶಾಚಿ ಇಲ್ಲ..ಇದ್ದರೂ..ಇರಬಹುದೇ?!
    December 3, 2008 - 1:00pm
  • savithasr
    ಉ: ಕಲಿಕೆಗೆಲ್ಲಿದೆ ಕೊನೆ...
    December 3, 2008 - 12:55pm
  • mahesha
    ಉ: ಭ್ರಷ್ಟ ರಾಷ್ಟ್ರಕ್ಕೆ ಭ್ರಷ್ಟ ಪ್ರಜೆಗಳೇ ಕಾರಣ
    December 3, 2008 - 12:39pm
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 450 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator